At-Tur (The mount)
52. ಅತ್ತೂರ್(ಪರ್ವತ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
52:1
وَالطُّورِ ۞
ತೂರ್ ಪರ್ವತದಾಣೆ.
52:2
وَكِتَابٍ مَسْطُورٍ ۞
ಲಿಖಿತ ಗ್ರಂಥದಾಣೆ.
52:3
فِي رَقٍّ مَنْشُورٍ ۞
ಅದು ತೆರೆದ ಪುಟದಲ್ಲಿದೆ.
52:4
وَالْبَيْتِ الْمَعْمُورِ ۞
ಮತ್ತು ಜನ ಸಂಪನ್ನ ಆಲಯದಾಣೆ.
52:5
وَالسَّقْفِ الْمَرْفُوعِ ۞
ಎತ್ತರಗೊಳಿಸಲಾಗಿರುವ ಚಪ್ಪರದಾಣೆ.
52:6
وَالْبَحْرِ الْمَسْجُورِ ۞
ಮತ್ತು ಭೋರ್ಗರೆಯುವ ಸಮುದ್ರದಾಣೆ.
52:7
إِنَّ عَذَابَ رَبِّكَ لَوَاقِعٌ ۞
ನಿಮ್ಮ ಒಡೆಯನ ಶಿಕ್ಷೆಯು ಖಂಡಿತ ಬರಲಿದೆ.
52:8
مَا لَهُ مِنْ دَافِعٍ ۞
ಅದನ್ನು ತಡೆಯ ಬಲ್ಲವರು ಯಾರೂ ಇಲ್ಲ.
52:9
يَوْمَ تَمُورُ السَّمَاءُ مَوْرًا ۞
ಆಕಾಶವು ಭೀಕರವಾಗಿ ತಲ್ಲಣಿಸುವ ದಿನ.
52:10
وَتَسِيرُ الْجِبَالُ سَيْرًا ۞
ಮತ್ತು ಪರ್ವತಗಳು ಚಲಿಸುವ ದಿನ.
52:11
فَوَيْلٌ يَوْمَئِذٍ لِلْمُكَذِّبِينَ ۞
(ಸತ್ಯವನ್ನು) ತಿರಸ್ಕರಿಸಿದವರಿಗೆ ಆ ದಿನ ವಿನಾಶವಿದೆ.
52:12
الَّذِينَ هُمْ فِي خَوْضٍ يَلْعَبُونَ ۞
(ಇಂದು) ಅವರು ಮೋಜಾಟಗಳಲ್ಲಿ ತಲ್ಲೀನರಾಗಿದ್ದಾರೆ.
52:13
يَوْمَ يُدَعُّونَ إِلَىٰ نَارِ جَهَنَّمَ دَعًّا ۞
ಆ ದಿನ ಅವರನ್ನು ತಳ್ಳುತ್ತಾ ನರಕದೆಡೆಗೆ ಒಯ್ಯಲಾಗುವುದು.
52:14
هَٰذِهِ النَّارُ الَّتِي كُنْتُمْ بِهَا تُكَذِّبُونَ ۞
(ಮತ್ತು ಹೇಳಲಾಗುವುದು;) ಇದುವೇ, ನೀವು ತಿರಸ್ಕರಿಸುತ್ತಿದ್ದ ನರಕಾಗ್ನಿ.
52:15
أَفَسِحْرٌ هَٰذَا أَمْ أَنْتُمْ لَا تُبْصِرُونَ ۞
ಇದೇನು ಇಂದ್ರಜಾಲವೇ? ಅಥವಾ ನಿಮಗೇನೂ ಕಾಣಿಸುತ್ತಿಲ್ಲವೇ?
