As-Sajdah (The prostration)
32. ಅಸ್ಸಜ್ದಃ(ಸಾಷ್ಟಾಂಗ ವಂದನೆ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
32:1
الم ۞
ಅಲಿಫ್ ಲಾಮ್ ಮ್ಮೀಮ್.
32:2
تَنْزِيلُ الْكِتَابِ لَا رَيْبَ فِيهِ مِنْ رَبِّ الْعَالَمِينَ ۞
ಇದು ಎಲ್ಲ ಲೋಕಗಳ ಒಡೆಯನ ಕಡೆಯಿಂದ ಇಳಿಸಲಾಗಿರುವ ಗ್ರಂಥ. ಇದರಲ್ಲಿ ಸಂದೇಹವಿಲ್ಲ.
32:3
أَمْ يَقُولُونَ افْتَرَاهُ ۚ بَلْ هُوَ الْحَقُّ مِنْ رَبِّكَ لِتُنْذِرَ قَوْمًا مَا أَتَاهُمْ مِنْ نَذِيرٍ مِنْ قَبْلِكَ لَعَلَّهُمْ يَهْتَدُونَ ۞
(ದೂತರೇ,) ಅವರೇನು, ಈತನೇ ಇದನ್ನು ರಚಿಸಿಕೊಂಡಿದ್ದಾನೆ ಎನ್ನುತ್ತಾರೆಯೇ? ನಿಜವಾಗಿ ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯವಾಗಿದೆ. ನಿಮಗಿಂತ ಮೊದಲು, ತಮ್ಮ ಬಳಿಗೆ ಎಚ್ಚರಿಸುವವರು ಬಂದಿಲ್ಲದ ಜನಾಂಗವೊಂದನ್ನು ನೀವು ಎಚ್ಚರಿಸಬೇಕೆಂದು. ಮತ್ತು ಅವರು (ಈ ಮೂಲಕ) ಸರಿದಾರಿಗೆ ಬರಬಹುದೆಂದು (ಇದನ್ನು ಕಳಿಸಲಾಗಿದೆ).
32:4
اللَّهُ الَّذِي خَلَقَ السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۖ مَا لَكُمْ مِنْ دُونِهِ مِنْ وَلِيٍّ وَلَا شَفِيعٍ ۚ أَفَلَا تَتَذَكَّرُونَ ۞
ಆಕಾಶಗಳನ್ನು, ಭೂಮಿಯನ್ನು ಹಾಗೂ ಅವುಗಳ ನಡುವೆ ಇರುವ ಎಲ್ಲವನ್ನೂ ಅಲ್ಲಾಹನೇ ಆರು ದಿನಗಳಲ್ಲಿ ಸೃಷ್ಟಿಸಿದನು. ಆ ಬಳಿಕ ವಿಶ್ವಸಿಂಹಾಸನವನ್ನು ಆವರಿಸಿದನು. ಅವನ ಹೊರತು ನಿಮಗೆ ರಕ್ಷಕರಾಗಲಿ ಶಿಫಾರಸುದಾರರಾಗಲಿ ಯಾರೂ ಇಲ್ಲ. ನೀವೇನು ಪಾಠ ಕಲಿಯುವುದಿಲ್ಲವೇ?
32:5
يُدَبِّرُ الْأَمْرَ مِنَ السَّمَاءِ إِلَى الْأَرْضِ ثُمَّ يَعْرُجُ إِلَيْهِ فِي يَوْمٍ كَانَ مِقْدَارُهُ أَلْفَ سَنَةٍ مِمَّا تَعُدُّونَ ۞
ಆಕಾಶದಿಂದ ಭೂಮಿಯವರೆಗಿನ ಎಲ್ಲ ವ್ಯವಹಾರಗಳನ್ನೂ ಅವನೇ ಯೋಜಿಸುತ್ತಾನೆ. ಕೊನೆಗೆ, ನಿಮ್ಮ ಲೆಕ್ಕಾಚಾರ ಪ್ರಕಾರ ಒಂದು ಸಾವಿರ ವರ್ಷಗಳಷ್ಟು ದೀರ್ಘವಾಗಿರುವ ಒಂದು ದಿನ ಇದೆಲ್ಲವೂ ಅವನೆಡೆಗೆ ಮರಳಲಿದೆ.
