At-Taubah (The repentance)
9. ಅತ್ತೌಬಃ(ಪಶ್ಚಾತ್ತಾಪ)
9:1
بَرَاءَةٌ مِنَ اللَّهِ وَرَسُولِهِ إِلَى الَّذِينَ عَاهَدْتُمْ مِنَ الْمُشْرِكِينَ ۞
ನೀವು ಕರಾರು ಮಾಡಿಕೊಂಡಿರುವ ಬಹುದೇವಾರಾಧಕರ ವಿಷಯದಲ್ಲಿ, ಅಲ್ಲಾಹ್ ಮತ್ತು ಅವನ ದೂತರ ವತಿಯಿಂದ (ನಿಮಗೆ) ಹೊಣೆ ಮುಕ್ತಿಯನ್ನು ಘೋಷಿಸಲಾಗುತ್ತಿದೆ.
9:2
فَسِيحُوا فِي الْأَرْضِ أَرْبَعَةَ أَشْهُرٍ وَاعْلَمُوا أَنَّكُمْ غَيْرُ مُعْجِزِي اللَّهِ ۙ وَأَنَّ اللَّهَ مُخْزِي الْكَافِرِينَ ۞
(ಬಹು ದೇವಾರಾಧಕರೇ,) ನಾಲ್ಕು ತಿಂಗಳ ಕಾಲ ನೀವು ಭೂಮಿಯಲ್ಲಿ ಧಾರಾಳ ತಿರುಗಾಡಿರಿ. ಆದರೆ ನಿಮಗೆ ತಿಳಿದಿರಲಿ - ಅಲ್ಲಾಹನನ್ನು ಸೋಲಿಸಲು ನಿಮ್ಮಿಂದಾಗದು. ನಿಜವಾಗಿ ಅಲ್ಲಾಹನೇ ಧಿಕ್ಕಾರಿಗಳನ್ನು ಅಪಮಾನಿತರಾಗಿಸಲಿದ್ದಾನೆ.
9:3
وَأَذَانٌ مِنَ اللَّهِ وَرَسُولِهِ إِلَى النَّاسِ يَوْمَ الْحَجِّ الْأَكْبَرِ أَنَّ اللَّهَ بَرِيءٌ مِنَ الْمُشْرِكِينَ ۙ وَرَسُولُهُ ۚ فَإِنْ تُبْتُمْ فَهُوَ خَيْرٌ لَكُمْ ۖ وَإِنْ تَوَلَّيْتُمْ فَاعْلَمُوا أَنَّكُمْ غَيْرُ مُعْجِزِي اللَّهِ ۗ وَبَشِّرِ الَّذِينَ كَفَرُوا بِعَذَابٍ أَلِيمٍ ۞
ಮಹಾನ್ ಹಜ್ಜ್ ಯಾತ್ರೆಯ ದಿನ, ಅಲ್ಲಾಹ್ ಮತ್ತು ಅವನ ದೂತರ ಕಡೆಯಿಂದ, ಸಕಲ ಮಾನವರಿಗಾಗಿರುವ ಘೋಷಣೆ ಇದು; ಬಹುದೇವಾರಾಧಕರ ವಿಷಯದಲ್ಲಿ ಅಲ್ಲಾಹ್ ಮತ್ತು ಅವನ ದೂತರು ಹೊಣೆ ಮುಕ್ತರು. ನೀವೀಗ ಪಶ್ಚಾತ್ತಾಪ ಪಟ್ಟರೆ ಅದು ನಿಮ್ಮ ಪಾಲಿಗೆ ಉತ್ತಮ. ಇನ್ನು ನೀವು ಕಡೆಗಣಿಸುವಿರಾದರೆ, ನಿಮಗೆ ತಿಳಿದಿರಲಿ; ಅಲ್ಲಾಹನನ್ನು ಸೋಲಿಸಲು ನಿಮ್ಮಿಂದಾಗದು. ಧಿಕ್ಕಾರಿಗಳಿಗೆ ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ.
9:4
إِلَّا الَّذِينَ عَاهَدْتُمْ مِنَ الْمُشْرِكِينَ ثُمَّ لَمْ يَنْقُصُوكُمْ شَيْئًا وَلَمْ يُظَاهِرُوا عَلَيْكُمْ أَحَدًا فَأَتِمُّوا إِلَيْهِمْ عَهْدَهُمْ إِلَىٰ مُدَّتِهِمْ ۚ إِنَّ اللَّهَ يُحِبُّ الْمُتَّقِينَ ۞
ಬಹುದೇವಾರಾಧಕರ ಪೈಕಿ ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕುಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು ಅವುಗಳ ಅವಧಿಯ ತನಕ ಪೂರ್ತಿಗೊಳಿಸಿರಿ. ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಠರನ್ನು ಪ್ರೀತಿಸುತ್ತಾನೆ.
9:5
فَإِذَا انْسَلَخَ الْأَشْهُرُ الْحُرُمُ فَاقْتُلُوا الْمُشْرِكِينَ حَيْثُ وَجَدْتُمُوهُمْ وَخُذُوهُمْ وَاحْصُرُوهُمْ وَاقْعُدُوا لَهُمْ كُلَّ مَرْصَدٍ ۚ فَإِنْ تَابُوا وَأَقَامُوا الصَّلَاةَ وَآتَوُا الزَّكَاةَ فَخَلُّوا سَبِيلَهُمْ ۚ إِنَّ اللَّهَ غَفُورٌ رَحِيمٌ ۞
(ನಾಲ್ಕು) ಪವಿತ್ರ ತಿಂಗಳುಗಳು ಮುಗಿದಾಗ, ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ.* ತರುವಾಯ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸುವವರಾದರೆ ಮತ್ತು ಝಕಾತ್‌ಅನ್ನು ಪಾವತಿಸಿದರೆ, ಅವರಿಗೆ ಅವರ ದಾರಿಯನ್ನು ಬಿಟ್ಟು ಕೊಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
9:6
وَإِنْ أَحَدٌ مِنَ الْمُشْرِكِينَ اسْتَجَارَكَ فَأَجِرْهُ حَتَّىٰ يَسْمَعَ كَلَامَ اللَّهِ ثُمَّ أَبْلِغْهُ مَأْمَنَهُ ۚ ذَٰلِكَ بِأَنَّهُمْ قَوْمٌ لَا يَعْلَمُونَ ۞
ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮ ಆಶ್ರಯ ಬಯಸಿದರೆ, ಅವನು ಅಲ್ಲಾಹನ ವಾಣಿಯನ್ನು ಕೇಳುವ ತನಕ ಅವನಿಗೆ ಆಶ್ರಯ ನೀಡಿರಿ . ಆ ಬಳಿಕ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಇದೇಕೆಂದರೆ, ಅವರು ಅರಿವಿಲ್ಲದವರು.
9:7
كَيْفَ يَكُونُ لِلْمُشْرِكِينَ عَهْدٌ عِنْدَ اللَّهِ وَعِنْدَ رَسُولِهِ إِلَّا الَّذِينَ عَاهَدْتُمْ عِنْدَ الْمَسْجِدِ الْحَرَامِ ۖ فَمَا اسْتَقَامُوا لَكُمْ فَاسْتَقِيمُوا لَهُمْ ۚ إِنَّ اللَّهَ يُحِبُّ الْمُتَّقِينَ ۞
ನೀವು ‘ಮಸ್ಜಿದುಲ್ ಹರಾಮ್’ನ ಬಳಿ (‘ಹುದೈಬಿಯಾ’ದಲ್ಲಿ) ಕರಾರು ಮಾಡಿಕೊಂಡಿರುವವರ ಹೊರತು (ಇತರ) ಬಹುದೇವಾರಾಧಕರಿಗೆ ಅಲ್ಲಾಹನ ಜೊತೆಗಾಗಲಿ ಅವನ ದೂತರ ಜೊತೆಗಾಗಲಿ ಯಾವುದೇ ಕರಾರು ಇರಲು ಹೇಗೆ ತಾನೇ ಸಾಧ್ಯ? ಅವರು (ಕರಾರು ಮಾಡಿಕೊಂಡವರು) ನಿಮ್ಮ ಜೊತೆ ನೇರವಾಗಿರುವ ತನಕ (ನಿಮ್ಮ ಜೊತೆಗಿನ ಕರಾರನ್ನು ಪಾಲಿಸುತ್ತಿರುವ ತನಕ) ನೀವು ಅವರ ಜೊತೆ ನೇರವಾಗಿರಿ. ಖಂಡಿತವಾಗಿಯೂ ಅಲ್ಲಾಹನು, ಸತ್ಯನಿಷ್ಠರನ್ನು ಪ್ರೀತಿಸುತ್ತಾನೆ.
9:8
كَيْفَ وَإِنْ يَظْهَرُوا عَلَيْكُمْ لَا يَرْقُبُوا فِيكُمْ إِلًّا وَلَا ذِمَّةً ۚ يُرْضُونَكُمْ بِأَفْوَاهِهِمْ وَتَأْبَىٰ قُلُوبُهُمْ وَأَكْثَرُهُمْ فَاسِقُونَ ۞
ಹೇಗಿದೆ (ಅವರ ಈ ಧೋರಣೆ)? ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ಸಿಕ್ಕಿದರೆ ಅವರು ನಿಮ್ಮ ಜೊತೆಗಿನ ಬಾಂಧವ್ಯವನ್ನಾಗಲಿ, ಕರಾರನ್ನಾಗಲಿ ಲೆಕ್ಕಿಸುವವರಲ್ಲ. ಅವರು ಕೇವಲ ತಮ್ಮ ಮಾತುಗಳಿಂದ ನಿಮ್ಮನ್ನು ಒಲಿಸಿಕೊಳ್ಳುತ್ತಾರೆ. ಆದರೆ ಅವರ ಮನಸ್ಸುಗಳು ಒಪ್ಪುವುದಿಲ್ಲ. ಅವರಲ್ಲಿ ಹೆಚ್ಚಿನವರು ವಚನ ಭ್ರಷ್ಟರಾಗಿದ್ದಾರೆ.
9:9
اشْتَرَوْا بِآيَاتِ اللَّهِ ثَمَنًا قَلِيلًا فَصَدُّوا عَنْ سَبِيلِهِ ۚ إِنَّهُمْ سَاءَ مَا كَانُوا يَعْمَلُونَ ۞
ಅವರು ಅಲ್ಲಾಹನ ವಚನಗಳನ್ನು ತೀರಾ ಸಣ್ಣ ಬೆಲೆಗೆ ಮಾರುತ್ತಾರೆ ಮತ್ತು (ಜನರನ್ನು) ಅವನ ಮಾರ್ಗದಿಂದ ತಡೆಯುತ್ತಾರೆ. ಖಂಡಿತವಾಗಿಯೂ ಅವರು ಮಾಡುತ್ತಿರುವುದೆಲ್ಲವೂ ತೀರಾ ಕೆಟ್ಟದಾಗಿದೆ.
9:10
لَا يَرْقُبُونَ فِي مُؤْمِنٍ إِلًّا وَلَا ذِمَّةً ۚ وَأُولَٰئِكَ هُمُ الْمُعْتَدُونَ ۞
ಯಾವುದೇ ವಿಶ್ವಾಸಿಯ ವಿಷಯದಲ್ಲಿ ಅವರು ಬಾಂಧವ್ಯವನ್ನಾಗಲಿ ಕರಾರನ್ನಾಗಲಿ ಲೆಕ್ಕಿಸುವುದಿಲ್ಲ. ಅವರೇ ನಿಜವಾಗಿ ಎಲ್ಲೆ ಮೀರುವವರು.
9:11
فَإِنْ تَابُوا وَأَقَامُوا الصَّلَاةَ وَآتَوُا الزَّكَاةَ فَإِخْوَانُكُمْ فِي الدِّينِ ۗ وَنُفَصِّلُ الْآيَاتِ لِقَوْمٍ يَعْلَمُونَ ۞
ಇಷ್ಟಾಗಿಯೂ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸಿದರೆ ಮತ್ತು ಝಕಾತ್ ಅನ್ನು ಪಾವತಿಸಿದರೆ, ಅವರು ಧರ್ಮದಲ್ಲಿ ನಿಮ್ಮ ಸಹೋದರರು. ನಾವಂತು, ಅರಿಯುವವರಿಗಾಗಿ ನಮ್ಮ ವಚನಗಳನ್ನು ವಿವರಿಸುತ್ತೇವೆ.
9:12
وَإِنْ نَكَثُوا أَيْمَانَهُمْ مِنْ بَعْدِ عَهْدِهِمْ وَطَعَنُوا فِي دِينِكُمْ فَقَاتِلُوا أَئِمَّةَ الْكُفْرِ ۙ إِنَّهُمْ لَا أَيْمَانَ لَهُمْ لَعَلَّهُمْ يَنْتَهُونَ ۞
ಇನ್ನು ಅವರು, ಕರಾರು ಮಾಡಿಕೊಂಡ ಬಳಿಕ ತಮ್ಮ ಪ್ರತಿಜ್ಞೆಗಳನ್ನು ಮುರಿದರೆ ಮತ್ತು ಧರ್ಮದ ವಿಷಯದಲ್ಲಿ ನಿಮ್ಮನ್ನು ನಿಂದಿಸಿದರೆ, ಸತ್ಯಧಿಕ್ಕಾರದ ನೇತಾರರ ವಿರುದ್ಧ ಸಮರ ಹೂಡಿರಿ. ಅವರ ಪ್ರತಿಜ್ಞೆಗಳಂತು ಖಂಡಿತ ನಂಬಲರ್ಹವಲ್ಲ. (ಯುದ್ಧಕ್ಕೆ ಅಂಜಿ) ಅವರು ದೂರ ಉಳಿಯಬಹುದು.
9:13
أَلَا تُقَاتِلُونَ قَوْمًا نَكَثُوا أَيْمَانَهُمْ وَهَمُّوا بِإِخْرَاجِ الرَّسُولِ وَهُمْ بَدَءُوكُمْ أَوَّلَ مَرَّةٍ ۚ أَتَخْشَوْنَهُمْ ۚ فَاللَّهُ أَحَقُّ أَنْ تَخْشَوْهُ إِنْ كُنْتُمْ مُؤْمِنِينَ ۞
ನೀವೇನು, ತಮ್ಮ ಕರಾರನ್ನು ಮುರಿದ ಹಾಗೂ ದೇವದೂತರನ್ನು (ನಾಡಿನಿಂದ) ಹೊರ ಹಾಕಲು ನಿರ್ಧರಿಸಿದ ಹಾಗೂ ನಿಮಗಿಂತ ಮೊದಲು ತಾವೇ (ಆಕ್ರಮಣ) ಆರಂಭಿಸಿದ ಜನರ ವಿರುದ್ಧ ಯುದ್ಧ ಮಾಡುವುದಿಲ್ಲವೇ? ನೀವೇನು ಅವರಿಗೆ ಅಂಜುವಿರಾ? ನಿಜವಾಗಿ, ನೀವು ವಿಶ್ವಾಸಿಗಳಾಗಿದ್ದರೆ, ನಿಮ್ಮ ಅಂಜಿಕೆಗೆ ಅಲ್ಲಾಹನೇ ಹೆಚ್ಚು ಅರ್ಹನು.
