Ad-Dhariyat (The winnowing winds)
51. ಅಝ್ಝರಿಯಾತ್(ಮಾರುತಗಳು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
51:1
وَالذَّارِيَاتِ ذَرْوًا ۞
ಧೂಳೆಬ್ಬಿಸುವ ಸುಳಿಗಾಳಿಗಳಾಣೆ,
51:2
فَالْحَامِلَاتِ وِقْرًا ۞
ಅವು (ಮೋಡಗಳ) ಹೊರೆಯನ್ನು ಹೊತ್ತಿರುತ್ತವೆ.
51:3
فَالْجَارِيَاتِ يُسْرًا ۞
ತರುವಾಯ ಅವು, ಸೌಮ್ಯವಾಗಿ ಚಲಿಸತೊಡಗುತ್ತವೆ.
51:4
فَالْمُقَسِّمَاتِ أَمْرًا ۞
ಮತ್ತು ಆದೇಶಾನುಸಾರ (ಮಳೆಯನ್ನು) ವಿತರಿಸುತ್ತವೆ.
51:5
إِنَّمَا تُوعَدُونَ لَصَادِقٌ ۞
ನಿಮಗೆ ನೀಡಲಾಗಿರುವ ವಾಗ್ದಾನವು ಖಂಡಿತ ಸತ್ಯವಾಗಿದೆ.
51:6
وَإِنَّ الدِّينَ لَوَاقِعٌ ۞
ಪ್ರತಿಫಲದ ದಿನವು ಖಂಡಿತ ಬರಲಿದೆ.
51:7
وَالسَّمَاءِ ذَاتِ الْحُبُكِ ۞
ದಾರಿಗಳಿರುವ ಆಕಾಶದಾಣೆ.
51:8
إِنَّكُمْ لَفِي قَوْلٍ مُخْتَلِفٍ ۞
ನೀವು ವಿವಿಧ ವಾದಗಳಲ್ಲಿ ತಲ್ಲೀನರಾಗಿರುವಿರಿ.
51:9
يُؤْفَكُ عَنْهُ مَنْ أُفِكَ ۞
ದೂರಗೊಳಿಸಲ್ಪಟ್ಟವನು ಮಾತ್ರ ಇದರಿಂದ (ಸತ್ಯದಿಂದ) ದೂರವಾಗುತ್ತಾನೆ.
51:10
قُتِلَ الْخَرَّاصُونَ ۞
ನಾಶವಾದರು, ಊಹಾಪೋಹಗಳನ್ನು ನೆಚ್ಚಿ ಕೊಂಡವರು.
51:11
الَّذِينَ هُمْ فِي غَمْرَةٍ سَاهُونَ ۞
ಅವರು ಎಚ್ಚರವಿಲ್ಲದೆ, ಮೈ ಮರೆತ ಸ್ಥಿತಿಯಲ್ಲಿದ್ದಾರೆ.
51:12
يَسْأَلُونَ أَيَّانَ يَوْمُ الدِّينِ ۞
ಪ್ರತಿಫಲದ ದಿನ ಯಾವಾಗ ಬಂದೀತೆಂದು ಅವರು ಕೇಳುತ್ತಾರೆ.
51:13
يَوْمَ هُمْ عَلَى النَّارِ يُفْتَنُونَ ۞
ಅಂದು ಅವರು ಬೆಂಕಿಯ ಮೇಲೆ ಹೊರಳಾಡಿಸಲ್ಪಡುವರು.
51:14
ذُوقُوا فِتْنَتَكُمْ هَٰذَا الَّذِي كُنْتُمْ بِهِ تَسْتَعْجِلُونَ ۞
(ಅವರೊಡನೆ ಹೇಳಲಾಗುವುದು;) ಸವಿಯಿರಿ ನಿಮ್ಮ ಕಿಡಿಗೇಡಿತನವನ್ನು, ನೀವು ಆತುರ ಪಡುತ್ತಿದ್ದ ವಸ್ತು ಇದುವೇ.
51:15
إِنَّ الْمُتَّقِينَ فِي جَنَّاتٍ وَعُيُونٍ ۞
ಧರ್ಮನಿಷ್ಠರು ಖಂಡಿತ (ಸ್ವರ್ಗದ) ತೋಟಗಳಲ್ಲಿ ಹಾಗೂ ಚಿಲುಮೆಗಳಲ್ಲಿರುವರು.