32:6
ذَٰلِكَ عَالِمُ الْغَيْبِ وَالشَّهَادَةِ الْعَزِيزُ الرَّحِيمُ ۞
ಅವನು ಗುಪ್ತ ಹಾಗೂ ವ್ಯಕ್ತವಾಗಿರುವ ಎಲ್ಲವನ್ನೂ ಅರಿತಿರುವ, ಪ್ರಚಂಡನೂ ಕರುಣಾಮಯಿಯೂ ಆಗಿದ್ದಾನೆ.
32:7
الَّذِي أَحْسَنَ كُلَّ شَيْءٍ خَلَقَهُ ۖ وَبَدَأَ خَلْقَ الْإِنْسَانِ مِنْ طِينٍ ۞
ಅವನು ಎಲ್ಲ ವಸ್ತುಗಳನ್ನೂ ಸುಂದರವಾಗಿ ಸೃಷ್ಟಿಸಿರುವನು ಮತ್ತು ಅವನು ಮಾನವನ ಸೃಷ್ಟಿಯನ್ನು ಮಣ್ಣಿನಿಂದ ಆರಂಭಿಸಿದನು.
32:8
ثُمَّ جَعَلَ نَسْلَهُ مِنْ سُلَالَةٍ مِنْ مَاءٍ مَهِينٍ ۞
ಆ ಬಳಿಕ ಅವನು ಆತನ (ಮಾನವನ) ಸಂತತಿಯನ್ನು ತುಚ್ಛವಾದ ನೀರಿನ ಸಾರದಿಂದ ಸೃಷ್ಟಿಸಿದನು.
32:9
ثُمَّ سَوَّاهُ وَنَفَخَ فِيهِ مِنْ رُوحِهِ ۖ وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۚ قَلِيلًا مَا تَشْكُرُونَ ۞
ಆ ಬಳಿಕ ಅವನು ಆತನಿಗೆ ಆಕಾರ ನೀಡಿದನು. ಮತ್ತು ಅವನೊಳಗೆ ತನ್ನ ಆತ್ಮವನ್ನು ಊದಿದನು ಮತ್ತು ನಿಮಗೆ ಕಿವಿಗಳನ್ನೂ ಕಣ್ಣುಗಳನ್ನೂ ಮನಸ್ಸುಗಳನ್ನೂ ನೀಡಿದನು. (ಇಷ್ಟಾಗಿಯೂ) ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ.
32:10
وَقَالُوا أَإِذَا ضَلَلْنَا فِي الْأَرْضِ أَإِنَّا لَفِي خَلْقٍ جَدِيدٍ ۚ بَلْ هُمْ بِلِقَاءِ رَبِّهِمْ كَافِرُونَ ۞
‘‘ನಾವು ಭೂಮಿಯೊಳಗೆ ಕಣ್ಮರೆಯಾಗಿ ಹೋದ ಬಳಿಕ ನಮ್ಮನ್ನೇನು ಹೊಸದಾಗಿ ಸೃಷ್ಟಿಸಲಾಗುವುದೇ?’’ ಎಂದು ಅವರು ಕೇಳುತ್ತಾರೆ. ನಿಜವಾಗಿ ಅವರು, ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿದೆ ಎಂಬುದನ್ನು ನಿರಾಕರಿಸುವವರಾಗಿದ್ದಾರೆ.
32:11
۞ قُلْ يَتَوَفَّاكُمْ مَلَكُ الْمَوْتِ الَّذِي وُكِّلَ بِكُمْ ثُمَّ إِلَىٰ رَبِّكُمْ تُرْجَعُونَ ۞
ಹೇಳಿರಿ; ನಿಮ್ಮನ್ನು ಯಾವ ಮರಣ ದೂತನ ವಶಕ್ಕೆ ಒಪ್ಪಿಸಲಾಗಿದೆಯೋ ಅವನು ನಿಮ್ಮನ್ನು ಸಾಯಿಸುವನು. ಆ ಬಳಿಕ ನಿಮ್ಮನ್ನು ನಿಮ್ಮ ಒಡೆಯನ ಬಳಿಗೆ ಮರಳಿಸಲಾಗುವುದು.