9:14
قَاتِلُوهُمْ يُعَذِّبْهُمُ اللَّهُ بِأَيْدِيكُمْ وَيُخْزِهِمْ وَيَنْصُرْكُمْ عَلَيْهِمْ وَيَشْفِ صُدُورَ قَوْمٍ مُؤْمِنِينَ ۞
ನೀವು ಅವರ (ಶತ್ರು ಪಡೆಗಳ) ವಿರುದ್ಧ ಹೋರಾಡಿರಿ. ಅಲ್ಲಾಹನು ನಿಮ್ಮ ಕೈಗಳಿಂದ ಅವರನ್ನು ಶಿಕ್ಷಿಸುವನು ಮತ್ತು ಅವರನ್ನು ಅಪಮಾನಿಸುವನು. ಹಾಗೆಯೇ ಅವನು ಅವರ ವಿರುದ್ಧ ನಿಮಗೆ ನೆರವಾಗುವನು ಮತ್ತು ವಿಶ್ವಾಸಿಗಳ ಮನಸ್ಸುಗಳನ್ನು ತಣಿಸಿಬಿಡುವನು.
9:15
وَيُذْهِبْ غَيْظَ قُلُوبِهِمْ ۗ وَيَتُوبُ اللَّهُ عَلَىٰ مَنْ يَشَاءُ ۗ وَاللَّهُ عَلِيمٌ حَكِيمٌ ۞
ಅವನು ಅವರ ಮನಸ್ಸುಗಳಲ್ಲಿರುವ ಕ್ರೋಧವನ್ನು ನಿವಾರಿಸುವನು. ಇನ್ನು, ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹನು ಅರಿವುಳ್ಳವನೂ ಯುಕ್ತಿವಂತನೂ ಆಗಿರುತ್ತಾನೆ.
9:16
أَمْ حَسِبْتُمْ أَنْ تُتْرَكُوا وَلَمَّا يَعْلَمِ اللَّهُ الَّذِينَ جَاهَدُوا مِنْكُمْ وَلَمْ يَتَّخِذُوا مِنْ دُونِ اللَّهِ وَلَا رَسُولِهِ وَلَا الْمُؤْمِنِينَ وَلِيجَةً ۚ وَاللَّهُ خَبِيرٌ بِمَا تَعْمَلُونَ ۞
ಅಲ್ಲಾಹನು, ನಿಮ್ಮ ಪೈಕಿ ಹೋರಾಡುವವರು ಯಾರು ಮತ್ತು ಅಲ್ಲಾಹ್, ಅವನ ದೂತ ಹಾಗೂ ವಿಶ್ವಾಸಿಗಳ ಹೊರತು ಯಾರನ್ನೂ ತಮ್ಮ ಪೋಷಕರಾಗಿಸಿಕೊಳ್ಳದವರು ಯಾರು, ಎಂಬುದನ್ನು ಅರಿಯದೆಯೇ ನಿಮ್ಮನ್ನು ಬಿಟ್ಟು ಬಿಡಲಾಗುವುದೆಂದು ನೀವು ನಂಬಿರುವಿರಾ? ನೀವು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು.
9:17
مَا كَانَ لِلْمُشْرِكِينَ أَنْ يَعْمُرُوا مَسَاجِدَ اللَّهِ شَاهِدِينَ عَلَىٰ أَنْفُسِهِمْ بِالْكُفْرِ ۚ أُولَٰئِكَ حَبِطَتْ أَعْمَالُهُمْ وَفِي النَّارِ هُمْ خَالِدُونَ ۞
ಬಹುದೇವಾರಾಧಕರು, ತಾವು ದೇವ ಧಿಕ್ಕಾರಿಗಳೆಂಬುದಕ್ಕೆ ತಾವೇ ಸಾಕ್ಷಿಗಳಾಗಿರುವಾಗ, ಅಲ್ಲಾಹನ ಭವನಗಳ (ಮಸೀದಿಗಳ) ಅಧಿಕಾರಿಗಳಾಗಲು ಅವರು ಅರ್ಹರಲ್ಲ. ಅವರ ಕರ್ಮಗಳೆಲ್ಲಾ ವ್ಯರ್ಥವಾದವು. ಅವರು ನರಕಾಗ್ನಿಯಲ್ಲಿ ಸದಾಕಾಲ ಇರುವರು.
9:18
إِنَّمَا يَعْمُرُ مَسَاجِدَ اللَّهِ مَنْ آمَنَ بِاللَّهِ وَالْيَوْمِ الْآخِرِ وَأَقَامَ الصَّلَاةَ وَآتَى الزَّكَاةَ وَلَمْ يَخْشَ إِلَّا اللَّهَ ۖ فَعَسَىٰ أُولَٰئِكَ أَنْ يَكُونُوا مِنَ الْمُهْتَدِينَ ۞
ಅಲ್ಲಾಹನಲ್ಲಿ ಹಾಗೂ ಅಂತಿಮ ದಿನದಲ್ಲಿ ನಂಬಿಕೆ ಉಳ್ಳವರು, ನಮಾಝ್‌ಅನ್ನು ಪಾಲಿಸುವವರು, ಝಕಾತ್‌ಅನ್ನು ಪಾವತಿಸುವವರು ಮತ್ತು ಅಲ್ಲಾಹನ ಹೊರತು ಇನ್ನಾರನ್ನೂ ಅಂಜದವರು ಮಾತ್ರ ಅಲ್ಲಾಹನ ಭವನಗಳ ಅಧಿಕಾರಿಗಳಾಗಬಲ್ಲರು. ಅಂಥವರು ಸರಿದಾರಿಯಲ್ಲಿರುವರೆಂದು ನಿರೀಕ್ಷಿಸಬಹುದು.
9:19
۞ أَجَعَلْتُمْ سِقَايَةَ الْحَاجِّ وَعِمَارَةَ الْمَسْجِدِ الْحَرَامِ كَمَنْ آمَنَ بِاللَّهِ وَالْيَوْمِ الْآخِرِ وَجَاهَدَ فِي سَبِيلِ اللَّهِ ۚ لَا يَسْتَوُونَ عِنْدَ اللَّهِ ۗ وَاللَّهُ لَا يَهْدِي الْقَوْمَ الظَّالِمِينَ ۞
ನೀವೇನು, ಹಜ್ಜ್ ಯಾತ್ರಿಕರಿಗೆ ನೀರು ಕುಡಿಸುವುದು ಮತ್ತು ‘ಮಸ್ಜಿದುಲ್ ಹರಾಮ್’ನ ಅಧಿಕಾರಿಗಳಾಗಿರುವುದು (ಇಷ್ಟನ್ನು ಮಾಡಿದವನು) - ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ವಿಶ್ವಾಸವಿಟ್ಟಾತನಿಗೆ ಹಾಗೂ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದಾತನಿಗೆ ಸಮಾನನೆಂದು ನಂಬಿರುವಿರಾ? ಅಲ್ಲಾಹನ ದೃಷ್ಟಿಯಲ್ಲಿ ಅವು ಸಮಾನವಾಗಲಾರವು. ಅಲ್ಲಾಹನಂತು, ಅಕ್ರಮಿಗಳಿಗೆ ಮಾರ್ಗದರ್ಶನ ನೀಡುವುದಿಲ್ಲ.
9:20
الَّذِينَ آمَنُوا وَهَاجَرُوا وَجَاهَدُوا فِي سَبِيلِ اللَّهِ بِأَمْوَالِهِمْ وَأَنْفُسِهِمْ أَعْظَمُ دَرَجَةً عِنْدَ اللَّهِ ۚ وَأُولَٰئِكَ هُمُ الْفَائِزُونَ ۞
ವಿಶ್ವಾಸವಿಟ್ಟವರು, ವಲಸೆ ಹೋದವರು ಮತ್ತು ತಮ್ಮ ಸಂಪತ್ತು ಹಾಗೂ ಜೀವಗಳೊಂದಿಗೆ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವರು - ಅವರಿಗೆ ಅಲ್ಲಾಹನ ಬಳಿ ಉನ್ನತ ಸ್ಥಾನವಿದೆ. ಅವರೇ ನಿಜವಾಗಿ ವಿಜಯಿಗಳು.
9:21
يُبَشِّرُهُمْ رَبُّهُمْ بِرَحْمَةٍ مِنْهُ وَرِضْوَانٍ وَجَنَّاتٍ لَهُمْ فِيهَا نَعِيمٌ مُقِيمٌ ۞
ಅವರ ಒಡೆಯನು ಅವರಿಗೆ ತನ್ನ ವತಿಯಿಂದ ಅನುಗ್ರಹದ, ಮೆಚ್ಚುಗೆಯ ಹಾಗೂ ಸ್ವರ್ಗೋದ್ಯಾನಗಳ ಶುಭವಾರ್ತೆ ನೀಡುತ್ತಾನೆ. ಅಲ್ಲಿ ಅವರಿಗೆ ಶಾಶ್ವತ ಕೊಡುಗೆಗಳಿವೆ.
9:22
خَالِدِينَ فِيهَا أَبَدًا ۚ إِنَّ اللَّهَ عِنْدَهُ أَجْرٌ عَظِيمٌ ۞
ಅವರು ಸದಾಕಾಲ ಅದರಲ್ಲಿರುವರು. ಖಂಡಿತವಾಗಿಯೂ ಅಲ್ಲಾಹನ ಬಳಿ ಮಹಾನ್ ಪ್ರತಿಫಲವಿದೆ.
9:23
يَا أَيُّهَا الَّذِينَ آمَنُوا لَا تَتَّخِذُوا آبَاءَكُمْ وَإِخْوَانَكُمْ أَوْلِيَاءَ إِنِ اسْتَحَبُّوا الْكُفْرَ عَلَى الْإِيمَانِ ۚ وَمَنْ يَتَوَلَّهُمْ مِنْكُمْ فَأُولَٰئِكَ هُمُ الظَّالِمُونَ ۞
ವಿಶ್ವಾಸಿಗಳೇ, ನಿಮ್ಮ ತಂದೆ - ತಾತಂದಿರು ಮತ್ತು ನಿಮ್ಮ ಸಹೋದರರು, ವಿಶ್ವಾಸಕ್ಕೆದುರಾಗಿ ಧಿಕ್ಕಾರವನ್ನೇ ಪ್ರೀತಿಸುವವರಾಗಿದ್ದರೆ, ಅವರನ್ನು ನೀವು ನಿಮ್ಮ ಪೋಷಕರಾಗಿ ಪರಿಗಣಿಸಬೇಡಿ. ನಿಮ್ಮ ಪೈಕಿ, ಅವರನ್ನು ಪರಮ ಆಪ್ತರಾಗಿಸಿಕೊಂಡವರೇ ಅಕ್ರಮಿಗಳು.
9:24
قُلْ إِنْ كَانَ آبَاؤُكُمْ وَأَبْنَاؤُكُمْ وَإِخْوَانُكُمْ وَأَزْوَاجُكُمْ وَعَشِيرَتُكُمْ وَأَمْوَالٌ اقْتَرَفْتُمُوهَا وَتِجَارَةٌ تَخْشَوْنَ كَسَادَهَا وَمَسَاكِنُ تَرْضَوْنَهَا أَحَبَّ إِلَيْكُمْ مِنَ اللَّهِ وَرَسُولِهِ وَجِهَادٍ فِي سَبِيلِهِ فَتَرَبَّصُوا حَتَّىٰ يَأْتِيَ اللَّهُ بِأَمْرِهِ ۗ وَاللَّهُ لَا يَهْدِي الْقَوْمَ الْفَاسِقِينَ ۞
ಹೇಳಿರಿ; ಒಂದು ವೇಳೆ ನಿಮ್ಮ ತಂದೆ - ತಾತಂದಿರು, ನಿಮ್ಮ ಪುತ್ರರು, ನಿಮ್ಮ ಸಹೋದರರು, ನಿಮ್ಮ ಪತ್ನಿಯರು, ನಿಮ್ಮ ಬಂಧುಗಳು, ನೀವು ಸಂಪಾದಿಸಿರುವ ಸಂಪತ್ತು, ನಷ್ಟವಾದೀತೆಂದು ನೀವು ಅಂಜುವ ವ್ಯಾಪಾರ ಮತ್ತು ನೀವು ಪ್ರೀತಿಸುವ ನಿವಾಸಗಳು - ನಿಮಗೆ ಅಲ್ಲಾಹನಿಗಿಂತ, ಅವನ ದೂತರಿಗಿಂತ ಮತ್ತು ಅವನ ಮಾರ್ಗದಲ್ಲಿನ ಹೋರಾಟಕ್ಕಿಂತ ಪ್ರಿಯವಾಗಿದ್ದರೆ - ಅಲ್ಲಾಹನು ತನ್ನ ಆದೇಶವನ್ನು ಪ್ರಕಟಿಸುವ ತನಕ ಕಾಯಿರಿ. ಅಲ್ಲಾಹನು ವಿದ್ರೋಹಿಗಳಿಗೆ ಸರಿದಾರಿ ತೋರುವುದಿಲ್ಲ.
9:25
لَقَدْ نَصَرَكُمُ اللَّهُ فِي مَوَاطِنَ كَثِيرَةٍ ۙ وَيَوْمَ حُنَيْنٍ ۙ إِذْ أَعْجَبَتْكُمْ كَثْرَتُكُمْ فَلَمْ تُغْنِ عَنْكُمْ شَيْئًا وَضَاقَتْ عَلَيْكُمُ الْأَرْضُ بِمَا رَحُبَتْ ثُمَّ وَلَّيْتُمْ مُدْبِرِينَ ۞
ಈ ಹಿಂದೆ ಹಲವು ರಣರಂಗಗಳಲ್ಲಿ ಅಲ್ಲಾಹನು ನಿಮಗೆ ನೆರವಾಗಿರುವನು. ‘ಹುನೈನ್’ನ ದಿನ-ನೀವು ನಿಮ್ಮ ಸಂಖ್ಯಾಬಲದ ಕುರಿತು ಸಂತುಷ್ಟರಾಗಿದ್ದಿರಿ. ಆದರೆ ಅದು (ಸಂಖ್ಯಾಬಲ) ನಿಮಗೆ ಯಾವ ಹಿತವನ್ನೂ ಮಾಡಲಿಲ್ಲ ಮತ್ತು ಭೂಮಿಯು ತನ್ನೆಲ್ಲಾ ವೈಶಾಲ್ಯದ ಹೊರತಾಗಿಯೂ ನಿಮ್ಮ ಪಾಲಿಗೆ ತೀರಾ ಸೀಮಿತವಾಗಿ ಬಿಟ್ಟಿತು. ಕೊನೆಗೆ ನೀವು ಬೆನ್ನು ತೋರಿಸಿ ಪಲಾಯನ ಮಾಡಿದಿರಿ.
9:26
ثُمَّ أَنْزَلَ اللَّهُ سَكِينَتَهُ عَلَىٰ رَسُولِهِ وَعَلَى الْمُؤْمِنِينَ وَأَنْزَلَ جُنُودًا لَمْ تَرَوْهَا وَعَذَّبَ الَّذِينَ كَفَرُوا ۚ وَذَٰلِكَ جَزَاءُ الْكَافِرِينَ ۞
ಕೊನೆಗೆ ಅಲ್ಲಾಹನು ತನ್ನ ದೂತರಿಗೆ ಹಾಗೂ ವಿಶ್ವಾಸಿಗಳಿಗೆ ತನ್ನ ಕಡೆಯಿಂದ ಸಾಂತ್ವನವನ್ನು ಇಳಿಸಿಕೊಟ್ಟನು ಮತ್ತು ನೀವು ಕಾಣದ ಪಡೆಗಳನ್ನು ಇಳಿಸಿ ಧಿಕ್ಕಾರಿಗಳನ್ನು ಶಿಕ್ಷಿಸಿದನು. ಇದುವೇ ಧಿಕ್ಕಾರಿಗಳಿಗಿರುವ ಪ್ರತಿಫಲ.
