Al-Mulk (The sovereignty)
67. ಅಲ್ ಮುಲ್ಕ್(ಆಧಿಪತ್ಯ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
67:1
تَبَارَكَ الَّذِي بِيَدِهِ الْمُلْكُ وَهُوَ عَلَىٰ كُلِّ شَيْءٍ قَدِيرٌ ۞
ಅವನು ಸಮೃದ್ಧನು. ಆಧಿಪತ್ಯವು ಅವನ ಕೈಯಲ್ಲಿದೆ ಮತ್ತು ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
67:2
الَّذِي خَلَقَ الْمَوْتَ وَالْحَيَاةَ لِيَبْلُوَكُمْ أَيُّكُمْ أَحْسَنُ عَمَلًا ۚ وَهُوَ الْعَزِيزُ الْغَفُورُ ۞
ನಿಮ್ಮಲ್ಲಿ ಯಾರು ಸತ್ಕರ್ಮಗಳನ್ನು ಮಾಡುವರೆಂದು ಪರೀಕ್ಷಿಸಲು, ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿರುವನು. ಅವನು ಬಹಳ ಪ್ರಬಲನೂ ಕ್ಷಮಾಶೀಲನೂ ಆಗಿರುವನು.
67:3
الَّذِي خَلَقَ سَبْعَ سَمَاوَاتٍ طِبَاقًا ۖ مَا تَرَىٰ فِي خَلْقِ الرَّحْمَٰنِ مِنْ تَفَاوُتٍ ۖ فَارْجِعِ الْبَصَرَ هَلْ تَرَىٰ مِنْ فُطُورٍ ۞
ಅವನು ಏಳು ಆಕಾಶಗಳನ್ನು ಕ್ರಮಬದ್ಧವಾಗಿ ಸೃಷ್ಟಿಸಿರುವನು. ಆ ಪರಮ ದಯಾಳುವಿನ ಸೃಷ್ಟಿಯಲ್ಲಿ ಯಾವ ಕುಂದೂ ನಿನಗೆ ಕಾಣಿಸದು. ಇನ್ನೊಮ್ಮೆ ನೋಡು, ನಿನಗೆ ದೋಷವೇನಾದರೂ ಕಾಣಿಸುತ್ತಿದೆಯೇ?
67:4
ثُمَّ ارْجِعِ الْبَصَرَ كَرَّتَيْنِ يَنْقَلِبْ إِلَيْكَ الْبَصَرُ خَاسِئًا وَهُوَ حَسِيرٌ ۞
ಮತ್ತೊಮ್ಮೆ ತಿರುಗಿ, ಎರಡೆರಡು ಬಾರಿ ನೋಡು, ನಿನ್ನ ದೃಷ್ಟಿಯು ಸೋತು, ದಣಿದು ನಿನ್ನತ್ತಲೇ ಮರಳಿ ಬರುವುದು.
67:5
وَلَقَدْ زَيَّنَّا السَّمَاءَ الدُّنْيَا بِمَصَابِيحَ وَجَعَلْنَاهَا رُجُومًا لِلشَّيَاطِينِ ۖ وَأَعْتَدْنَا لَهُمْ عَذَابَ السَّعِيرِ ۞
ನಾವು ಇಹಲೋಕದ ಆಕಾಶವನ್ನು (ನಕ್ಷತ್ರಗಳೆಂಬ) ದೀಪಗಳಿಂದ ಅಲಂಕರಿಸಿರುವೆವು ಮತ್ತು ಅವುಗಳನ್ನು ಶೈತಾನರಿಗೆ ಹೊಡೆಯುವ ಸಾಧನಗಳಾಗಿಸಿರುವೆವು. ಮತ್ತು ನಾವು ಅವರಿಗಾಗಿ ಭುಗಿಲೇಳುವ ಬೆಂಕಿಯನ್ನು ಸಿದ್ಧಪಡಿಸಿಟ್ಟಿರುವೆವು.
67:6
وَلِلَّذِينَ كَفَرُوا بِرَبِّهِمْ عَذَابُ جَهَنَّمَ ۖ وَبِئْسَ الْمَصِيرُ ۞
ತಮ್ಮೊಡೆಯನನ್ನು ಧಿಕ್ಕರಿಸಿದವರಿಗೆ ನರಕದ ಶಿಕ್ಷೆ ಸಿಗಲಿದೆ ಮತ್ತು ಅದು ತುಂಬಾ ಹೀನ ನೆಲೆಯಾಗಿದೆ.