51:16
آخِذِينَ مَا آتَاهُمْ رَبُّهُمْ ۚ إِنَّهُمْ كَانُوا قَبْلَ ذَٰلِكَ مُحْسِنِينَ ۞
ತಮ್ಮ ಒಡೆಯನು ನೀಡಿದ್ದನ್ನು ಸ್ವೀಕರಿಸುತ್ತಿರುವರು. ಈ ಹಿಂದೆ (ಇಹಲೋಕದಲ್ಲಿ) ಅವರು ಸತ್ಕರ್ಮಿಗಳಾಗಿದ್ದರು.
51:17
كَانُوا قَلِيلًا مِنَ اللَّيْلِ مَا يَهْجَعُونَ ۞
ಅವರು ರಾತ್ರಿಯಲ್ಲಿ ತುಸು ಹೊತ್ತು ಮಾತ್ರ ನಿದ್ರಿಸುತ್ತಿದ್ದರು.
51:18
وَبِالْأَسْحَارِ هُمْ يَسْتَغْفِرُونَ ۞
ಮುಂಜಾವಿನಲ್ಲಿ ಅವರು (ಅಲ್ಲಾಹನೊಡನೆ) ಕ್ಷಮೆಯಾಚಿಸುತ್ತಿದ್ದರು.
51:19
وَفِي أَمْوَالِهِمْ حَقٌّ لِلسَّائِلِ وَالْمَحْرُومِ ۞
ಅವರ ಸಂಪತ್ತಿನಲ್ಲಿ, ಬೇಡುವವರಿಗೆ ಹಾಗೂ ವಂಚಿತರಿಗೆ ಹಕ್ಕಿತ್ತು.
51:20
وَفِي الْأَرْضِ آيَاتٌ لِلْمُوقِنِينَ ۞
ಅಚಲ ನಂಬಿಕೆ ಉಳ್ಳವರಿಗೆ ಭೂಮಿಯಲ್ಲಿ (ಪಾಠದಾಯಕ) ಪುರಾವೆಗಳಿವೆ.
51:21
وَفِي أَنْفُسِكُمْ ۚ أَفَلَا تُبْصِرُونَ ۞
ಮತ್ತು ನೀವೇನು ಸ್ವತಃ ನಿಮ್ಮನ್ನೇ ನೋಡುವುದಿಲ್ಲವೇ?
51:22
وَفِي السَّمَاءِ رِزْقُكُمْ وَمَا تُوعَدُونَ ۞
ಮತ್ತು ಆಕಾಶದಲ್ಲಿ ನಿಮ್ಮ ಆಹಾರವಿದೆ ಮತ್ತು ನಿಮಗೆ ವಾಗ್ದಾನ ಮಾಡಲಾಗಿರುವ ವಸ್ತುವೂ ಇದೆ.
51:23
فَوَرَبِّ السَّمَاءِ وَالْأَرْضِ إِنَّهُ لَحَقٌّ مِثْلَ مَا أَنَّكُمْ تَنْطِقُونَ ۞
ಆಕಾಶ ಮತ್ತು ಭೂಮಿಯ ಒಡೆಯನಾಣೆ, ಅದು (ಪರಲೋಕ) ಸತ್ಯ. ನೀವು ಮಾತನಾಡಬಲ್ಲಿರೆಂಬುದು ಸತ್ಯವಾಗಿರುವಂತೆ.
51:24
هَلْ أَتَاكَ حَدِيثُ ضَيْفِ إِبْرَاهِيمَ الْمُكْرَمِينَ ۞
ಇಬ್ರಾಹೀಮರ ಆದರಣೀಯ ಅತಿಥಿಗಳ ಸಮಾಚಾರ ನಿಮಗೆ ತಲುಪಿದೆಯೇ?
51:25
إِذْ دَخَلُوا عَلَيْهِ فَقَالُوا سَلَامًا ۖ قَالَ سَلَامٌ قَوْمٌ مُنْكَرُونَ ۞
ಅವರು, ಅವರ (ಇಬ್ರಾಹೀಮರ) ಬಳಿಗೆ ಬಂದು ‘ಸಲಾಮ್’ ಎಂದರು. ಅವರು, ‘‘ಸಲಾಮ್, ಅಪರಿಚಿತರೇ’’ ಎಂದರು.
51:26
فَرَاغَ إِلَىٰ أَهْلِهِ فَجَاءَ بِعِجْلٍ سَمِينٍ ۞
ಆ ಬಳಿಕ ಅವರು, ತಮ್ಮ ಮನೆಯವರ ಬಳಿಗೆ ಹೋಗಿ ಒಂದು ದಷ್ಟಪುಷ್ಟವಾದ (ಹುರಿದ) ಕರುವನ್ನು ತಂದರು.
