Ar-Rahman (The beneficent)
55. ಅರ್ರಹ್ಮಾನ್(ಅಪಾರ ದಯಾಳು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
55:1
الرَّحْمَٰنُ ۞
ಅಪಾರ ದಯಾಳು.
55:2
عَلَّمَ الْقُرْآنَ ۞
(ಅವನೇ) ಕುರ್‌ಆನನ್ನು ಕಲಿಸಿರುವನು.
55:3
خَلَقَ الْإِنْسَانَ ۞
ಮನುಷ್ಯನನ್ನು ಸೃಷ್ಟಿಸಿರುವನು.
55:4
عَلَّمَهُ الْبَيَانَ ۞
ಅವನಿಗೆ ಮಾತನಾಡಲು ಕಲಿಸಿರುವನು.
55:5
الشَّمْسُ وَالْقَمَرُ بِحُسْبَانٍ ۞
ಸೂರ್ಯ ಮತ್ತು ಚಂದ್ರ ಒಂದು ನಿರ್ದಿಷ್ಟ ಸೂತ್ರಕ್ಕೆ ಬದ್ಧವಾಗಿವೆ.
55:6
وَالنَّجْمُ وَالشَّجَرُ يَسْجُدَانِ ۞
​ಮತ್ತು ನಕ್ಷತ್ರಗಳು ಹಾಗೂ ಮರಗಳು ಸಾಷ್ಟಾಂಗವೆರಗುತ್ತವೆ.​
55:7
وَالسَّمَاءَ رَفَعَهَا وَوَضَعَ الْمِيزَانَ ۞
ಅವನು ಆಕಾಶಗಳನ್ನು ಎತ್ತರಿಸಿರುವನು ಹಾಗೂ ಸಮತೋಲನವನ್ನು ಸ್ಥಾಪಿಸಿರುವನು-
55:8
أَلَّا تَطْغَوْا فِي الْمِيزَانِ ۞
- ನೀವು ಸಮತೋಲನವನ್ನು ಮೀರಬಾರದೆಂದು.
55:9
وَأَقِيمُوا الْوَزْنَ بِالْقِسْطِ وَلَا تُخْسِرُوا الْمِيزَانَ ۞
ಮತ್ತು ನೀವು ನ್ಯಾಯೋಚಿತವಾಗಿ ತೂಗಿರಿ ಮತ್ತು ತೂಕದಲ್ಲಿ ಕಡಿತ ಮಾಡಬೇಡಿ.
55:10
وَالْأَرْضَ وَضَعَهَا لِلْأَنَامِ ۞
ಮತ್ತು ಅವನು ಭೂಮಿಯನ್ನು ಜೀವಿಗಳಿಗಾಗಿ ಹಾಸಿರುವನು.
55:11
فِيهَا فَاكِهَةٌ وَالنَّخْلُ ذَاتُ الْأَكْمَامِ ۞
ಅದರಲ್ಲಿ ಹಣ್ಣು ಹಂಪಲುಗಳಿವೆ ಹಾಗೂ ಕವಚವಿರುವ ಖರ್ಜೂರಗಳಿವೆ.
55:12
وَالْحَبُّ ذُو الْعَصْفِ وَالرَّيْحَانُ ۞
ಹೊಟ್ಟು ಹಾಗೂ ಪರಿಮಳದ ಪುಷ್ಪವಿರುವ ಧಾನ್ಯಗಳಿವೆ.
55:13
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:14
خَلَقَ الْإِنْسَانَ مِنْ صَلْصَالٍ كَالْفَخَّارِ ۞
ಅವನು ಮನುಷ್ಯನನ್ನು ಹಂಚಿನಂತಹ ಗಾರೆಮಣ್ಣಿನಿಂದ ಸೃಷ್ಟಿಸಿರುವನು.
55:15
وَخَلَقَ الْجَانَّ مِنْ مَارِجٍ مِنْ نَارٍ ۞
ಮತ್ತು ಅವನು ಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಿರುವನು.
55:16
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:17
رَبُّ الْمَشْرِقَيْنِ وَرَبُّ الْمَغْرِبَيْنِ ۞
ಅವನು ಎರಡು ಪೂರ್ವಗಳ ಹಾಗೂ ಎರಡು ಪಶ್ಚಿಮಗಳ ಒಡೆಯನು.
55:18
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:19
مَرَجَ الْبَحْرَيْنِ يَلْتَقِيَانِ ۞
ಅವನು ಎರಡು ಸಮುದ್ರಗಳನ್ನು ಪರಸ್ಪರ ಒಂದು ಗೂಡಿಸಿರುವನು.