67:7
إِذَا أُلْقُوا فِيهَا سَمِعُوا لَهَا شَهِيقًا وَهِيَ تَفُورُ ۞
ಅವರನ್ನು ಅದರೊಳಗೆ ಹಾಕಲಾದಾಗ ಅವರು ಅದರ ಆರ್ಭಟವನ್ನು ಕೇಳುವರು ಮತ್ತು ಅದು ಕುದಿಯುತ್ತಿರುವುದು.
67:8
تَكَادُ تَمَيَّزُ مِنَ الْغَيْظِ ۖ كُلَّمَا أُلْقِيَ فِيهَا فَوْجٌ سَأَلَهُمْ خَزَنَتُهَا أَلَمْ يَأْتِكُمْ نَذِيرٌ ۞
ಅದು ಆವೇಶದಿಂದ ಇನ್ನೇನು ಸ್ಫೋಟಗೊಳ್ಳುವುದೋ, ಎಂಬಂತಿರುವುದು. ಅವರಲ್ಲಿನ ಯಾವುದಾದರೂ ತಂಡವನ್ನು ಅದರೊಳಗೆ ಹಾಕಲಾದಾಗ ಅದರ ದ್ವಾರಪಾಲಕರು ಅವರೊಡನೆ ‘‘ಎಚ್ಚರಿಸುವವರು ನಿಮ್ಮ ಬಳಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು.
67:9
قَالُوا بَلَىٰ قَدْ جَاءَنَا نَذِيرٌ فَكَذَّبْنَا وَقُلْنَا مَا نَزَّلَ اللَّهُ مِنْ شَيْءٍ إِنْ أَنْتُمْ إِلَّا فِي ضَلَالٍ كَبِيرٍ ۞
ಅವರು ಹೇಳುವರು; ‘‘ಯಾಕಿಲ್ಲ? ಎಚ್ಚರಿಸುವವರು ನಮ್ಮ ಬಳಿಗೆ ಖಂಡಿತ ಬಂದಿದ್ದರು. ಆದರೆ ನಾವು ಅವರನ್ನು ತಿರಸ್ಕರಿಸಿದೆವು ಮತ್ತು ಅಲ್ಲಾಹನು ಏನನ್ನೂ ಕಳುಹಿಸಿಕೊಟ್ಟಿಲ್ಲ, ನೀವು ಮಹಾ ಮೋಸಕ್ಕೆ ಸಿಲುಕಿರುವಿರೆಂದು ಹೇಳಿದ್ದೆವು’’ ಎನ್ನುವರು.
67:10
وَقَالُوا لَوْ كُنَّا نَسْمَعُ أَوْ نَعْقِلُ مَا كُنَّا فِي أَصْحَابِ السَّعِيرِ ۞
ಮತ್ತು ಅವರು ಹೇಳುವರು; ‘‘ಒಂದು ವೇಳೆ ನಾವು (ದೂತರ ಸಂದೇಶವನ್ನು) ಕೇಳಿದ್ದರೆ ಮತ್ತು ಅದನ್ನು ಅರ್ಥ ಮಾಡಿಕೊಂಡಿದ್ದರೆ (ಇಂದು) ನಾವು ನರಕದವರ ಸಾಲಲ್ಲಿರುತ್ತಿರಲಿಲ್ಲ.
67:11
فَاعْتَرَفُوا بِذَنْبِهِمْ فَسُحْقًا لِأَصْحَابِ السَّعِيرِ ۞
ಹೀಗೆ, ಅವರು ತಮ್ಮ ಪಾಪವನ್ನು ಒಪ್ಪಿಕೊಳ್ಳುವರು. ಆದರೆ ನರಕದವರು ಶಾಪಗ್ರಸ್ತರಾಗಿರುವರು.
67:12
إِنَّ الَّذِينَ يَخْشَوْنَ رَبَّهُمْ بِالْغَيْبِ لَهُمْ مَغْفِرَةٌ وَأَجْرٌ كَبِيرٌ ۞
ತಮ್ಮ ಒಡೆಯನನ್ನು ಕಣ್ಣಾರೆ ಕಾಣದೆಯೇ ಅವನಿಗೆ ಅಂಜಿಕೊಂಡಿದ್ದವರಿಗೆ ಕ್ಷಮೆ ಇದೆ ಮತ್ತು ಮಹಾ ಪ್ರತಿಫಲವಿದೆ.