51:27
فَقَرَّبَهُ إِلَيْهِمْ قَالَ أَلَا تَأْكُلُونَ ۞
ಅವರು (ಇಬ್ರಾಹೀಮರು), ಅವರ (ಅತಿಥಿಗಳ) ಬಳಿಗೆ ಹೋಗಿ, ನೀವು ಉಣ್ಣುವುದಿಲ್ಲವೇ? ಎಂದರು.
51:28
فَأَوْجَسَ مِنْهُمْ خِيفَةً ۖ قَالُوا لَا تَخَفْ ۖ وَبَشَّرُوهُ بِغُلَامٍ عَلِيمٍ ۞
ಅವರಿಗೆ (ಇಬ್ರಾಹೀಮರಿಗೆ) ಅವರ ಕುರಿತು ಭಯವಾಯಿತು. ಅವರು (ಅತಿಥಿಗಳು), ‘‘ನೀವು ಅಂಜಬೇಡಿ’’ ಎಂದರು ಮತ್ತು ಅವರಿಗೆ ಒಬ್ಬ ಜ್ಞಾನವಂತ ಪುತ್ರನ ಶುಭವಾರ್ತೆ ನೀಡಿದರು.
51:29
فَأَقْبَلَتِ امْرَأَتُهُ فِي صَرَّةٍ فَصَكَّتْ وَجْهَهَا وَقَالَتْ عَجُوزٌ عَقِيمٌ ۞
ಅವರ ಪತ್ನಿಯು ಮುಂದೆ ಬಂದು ಅಚ್ಚರಿಯಿಂದ ತನ್ನ ಮುಖಕ್ಕೆ ಕೈ ಇಟ್ಟು, ‘‘ಬಂಜೆಯಾಗಿರುವ ವೃದ್ಧೆಗೆ (ಮಗುವಾಗುವುದೇ)?’’ ಎಂದರು.
51:30
قَالُوا كَذَٰلِكِ قَالَ رَبُّكِ ۖ إِنَّهُ هُوَ الْحَكِيمُ الْعَلِيمُ ۞
ಅವರು (ಅತಿಥಿಗಳು) ಹೇಳಿದರು; ‘‘ಹಾಗೆಯೇ ಆಗುವುದು. (ಹಾಗೆಂದು) ನಿಮ್ಮ ಒಡೆಯನು ಹೇಳಿರುವನು. ಅವನು ಖಂಡಿತ ಯುಕ್ತಿವಂತನೂ ಜ್ಞಾನಿಯೂ ಆಗಿರುವನು.’’
51:31
۞ قَالَ فَمَا خَطْبُكُمْ أَيُّهَا الْمُرْسَلُونَ ۞
ಅವರು (ಇಬ್ರಾಹೀಮ್) ಕೇಳಿದರು; ದೂತರೇ, ನಿಮ್ಮ ಗುರಿ ಏನು?
51:32
قَالُوا إِنَّا أُرْسِلْنَا إِلَىٰ قَوْمٍ مُجْرِمِينَ ۞
ಅವರು (ಮಲಕ್‌ಗಳು) ಹೇಳಿದರು; ‘‘ಒಂದು ಅಪರಾಧಿ ಜನಾಂಗದೆಡೆಗೆ ನಮ್ಮನ್ನು ಕಳಿಸಲಾಗಿದೆ.’’
51:33
لِنُرْسِلَ عَلَيْهِمْ حِجَارَةً مِنْ طِينٍ ۞
‘‘ಅವರ ಮೇಲೆ ಮಣ್ಣಿನ ಕಲ್ಲುಗಳನ್ನು ಸುರಿಸಬೇಕೆಂದು ನಮಗೆ ಆದೇಶಿಸಲಾಗಿದೆ.’’
51:34
مُسَوَّمَةً عِنْدَ رَبِّكَ لِلْمُسْرِفِينَ ۞
‘‘ನಿಮ್ಮ ಒಡೆಯನ ಬಳಿ ಅವುಗಳನ್ನು (ಆ ಕಲ್ಲುಗಳನ್ನು), ಅತಿರೇಕ ಎಸಗುವವರಿಗೆಂದೇ ಗುರುತಿಸಿಡಲಾಗಿದೆ.’’
51:35
فَأَخْرَجْنَا مَنْ كَانَ فِيهَا مِنَ الْمُؤْمِنِينَ ۞
ಕೊನೆಗೆ ನಾವು, ಅಲ್ಲಿದ್ದ ವಿಶ್ವಾಸಿಗಳನ್ನು ಹೊರತೆಗೆದೆವು.
51:36
فَمَا وَجَدْنَا فِيهَا غَيْرَ بَيْتٍ مِنَ الْمُسْلِمِينَ ۞
ಅಲ್ಲಿ (ಆ ನಾಡಿನಲ್ಲಿ) ನಾವು ಮುಸ್ಲಿಮರ ಒಂದು ಮನೆಯನ್ನು ಮಾತ್ರ ಕಂಡೆವು.
51:37
وَتَرَكْنَا فِيهَا آيَةً لِلَّذِينَ يَخَافُونَ الْعَذَابَ الْأَلِيمَ ۞
ಮತ್ತು ಕಠಿಣ ಶಿಕ್ಷೆಯನ್ನು ಅಂಜುವವರಿಗಾಗಿ ಅಲ್ಲಿ ನಾವು ಒಂದು ಪಾಠದಾಯಕ ಸೂಚನೆಯನ್ನು ಬಿಟ್ಟಿರುವೆವು.
51:38
وَفِي مُوسَىٰ إِذْ أَرْسَلْنَاهُ إِلَىٰ فِرْعَوْنَ بِسُلْطَانٍ مُبِينٍ ۞
ಮತ್ತು ಮೂಸಾರಲ್ಲೂ (ಪಾಠವಿದೆ). ಅವರನ್ನು ನಾವು ಸ್ಪಷ್ಟವಾದ ಆಧಾರದೊಂದಿಗೆ ಫಿರ್‌ಔನನ ಕಡೆಗೆ ಕಳಿಸಿದಾಗ,
51:39
فَتَوَلَّىٰ بِرُكْنِهِ وَقَالَ سَاحِرٌ أَوْ مَجْنُونٌ ۞
ಅವನು (ಫಿರ್‌ಔನನು) ತನ್ನ ಶಕ್ತಿಯ ಗುಂಗಿನಲ್ಲಿ ಬಂಡಾಯವೆದ್ದನು ಮತ್ತು (ಮೂಸಾರನ್ನು) ಜಾದೂಗಾರ ಹಾಗೂ ಹುಚ್ಚನೆಂದು ಕರೆದನು.
51:40
فَأَخَذْنَاهُ وَجُنُودَهُ فَنَبَذْنَاهُمْ فِي الْيَمِّ وَهُوَ مُلِيمٌ ۞
ನಾವು ಅವನನ್ನೂ ಅವನ ಪಡೆಗಳನ್ನೂ ಹಿಡಿದೆವು ಹಾಗೂ ಅವರನ್ನು ಕಡಲಿಗೆ ಎಸೆದು ಬಿಟ್ಟೆವು. ಅವನು ನಿಂದನೆಗೆ ಅರ್ಹನಾಗಿದ್ದನು.
51:41
وَفِي عَادٍ إِذْ أَرْسَلْنَا عَلَيْهِمُ الرِّيحَ الْعَقِيمَ ۞
ಮತ್ತು ಆದ್ ಜನಾಂಗದಲ್ಲೂ (ಪಾಠವಿದೆ). ನಾವು ಅವರ ಮೇಲೆ ಒಂದು ಮಾರಕ ಚಂಡಮಾರುತವನ್ನು ಹೇರಿದೆವು.
51:42
مَا تَذَرُ مِنْ شَيْءٍ أَتَتْ عَلَيْهِ إِلَّا جَعَلَتْهُ كَالرَّمِيمِ ۞
ಅದು ತನ್ನೆದುರು ಬಂದ ಪ್ರತಿಯೊಂದು ವಸ್ತುವನ್ನೂ ಕೊಳೆತ ಮೂಳೆಯಂತಾಗಿಸಿ ಬಿಡುತ್ತಿತ್ತು.
51:43
وَفِي ثَمُودَ إِذْ قِيلَ لَهُمْ تَمَتَّعُوا حَتَّىٰ حِينٍ ۞
ಮತ್ತು ಸಮೂದ್ ಜನಾಂಗದಲ್ಲೂ (ಪಾಠವಿದೆ). ಒಂದು ನಿರ್ದಿಷ್ಟ ಅವಧಿಯ ತನಕ ಸುಖ ಅನುಭವಿಸಿರಿ ಎಂದು ಅವರೊಡನೆ ಹೇಳಲಾದಾಗ.