32:12
وَلَوْ تَرَىٰ إِذِ الْمُجْرِمُونَ نَاكِسُو رُءُوسِهِمْ عِنْدَ رَبِّهِمْ رَبَّنَا أَبْصَرْنَا وَسَمِعْنَا فَارْجِعْنَا نَعْمَلْ صَالِحًا إِنَّا مُوقِنُونَ ۞
ಅಪರಾಧಿಗಳು ತಮ್ಮ ಒಡೆಯನ ಮುಂದೆ ತಲೆಬಾಗಿ, ‘‘ನಮ್ಮೊಡೆಯಾ ! ನಾವು ಎಲ್ಲವನ್ನೂ ನೋಡಿಕೊಂಡೆವು ಮತ್ತು ಕೇಳಿಕೊಂಡೆವು. ನಮ್ಮನ್ನೀಗ (ಭೂಮಿಗೆ) ಮರಳಿಸು. ನಾವು ಸತ್ಕರ್ಮಗಳನ್ನು ಮಾಡುವೆವು. ನಾವೀಗ ದೃಢನಂಬಿಕೆ ಉಳ್ಳವರಾಗಿದ್ದೇವೆ’’ ಎಂದು ಹೇಳುವುದನ್ನು ನೀವು ನೋಡುವಂತಿದ್ದರೆ ಚೆನ್ನಾಗಿತ್ತು.
32:13
وَلَوْ شِئْنَا لَآتَيْنَا كُلَّ نَفْسٍ هُدَاهَا وَلَٰكِنْ حَقَّ الْقَوْلُ مِنِّي لَأَمْلَأَنَّ جَهَنَّمَ مِنَ الْجِنَّةِ وَالنَّاسِ أَجْمَعِينَ ۞
ನಾವು ಬಯಸಿದ್ದರೆ ಪ್ರತಿಯೊಬ್ಬರಿಗೂ ನೇರಮಾರ್ಗವನ್ನು ಅನುಸರಿಸುವ ಭಾಗ್ಯವನ್ನು ನೀಡಿ ಬಿಡುತ್ತಿದ್ದೆವು. ಆದರೆ, ‘‘ಖಂಡಿತ ನಾನು ನರಕವನ್ನು, ಮಾನವರು ಹಾಗೂ ಜಿನ್ನ್‌ಗಳಿಂದ ತುಂಬಿ ಬಿಡಲಿದ್ದೇನೆ’’ ಎಂಬ ನನ್ನ ಮಾತು ನಿಜವಾಗಿ ಬಿಟ್ಟಿದೆ.
32:14
فَذُوقُوا بِمَا نَسِيتُمْ لِقَاءَ يَوْمِكُمْ هَٰذَا إِنَّا نَسِينَاكُمْ ۖ وَذُوقُوا عَذَابَ الْخُلْدِ بِمَا كُنْتُمْ تَعْمَلُونَ ۞
ನೀವು ಈ ದಿನದ ಭೇಟಿಯನ್ನು ಮರೆತು ಬಿಟ್ಟಿದ್ದರ ಫಲವನ್ನು ಇದೀಗ ಅನುಭವಿಸಿರಿ. ನಾವು ನಿಮ್ಮನ್ನು ಖಂಡಿತ ಮರೆತಿರುವೆವು. ನೀವು ಮಾಡುತ್ತಿದ್ದ ಕರ್ಮಗಳ ಫಲವಾಗಿ, ಶಾಶ್ವತವಾದ ಶಿಕ್ಷೆಯನ್ನು ಅನುಭವಿಸಿರಿ.
32:15
إِنَّمَا يُؤْمِنُ بِآيَاتِنَا الَّذِينَ إِذَا ذُكِّرُوا بِهَا خَرُّوا سُجَّدًا وَسَبَّحُوا بِحَمْدِ رَبِّهِمْ وَهُمْ لَا يَسْتَكْبِرُونَ ۩ ۞
ನಮ್ಮ ವಚನಗಳನ್ನು ನಂಬುವವರು ಎಂಥವರೆಂದರೆ, ಅವರಿಗೆ ಅವುಗಳನ್ನು ನೆನಪಿಸಿದೊಡನೆ ಅವರು ಸಾಷ್ಟಾಂಗವೆರಗಿ ಬಿಡುತ್ತಾರೆ ಹಾಗೂ ತಮ್ಮ ಒಡೆಯನನ್ನು ಹೊಗಳುತ್ತಾ ಅವನ ಪಾವಿತ್ರ್ಯವನ್ನು ಕೊಂಡಾಡುತ್ತಾರೆ ಮತ್ತು ಅವರು ಅಹಂಕಾರ ತೋರುವುದಿಲ್ಲ.
