Al-Falaq (The dawn)
113. ಅಲ್ ಫಲಕ್(ಪ್ರಭಾತ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
113:1
قُلْ أَعُوذُ بِرَبِّ الْفَلَقِ ۞
ಹೇಳಿರಿ; ನಾನು, ಪ್ರಭಾತದ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ -
113:2
مِنْ شَرِّ مَا خَلَقَ ۞
ಅವನು ಸೃಷ್ಟಿಸಿರುವ ಎಲ್ಲವುಗಳ ಕೆಡುಕಿನಿಂದ (ಸುರಕ್ಷಿತನಾಗಿರಲು)
113:3
وَمِنْ شَرِّ غَاسِقٍ إِذَا وَقَبَ ۞
ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ)
113:4
وَمِنْ شَرِّ النَّفَّاثَاتِ فِي الْعُقَدِ ۞
ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ ಕೆಡುಕಿನಿಂದ
113:5
وَمِنْ شَرِّ حَاسِدٍ إِذَا حَسَدَ ۞
ಮತ್ತು ಅಸೂಯೆ ಪಡುವವನು ಅಸೂಯೆ ಪಡುವಾಗ, ಅವನ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ).