Al-Furqan (The criterion)
25. ಅಲ್‌ಫುರ್‌ಕಾನ್(ಒರೆಗಲ್ಲು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
25:1
تَبَارَكَ الَّذِي نَزَّلَ الْفُرْقَانَ عَلَىٰ عَبْدِهِ لِيَكُونَ لِلْعَالَمِينَ نَذِيرًا ۞
ಬಹಳ ಸಮೃದ್ಧನು - ಸರ್ವಲೋಕಗಳನ್ನು ಎಚ್ಚರಿಸಲಿಕ್ಕೆಂದು ತನ್ನ ದಾಸನಿಗೆ ಫುರ್‌ಕಾನ್‌ಅನ್ನು (ಒಳಿತು ಕೆಡುಕುಗಳನ್ನು ಪ್ರತ್ಯೇಕಿಸಿ ತಿಳಿಸುವ ಒರೆಗಲ್ಲನ್ನು) ಇಳಿಸಿಕೊಟ್ಟವನು (ಅಲ್ಲಾಹನು).
25:2
الَّذِي لَهُ مُلْكُ السَّمَاوَاتِ وَالْأَرْضِ وَلَمْ يَتَّخِذْ وَلَدًا وَلَمْ يَكُنْ لَهُ شَرِيكٌ فِي الْمُلْكِ وَخَلَقَ كُلَّ شَيْءٍ فَقَدَّرَهُ تَقْدِيرًا ۞
ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವೆಲ್ಲಾ ಅವನಿಗೇ ಸೇರಿದೆ. ಅವನು ಯಾರನ್ನೂ ತನ್ನ ಪುತ್ರನಾಗಿಸಿಕೊಂಡಿಲ್ಲ ಮತ್ತು ಆಧಿಪತ್ಯದಲ್ಲಿ ಯಾರೂ ಅವನ ಪಾಲುದಾರರಲ್ಲ. ಅವನೇ ಎಲ್ಲವನ್ನೂ ಸೃಷ್ಟಿಸಿದವನು ಮತ್ತು ಪ್ರತಿಯೊಂದರ ಇತಿಮಿತಿಗಳನ್ನು ನಿರ್ಧರಿಸಿದವನು.
25:3
وَاتَّخَذُوا مِنْ دُونِهِ آلِهَةً لَا يَخْلُقُونَ شَيْئًا وَهُمْ يُخْلَقُونَ وَلَا يَمْلِكُونَ لِأَنْفُسِهِمْ ضَرًّا وَلَا نَفْعًا وَلَا يَمْلِكُونَ مَوْتًا وَلَا حَيَاةً وَلَا نُشُورًا ۞
ಅವರು (ಜನರು) ಅವನನ್ನು ಬಿಟ್ಟು ಇತರರನ್ನು ದೇವರಾಗಿಸಿಕೊಂಡರು. ನಿಜವಾಗಿ ಅವರು (ಆ ದೇವರುಗಳು) ಏನನ್ನೂ ಸೃಷ್ಟಿಸಿದವರಲ್ಲ - ಅವರನ್ನೇ ಸೃಷ್ಟಿಸಲಾಗಿದೆ. ಸ್ವತಃ ತಮಗೆ ಯಾವುದೇ ನಷ್ಟ ಅಥವಾ ಲಾಭ ಮಾಡಿಕೊಳ್ಳುವ ಅಧಿಕಾರವೂ ಅವರಿಗಿಲ್ಲ. ಮಾತ್ರವಲ್ಲ ಮರಣದ ಮೇಲಾಗಲಿ, ಜೀವನದ ಮೇಲಾಗಲಿ, ಮರಣಾನಂತರದ ಪುನರುಜ್ಜೀವನದ ಮೇಲಾಗಲಿ ಅವರಿಗೆ ಯಾವ ನಿಯಂತ್ರಣವೂ ಇಲ್ಲ.
25:4
وَقَالَ الَّذِينَ كَفَرُوا إِنْ هَٰذَا إِلَّا إِفْكٌ افْتَرَاهُ وَأَعَانَهُ عَلَيْهِ قَوْمٌ آخَرُونَ ۖ فَقَدْ جَاءُوا ظُلْمًا وَزُورًا ۞
‘‘ಅದೆಲ್ಲಾ ಕೇವಲ ಕಟ್ಟುಕತೆ. ಅದನ್ನು ಆತನೇ ರಚಿಸಿಕೊಂಡಿದ್ದಾನೆ. ಇತರ ಕೆಲವರು ಅವನಿಗೆ ನೆರವಾಗಿದ್ದಾರೆ’’ ಎಂದು ಧಿಕ್ಕಾರಿಗಳು ಹೇಳುತ್ತಾರೆ. ಹೀಗೆ ಅವರು ಅಕ್ರಮ ಹಾಗೂ ಸುಳ್ಳು ಪ್ರಚಾರವನ್ನು ಆರಂಭಿಸಿದ್ದಾರೆ.
25:5
وَقَالُوا أَسَاطِيرُ الْأَوَّلِينَ اكْتَتَبَهَا فَهِيَ تُمْلَىٰ عَلَيْهِ بُكْرَةً وَأَصِيلًا ۞
ಅವರು ಹೇಳುತ್ತಾರೆ; ‘‘ಅವೆಲ್ಲಾ ಕೇವಲ ಗತಕಾಲದ ಕತೆಗಳು. ಅವನೇ ಅದನ್ನು ಬರೆಸಿ ತರುತ್ತಾನೆ. ಮುಂಜಾನೆ ಹಾಗೂ ಸಂಜೆ ಇದನ್ನೆಲ್ಲಾ ಅವನಿಗೆ ಯಾರೋ ಕಲಿಸಿಕೊಡುತ್ತಾರೆ.’’
25:6
قُلْ أَنْزَلَهُ الَّذِي يَعْلَمُ السِّرَّ فِي السَّمَاوَاتِ وَالْأَرْضِ ۚ إِنَّهُ كَانَ غَفُورًا رَحِيمًا ۞
ಹೇಳಿರಿ; ಆಕಾಶಗಳ ಹಾಗೂ ಭೂಮಿಯ ಸಕಲ ರಹಸ್ಯಗಳನ್ನು ಬಲ್ಲವನು ಇದನ್ನು ಇಳಿಸಿಕೊಟ್ಟಿರುವನು ಖಂಡಿತವಾಗಿಯೂ ಅವನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.
25:7
وَقَالُوا مَالِ هَٰذَا الرَّسُولِ يَأْكُلُ الطَّعَامَ وَيَمْشِي فِي الْأَسْوَاقِ ۙ لَوْلَا أُنْزِلَ إِلَيْهِ مَلَكٌ فَيَكُونَ مَعَهُ نَذِيرًا ۞
ಅವರು ಹೇಳುತ್ತಾರೆ; ‘‘ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ನಡೆದಾಡುವ ಆತ ಅದೆಂತಹ ದೂತ? ಅವನ ಜೊತೆಗಿದ್ದು ಜನರನ್ನು ಹೆದರಿಸಲು ಒಬ್ಬ ಮಲಕ್‌ನನ್ನು ಅವನಿಗೇಕೆ ಇಳಿಸಿಕೊಡಲಾಗಿಲ್ಲ?’’
25:8
أَوْ يُلْقَىٰ إِلَيْهِ كَنْزٌ أَوْ تَكُونُ لَهُ جَنَّةٌ يَأْكُلُ مِنْهَا ۚ وَقَالَ الظَّالِمُونَ إِنْ تَتَّبِعُونَ إِلَّا رَجُلًا مَسْحُورًا ۞
‘‘ಅಥವಾ ಅವನಿಗೆ ಒಂದು ನಿಧಿಯನ್ನೇಕೆ ನೀಡಲಾಗಿಲ್ಲ? ಅಥವಾ ಅವನಿಗೆ ತಿನ್ನುಣ್ಣುತ್ತಾ ಇರುವುದಕ್ಕೆ ಒಂದು ತೋಟವನ್ನಾದರೂ ಏಕೆ ನೀಡಲಾಗಿಲ್ಲ?’’ ಮತ್ತು ಅಕ್ರಮಿಗಳು (ಜನರೊಡನೆ), ‘‘ನೀವು ಕೇವಲ ಒಬ್ಬ ಮಾಟಪೀಡಿತನನ್ನು ಅನುಸರಿಸುತ್ತಿರುವಿರಿ’’ ಎನ್ನುತ್ತಾರೆ.
25:9
انْظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا ۞
ನೋಡಿರಿ; ಅವರು ಎಂತೆಂತಹ ಹೋಲಿಕೆಗಳನ್ನು ನಿಮಗೆ ಅನ್ವಯಿಸುತ್ತಿದ್ದಾರೆ! ನಿಜವಾಗಿ ಅವರು ದಾರಿ ತಪ್ಪಿದ್ದಾರೆ ಮತ್ತು ಸರಿದಾರಿಗೆ ಬರಲು ಅವರಿಗೆ ಸಾಧ್ಯವಿಲ್ಲ.
25:10
تَبَارَكَ الَّذِي إِنْ شَاءَ جَعَلَ لَكَ خَيْرًا مِنْ ذَٰلِكَ جَنَّاتٍ تَجْرِي مِنْ تَحْتِهَا الْأَنْهَارُ وَيَجْعَلْ لَكَ قُصُورًا ۞
ಆ ಮಹಾ ಸಮೃದ್ಧನು (ಅಲ್ಲಾಹನು) ತಾನಿಚ್ಛಿಸಿದರೆ ನಿಮಗೆ ಇವೆಲ್ಲವುಗಳಿಗಿಂತ ಉತ್ತಮವಾದುದನ್ನು ನೀಡಬಲ್ಲನು. ಅಂದರೆ, ತಳದಲ್ಲಿ ನದಿಗಳು ಹರಿಯುವಂತಹ ತೋಟಗಳನ್ನು ನೀಡಬಲ್ಲನು ಮತ್ತು ನಿಮಗಾಗಿ ಅರಮನೆಗಳನ್ನು ಒದಗಿಸಬಲ್ಲನು.
25:11
بَلْ كَذَّبُوا بِالسَّاعَةِ ۖ وَأَعْتَدْنَا لِمَنْ كَذَّبَ بِالسَّاعَةِ سَعِيرًا ۞
ನಿಜವಾಗಿ ಅವರು ಆ ಅಂತಿಮ ಕ್ಷಣವನ್ನು ಸುಳ್ಳೆಂದರು. ಆ ಕ್ಷಣವನ್ನು ಸುಳ್ಳೆಂದವರಿಗಾಗಿ ನಾವು ಅಗ್ನಿಕುಂಡವನ್ನು ಸಿದ್ಧಪಡಿಸಿಟ್ಟಿರುವೆವು.
25:12
إِذَا رَأَتْهُمْ مِنْ مَكَانٍ بَعِيدٍ سَمِعُوا لَهَا تَغَيُّظًا وَزَفِيرًا ۞
ಅವರನ್ನು ದೂರದಿಂದ ಕಂಡಾಗಲೇ, ಅದು ರೋಷದಿಂದ ಅಬ್ಬರಿಸುವುದನ್ನು ಅವರು ಕೇಳುವರು.
25:13
وَإِذَا أُلْقُوا مِنْهَا مَكَانًا ضَيِّقًا مُقَرَّنِينَ دَعَوْا هُنَالِكَ ثُبُورًا ۞
ಅವರನ್ನು ಸರಪಣಿಗಳಲ್ಲಿ ಕಟ್ಟಿ ಅದರೊಳಗಿನ ಯಾವುದಾದರೂ ಇಕ್ಕಟ್ಟಾದ ಸ್ಥಳಕ್ಕೆ ಎಸೆದು ಬಿಡಲಾದಾಗ ಅಲ್ಲಿ ಅವರು ಮರಣಕ್ಕಾಗಿ ಹಾತೊರೆಯುತ್ತಿರುವರು.
25:14
لَا تَدْعُوا الْيَوْمَ ثُبُورًا وَاحِدًا وَادْعُوا ثُبُورًا كَثِيرًا ۞
‘‘ಇಂದು ನೀವು ಕೇವಲ ಒಂದು ಮರಣವನ್ನು ಕೂಗಬೇಡಿ. ಹಲವಾರು ಮರಣಗಳನ್ನು ಕೂಗಿ ಕರೆಯಿರಿ’’ (ಎಂದು ಅವರೊಡನೆ ಹೇಳಲಾಗುವುದು).
25:15
قُلْ أَذَٰلِكَ خَيْرٌ أَمْ جَنَّةُ الْخُلْدِ الَّتِي وُعِدَ الْمُتَّقُونَ ۚ كَانَتْ لَهُمْ جَزَاءً وَمَصِيرًا ۞
ಹೇಳಿರಿ; ಇದು ಉತ್ತಮವೇ, ಅಥವಾ ಧರ್ಮನಿಷ್ಠರಿಗೆ ವಾಗ್ದಾನ ಮಾಡಲಾಗಿರುವ ಶಾಶ್ವತ ಸ್ವರ್ಗ ತೋಟಗಳು ಉತ್ತಮವೇ? ಅದುವೇ ಅವರ (ಧರ್ಮನಿಷ್ಠರ) ಪ್ರತಿಫಲವಾಗಿರುವುದು ಮತ್ತು ಅವರು ಮರಳುವ ತಾಣವಾಗಿರುವುದು.
25:16
لَهُمْ فِيهَا مَا يَشَاءُونَ خَالِدِينَ ۚ كَانَ عَلَىٰ رَبِّكَ وَعْدًا مَسْئُولًا ۞
ಅಲ್ಲಿ ಅವರು ಬಯಸಿದ್ದೆಲ್ಲವೂ ಅವರಿಗೆ ಲಭ್ಯವಿರುವುದು ಮತ್ತು ಅವರು ಅಲ್ಲಿ ಸದಾಕಾಲ ಇರುವರು. ಇದು ನಿಮ್ಮ ಒಡೆಯನ ಮೇಲೆ ಹೊಣೆಯಾಗಿರುವ ವಾಗ್ದಾನವಾಗಿದೆ - ಪ್ರಾರ್ಥಿಸಿ ಕೇಳಬೇಕಾದ ವಾಗ್ದಾನ.
25:17
وَيَوْمَ يَحْشُرُهُمْ وَمَا يَعْبُدُونَ مِنْ دُونِ اللَّهِ فَيَقُولُ أَأَنْتُمْ أَضْلَلْتُمْ عِبَادِي هَٰؤُلَاءِ أَمْ هُمْ ضَلُّوا السَّبِيلَ ۞
ಅಂದು ಅವನು ಅವರನ್ನೂ, ಅಲ್ಲಾಹನನ್ನು ಬಿಟ್ಟು ಅವರು ಪೂಜಿಸುತ್ತಿದ್ದ ಎಲ್ಲವುಗಳನ್ನೂ ಒಂದೆಡೆ ಸೇರಿಸಿ ‘‘ಈ ನನ್ನ ದಾಸರನ್ನು ನೀವು ದಾರಿಗೆಡಿಸಿದಿರಾ? ಅಥವಾ ಅವರು ಸ್ವತಃ ದಾರಿಗೆಟ್ಟಿದ್ದರೇ?’’ಎಂದು ಕೇಳುವನು.