9:27
ثُمَّ يَتُوبُ اللَّهُ مِنْ بَعْدِ ذَٰلِكَ عَلَىٰ مَنْ يَشَاءُ ۗ وَاللَّهُ غَفُورٌ رَحِيمٌ ۞
ತರುವಾಯ ಅಲ್ಲಾಹನು ತಾನಿಚ್ಛಿಸಿದವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.
9:28
يَا أَيُّهَا الَّذِينَ آمَنُوا إِنَّمَا الْمُشْرِكُونَ نَجَسٌ فَلَا يَقْرَبُوا الْمَسْجِدَ الْحَرَامَ بَعْدَ عَامِهِمْ هَٰذَا ۚ وَإِنْ خِفْتُمْ عَيْلَةً فَسَوْفَ يُغْنِيكُمُ اللَّهُ مِنْ فَضْلِهِ إِنْ شَاءَ ۚ إِنَّ اللَّهَ عَلِيمٌ حَكِيمٌ ۞
ವಿಶ್ವಾಸಿಗಳೇ, ಬಹುದೇವಾರಾಧಕರು ಮಲಿನರು. ಈ ವರ್ಷದ ಬಳಿಕ ಅವರು ‘ಮಸ್ಜಿದುಲ್ ಹರಾಮ್’ನ ಹತ್ತಿರ ಬರಬಾರದು. ನಿಮಗೆ ದಾರಿದ್ರ್ಯದ ಭಯವಿದ್ದರೆ, ಅಲ್ಲಾಹನಿಚ್ಛಿಸಿದರೆ, ಅವನು ತನ್ನ ಅನುಗ್ರಹದಿಂದ ನಿಮ್ಮನ್ನು ಸಂಪನ್ನರಾಗಿಸುವನು. ಖಂಡಿತವಾಗಿಯೂ ಅವನು ಎಲ್ಲವನ್ನೂ ಅರಿತಿರುವವನೂ ಯುಕ್ತಿವಂತನೂ ಆಗಿರುವನು.
9:29
قَاتِلُوا الَّذِينَ لَا يُؤْمِنُونَ بِاللَّهِ وَلَا بِالْيَوْمِ الْآخِرِ وَلَا يُحَرِّمُونَ مَا حَرَّمَ اللَّهُ وَرَسُولُهُ وَلَا يَدِينُونَ دِينَ الْحَقِّ مِنَ الَّذِينَ أُوتُوا الْكِتَابَ حَتَّىٰ يُعْطُوا الْجِزْيَةَ عَنْ يَدٍ وَهُمْ صَاغِرُونَ ۞
ಗ್ರಂಥನೀಡಲ್ಪಟ್ಟವರ ಪೈಕಿ, ಅಲ್ಲಾಹನಲ್ಲಾಗಲಿ ಅಂತಿಮ ದಿನದಲ್ಲಾಗಲಿ ವಿಶ್ವಾಸವಿಲ್ಲದ ಹಾಗೂ ಅಲ್ಲಾಹ್ ಮತ್ತವನ ದೂತರು ನಿಷೇದಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸದ ಹಾಗೂ ಸತ್ಯ ಧರ್ಮವನ್ನು ಧರ್ಮವೆಂದು ಸ್ವೀಕರಿಸದವರ ವಿರುದ್ಧ ಯುದ್ಧ ಸಾರಿರಿ. ಅವರು ಅಧೀನರಾಗಿ, ತಮ್ಮ ಕೈಯಿಂದ ಜಿಝಿಯ (ತೆರಿಗೆ) ಪಾವತಿಸುವ ತನಕ.*
9:30
وَقَالَتِ الْيَهُودُ عُزَيْرٌ ابْنُ اللَّهِ وَقَالَتِ النَّصَارَى الْمَسِيحُ ابْنُ اللَّهِ ۖ ذَٰلِكَ قَوْلُهُمْ بِأَفْوَاهِهِمْ ۖ يُضَاهِئُونَ قَوْلَ الَّذِينَ كَفَرُوا مِنْ قَبْلُ ۚ قَاتَلَهُمُ اللَّهُ ۚ أَنَّىٰ يُؤْفَكُونَ ۞
ಯಹೂದಿಗಳು, ಉಝೈರ್ ಅಲ್ಲಾಹನ ಪುತ್ರರೆಂದು ಹೇಳುತ್ತಾರೆ ಮತ್ತು ಕ್ರೈಸ್ತರು, ಮಸೀಹರು ಅಲ್ಲಾಹನ ಪುತ್ರರೆಂದು ಹೇಳುತ್ತಾರೆ. ಇದು ಕೇವಲ ಅವರ ಬಾಯಿ ಮಾತು. ಅವರು ಗತಕಾಲದ ಧಿಕ್ಕಾರಿಗಳ ಮಾತನ್ನೇ ಅನುಕರಿಸುತ್ತಿದ್ದಾರೆ. ಅವರ ಮೇಲೆ ಅಲ್ಲಾಹನ ಪ್ರಹಾರವಿದೆ. ಅವರು ದಾರಿಗೆಟ್ಟು ಅದೆಲ್ಲಿ ಅಲೆಯುತ್ತಿದ್ದಾರೆ?
9:31
اتَّخَذُوا أَحْبَارَهُمْ وَرُهْبَانَهُمْ أَرْبَابًا مِنْ دُونِ اللَّهِ وَالْمَسِيحَ ابْنَ مَرْيَمَ وَمَا أُمِرُوا إِلَّا لِيَعْبُدُوا إِلَٰهًا وَاحِدًا ۖ لَا إِلَٰهَ إِلَّا هُوَ ۚ سُبْحَانَهُ عَمَّا يُشْرِكُونَ ۞
ಅವರು ಅಲ್ಲಾಹನ ಹೊರತಾಗಿ, ತಮ್ಮ ವಿದ್ವಾಂಸರನ್ನು, ಸನ್ಯಾಸಿಗಳನ್ನು ಮತ್ತು ಮರ್ಯಮರ ಪುತ್ರ ಮಸೀಹರನ್ನು ದೇವರಾಗಿಸಿಕೊಂಡಿದ್ದಾರೆ. ನಿಜವಾಗಿ ಅವರಿಗೆ, ಒಬ್ಬ ದೇವರ ಹೊರತು ಬೇರೆ ಯಾರನ್ನೂ ಪೂಜಿಸಬಾರದೆಂದು ಆದೇಶಿಸಲಾಗಿದೆ. ಅವನ ಹೊರತು ಬೇರೆ ಯಾರೂ ಪೂಜಾರ್ಹರಲ್ಲ. ಅವರು ಪಾಲುಗೊಳಿಸುವ ಎಲ್ಲದರಿಂದ ಅವನು ಸಂಪೂರ್ಣ ಮುಕ್ತನು.
9:32
يُرِيدُونَ أَنْ يُطْفِئُوا نُورَ اللَّهِ بِأَفْوَاهِهِمْ وَيَأْبَى اللَّهُ إِلَّا أَنْ يُتِمَّ نُورَهُ وَلَوْ كَرِهَ الْكَافِرُونَ ۞
ಅವರು ಅಲ್ಲಾಹನ ಪ್ರಕಾಶವನ್ನು ತಮ್ಮ ಬಾಯಿಯಿಂದ ಊದಿ ನಂದಿಸ ಬಯಸುತ್ತಾರೆ. ಅಲ್ಲಾಹನು ಮಾತ್ರ ತನ್ನ ಪ್ರಕಾಶವನ್ನು ಪರಿಪೂರ್ಣವಾಗಿ ವ್ಯಾಪಿಸದೆ ಬಿಡಲಾರನು - ಧಿಕ್ಕಾರಿಗಳಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ.
9:33
هُوَ الَّذِي أَرْسَلَ رَسُولَهُ بِالْهُدَىٰ وَدِينِ الْحَقِّ لِيُظْهِرَهُ عَلَى الدِّينِ كُلِّهِ وَلَوْ كَرِهَ الْمُشْرِكُونَ ۞
ಅವನೇ, ತನ್ನ ದೂತನನ್ನು ಮಾರ್ಗದರ್ಶನದೊಂದಿಗೆ ಹಾಗೂ ಎಲ್ಲ ಧರ್ಮಗಳಿಗೆದುರಾಗಿ ಬೆಳಗಲು ಸತ್ಯ ಧರ್ಮದೊಂದಿಗೆ ಕಳುಹಿಸಿದವನು. ಬಹುದೇವಾರಾಧಕರಿಗೆ ಅದು ಎಷ್ಟೇ ಅಪ್ರಿಯವಾಗಿದ್ದರೂ ಸರಿಯೇ.
9:34
۞ يَا أَيُّهَا الَّذِينَ آمَنُوا إِنَّ كَثِيرًا مِنَ الْأَحْبَارِ وَالرُّهْبَانِ لَيَأْكُلُونَ أَمْوَالَ النَّاسِ بِالْبَاطِلِ وَيَصُدُّونَ عَنْ سَبِيلِ اللَّهِ ۗ وَالَّذِينَ يَكْنِزُونَ الذَّهَبَ وَالْفِضَّةَ وَلَا يُنْفِقُونَهَا فِي سَبِيلِ اللَّهِ فَبَشِّرْهُمْ بِعَذَابٍ أَلِيمٍ ۞
ವಿಶ್ವಾಸಿಗಳೇ, ಖಂಡಿತವಾಗಿಯೂ ಧರ್ಮಗುರುಗಳು ಮತ್ತು ಸನ್ಯಾಸಿಗಳಲ್ಲಿ ಹೆಚ್ಚಿನವರು ಜನರ ಸಂಪತ್ತನ್ನು ಅಕ್ರಮ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. (ಅವರಿಗೂ) ಚಿನ್ನ ಹಾಗೂ ಬೆಳ್ಳಿಯನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚುಮಾಡದೆ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವವರಿಗೂ ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ.
9:35
يَوْمَ يُحْمَىٰ عَلَيْهَا فِي نَارِ جَهَنَّمَ فَتُكْوَىٰ بِهَا جِبَاهُهُمْ وَجُنُوبُهُمْ وَظُهُورُهُمْ ۖ هَٰذَا مَا كَنَزْتُمْ لِأَنْفُسِكُمْ فَذُوقُوا مَا كُنْتُمْ تَكْنِزُونَ ۞
ಅವುಗಳನ್ನು (ಆ ಚಿನ್ನ, ಬೆಳ್ಳಿಗಳನ್ನು) ನರಕಾಗ್ನಿಯಲ್ಲಿ ಉರಿಸಲಾಗುವ ದಿನ, ಅದರಿಂದ ಅವರ ಹಣೆಗಳಿಗೆ, ಮಗ್ಗುಲುಗಳಿಗೆ ಮತ್ತು ಬೆನ್ನುಗಳಿಗೆ ಬರೆ ಎಳೆಯಲಾಗುವುದು - ಇದುವೇ ನೀವು ನಿಮಗಾಗಿ ಸಂಗ್ರಹಿಸಿಟ್ಟ ಸಂಪತ್ತು . ಇದೀಗ ಸವಿಯಿರಿ ನೀವು ಸಂಗ್ರಹಿಸಿದ್ದನ್ನು.
9:36
إِنَّ عِدَّةَ الشُّهُورِ عِنْدَ اللَّهِ اثْنَا عَشَرَ شَهْرًا فِي كِتَابِ اللَّهِ يَوْمَ خَلَقَ السَّمَاوَاتِ وَالْأَرْضَ مِنْهَا أَرْبَعَةٌ حُرُمٌ ۚ ذَٰلِكَ الدِّينُ الْقَيِّمُ ۚ فَلَا تَظْلِمُوا فِيهِنَّ أَنْفُسَكُمْ ۚ وَقَاتِلُوا الْمُشْرِكِينَ كَافَّةً كَمَا يُقَاتِلُونَكُمْ كَافَّةً ۚ وَاعْلَمُوا أَنَّ اللَّهَ مَعَ الْمُتَّقِينَ ۞
ಖಂಡಿತವಾಗಿಯೂ ಅಲ್ಲಾಹನ ಬಳಿ, (ವರ್ಷದಲ್ಲಿ) ತಿಂಗಳುಗಳ ಸಂಖ್ಯೆ ಹನ್ನೆರಡು. ಅವನು, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದ ದಿನವೇ ಹಾಗೆಂದು ವಿಧಿಸಿರುವನು. ಅವುಗಳಲ್ಲಿ ನಾಲ್ಕು, ಪಾವನ ತಿಂಗಳುಗಳು. ಇದುವೇ ಸರಿಯಾದ ಧರ್ಮ. ಆ ತಿಂಗಳುಗಳಲ್ಲಿ ನೀವು ಸ್ವತಃ ನಿಮ್ಮ ಮೇಲೆ ಅಕ್ರಮವೆಸಗಬೇಡಿ. ಮತ್ತು ಬಹುದೇವಾರಾಧಕರೆಲ್ಲ ಒಂದಾಗಿ ನಿಮ್ಮ ವಿರುದ್ಧ ಹೋರಾಡುವಂತೆ, ನೀವೆಲ್ಲ ಒಂದಾಗಿ ಅವರ ವಿರುದ್ಧ ಹೋರಾಡಿರಿ. ನಿಮಗೆ ತಿಳಿದಿರಲಿ, ಅಲ್ಲಾಹನು ಧರ್ಮನಿಷ್ಠರ ಜೊತೆಗಿದ್ದಾನೆ.
9:37
إِنَّمَا النَّسِيءُ زِيَادَةٌ فِي الْكُفْرِ ۖ يُضَلُّ بِهِ الَّذِينَ كَفَرُوا يُحِلُّونَهُ عَامًا وَيُحَرِّمُونَهُ عَامًا لِيُوَاطِئُوا عِدَّةَ مَا حَرَّمَ اللَّهُ فَيُحِلُّوا مَا حَرَّمَ اللَّهُ ۚ زُيِّنَ لَهُمْ سُوءُ أَعْمَالِهِمْ ۗ وَاللَّهُ لَا يَهْدِي الْقَوْمَ الْكَافِرِينَ ۞
ಪವಿತ್ರ ತಿಂಗಳ ಮುಂದೂಡಿಕೆಯು, ಧಿಕ್ಕಾರದ (ಧೋರಣೆಯ) ಮೇಲಿನ ಇನ್ನೊಂದು ಹೆಚ್ಚಳವಾಗಿದೆ. ಈ ಮೂಲಕ ಧಿಕ್ಕಾರಿಗಳು ದಾರಿಗೇಡಿತನಕ್ಕೆ ತುತ್ತಾಗಿದ್ದಾರೆ. ಅಲ್ಲಾಹನು ನಿಷಿದ್ಧಗೊಳಿಸಿರುವ ತಿಂಗಳುಗಳ ಎಣಿಕೆ ಪೂರ್ತಿಗೊಳಿಸಲಿಕ್ಕಾಗಿ, ಅವರು ಆ ತಿಂಗಳನ್ನು ಒಂದು ವರ್ಷ ಸಮ್ಮತವಾಗಿಸುತ್ತಾರೆ ಮತ್ತು ಇನ್ನೊಂದು ವರ್ಷ ಅದನ್ನು ನಿಷಿದ್ಧವಾಗಿಸುತ್ತಾರೆ. ಈ ರೀತಿ ಅವರು ಅಲ್ಲಾಹನು ನಿಷಿದ್ಧಗೊಳಿಸಿರುವುದನ್ನು ಸಮ್ಮತಗೊಳಿಸುತ್ತಾರೆ. ಅವರ ಪಾಲಿಗೆ ಅವರ ಕೆಟ್ಟ ಕರ್ಮಗಳನ್ನು ಚಂದಗಾಣಿಸಲಾಗಿದೆ. ಅಲ್ಲಾಹನು ಧಿಕ್ಕಾರಿಗಳಿಗೆ ಸರಿ ದಾರಿಯನ್ನು ತೋರಿಸುವುದಿಲ್ಲ.
9:38
يَا أَيُّهَا الَّذِينَ آمَنُوا مَا لَكُمْ إِذَا قِيلَ لَكُمُ انْفِرُوا فِي سَبِيلِ اللَّهِ اثَّاقَلْتُمْ إِلَى الْأَرْضِ ۚ أَرَضِيتُمْ بِالْحَيَاةِ الدُّنْيَا مِنَ الْآخِرَةِ ۚ فَمَا مَتَاعُ الْحَيَاةِ الدُّنْيَا فِي الْآخِرَةِ إِلَّا قَلِيلٌ ۞
ವಿಶ್ವಾಸಿಗಳೇ, ನಿಮಗೇನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಹೊರಡಿರಿ ಎಂದು ನಿಮ್ಮೊಡನೆ ಹೇಳಲಾದಾಗ ನೀವು ನೆಲಕ್ಕೆ ಅಂಟಿರುತ್ತೀರಿ. ನೀವೇನು ಪರಲೋಕದೆದುರು, ಇಹಲೋಕದ ಜೀವನವನ್ನೇ ಮೆಚ್ಚಿಕೊಂಡಿರುವಿರಾ? ನಿಜವಾಗಿ ಪರಲೋಕಕ್ಕೆ ಹೋಲಿಸಿದರೆ ಇಹಲೋಕದ ಬದುಕು ತೀರಾ ಕ್ಷುಲ್ಲಕ.
9:39
إِلَّا تَنْفِرُوا يُعَذِّبْكُمْ عَذَابًا أَلِيمًا وَيَسْتَبْدِلْ قَوْمًا غَيْرَكُمْ وَلَا تَضُرُّوهُ شَيْئًا ۗ وَاللَّهُ عَلَىٰ كُلِّ شَيْءٍ قَدِيرٌ ۞
ನೀವು (ಅಲ್ಲಾಹನ ಮಾರ್ಗದಲ್ಲಿ) ಹೊರಡದಿದ್ದರೆ, ಅವನು ನಿಮಗೆ ಯಾತನಾಮಯ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಬದಲಿಗೆ ಬೇರೊಂದು ಜನಾಂಗವನ್ನು ಮುಂದೆ ತರುವನು. ಅವನಿಗೆ ಯಾವ ನಷ್ಟವನ್ನುಂಟುಮಾಡಲಿಕ್ಕೂ ನಿಮ್ಮಿಂದಾಗದು. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
9:40
إِلَّا تَنْصُرُوهُ فَقَدْ نَصَرَهُ اللَّهُ إِذْ أَخْرَجَهُ الَّذِينَ كَفَرُوا ثَانِيَ اثْنَيْنِ إِذْ هُمَا فِي الْغَارِ إِذْ يَقُولُ لِصَاحِبِهِ لَا تَحْزَنْ إِنَّ اللَّهَ مَعَنَا ۖ فَأَنْزَلَ اللَّهُ سَكِينَتَهُ عَلَيْهِ وَأَيَّدَهُ بِجُنُودٍ لَمْ تَرَوْهَا وَجَعَلَ كَلِمَةَ الَّذِينَ كَفَرُوا السُّفْلَىٰ ۗ وَكَلِمَةُ اللَّهِ هِيَ الْعُلْيَا ۗ وَاللَّهُ عَزِيزٌ حَكِيمٌ ۞
ನೀವು ಅವರಿಗೆ (ದೇವದೂತರಿಗೆ) ನೆರವಾಗದಿದ್ದರೆ, (ನಿಮಗೆ ತಿಳಿದಿರಲಿ,) ಧಿಕ್ಕಾರಿಗಳು ಅವರನ್ನು (ನಾಡಿನಿಂದ) ಹೊರಹಾಕಿದಾಗ ಅಲ್ಲಾಹನು ಅವರಿಗೆ ನೆರವಾಗಿರುವನು. (ಅಂದು) ಅವರು (ದೂತರು) ಇಬ್ಬರಲ್ಲಿ ಎರಡನೆಯವರಾಗಿದ್ದರು. ಅವರಿಬ್ಬರೂ ಗುಹೆಯಲ್ಲಿದ್ದಾಗ, ಅವರು (ದೂತರು) ತಮ್ಮ ಸಂಗಾತಿಯೊಡನೆ, ‘‘ಅಂಜಬೇಡ, ಖಂಡಿತವಾಗಿಯೂ ಅಲ್ಲಾಹನು ನಮ್ಮ ಜೊತೆಗಿದ್ದಾನೆ.’’ಎಂದಿದ್ದರು. ಕೊನೆಗೆ ಅಲ್ಲಾಹನು ಅವರಿಗೆ ಮನಃಶಾಂತಿಯನ್ನು ಇಳಿಸಿಕೆೊಟ್ಟನು ಮತ್ತು ನಿಮಗೆ ಕಾಣಿಸದ ಪಡೆಗಳ ಮೂಲಕ ಅವರಿಗೆ ಬಲ ಒದಗಿಸಿದನು. ಅಲ್ಲದೆ ಅವನು ಧಿಕ್ಕಾರಿಗಳ ಮಾತನ್ನು ಸೋಲಿಸಿದನು, ಅಲ್ಲಾಹನ ಮಾತೇ ಮೇಲಾಯಿತು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.
9:41
انْفِرُوا خِفَافًا وَثِقَالًا وَجَاهِدُوا بِأَمْوَالِكُمْ وَأَنْفُسِكُمْ فِي سَبِيلِ اللَّهِ ۚ ذَٰلِكُمْ خَيْرٌ لَكُمْ إِنْ كُنْتُمْ تَعْلَمُونَ ۞
ಹಗುರವಾಗಿ ಅಥವಾ ಭಾರವಾಗಿ ನೀವು ಹೊರಡಿರಿ, ಮತ್ತು ನಿಮ್ಮ ಸಂಪತ್ತುಗಳನ್ನೂ ಜೀವಗಳನ್ನೂ ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಅರಿಯುವವರಾಗಿದ್ದರೆ, ಇದುವೇ ನಿಮ್ಮ ಪಾಲಿಗೆ ಉತ್ತಮವಾಗಿದೆ.
9:42
لَوْ كَانَ عَرَضًا قَرِيبًا وَسَفَرًا قَاصِدًا لَاتَّبَعُوكَ وَلَٰكِنْ بَعُدَتْ عَلَيْهِمُ الشُّقَّةُ ۚ وَسَيَحْلِفُونَ بِاللَّهِ لَوِ اسْتَطَعْنَا لَخَرَجْنَا مَعَكُمْ يُهْلِكُونَ أَنْفُسَهُمْ وَاللَّهُ يَعْلَمُ إِنَّهُمْ لَكَاذِبُونَ ۞
ಲಾಭವು ತಕ್ಷಣದ್ದಾಗಿದ್ದರೆ ಮತ್ತು ಪ್ರಯಾಣವು ಸುಲಭದ್ದಾಗಿದ್ದರೆ ಅವರು ಖಂಡಿತ ನಿಮ್ಮ ಜೊತೆ ಬರುತ್ತಿದ್ದರು. ಆದರೆ ಅವರ ಪಾಲಿಗೆ ದಾರಿಯು ತುಂಬಾ ಉದ್ದವಾಯಿತು. ಇದೀಗ ಅವರು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ‘‘ನಮಗೆ ಸಾಧ್ಯವಿದ್ದಿದ್ದರೆ ನಾವು ಖಂಡಿತ ನಿಮ್ಮ ಜೊತೆ ಬರುತ್ತಿದ್ದೆವು’’ ಎಂದು ಹೇಳುವರು, ನಿಜವಾಗಿ ಅವರು ತಮ್ಮನ್ನು ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಅವರು ಸುಳ್ಳು ಹೇಳುವವರೆಂಬುದು ಅಲ್ಲಾಹನಿಗೆ ತಿಳಿದಿದೆ.
9:43
عَفَا اللَّهُ عَنْكَ لِمَ أَذِنْتَ لَهُمْ حَتَّىٰ يَتَبَيَّنَ لَكَ الَّذِينَ صَدَقُوا وَتَعْلَمَ الْكَاذِبِينَ ۞
(ದೂತರೇ,) ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. (ಅವರಲ್ಲಿ) ಸತ್ಯವಂತರು ಯಾರು ಎಂಬುದು ನಿಮಗೆ ಸ್ಪಷ್ಟವಾಗುವ ಮುನ್ನ ಹಾಗೂ ಸುಳ್ಳರನ್ನು ನೀವು ಅರಿಯುವ ಮುನ್ನ ನೀವು ಅವರಿಗೆ ಅನುಮತಿ ನೀಡಿದ್ದೇಕೆ?
9:44
لَا يَسْتَأْذِنُكَ الَّذِينَ يُؤْمِنُونَ بِاللَّهِ وَالْيَوْمِ الْآخِرِ أَنْ يُجَاهِدُوا بِأَمْوَالِهِمْ وَأَنْفُسِهِمْ ۗ وَاللَّهُ عَلِيمٌ بِالْمُتَّقِينَ ۞
ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರು ತಮ್ಮ ಸಂಪತ್ತುಗಳನ್ನೂ ಜೀವಗಳನ್ನೂ ತೊಡಗಿಸಿ ಹೋರಾಡುವ ವಿಷಯದಲ್ಲಿ ನಿಮ್ಮ ಬಳಿ ವಿನಾಯಿತಿ ಕೇಳುವುದಿಲ್ಲ. ಧರ್ಮನಿಷ್ಠರನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
9:45
إِنَّمَا يَسْتَأْذِنُكَ الَّذِينَ لَا يُؤْمِنُونَ بِاللَّهِ وَالْيَوْمِ الْآخِرِ وَارْتَابَتْ قُلُوبُهُمْ فَهُمْ فِي رَيْبِهِمْ يَتَرَدَّدُونَ ۞
ನಿಮ್ಮ ಬಳಿ ವಿನಾಯಿತಿಯನ್ನು ಅಪೇಕ್ಷಿಸುವವರು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಲ್ಲದವರಾಗಿದ್ದಾರೆ. ಅವರ ಮನಸ್ಸುಗಳು ಸಂಶಯ ಪೀಡಿತವಾಗಿವೆ. ಅವರು ತಮ್ಮ ಸಂಶಯದಲ್ಲೇ ದಾರಿತಪ್ಪಿ ಅಲೆಯುತ್ತಿದ್ದಾರೆ.
9:46
۞ وَلَوْ أَرَادُوا الْخُرُوجَ لَأَعَدُّوا لَهُ عُدَّةً وَلَٰكِنْ كَرِهَ اللَّهُ انْبِعَاثَهُمْ فَثَبَّطَهُمْ وَقِيلَ اقْعُدُوا مَعَ الْقَاعِدِينَ ۞
ಅವರು ನಿಜಕ್ಕೂ ಹೊರಡ ಬಯಸಿದ್ದರೆ, ಅದಕ್ಕಾಗಿ ಏನಾದರೂ ಸಾಧನ ಸಿದ್ಧ ಪಡಿಸುತ್ತಿದ್ದರು. ಅವರು ಎದ್ದೇಳುವುದು ಅಲ್ಲಾಹನಿಗೆ ಅಪ್ರಿಯವಾಗಿತ್ತು. ಅವನು ಅವರನ್ನು ತಡೆದನು ಮತ್ತು ಕುಳಿತಿರುವವರ ಜೊತೆ ಕುಳಿತಿರಿ ಎಂದನು.
9:47
لَوْ خَرَجُوا فِيكُمْ مَا زَادُوكُمْ إِلَّا خَبَالًا وَلَأَوْضَعُوا خِلَالَكُمْ يَبْغُونَكُمُ الْفِتْنَةَ وَفِيكُمْ سَمَّاعُونَ لَهُمْ ۗ وَاللَّهُ عَلِيمٌ بِالظَّالِمِينَ ۞
ಒಂದು ವೇಳೆ ಅವರು ನಿಮ್ಮ ಜೊತೆಗೆ ಹೊರಟಿದ್ದರೂ, ಅವರು ನಿಮ್ಮ ಪಾಲಿಗೆ ಗೊಂದಲವನ್ನಷ್ಟೇ ಹೆಚ್ಚಿಸುತ್ತಿದ್ದರು ಮತ್ತು ನಿಮ್ಮ ನಡುವೆ ಹತಾಶೆಯನ್ನು ಬಿತ್ತಲಿಕ್ಕೆಂದೇ ಆಚೀಚೆ ಓಡಾಡುತ್ತಿದ್ದರು. ನಿಮ್ಮಲ್ಲಿ, ಅವರಿಗಾಗಿ ಕೇಳುವವರು (ಅವರ ಗೂಢಚರರು) ಇದ್ದಾರೆ. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.
9:48
لَقَدِ ابْتَغَوُا الْفِتْنَةَ مِنْ قَبْلُ وَقَلَّبُوا لَكَ الْأُمُورَ حَتَّىٰ جَاءَ الْحَقُّ وَظَهَرَ أَمْرُ اللَّهِ وَهُمْ كَارِهُونَ ۞
ಈ ಹಿಂದೆಯೂ ಅವರು ಗೊಂದಲ ಉಂಟುಮಾಡಲು ಮತ್ತು ನಿಮಗಾಗಿ ಬಿಕ್ಕಟ್ಟುಗಳನ್ನು ಸೃಷ್ಟಿಸಲು ಶ್ರಮಿಸಿದ್ದರು. ಕೊನೆಗೆ ಸತ್ಯವು ಬಂದು ಬಿಟ್ಟಿತು, ಅಲ್ಲಾಹನ ಆದೇಶವು ಸ್ಪಷ್ಟವಾಗಿ ಪ್ರಕಟವಾಯಿತು ಮತ್ತು ಅವರು ತೀರಾ ಅತೃಪ್ತರಾದರು.
9:49
وَمِنْهُمْ مَنْ يَقُولُ ائْذَنْ لِي وَلَا تَفْتِنِّي ۚ أَلَا فِي الْفِتْنَةِ سَقَطُوا ۗ وَإِنَّ جَهَنَّمَ لَمُحِيطَةٌ بِالْكَافِرِينَ ۞
ಅವರಲ್ಲಿ (ಒಬ್ಬನು), ನನಗೆ ಅನುಮತಿ ನೀಡಿರಿ ಮತ್ತು ನನ್ನನ್ನು ಪರೀಕ್ಷಿಸಬೇಡಿ ಎನ್ನುತ್ತಾನೆ. ಅವರೇನು ಈಗಾಗಲೇ ಪರೀಕ್ಷೆಗೆ ಗುರಿಯಾಗಿಲ್ಲವೇ? ಖಂಡಿತವಾಗಿಯೂ ನರಕವು ಧಿಕ್ಕಾರಿಗಳನ್ನು ಸುತ್ತುವರಿದಿದೆ.
