Az-Zukhruf (Ornaments of gold)
43. ಅಝ್ಝುಖ್ರುಫ್(ಆಭರಣ)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
43:1
حم
۞
ಹಾ ಮೀಮ್.
43:2
وَالْكِتَابِ الْمُبِينِ
۞
ಸುಸ್ಪಷ್ಟವಾಗಿರುವ ಗ್ರಂಥದಾಣೆ
43:3
إِنَّا جَعَلْنَاهُ قُرْآنًا عَرَبِيًّا لَعَلَّكُمْ تَعْقِلُونَ
۞
ನಾವಿದನ್ನು ಅರಬೀ ಭಾಷೆಯ ಕುರ್‌ಆನ್ ಆಗಿ ಕಳಿಸಿರುವೆವು, ನೀವು ಅರಿಯಬೇಕೆಂದು.
43:4
وَإِنَّهُ فِي أُمِّ الْكِتَابِ لَدَيْنَا لَعَلِيٌّ حَكِيمٌ
۞
ಅದು ಖಂಡಿತ ನಮ್ಮ ಬಳಿ ಮೂಲ ಗ್ರಂಥದಲ್ಲಿದೆ. ಅದು ಉನ್ನತ ಹಾಗೂ ಯುಕ್ತಿ ಪೂರ್ಣವಾಗಿದೆ.
43:5
أَفَنَضْرِبُ عَنْكُمُ الذِّكْرَ صَفْحًا أَنْ كُنْتُمْ قَوْمًا مُسْرِفِينَ
۞
ನೀವು ಅತಿಕ್ರಮಿಗಳೆಂಬ ಕಾರಣಕ್ಕೆ ನಾವೇನು ಈ ಉಪದೇಶವನ್ನು ನಿಮ್ಮಿಂದ ಕಿತ್ತುಕೊಳ್ಳಬೇಕೇ?
43:6
وَكَمْ أَرْسَلْنَا مِنْ نَبِيٍّ فِي الْأَوَّلِينَ
۞
ನಾವು ಹಿಂದಿನವರಲ್ಲಿ ಅದೆಷ್ಟೋ ಪ್ರವಾದಿಗಳನ್ನು ಕಳಿಸಿದ್ದೆವು.
43:7
وَمَا يَأْتِيهِمْ مِنْ نَبِيٍّ إِلَّا كَانُوا بِهِ يَسْتَهْزِئُونَ
۞
ಆದರೆ ಅವರು ತಮ್ಮ ಬಳಿಗೆ ಬಂದ ಯಾವ ಪ್ರವಾದಿಯನ್ನೂ ಗೇಲಿ ಮಾಡದೆ ಬಿಟ್ಟಿರಲಿಲ್ಲ.
43:8
فَأَهْلَكْنَا أَشَدَّ مِنْهُمْ بَطْشًا وَمَضَىٰ مَثَلُ الْأَوَّلِينَ
۞
ನಾವು ಅವರಿಗಿಂತ (ಮಕ್ಕಃದವರಿಗಿಂತ) ಬಲಿಷ್ಠರಾಗಿದ್ದವರನ್ನು ನಾಶ ಮಾಡಿರುವೆವು. (ಹೀಗೆ) ಗತಿಸಿಹೋದವು, ಗತ ಕಾಲದವರ ಸಮಾಚಾರಗಳು.
43:9
وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ لَيَقُولُنَّ خَلَقَهُنَّ الْعَزِيزُ الْعَلِيمُ
۞
ನೀವು ಅವರೊಡನೆ, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಯಾರೆಂದು ಕೇಳಿದರೆ, ಪ್ರಬಲನಾಗಿರುವ, ಎಲ್ಲವನ್ನೂ ಬಲ್ಲವನು ಅವುಗಳನ್ನು ಸೃಷ್ಟಿಸಿರುವನೆಂದು ಅವರು ಖಂಡಿತ ಹೇಳುವರು.
43:10
الَّذِي جَعَلَ لَكُمُ الْأَرْضَ مَهْدًا وَجَعَلَ لَكُمْ فِيهَا سُبُلًا لَعَلَّكُمْ تَهْتَدُونَ
۞
ಅವನೇ ಭೂಮಿಯನ್ನು ನಿಮ್ಮ ಪಾಲಿಗೆ ಸಮತಟ್ಟಾಗಿಸಿದವನು ಮತ್ತು ನಿಮಗೆ ದಿಕ್ಕು ಸಿಗಲೆಂದು ಅದರಲ್ಲಿ ನಿಮಗಾಗಿ ದಾರಿಗಳನ್ನು ನಿರ್ಮಿಸಿದವನು.
43:11
وَالَّذِي نَزَّلَ مِنَ السَّمَاءِ مَاءً بِقَدَرٍ فَأَنْشَرْنَا بِهِ بَلْدَةً مَيْتًا ۚ كَذَٰلِكَ تُخْرَجُونَ
۞
ಅವನೇ ನಿರ್ದಿಷ್ಟ ಪ್ರಮಾಣದಲ್ಲಿ ಆಕಾಶದಿಂದ ನೀರನ್ನು ಸುರಿಸಿದವನು. ಆ ಮೂಲಕ ನಾವು ಮೃತವಾಗಿದ್ದ ನಾಡನ್ನು ಜೀವಂತಗೊಳಿಸಿದೆವು. ಇದೇ ರೀತಿ ನಿಮ್ಮನ್ನು (ಮೃತ ಸ್ಥಿತಿಯಿಂದ) ಹೊರತೆಗೆಯಲಾಗುವುದು.
43:12
وَالَّذِي خَلَقَ الْأَزْوَاجَ كُلَّهَا وَجَعَلَ لَكُمْ مِنَ الْفُلْكِ وَالْأَنْعَامِ مَا تَرْكَبُونَ
۞
ಅವನೇ ಎಲ್ಲ ಜೊತೆಗಳನ್ನು ಸೃಷ್ಟಿಸಿದವನು ಹಾಗೂ ನಿಮಗಾಗಿ, ನೀವು ಪ್ರಯಾಣಕ್ಕೆ ಬಳಸುವ ನಾವೆಗಳನ್ನು ಹಾಗೂ ಜಾನುವಾರುಗಳನ್ನು ಒದಗಿಸಿದವನು -
43:13
لِتَسْتَوُوا عَلَىٰ ظُهُورِهِ ثُمَّ تَذْكُرُوا نِعْمَةَ رَبِّكُمْ إِذَا اسْتَوَيْتُمْ عَلَيْهِ وَتَقُولُوا سُبْحَانَ الَّذِي سَخَّرَ لَنَا هَٰذَا وَمَا كُنَّا لَهُ مُقْرِنِينَ
۞
- ನೀವು ಅವುಗಳ ಮೇಲೆ ಸವಾರರಾಗಬೇಕೆಂದು. ನೀವು ಅವುಗಳ ಮೇಲೆ ಸವಾರರಾಗುವಾಗ ಅಲ್ಲಾಹನ ಅನುಗ್ರಹವನ್ನು ಸ್ಮರಿಸುತ್ತಾ ಹೇಳಿರಿ; ‘‘ಇದನ್ನು ನಮಗೆ ಅಧೀನಗೊಳಿಸಿಕೊಟ್ಟವನು ಪಾವನನು. ಅನ್ಯಥಾ ಇದನ್ನು ನಿಯಂತ್ರಿಸಲು ನಮಗೆ ಸಾಧ್ಯವಿರಲಿಲ್ಲ.’’