32:16
تَتَجَافَىٰ جُنُوبُهُمْ عَنِ الْمَضَاجِعِ يَدْعُونَ رَبَّهُمْ خَوْفًا وَطَمَعًا وَمِمَّا رَزَقْنَاهُمْ يُنْفِقُونَ ۞
ಅವರ ಬೆನ್ನುಗಳು ಅವರ ಚಾಪೆಗಳಿಂದ ದೂರವಿರುತ್ತವೆ. ಅವರು ಭಯ ಹಾಗೂ ನಿರೀಕ್ಷೆಯೊಂದಿಗೆ ತಮ್ಮ ಒಡೆಯನನ್ನು ಪ್ರಾರ್ಥಿಸುತ್ತಲಿರುತ್ತಾರೆ ಮತ್ತು ನಾವು ಅವರಿಗೆ ಏನನ್ನು ನೀಡಿರುವೆವೋ ಅದರಿಂದ ಅವರು ಖರ್ಚು ಮಾಡುತ್ತಾರೆ.
32:17
فَلَا تَعْلَمُ نَفْسٌ مَا أُخْفِيَ لَهُمْ مِنْ قُرَّةِ أَعْيُنٍ جَزَاءً بِمَا كَانُوا يَعْمَلُونَ ۞
ಅವರ ಕರ್ಮಗಳ ಫಲವಾಗಿ, ಅವರ ಕಣ್ಣುಗಳಿಗೆ ನೆಮ್ಮದಿ (ಮನಸ್ಸಿಗೆ ಶಾಂತಿ) ಒದಗಿಸಲು, ಅವರಿಗಾಗಿ ಏನನ್ನು ಗುಪ್ತವಾಗಿ ಸಿದ್ಧಗೊಳಿಸಿಡಲಾಗಿದೆ ಎಂಬುದು, ಯಾರಿಗೂ ತಿಳಿಯದು.
32:18
أَفَمَنْ كَانَ مُؤْمِنًا كَمَنْ كَانَ فَاسِقًا ۚ لَا يَسْتَوُونَ ۞
ವಿಶ್ವಾಸಿಯಾಗಿರುವವನು ಅವಿಧೇಯನಂತಾಗಲು ಸಾಧ್ಯವೇ? ಅವರು ಸಮಾನರಲ್ಲ.
32:19
أَمَّا الَّذِينَ آمَنُوا وَعَمِلُوا الصَّالِحَاتِ فَلَهُمْ جَنَّاتُ الْمَأْوَىٰ نُزُلًا بِمَا كَانُوا يَعْمَلُونَ ۞
ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವರಿಗಾಗಿ, ಅವರು ಮಾಡುತ್ತಿದ್ದ ಕರ್ಮಗಳಿಗೆ ಪ್ರತಿಫಲವಾಗಿ, ಶಾಶ್ವತವಾದ ಭವ್ಯತೋಟಗಳಲ್ಲಿರುವ ನಿವಾಸಗಳಿವೆ.
32:20
وَأَمَّا الَّذِينَ فَسَقُوا فَمَأْوَاهُمُ النَّارُ ۖ كُلَّمَا أَرَادُوا أَنْ يَخْرُجُوا مِنْهَا أُعِيدُوا فِيهَا وَقِيلَ لَهُمْ ذُوقُوا عَذَابَ النَّارِ الَّذِي كُنْتُمْ بِهِ تُكَذِّبُونَ ۞
ಇನ್ನು ಅವಿಧೇಯರಾಗಿದ್ದವರ ಪಾಲಿಗೆ ನರಕವೇ ನೆಲೆಯಾಗಿರುವುದು. ಅವರು ಅದರಿಂದ ಹೊರಹೋಗಲು ಬಯಸಿದಾಗಲೆಲ್ಲಾ ಅವರನ್ನು ಮತ್ತೆ ಅದರೊಳಕ್ಕೆ ಮರಳಿಸಿ ಬಿಡಲಾಗುವುದು ಮತ್ತು ಅವರೊಡನೆ, ‘‘ನೀವು ನಿರಾಕರಿಸುತ್ತಿದ್ದ ನರಕದ ಶಿಕ್ಷೆಯನ್ನು ಸವಿಯಿರಿ’’ ಎನ್ನಲಾಗುವುದು.