52:16
اصْلَوْهَا فَاصْبِرُوا أَوْ لَا تَصْبِرُوا سَوَاءٌ عَلَيْكُمْ ۖ إِنَّمَا تُجْزَوْنَ مَا كُنْتُمْ تَعْمَلُونَ ۞
ಇದರೊಳಗೆ ಪ್ರವೇಶಿಸಿರಿ. ನೀವಿನ್ನು ಸಹನೆ ತೋರಿದರೂ ಸಹನೆ ತೋರದಿದ್ದರೂ ನಿಮ್ಮ ಪಾಲಿಗೆ ಸಮಾನವಾಗಿರುತ್ತದೆ. ನಿಮಗಂತು, ನೀವು ಮಾಡುತ್ತಿದ್ದ ಕೃತ್ಯಗಳ ಪ್ರತಿಫಲವನ್ನಷ್ಟೇ ನೀಡಲಾಗುತ್ತಿದೆ.
52:17
إِنَّ الْمُتَّقِينَ فِي جَنَّاتٍ وَنَعِيمٍ ۞
(ಅಂದು) ಧರ್ಮ ನಿಷ್ಠರು ಉದ್ಯಾನಗಳಲ್ಲಿ ಹಾಗೂ ಅನುಗ್ರಹದಲ್ಲಿರುವರು.
52:18
فَاكِهِينَ بِمَا آتَاهُمْ رَبُّهُمْ وَوَقَاهُمْ رَبُّهُمْ عَذَابَ الْجَحِيمِ ۞
ತಮಗೆ ತಮ್ಮ ಒಡೆಯನು ನೀಡಿದ್ದರಲ್ಲಿ ಸಂತುಷ್ಟರಾಗಿರುವರು. ಮತ್ತು ಅವರನ್ನು ಅವರ ಒಡೆಯನು ನರಕದ ಹಿಂಸೆಯಿಂದ ಸುರಕ್ಷಿತರಾಗಿಟ್ಟಿರುವನು.
52:19
كُلُوا وَاشْرَبُوا هَنِيئًا بِمَا كُنْتُمْ تَعْمَلُونَ ۞
ನೀವು ಮಾಡಿದ್ದ ಕರ್ಮಗಳ ಫಲವಾಗಿ, (ಇಂದು) ಮನ ತುಂಬಾ ಉಣ್ಣಿರಿ ಮತ್ತು ಕುಡಿಯಿರಿ (ಎಂದು ಅವರೊಡನೆ ಹೇಳಲಾಗುವುದು).
52:20
مُتَّكِئِينَ عَلَىٰ سُرُرٍ مَصْفُوفَةٍ ۖ وَزَوَّجْنَاهُمْ بِحُورٍ عِينٍ ۞
ಅವರು ಸಾಲು ಸಾಲಾಗಿ ದಿಂಬುಗಳಿಗೆ ಒರಗಿ ವಿರಮಿಸುತ್ತಿರುವರು ಮತ್ತು ನಾವು ವಿಶಾಲ ಕಣ್ಣಿನ ‘ಹೂರ್’ಗಳನ್ನು ಅವರ ಜೊತೆಗಳಾಗಿಸಿರುವೆವು.
52:21
وَالَّذِينَ آمَنُوا وَاتَّبَعَتْهُمْ ذُرِّيَّتُهُمْ بِإِيمَانٍ أَلْحَقْنَا بِهِمْ ذُرِّيَّتَهُمْ وَمَا أَلَتْنَاهُمْ مِنْ عَمَلِهِمْ مِنْ شَيْءٍ ۚ كُلُّ امْرِئٍ بِمَا كَسَبَ رَهِينٌ ۞
ವಿಶ್ವಾಸಿಗಳಾಗಿದ್ದವರು ಮತ್ತು ವಿಶ್ವಾಸಿಗಳಾಗಿ ಅವರನ್ನು ಅನುಸರಿಸಿದ, ಅವರ ಸಂತತಿಗಳು - ಅವರನ್ನು ನಾವು ಅವರ ಸಂತತಿಗಳೊಂದಿಗೆ ಸೇರಿಸಿರುವೆವು - ಮತ್ತು ನಾವು ಅವರ ಕರ್ಮಗಳಲ್ಲಿ ಏನನ್ನೂ ಕಡಿತಗೊಳಿಸಲಾರೆವು. ಪ್ರತಿಯೊಬ್ಬನೂ ತನ್ನ ಕರ್ಮಗಳಿಗೆ ಪ್ರತಿಯಾಗಿ ಒತ್ತೆಯಾಳಾಗಿದ್ದಾನೆ.