43:14
وَإِنَّا إِلَىٰ رَبِّنَا لَمُنْقَلِبُونَ
۞
‘‘ಮತ್ತು ನಾವು ಖಂಡಿತ ನಮ್ಮ ಒಡೆಯನ ಕಡೆಗೇ ಮರಳಲಿದ್ದೇವೆ.’’
43:15
وَجَعَلُوا لَهُ مِنْ عِبَادِهِ جُزْءًا ۚ إِنَّ الْإِنْسَانَ لَكَفُورٌ مُبِينٌ
۞
ಅವರು ಅವನ ದಾಸರಲ್ಲಿ ಕೆಲವರನ್ನು ಅವನ ಭಾಗಗಳೆಂದು ಪರಿಗಣಿಸಿದ್ದಾರೆ. ಖಂಡಿತವಾಗಿಯೂ ಮಾನವನು ಸ್ಪಷ್ಟ ಕೃತಘ್ನನಾಗಿದ್ದಾನೆ.
43:16
أَمِ اتَّخَذَ مِمَّا يَخْلُقُ بَنَاتٍ وَأَصْفَاكُمْ بِالْبَنِينَ
۞
ಅವನೇನು, ತನ್ನ ಸೃಷ್ಟಿಗಳ ಪೈಕಿ ಪುತ್ರಿಯರನ್ನು ತನಗಾಗಿ ಆಯ್ದುಕೊಂಡು ಪುತ್ರರನ್ನು ನಿಮಗೆ ಮೀಸಲಾಗಿಟ್ಟಿರುವನೇ?
43:17
وَإِذَا بُشِّرَ أَحَدُهُمْ بِمَا ضَرَبَ لِلرَّحْمَٰنِ مَثَلًا ظَلَّ وَجْهُهُ مُسْوَدًّا وَهُوَ كَظِيمٌ
۞
ಅವರು ಆ ಪರಮ ದಯಾಳುವಿಗೆ ಏನನ್ನು ಆರೋಪಿಸುತ್ತಾರೋ (ಪುತ್ರಿಯರು) ಅದನ್ನೇ ಅವರಲ್ಲಿ ಯಾರಿಗಾದರೂ ಶುಭವಾರ್ತೆಯಾಗಿ (ನಿಮಗೆ ಪುತ್ರಿ ಹುಟ್ಟಿದ್ದಾಳೆಂದು) ತಿಳಿಸಿದಾಗ ಅವನ ಮುಖವು ಕಪ್ಪಾಗಿ ಬಿಡುತ್ತದೆ ಮತ್ತು ಅವನು ತುಂಬಾ ದುಃಖಿತನಾಗುತ್ತಾನೆ.
43:18
أَوَمَنْ يُنَشَّأُ فِي الْحِلْيَةِ وَهُوَ فِي الْخِصَامِ غَيْرُ مُبِينٍ
۞
(ಅವರ ಪ್ರಕಾರ ಪುತ್ರಿಯರೆಂದರೆ) ಆಭರಣಗಳಲ್ಲಿ ಬೆಳೆಯುವವರಾಗಿರುತ್ತಾರೆ ಹಾಗೂ ಜಗಳವಾದಾಗ ಸ್ಪಷ್ಟವಾಗಿ ಮಾತನಾಡಲು ಅಸಮರ್ಥರಾಗಿರುತ್ತಾರೆ.
43:19
وَجَعَلُوا الْمَلَائِكَةَ الَّذِينَ هُمْ عِبَادُ الرَّحْمَٰنِ إِنَاثًا ۚ أَشَهِدُوا خَلْقَهُمْ ۚ سَتُكْتَبُ شَهَادَتُهُمْ وَيُسْأَلُونَ
۞
ಅವರು ಆ ಪರಮ ದಯಾಳುವಿನ ದಾಸರಾದ ಮಲಕ್‌ಗಳನ್ನು ಸ್ತ್ರೀಯರೆಂದು ಪರಿಗಣಿಸುತ್ತಾರೆ. ಅವರನ್ನು (ಮಲಕ್‌ಗಳನ್ನು) ಸೃಷ್ಟಿಸುವಾಗ ಇವರೇನು ನೋಡಿದ್ದರೇ? ಅವರ ಹೇಳಿಕೆಯನ್ನು ಬರೆದಿಡಲಾಗುವುದು ಮತ್ತು ಅವರನ್ನು ಪ್ರಶ್ನಿಸಲಾಗುವುದು.
43:20
وَقَالُوا لَوْ شَاءَ الرَّحْمَٰنُ مَا عَبَدْنَاهُمْ ۗ مَا لَهُمْ بِذَٰلِكَ مِنْ عِلْمٍ ۖ إِنْ هُمْ إِلَّا يَخْرُصُونَ
۞
ಆ ಪರಮ ದಯಾಳುವು ಬಯಸಿದ್ದರೆ, ನಾವು (ಅನ್ಯರನ್ನು) ಪೂಜಿಸುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. ನಿಜವಾಗಿ ಅವರಿಗೆ ಅದರ ಅರಿವಿಲ್ಲ. ಅವರು ಕೇವಲ ಊಹಿಸುತ್ತಿದ್ದಾರೆ.
43:21
أَمْ آتَيْنَاهُمْ كِتَابًا مِنْ قَبْلِهِ فَهُمْ بِهِ مُسْتَمْسِكُونَ
۞
ಅವರೇನು, ಈ ಹಿಂದೆ ತಮ್ಮ ಬಳಿಗೆ ಬಂದ ಯಾವುದಾದರೂ ಗ್ರಂಥವನ್ನು ಅವಲಂಬಿಸಿಕೊಂಡಿರುವರೇ?
43:22
بَلْ قَالُوا إِنَّا وَجَدْنَا آبَاءَنَا عَلَىٰ أُمَّةٍ وَإِنَّا عَلَىٰ آثَارِهِمْ مُهْتَدُونَ
۞
ಅವರು ಹೇಳುತ್ತಾರೆ; ನಾವು ನಮ್ಮ ಪೂರ್ವಜರನ್ನು ಒಂದು ನಿರ್ದಿಷ್ಟ ಹಾದಿಯಲ್ಲಿ ಕಂಡಿದ್ದೆವು. ನಾವು ಖಂಡಿತ ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸುತ್ತಿದ್ದೇವೆ.
43:23
وَكَذَٰلِكَ مَا أَرْسَلْنَا مِنْ قَبْلِكَ فِي قَرْيَةٍ مِنْ نَذِيرٍ إِلَّا قَالَ مُتْرَفُوهَا إِنَّا وَجَدْنَا آبَاءَنَا عَلَىٰ أُمَّةٍ وَإِنَّا عَلَىٰ آثَارِهِمْ مُقْتَدُونَ
۞
ಇದೇ ರೀತಿ ನಾವು ನಿಮಗಿಂತ ಹಿಂದೆ ಯಾವುದೇ ನಾಡಿಗೆ ಎಚ್ಚರಿಸುವವರನ್ನು ಕಳಿಸಿದ್ದಾಗಲೆಲ್ಲಾ ಅಲ್ಲಿನ ಸ್ಥಿತಿವಂತರು, ‘‘ನಾವು ನಮ್ಮ ಪೂರ್ವಜರನ್ನು ಒಂದು ನಿರ್ದಿಷ್ಟ ಹಾದಿಯಲ್ಲಿ ಕಂಡಿದ್ದೆವು. ನಾವು ಖಂಡಿತ ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸುತ್ತಿದ್ದೇವೆ’’ ಎಂದು ಹೇಳಿದ್ದರು.