32:21
وَلَنُذِيقَنَّهُمْ مِنَ الْعَذَابِ الْأَدْنَىٰ دُونَ الْعَذَابِ الْأَكْبَرِ لَعَلَّهُمْ يَرْجِعُونَ ۞
ನಾವು (ಪರಲೋಕದ) ದೊಡ್ಡ ಶಿಕ್ಷೆಗೆ ಮುನ್ನ ಅವರಿಗೆ (ಇಹಲೋಕದಲ್ಲಿ) ಸಣ್ಣ ಶಿಕ್ಷೆಗಳ ಸವಿ ಕಾಣಿಸುವೆವು - ಅವರು (ಸರಿದಾರಿಗೆ) ಮರಳಬಹುದೆಂದು.
32:22
وَمَنْ أَظْلَمُ مِمَّنْ ذُكِّرَ بِآيَاتِ رَبِّهِ ثُمَّ أَعْرَضَ عَنْهَا ۚ إِنَّا مِنَ الْمُجْرِمِينَ مُنْتَقِمُونَ ۞
ತನ್ನ ಒಡೆಯನ ವಚನಗಳ ಮೂಲಕ ಉಪದೇಶಿಸಲ್ಪಟ್ಟ ಬಳಿಕವೂ ಅದನ್ನು ಕಡೆಗಣಿಸಿ ಬಿಟ್ಟವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಖಂಡಿತವಾಗಿಯೂ ನಾವು ಅಪರಾಧಿಗಳ ವಿರುದ್ಧ ಪ್ರತೀಕಾರ ತೀರಿಸುವೆವು.
32:23
وَلَقَدْ آتَيْنَا مُوسَى الْكِتَابَ فَلَا تَكُنْ فِي مِرْيَةٍ مِنْ لِقَائِهِ ۖ وَجَعَلْنَاهُ هُدًى لِبَنِي إِسْرَائِيلَ ۞
ನಾವು (ಈ ಹಿಂದೆ) ಮೂಸಾರಿಗೆ, ಗ್ರಂಥವನ್ನು ನೀಡಿದ್ದೆವು. ಅವನನ್ನು (ಅಲ್ಲಾಹನನ್ನು) ಭೇಟಿಯಾಗಲಿರುವ ಕುರಿತು ನೀವು ಸಂಶಯ ತಾಳಬೇಡಿ (ಎಂದು ಅದರಲ್ಲಿ ಉಪದೇಶಿಸಲಾಗಿತ್ತು). ನಾವು ಅದನ್ನು (ಆ ಗ್ರಂಥವನ್ನು) ಬನೀ ಇಸ್ರಾಈಲರ ಸಂತತಿಗಳಿಗೆ ಮಾರ್ಗದರ್ಶಿಯಾಗಿಸಿದ್ದೆವು.
32:24
وَجَعَلْنَا مِنْهُمْ أَئِمَّةً يَهْدُونَ بِأَمْرِنَا لَمَّا صَبَرُوا ۖ وَكَانُوا بِآيَاتِنَا يُوقِنُونَ ۞
ಅವರು ಸಹನಶೀಲರಾಗಿದ್ದಾಗ, ನಾವು ಅವರಲ್ಲಿ ಕೆಲವರನ್ನು ನಾಯಕರಾಗಿಸಿದ್ದೆವು. ಅವರು ನಮ್ಮ ಆದೇಶದಂತೆ ಜನರಿಗೆ ಮಾರ್ಗದರ್ಶಿಗಳಾಗಿದ್ದರು ಮತ್ತು ನಮ್ಮ ವಚನಗಳಲ್ಲಿ ಅಚಲ ವಿಶ್ವಾಸ ಉಳ್ಳವರಾಗಿದ್ದರು.
32:25
إِنَّ رَبَّكَ هُوَ يَفْصِلُ بَيْنَهُمْ يَوْمَ الْقِيَامَةِ فِيمَا كَانُوا فِيهِ يَخْتَلِفُونَ ۞
ನಿಮ್ಮ ಒಡೆಯನು, ಅವರು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳನ್ನು ಪುನರುತ್ಥಾನ ದಿನ ಖಂಡಿತ ಇತ್ಯರ್ಥಗೊಳಿಸುವನು.