9:50
إِنْ تُصِبْكَ حَسَنَةٌ تَسُؤْهُمْ ۖ وَإِنْ تُصِبْكَ مُصِيبَةٌ يَقُولُوا قَدْ أَخَذْنَا أَمْرَنَا مِنْ قَبْلُ وَيَتَوَلَّوْا وَهُمْ فَرِحُونَ ۞
ನಿಮಗೇನಾದರೂ ಹಿತವಾದರೆ ಅವರಿಗೆ ಅದು ಅಪ್ರಿಯವೆನಿಸುತ್ತದೆ. ಇನ್ನು ನಿಮಗೇನಾದರೂ ಸಂಕಟ ಉಂಟಾದರೆ ಅವರು, ‘ನಾವು ಈ ಮೊದಲೇ ನಮಗೆ ಬೇಕಾದ ಮುಂಜಾಗ್ರತೆ ಮಾಡಿಕೆೊಂಡಿದ್ದೆವು’ ಎಂದು ಸಂಭ್ರಮಿಸುತ್ತಾ ಮರಳಿ ಹೋಗುತ್ತಾರೆ.
9:51
قُلْ لَنْ يُصِيبَنَا إِلَّا مَا كَتَبَ اللَّهُ لَنَا هُوَ مَوْلَانَا ۚ وَعَلَى اللَّهِ فَلْيَتَوَكَّلِ الْمُؤْمِنُونَ ۞
ಹೇಳಿರಿ; ‘‘ಅಲ್ಲಾಹನು ನಮಗಾಗಿ ಬರೆದಿಟ್ಟಿರುವುದರ ಹೊರತು ಬೇರಾವ ಸಂಕಟವೂ ನಮಗೆ ಎದುರಾಗುವುದಿಲ್ಲ. ಅವನೇ ನಮ್ಮ ರಕ್ಷಕನು. ಧರ್ಮ ವಿಶ್ವಾಸಿಗಳು ಅಲ್ಲಾಹನಲ್ಲೇ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ.’’
9:52
قُلْ هَلْ تَرَبَّصُونَ بِنَا إِلَّا إِحْدَى الْحُسْنَيَيْنِ ۖ وَنَحْنُ نَتَرَبَّصُ بِكُمْ أَنْ يُصِيبَكُمُ اللَّهُ بِعَذَابٍ مِنْ عِنْدِهِ أَوْ بِأَيْدِينَا ۖ فَتَرَبَّصُوا إِنَّا مَعَكُمْ مُتَرَبِّصُونَ ۞
ಹೇಳಿರಿ; ನಮ್ಮ ಕುರಿತಂತೆ ನೀವು ಎರಡು ಒಳಿತುಗಳ ಪೈಕಿ ಒಂದನ್ನಲ್ಲದೆ ಬೇರೇನನ್ನಾದರೂ ನಿರೀಕ್ಷಿಸಬಲ್ಲಿರಾ? ನಿಮ್ಮ ಕುರಿತಂತೆ ನಮ್ಮ ನಿರೀಕ್ಷೆ ಇಷ್ಟೇ; ಒಂದೋ ಅಲ್ಲಾಹನು ತನ್ನ ಕಡೆಯಿಂದ ಶಿಕ್ಷೆ ನೀಡುವ ಮೂಲಕ ನಿಮ್ಮನ್ನು ಪೀಡಿಸುವನು, ಅಥವಾ, ಅವನು ನಮ್ಮ ಕೈಗಳಿಂದ ನಿಮ್ಮನ್ನು ದಂಡಿಸುವನು. ನೀವೀಗ ಕಾಯಿರಿ. ನಿಮ್ಮ ಜೊತೆ ನಾವೂ ಕಾಯುವೆವು.
9:53
قُلْ أَنْفِقُوا طَوْعًا أَوْ كَرْهًا لَنْ يُتَقَبَّلَ مِنْكُمْ ۖ إِنَّكُمْ كُنْتُمْ قَوْمًا فَاسِقِينَ ۞
ಹೇಳಿರಿ; ನೀವು ಮನಸಾರೆ ಖರ್ಚು ಮಾಡಿದರೂ, ಒಲ್ಲದ ಮನಸ್ಸಿನಿಂದ ಖರ್ಚು ಮಾಡಿದರೂ ಅದನ್ನು ನಿಮ್ಮಿಂದ ಸ್ವೀಕರಿಸಲಾಗದು. ಏಕೆಂದರೆ ನೀವು ಅವಿಧೇಯರು.
9:54
وَمَا مَنَعَهُمْ أَنْ تُقْبَلَ مِنْهُمْ نَفَقَاتُهُمْ إِلَّا أَنَّهُمْ كَفَرُوا بِاللَّهِ وَبِرَسُولِهِ وَلَا يَأْتُونَ الصَّلَاةَ إِلَّا وَهُمْ كُسَالَىٰ وَلَا يُنْفِقُونَ إِلَّا وَهُمْ كَارِهُونَ ۞
ಅವರು ಮಾಡಿದ ಖರ್ಚು ಅವರಿಂದ ಸ್ವೀಕೃತವಾಗದೆ ಇರುವುದಕ್ಕೆ ಕಾರಣವಿಷ್ಟೇ; ಅವರು ಅಲ್ಲಾಹ್ ಮತ್ತು ಅವನ ರಸೂಲರನ್ನು ಧಿಕ್ಕರಿಸುತ್ತಾರೆ, ತೀರಾ ಆಲಸ್ಯದೊಂದಿಗೆ ನಮಾಝ್‌ಗೆ ಬರುತ್ತಾರೆ ಮತ್ತು ತೀರಾ ಒಲ್ಲದ ಮನಸ್ಸಿನಿಂದ ಖರ್ಚು ಮಾಡುತ್ತಾರೆ.
9:55
فَلَا تُعْجِبْكَ أَمْوَالُهُمْ وَلَا أَوْلَادُهُمْ ۚ إِنَّمَا يُرِيدُ اللَّهُ لِيُعَذِّبَهُمْ بِهَا فِي الْحَيَاةِ الدُّنْيَا وَتَزْهَقَ أَنْفُسُهُمْ وَهُمْ كَافِرُونَ ۞
ಅವರ ಸಂಪತ್ತುಗಳು ಮತ್ತು ಅವರ ಸಂತಾನಗಳು ನಿಮ್ಮನ್ನು ಬೆರಗುಗೊಳಿಸದಿರಲಿ. ಅಲ್ಲಾಹನು ಆ ಮೂಲಕ ಇಹಲೋಕ ಜೀವನದಲ್ಲಿ ಅವರನ್ನು ಶಿಕ್ಷಿಸ ಬಯಸುತ್ತಾನೆ. ಮತ್ತು ಅವರು ಧಿಕ್ಕಾರಿಗಳಾಗಿರುವ ಸ್ಥಿತಿಯಲ್ಲೇ ಅವರ ಪ್ರಾಣಗಳು ಹೊರಟು ಹೋಗಬೇಕೆಂದು ಬಯಸುತ್ತಾನೆ.
9:56
وَيَحْلِفُونَ بِاللَّهِ إِنَّهُمْ لَمِنْكُمْ وَمَا هُمْ مِنْكُمْ وَلَٰكِنَّهُمْ قَوْمٌ يَفْرَقُونَ ۞
ಅವರು, ತಾವು ನಿಸ್ಸಂದೇಹವಾಗಿಯೂ ನಿಮ್ಮವರೆಂದು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ಆದರೆ ಅವರು ನಿಮ್ಮವರಲ್ಲ. ನಿಜವಾಗಿ ಅವರು ಭೀತರಾಗಿದ್ದಾರೆ.
9:57
لَوْ يَجِدُونَ مَلْجَأً أَوْ مَغَارَاتٍ أَوْ مُدَّخَلًا لَوَلَّوْا إِلَيْهِ وَهُمْ يَجْمَحُونَ ۞
ಅವರಿಗೆ ಒಂದು ಅಭಯ ಸ್ಥಾನವಾಗಲಿ, ಗುಹೆಯಾಗಲಿ, ಅಡಗುದಾಣವಾಗಲಿ ದೊರೆತಿದ್ದರೆ ಅವರೆಲ್ಲಾ ತುರ್ತಾಗಿ ಅದರೆಡೆಗೆ ಧಾವಿಸಿಬಿಡುತ್ತಿದ್ದರು.
9:58
وَمِنْهُمْ مَنْ يَلْمِزُكَ فِي الصَّدَقَاتِ فَإِنْ أُعْطُوا مِنْهَا رَضُوا وَإِنْ لَمْ يُعْطَوْا مِنْهَا إِذَا هُمْ يَسْخَطُونَ ۞
(ದೂತರೇ,) ಅವರಲ್ಲೊಬ್ಬನು, ದಾನಗಳ ವಿಷಯದಲ್ಲಿ ನಿಮ್ಮನ್ನು ಮೂದಲಿಸುತ್ತಾನೆ. ಅದರಲ್ಲಿ ಅವರಿಗೊಂದು ಪಾಲು ಸಿಕ್ಕಿದರೆ ಅವರು ಸಂತುಷ್ಟರಾಗುತ್ತಾರೆ. ಇನ್ನು, ಅದರಿಂದ ಅವರಿಗೇನೂ ಸಿಗದಿದ್ದರೆ ಅವರು ಕೋಪಗೊಳ್ಳುತ್ತಾರೆ.
9:59
وَلَوْ أَنَّهُمْ رَضُوا مَا آتَاهُمُ اللَّهُ وَرَسُولُهُ وَقَالُوا حَسْبُنَا اللَّهُ سَيُؤْتِينَا اللَّهُ مِنْ فَضْلِهِ وَرَسُولُهُ إِنَّا إِلَى اللَّهِ رَاغِبُونَ ۞
ಅವರು, ತಮಗೆ ಅಲ್ಲಾಹನು ಮತ್ತವನ ದೂತರು ನೀಡಿದ್ದರಲ್ಲಿ ತೃಪ್ತರಾಗಿ, ‘‘ನಮಗೆ ಅಲ್ಲಾಹನೇ ಸಾಕು. ಮುಂದೆಯೂ ಅಲ್ಲಾಹನು ತನ್ನ ಅನುಗ್ರಹದಿಂದ ನಮಗೆ ನೀಡುವನು ಮತ್ತು ಅವನ ದೂತರೂ ನೀಡುವರು. ನಾವು ಖಂಡಿತ ಅಲ್ಲಾಹನಲ್ಲಿ ಒಲವು ಉಳ್ಳವರಾಗಿದ್ದೇವೆ’’ - ಎಂದಿದ್ದರೆ ಎಷ್ಟು ಚೆನ್ನಾಗಿತ್ತು.
9:60
۞ إِنَّمَا الصَّدَقَاتُ لِلْفُقَرَاءِ وَالْمَسَاكِينِ وَالْعَامِلِينَ عَلَيْهَا وَالْمُؤَلَّفَةِ قُلُوبُهُمْ وَفِي الرِّقَابِ وَالْغَارِمِينَ وَفِي سَبِيلِ اللَّهِ وَابْنِ السَّبِيلِ ۖ فَرِيضَةً مِنَ اللَّهِ ۗ وَاللَّهُ عَلِيمٌ حَكِيمٌ ۞
ನಿಜವಾಗಿ ದಾನಗಳು (ಝಕಾತ್) ಇರುವುದು - ಬಡವರಿಗಾಗಿ, ದೀನರಿಗಾಗಿ, ಅದರ ವಿತರಕರಿಗಾಗಿ, ಯಾರ ಮನ ಒಲಿಸಬೇಕಾಗಿದೆಯೋ ಅವರಿಗಾಗಿ, ಕೊರಳು ಬಿಡಿಸುವುದಕ್ಕಾಗಿ (ದಾಸ್ಯ ವಿಮೋಚನೆಗಾಗಿ), ಸಾಲಗಾರರಿಗಾಗಿ, ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವುದಕ್ಕಾಗಿ ಮತ್ತು ಪ್ರಯಾಣಿಕರಿಗಾಗಿ. ಇದು ಅಲ್ಲಾಹನು ವಿಧಿಸಿರುವ ಕಡ್ಡಾಯ ನಿಯಮ. ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.
9:61
وَمِنْهُمُ الَّذِينَ يُؤْذُونَ النَّبِيَّ وَيَقُولُونَ هُوَ أُذُنٌ ۚ قُلْ أُذُنُ خَيْرٍ لَكُمْ يُؤْمِنُ بِاللَّهِ وَيُؤْمِنُ لِلْمُؤْمِنِينَ وَرَحْمَةٌ لِلَّذِينَ آمَنُوا مِنْكُمْ ۚ وَالَّذِينَ يُؤْذُونَ رَسُولَ اللَّهِ لَهُمْ عَذَابٌ أَلِيمٌ ۞
ಅವರಲ್ಲಿ ಕೆಲವರು ದೂತರನ್ನು ಪೀಡಿಸುತ್ತಾರೆ. ಅವರು ‘‘ಇವರು ದುರ್ಬಲ ಕಿವಿಯ ವ್ಯಕ್ತಿ’’ ಎನ್ನುತ್ತಾರೆ. ಹೇಳಿರಿ; (ಅವರ) ಕಿವಿ ದುರ್ಬಲವಾಗಿರುವುದು ನಿಮ್ಮ ಹಿತಕ್ಕಾಗಿ ಮಾತ್ರ. ಅವರು (ದೂತರು) ಅಲ್ಲಾಹನಲ್ಲಿ ನಂಬಿಕೆ ಉಳ್ಳವರು ಹಾಗೂ ಸತ್ಯವಿಶ್ವಾಸಿಗಳಲ್ಲೂ ನಂಬಿಕೆ ಉಳ್ಳವರು. ನಿಮ್ಮ ಪೈಕಿ ವಿಶ್ವಾಸಿಗಳಾಗಿರುವವರ ಪಾಲಿಗೆ ಅವರು ಅನುಗ್ರಹವಾಗಿದ್ದಾರೆ. ಅಲ್ಲಾಹನ ದೂತರನ್ನು ಪೀಡಿಸುವವರಿಗೆ ಕಠಿಣ ಶಿಕ್ಷೆ ಕಾದಿದೆ.
9:62
يَحْلِفُونَ بِاللَّهِ لَكُمْ لِيُرْضُوكُمْ وَاللَّهُ وَرَسُولُهُ أَحَقُّ أَنْ يُرْضُوهُ إِنْ كَانُوا مُؤْمِنِينَ ۞
ಅವರು ನಿಮ್ಮನ್ನು (ಮುಸ್ಲಿಮರನ್ನು) ಮೆಚ್ಚಿಸಲಿಕ್ಕಾಗಿ ಅಲ್ಲಾಹನ ಆಣೆ ಹಾಕುತ್ತಲಿರುತ್ತಾರೆ. ನಿಜವಾಗಿ, ಅವರು ವಿಶ್ವಾಸಿಗಳಾಗಿದ್ದರೆ (ಅವರಿಗೆ ತಿಳಿದಿರಲಿ;) ಅಲ್ಲಾಹ್ ಮತ್ತು ಅವನ ದೂತರು ಮೆಚ್ಚಿಸಲ್ಪಡುವುದಕ್ಕೆ ಹೆಚ್ಚು ಅರ್ಹರಾಗಿದ್ದಾರೆ.
9:63
أَلَمْ يَعْلَمُوا أَنَّهُ مَنْ يُحَادِدِ اللَّهَ وَرَسُولَهُ فَأَنَّ لَهُ نَارَ جَهَنَّمَ خَالِدًا فِيهَا ۚ ذَٰلِكَ الْخِزْيُ الْعَظِيمُ ۞
ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಘರ್ಷಣೆಗೆ ಇಳಿಯುವವನಿಗಾಗಿ ನರಕಾಗ್ನಿಯು ಖಂಡಿತ ಸಿದ್ಧವಾಗಿದೆ ಮತ್ತು ಅವನು ಅದರಲ್ಲಿ ಸದಾಕಾಲ ಇರುವನೆಂದು ಅವರಿಗೆ ತಿಳಿಯದೇ? ಅದು ನಿಜಕ್ಕೂ ಮಹಾ ಅಪಮಾನವಾಗಿದೆ.