51:44
فَعَتَوْا عَنْ أَمْرِ رَبِّهِمْ فَأَخَذَتْهُمُ الصَّاعِقَةُ وَهُمْ يَنْظُرُونَ ۞
ಅವರು ತಮ್ಮ ಒಡೆಯನ ಆದೇಶದೆದುರು ಬಂಡಾಯವೆದ್ದರು. ಕೊನೆಗೆ, ಅವರು ನೋಡುತ್ತಿದ್ದಂತೆಯೇ ಸಿಡಿಲೊಂದು ಅವರ ಮೇಲೆರಗಿತು.
51:45
فَمَا اسْتَطَاعُوا مِنْ قِيَامٍ وَمَا كَانُوا مُنْتَصِرِينَ ۞
ಕೊನೆಗೆ ಅವರು ಎದ್ದು ನಿಲ್ಲಲಿಕ್ಕೂ ಅಶಕ್ತರಾದರು ಮತ್ತು ಪ್ರತೀಕಾರವೆಸಗಲಿಕ್ಕೂ ಅಸಮರ್ಥರಾದರು.
51:46
وَقَوْمَ نُوحٍ مِنْ قَبْلُ ۖ إِنَّهُمْ كَانُوا قَوْمًا فَاسِقِينَ ۞
ಅವರಿಗಿಂತ ಹಿಂದಿನ ನೂಹರ ಜನಾಂಗದಲ್ಲೂ (ಪಾಠವಿದೆ). ಅವರು ಅವಿಧೇಯರಾಗಿದ್ದರು.
51:47
وَالسَّمَاءَ بَنَيْنَاهَا بِأَيْدٍ وَإِنَّا لَمُوسِعُونَ ۞
ನಾವು ಆಕಾಶವನ್ನು ಕೈಯಾರೆ ನಿರ್ಮಿಸಿರುವೆವು. ನಾವು ಖಂಡಿತ ವಿಶಾಲ ಸಾಮರ್ಥ್ಯ ಉಳ್ಳವರಾಗಿರುವೆವು.
51:48
وَالْأَرْضَ فَرَشْنَاهَا فَنِعْمَ الْمَاهِدُونَ ۞
ಮತ್ತು ಭೂಮಿಯನ್ನು ನಾವು ಹಾಸಿನಂತಾಗಿಸಿರುವೆವು. ನಾವಂತೂ ಅತ್ಯುತ್ತಮವಾಗಿ ಹಾಸುವವರಾಗಿರುವೆವು.
51:49
وَمِنْ كُلِّ شَيْءٍ خَلَقْنَا زَوْجَيْنِ لَعَلَّكُمْ تَذَكَّرُونَ ۞
ನಾವು ಪ್ರತಿಯೊಂದು ವಸ್ತುವಿನಿಂದಲೂ ಎರಡು ಬಗೆಗಳನ್ನು (ಜೊತೆಗಳನ್ನು ) ಸೃಷ್ಟಿಸಿರುವೆವು. ನೀವು ಪಾಠ ಕಲಿಯಬೇಕೆಂದು.
51:50
فَفِرُّوا إِلَى اللَّهِ ۖ إِنِّي لَكُمْ مِنْهُ نَذِيرٌ مُبِينٌ ۞
ನೀವು ಅಲ್ಲಾಹನೆಡೆಗೆ ಧಾವಿಸಿರಿ. ನಾನು ಅವನ ಕಡೆಯಿಂದ ನಿಮ್ಮನ್ನು ಸ್ಪಷ್ಟವಾಗಿ ಎಚ್ಚರಿಸುವವನಾಗಿದ್ದೇನೆ.
51:51
وَلَا تَجْعَلُوا مَعَ اللَّهِ إِلَٰهًا آخَرَ ۖ إِنِّي لَكُمْ مِنْهُ نَذِيرٌ مُبِينٌ ۞
ಮತ್ತು ನೀವು ಅಲ್ಲಾಹನ ಜೊತೆ ಬೇರೊಬ್ಬರನ್ನು ದೇವರಾಗಿಸಿಕೊಳ್ಳಬೇಡಿ. ನಾನು ಅವನ ಕಡೆಯಿಂದ ನಿಮ್ಮನ್ನು ಸ್ಪಷ್ಟವಾಗಿ ಎಚ್ಚರಿಸುವವನಾಗಿದ್ದೇನೆ.