43:24
۞ قَالَ أَوَلَوْ جِئْتُكُمْ بِأَهْدَىٰ مِمَّا وَجَدْتُمْ عَلَيْهِ آبَاءَكُمْ ۖ قَالُوا إِنَّا بِمَا أُرْسِلْتُمْ بِهِ كَافِرُونَ
۞
‘‘ನಿಮ್ಮ ಪೂರ್ವಜರನ್ನು ನೀವು ಯಾವ ಹಾದಿಯಲ್ಲಿ ಕಂಡಿದ್ದಿರೋ ಅದಕ್ಕಿಂತ ಉತ್ತಮ ಹಾದಿಯನ್ನು ನಾನು ನಿಮ್ಮ ಬಳಿಗೆ ತಂದಿದ್ದರೆ?’’ ಎಂದು ಅವರು (ಪ್ರವಾದಿ) ಕೇಳಿದಾಗ, ಅವರು ‘‘ನಿಮ್ಮೊಂದಿಗೆ ಕಳಿಸಲಾಗಿರುವುದನ್ನು ನಾವು ಧಿಕ್ಕರಿಸುತ್ತೇವೆ’’ ಎಂದರು.
43:25
فَانْتَقَمْنَا مِنْهُمْ ۖ فَانْظُرْ كَيْفَ كَانَ عَاقِبَةُ الْمُكَذِّبِينَ
۞
ಕೊನೆಗೆ ನಾವು ಅವರ ವಿರುದ್ಧ ಪ್ರತೀಕಾರ ತೀರಿಸಿದೆವು. ಇದೀಗ (ಸತ್ಯವನ್ನು) ತಿರಸ್ಕರಿಸಿದವರ ಗತಿ ಏನಾಯಿತೆಂದು ನೋಡಿರಿ.
43:26
وَإِذْ قَالَ إِبْرَاهِيمُ لِأَبِيهِ وَقَوْمِهِ إِنَّنِي بَرَاءٌ مِمَّا تَعْبُدُونَ
۞
ಇಬ್ರಾಹೀಮರು ತಮ್ಮ ತಂದೆಯೊಡನೆ ಹಾಗೂ ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವು ಪೂಜಿಸುವ ಎಲ್ಲವುಗಳಿಂದ ನಾನು ಸಂಪೂರ್ಣ ಮುಕ್ತನಾಗಿದ್ದೇನೆ -’’
43:27
إِلَّا الَّذِي فَطَرَنِي فَإِنَّهُ سَيَهْدِينِ
۞
‘‘- ನನ್ನನ್ನು ಸೃಷ್ಟಿಸಿದವನ ಹೊರತು. ಅವನು ಖಂಡಿತ ನನಗೆ ಸರಿದಾರಿಯನ್ನು ತೋರಿಸುವನು.’’
43:28
وَجَعَلَهَا كَلِمَةً بَاقِيَةً فِي عَقِبِهِ لَعَلَّهُمْ يَرْجِعُونَ
۞
ಅವರು ಇದನ್ನು (ಈ ಧೋರಣೆಯನ್ನು) ಶಾಶ್ವತ ವಚನದ ರೂಪದಲ್ಲಿ ತಮ್ಮ ಮುಂದಿನವರಲ್ಲಿ ಉಳಿಸಿದರು - ಅವರು (ಸತ್ಯದೆಡೆಗೆ) ಮರಳಬೇಕೆಂದು.
43:29
بَلْ مَتَّعْتُ هَٰؤُلَاءِ وَآبَاءَهُمْ حَتَّىٰ جَاءَهُمُ الْحَقُّ وَرَسُولٌ مُبِينٌ
۞
ನಾನು ಅವರಿಗೂ ಅವರ ಪೂರ್ವಜರಿಗೂ ಸಾಕಷ್ಟು ಸಂಪತ್ತನ್ನು ನೀಡಿದೆನು. ಕೊನೆಗೆ ಅವರ ಬಳಿಗೆ ಸತ್ಯವು ಬಂದಿತು ಹಾಗೂ ಸುಸ್ಪಷ್ಟ ದೂತರೂ ಬಂದರು.
43:30
وَلَمَّا جَاءَهُمُ الْحَقُّ قَالُوا هَٰذَا سِحْرٌ وَإِنَّا بِهِ كَافِرُونَ
۞
ಆದರೆ ಸತ್ಯವು ಅವರ ಬಳಿಗೆ ಬಂದಾಗ ಅವರು, ‘‘ಇದು ಕೇವಲ ಮಾಟಗಾರಿಕೆಯಾಗಿದೆ ಮತ್ತು ನಾವು ಇದನ್ನು ಧಿಕ್ಕರಿಸುತ್ತೇವೆ’’ ಎಂದು ಬಿಟ್ಟರು.
43:31
وَقَالُوا لَوْلَا نُزِّلَ هَٰذَا الْقُرْآنُ عَلَىٰ رَجُلٍ مِنَ الْقَرْيَتَيْنِ عَظِيمٍ
۞
ಮತ್ತು ಅವರು, ‘‘ಈ ಕುರ್‌ಆನನ್ನು ಎರಡು ನಗರ (ಮಕ್ಕಃ ಮತ್ತು ತಾಯಿಫ್)ಗಳ ಯಾರಾದರೊಬ್ಬ ದೊಡ್ಡ ವ್ಯಕ್ತಿಗೆ ಯಾಕೆ ಇಳಿಸಿಕೊಡಲಾಗಿಲ್ಲ?’’ ಎಂದು ಕೇಳುತ್ತಾರೆ.
43:32
أَهُمْ يَقْسِمُونَ رَحْمَتَ رَبِّكَ ۚ نَحْنُ قَسَمْنَا بَيْنَهُمْ مَعِيشَتَهُمْ فِي الْحَيَاةِ الدُّنْيَا ۚ وَرَفَعْنَا بَعْضَهُمْ فَوْقَ بَعْضٍ دَرَجَاتٍ لِيَتَّخِذَ بَعْضُهُمْ بَعْضًا سُخْرِيًّا ۗ وَرَحْمَتُ رَبِّكَ خَيْرٌ مِمَّا يَجْمَعُونَ
۞
ನಿಮ್ಮ ಒಡೆಯನ ಅನುಗ್ರಹಗಳನ್ನು ವಿತರಿಸುವವರು ಅವರೇನು? ನಿಜವಾಗಿ ಇಹಲೋಕದ ಜೀವನದಲ್ಲಿ ಅವರ ಆದಾಯವನ್ನು ಅವರ ನಡುವೆ ನಾವೇ ವಿತರಿಸುತ್ತೇವೆ ಮತ್ತು ನಾವೇ ಅವರಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಹೆಚ್ಚಿನ ಸ್ಥಾನಮಾನವನ್ನು ನೀಡಿರುತ್ತೇವೆ - ಅವರು ಪರಸ್ಪರರಿಂದ ಸೇವೆಯನ್ನು ಪಡೆಯಲೆಂದು. ನಿಜವಾಗಿ ನಿಮ್ಮ ಒಡೆಯನ ಕೃಪೆಯು ಅವರು ಸಂಗ್ರಹಿಸುವ ಎಲ್ಲವುಗಳಿಗಿಂತ ಉತ್ತಮವಾಗಿದೆ.