25:18
قَالُوا سُبْحَانَكَ مَا كَانَ يَنْبَغِي لَنَا أَنْ نَتَّخِذَ مِنْ دُونِكَ مِنْ أَوْلِيَاءَ وَلَٰكِنْ مَتَّعْتَهُمْ وَآبَاءَهُمْ حَتَّىٰ نَسُوا الذِّكْرَ وَكَانُوا قَوْمًا بُورًا ۞
ಅವರು ಹೇಳುವರು; ನೀನು ಪಾವನನು. ನಿನ್ನ ಹೊರತು ಬೇರೆ ಯಾರನ್ನೂ ನಮ್ಮ ಪೋಷಕರಾಗಿ ಪರಿಗಣಿಸುವುದು ನಮಗೆ ಭೂಷಣವಾಗಿರಲಿಲ್ಲ. ಆದರೆ ನೀನು, ಅವರು ನಿನ್ನ ಪ್ರಸ್ತಾಪವನ್ನೇ ಮರೆತು ಬಿಡುವಷ್ಟು ಸಂಪನ್ನತೆಯನ್ನು ಅವರಿಗೂ ಅವರ ಪೂರ್ವಜರಿಗೂ ದಯಪಾಲಿಸಿದೆ. ಅವರಂತೂ ನಾಶವಾಗಲೇಬೇಕಾದ ಜನರಾಗಿದ್ದರು.
25:19
فَقَدْ كَذَّبُوكُمْ بِمَا تَقُولُونَ فَمَا تَسْتَطِيعُونَ صَرْفًا وَلَا نَصْرًا ۚ وَمَنْ يَظْلِمْ مِنْكُمْ نُذِقْهُ عَذَابًا كَبِيرًا ۞
ನೀವು ಹೇಳಿದ್ದನ್ನೆಲ್ಲಾ ಅವರು ಸುಳ್ಳೆಂದು ತಿರಸ್ಕರಿಸಿದರು. ಇದೀಗ ಅವರ ಮೇಲಿನ ಶಿಕ್ಷೆಯನ್ನು ನಿವಾರಿಸಲಿಕ್ಕಾಗಲಿ ಅವರಿಗೆ ನೆರವಾಗಲಿಕ್ಕಾಗಲಿ ನಿಮಗೆ ಸಾಧ್ಯವಿಲ್ಲ. ನಿಮ್ಮ ಪೈಕಿ ಅಕ್ರಮವೆಸಗಿದವನಿಗೆ ನಾವು ಭಾರೀ ಶಿಕ್ಷೆಯ ರುಚಿ ಉಣಿಸುವೆವು.
25:20
وَمَا أَرْسَلْنَا قَبْلَكَ مِنَ الْمُرْسَلِينَ إِلَّا إِنَّهُمْ لَيَأْكُلُونَ الطَّعَامَ وَيَمْشُونَ فِي الْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا ۞
(ದೂತರೇ,) ನಾವು ನಿಮಗಿಂತ ಮುಂಚೆ ಕೂಡಾ ಆಹಾರ ಸೇವಿಸುತ್ತಿದ್ದವರನ್ನು ಮತ್ತು ಪೇಟೆಗಳಲ್ಲಿ ನಡೆದಾಡುತ್ತಿದ್ದವರನ್ನೇ ದೂತರಾಗಿ ಕಳಿಸಿದ್ದೆವು. ಮತ್ತು ನಾವು ನಿಮ್ಮಲ್ಲಿ ಕೆಲವರನ್ನು ಮತ್ತೆ ಕೆಲವರ ಪಾಲಿಗೆ ಪರೀಕ್ಷೆಯಾಗಿಸಿದ್ದೆವು. ನೀವೀಗ ಸಹನೆ ತೋರುವಿರಾ? ನಿಮ್ಮ ಒಡೆಯನು ಎಲ್ಲವನ್ನೂ ನೋಡುವವನಾಗಿದ್ದಾನೆ.
25:21
۞ وَقَالَ الَّذِينَ لَا يَرْجُونَ لِقَاءَنَا لَوْلَا أُنْزِلَ عَلَيْنَا الْمَلَائِكَةُ أَوْ نَرَىٰ رَبَّنَا ۗ لَقَدِ اسْتَكْبَرُوا فِي أَنْفُسِهِمْ وَعَتَوْا عُتُوًّا كَبِيرًا ۞
ನಮ್ಮನ್ನು ಭೇಟಿಯಾಗುವ ನಿರೀಕ್ಷೆ ಇಲ್ಲದವರು, ‘‘ನಮ್ಮ ಬಳಿಗೆ ಮಲಕ್‌ಗಳನ್ನೇಕೆ ಕಳಿಸಲಾಗಿಲ್ಲ ಅಥವಾ ನಾವು ನಮ್ಮ ದೇವರನ್ನು ನೋಡುವಂತಿಲ್ಲವೇಕೆ’’ ಎಂದು ಕೇಳುತ್ತಾರೆ. ನಿಜವಾಗಿ ಅವರು ತಮ್ಮ ಮನದೊಳಗೆ ಅಹಂಕಾರ ಪಡುತ್ತಿದ್ದಾರೆ ಮತ್ತು ಭಾರೀ ದೊಡ್ಡ ವಿದ್ರೋಹವೆಸಗುತ್ತಿದ್ದಾರೆ.
25:22
يَوْمَ يَرَوْنَ الْمَلَائِكَةَ لَا بُشْرَىٰ يَوْمَئِذٍ لِلْمُجْرِمِينَ وَيَقُولُونَ حِجْرًا مَحْجُورًا ۞
ಅವರು ಮಲಕ್‌ಗಳನ್ನು ಕಾಣುವ ದಿನ, ಅಪರಾಧಿಗಳಿಗೆ ಯಾವುದೇ ಶುಭವಾರ್ತೆ ಇರದು. ಅಂದು ಅವರು ‘‘ಎಲ್ಲಾದರೂ ಆಶ್ರಯವಿದೆಯೇ?’’ ಎನ್ನುತ್ತಿರುವರು.
25:23
وَقَدِمْنَا إِلَىٰ مَا عَمِلُوا مِنْ عَمَلٍ فَجَعَلْنَاهُ هَبَاءً مَنْثُورًا ۞
ಅಂದು ನಾವು ಅವರು ಮಾಡಿರುವ ಕರ್ಮಗಳ ಕಡೆಗೆ ಗಮನ ಹರಿಸುವೆವು ಮತ್ತು ಅವುಗಳನ್ನೆಲ್ಲಾ ಧೂಳಿನಂತೆ ಹಾರಿಸಿ ಬಿಡುವೆವು.
25:24
أَصْحَابُ الْجَنَّةِ يَوْمَئِذٍ خَيْرٌ مُسْتَقَرًّا وَأَحْسَنُ مَقِيلًا ۞
ಅಂದು ಸ್ವರ್ಗದವರು ಬಹಳ ಶ್ರೇಷ್ಠ ನೆಲೆಯಲ್ಲಿರುವರು ಮತ್ತು ಅತ್ಯುತ್ತಮ ವಿಶ್ರಾಂತಿ ಧಾಮದಲ್ಲಿರುವರು.
25:25
وَيَوْمَ تَشَقَّقُ السَّمَاءُ بِالْغَمَامِ وَنُزِّلَ الْمَلَائِكَةُ تَنْزِيلًا ۞
ಅದು, ಮೋಡಗಳೊಂದಿಗೆ ಆಕಾಶವು ಬಿರಿದು ಹೋಗುವ ಮತ್ತು ಮಲಕ್‌ಗಳನ್ನು ಇಳಿಸಲಾಗುವ ದಿನವಾಗಿರುವುದು.