52:22
وَأَمْدَدْنَاهُمْ بِفَاكِهَةٍ وَلَحْمٍ مِمَّا يَشْتَهُونَ ۞
ನಾವು ಹಣ್ಣು ಹಂಪಲುಗಳನ್ನು ಮತ್ತು ಅವರು ಮೆಚ್ಚುವ ಮಾಂಸಾಹಾರವನ್ನು ಅವರಿಗೆ ಒದಗಿಸುತ್ತಿರುವೆವು.
52:23
يَتَنَازَعُونَ فِيهَا كَأْسًا لَا لَغْوٌ فِيهَا وَلَا تَأْثِيمٌ ۞
ಅಲ್ಲಿ ಅವರು (ಮೋಜಿಗಾಗಿ) ಪಾನಪಾತ್ರೆಗಳನ್ನು ಎಳೆದಾಡುವರು. ಯಾವುದೇ ಅನಗತ್ಯದ ಸಂಭಾಷಣೆಯಾಗಲಿ, ಪಾಪದ ಮಾತಾಗಲಿ ಅಲ್ಲಿ ಇರಲಾರದು.
52:24
۞ وَيَطُوفُ عَلَيْهِمْ غِلْمَانٌ لَهُمْ كَأَنَّهُمْ لُؤْلُؤٌ مَكْنُونٌ ۞
ಅವರ ಸೇವೆಗಾಗಿ, ಸುರಕ್ಷಿತ ಮುತ್ತುಗಳೋ ಎಂಬಂತಿರುವ ಬಾಲಕರು ಅವರ ಸುತ್ತ ತಿರುಗಾಡುತ್ತಿರುವರು.
52:25
وَأَقْبَلَ بَعْضُهُمْ عَلَىٰ بَعْضٍ يَتَسَاءَلُونَ ۞
ಅವರು (ಸ್ವರ್ಗವಾಸಿಗಳು) ಪರಸ್ಪರರನ್ನು ಉದ್ದೇಶಿಸಿ ವಿಚಾರಿಸುವರು;
52:26
قَالُوا إِنَّا كُنَّا قَبْلُ فِي أَهْلِنَا مُشْفِقِينَ ۞
ಅವರು ಹೇಳುವರು; ಹಿಂದೆ ನಾವು ನಮ್ಮವರ ನಡುವೆ ಭೀತರಾಗಿದ್ದೆವು.
52:27
فَمَنَّ اللَّهُ عَلَيْنَا وَوَقَانَا عَذَابَ السَّمُومِ ۞
ಕೊನೆಗೆ, ಅಲ್ಲಾಹನು ನಮ್ಮ ಮೇಲೆ ದಯೆ ತೋರಿದನು ಮತ್ತು ನಮ್ಮನ್ನು ನರಕಾಗ್ನಿಯ ಶಿಕ್ಷೆಯಿಂದ ರಕ್ಷಿಸಿದನು.
52:28
إِنَّا كُنَّا مِنْ قَبْلُ نَدْعُوهُ ۖ إِنَّهُ هُوَ الْبَرُّ الرَّحِيمُ ۞
ನಾವು ಈ ಹಿಂದೆ ಅವನನ್ನೇ ಕರೆದು ಪ್ರಾರ್ಥಿಸುತ್ತಿದ್ದೆವು. ಖಂಡಿತವಾಗಿಯೂ ಅವನು ಮಹಾ ಉಪಕಾರಿ ಹಾಗೂ ಕರುಣಾಮಯಿಯಾಗಿದ್ದಾನೆ.