51:52
كَذَٰلِكَ مَا أَتَى الَّذِينَ مِنْ قَبْلِهِمْ مِنْ رَسُولٍ إِلَّا قَالُوا سَاحِرٌ أَوْ مَجْنُونٌ ۞
ಇದೇ ರೀತಿ, ಅವರಿಗಿಂತ ಹಿಂದಿನವರು ತಮ್ಮ ಬಳಿಗೆ ಬಂದಿದ್ದ ಯಾವ ದೂತರನ್ನೂ ಜಾದೂಗಾರ ಅಥವಾ ಹುಚ್ಚ ಎಂದು ಕರೆಯದೆ ಬಿಟ್ಟಿರಲಿಲ್ಲ.
51:53
أَتَوَاصَوْا بِهِ ۚ بَلْ هُمْ قَوْمٌ طَاغُونَ ۞
ಅವರೇನು ಪರಸ್ಪರರಿಗೆ ಇದನ್ನೇ ಬೋಧಿಸಿರುವರೇ? ನಿಜವಾಗಿ ಅವರು ವಿದ್ರೋಹಿಗಳಾಗಿದ್ದಾರೆ.
51:54
فَتَوَلَّ عَنْهُمْ فَمَا أَنْتَ بِمَلُومٍ ۞
ನೀವು ಅವರನ್ನು ಕಡೆಗಣಿಸಿರಿ. ನಿಮ್ಮ ಮೇಲೆ ಯಾವ ದೋಷವೂ ಇಲ್ಲ.
51:55
وَذَكِّرْ فَإِنَّ الذِّكْرَىٰ تَنْفَعُ الْمُؤْمِنِينَ ۞
ನೀವು ಉಪದೇಶಿಸಿರಿ. ಖಂಡಿತವಾಗಿಯೂ ಉಪದೇಶವು ವಿಶ್ವಾಸಿಗಳ ಪಾಲಿಗೆ ಲಾಭದಾಯಕವಾಗಿರುತ್ತದೆ.
51:56
وَمَا خَلَقْتُ الْجِنَّ وَالْإِنْسَ إِلَّا لِيَعْبُدُونِ ۞
ನಾನು ಜಿನ್ನ್‌ಗಳನ್ನು ಹಾಗೂ ಮಾನವರನ್ನು ನನ್ನ ಆರಾಧನೆಗೆಂದೇ ಸೃಷ್ಟಿಸಿರುವೆನು.
51:57
مَا أُرِيدُ مِنْهُمْ مِنْ رِزْقٍ وَمَا أُرِيدُ أَنْ يُطْعِمُونِ ۞
ನಾನು ಅವರಿಂದ ಯಾವುದೇ ಆಹಾರವನ್ನು ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ನಾನು ಅಪೇಕ್ಷಿಸುವುದಿಲ್ಲ.
51:58
إِنَّ اللَّهَ هُوَ الرَّزَّاقُ ذُو الْقُوَّةِ الْمَتِينُ ۞
ಖಂಡಿತವಾಗಿಯೂ ಅಲ್ಲಾಹನೇ ಎಲ್ಲರ ಅನ್ನದಾತನೂ ಭಾರೀ ಶಕ್ತಿ ಶಾಲಿಯೂ ಪರಮ ಸಮರ್ಥನೂ ಆಗಿದ್ದಾನೆ.
51:59
فَإِنَّ لِلَّذِينَ ظَلَمُوا ذَنُوبًا مِثْلَ ذَنُوبِ أَصْحَابِهِمْ فَلَا يَسْتَعْجِلُونِ ۞
ಅಕ್ರಮವೆಸಗಿದವರಿಗಾಗಿ (ಅವರ ಶಿಕ್ಷೆಗಾಗಿ), ಅವರ ಸಂಗಾತಿಗಳಿಗೆ ನಿಶ್ಚಿತ ವಾಗಿದ್ದಂತಹದೇ ಕಾಲವೊಂದು ನಿಶ್ಚಿತವಾಗಿದೆ. ಆದ್ದರಿಂದ ಅವರು ಆತುರ ಪಡದಿರಲಿ.
51:60
فَوَيْلٌ لِلَّذِينَ كَفَرُوا مِنْ يَوْمِهِمُ الَّذِي يُوعَدُونَ ۞
ತಮಗೆ ವಾಗ್ದಾನ ಮಾಡಲಾದ (ಪುನರುತ್ಥಾನ) ದಿನವನ್ನು ಧಿಕ್ಕರಿಸಿದವರಿಗೆ ವಿನಾಶ ಕಾದಿದೆ.