25:26
الْمُلْكُ يَوْمَئِذٍ الْحَقُّ لِلرَّحْمَٰنِ ۚ وَكَانَ يَوْمًا عَلَى الْكَافِرِينَ عَسِيرًا ۞
ಅಂದು ನೈಜ ಆಧಿಪತ್ಯವು ಆ ಪರಮ ದಯಾಮಯನಿಗೆ ಸೇರಿರುವುದು. ಆ ದಿನವು ಧಿಕ್ಕಾರಿಗಳ ಪಾಲಿಗೆ ತುಂಬಾ ಕಷ್ಟದ ದಿನವಾಗಿರುವುದು.
25:27
وَيَوْمَ يَعَضُّ الظَّالِمُ عَلَىٰ يَدَيْهِ يَقُولُ يَا لَيْتَنِي اتَّخَذْتُ مَعَ الرَّسُولِ سَبِيلًا ۞
ಅಂದು ಅಕ್ರಮಿಯು ತನ್ನ ಕೈಗಳನ್ನು ಕಚ್ಚಿಕೊಳ್ಳುತ್ತಾ ಹೇಳುವನು; ಅಯ್ಯೋ ನಾನು ದೇವದೂತರ ಜೊತೆ ಅವರ ಮಾರ್ಗದಲ್ಲಿ ನಡೆದಿದ್ದರೆ ಎಷ್ಟು ಚೆನ್ನಾಗಿತ್ತು!
25:28
يَا وَيْلَتَىٰ لَيْتَنِي لَمْ أَتَّخِذْ فُلَانًا خَلِيلًا ۞
ಅಯ್ಯೋ, ನಾನು ಆತನನ್ನು (ಶೈತಾನನನ್ನು) ಮಿತ್ರನಾಗಿಸದೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು.
25:29
لَقَدْ أَضَلَّنِي عَنِ الذِّكْرِ بَعْدَ إِذْ جَاءَنِي ۗ وَكَانَ الشَّيْطَانُ لِلْإِنْسَانِ خَذُولًا ۞
ಉಪದೇಶವು ನನ್ನ ಬಳಿಗೆ ಬಂದ ಬಳಿಕವೂ ನಾನು ಅದನ್ನು ಸ್ವೀಕರಿಸದಂತೆ ಅವನು ನನ್ನನ್ನು ದಾರಿಗೆಡಿಸಿದ್ದನು. ಶೈತಾನನು ನಿಜಕ್ಕೂ ಮಾನವನ ಪಾಲಿಗೆ ವಿಶ್ವಾಸ ದ್ರೋಹಿಯಾಗಿದ್ದಾನೆ.
25:30
وَقَالَ الرَّسُولُ يَا رَبِّ إِنَّ قَوْمِي اتَّخَذُوا هَٰذَا الْقُرْآنَ مَهْجُورًا ۞
ದೂತರು, ‘‘ನನ್ನೊಡೆಯಾ, ನನ್ನ ಜನಾಂಗವು ಈ ಕುರ್‌ಆನನ್ನು ತಿರಸ್ಕಾರ ಯೋಗ್ಯವಾಗಿ ಪರಿಗಣಿಸಿತ್ತು’’ ಎನ್ನುವರು.
25:31
وَكَذَٰلِكَ جَعَلْنَا لِكُلِّ نَبِيٍّ عَدُوًّا مِنَ الْمُجْرِمِينَ ۗ وَكَفَىٰ بِرَبِّكَ هَادِيًا وَنَصِيرًا ۞
ಈ ರೀತಿ ನಾವು ಕೆಲವು ಅಪರಾಧಿಗಳನ್ನು ಎಲ್ಲ ಪ್ರವಾದಿಗಳ ಶತ್ರುಗಳಾಗಿಸಿರುವೆವು. ಮಾರ್ಗದರ್ಶನಕ್ಕೆ ಮತ್ತು ನೆರವಿಗೆ ನಿಮ್ಮ ಒಡೆಯನೇ ಸಾಕು.
25:32
وَقَالَ الَّذِينَ كَفَرُوا لَوْلَا نُزِّلَ عَلَيْهِ الْقُرْآنُ جُمْلَةً وَاحِدَةً ۚ كَذَٰلِكَ لِنُثَبِّتَ بِهِ فُؤَادَكَ ۖ وَرَتَّلْنَاهُ تَرْتِيلًا ۞
ಧಿಕ್ಕಾರಿಗಳು, ‘‘ಅವನಿಗೆ ಕುರ್‌ಆನನ್ನು ಒಂದೇ ಬಾರಿಗೆ ಯಾಕೆ ಇಳಿಸಿ ಕೊಡಲಾಗಿಲ್ಲ?’’ ಎಂದು ಕೇಳುತ್ತಾರೆ. ಅದು ಹಾಗೆಯೇ. ಆ ಮೂಲಕ ನಿಮ್ಮ ಮನಸ್ಸನ್ನು ಸ್ಥಿರಗೊಳಿಸಲಿಕ್ಕಾಗಿ, ನಾವು ಇದನ್ನು ಸ್ವಲ್ಪ ಸ್ವಲ್ಪವಾಗಿ ಓದಿ ಕೇಳಿಸುತ್ತೇವೆ.
25:33
وَلَا يَأْتُونَكَ بِمَثَلٍ إِلَّا جِئْنَاكَ بِالْحَقِّ وَأَحْسَنَ تَفْسِيرًا ۞
ಅವರು ನಿಮ್ಮ ಬಳಿಗೆ ತರುವ ಪ್ರತಿಯೊಂದು ಆಕ್ಷೇಪದ ಕುರಿತೂ ನಾವು ನಿಮಗೆ ಸರಿಯಾದ ಉತ್ತರವನ್ನು ಮತ್ತು ಅತ್ಯುತ್ತಮ ವಿಶ್ಲೇಷಣೆಯನ್ನು ತಲುಪಿಸುತ್ತೇವೆ.
25:34
الَّذِينَ يُحْشَرُونَ عَلَىٰ وُجُوهِهِمْ إِلَىٰ جَهَنَّمَ أُولَٰئِكَ شَرٌّ مَكَانًا وَأَضَلُّ سَبِيلًا ۞
ಅವರ (ಧಿಕ್ಕಾರಿಗಳ) ಮುಖವನ್ನು ನೆಲಕ್ಕೊರಗಿಸಿ ನರಕದೆಡೆಗೆ ಎಳೆದೊಯ್ಯಲಾಗುವುದು. ಅವರೇ ಅತ್ಯಂತ ಕೆಟ್ಟ ಸ್ಥಾನದವರು ಮತ್ತು ನೇರ ಮಾರ್ಗದಿಂದ ತುಂಬಾ ದೂರ ಸಾಗಿದವರು.
25:35
وَلَقَدْ آتَيْنَا مُوسَى الْكِتَابَ وَجَعَلْنَا مَعَهُ أَخَاهُ هَارُونَ وَزِيرًا ۞
ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು ಮತ್ತು ಅವರ ಸಹೋದರ ಹಾರೂನರನ್ನು ಅವರ ಸಹಾಯಕರಾಗಿ ಅವರ ಜೊತೆ ಕಳಿಸಿದ್ದೆವು.