43:33
وَلَوْلَا أَنْ يَكُونَ النَّاسُ أُمَّةً وَاحِدَةً لَجَعَلْنَا لِمَنْ يَكْفُرُ بِالرَّحْمَٰنِ لِبُيُوتِهِمْ سُقُفًا مِنْ فِضَّةٍ وَمَعَارِجَ عَلَيْهَا يَظْهَرُونَ
۞
ಎಲ್ಲ ಮಾನವರೂ ಒಂದೇ ಪಂಥದವರಾಗಿ ಬಿಡುವ ಸಾಧ್ಯತೆ ಇಲ್ಲದಿರುತ್ತಿದ್ದರೆ ನಾವು, ಪರಮ ದಯಾಳುವನ್ನು ಧಿಕ್ಕರಿಸುವವರ ಮನೆಗಳ ಚಪ್ಪರಗಳನ್ನೂ ಅವರು (ಮಾಳಿಗೆಗಳಿಗೆ) ಏರುವ ಏಣಿಗಳನ್ನೂ ಬೆಳ್ಳಿಯದ್ದಾಗಿಸಿ ಬಿಡುತ್ತಿದ್ದೆವು.
43:34
وَلِبُيُوتِهِمْ أَبْوَابًا وَسُرُرًا عَلَيْهَا يَتَّكِئُونَ
۞
(ಮಾತ್ರವಲ್ಲ), ಅವರ ಮನೆಗಳ ಬಾಗಿಲುಗಳನ್ನೂ ಅವರು ಒರಗಿ ಕೂರುವ ಪೀಠಗಳನ್ನೂ -
43:35
وَزُخْرُفًا ۚ وَإِنْ كُلُّ ذَٰلِكَ لَمَّا مَتَاعُ الْحَيَاةِ الدُّنْيَا ۚ وَالْآخِرَةُ عِنْدَ رَبِّكَ لِلْمُتَّقِينَ
۞
- ಚಿನ್ನದ್ದಾಗಿಸಿ ಬಿಡುತ್ತಿದ್ದೆವು. ಇವೆಲ್ಲಾ ಕೇವಲ ಇಹಲೋಕ ಜೀವನದ ಸೊತ್ತುಗಳು. ಪರಲೋಕವು ನಿಮ್ಮ ಒಡೆಯನ ಬಳಿ ಧರ್ಮ ನಿಷ್ಠರಿಗೇ ಮೀಸಲಾಗಿದೆ.
43:36
وَمَنْ يَعْشُ عَنْ ذِكْرِ الرَّحْمَٰنِ نُقَيِّضْ لَهُ شَيْطَانًا فَهُوَ لَهُ قَرِينٌ
۞
ಪರಮ ದಯಾಳುವನ್ನು ನೆನಪಿಸುವ ವಿಷಯದಲ್ಲಿ ಆಲಸ್ಯ ತೋರುವಾತನ ಮೇಲೆ ನಾವು ಶೈತಾನನನ್ನು ಹೇರಿ ಬಿಡುತ್ತೇವೆ. ಆ ಬಳಿಕ ಅವನೇ ಆತನ ಸಂಗಾತಿಯಾಗಿರುತ್ತಾನೆ.
43:37
وَإِنَّهُمْ لَيَصُدُّونَهُمْ عَنِ السَّبِيلِ وَيَحْسَبُونَ أَنَّهُمْ مُهْتَدُونَ
۞
ಮತ್ತು ಅವರು (ಶೈತಾನರು) ಅವರನ್ನು ಸರಿದಾರಿಯಿಂದ ತಡೆದು ದೂರವಿಡುತ್ತಾರೆ. ಆದರೆ, ಅವರು ತಾವು ಸನ್ಮಾರ್ಗದಲ್ಲಿದ್ದೇವೆ ಎಂದು ಭಾವಿಸಿ ಕೊಂಡಿರುತ್ತಾರೆ.
43:38
حَتَّىٰ إِذَا جَاءَنَا قَالَ يَا لَيْتَ بَيْنِي وَبَيْنَكَ بُعْدَ الْمَشْرِقَيْنِ فَبِئْسَ الْقَرِينُ
۞
ಕೊನೆಗೆ ಅವರು ನಮ್ಮ ಬಳಿಗೆ ಬಂದಾಗ ಅವನು, ‘‘ಅಯ್ಯೋ, ನನ್ನ ಹಾಗೂ ನಿನ್ನ (ಶೈತಾನನ) ನಡುವೆ ಎರಡು ಪೂರ್ವಗಳಷ್ಟು ಅಂತರ ಇದ್ದಿದ್ದರೆ ಚೆನ್ನಾಗಿತ್ತು’’ ಎನ್ನುವನು. ಅವನು ಬಹಳ ಕೆಟ್ಟ ಸಂಗಾತಿ.
43:39
وَلَنْ يَنْفَعَكُمُ الْيَوْمَ إِذْ ظَلَمْتُمْ أَنَّكُمْ فِي الْعَذَابِ مُشْتَرِكُونَ
۞
ನೀವು ಅಕ್ರಮಿಗಳಾಗಿದ್ದರೆ ಇದಾವುದೂ ನಿಮಗೆ ಉಪಯುಕ್ತವಾಗದು. ಶಿಕ್ಷೆಯಲ್ಲಿ ನೀವು ಸಮಾನ ಪಾಲುದಾರರಾಗಿರುವಿರಿ.
43:40
أَفَأَنْتَ تُسْمِعُ الصُّمَّ أَوْ تَهْدِي الْعُمْيَ وَمَنْ كَانَ فِي ضَلَالٍ مُبِينٍ
۞
ನೀವೇನು ಕಿವುಡರಿಗೆ ಕೇಳಿಸಬಲ್ಲಿರಾ? ಅಥವಾ ಕುರುಡರಿಗೆ ಮತ್ತು ಸ್ಪಷ್ಟವಾಗಿ ತಪ್ಪು ದಾರಿಯಲ್ಲಿರುವವರಿಗೆ ಸರಿದಾರಿಯನ್ನು ತೋರಿಸಲು ನಿಮ್ಮಿಂದ ಸಾಧ್ಯವೇ?
43:41
فَإِمَّا نَذْهَبَنَّ بِكَ فَإِنَّا مِنْهُمْ مُنْتَقِمُونَ
۞
(ದೂತರೇ,) ನಾನು ನಿಮ್ಮನ್ನು ಕರೆಸಿಕೊಂಡರೂ (ಸಾಯಿಸಿದರೂ) ಅವರ ವಿರುದ್ಧ ಮಾತ್ರ ನಾವು ಖಂಡಿತ ಪ್ರತೀಕಾರ ತೀರಿಸುವೆವು.
43:42
أَوْ نُرِيَنَّكَ الَّذِي وَعَدْنَاهُمْ فَإِنَّا عَلَيْهِمْ مُقْتَدِرُونَ
۞
ಅಥವಾ ನಾವು ಅವರಿಗೆ ವಾಗ್ದಾನ ಮಾಡಿರುವುದನ್ನು ನಿಮಗೆ (ನಿಮ್ಮ ಬದುಕಿನ ಅವಧಿಯಲ್ಲೇ) ತೋರಿಸುವೆವು. ಅವರ ಮೇಲೆ ನಮಗೆ ಸಂಪೂರ್ಣ ಹತೋಟಿ ಇದೆ.
43:43
فَاسْتَمْسِكْ بِالَّذِي أُوحِيَ إِلَيْكَ ۖ إِنَّكَ عَلَىٰ صِرَاطٍ مُسْتَقِيمٍ
۞
ನಿಮಗೆ ದಿವ್ಯವಾಣಿಯ ಮೂಲಕ ನೀಡಲಾಗಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. ನೀವು ಖಂಡಿತ ಸ್ಥಿರವಾದ ಸನ್ಮಾರ್ಗದಲ್ಲಿರುವಿರಿ.