67:13
وَأَسِرُّوا قَوْلَكُمْ أَوِ اجْهَرُوا بِهِ ۖ إِنَّهُ عَلِيمٌ بِذَاتِ الصُّدُورِ ۞
ನೀವು ನಿಮ್ಮ ಮಾತನ್ನು ಗುಟ್ಟಾಗಿಡಿರಿ ಅಥವಾ ಅದನ್ನು ಬಹಿರಂಗಪಡಿಸಿರಿ. ಅವನಂತು ಮನಸ್ಸುಗಳೊಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ.
67:14
أَلَا يَعْلَمُ مَنْ خَلَقَ وَهُوَ اللَّطِيفُ الْخَبِيرُ ۞
ಸೃಷ್ಟಿಸಿದವನೇನು ಅರಿಯದಿರುತ್ತಾನೆಯೇ? ಅವನು ತೀರಾ ಸೂಕ್ಷ್ಮವಿಷಯಗಳನ್ನೂ ಬಲ್ಲವನು ಮತ್ತು ಅರಿವುಳ್ಳವನಾಗಿದ್ದಾನೆ.
67:15
هُوَ الَّذِي جَعَلَ لَكُمُ الْأَرْضَ ذَلُولًا فَامْشُوا فِي مَنَاكِبِهَا وَكُلُوا مِنْ رِزْقِهِ ۖ وَإِلَيْهِ النُّشُورُ ۞
ಅವನೇ ಭೂಮಿಯನ್ನು ನಿಮ್ಮ ಪಾಲಿಗೆ ಸಮತಟ್ಟಾಗಿಸಿದವನು. ನೀವು ಅದರಲ್ಲಿನ ದಾರಿಗಳಲ್ಲಿ ನಡೆಯಿರಿ ಮತ್ತು ಅವನು ಒದಗಿಸಿರುವ ಆಹಾರವನ್ನು ಸೇವಿಸಿರಿ. ಕೊನೆಗೆ ಅವನ ಬಳಿಯೇ ಮತ್ತೆ ಜೀವಂತಗೊಳ್ಳಬೇಕಾಗಿದೆ.
67:16
أَأَمِنْتُمْ مَنْ فِي السَّمَاءِ أَنْ يَخْسِفَ بِكُمُ الْأَرْضَ فَإِذَا هِيَ تَمُورُ ۞
ನೀವೇನು, ಆಕಾಶದಲ್ಲಿರುವವನು ನಿಮ್ಮನ್ನು ಭೂಮಿಯಲ್ಲಿ ಹೂತುಬಿಡುವ ಹಾಗೂ ಅದು (ಭೂಮಿಯು) ಹಠಾತ್ತನೆ ನಡುಗಲಾರಂಭಿಸುವ (ಸಾಧ್ಯತೆಯ) ಕುರಿತು ನಿಶ್ಚಿಂತರಾಗಿರುವಿರಾ?
67:17
أَمْ أَمِنْتُمْ مَنْ فِي السَّمَاءِ أَنْ يُرْسِلَ عَلَيْكُمْ حَاصِبًا ۖ فَسَتَعْلَمُونَ كَيْفَ نَذِيرِ ۞
ಅಥವಾ ಆಕಾಶದಲ್ಲಿರುವವನು ನಿಮ್ಮ ಮೇಲೆ, ಕಲ್ಲು ತುಂಬಿದ ಬಿರುಗಾಳಿಯನ್ನು ಬೀಸಿ ಬಿಡುವ (ಸಾಧ್ಯತೆಯ) ಕುರಿತು ನೀವು ನಿಶ್ಚಿಂತರಾಗಿರುವಿರಾ? ನನ್ನ ಎಚ್ಚರಿಕೆ ಎಂತಹದೆಂಬುದು ನಿಮಗೆ ಬೇಗನೇ ತಿಳಿಯಲಿದೆ.
67:18
وَلَقَدْ كَذَّبَ الَّذِينَ مِنْ قَبْلِهِمْ فَكَيْفَ كَانَ نَكِيرِ ۞
ಅವರ ಹಿಂದಿನವರು (ಸತ್ಯವನ್ನು) ತಿರಸ್ಕರಿಸಿದ್ದರು. ಹೇಗಿತ್ತು ನನ್ನ ಶಿಕ್ಷೆ?