32:26
أَوَلَمْ يَهْدِ لَهُمْ كَمْ أَهْلَكْنَا مِنْ قَبْلِهِمْ مِنَ الْقُرُونِ يَمْشُونَ فِي مَسَاكِنِهِمْ ۚ إِنَّ فِي ذَٰلِكَ لَآيَاتٍ ۖ أَفَلَا يَسْمَعُونَ ۞
ನಾವು ಅವರಿಗಿಂತ ಹಿಂದಿನ ಅದೆಷ್ಟೋ ಸಮುದಾಯಗಳನ್ನು ನಾಶ ಮಾಡಿರುವುದು, ಅವರ ಪಾಲಿಗೆ ಮಾರ್ಗದರ್ಶಿಯಾಗಲಿಲ್ಲವೇ? ಅವರ (ಹಿಂದೆ ನಾಶಗೊಂಡವರ) ನೆಲೆಗಳಲ್ಲಿ ಅವರು ನಡೆದಾಡುತ್ತಾರೆ. ಇದರಲ್ಲಿ ಖಂಡಿತ ಪುರಾವೆಗಳಿವೆ. ಅವರೇನು ಕೇಳುತ್ತಿಲ್ಲವೇ?
32:27
أَوَلَمْ يَرَوْا أَنَّا نَسُوقُ الْمَاءَ إِلَى الْأَرْضِ الْجُرُزِ فَنُخْرِجُ بِهِ زَرْعًا تَأْكُلُ مِنْهُ أَنْعَامُهُمْ وَأَنْفُسُهُمْ ۖ أَفَلَا يُبْصِرُونَ ۞
ಅವರು ನೋಡಲಿಲ್ಲವೇ, ನಾವು ಒಣಗಿದ ನೆಲದ ಕಡೆಗೆ ನೀರನ್ನು ಹರಿಸುವುದನ್ನು? ಅದರಿಂದ ನಾವು ಬೆಳೆಯನ್ನು ಹೊರತೆಗೆಯುತ್ತೇವೆ. ಅದನ್ನು ಅವರ ಜಾನುವಾರುಗಳೂ ತಿನ್ನುತ್ತವೆ ಮತ್ತು ಸ್ವತಃ ಅವರೂ ತಿನ್ನುತ್ತಾರೆ. ಅವರೇನು (ಇದನ್ನೆಲ್ಲಾ) ನೋಡುತ್ತಿಲ್ಲವೇ?
32:28
وَيَقُولُونَ مَتَىٰ هَٰذَا الْفَتْحُ إِنْ كُنْتُمْ صَادِقِينَ ۞
ನೀವು ಸತ್ಯವಂತರಾಗಿದ್ದರೆ, ಆ ಅಂತಿಮ ತೀರ್ಪು ಯಾವಾಗ ಬಂದೀತು (ಎಂದು ತಿಳಿಸಿರಿ) ಎಂದು ಅವರು ಹೇಳುತ್ತಾರೆ.
32:29
قُلْ يَوْمَ الْفَتْحِ لَا يَنْفَعُ الَّذِينَ كَفَرُوا إِيمَانُهُمْ وَلَا هُمْ يُنْظَرُونَ ۞
ಹೇಳಿರಿ; ತೀರ್ಪಿನ ಆ ದಿನ, ಧಿಕ್ಕಾರಿಗಳಿಗೆ ಅವರ ನಂಬಿಕೆಯಿಂದ ಯಾವ ಲಾಭವೂ ಆಗದು ಮತ್ತು ಅವರಿಗೆ ಹೆಚ್ಚಿನ ಕಾಲಾವಕಾಶವೂ ಸಿಗದು.
32:30
فَأَعْرِضْ عَنْهُمْ وَانْتَظِرْ إِنَّهُمْ مُنْتَظِرُونَ ۞
(ದೂತರೇ,) ನೀವು ಅವರನ್ನು ಕಡೆಗಣಿಸಿರಿ ಮತ್ತು ಕಾಯಿರಿ. ಅವರೂ ಖಂಡಿತ ಕಾಯುತ್ತಿದ್ದಾರೆ.