52:29
فَذَكِّرْ فَمَا أَنْتَ بِنِعْمَتِ رَبِّكَ بِكَاهِنٍ وَلَا مَجْنُونٍ ۞
(ದೂತರೇ,) ನೀವು ಉಪದೇಶಿಸಿರಿ. ನಿಮ್ಮ ಒಡೆಯನ ಅನುಗ್ರಹದಿಂದ ನೀವು ಮಾಂತ್ರಿಕರೂ ಅಲ್ಲ, ಮನೋರೋಗಿಯೂ ಅಲ್ಲ.
52:30
أَمْ يَقُولُونَ شَاعِرٌ نَتَرَبَّصُ بِهِ رَيْبَ الْمَنُونِ ۞
‘‘ಅವನೊಬ್ಬ ಕವಿ. ಅವನು ಕಾಲದ ಪ್ರಹಾರಕ್ಕೆ ತುತ್ತಾಗುವುದನ್ನು ಕಾಣಲು ನಾವು ಕಾಯುತ್ತಿದ್ದೇವೆ’’ ಎಂದು ಅವರು ಹೇಳುತ್ತಿದ್ದಾರೆಯೇ?
52:31
قُلْ تَرَبَّصُوا فَإِنِّي مَعَكُمْ مِنَ الْمُتَرَبِّصِينَ ۞
ನೀವು ಹೇಳಿರಿ; ನೀವು ಕಾಯುತ್ತಲೇ ಇರಿ. ನಿಮ್ಮ ಜೊತೆ ನಾನೂ ಕಾದಿರುತ್ತೇನೆ.
52:32
أَمْ تَأْمُرُهُمْ أَحْلَامُهُمْ بِهَٰذَا ۚ أَمْ هُمْ قَوْمٌ طَاغُونَ ۞
ಅವರ ಬುದ್ಧಿಗಳು ಅವರಿಗೆ ಇದನ್ನೇ ಕಲಿಸುತ್ತಿವೆಯೇ? ಅಥವಾ ಅವರೇನು ವಿದ್ರೋಹಿಗಳಾಗಿ ಬಿಟ್ಟಿರುವರೇ?
52:33
أَمْ يَقُولُونَ تَقَوَّلَهُ ۚ بَلْ لَا يُؤْمِنُونَ ۞
‘‘ಅವನು ಇದನ್ನು (ಕುರ್‌ಆನನ್ನು) ತಾನೇ ರಚಿಸಿಕೊಂಡಿದ್ದಾನೆ’’ ಎಂದವರು ಹೇಳುತ್ತಿದ್ದಾರೆಯೇ? ನಿಜವಾಗಿ ಅವರು ನಂಬುತ್ತಿಲ್ಲ.
52:34
فَلْيَأْتُوا بِحَدِيثٍ مِثْلِهِ إِنْ كَانُوا صَادِقِينَ ۞
ಅವರು ಸತ್ಯವಂತರಾಗಿದ್ದರೆ, ಇಂತಹ ಒಂದು ವಚನವನ್ನು ಅವರು ರಚಿಸಿ ತರಲಿ.
52:35
أَمْ خُلِقُوا مِنْ غَيْرِ شَيْءٍ أَمْ هُمُ الْخَالِقُونَ ۞
ಅವರೇನು ಶೂನ್ಯದಿಂದ ಸೃಷ್ಟಿಸಲ್ಪಟ್ಟಿರುವರೇ ಅಥವಾ ಸ್ವತಃ ಅವರು ಸೃಷ್ಟಿಕರ್ತರಾಗಿರುವರೇ?