67:19
أَوَلَمْ يَرَوْا إِلَى الطَّيْرِ فَوْقَهُمْ صَافَّاتٍ وَيَقْبِضْنَ ۚ مَا يُمْسِكُهُنَّ إِلَّا الرَّحْمَٰنُ ۚ إِنَّهُ بِكُلِّ شَيْءٍ بَصِيرٌ ۞
ತಮ್ಮ ಮೇಲೆ ಹಾರಾಡುತ್ತಿರುವ ಪಕ್ಷಿಗಳನ್ನು ಅವರು ನೋಡಲಿಲ್ಲವೇ? ಅವುಗಳು ತಮ್ಮ ರೆಕ್ಕೆಗಳನ್ನು ಹರಡಿಕೊಂಡೂ ಇರುತ್ತವೆ, ಅವುಗಳನ್ನು ಮಡಚಿಕೊಂಡೂ ಇರುತ್ತವೆ. ಅವುಗಳನ್ನು ಆಧರಿಸಿ ಕೊಂಡಿರುವವನು, ಆ ಪರಮ ದಯಾಳುವಿನ ಹೊರತು ಬೇರಾರೂ ಅಲ್ಲ. ಅವನು ಖಂಡಿತ ಎಲ್ಲವನ್ನೂ ನೋಡುತ್ತಿರುತ್ತಾನೆ.
67:20
أَمَّنْ هَٰذَا الَّذِي هُوَ جُنْدٌ لَكُمْ يَنْصُرُكُمْ مِنْ دُونِ الرَّحْمَٰنِ ۚ إِنِ الْكَافِرُونَ إِلَّا فِي غُرُورٍ ۞
ಆ ಪರಮ ದಯಾಳುವಿನ ವಿರುದ್ಧ ನಿಮಗೆ ನೆರವಾಗಬಲ್ಲ ಯಾವ ಪಡೆ ತಾನೇ ನಿಮ್ಮ ಬಳಿ ಇದೆ? ಧಿಕ್ಕಾರಿಗಳು ನಿಜಕ್ಕೂ ಮೋಸಕ್ಕೊಳಗಾಗಿದ್ದಾರೆ.
67:21
أَمَّنْ هَٰذَا الَّذِي يَرْزُقُكُمْ إِنْ أَمْسَكَ رِزْقَهُ ۚ بَلْ لَجُّوا فِي عُتُوٍّ وَنُفُورٍ ۞
ಅವನು ನಿಮಗೆ ತನ್ನ ಕಡೆಯಿಂದ ಆಹಾರ ಒದಗಿಸುವುದನ್ನು ನಿಲ್ಲಿಸಿ ಬಿಟ್ಟರೆ ಯಾರಿದ್ದಾನೆ ನಿಮಗೆ ಆಹಾರ ಒದಗಿಸುವವನು? ನಿಜವಾಗಿ ಅವರು (ಧಿಕ್ಕಾರಿಗಳು) ವಿದ್ರೋಹ ಮತ್ತು ವಿದ್ವೇಷದ ಧೋರಣೆಗೆ ಅಂಟಿಕೊಂಡಿದ್ದಾರೆ.
67:22
أَفَمَنْ يَمْشِي مُكِبًّا عَلَىٰ وَجْهِهِ أَهْدَىٰ أَمَّنْ يَمْشِي سَوِيًّا عَلَىٰ صِرَاطٍ مُسْتَقِيمٍ ۞
ತನ್ನ ಮುಖವನ್ನು ನೆಲಕ್ಕೊರಗಿಸಿಕೊಂಡು ಏಳುತ್ತಾ ಬೀಳುತ್ತಾ ನಡೆಯುವವನು ಹೆಚ್ಚು ಸನ್ಮಾರ್ಗದಲ್ಲಿರುವನೋ ಅಥವಾ ನೇರ ಮಾರ್ಗದಲ್ಲಿ ನೆಟ್ಟಗೆ ನಡೆಯುವವನೋ?
67:23
قُلْ هُوَ الَّذِي أَنْشَأَكُمْ وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۖ قَلِيلًا مَا تَشْكُرُونَ ۞
ಹೇಳಿರಿ; ಅವನೇ ನಿಮ್ಮನ್ನು ಸೃಷ್ಟಿಸಿದವನು, ನಿಮಗೆ ಕಿವಿಗಳನ್ನೂ, ಕಣ್ಣುಗಳನ್ನೂ, ಮನಸ್ಸುಗಳನ್ನೂ ನೀಡಿದವನು. ಆದರೆ ನೀವು ಕೃತಜ್ಞತೆ ಸಲ್ಲಿಸುವುದು ಮಾತ್ರ ತೀರಾ ಕಡಿಮೆ.
67:24
قُلْ هُوَ الَّذِي ذَرَأَكُمْ فِي الْأَرْضِ وَإِلَيْهِ تُحْشَرُونَ ۞
ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ಅವನ ಬಳಿಯೇ ನಿಮ್ಮನ್ನು ಒಟ್ಟು ಸೇರಿಸಲಾಗುವುದು.