55:20
بَيْنَهُمَا بَرْزَخٌ لَا يَبْغِيَانِ ۞
ಅವುಗಳ ನಡುವೆ ಒಂದು ತೆರೆ ಇದೆ. ಅವು ಅದನ್ನು ಮೀರುವುದಿಲ್ಲ.
55:21
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:22
يَخْرُجُ مِنْهُمَا اللُّؤْلُؤُ وَالْمَرْجَانُ ۞
ಅವೆರಡರಿಂದಲೂ ಮುತ್ತು ಹಾಗೂ ಹವಳಗಳು ಹೊರಡುತ್ತವೆ.
55:23
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:24
وَلَهُ الْجَوَارِ الْمُنْشَآتُ فِي الْبَحْرِ كَالْأَعْلَامِ ۞
ಕಡಲಲ್ಲಿ ಪರ್ವತಗಳಂತೆ ಚಲಿಸುವ ಹಡಗುಗಳ ನಿಯಂತ್ರಣವು ಅವನಿಗೇ ಸೇರಿದೆ.
55:25
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:26
كُلُّ مَنْ عَلَيْهَا فَانٍ ۞
ಅದರಲ್ಲಿ (ಭೂಮಿಯಲ್ಲಿ) ಇರುವ ಎಲ್ಲವೂ ನಾಶವಾಗಲಿದೆ.
55:27
وَيَبْقَىٰ وَجْهُ رَبِّكَ ذُو الْجَلَالِ وَالْإِكْرَامِ ۞
ಮತ್ತು ವೈಭವಪೂರ್ಣ ಹಾಗೂ ಮಾನ್ಯನಾದ ನಿಮ್ಮ ಒಡೆಯನು ಮಾತ್ರ ಉಳಿಯುವನು.
55:28
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:29
يَسْأَلُهُ مَنْ فِي السَّمَاوَاتِ وَالْأَرْضِ ۚ كُلَّ يَوْمٍ هُوَ فِي شَأْنٍ ۞
ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪ್ರತಿಯೊಬ್ಬರೂ ಅವನೊಡನೆಯೇ ಬೇಡುತ್ತಾರೆ. ಅವನು ನಿತ್ಯವೂ ಸಕ್ರಿಯನಾಗಿರುತ್ತಾನೆ.
55:30
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಅನುಗ್ರಹಗಳನ್ನು ಅಲ್ಲಗಳೆಯುವಿರಿ?
55:31
سَنَفْرُغُ لَكُمْ أَيُّهَ الثَّقَلَانِ ۞
ಎರಡು ಭಾರಗಳೇ (ಮಾನವರೇ ಹಾಗೂ ಜಿನ್ನ್‌ಗಳೇ), ಬಹು ಬೇಗನೇ ನಾವು ನಿಮ್ಮತ್ತ ಗಮನ ಹರಿಸಲಿದ್ದೇವೆ.
55:32
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:33
يَا مَعْشَرَ الْجِنِّ وَالْإِنْسِ إِنِ اسْتَطَعْتُمْ أَنْ تَنْفُذُوا مِنْ أَقْطَارِ السَّمَاوَاتِ وَالْأَرْضِ فَانْفُذُوا ۚ لَا تَنْفُذُونَ إِلَّا بِسُلْطَانٍ ۞
ಜಿನ್ನ್‌ಗಳೇ ಮತ್ತು ಮಾನವರೇ, ಆಕಾಶಗಳ ಹಾಗೂ ಭೂಮಿಯ ಗಡಿಗಳನ್ನು ಮೀರಿ ಹೋಗಲು ನಿಮಗೆ ಸಾಧ್ಯವಿದ್ದರೆ ಮೀರಿ ಹೋಗಿರಿ. (ಅಲ್ಲಾಹನ) ಆದೇಶವಿಲ್ಲದೆ ಮೀರಿ ಹೋಗಲು ನಿಮಗೆ ಸಾಧ್ಯವಾಗದು.
55:34
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:35
يُرْسَلُ عَلَيْكُمَا شُوَاظٌ مِنْ نَارٍ وَنُحَاسٌ فَلَا تَنْتَصِرَانِ ۞
ನಿಮ್ಮ ಮೇಲೆ ಬೆಂಕಿಯ ಜ್ವಾಲೆಯನ್ನು ಹಾಗೂ ಹೊಗೆಯನ್ನು ಎರಗಿಸಲಾಗುವುದು ಮತ್ತು (ಅವುಗಳನ್ನು) ಎದುರಿಸಲು ನಿಮಗೆ ಸಾಧ್ಯವಾಗದು.