25:36
فَقُلْنَا اذْهَبَا إِلَى الْقَوْمِ الَّذِينَ كَذَّبُوا بِآيَاتِنَا فَدَمَّرْنَاهُمْ تَدْمِيرًا ۞
‘‘ನೀವಿಬ್ಬರೂ, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿರುವ ಜನಾಂಗದೆಡೆಗೆ ಹೋಗಿರಿ’’ ಎಂದು ನಾವು ಅವರಿಗೆ ಆದೇಶಿಸಿದೆವು. ಕೊನೆಗೆ ನಾವು, ಅವರನ್ನು (ಆ ಜನಾಂಗವನ್ನು) ಸಂಪೂರ್ಣ ನಾಶಮಾಡಿ ಬಿಟ್ಟೆವು.
25:37
وَقَوْمَ نُوحٍ لَمَّا كَذَّبُوا الرُّسُلَ أَغْرَقْنَاهُمْ وَجَعَلْنَاهُمْ لِلنَّاسِ آيَةً ۖ وَأَعْتَدْنَا لِلظَّالِمِينَ عَذَابًا أَلِيمًا ۞
(ಈ ಹಿಂದೆ) ನೂಹರ ಜನಾಂಗವು ದೇವದೂತರುಗಳನ್ನು ತಿರಸ್ಕರಿಸಿದಾಗ ನಾವು ಅವರನ್ನು ಮುಳುಗಿಸಿ ಬಿಟ್ಟೆವು ಮತ್ತು ಅವರನ್ನು ಜನರ ಪಾಲಿಗೆ ಪಾಠವಾಗಿಸಿದೆವು. ಮತ್ತು ನಾವು ಅಕ್ರಮಿಗಳಿಗಾಗಿ ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವೆವು.
25:38
وَعَادًا وَثَمُودَ وَأَصْحَابَ الرَّسِّ وَقُرُونًا بَيْنَ ذَٰلِكَ كَثِيرًا ۞
ಹಾಗೆಯೇ, ಆದ್ ಮತ್ತು ಸಮೂದ್ ಜನಾಂಗದವರು, ಬಾವಿಯವರು ಮತ್ತು ಅವರ ನಡುವಿನ ಹಲವಾರು ಪಂಗಡಗಳು -
25:39
وَكُلًّا ضَرَبْنَا لَهُ الْأَمْثَالَ ۖ وَكُلًّا تَبَّرْنَا تَتْبِيرًا ۞
- ಅವರಲ್ಲಿ ಪ್ರತಿಯೊಬ್ಬರಿಗೂ ನಾವು ಉದಾಹರಣೆಗಳೊಂದಿಗೆ ಉಪದೇಶಿಸಿದೆವು. ಕೊನೆಗೆ ಅವರೆಲ್ಲರನ್ನೂ ನಿರ್ನಾಮಗೊಳಿಸಿಬಿಟ್ಟೆವು.
25:40
وَلَقَدْ أَتَوْا عَلَى الْقَرْيَةِ الَّتِي أُمْطِرَتْ مَطَرَ السَّوْءِ ۚ أَفَلَمْ يَكُونُوا يَرَوْنَهَا ۚ بَلْ كَانُوا لَا يَرْجُونَ نُشُورًا ۞
ಅವರು (ಧಿಕ್ಕಾರಿಗಳು), ವಿನಾಶಕಾರಿ ಮಳೆಯನ್ನು ಸುರಿಸಲಾಗಿದ್ದ (ಲೂತ್‌ರ) ನಾಡಿನಿಂದ ಹಾದು ಹೋಗುತ್ತಾರೆ. ಆದರೂ ಅವರೇನು ಅದನ್ನು ಕಾಣಲಿಲ್ಲವೇ? ನಿಜವಾಗಿ, ಅವರು ಮತ್ತೆ ಜೀವಂತಗೊಳ್ಳುವುದನ್ನು ನಿರೀಕ್ಷಿಸುತ್ತಿಲ್ಲ.
25:41
وَإِذَا رَأَوْكَ إِنْ يَتَّخِذُونَكَ إِلَّا هُزُوًا أَهَٰذَا الَّذِي بَعَثَ اللَّهُ رَسُولًا ۞
(ದೂತರೇ,) ನಿಮ್ಮನ್ನು ಕಂಡಾಗಲೆಲ್ಲಾ ಅವರು, ‘‘ಅಲ್ಲಾಹನು ದೂತನಾಗಿ ಕಳಿಸಿರುವುದು ಈತನನ್ನೇ?’’ ಎಂದು ನಿಮ್ಮನ್ನು ಗೇಲಿಮಾಡುತ್ತಾರೆ.
25:42
إِنْ كَادَ لَيُضِلُّنَا عَنْ آلِهَتِنَا لَوْلَا أَنْ صَبَرْنَا عَلَيْهَا ۚ وَسَوْفَ يَعْلَمُونَ حِينَ يَرَوْنَ الْعَذَابَ مَنْ أَضَلُّ سَبِيلًا ۞
‘‘ನಾವು ಸ್ಥಿರವಾಗಿಲ್ಲದೆ ಇದ್ದಿದ್ದರೆ ಇವನಂತು ನಮ್ಮನ್ನು ನಮ್ಮ ದೇವರುಗಳಿಂದ ದೂರಗೊಳಿಸಿ ಬಿಡುತ್ತಿದ್ದನು’’ (ಎಂದು ಅವರು ಹೇಳುತ್ತಾರೆ). ಬಹುಬೇಗನೇ, ಅವರು ಶಿಕ್ಷೆಯನ್ನು ಕಾಣುವಾಗ, ಸರಿದಾರಿಯಿಂದ ತೀರಾ ದೂರ ಸಾಗಿಬಿಟ್ಟವರು ಯಾರೆಂಬುದು ಅವರಿಗೆ ತಿಳಿಯಲಿದೆ.
25:43
أَرَأَيْتَ مَنِ اتَّخَذَ إِلَٰهَهُ هَوَاهُ أَفَأَنْتَ تَكُونُ عَلَيْهِ وَكِيلًا ۞
ತನ್ನ ಚಿತ್ತವನ್ನೇ ತನ್ನ ದೇವರಾಗಿಸಿಕೊಂಡವನನ್ನು ನೀವು ಕಂಡಿರಾ? ನೀವೇನು ಅಂಥವನ ರಕ್ಷಕರಾಗುವಿರಾ?
25:44
أَمْ تَحْسَبُ أَنَّ أَكْثَرَهُمْ يَسْمَعُونَ أَوْ يَعْقِلُونَ ۚ إِنْ هُمْ إِلَّا كَالْأَنْعَامِ ۖ بَلْ هُمْ أَضَلُّ سَبِيلًا ۞
ನೀವೇನು, ಅವರು ಕೇಳಬಲ್ಲರು ಹಾಗೂ ಆಲೋಚಿಸಬಲ್ಲರು ಎಂದು ಕೊಂಡಿದ್ದೀರಾ? ಅವರಂತು ಜಾನುವಾರುಗಳಿಗೆ ಸಮಾನರಾಗಿದ್ದಾರೆ ಮಾತ್ರವಲ್ಲ, ಅವುಗಳಿಗಿಂತ ಹೆಚ್ಚು ದಾರಿಗೆಟ್ಟವರಾಗಿದ್ದಾರೆ.
25:45
أَلَمْ تَرَ إِلَىٰ رَبِّكَ كَيْفَ مَدَّ الظِّلَّ وَلَوْ شَاءَ لَجَعَلَهُ سَاكِنًا ثُمَّ جَعَلْنَا الشَّمْسَ عَلَيْهِ دَلِيلًا ۞
ನಿಮ್ಮ ಒಡೆಯನು ಯಾವ ರೀತಿ ನೆರಳನ್ನು ವಿಸ್ತರಿಸುತ್ತಾನೆಂಬುದನ್ನು ನೀವು ಕಂಡಿರಾ? ಅವನು ಬಯಸಿದ್ದರೆ ಅದನ್ನು ನಿಶ್ಚಲಗೊಳಿಸಬಹುದಿತ್ತು. ಮತ್ತು ನಾವು ಸೂರ್ಯನನ್ನು ಅದರ (ನೆರಳಿನ) ಮಾರ್ಗದರ್ಶಿಯಾಗಿಸಿದ್ದೇವೆ.