52:36
أَمْ خَلَقُوا السَّمَاوَاتِ وَالْأَرْضَ ۚ بَلْ لَا يُوقِنُونَ ۞
ಆಕಾಶಗಳನ್ನು ಹಾಗೂ ಭೂಮಿಯನ್ನೇನು ಅವರು ಸೃಷ್ಟಿಸಿರುವರೇ? ನಿಜವಾಗಿ ಅವರಿಗೆ ದೃಢ ನಂಬಿಕೆ ಇಲ್ಲ.
52:37
أَمْ عِنْدَهُمْ خَزَائِنُ رَبِّكَ أَمْ هُمُ الْمُصَيْطِرُونَ ۞
ನಿಮ್ಮೊಡೆಯನ ಭಂಡಾರಗಳೇನು ಅವರ ಬಳಿ ಇವೆಯೇ? ಅಥವಾ ಅವರೇನು (ನಾಡಿನ) ಕಾವಲುಗಾರರೇ?
52:38
أَمْ لَهُمْ سُلَّمٌ يَسْتَمِعُونَ فِيهِ ۖ فَلْيَأْتِ مُسْتَمِعُهُمْ بِسُلْطَانٍ مُبِينٍ ۞
ಅವರ ಬಳಿಯೇನು ಏಣಿ ಇದೆಯೇ? ಅವರೇನು ಅದರ ಮೇಲೇರಿ (ಆಕಾಶ ಲೋಕದ ಸಮಾಚಾರಗಳಿಗೆ) ಕಿವಿ ಗೊಡುತ್ತಿದ್ದಾರೆಯೇ? ಹಾಗಾದರೆ (ಆ ರೀತಿ) ಕಿವಿ ಗೊಡುವ ಅವರ ವ್ಯಕ್ತಿಯು ಸ್ಪಷ್ಟವಾದ ಪುರಾವೆಯನ್ನು ತರಲಿ.
52:39
أَمْ لَهُ الْبَنَاتُ وَلَكُمُ الْبَنُونَ ۞
ಅವನಿಗೆ (ಅಲ್ಲಾಹನಿಗೆ) ಪುತ್ರಿಯರು ಮತ್ತು ಅವರಿಗೆ ಪುತ್ರರೇ?
52:40
أَمْ تَسْأَلُهُمْ أَجْرًا فَهُمْ مِنْ مَغْرَمٍ مُثْقَلُونَ ۞
(ದೂತರೇ,) ನೀವೇನು ಅವರಿಂದ ಏನಾದರೂ ಪ್ರತಿಫಲವನ್ನು ಅಪೇಕ್ಷಿಸಿರುವಿರಾ ಮತ್ತು ಅವರು ತಲೆದಂಡದ ಭಾರದಡಿ ನರಳುತ್ತಿರುವರೇ?
52:41
أَمْ عِنْدَهُمُ الْغَيْبُ فَهُمْ يَكْتُبُونَ ۞
ಅಥವಾ ಅವರ ಬಳಿ, ಅವರು ಬರೆದಿಡುತ್ತಿರುವ ಗುಪ್ತಲೋಕದ ಜ್ಞಾನವೇನಾದರೂ ಇದೆಯೇ?
52:42
أَمْ يُرِيدُونَ كَيْدًا ۖ فَالَّذِينَ كَفَرُوا هُمُ الْمَكِيدُونَ ۞
ಅವರೇನು, ಯಾವುದಾದರೂ ಸಂಚು ಹೂಡ ಬಯಸುತ್ತಾರೆಯೇ? ಕೊನೆಗೆ ಧಿಕ್ಕಾರಿಗಳೇ ಸಂಚಿಗೆ ತುತ್ತಾಗುವರು.