43:44
وَإِنَّهُ لَذِكْرٌ لَكَ وَلِقَوْمِكَ ۖ وَسَوْفَ تُسْأَلُونَ
۞
ಇದು ನಿಸ್ಸಂದೇಹವಾಗಿಯೂ ನಿಮಗೆ ಹಾಗೂ ನಿಮ್ಮ ಜನಾಂಗದವರಿಗೆ ಒಂದು ಉಪದೇಶವಾಗಿದೆ. ಬೇಗನೇ ನಿಮ್ಮನ್ನು ವಿಚಾರಿಸಲಾಗುವುದು.
43:45
وَاسْأَلْ مَنْ أَرْسَلْنَا مِنْ قَبْلِكَ مِنْ رُسُلِنَا أَجَعَلْنَا مِنْ دُونِ الرَّحْمَٰنِ آلِهَةً يُعْبَدُونَ
۞
ನಿಮಗಿಂತ ಹಿಂದೆ ನಾವು ಕಳಿಸಿದ್ದ ದೂತರನ್ನು ಕೇಳಿ ನೋಡಿರಿ. ನಾವು ಪರಮ ದಯಾಳುವಿನ (ಅಲ್ಲಾಹನ) ಹೊರತು ಬೇರೆ ಯಾರನ್ನಾದರೂ ಪೂಜಾರ್ಹ ದೇವರಾಗಿ ನೇಮಿಸಿದ್ದೇವೆಯೇ?
43:46
وَلَقَدْ أَرْسَلْنَا مُوسَىٰ بِآيَاتِنَا إِلَىٰ فِرْعَوْنَ وَمَلَئِهِ فَقَالَ إِنِّي رَسُولُ رَبِّ الْعَالَمِينَ
۞
ನಾವು ಮೂಸಾರನ್ನು ನಮ್ಮ ಪುರಾವೆಗಳೊಂದಿಗೆ ಫಿರ್‌ಔನ್ ಮತ್ತು ಅವನ ಸರದಾರರೆಡೆಗೆ ಕಳಿಸಿದ್ದೆವು. ಅವರು, ನಿಸ್ಸಂದೇಹವಾಗಿ ನಾನು ಎಲ್ಲ ಲೋಕಗಳ ಒಡೆಯನ ದೂತನಾಗಿದ್ದೇನೆ ಎಂದರು.
43:47
فَلَمَّا جَاءَهُمْ بِآيَاتِنَا إِذَا هُمْ مِنْهَا يَضْحَكُونَ
۞
ಹೀಗೆ ಅವರು ನಮ್ಮ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು (ಗೇಲಿ ಮಾಡಿ) ನಕ್ಕು ಬಿಟ್ಟರು.
43:48
وَمَا نُرِيهِمْ مِنْ آيَةٍ إِلَّا هِيَ أَكْبَرُ مِنْ أُخْتِهَا ۖ وَأَخَذْنَاهُمْ بِالْعَذَابِ لَعَلَّهُمْ يَرْجِعُونَ
۞
ನಾವು ಅವರಿಗೆ ತೋರಿಸಿದ ಪ್ರತಿಯೊಂದು ಪುರಾವೆಯೂ ತನಗಿಂತ ಮೊದಲು ಬಂದ ಪುರಾವೆಗಿಂತ ದೊಡ್ಡದಾಗಿತ್ತು ಮತ್ತು ಅವರು (ಸತ್ಯದೆಡೆಗೆ) ಮರಳಬಹುದೆಂದು ನಾವು ಅವರನ್ನು ಶಿಕ್ಷೆಗೆ ಒಳಪಡಿಸಿದೆವು
43:49
وَقَالُوا يَا أَيُّهَ السَّاحِرُ ادْعُ لَنَا رَبَّكَ بِمَا عَهِدَ عِنْدَكَ إِنَّنَا لَمُهْتَدُونَ
۞
ಅವರು ಹೇಳಿದರು; ‘‘ಓ ಜಾದೂಗಾರನೇ, ನಿನಗೆ ನೀಡಲಾಗಿರುವ ವಾಗ್ದಾನದ ಅನುಷ್ಠಾನಕ್ಕಾಗಿ ನೀನು ನಮಗಾಗಿ ನಿನ್ನ ಒಡೆಯನೊಡನೆ ಪ್ರಾರ್ಥಿಸು. ನಾವು ಖಂಡಿತ ಸನ್ಮಾರ್ಗದಲ್ಲಿ ನಡೆಯುವೆವು.’’
43:50
فَلَمَّا كَشَفْنَا عَنْهُمُ الْعَذَابَ إِذَا هُمْ يَنْكُثُونَ
۞
ಕೊನೆಗೆ ನಾವು ಅವರ ಮೇಲಿಂದ ಶಿಕ್ಷೆಯನ್ನು ನಿವಾರಿಸಿದಾಗ ಅವರು ವಚನ ಭಂಗ ಮಾಡಿದರು.
43:51
وَنَادَىٰ فِرْعَوْنُ فِي قَوْمِهِ قَالَ يَا قَوْمِ أَلَيْسَ لِي مُلْكُ مِصْرَ وَهَٰذِهِ الْأَنْهَارُ تَجْرِي مِنْ تَحْتِي ۖ أَفَلَا تُبْصِرُونَ
۞
ಫಿರ್‌ಔನನು ತನ್ನ ಜನಾಂಗಕ್ಕೊಂದು ಕರೆ ನೀಡಿದನು. ಅವನು ಹೇಳಿದನು; ನನ್ನ ಜನಾಂಗದವರೇ, ಈಜಿಪ್ತ್‌ನ ಆಧಿಪತ್ಯ ನನಗೆ ಸೇರಿದ್ದಲ್ಲವೇ? ಮತ್ತು ಈ ನದಿಗಳು ನನಗೆ ಅಧೀನವಾಗಿ ಹರಿಯುತ್ತಿವೆಯಲ್ಲವೇ? ನೀವೇನು ನೋಡುತ್ತಿಲ್ಲವೇ?
43:52
أَمْ أَنَا خَيْرٌ مِنْ هَٰذَا الَّذِي هُوَ مَهِينٌ وَلَا يَكَادُ يُبِينُ
۞
ಕೀಳು ವರ್ಗದ ಹಾಗೂ ಸ್ಪಷ್ಟವಾಗಿ ಮಾತನಾಡಲಾಗದ ಆ ವ್ಯಕ್ತಿಗಿಂತ (ಮೂಸಾರಿಗಿಂತ) ನಾನು ಶ್ರೇಷ್ಠನಲ್ಲವೇ?
43:53
فَلَوْلَا أُلْقِيَ عَلَيْهِ أَسْوِرَةٌ مِنْ ذَهَبٍ أَوْ جَاءَ مَعَهُ الْمَلَائِكَةُ مُقْتَرِنِينَ
۞
(ಆತನು ನಿಜಕ್ಕೂ ದೇವ ದೂತನಾಗಿದ್ದರೆ) ಅವನಿಗೆ ಚಿನ್ನದ ಬಳೆಗಳನ್ನೇಕೆ ನೀಡಲಾಗಿಲ್ಲ? ಅಥವಾ ಅವನ ಜೊತೆ ಸಾಲುಗಟ್ಟಿರುವ ಮಲಕ್‌ಗಳೇಕೆ ಬಂದಿಲ್ಲ?
43:54
فَاسْتَخَفَّ قَوْمَهُ فَأَطَاعُوهُ ۚ إِنَّهُمْ كَانُوا قَوْمًا فَاسِقِينَ
۞
ಹೀಗೆ ಅವನು ತನ್ನ ಜನಾಂಗದವರನ್ನು ಮಣಿಸಿದನು ಮತ್ತು ಅವರು ಆತನನ್ನು ಅನುಸರಿಸಿದರು. ಅವರು ಖಂಡಿತ ಒಂದು ಅವಿಧೇಯ ಜನಾಂಗವಾಗಿದ್ದರು.