9:64
يَحْذَرُ الْمُنَافِقُونَ أَنْ تُنَزَّلَ عَلَيْهِمْ سُورَةٌ تُنَبِّئُهُمْ بِمَا فِي قُلُوبِهِمْ ۚ قُلِ اسْتَهْزِئُوا إِنَّ اللَّهَ مُخْرِجٌ مَا تَحْذَرُونَ ۞
ತಮ್ಮ ಮನದೊಳಗಿರುವುದನ್ನೆಲ್ಲಾ ಅವರಿಗೆ (ವಿಶ್ವಾಸಿಗಳಿಗೆ) ತಿಳಿಸಿ ಬಿಡುವ ಅಧ್ಯಾಯವೇನಾದರೂ ಇಳಿದು ಬಂದೀತೆಂಬ ಭಯ ಕಪಟಿಗಳಿಗೆ ಇದೆ. ಹೇಳಿರಿ; ನೀವು ಅಪಹಾಸ್ಯ ಮಾಡುತ್ತಲಿರಿ. ನೀವು ಅಂಜುತ್ತಿರುವುದನ್ನು ಅಲ್ಲಾಹನು ಖಂಡಿತ ಬಹಿರಂಗ ಪಡಿಸುವನು.
9:65
وَلَئِنْ سَأَلْتَهُمْ لَيَقُولُنَّ إِنَّمَا كُنَّا نَخُوضُ وَنَلْعَبُ ۚ قُلْ أَبِاللَّهِ وَآيَاتِهِ وَرَسُولِهِ كُنْتُمْ تَسْتَهْزِئُونَ ۞
ನೀವು ಅವರೊಡನೆ ಈ ಕುರಿತು ಕೇಳಿದರೆ, ನಾವಂತು ಕೇವಲ ತಮಾಷೆ ಮಾಡುತ್ತಿದ್ದೆವು ಹಾಗೂ ಆಟವಾಡುತ್ತಿದ್ದೆವು ಎಂದು ಅವರು ಹೇಳುತ್ತಾರೆ. ಹೇಳಿರಿ; ನೀವೇನು ಅಲ್ಲಾಹ್ ಮತ್ತವನ ವಚನಗಳ ಜೊತೆ ಹಾಗೂ ದೂತರ ಜೊತೆ ಅಪಹಾಸ್ಯ ಮಾಡುತ್ತೀರಾ?
9:66
لَا تَعْتَذِرُوا قَدْ كَفَرْتُمْ بَعْدَ إِيمَانِكُمْ ۚ إِنْ نَعْفُ عَنْ طَائِفَةٍ مِنْكُمْ نُعَذِّبْ طَائِفَةً بِأَنَّهُمْ كَانُوا مُجْرِمِينَ ۞
ನೀವಿನ್ನು ನೆಪಗಳನ್ನು ಹುಡುಕಬೇಡಿ. ನೀವು ವಿಶ್ವಾಸಿಗಳಾದ ಬಳಿಕ ಧಿಕ್ಕಾರಿಗಳಾಗಿರುವಿರಿ. ನಾವೀಗ ನಿಮ್ಮಲ್ಲಿನ ಒಂದು ಗುಂಪನ್ನು ಕ್ಷಮಿಸಿದರೂ ಇನ್ನೊಂದು ಗುಂಪನ್ನು ಖಂಡಿತ ಶಿಕ್ಷಿಸುವೆವು - ಏಕೆಂದರೆ ಅವರು ಅಪರಾಧಿಗಳಾಗಿರುವರು.
9:67
الْمُنَافِقُونَ وَالْمُنَافِقَاتُ بَعْضُهُمْ مِنْ بَعْضٍ ۚ يَأْمُرُونَ بِالْمُنْكَرِ وَيَنْهَوْنَ عَنِ الْمَعْرُوفِ وَيَقْبِضُونَ أَيْدِيَهُمْ ۚ نَسُوا اللَّهَ فَنَسِيَهُمْ ۗ إِنَّ الْمُنَافِقِينَ هُمُ الْفَاسِقُونَ ۞
ಕಪಟಿ ಪುರುಷರು ಮತ್ತು ಕಪಟಿ ಸ್ತ್ರೀಯರು ಪರಸ್ಪರ ತುಂಬಾ ಆಪ್ತರು. ಅವರು ಕೆಡುಕನ್ನು ಆದೇಶಿಸುತ್ತಾರೆ ಮತ್ತು ಒಳಿತಿನಿಂದ ತಡೆಯುತ್ತಾರೆ. ಹಾಗೆಯೇ ಅವರು ತಮ್ಮ ಕೈಗಳನ್ನು ಕಟ್ಟಿರುತ್ತಾರೆ (ತೀರಾ ಜಿಪುಣರಾಗಿರುತ್ತಾರೆ). ಅವರು ಅಲ್ಲಾಹನನ್ನು ಮರೆತಿದ್ದಾರೆ ಮತ್ತು ಅಲ್ಲಾಹನು ಅವರನ್ನು ಮರೆತಿದ್ದಾನೆ. ಖಂಡಿತವಾಗಿಯೂ ಕಪಟಿಗಳೇ ನಿಜವಾದ ಅವಿಧೇಯರಾಗಿದ್ದಾರೆ.
9:68
وَعَدَ اللَّهُ الْمُنَافِقِينَ وَالْمُنَافِقَاتِ وَالْكُفَّارَ نَارَ جَهَنَّمَ خَالِدِينَ فِيهَا ۚ هِيَ حَسْبُهُمْ ۚ وَلَعَنَهُمُ اللَّهُ ۖ وَلَهُمْ عَذَابٌ مُقِيمٌ ۞
ಅಲ್ಲಾಹನು ಕಪಟಿ ಪುರುಷರಿಗೆ, ಕಪಟಿ ಸ್ತ್ರೀಯರಿಗೆ ಮತ್ತು ಧರ್ಮ ಧಿಕ್ಕಾರಿಗಳಿಗೆ ನರಕಾಗ್ನಿಯ ವಾಗ್ದಾನ ನೀಡಿರುತ್ತಾನೆ. ಅವರು ಸದಾಕಾಲ ಅದರಲ್ಲೇ ಇರುವರು. ಅವರಿಗೆ ಅದುವೇ ಸಾಕು. ಅವರ ಮೇಲೆ ಅಲ್ಲಾಹನ ಶಾಪವಿದೆ ಮತ್ತು ಅವರಿಗೆ ಶಾಶ್ವತ ಶಿಕ್ಷೆ ಇದೆ.
9:69
كَالَّذِينَ مِنْ قَبْلِكُمْ كَانُوا أَشَدَّ مِنْكُمْ قُوَّةً وَأَكْثَرَ أَمْوَالًا وَأَوْلَادًا فَاسْتَمْتَعُوا بِخَلَاقِهِمْ فَاسْتَمْتَعْتُمْ بِخَلَاقِكُمْ كَمَا اسْتَمْتَعَ الَّذِينَ مِنْ قَبْلِكُمْ بِخَلَاقِهِمْ وَخُضْتُمْ كَالَّذِي خَاضُوا ۚ أُولَٰئِكَ حَبِطَتْ أَعْمَالُهُمْ فِي الدُّنْيَا وَالْآخِرَةِ ۖ وَأُولَٰئِكَ هُمُ الْخَاسِرُونَ ۞
ನಿಮ್ಮ ಹಿಂದಿನವರಂತೆ - ಅವರು ನಿಮಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದರು ಮತ್ತು ನಿಮಗಿಂತ ಹೆಚ್ಚು ಸಂಪತ್ತು ಹಾಗೂ ಸಂತಾನಗಳು ಅವರ ಬಳಿ ಇದ್ದವು. ಅವರು ತಮ್ಮ ಪಾಲನ್ನು ಭೋಗಿಸಿದರು. ಆ ನಿಮ್ಮ ಹಿಂದಿನವರು ತಮ್ಮ ಪಾಲನ್ನು ಭೋಗಿಸಿದಂತೆ, ನೀವು ನಿಮ್ಮ ಪಾಲನ್ನು ಭೋಗಿಸಿದಿರಿ ಮತ್ತು ಅವರಂತೆ ನೀವೂ ವ್ಯರ್ಥ ಚಟುವಟಿಕೆಗಳಲ್ಲಿ ನಿರತರಾಗಿ ಬಿಟ್ಟಿರಿ. ಅವರ ಕರ್ಮಗಳೆಲ್ಲಾ ಇಹಲೋಕದಲ್ಲೂ ಪರಲೋಕದಲ್ಲೂ ವ್ಯರ್ಥವಾದವು. ಅವರೇ ನಿಜವಾಗಿ ನಷ್ಟ ಅನುಭವಿಸುವವರು.
9:70
أَلَمْ يَأْتِهِمْ نَبَأُ الَّذِينَ مِنْ قَبْلِهِمْ قَوْمِ نُوحٍ وَعَادٍ وَثَمُودَ وَقَوْمِ إِبْرَاهِيمَ وَأَصْحَابِ مَدْيَنَ وَالْمُؤْتَفِكَاتِ ۚ أَتَتْهُمْ رُسُلُهُمْ بِالْبَيِّنَاتِ ۖ فَمَا كَانَ اللَّهُ لِيَظْلِمَهُمْ وَلَٰكِنْ كَانُوا أَنْفُسَهُمْ يَظْلِمُونَ ۞
ಅವರ ಹಿಂದಿನ, ನೂಹರ ಜನಾಂಗ, ಆದ್ ಹಾಗೂ ಸಮೂದ್ ಜನಾಂಗ, ಇಬ್ರಾಹೀಮರ ಜನಾಂಗ, ಮದ್‌ಯನ್‌ನವರು ಮತ್ತು ಪಲ್ಲಟಗೊಳಿಸಲಾದ ನಾಡುಗಳ ಸುದ್ದಿಯು ಅವರಿಗೆ ತಲುಪಿಲ್ಲವೇ? ಅವರ ಬಳಿಗೆ ಅವರ ದೇವದೂತರು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರ ಮೇಲೆ ಅಕ್ರಮವೆಸಗಿರಲಿಲ್ಲ. ಅವರು ತಾವೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು.
9:71
وَالْمُؤْمِنُونَ وَالْمُؤْمِنَاتُ بَعْضُهُمْ أَوْلِيَاءُ بَعْضٍ ۚ يَأْمُرُونَ بِالْمَعْرُوفِ وَيَنْهَوْنَ عَنِ الْمُنْكَرِ وَيُقِيمُونَ الصَّلَاةَ وَيُؤْتُونَ الزَّكَاةَ وَيُطِيعُونَ اللَّهَ وَرَسُولَهُ ۚ أُولَٰئِكَ سَيَرْحَمُهُمُ اللَّهُ ۗ إِنَّ اللَّهَ عَزِيزٌ حَكِيمٌ ۞
ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರು ಪರಸ್ಪರ ಪೋಷಕರಾಗಿರುತ್ತಾರೆ. ಅವರು ಒಳಿತನ್ನು ಆದೇಶಿಸುತ್ತಾರೆ ಹಾಗೂ ಕೆಡುಕಿನಿಂದ ತಡೆಯುತ್ತಾರೆ ಮತ್ತು ಅವರು ನಮಾಝ್‌ಅನ್ನು ಪಾಲಿಸುತ್ತಾರೆ ಹಾಗೂ ಝಕಾತ್‌ಅನ್ನು ಪಾವತಿಸುತ್ತಾರೆ. ಹಾಗೆಯೇ ಅವರು ಅಲ್ಲಾಹ್ ಹಾಗೂ ಅವರ ದೂತರ ಆಜ್ಞಾಪಾಲನೆ ಮಾಡುತ್ತಾರೆ. ಅವರ ಮೇಲೆ ಅಲ್ಲಾಹನು ಕರುಣೆ ತೋರುವನು. ಖಂಡಿತವಾಗಿಯೂ ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.
9:72
وَعَدَ اللَّهُ الْمُؤْمِنِينَ وَالْمُؤْمِنَاتِ جَنَّاتٍ تَجْرِي مِنْ تَحْتِهَا الْأَنْهَارُ خَالِدِينَ فِيهَا وَمَسَاكِنَ طَيِّبَةً فِي جَنَّاتِ عَدْنٍ ۚ وَرِضْوَانٌ مِنَ اللَّهِ أَكْبَرُ ۚ ذَٰلِكَ هُوَ الْفَوْزُ الْعَظِيمُ ۞
ಅಲ್ಲಾಹನು ವಿಶ್ವಾಸಿ ಪುರುಷರು ಮತ್ತು ವಿಶ್ವಾಸಿ ಸ್ತ್ರೀಯರಿಗೆ, ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗ ತೋಟಗಳ ವಾಗ್ದಾನ ನೀಡಿರುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. (ಹಾಗೆಯೇ, ಅವರಿಗಾಗಿ) ಶಾಶ್ವತ ತೋಟಗಳಲ್ಲಿ ನಿರ್ಮಲ ನಿವಾಸಗಳಿವೆ. ಇದೆಲ್ಲಕ್ಕಿಂತ ಮಿಗಿಲಾಗಿ - ಅಲ್ಲಾಹನ ಮೆಚ್ಚುಗೆ. ಇದು ನಿಜಕ್ಕೂ ಮಹಾ ವಿಜಯವಾಗಿದೆ.
9:73
يَا أَيُّهَا النَّبِيُّ جَاهِدِ الْكُفَّارَ وَالْمُنَافِقِينَ وَاغْلُظْ عَلَيْهِمْ ۚ وَمَأْوَاهُمْ جَهَنَّمُ ۖ وَبِئْسَ الْمَصِيرُ ۞
ದೂತರೇ, ಧಿಕ್ಕಾರಿಗಳು ಮತ್ತು ಕಪಟಿಗಳ ವಿರುದ್ಧ ಹೋರಾಡಿರಿ ಹಾಗೂ ಅವರ ಪಾಲಿಗೆ ಕಠಿಣರಾಗಿರಿ. ನರಕವೇ ಅವರ ನೆಲೆಯಾಗಿದೆ. ಅದು, ತುಂಬಾ ಕೆಟ್ಟ ನೆಲೆಯಾಗಿದೆ.