25:46
ثُمَّ قَبَضْنَاهُ إِلَيْنَا قَبْضًا يَسِيرًا ۞
ತರುವಾಯ ನಾವು ಅದನ್ನು ಕುಗ್ಗಿಸಿ ನಿಧಾನವಾಗಿ ನಮ್ಮ ಕಡೆಗೆ ಸೆಳೆದುಕೊಳ್ಳುತ್ತೇವೆ.
25:47
وَهُوَ الَّذِي جَعَلَ لَكُمُ اللَّيْلَ لِبَاسًا وَالنَّوْمَ سُبَاتًا وَجَعَلَ النَّهَارَ نُشُورًا ۞
ಅವನೇ, ನಿಮ್ಮ ಪಾಲಿಗೆ ರಾತ್ರಿಯನ್ನು ಉಡುಗೆಯಾಗಿಸಿದವನು, ನಿದ್ದೆಯನ್ನು ವಿರಾಮವಾಗಿಸಿದವನು ಮತ್ತು ಹಗಲನ್ನು ಎಚ್ಚರದ ಸಮಯವಾಗಿಸಿದವನು.
25:48
وَهُوَ الَّذِي أَرْسَلَ الرِّيَاحَ بُشْرًا بَيْنَ يَدَيْ رَحْمَتِهِ ۚ وَأَنْزَلْنَا مِنَ السَّمَاءِ مَاءً طَهُورًا ۞
ಅವನೇ, ತನ್ನ ಅನುಗ್ರಹಕ್ಕೆ ಮುನ್ನ ಶುಭವಾರ್ತೆ ನೀಡುವ ಗಾಳಿಯನ್ನು ಕಳಿಸುವವನು ಮತ್ತು ನಾವೇ ಆಕಾಶದಿಂದ ಶುದ್ಧವಾದ ನೀರನ್ನು ಇಳಿಸುತ್ತೇವೆ -
25:49
لِنُحْيِيَ بِهِ بَلْدَةً مَيْتًا وَنُسْقِيَهُ مِمَّا خَلَقْنَا أَنْعَامًا وَأَنَاسِيَّ كَثِيرًا ۞
- ನಿರ್ಜೀವವಾಗಿದ್ದ ನಾಡನ್ನು ಆ ಮೂಲಕ ಜೀವಂತಗೊಳಿಸಲಿಕ್ಕಾಗಿ ಮತ್ತು ನಾವು ಸೃಷ್ಟಿಸಿರುವ ಹಲವಾರು ಜಾನುವಾರುಗಳಿಗೆ ಮತ್ತು ಮಾನವರಿಗೆ ಕುಡಿಸಲಿಕ್ಕಾಗಿ.
25:50
وَلَقَدْ صَرَّفْنَاهُ بَيْنَهُمْ لِيَذَّكَّرُوا فَأَبَىٰ أَكْثَرُ النَّاسِ إِلَّا كُفُورًا ۞
ಅವರು ಪಾಠಕಲಿಯಲೆಂದು, ನಾವು ಅದನ್ನು ಅವರ ನಡುವೆ ಹಂಚಿ ಬಿಡುತ್ತೇವೆ. ಆದರೆ ಹೆಚ್ಚಿನ ಮಾನವರು ಕೃತಘ್ನರೇ ಆಗಿರುತ್ತಾರೆ.
25:51
وَلَوْ شِئْنَا لَبَعَثْنَا فِي كُلِّ قَرْيَةٍ نَذِيرًا ۞
ನಾವು ಬಯಸಿದ್ದರೆ ಪ್ರತಿಯೊಂದು ನಾಡಿಗೂ ಒಬ್ಬ ಎಚ್ಚರಿಸುವಾತನನ್ನು ಕಳಿಸುತ್ತಿದ್ದೆವು.
25:52
فَلَا تُطِعِ الْكَافِرِينَ وَجَاهِدْهُمْ بِهِ جِهَادًا كَبِيرًا ۞
ನೀವು ಧಿಕ್ಕಾರಿಗಳ ಆಜ್ಞೆಯನ್ನು ಪಾಲಿಸಬೇಡಿ ಮತ್ತು ಇದರ (ಈ ಕುರ್‌ಆನ್‌ನ) ಮೂಲಕ ಅವರ ವಿರುದ್ಧ ಹೋರಾಟ ನಡೆಸಿರಿ - ಮಹಾ ಹೋರಾಟ.
25:53
۞ وَهُوَ الَّذِي مَرَجَ الْبَحْرَيْنِ هَٰذَا عَذْبٌ فُرَاتٌ وَهَٰذَا مِلْحٌ أُجَاجٌ وَجَعَلَ بَيْنَهُمَا بَرْزَخًا وَحِجْرًا مَحْجُورًا ۞
ಅವನೇ ಎರಡು ಕಡಲುಗಳನ್ನು ಜೋಡಿಸಿದವನು. ಇದು, ಹಿತಕರವಾದ ಸಿಹಿ ನೀರು ಮತ್ತು ಇದು, ರುಚಿಗೆಟ್ಟ ಉಪ್ಪು ನೀರು. ಅವನು ಅವೆರಡರ ನಡುವೆ ತೆರೆಯನ್ನು ಹಾಗೂ ಬಹಳ ಬಲಿಷ್ಠವಾದ ಒಂದು ತಡೆಯನ್ನು ನಿರ್ಮಿಸಿರುವನು.
25:54
وَهُوَ الَّذِي خَلَقَ مِنَ الْمَاءِ بَشَرًا فَجَعَلَهُ نَسَبًا وَصِهْرًا ۗ وَكَانَ رَبُّكَ قَدِيرًا ۞
ಅವನೇ ನೀರಿನಿಂದ ಮಾನವನನ್ನು ಸೃಷ್ಟಿಸಿದವನು ಮತ್ತು ಅವನಿಗೆ ರಕ್ತ ಸಂಬಂಧವನ್ನೂ ವಿವಾಹ ಸಂಬಂಧವನ್ನೂ ಒದಗಿಸಿದವನು. ನಿಮ್ಮೊಡೆಯನು ಸಮರ್ಥನು.
25:55
وَيَعْبُدُونَ مِنْ دُونِ اللَّهِ مَا لَا يَنْفَعُهُمْ وَلَا يَضُرُّهُمْ ۗ وَكَانَ الْكَافِرُ عَلَىٰ رَبِّهِ ظَهِيرًا ۞
ಅವರು ಅಲ್ಲಾಹನನ್ನು ಬಿಟ್ಟು, ತಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದ ವಸ್ತುಗಳನ್ನು ಪೂಜಿಸುತ್ತಾರೆ. ಮತ್ತು ಧಿಕ್ಕಾರಿಯು ತನ್ನ ನೈಜ ಒಡೆಯನ ವಿರೋಧಿಯಾಗಿದ್ದಾನೆ.
25:56
وَمَا أَرْسَلْنَاكَ إِلَّا مُبَشِّرًا وَنَذِيرًا ۞
(ದೂತರೇ,) ನಾವು ನಿಮ್ಮನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿ ಕಳುಹಿಸಿರುವೆವು.