55:36
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:37
فَإِذَا انْشَقَّتِ السَّمَاءُ فَكَانَتْ وَرْدَةً كَالدِّهَانِ ۞
ಮತ್ತು ಆಕಾಶವು ಬಿರಿದು ಬಿಡುವಾಗ, ಅದು ಬೆಂದ ಚರ್ಮದಂತೆ ಕೆಂಪಾಗಿ ಬಿಡುವುದು.
55:38
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:39
فَيَوْمَئِذٍ لَا يُسْأَلُ عَنْ ذَنْبِهِ إِنْسٌ وَلَا جَانٌّ ۞
ಆ ದಿನ ಯಾವ ಮಾನವನೊಡನೆಯೂ ಯಾವ ಜಿನ್ನಿನೊಡನೆಯೂ ಅವನ ಪಾಪಗಳ ಕುರಿತು ಪ್ರಶ್ನಿಸಲಾಗದು.
55:40
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:41
يُعْرَفُ الْمُجْرِمُونَ بِسِيمَاهُمْ فَيُؤْخَذُ بِالنَّوَاصِي وَالْأَقْدَامِ ۞
(ಅಂದು) ಅಪರಾಧಿಗಳು ತಮ್ಮ ಮುಖಗಳಿಂದಲೇ ಗುರುತಿಸಲ್ಪಡುವರು ಮತ್ತು ಅವರನ್ನು (ಎಳೆದೊಯ್ಯಲು) ಅವರ ಹಣೆ ಹಾಗೂ ಕಾಲುಗಳಿಂದಲೇ ಹಿಡಿಯಲಾಗುವುದು.
55:42
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:43
هَٰذِهِ جَهَنَّمُ الَّتِي يُكَذِّبُ بِهَا الْمُجْرِمُونَ ۞
ಇದುವೇ, ಅಪರಾಧಿಗಳು ಅಲ್ಲಗಳೆಯುತ್ತಿದ್ದ ನರಕ.
55:44
يَطُوفُونَ بَيْنَهَا وَبَيْنَ حَمِيمٍ آنٍ ۞
(ಅಂದು) ಅವರು ಅದರ (ನರಕಾಗ್ನಿಯ) ಹಾಗೂ ಕುದಿಯುವ ನೀರಿನ ನಡುವೆ ಅಲೆದಾಡುತ್ತಿರುವರು.
55:45
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:46
وَلِمَنْ خَافَ مَقَامَ رَبِّهِ جَنَّتَانِ ۞
ತನ್ನೊಡೆಯನ ಮುಂದೆ ನಿಲ್ಲಲಿಕ್ಕಿದೆ ಎಂದು ಅಂಜುತ್ತಿದ್ದವನಿಗೆ (ಅಂದು) ಎರಡೆರಡು ತೋಟಗಳಿರುವವು.
55:47
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:48
ذَوَاتَا أَفْنَانٍ ۞
ಅವು ಧಾರಾಳ ಶಾಖೆಗಳಿರುವ (ತೋಟಗಳಾಗಿರುವವು)
55:49
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:50
فِيهِمَا عَيْنَانِ تَجْرِيَانِ ۞
ಅವುಗಳಲ್ಲಿ ಎರಡೆರಡು ಝರಿಗಳು ಹರಿಯುತ್ತಿರುವವು.
55:51
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:52
فِيهِمَا مِنْ كُلِّ فَاكِهَةٍ زَوْجَانِ ۞
ಅವುಗಳಲ್ಲಿ ಎಲ್ಲ ಜಾತಿಯ ಹಣ್ಣುಗಳ ಎರಡೆರಡು ಬಗೆಗಳಿರುವವು.
55:53
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:54
مُتَّكِئِينَ عَلَىٰ فُرُشٍ بَطَائِنُهَا مِنْ إِسْتَبْرَقٍ ۚ وَجَنَى الْجَنَّتَيْنِ دَانٍ ۞
ಅವರು ರೇಶ್ಮೆ ಹೊದಿಸಿದ ನೆಲದಲ್ಲಿ ದಿಂಬುಗಳಿಗೆ ಒರಗಿಕೊಂಡಿರುವರು ಮತ್ತು ಎರಡೂ ತೋಟಗಳ ಹಣ್ಣುಗಳು ಅವರಿಗೆ ಸಮೀಪವಾಗಿರುವವು.