67:25
وَيَقُولُونَ مَتَىٰ هَٰذَا الْوَعْدُ إِنْ كُنْتُمْ صَادِقِينَ ۞
‘‘ನೀವು ಸತ್ಯವಂತರಾಗಿದ್ದರೆ, (ಲೋಕಾಂತ್ಯದ) ಆ ವಾಗ್ದಾನ ಈಡೇರುವುದು ಯಾವಾಗ?’’ ಎಂದು ಅವರು ಕೇಳುತ್ತಾರೆ.
67:26
قُلْ إِنَّمَا الْعِلْمُ عِنْدَ اللَّهِ وَإِنَّمَا أَنَا نَذِيرٌ مُبِينٌ ۞
ಹೇಳಿರಿ; ಅದರ ಜ್ಞಾನವು ಅಲ್ಲಾಹನ ಬಳಿ ಇದೆ. ಮತ್ತು ನಾನು ಕೇವಲ ಸ್ಪಷ್ಟವಾಗಿ ಎಚ್ಚರಿಸುವವನು ಮಾತ್ರ.
67:27
فَلَمَّا رَأَوْهُ زُلْفَةً سِيئَتْ وُجُوهُ الَّذِينَ كَفَرُوا وَقِيلَ هَٰذَا الَّذِي كُنْتُمْ بِهِ تَدَّعُونَ ۞
ನಿಜವಾಗಿ ಅದು (ಲೋಕಾಂತ್ಯದ ಸಮಯವು) ಹತ್ತಿರ ಬರುವುದನ್ನು ಕಂಡಾಗ ಧಿಕ್ಕಾರಿಗಳ ಮುಖಗಳು ವಿಕಾರ ಗೊಳ್ಳುವವು. ಆಗ ಅವರೊಡನೆ, ‘‘ನೀವು ಅಪೇಕ್ಷಿಸುತ್ತಿದ್ದುದು ಇದನ್ನೇ’’ ಎಂದು ಹೇಳಲಾಗುವುದು.
67:28
قُلْ أَرَأَيْتُمْ إِنْ أَهْلَكَنِيَ اللَّهُ وَمَنْ مَعِيَ أَوْ رَحِمَنَا فَمَنْ يُجِيرُ الْكَافِرِينَ مِنْ عَذَابٍ أَلِيمٍ ۞
(ದೂತರೇ,) ಹೇಳಿರಿ; ನೀವು ಚಿಂತಿಸಿ ನೋಡಿದಿರಾ? ಅಲ್ಲಾಹನು ನನ್ನನ್ನು ಹಾಗೂ ನನ್ನ ಜೊತೆಗೆ ಇರುವವರನ್ನು ನಾಶ ಮಾಡಿದರೂ ನಮ್ಮ ಮೇಲೆ ಕರುಣೆ ತೋರಿದರೂ, ಧಿಕ್ಕಾರಿಗಳನ್ನು ಕಠಿಣ ಶಿಕ್ಷೆಯಿಂದ ಯಾರು ತಾನೇ ರಕ್ಷಿಸ ಬಲ್ಲರು?
67:29
قُلْ هُوَ الرَّحْمَٰنُ آمَنَّا بِهِ وَعَلَيْهِ تَوَكَّلْنَا ۖ فَسَتَعْلَمُونَ مَنْ هُوَ فِي ضَلَالٍ مُبِينٍ ۞
ಹೇಳಿರಿ; ನಾವು ಆ ಪರಮ ದಯಾಳುವನ್ನು ನಂಬಿರುವೆವು ಮತ್ತು ಅವನಲ್ಲಿಯೇ ಭರವಸೆ ಇಟ್ಟಿರುವೆವು. ಯಾರು ಸ್ಪಷ್ಟವಾಗಿ ದಾರಿ ಗೆಟ್ಟವನೆಂಬುದು ನಿಮಗೆ ಬೇಗನೇ ತಿಳಿಯಲಿದೆ.
67:30
قُلْ أَرَأَيْتُمْ إِنْ أَصْبَحَ مَاؤُكُمْ غَوْرًا فَمَنْ يَأْتِيكُمْ بِمَاءٍ مَعِينٍ ۞
ಹೇಳಿರಿ; ನೀವು ಚಿಂತಿಸಿ ನೋಡಿದಿರಾ? ನೀವು ಬಳಸುವ ನೀರು ಇಂಗಿ ಹೋದರೆ ಯಾರಿದ್ದಾರೆ, ನಿಮಗೆ ಸಿಹಿ ನೀರಿನ ಚಿಲುಮೆಗಳನ್ನು ತಂದು ಕೊಡುವವರು?