43:55
فَلَمَّا آسَفُونَا انْتَقَمْنَا مِنْهُمْ فَأَغْرَقْنَاهُمْ أَجْمَعِينَ
۞
ಕೊನೆಗೆ ಅವರು ನಮ್ಮನ್ನು ಉದ್ರೇಕಿಸಿದಾಗ ನಾವು ಅವರೆಲ್ಲರನ್ನೂ ಮುಳುಗಿಸಿ ಬಿಟ್ಟೆವು.
43:56
فَجَعَلْنَاهُمْ سَلَفًا وَمَثَلًا لِلْآخِرِينَ
۞
ಮತ್ತು ನಾವು ಅವರನ್ನು ಗತಕಾಲದವರಾಗಿ ಹಾಗೂ ಮುಂದಿನವರ ಪಾಲಿಗೆ ಒಂದು ಕತೆಯಾಗಿ ಮಾರ್ಪಡಿಸಿ ಬಿಟ್ಟೆವು.
43:57
۞ وَلَمَّا ضُرِبَ ابْنُ مَرْيَمَ مَثَلًا إِذَا قَوْمُكَ مِنْهُ يَصِدُّونَ
۞
(ದೂತರೇ,) ಮರ್ಯಮರ ಪುತ್ರ (ಈಸಾ)ರ ಉದಾಹರಣೆಯನ್ನು ಮುಂದಿಟ್ಟಾಗ ನಿಮ್ಮ ಜನಾಂಗದವರು ನಕ್ಕು ಬಿಡುತ್ತಾರೆ.
43:58
وَقَالُوا أَآلِهَتُنَا خَيْرٌ أَمْ هُوَ ۚ مَا ضَرَبُوهُ لَكَ إِلَّا جَدَلًا ۚ بَلْ هُمْ قَوْمٌ خَصِمُونَ
۞
ನಮ್ಮ ದೇವರುಗಳು ಉತ್ತಮರೋ ಅಥವಾ ಆತನೋ? ಎಂದವರು ಕೇಳುತ್ತಾರೆ. ಅವರು ನಿಮ್ಮ ಮುಂದೆ ಅದನ್ನು ಪ್ರಸ್ತಾಪಿಸುವುದು ಕೇವಲ ಜಗಳಾಡುವುದಕ್ಕೆ ಮಾತ್ರ. ನಿಜವಾಗಿ ಅವರು ಒಂದು ಜಗಳಗಂಟ ಜನಾಂಗವಾಗಿದ್ದಾರೆ.
43:59
إِنْ هُوَ إِلَّا عَبْدٌ أَنْعَمْنَا عَلَيْهِ وَجَعَلْنَاهُ مَثَلًا لِبَنِي إِسْرَائِيلَ
۞
ಅವರು (ಈಸಾ) ನಮ್ಮಿಂದ ಬಹುಮಾನಿತರಾಗಿದ್ದ ಒಬ್ಬ ದಾಸರಾಗಿದ್ದರು. ನಾವು ಅವರನ್ನು ಇಸ್ರಾಈಲರ ಸಂತತಿಗಳಿಗೆ ಆದರ್ಶವಾಗಿಸಿದ್ದೆವು.
43:60
وَلَوْ نَشَاءُ لَجَعَلْنَا مِنْكُمْ مَلَائِكَةً فِي الْأَرْضِ يَخْلُفُونَ
۞
ನಾವು ಬಯಸಿದ್ದರೆ ಭೂಮಿಯಲ್ಲಿ ನಿಮ್ಮ ಮೂಲಕ ಮಲಕ್‌ಗಳನ್ನು ಸೃಷ್ಟಿಸುತ್ತಿದ್ದೆವು ಮತ್ತು ಅವರು ನಿಮ್ಮ ಉತ್ತರಾಧಿಕಾರಿಗಳಾಗುತ್ತಿದ್ದರು.
43:61
وَإِنَّهُ لَعِلْمٌ لِلسَّاعَةِ فَلَا تَمْتَرُنَّ بِهَا وَاتَّبِعُونِ ۚ هَٰذَا صِرَاطٌ مُسْتَقِيمٌ
۞
ಅವರು ಖಂಡಿತ ಅಂತಿಮ ಘಳಿಗೆಯ ಒಂದು ಸೂಚನೆಯಾಗಿದ್ದಾರೆ. ನೀವು ಆ ಕುರಿತು ಸಂಶಯಿಸಬೇಡಿ ಮತ್ತು ನನ್ನನ್ನು ಅನುಸರಿಸಿರಿ. ಇದುವೇ ನೇರಮಾರ್ಗವಾಗಿದೆ.
43:62
وَلَا يَصُدَّنَّكُمُ الشَّيْطَانُ ۖ إِنَّهُ لَكُمْ عَدُوٌّ مُبِينٌ
۞
ಶೈತಾನನು ನಿಮ್ಮನ್ನು (ಸತ್ಯದಿಂದ) ತಡೆಯದಿರಲಿ. ಅವನು ನಿಮ್ಮ ಸ್ಪಷ್ಟ ಶತ್ರುವಾಗಿದ್ದಾನೆ.
43:63
وَلَمَّا جَاءَ عِيسَىٰ بِالْبَيِّنَاتِ قَالَ قَدْ جِئْتُكُمْ بِالْحِكْمَةِ وَلِأُبَيِّنَ لَكُمْ بَعْضَ الَّذِي تَخْتَلِفُونَ فِيهِ ۖ فَاتَّقُوا اللَّهَ وَأَطِيعُونِ
۞
ಈಸಾ, ಸ್ಪಷ್ಟ ಪುರಾವೆಗಳೊಂದಿಗೆ ಬಂದು ಹೇಳಿದರು; ನಾನು ನಿಮ್ಮ ಬಳಿಗೆ ಯುಕ್ತಿಯನ್ನು ತಂದಿರುವೆನು ಹಾಗೂ ನೀವು ಪರಸ್ಪರ ಭಿನ್ನತೆ ತಾಳಿರುವ ವಿಷಯಗಳ ವಾಸ್ತವವನ್ನು ನಿಮಗೆ ವಿವರಿಸಲಿಕ್ಕಾಗಿ (ಬಂದಿರುವೆನು). ನೀವು ಅಲ್ಲಾಹನಿಗೆ ಅಂಜಿರಿ ಹಾಗೂ ನನ್ನ ಆದೇಶವನ್ನು ಪಾಲಿಸಿರಿ.
43:64
إِنَّ اللَّهَ هُوَ رَبِّي وَرَبُّكُمْ فَاعْبُدُوهُ ۚ هَٰذَا صِرَاطٌ مُسْتَقِيمٌ
۞
ಅಲ್ಲಾಹನು ಖಂಡಿತ ನನ್ನ ಒಡೆಯನೂ ಹೌದು, ನಿಮ್ಮ ಒಡೆಯನೂ ಹೌದು. ನೀವು ಅವನನ್ನೇ ಪೂಜಿಸಿರಿ. ಅದುವೇ ನೇರ ಮಾರ್ಗ.