55:55
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:56
فِيهِنَّ قَاصِرَاتُ الطَّرْفِ لَمْ يَطْمِثْهُنَّ إِنْسٌ قَبْلَهُمْ وَلَا جَانٌّ ۞
ಅವುಗಳಲ್ಲಿ, ದೃಷ್ಟಿ ತಗ್ಗಿಸಿರುವ ಸ್ತ್ರೀಯರಿರುವರು. ಇವರಿಗಿಂತ ಮುನ್ನ ಅವರನ್ನು ಮಾನವರಾಗಲಿ ಜಿನ್ನ್‌ಗಳಾಗಲಿ ಮುಟ್ಟಿರಲಾರರು.
55:57
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:58
كَأَنَّهُنَّ الْيَاقُوتُ وَالْمَرْجَانُ ۞
ಅವರೆಲ್ಲ ಮಾಣಿಕ್ಯ ಹಾಗೂ ಹವಳಗಳೋ ಎಂಬಂತಿರುವರು.
55:59
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:60
هَلْ جَزَاءُ الْإِحْسَانِ إِلَّا الْإِحْسَانُ ۞
ಸೌಜನ್ಯದ ಪ್ರತಿಫಲ ಸೌಜನ್ಯವಲ್ಲದೆ ಮತ್ತೇನು. ?
55:61
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:62
وَمِنْ دُونِهِمَا جَنَّتَانِ ۞
ಅವೆರಡಲ್ಲದೆ ಇನ್ನೂ ಎರಡು ತೋಟಗಳಿವೆ.
55:63
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:64
مُدْهَامَّتَانِ ۞
ಹಚ್ಚ ಹಸಿರು ವರ್ಣದವುಗಳು.
55:65
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:66
فِيهِمَا عَيْنَانِ نَضَّاخَتَانِ ۞
ಅವುಗಳಲ್ಲಿ ಉತ್ಸಾಹದಿಂದ ಉಕ್ಕಿ ಹರಿಯುವ ಎರಡು ಚಿಲುಮೆಗಳಿವೆ.
55:67
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:68
فِيهِمَا فَاكِهَةٌ وَنَخْلٌ وَرُمَّانٌ ۞
ಅವುಗಳಲ್ಲಿ, ಹಣ್ಣು ಹಂಪಲುಗಳು, ಖರ್ಜೂರದ ಗಿಡಗಳು ಹಾಗೂ ದಾಳಿಂಬೆ ಹಣ್ಣುಗಳಿವೆ.
55:69
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:70
فِيهِنَّ خَيْرَاتٌ حِسَانٌ ۞
ಅವುಗಳಲ್ಲಿ ಸುಶೀಲೆಯರಾದ ಸುಂದರಿಯರಿರುವರು.
55:71
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:72
حُورٌ مَقْصُورَاتٌ فِي الْخِيَامِ ۞
ಆ ಸ್ವರ್ಗ ಕನ್ಯೆಯರು ಶಿಬಿರಗಳಲ್ಲಿ ಅವಿತಿರುವರು.
55:73
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:74
لَمْ يَطْمِثْهُنَّ إِنْسٌ قَبْلَهُمْ وَلَا جَانٌّ ۞
ಇವರಿಗಿಂತ ಮುನ್ನ ಅವರನ್ನು ಮಾನವರಾಗಲಿ ಜಿನ್ನ್‌ಗಳಾಗಲಿ ಮುಟ್ಟಿರಲಾರರು.
55:75
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:76
مُتَّكِئِينَ عَلَىٰ رَفْرَفٍ خُضْرٍ وَعَبْقَرِيٍّ حِسَانٍ ۞
ಅವರು ಹಸಿರು ಹೊದಿಕೆ ಹಾಗೂ ನುಣುಪಾದ ದಿಂಬುಗಳ ಮೇಲೆ ಒರಗಿರುವರು.
55:77
فَبِأَيِّ آلَاءِ رَبِّكُمَا تُكَذِّبَانِ ۞
ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?
55:78
تَبَارَكَ اسْمُ رَبِّكَ ذِي الْجَلَالِ وَالْإِكْرَامِ ۞
ವೈಭವಪೂರ್ಣ ಹಾಗೂ ಗೌರವಾನ್ವಿತನಾದ ನಿಮ್ಮ ಒಡೆಯನ ಹೆಸರು ಸಮೃದ್ಧಿದಾಯಕವಾಗಿದೆ.