9:74
يَحْلِفُونَ بِاللَّهِ مَا قَالُوا وَلَقَدْ قَالُوا كَلِمَةَ الْكُفْرِ وَكَفَرُوا بَعْدَ إِسْلَامِهِمْ وَهَمُّوا بِمَا لَمْ يَنَالُوا ۚ وَمَا نَقَمُوا إِلَّا أَنْ أَغْنَاهُمُ اللَّهُ وَرَسُولُهُ مِنْ فَضْلِهِ ۚ فَإِنْ يَتُوبُوا يَكُ خَيْرًا لَهُمْ ۖ وَإِنْ يَتَوَلَّوْا يُعَذِّبْهُمُ اللَّهُ عَذَابًا أَلِيمًا فِي الدُّنْيَا وَالْآخِرَةِ ۚ وَمَا لَهُمْ فِي الْأَرْضِ مِنْ وَلِيٍّ وَلَا نَصِيرٍ ۞
ತಾವು ಹೇಳಿಲ್ಲವೆಂದು ಅವರು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ನಿಜವಾಗಿ ಅವರು ಧಿಕ್ಕಾರದ ಮಾತನ್ನು ಹೇಳಿದ್ದಾರೆ ಹಾಗೂ ಅವರು ಮುಸ್ಲಿಮರಾದ ಬಳಿಕ ಧಿಕ್ಕಾರಿಗಳಾಗಿದ್ದಾರೆ. ಅವರು, ತಮಗೆ ಸಾಧಿಸಲಾಗದ್ದನ್ನು (ದೂತರ ಹತ್ಯೆಯನ್ನು) ಯೋಜಿಸಿದ್ದರು. ನಿಜವಾಗಿ ಅವರು, ಅಲ್ಲಾಹ್ ಮತ್ತು ಅವನ ದೂತರು ತಮ್ಮ ಔದಾರ್ಯದಿಂದ ಅವರನ್ನು ಸಂಪನ್ನಗೊಳಿಸಿದ್ದಕ್ಕಾಗಿಯಷ್ಟೇ ಪ್ರತೀಕಾರವೆಸಗಿರುವರು. ಇದೀಗ ಅವರು ಪಶ್ಚಾತ್ತಾಪ ಪಟ್ಟರೆ ಅವರಿಗೆ ಹಿತವಾದೀತು. ಅವರು ತಿರುಗಿನಿಂತರೆ ಅಲ್ಲಾಹನು ಅವರಿಗೆ ಈ ಲೋಕದಲ್ಲೂ ಪರಲೋಕದಲ್ಲೂ ಬಹಳ ಕಠಿಣ ಶಿಕ್ಷೆ ನೀಡುವನು. ಭೂಮಿಯಲ್ಲಿ ಅವರಿಗೆ ರಕ್ಷಕನಾಗಿ ಹಾಗೂ ಸಹಾಯಕನಾಗಿ ಯಾರೂ ಸಿಗಲಾರರು.
9:75
۞ وَمِنْهُمْ مَنْ عَاهَدَ اللَّهَ لَئِنْ آتَانَا مِنْ فَضْلِهِ لَنَصَّدَّقَنَّ وَلَنَكُونَنَّ مِنَ الصَّالِحِينَ ۞
ಅವರಲ್ಲಿ ಕೆಲವರು - ಅವನು (ಅಲ್ಲಾಹನು) ತನ್ನ ಅನುಗ್ರಹದಿಂದ ನಮಗೆ ದಯಪಾಲಿಸಿದರೆ ನಾವು ಖಂಡಿತ ದಾನ ಮಾಡುವೆವು ಮತ್ತು ಖಂಡಿತ ನಾವು ಸಜ್ಜನರ ಸಾಲಿಗೆ ಸೇರುವೆವು ಎಂದು ಅಲ್ಲಾಹನೊಡನೆ ಕರಾರು ಮಾಡಿರುವರು.
9:76
فَلَمَّا آتَاهُمْ مِنْ فَضْلِهِ بَخِلُوا بِهِ وَتَوَلَّوْا وَهُمْ مُعْرِضُونَ ۞
ಆದರೆ ಅಲ್ಲಾಹನು ತನ್ನ ಅನುಗ್ರಹದಿಂದ ಅವರಿಗೆ ದಯಪಾಲಿಸಿದಾಗ, ಅವರು ಅದರಲ್ಲಿ ಜಿಪುಣತೆ ತೋರಿದರು. ಅವರು ತಿರುಗಿ ನಿಂತರು ಮತ್ತು ವಿಮುಖರಾದರು.
9:77
فَأَعْقَبَهُمْ نِفَاقًا فِي قُلُوبِهِمْ إِلَىٰ يَوْمِ يَلْقَوْنَهُ بِمَا أَخْلَفُوا اللَّهَ مَا وَعَدُوهُ وَبِمَا كَانُوا يَكْذِبُونَ ۞
ಕೊನೆಗೆ ಅಲ್ಲಾಹನು, ಅವರು ತನ್ನನ್ನು ಭೇಟಿಯಾಗುವ ದಿನದ ತನಕ ಅವರ ಮನಸ್ಸುಗಳಲ್ಲಿ ಕಾಪಟ್ಯವನ್ನು ತುಂಬಿ ಬಿಟ್ಟನು - ಅವರು ಅಲ್ಲಾಹನ ಜೊತೆ ತಾವು ಮಾಡಿದ ವಾಗ್ದಾನಗಳನ್ನು ಉಲ್ಲಂಘಿಸಿದ್ದರ ಮತ್ತು ಸುಳ್ಳು ಹೇಳುತ್ತಿದ್ದುದರ ಫಲಿತಾಂಶವಿದು.
9:78
أَلَمْ يَعْلَمُوا أَنَّ اللَّهَ يَعْلَمُ سِرَّهُمْ وَنَجْوَاهُمْ وَأَنَّ اللَّهَ عَلَّامُ الْغُيُوبِ ۞
ಅಲ್ಲಾಹನು ಅವರ ಗುಟ್ಟುಗಳನ್ನೂ ಗುಪ್ತ ಮಾತುಕತೆಗಳನ್ನೂ ಬಲ್ಲನೆಂಬುದು ಮತ್ತು ಅಲ್ಲಾಹನು ಎಲ್ಲ ಗುಪ್ತ ವಿಚಾರಗಳನ್ನೂ ಚೆನ್ನಾಗಿ ಬಲ್ಲವನೆಂಬುದು ಅವರಿಗೆ ತಿಳಿಯದೇ?
9:79
الَّذِينَ يَلْمِزُونَ الْمُطَّوِّعِينَ مِنَ الْمُؤْمِنِينَ فِي الصَّدَقَاتِ وَالَّذِينَ لَا يَجِدُونَ إِلَّا جُهْدَهُمْ فَيَسْخَرُونَ مِنْهُمْ ۙ سَخِرَ اللَّهُ مِنْهُمْ وَلَهُمْ عَذَابٌ أَلِيمٌ ۞
ತಮ್ಮ ಸ್ವಂತ ಇಚ್ಛೆಯಿಂದ ದಾನ ನೀಡುವ ವಿಶ್ವಾಸಿಗಳನ್ನು ದೂಷಿಸುವವರು ಮತ್ತು (ದಾನ ಮಾಡುವುದಕ್ಕೆ) ತಮ್ಮ ಶ್ರಮದ ಹೊರತು ಬೇರೇನೂ ಇಲ್ಲದವರನ್ನು ಗೇಲಿ ಮಾಡುವವರು - ಅವರನ್ನು ಅಲ್ಲಾಹನು ಗೇಲಿಮಾಡುವನು ಮತ್ತು ಅವರಿಗೆ ಕಠಿಣ ಶಿಕ್ಷೆ ಕಾದಿದೆ.
9:80
اسْتَغْفِرْ لَهُمْ أَوْ لَا تَسْتَغْفِرْ لَهُمْ إِنْ تَسْتَغْفِرْ لَهُمْ سَبْعِينَ مَرَّةً فَلَنْ يَغْفِرَ اللَّهُ لَهُمْ ۚ ذَٰلِكَ بِأَنَّهُمْ كَفَرُوا بِاللَّهِ وَرَسُولِهِ ۗ وَاللَّهُ لَا يَهْدِي الْقَوْمَ الْفَاسِقِينَ ۞
ನೀವು ಅವರನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದರೂ ಪ್ರಾರ್ಥಿಸದಿದ್ದರೂ (ಪರಿಣಾಮ ಒಂದೇ). ಅವರನ್ನು ಕ್ಷಮಿಸಬೇಕೆಂದು ನೀವು ಎಪ್ಪತ್ತು ಬಾರಿ ಪ್ರಾರ್ಥಿಸಿದರೂ ಅಲ್ಲಾಹನು ಅವರನ್ನು ಖಂಡಿತ ಕ್ಷಮಿಸಲಾರನು. ಏಕೆಂದರೆ ಅವರು ಅಲ್ಲಾಹ್ ಮತ್ತು ಅವನ ದೂತರನ್ನು ಧಿಕ್ಕರಿಸಿದವರಾಗಿದ್ದಾರೆ. ಅಲ್ಲಾಹನು ಅವಿಧೇಯರಿಗೆ ಸನ್ಮಾರ್ಗವನ್ನು ತೋರಿಸುವುದಿಲ್ಲ.
9:81
فَرِحَ الْمُخَلَّفُونَ بِمَقْعَدِهِمْ خِلَافَ رَسُولِ اللَّهِ وَكَرِهُوا أَنْ يُجَاهِدُوا بِأَمْوَالِهِمْ وَأَنْفُسِهِمْ فِي سَبِيلِ اللَّهِ وَقَالُوا لَا تَنْفِرُوا فِي الْحَرِّ ۗ قُلْ نَارُ جَهَنَّمَ أَشَدُّ حَرًّا ۚ لَوْ كَانُوا يَفْقَهُونَ ۞
(ಯುದ್ಧದಿಂದ ತಪ್ಪಿಸಿಕೊಳ್ಳಲು) ಹಿಂದೆ ಉಳಿದುಕೊಂಡವರು, ತಾವು ಅಲ್ಲಾಹನ ದೂತರ ಹಿಂದೆ, ತಮ್ಮ ನೆಲೆಗಳಲ್ಲೇ ಉಳಿದಿರುವೆವೆಂದು ಸಂಭ್ರಮಿಸಿದರು. ಅವರಿಗೆ ತಮ್ಮ ಸಂಪತ್ತುಗಳನ್ನು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದು ಅಪ್ರಿಯವಾಯಿತು ಮತ್ತು ಅವರು ‘‘ಬಿಸಿಲಲ್ಲಿ ಹೊರಡಬೇಡಿ’’ ಎಂದರು. ಹೇಳಿರಿ; ನರಕದ ಬೆಂಕಿಯು ಅದಕ್ಕಿಂತಲೂ ಬಿಸಿಯಾಗಿರುವುದು. ಅವರು ಅರ್ಥಮಾಡಿಕೊಂಡಿದ್ದರೆ ಎಷ್ಟು ಚೆನ್ನಾಗಿತ್ತು!
9:82
فَلْيَضْحَكُوا قَلِيلًا وَلْيَبْكُوا كَثِيرًا جَزَاءً بِمَا كَانُوا يَكْسِبُونَ ۞
ಅವರು ಕಡಿಮೆ ನಗಬೇಕು ಮತ್ತು ಹೆಚ್ಚು ಅಳಬೇಕು. ಹಾಗಿದೆ, ಅವರ ಗಳಿಕೆಯ ಫಲ.
9:83
فَإِنْ رَجَعَكَ اللَّهُ إِلَىٰ طَائِفَةٍ مِنْهُمْ فَاسْتَأْذَنُوكَ لِلْخُرُوجِ فَقُلْ لَنْ تَخْرُجُوا مَعِيَ أَبَدًا وَلَنْ تُقَاتِلُوا مَعِيَ عَدُوًّا ۖ إِنَّكُمْ رَضِيتُمْ بِالْقُعُودِ أَوَّلَ مَرَّةٍ فَاقْعُدُوا مَعَ الْخَالِفِينَ ۞
ಒಂದು ವೇಳೆ ಅಲ್ಲಾಹನು ನಿಮ್ಮನ್ನು ಅವರಲ್ಲಿನ ಒಂದು ಗುಂಪಿನೆಡೆಗೆ ಮರಳಿಸಿದರೆ, ಅವರು (ಹೋರಾಟಕ್ಕೆ) ಹೊರಡಲು ನಿಮ್ಮ ಅನುಮತಿ ಕೇಳುವರು. ಹೇಳಿರಿ; ನೀವೆಂದೂ ನನ್ನ ಜೊತೆ ಹೊರಡುವಂತಿಲ್ಲ ಮತ್ತು ನೀವೆಂದೂ ನನ್ನ ಜೊತೆ ಸೇರಿ ಶತ್ರುವಿನ ವಿರುದ್ಧ ಹೋರಾಡುವಂತಿಲ್ಲ. ನೀವು ಮೊದಲ ಬಾರಿ ಕುಳಿತಿರಲು ಇಷ್ಟ ಪಟ್ಟವರು. ಇದೀಗ ನೀವು ಹಿಂದೆ ಉಳಿದಿರುವವರ ಜೊತೆಗೇ ಕುಳಿತಿರಿ.
9:84
وَلَا تُصَلِّ عَلَىٰ أَحَدٍ مِنْهُمْ مَاتَ أَبَدًا وَلَا تَقُمْ عَلَىٰ قَبْرِهِ ۖ إِنَّهُمْ كَفَرُوا بِاللَّهِ وَرَسُولِهِ وَمَاتُوا وَهُمْ فَاسِقُونَ ۞
ಅವರ ಪೈಕಿ ಯಾವುದೇ ಮೃತನ ಅಂತಿಮ ನಮಾಝ್‌ಅನ್ನು ನೀವು ಎಂದೂ ಸಲ್ಲಿಸಬೇಡಿ ಮತ್ತು ಅವನ ಗೋರಿಯ ಬಳಿಯೂ ನಿಲ್ಲಬೇಡಿ. ಅವರು ಅಲ್ಲಾಹ್ ಮತ್ತು ಅವನ ದೂತನನ್ನು ಧಿಕ್ಕರಿಸಿದವರಾಗಿದ್ದಾರೆ ಮತ್ತು ಅವರು ಅವಿಧೇಯರಾಗಿಯೇ ಮೃತರಾಗಿದ್ದಾರೆ.
9:85
وَلَا تُعْجِبْكَ أَمْوَالُهُمْ وَأَوْلَادُهُمْ ۚ إِنَّمَا يُرِيدُ اللَّهُ أَنْ يُعَذِّبَهُمْ بِهَا فِي الدُّنْيَا وَتَزْهَقَ أَنْفُسُهُمْ وَهُمْ كَافِرُونَ ۞
ಅವರ ಸಂಪತ್ತುಗಳಾಗಲಿ, ಸಂತಾನಗಳಾಗಲಿ ನಿಮ್ಮನ್ನು ಬೆರಗು ಗೊಳಿಸದಿರಲಿ. ಅಲ್ಲಾಹನು ಆ ಮೂಲಕ ಇಹಲೋಕ ಜೀವನದಲ್ಲಿ ಅವರನ್ನು ಶಿಕ್ಷಿಸ ಬಯಸುತ್ತಾನೆ ಮತ್ತು ಅವನು ಧರ್ಮ ಧಿಕ್ಕಾರಿಗಳಾಗಿರುವ ಸ್ಥಿತಿಯಲ್ಲಿ ಅವರ ಜೀವಗಳು ಹೊರಟು ಹೋಗಬೇಕೆಂದು ಬಯಸುತ್ತಾನೆ.
9:86
وَإِذَا أُنْزِلَتْ سُورَةٌ أَنْ آمِنُوا بِاللَّهِ وَجَاهِدُوا مَعَ رَسُولِهِ اسْتَأْذَنَكَ أُولُو الطَّوْلِ مِنْهُمْ وَقَالُوا ذَرْنَا نَكُنْ مَعَ الْقَاعِدِينَ ۞
ಅಲ್ಲಾಹನಲ್ಲಿ ವಿಶ್ವಾಸವಿಡಿರಿ ಮತ್ತು ಅವನ ದೂತರ ಜೊತೆ ಸೇರಿ ಹೋರಾಡಿರಿ ಎಂದು ಹೇಳುವ ಅಧ್ಯಾಯವೊಂದನ್ನು ಇಳಿಸಲಾದಾಗ ಅವರಲ್ಲಿನ ಸ್ಥಿತಿವಂತರು ನಿಮ್ಮೊಡನೆ ಅನುಮತಿ ಕೇಳುತ್ತಾರೆ ಮತ್ತು ಕುಳಿತಿರುವವರ ಜೊತೆಗಿರಲು ನಮ್ಮನ್ನು ಬಿಟ್ಟು ಬಿಡಿ ಎನ್ನುತ್ತಾರೆ.