43:65
فَاخْتَلَفَ الْأَحْزَابُ مِنْ بَيْنِهِمْ ۖ فَوَيْلٌ لِلَّذِينَ ظَلَمُوا مِنْ عَذَابِ يَوْمٍ أَلِيمٍ
۞
ಆ ಬಳಿಕ ವಿವಿಧ ಗುಂಪುಗಳು ಪರಸ್ಪರ ಭಿನ್ನಾಭಿಪ್ರಾಯ ತಾಳಿದವು. ಅಕ್ರಮಿಗಳಿಗೆ, ಒಂದು ಕಠಿಣ ದಿನದ ಶಿಕ್ಷೆಯ ಮೂಲಕ ವಿನಾಶವಿದೆ.
43:66
هَلْ يَنْظُرُونَ إِلَّا السَّاعَةَ أَنْ تَأْتِيَهُمْ بَغْتَةً وَهُمْ لَا يَشْعُرُونَ
۞
ಅವರು ಕಾಯುತ್ತಿರುವುದು ಅಂತಿಮ ಘಳಿಗೆಯನ್ನೇ ತಾನೇ? ಅದು, ಅವರಿಗೆ ಅರಿವೇ ಇಲ್ಲದ ಸ್ಥಿತಿಯಲ್ಲಿ ಹಠಾತ್ತನೆ ಅವರ ಮೇಲೆ ಬಂದೆರಗಲಿದೆ.
43:67
الْأَخِلَّاءُ يَوْمَئِذٍ بَعْضُهُمْ لِبَعْضٍ عَدُوٌّ إِلَّا الْمُتَّقِينَ
۞
ಧರ್ಮನಿಷ್ಠರ ಹೊರತು ಇತರೆಲ್ಲ ಮಿತ್ರರೂ ಅಂದು ಪರಸ್ಪರ ಶತ್ರುಗಳಾಗಿ ಬಿಡುವರು.
43:68
يَا عِبَادِ لَا خَوْفٌ عَلَيْكُمُ الْيَوْمَ وَلَا أَنْتُمْ تَحْزَنُونَ
۞
(ಅವರೊಡನೆ ಹೇಳಲಾಗುವುದು;) ನನ್ನ ದಾಸರೇ, ಇಂದು ನಿಮಗೆ ಯಾವ ಭಯವೂ ಇಲ್ಲ ಮತ್ತು ನೀವು ದುಃಖಿಸಲಾರಿರಿ.
43:69
الَّذِينَ آمَنُوا بِآيَاتِنَا وَكَانُوا مُسْلِمِينَ
۞
ನಮ್ಮ ವಚನಗಳನ್ನು ನಂಬಿದ್ದವರು ಮತ್ತು ಶರಣಾಗಿದ್ದವರು.
43:70
ادْخُلُوا الْجَنَّةَ أَنْتُمْ وَأَزْوَاجُكُمْ تُحْبَرُونَ
۞
(ಅವರೊಡನೆ ಹೇಳಲಾಗುವುದು;) ‘‘ನೀವು ಮತ್ತು ನಿಮ್ಮ ಜೀವನ ಸಂಗಾತಿಗಳು ಸ್ವರ್ಗದೊಳಗೆ ಪ್ರವೇಶಿಸಿರಿ. ನಿಮ್ಮನ್ನು ಸಂತೋಷ ಪಡಿಸಲಾಗುವುದು.’’
43:71
يُطَافُ عَلَيْهِمْ بِصِحَافٍ مِنْ ذَهَبٍ وَأَكْوَابٍ ۖ وَفِيهَا مَا تَشْتَهِيهِ الْأَنْفُسُ وَتَلَذُّ الْأَعْيُنُ ۖ وَأَنْتُمْ فِيهَا خَالِدُونَ
۞
ಚಿನ್ನದ ತಟ್ಟೆ ಹಾಗೂ ಲೋಟೆಗಳನ್ನು ಅವರ ಮುಂದಿಡಲಾಗುವುದು. ಮನಸ್ಸುಗಳು ಅಪೇಕ್ಷಿಸುವ ಹಾಗೂ ಕಣ್ಣುಗಳಿಗೆ ರುಚಿಸುವ ಎಲ್ಲವೂ ಅಲ್ಲಿರುವುದು ಮತ್ತು ಅಲ್ಲಿ ನೀವು ಸದಾಕಾಲ ಇರುವಿರಿ.
43:72
وَتِلْكَ الْجَنَّةُ الَّتِي أُورِثْتُمُوهَا بِمَا كُنْتُمْ تَعْمَلُونَ
۞
ಇದುವೇ, ನೀವು ಮಾಡುತ್ತಿದ್ದ ಕರ್ಮಗಳ ಫಲವಾಗಿ ನೀವು ಉತ್ತರಾಧಿಕಾರಿಗಳಾಗಿರುವ ಸ್ವರ್ಗ.
43:73
لَكُمْ فِيهَا فَاكِهَةٌ كَثِيرَةٌ مِنْهَا تَأْكُلُونَ
۞
ಇಲ್ಲಿ ನಿಮಗಾಗಿ, ನೀವು ತಿನ್ನುವ ಹಲವು ಬಗೆಯ ಹಣ್ಣು ಹಂಪಲುಗಳಿವೆ.
43:74
إِنَّ الْمُجْرِمِينَ فِي عَذَابِ جَهَنَّمَ خَالِدُونَ
۞
ಅಪರಾಧಿಗಳು ಖಂಡಿತ ನರಕದ ಶಿಕ್ಷೆಯಲ್ಲಿ ಸದಾಕಾಲ ಇರುವರು.
43:75
لَا يُفَتَّرُ عَنْهُمْ وَهُمْ فِيهِ مُبْلِسُونَ
۞
(ಶಿಕ್ಷೆಯನ್ನು) ಅವರ ಪಾಲಿಗೆ ಸ್ವಲ್ಪವೂ ಹಗುರಗೊಳಿಸಲಾಗದು ಮತ್ತು ಅಲ್ಲಿ ಅವರು ನಿರಾಶರಾಗಿ ಬಿದ್ದಿರುವರು.
43:76
وَمَا ظَلَمْنَاهُمْ وَلَٰكِنْ كَانُوا هُمُ الظَّالِمِينَ
۞
ನಾವೇನೂ ಅವರ ಮೇಲೆ ಅಕ್ರಮವೆಸಗಲಿಲ್ಲ. ಅವರು ಸ್ವತಃ ಅಕ್ರಮಿಗಳಾಗಿದ್ದರು.
43:77
وَنَادَوْا يَا مَالِكُ لِيَقْضِ عَلَيْنَا رَبُّكَ ۖ قَالَ إِنَّكُمْ مَاكِثُونَ
۞
‘‘ಓ ಮಾಲಿಕ್ (ನರಕದ ಕಾವಲುಗಾರ), ನಿಮ್ಮ ಒಡೆಯನು ನಮ್ಮನ್ನು ಮುಗಿಸಿ ಬಿಡಲಿ’’ ಎಂದು ಅವರು ಮೊರೆ ಇಡುವರು. ಅವನು, ‘‘ನೀವು ಸದಾ ಇಲ್ಲೇ ಇರ ಬೇಕಾದವರು’’ ಎನ್ನುವನು.
43:78
لَقَدْ جِئْنَاكُمْ بِالْحَقِّ وَلَٰكِنَّ أَكْثَرَكُمْ لِلْحَقِّ كَارِهُونَ
۞
ನಾವು ನಿಮ್ಮ ಬಳಿಗೆ ಸತ್ಯವನ್ನು ತಂದಿದ್ದೆವು. ಆದರೆ ನಿಮ್ಮಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಿದ್ದರು.