25:57
قُلْ مَا أَسْأَلُكُمْ عَلَيْهِ مِنْ أَجْرٍ إِلَّا مَنْ شَاءَ أَنْ يَتَّخِذَ إِلَىٰ رَبِّهِ سَبِيلًا ۞
ಹೇಳಿರಿ; ನಾನು ಇದಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಸ್ವೀಕರಿಸಲಿ.
25:58
وَتَوَكَّلْ عَلَى الْحَيِّ الَّذِي لَا يَمُوتُ وَسَبِّحْ بِحَمْدِهِ ۚ وَكَفَىٰ بِهِ بِذُنُوبِ عِبَادِهِ خَبِيرًا ۞
ಎಂದೂ ಸಾಯದ, ಸದಾ ಜೀವಂತವಿರುವವನಲ್ಲಿ ಭರವಸೆ ಇಡಿರಿ ಮತ್ತು ಅವನನ್ನು ಹೊಗಳುತ್ತಾ ಅವನ ಪಾವಿತ್ರ್ಯವನ್ನು ಜಪಿಸಿರಿ. ತನ್ನ ದಾಸರ ಪಾಪಗಳನ್ನು ಅರಿಯಲು ಅವನೇ ಸಾಕು.
25:59
الَّذِي خَلَقَ السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۚ الرَّحْمَٰنُ فَاسْأَلْ بِهِ خَبِيرًا ۞
ಅವನೇ, ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ಆರು ದಿನಗಳಲ್ಲಿ ಸೃಷ್ಟಿಸಿ ಆ ಬಳಿಕ ವಿಶ್ವ ಸಿಂಹಾಸನದಲ್ಲಿ ಸ್ಥಾಪಿತನಾದವನು. ಅವನು ಪರಮ ದಯಾಳು. ಅವನ ಕುರಿತು, ಬಲ್ಲವರನ್ನು ಕೇಳಿರಿ.
25:60
وَإِذَا قِيلَ لَهُمُ اسْجُدُوا لِلرَّحْمَٰنِ قَالُوا وَمَا الرَّحْمَٰنُ أَنَسْجُدُ لِمَا تَأْمُرُنَا وَزَادَهُمْ نُفُورًا ۩ ۞
ಆ ಪರಮ ದಯಾಳುವಿಗೆ ಸಾಷ್ಟಾಂಗವೆರಗಿರಿ ಎಂದು ಅವರೊಡನೆ ಹೇಳಿದಾಗ ಅವರು ಪರಮ ದಯಾಮಯನೆಂದರೆ ಏನು? ನಾವೇನು, ನೀನು ಆದೇಶಿಸಿದವರಿಗೆ ಸಾಷ್ಟಾಂಗವೆರಗಬೇಕೇ? ಎನ್ನುತ್ತಾರೆ. ಹೀಗೆ, ಇದು (ಈ ಕರೆಯು) ಅವರ ಜಿಗುಪ್ಸೆಯನ್ನಷ್ಟೇ ಹೆಚ್ಚಿಸಿತು.
25:61
تَبَارَكَ الَّذِي جَعَلَ فِي السَّمَاءِ بُرُوجًا وَجَعَلَ فِيهَا سِرَاجًا وَقَمَرًا مُنِيرًا ۞
ಆಕಾಶದಲ್ಲಿ ಭದ್ರಕೋಟೆಗಳನ್ನು (ನಕ್ಷತ್ರಗಳನ್ನು) ನಿರ್ಮಿಸಿದವನು ಮತ್ತು ಅದರಲ್ಲಿ ಸೂರ್ಯನನ್ನೂ, ಉಜ್ವಲ ಚಂದ್ರನನ್ನೂ ನಿರ್ಮಿಸಿದವನು ತುಂಬಾ ಸಮೃದ್ಧನು.
25:62
وَهُوَ الَّذِي جَعَلَ اللَّيْلَ وَالنَّهَارَ خِلْفَةً لِمَنْ أَرَادَ أَنْ يَذَّكَّرَ أَوْ أَرَادَ شُكُورًا ۞
ಇಷ್ಟ ಉಳ್ಳವನು ಉಪದೇಶ ಸ್ವೀಕರಿಸಲಿ ಅಥವಾ ಇಷ್ಟ ಉಳ್ಳವನು ಕೃತಜ್ಞನಾಗಲೆಂದು, ರಾತ್ರಿ ಹಗಲುಗಳನ್ನು ಪರಸ್ಪರರ ಹಿಂಬಾಲಕರಾಗಿಸಿದವನು, ಅವನೇ.
25:63
وَعِبَادُ الرَّحْمَٰنِ الَّذِينَ يَمْشُونَ عَلَى الْأَرْضِ هَوْنًا وَإِذَا خَاطَبَهُمُ الْجَاهِلُونَ قَالُوا سَلَامًا ۞
ಆ ಪರಮ ದಯಾಳುವಿನ (ನಿಷ್ಠ) ದಾಸರು ಭೂಮಿಯಲ್ಲಿ ವಿನಯದ ನಡಿಗೆ ನಡೆಯುತ್ತಾರೆ ಮತ್ತು ತಮ್ಮೊಡನೆ ಅಜ್ಞಾನಿಗಳು ಮಾತಿಗಿಳಿದರೆ ಅವರು,‘ಸಲಾಮ್’ ಎಂದಷ್ಟೇ ಹೇಳುತ್ತಾರೆ.
25:64
وَالَّذِينَ يَبِيتُونَ لِرَبِّهِمْ سُجَّدًا وَقِيَامًا ۞
ಅವರು ರಾತ್ರಿಯನ್ನು ತಮ್ಮ ಒಡೆಯನಿಗೆ ಸಾಷ್ಟಾಂಗವೆರಗುತ್ತಲೂ ನಿಲ್ಲುತ್ತಲೂ (ನಮಾಝ್‌ನಲ್ಲಿ) ಕಳೆಯುತ್ತಾರೆ.
25:65
وَالَّذِينَ يَقُولُونَ رَبَّنَا اصْرِفْ عَنَّا عَذَابَ جَهَنَّمَ ۖ إِنَّ عَذَابَهَا كَانَ غَرَامًا ۞
ಅವರು ಹೇಳುತ್ತಾರೆ; ನಮ್ಮೊಡೆಯಾ, ನರಕದ ಶಿಕ್ಷೆಯನ್ನು ನಮ್ಮಿಂದ ದೂರವಿಡು. ಖಂಡಿತವಾಗಿಯೂ ಅದು ಬಿಡುಗಡೆ ಇಲ್ಲದ ಶಿಕ್ಷೆಯಾಗಿದೆ.
25:66
إِنَّهَا سَاءَتْ مُسْتَقَرًّا وَمُقَامًا ۞
ಅದು ಖಂಡಿತ ತೀರಾ ಕೆಟ್ಟ ನೆಲೆಯಾಗಿದೆ ಹಾಗೂ ತೀರಾ ಕೆಟ್ಟ ಸ್ಥಳವಾಗಿದೆ.
25:67
وَالَّذِينَ إِذَا أَنْفَقُوا لَمْ يُسْرِفُوا وَلَمْ يَقْتُرُوا وَكَانَ بَيْنَ ذَٰلِكَ قَوَامًا ۞
ಅವರು ಖರ್ಚು ಮಾಡುವಾಗ ದುಂದು ವೆಚ್ಚವನ್ನು ಮಾಡುವುದಿಲ್ಲ, ಜಿಪುಣತೆಯನ್ನೂ ತೋರುವುದಿಲ್ಲ. ಅವೆರಡರ ನಡುವಣ ಮಾರ್ಗವನ್ನು ಪಾಲಿಸುತ್ತಾರೆ.