52:43
أَمْ لَهُمْ إِلَٰهٌ غَيْرُ اللَّهِ ۚ سُبْحَانَ اللَّهِ عَمَّا يُشْرِكُونَ ۞
ಅವರಿಗೇನು ಅಲ್ಲಾಹನ ಹೊರತು ಬೇರೆ ದೇವರಿದ್ದಾನೆಯೇ? ಅಲ್ಲಾಹನಂತು, ಅವರು ಪಾಲುಗೊಳಿಸುವ ಎಲ್ಲವುಗಳಿಂದ ಮುಕ್ತನಾಗಿದ್ದಾನೆ.
52:44
وَإِنْ يَرَوْا كِسْفًا مِنَ السَّمَاءِ سَاقِطًا يَقُولُوا سَحَابٌ مَرْكُومٌ ۞
ಅವರು, ಆಕಾಶದ ಒಂದು ತುಂಡು ಮುರಿದು ಬೀಳುವುದನ್ನು ಕಂಡರೂ, ಅದು ಗಟ್ಟಿಯಾಗಿದ್ದ ಮೋಡ ಎಂದಷ್ಟೇ ಹೇಳುವರು.
52:45
فَذَرْهُمْ حَتَّىٰ يُلَاقُوا يَوْمَهُمُ الَّذِي فِيهِ يُصْعَقُونَ ۞
ಅವರು ತಮ್ಮನ್ನು ಮೂರ್ಛೆ ಹೋಗಿಸುವ ದಿನವನ್ನು ಕಾಣುವ ತನಕ, ನೀವು ಅವರನ್ನು ಬಿಟ್ಟು ಬಿಡಿರಿ.
52:46
يَوْمَ لَا يُغْنِي عَنْهُمْ كَيْدُهُمْ شَيْئًا وَلَا هُمْ يُنْصَرُونَ ۞
ಆ ದಿನ ಅವರ ಸಂಚು ಅವರ ಯಾವ ಕೆಲಸಕ್ಕೂ ಬಾರದು ಮತ್ತು ಅವರಿಗೆ ಯಾವ ನೆರವೂ ಸಿಗದು.
52:47
وَإِنَّ لِلَّذِينَ ظَلَمُوا عَذَابًا دُونَ ذَٰلِكَ وَلَٰكِنَّ أَكْثَرَهُمْ لَا يَعْلَمُونَ ۞
ಮತ್ತು ಅಕ್ರಮಿಗಳಿಗೆ ಇದಲ್ಲದೆ ಇನ್ನೂ ಹೆಚ್ಚಿನ ಶಿಕ್ಷೆಯೂ ಖಂಡಿತ ಸಿಗುವುದು. ಅದರೆ ಅವರಲ್ಲಿ ಹೆಚ್ಚಿನವರು ತಿಳಿದಿಲ್ಲ.
52:48
وَاصْبِرْ لِحُكْمِ رَبِّكَ فَإِنَّكَ بِأَعْيُنِنَا ۖ وَسَبِّحْ بِحَمْدِ رَبِّكَ حِينَ تَقُومُ ۞
(ದೂತರೇ,) ನೀವು ನಿಮ್ಮ ಪ್ರಭುವಿನ ಆದೇಶದಂತೆ ಸಹನಶೀಲರಾಗಿರಿ. ನೀವು ಖಂಡಿತ ನಮ್ಮ ಕಣ್ಣ ಮುಂದಿರುವಿರಿ. ನೀವು ಎದ್ದೇಳುವಾಗ, ನಿಮ್ಮ ಒಡೆಯನ ಪಾವಿತ್ರ್ಯವನ್ನು ಜಪಿಸಿರಿ.
52:49
وَمِنَ اللَّيْلِ فَسَبِّحْهُ وَإِدْبَارَ النُّجُومِ ۞
ಹಾಗೆಯೇ, ಇರುಳಲ್ಲೂ, ನಕ್ಷತ್ರಗಳು ಕಣ್ಮರೆಯಾಗುವ ವೇಳೆಯೂ ನೀವು ಅವನ ಪಾವಿತ್ರ್ಯವನ್ನು ಜಪಿಸಿರಿ.