43:79
أَمْ أَبْرَمُوا أَمْرًا فَإِنَّا مُبْرِمُونَ
۞
ಅವರೊಂದು ನಿರ್ಧಾರ ಕೈಗೊಂಡಿರುವರೇ? ನಾವೂ ಒಂದು ನಿರ್ಧಾರ ಕೈಗೊಂಡಿರುವೆವು.
43:80
أَمْ يَحْسَبُونَ أَنَّا لَا نَسْمَعُ سِرَّهُمْ وَنَجْوَاهُمْ ۚ بَلَىٰ وَرُسُلُنَا لَدَيْهِمْ يَكْتُبُونَ
۞
ಅವರೇನು, ನಾವು ಅವರ ಪಿಸುಮಾತುಗಳನ್ನು ಹಾಗೂ ಗುಟ್ಟಿನ ಸಂಭಾಷಣೆಗಳನ್ನು ಆಲಿಸುತ್ತಿಲ್ಲವೆಂದು ಭಾವಿಸಿದ್ದಾರೆಯೇ? ಯಾಕಿಲ್ಲ? ಅವರ ಬಳಿಯಲ್ಲೇ ಇರುವ ನಮ್ಮ ದೂತರು (ಮಲಕ್‌ಗಳು) ಅದನ್ನು ಬರೆದಿಡುತ್ತಾರೆ.
43:81
قُلْ إِنْ كَانَ لِلرَّحْمَٰنِ وَلَدٌ فَأَنَا أَوَّلُ الْعَابِدِينَ
۞
(ದೂತರೇ,) ಹೇಳಿರಿ; ಒಂದು ವೇಳೆ ಆ ಪರಮ ದಯಾಳುವಿಗೆ ಒಬ್ಬ ಪುತ್ರನು ಇದ್ದಿದ್ದರೆ, (ಅವನನ್ನು) ಪೂಜಿಸುವವರಲ್ಲಿ ನಾನೇ ಮೊದಲಿಗನಾಗಿರುತ್ತಿದ್ದೆ.
43:82
سُبْحَانَ رَبِّ السَّمَاوَاتِ وَالْأَرْضِ رَبِّ الْعَرْشِ عَمَّا يَصِفُونَ
۞
ಆಕಾಶಗಳ ಮತ್ತು ಭೂಮಿಯ ಒಡೆಯನು ಹಾಗೂ ವಿಶ್ವ ಸಿಂಹಾಸನದ ಒಡೆಯನು ಅವರು ಆರೋಪಿಸುವ ಎಲ್ಲ ಗುಣಗಳಿಂದ ಮುಕ್ತನಾಗಿದ್ದು ಪಾವನನಾಗಿದ್ದಾನೆ.
43:83
فَذَرْهُمْ يَخُوضُوا وَيَلْعَبُوا حَتَّىٰ يُلَاقُوا يَوْمَهُمُ الَّذِي يُوعَدُونَ
۞
ನೀವು ಅವರನ್ನು ಬಿಟ್ಟು ಬಿಡಿ, ಅವರು, ತಮಗೆ ವಾಗ್ದಾನ ಮಾಡಲಾಗಿರುವ ದಿನವನ್ನು ಎದುರಿಸುವ ತನಕ, ವ್ಯರ್ಥ ಮಾತುಗಳನ್ನಾಡುತ್ತಾ ಮೋಜು ಮಾಡುತ್ತಿರಲಿ.
43:84
وَهُوَ الَّذِي فِي السَّمَاءِ إِلَٰهٌ وَفِي الْأَرْضِ إِلَٰهٌ ۚ وَهُوَ الْحَكِيمُ الْعَلِيمُ
۞
ಆಕಾಶದಲ್ಲೂ ಅವನೇ (ಅಲ್ಲಾಹನೇ) ದೇವರು ಮತ್ತು ಭೂಮಿಯಲ್ಲೂ ಅವನೇ ದೇವರು. ಅವನು ತುಂಬಾ ಯುಕ್ತಿವಂತನೂ ಜ್ಞಾನವುಳ್ಳವನೂ ಆಗಿದ್ದಾನೆ.
43:85
وَتَبَارَكَ الَّذِي لَهُ مُلْكُ السَّمَاوَاتِ وَالْأَرْضِ وَمَا بَيْنَهُمَا وَعِنْدَهُ عِلْمُ السَّاعَةِ وَإِلَيْهِ تُرْجَعُونَ
۞
ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಆಧಿಪತ್ಯವು ಯಾರಿಗೆ ಸೇರಿದೆಯೋ ಅವನು (ಅಲ್ಲಾಹನು) ತುಂಬಾ ಸಮೃದ್ಧನು. ಅಂತಿಮ ಘಳಿಗೆಯ ಜ್ಞಾನವು ಅವನ ಬಳಿಯಲ್ಲೇ ಇದೆ. (ಕೊನೆಗೆ) ನೀವು ಅವನೆಡೆಗೇ ಮರಳುವಿರಿ.
43:86
وَلَا يَمْلِكُ الَّذِينَ يَدْعُونَ مِنْ دُونِهِ الشَّفَاعَةَ إِلَّا مَنْ شَهِدَ بِالْحَقِّ وَهُمْ يَعْلَمُونَ
۞
ಅವರು ಅಲ್ಲಾಹನ ಹೊರತು ಯಾರನ್ನು ಪ್ರಾರ್ಥಿಸುತ್ತಾರೋ ಅವರಿಗೆ ಶಿಫಾರಸ್ಸಿನ ಅಧಿಕಾರವಿರುವುದಿಲ್ಲ - ಸತ್ಯದ ಪರವಾಗಿ ಸಾಕ್ಷಿ ಹೇಳುವವರ ಹೊರತು. ಮತ್ತು ಅವರು (ಆ ಸಾಕ್ಷಿಗಳು) ಬಲ್ಲವರಾಗಿರುವರು.
43:87
وَلَئِنْ سَأَلْتَهُمْ مَنْ خَلَقَهُمْ لَيَقُولُنَّ اللَّهُ ۖ فَأَنَّىٰ يُؤْفَكُونَ
۞
ಅವರನ್ನು ಸೃಷ್ಟಿಸಿದವನು ಯಾರೆಂದು ನೀವು ಅವರೊಡನೆ ಕೇಳಿದರೆ, ಖಂಡಿತವಾಗಿಯೂ ಅವರು ಅಲ್ಲಾಹನೆಂದೇ ಉತ್ತರಿಸುತ್ತಾರೆ. ಹಾಗಾದರೆ ಮತ್ತೆ ಅವರು ಅದೆಲ್ಲಿ ಅಲೆಯುತ್ತಿದ್ದಾರೆ?
43:88
وَقِيلِهِ يَا رَبِّ إِنَّ هَٰؤُلَاءِ قَوْمٌ لَا يُؤْمِنُونَ
۞
‘‘ನನ್ನೊಡೆಯಾ, ಈ ಜನರು ಖಂಡಿತ ನಂಬುವವರಲ್ಲ’’ ಎಂಬ ಅವರ (ದೂತರ) ಮಾತು (ಅಲ್ಲಾಹನಿಗೆ ತಿಳಿದಿದೆ).
43:89
فَاصْفَحْ عَنْهُمْ وَقُلْ سَلَامٌ ۚ فَسَوْفَ يَعْلَمُونَ
۞
(ದೂತರೇ,) ನೀವು ಅವರನ್ನು ಕಡೆಗಣಿಸಿರಿ ಮತ್ತು ‘ಸಲಾಮ್’ (ನಿಮಗೆ ಶಾಂತಿ ಸಿಗಲಿ) ಎಂದು ಹೇಳಿರಿ. ಬೇಗನೇ ಅವರು ಅರಿಯುವರು.