25:68
وَالَّذِينَ لَا يَدْعُونَ مَعَ اللَّهِ إِلَٰهًا آخَرَ وَلَا يَقْتُلُونَ النَّفْسَ الَّتِي حَرَّمَ اللَّهُ إِلَّا بِالْحَقِّ وَلَا يَزْنُونَ ۚ وَمَنْ يَفْعَلْ ذَٰلِكَ يَلْقَ أَثَامًا ۞
ಅವರು ಅಲ್ಲಾಹನ ಜೊತೆ ಬೇರೆ ಯಾವ ದೇವರನ್ನೂ ಪ್ರಾರ್ಥಿಸುವುದಿಲ್ಲ. ಅಲ್ಲಾಹನು ನಿಷೇಧಿಸಿರುವ ಯಾವುದೇ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಿಲ್ಲ ಮತ್ತು ಅವರು ವ್ಯಭಿಚಾರ ಮಾಡುವುದಿಲ್ಲ. ಈ ಕೃತ್ಯಗಳನ್ನು ಮಾಡಿದವನು ಶಿಕ್ಷೆಯನ್ನು ಅನುಭವಿಸುವನು.
25:69
يُضَاعَفْ لَهُ الْعَذَابُ يَوْمَ الْقِيَامَةِ وَيَخْلُدْ فِيهِ مُهَانًا ۞
ಪುನರುತ್ಥಾನ ದಿನ ಅವನಿಗೆ ದುಪ್ಪಟ್ಟು ಶಿಕ್ಷೆ ವಿಧಿಸಲಾಗುವುದು ಮತ್ತು ಅವನು ಅಪಮಾನಿತನಾಗಿ ಸದಾ ಅದರಲ್ಲೇ ಬಿದ್ದಿರುವನು.
25:70
إِلَّا مَنْ تَابَ وَآمَنَ وَعَمِلَ عَمَلًا صَالِحًا فَأُولَٰئِكَ يُبَدِّلُ اللَّهُ سَيِّئَاتِهِمْ حَسَنَاتٍ ۗ وَكَانَ اللَّهُ غَفُورًا رَحِيمًا ۞
ಪಶ್ಚಾತ್ತಾಪ ಪಟ್ಟು, ಸತ್ಕರ್ಮ ಮಾಡಿದವರ ಹೊರತು. ಅಲ್ಲಾಹನು ಅವರ ಪಾಪ ಕೃತ್ಯಗಳನ್ನೆಲ್ಲಾ ಸತ್ಕರ್ಮಗಳಾಗಿ ಮಾರ್ಪಡಿಸುವನು. ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
25:71
وَمَنْ تَابَ وَعَمِلَ صَالِحًا فَإِنَّهُ يَتُوبُ إِلَى اللَّهِ مَتَابًا ۞
ಪಶ್ಚಾತ್ತಾಪ ಪಟ್ಟು ಸತ್ಕರ್ಮ ಮಾಡುವವನು ನಿಜವಾಗಿ ಅಲ್ಲಾಹನೆಡೆಗೆ ಮರಳಬೇಕಾದ ರೀತಿಯಲ್ಲಿ ಮರಳುತ್ತಾನೆ.
25:72
وَالَّذِينَ لَا يَشْهَدُونَ الزُّورَ وَإِذَا مَرُّوا بِاللَّغْوِ مَرُّوا كِرَامًا ۞
ಅವರು (ಅಲ್ಲಾಹನ ನಿಷ್ಠ ದಾಸರು) ಎಂದೂ ಸುಳ್ಳಿಗೆ ಸಾಕ್ಷಿಗಳಾಗುವುದಿಲ್ಲ ಮತ್ತು ಸಲ್ಲದ ಕಾರ್ಯಗಳ ಬಳಿಯಿಂದ ಹಾದು ಹೋಗ ಬೇಕಾದಾಗ ಅವರು ಸಭ್ಯ ರೀತಿಯಲ್ಲಿ ಹಾದು ಹೋಗುತ್ತಾರೆ.
25:73
وَالَّذِينَ إِذَا ذُكِّرُوا بِآيَاتِ رَبِّهِمْ لَمْ يَخِرُّوا عَلَيْهَا صُمًّا وَعُمْيَانًا ۞
ತಮ್ಮ ಒಡೆಯನ ವಚನಗಳ ಮೂಲಕ ಅವರಿಗೆ ಉಪದೇಶಿಸಲಾದಾಗ ಅವರು ಅವುಗಳ ಪಾಲಿಗೆ ಕಿವುಡರೂ ಕುರುಡರೂ ಆಗಿ ಬಿಡುವುದಿಲ್ಲ.
25:74
وَالَّذِينَ يَقُولُونَ رَبَّنَا هَبْ لَنَا مِنْ أَزْوَاجِنَا وَذُرِّيَّاتِنَا قُرَّةَ أَعْيُنٍ وَاجْعَلْنَا لِلْمُتَّقِينَ إِمَامًا ۞
ನಮ್ಮೊಡೆಯಾ! ನಮ್ಮ ಮಡದಿಯರು ಮತ್ತು ನಮ್ಮ ಮಕ್ಕಳ ಮೂಲಕ ನಮ್ಮ ಕಣ್ಣುಗಳಿಗೆ ನೆಮ್ಮದಿಯನ್ನು (ಮನಸ್ಸಿಗೆ ಶಾಂತಿಯನ್ನು) ಒದಗಿಸು ಮತ್ತು ನಮ್ಮನ್ನು ಧರ್ಮ ನಿಷ್ಠರ ನೇತಾರರಾಗಿಸು, ಎಂದು ಅವರು ಪ್ರಾರ್ಥಿಸುತ್ತಿರುತ್ತಾರೆ.
25:75
أُولَٰئِكَ يُجْزَوْنَ الْغُرْفَةَ بِمَا صَبَرُوا وَيُلَقَّوْنَ فِيهَا تَحِيَّةً وَسَلَامًا ۞
ಅವರ ಸಹನೆಯ ಫಲವಾಗಿ ಅವರಿಗೆ (ಸ್ವರ್ಗದಲ್ಲಿ), ಉನ್ನತವಾದ ನಿವಾಸಗಳನ್ನು ನೀಡಲಾಗುವುದು. ಶುಭ ಹಾಗೂ ಶಾಂತಿಯನ್ನು ಹಾರೈಸುತ್ತಾ ಅವರನ್ನು ಸ್ವಾಗತಿಸಲಾಗುವುದು.
25:76
خَالِدِينَ فِيهَا ۚ حَسُنَتْ مُسْتَقَرًّا وَمُقَامًا ۞
ಅವರು ಸದಾಕಾಲ ಅಲ್ಲೇ ಇರುವರು. ಅದು, ಬಹಳ ಸುಂದರ ನಿವಾಸ ಮತ್ತು ಬಹಳ ಉತ್ತಮ ನೆಲೆಯಾಗಿರುವುದು.
25:77
قُلْ مَا يَعْبَأُ بِكُمْ رَبِّي لَوْلَا دُعَاؤُكُمْ ۖ فَقَدْ كَذَّبْتُمْ فَسَوْفَ يَكُونُ لِزَامًا ۞
ಹೇಳಿರಿ; ನೀವು ನನ್ನ ಒಡೆಯನನ್ನು ಪ್ರಾರ್ಥಿಸದಿದ್ದರೆ ಅವನೇನೂ ನಿಮ್ಮನ್ನು ಲೆಕ್ಕಿಸುವವನಲ್ಲ. ನೀವು (ಸತ್ಯವನ್ನು) ತಿರಸ್ಕರಿಸಿರುವಿರಿ. ಅದರ ಶಿಕ್ಷೆ ನಿಮಗೆ ಸಿಗುವುದು ಖಚಿತ.