9:87
رَضُوا بِأَنْ يَكُونُوا مَعَ الْخَوَالِفِ وَطُبِعَ عَلَىٰ قُلُوبِهِمْ فَهُمْ لَا يَفْقَهُونَ ۞
ಅವರು ಹಿಂದೆ ಉಳಿದಿರುವವರ ಜೊತೆ ಇರುವುದನ್ನು ಮೆಚ್ಚಿಕೊಂಡರು. ಅವರ ಮನಸ್ಸುಗಳಿಗೆ ಮುದ್ರೆ ಒತ್ತಲಾಯಿತು. ಅವರು ಏನನ್ನೂ ಅರಿಯುವವರಲ್ಲ.
9:88
لَٰكِنِ الرَّسُولُ وَالَّذِينَ آمَنُوا مَعَهُ جَاهَدُوا بِأَمْوَالِهِمْ وَأَنْفُسِهِمْ ۚ وَأُولَٰئِكَ لَهُمُ الْخَيْرَاتُ ۖ وَأُولَٰئِكَ هُمُ الْمُفْلِحُونَ ۞
ಆದರೆ ದೇವ ದೂತರು ಹಾಗೂ ಅವರ ಜೊತೆಗಿರುವ ವಿಶ್ವಾಸಿಗಳು ತಮ್ಮ ಸಂಪತ್ತು ಹಾಗೂ ತಮ್ಮ ಜೀವಗಳನ್ನು ತೊಡಗಿಸಿ ಹೋರಾಡಿದರು. ಒಳಿತುಗಳು ಅವರಿಗೇ ಸೇರಿವೆ ಮತ್ತು ಅವರೇ ವಿಜಯಿಗಳು.
9:89
أَعَدَّ اللَّهُ لَهُمْ جَنَّاتٍ تَجْرِي مِنْ تَحْتِهَا الْأَنْهَارُ خَالِدِينَ فِيهَا ۚ ذَٰلِكَ الْفَوْزُ الْعَظِيمُ ۞
ಅಲ್ಲಾಹನು ಅವರಿಗಾಗಿ, ತಳದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿರುವನು. ಅವರು ಅವುಗಳಲ್ಲಿ ಸದಾ ಕಾಲ ಇರುವರು. ನಿಜಕ್ಕೂ ಇದುವೇ ಮಹಾ ವಿಜಯವಾಗಿದೆ.
9:90
وَجَاءَ الْمُعَذِّرُونَ مِنَ الْأَعْرَابِ لِيُؤْذَنَ لَهُمْ وَقَعَدَ الَّذِينَ كَذَبُوا اللَّهَ وَرَسُولَهُ ۚ سَيُصِيبُ الَّذِينَ كَفَرُوا مِنْهُمْ عَذَابٌ أَلِيمٌ ۞
ಹಳ್ಳಿಗರಲ್ಲಿ ಕೆಲವರು (ಯುದ್ಧದಿಂದ ದೂರ ಉಳಿಯಲು) ತಮಗೆ ಅನುಮತಿ ನೀಡಬೇಕೆಂದು ಕೋರಿ ನೆಪಗಳನ್ನು ಹೂಡಲು ಬಂದರು ಮತ್ತು ಅಲ್ಲಾಹನೊಡನೆ ಹಾಗೂ ಅವನ ದೂತರೊಡನೆ ಸುಳ್ಳು ಹೇಳಿದವರು ಕುಳಿತಲ್ಲೇ ಉಳಿದುಕೊಂಡರು. ಅವರಲ್ಲಿನ ಧಿಕ್ಕಾರಿಗಳಿಗೆ ಬಹುಬೇಗನೇ ಭಾರೀ ಕಠಿಣ ಶಿಕ್ಷೆ ಎದುರಾಗಲಿದೆ.
9:91
لَيْسَ عَلَى الضُّعَفَاءِ وَلَا عَلَى الْمَرْضَىٰ وَلَا عَلَى الَّذِينَ لَا يَجِدُونَ مَا يُنْفِقُونَ حَرَجٌ إِذَا نَصَحُوا لِلَّهِ وَرَسُولِهِ ۚ مَا عَلَى الْمُحْسِنِينَ مِنْ سَبِيلٍ ۚ وَاللَّهُ غَفُورٌ رَحِيمٌ ۞
ದುರ್ಬಲರು, ರೋಗಿಗಳು ಹಾಗೂ ಖರ್ಚುಮಾಡಲಿಕ್ಕೇನೂ ಇಲ್ಲದವರು, ಅಲ್ಲಾಹನಿಗೆ ಹಾಗೂ ಅವನ ದೂತರಿಗೆ ನಿಷ್ಠರಾಗಿದ್ದರೆ (ಅವರು ಹೋರಾಟದಿಂದ ದೂರ ಉಳಿದರೆ) ಅವರ ಮೇಲೇನೂ ದೋಷವಿಲ್ಲ. ಹಾಗೆಯೇ ಸತ್ಕರ್ಮಿಗಳ ಮೇಲೂ ದೋಷವೇನಿಲ್ಲ. ಅಲ್ಲಾಹನು ಖಂಡಿತ ಕ್ಷಮಿಸುವವನೂ ಕರಣಾಳುವೂ ಆಗಿದ್ದಾನೆ.
9:92
وَلَا عَلَى الَّذِينَ إِذَا مَا أَتَوْكَ لِتَحْمِلَهُمْ قُلْتَ لَا أَجِدُ مَا أَحْمِلُكُمْ عَلَيْهِ تَوَلَّوْا وَأَعْيُنُهُمْ تَفِيضُ مِنَ الدَّمْعِ حَزَنًا أَلَّا يَجِدُوا مَا يُنْفِقُونَ ۞
ಹಾಗೆಯೇ, ತಮಗೆ ಸವಾರಿ ಬೇಕೆಂದು ನಿಮ್ಮ ಬಳಿಗೆ ಕೆಲವರು ಬಂದಿದ್ದರು. ನಿಮ್ಮನ್ನು (ಹೊತ್ತು ಸಾಗಿಸಲು) ಸವಾರಿಗೊಳಿಸಲು ನನಗೇನೂ ಸಿಗುತ್ತಿಲ್ಲ ಎಂದು ನೀವು ಅವರೊಡನೆ ಹೇಳಿದ್ದಿರಿ. ಅವರ ಮೇಲೂ ಯಾವುದೇ ದೋಷವಿಲ್ಲ. ಅವರು ಮರಳಿ ಹೋಗುತ್ತಿದ್ದಾಗ (ಅಲ್ಲಾಹನ ಮಾರ್ಗದಲ್ಲಿ) ಖರ್ಚುಮಾಡಲು ತಮ್ಮ ಬಳಿ ಏನೂ ಇಲ್ಲ ಎಂಬ ದುಃಖದಿಂದ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು.
9:93
۞ إِنَّمَا السَّبِيلُ عَلَى الَّذِينَ يَسْتَأْذِنُونَكَ وَهُمْ أَغْنِيَاءُ ۚ رَضُوا بِأَنْ يَكُونُوا مَعَ الْخَوَالِفِ وَطَبَعَ اللَّهُ عَلَىٰ قُلُوبِهِمْ فَهُمْ لَا يَعْلَمُونَ ۞
ನಿಜವಾಗಿ ದೋಷವಿರುವುದು, ತಾವು ಸಾಕಷ್ಟು ಸಂಪನ್ನರಾಗಿದ್ದರೂ ನಿಮ್ಮೊಡನೆ ಅನುಮತಿ ಕೇಳಿದವರ ಮೇಲೆ. ಅವರು ಹಿಂದುಳಿಯುವವರ ಜೊತೆಗೆ ಇರುವುದನ್ನೇ ಮೆಚ್ಚಿಕೊಂಡರು. ಅಲ್ಲಾಹನು ಅವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುವನು. ಅವರು ಏನನ್ನೂ ಅರಿಯುವುದಿಲ್ಲ.
9:94
يَعْتَذِرُونَ إِلَيْكُمْ إِذَا رَجَعْتُمْ إِلَيْهِمْ ۚ قُلْ لَا تَعْتَذِرُوا لَنْ نُؤْمِنَ لَكُمْ قَدْ نَبَّأَنَا اللَّهُ مِنْ أَخْبَارِكُمْ ۚ وَسَيَرَى اللَّهُ عَمَلَكُمْ وَرَسُولُهُ ثُمَّ تُرَدُّونَ إِلَىٰ عَالِمِ الْغَيْبِ وَالشَّهَادَةِ فَيُنَبِّئُكُمْ بِمَا كُنْتُمْ تَعْمَلُونَ ۞
ನೀವು ಅವರೆಡೆಗೆ ಮರಳಿದಾಗ, ಅವರು ವಿವಿಧ ನೆಪಗಳೊಂದಿಗೆ ನಿಮ್ಮ ಬಳಿಗೆ ಬರುವರು. ಹೇಳಿರಿ; ನೀವು ನೆಪಗಳನ್ನೊಡ್ಡಬೇಡಿ. ನಾವು ನಿಮ್ಮನ್ನು ನಂಬುವುದಿಲ್ಲ. ಏಕೆಂದರೆ ನಿಮ್ಮ ವಿಷಯವನ್ನು ಅಲ್ಲಾಹನು ನಮಗೆ ತಿಳಿಸಿರುವನು. ಅಲ್ಲಾಹನು ಮತ್ತು ಅವನ ದೂತರು ನಿಮ್ಮ ಕರ್ಮಗಳನ್ನು ನೋಡುವರು. ಕೊನೆಗೆ, ಗುಪ್ತವಾಗಿರುವ ಹಾಗೂ ಬಹಿರಂಗವಾಗಿರುವ ಎಲ್ಲವನ್ನೂ ಬಲ್ಲವನ ಕಡೆಗೆ ನಿಮ್ಮನ್ನು ಮರಳಿಸಲಾಗುವುದು. ನೀವು ಏನೆಲ್ಲಾ ಮಾಡುತ್ತಿದ್ದಿರಿ ಎಂಬುದನ್ನು ಅವನು ನಿಮಗೆ ತಿಳಿಸುವನು.
9:95
سَيَحْلِفُونَ بِاللَّهِ لَكُمْ إِذَا انْقَلَبْتُمْ إِلَيْهِمْ لِتُعْرِضُوا عَنْهُمْ ۖ فَأَعْرِضُوا عَنْهُمْ ۖ إِنَّهُمْ رِجْسٌ ۖ وَمَأْوَاهُمْ جَهَنَّمُ جَزَاءً بِمَا كَانُوا يَكْسِبُونَ ۞
ನೀವು ಅವರೆಡೆಗೆ ಮರಳಿದಾಗ, ಅವರನ್ನು ಬಿಟ್ಟು ಬಿಡಬೇಕೆಂದು ಅವರು ನಿಮ್ಮ ಬಳಿ ಅಲ್ಲಾಹನ ಹೆಸರಲ್ಲಿ ಆಣೆಗಳನ್ನು ಹಾಕಿ ಬೇಡುವರು. ನೀವು ಅವರನ್ನು ಬಿಟ್ಟು ಬಿಡಿರಿ. ಅವರು ಮಲಿನರು. ನರಕವೇ ಅವರ ನೆಲೆ. ಅದುವೇ ಅವರು ಸಂಪಾದಿಸಿದ್ದರ ಫಲ.
9:96
يَحْلِفُونَ لَكُمْ لِتَرْضَوْا عَنْهُمْ ۖ فَإِنْ تَرْضَوْا عَنْهُمْ فَإِنَّ اللَّهَ لَا يَرْضَىٰ عَنِ الْقَوْمِ الْفَاسِقِينَ ۞
ಅವರ ಕುರಿತು ನೀವು ಸಂತುಷ್ಟರಾಗಬೇಕೆಂದು ಅವರು ನಿಮ್ಮೆದುರು ಆಣೆಗಳನ್ನು ಹಾಕುತ್ತಾರೆ. ಒಂದು ವೇಳೆ ನೀವು ಅವರ ಕುರಿತು ಸಂತುಷ್ಟರಾಗಿ ಬಿಟ್ಟರೂ ಅಲ್ಲಾಹನು ಮಾತ್ರ ಅವಿಧೇಯರ ಕುರಿತು ಖಂಡಿತ ಸಂತುಷ್ಟನಾಗುವುದಿಲ್ಲ.
9:97
الْأَعْرَابُ أَشَدُّ كُفْرًا وَنِفَاقًا وَأَجْدَرُ أَلَّا يَعْلَمُوا حُدُودَ مَا أَنْزَلَ اللَّهُ عَلَىٰ رَسُولِهِ ۗ وَاللَّهُ عَلِيمٌ حَكِيمٌ ۞
ಅಲೆಮಾರಿ ಅರಬರು ಧಿಕ್ಕಾರ ಹಾಗೂ ಕಾಪಟ್ಯದಲ್ಲಿ ಹೆಚ್ಚು ಕಠೋರರಾಗಿರುತ್ತಾರೆ. ಅಲ್ಲಾಹನು ತನ್ನ ದೂತರಿಗೆ ಇಳಿಸಿಕೊಟ್ಟಿರುವ, ಆದೇಶಗಳ ಕುರಿತು ಅವರಿಗೆ ತಿಳಿಯದೆ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲಾಹನಂತು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.
9:98
وَمِنَ الْأَعْرَابِ مَنْ يَتَّخِذُ مَا يُنْفِقُ مَغْرَمًا وَيَتَرَبَّصُ بِكُمُ الدَّوَائِرَ ۚ عَلَيْهِمْ دَائِرَةُ السَّوْءِ ۗ وَاللَّهُ سَمِيعٌ عَلِيمٌ ۞
ಅಲೆಮಾರಿಗಳಲ್ಲಿ ಕೆಲವರು, ತಾವು (ಅಲ್ಲಾಹನ ಮಾರ್ಗದಲ್ಲಿ) ಮಾಡುವ ಖರ್ಚನ್ನು ದಂಡವೆಂದು ಪರಿಗಣಿಸುತ್ತಾರೆ ಮತ್ತು ಅವರು ನಿಮ್ಮ ಮೇಲೆ ವಿಪತ್ತುಗಳು ಬಂದೆರಗುವುದಕ್ಕಾಗಿ ಕಾಯುತ್ತಿದ್ದಾರೆ. ಕೆಟ್ಟ ವಿಪತ್ತುಗಳೆಲ್ಲಾ ಅವರ ಮೇಲೆಯೇ ಎರಗಲಿವೆ. ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.
9:99
وَمِنَ الْأَعْرَابِ مَنْ يُؤْمِنُ بِاللَّهِ وَالْيَوْمِ الْآخِرِ وَيَتَّخِذُ مَا يُنْفِقُ قُرُبَاتٍ عِنْدَ اللَّهِ وَصَلَوَاتِ الرَّسُولِ ۚ أَلَا إِنَّهَا قُرْبَةٌ لَهُمْ ۚ سَيُدْخِلُهُمُ اللَّهُ فِي رَحْمَتِهِ ۗ إِنَّ اللَّهَ غَفُورٌ رَحِيمٌ ۞
ಹಾಗೆಯೇ, ಅಲೆಮಾರಿಗಳಲ್ಲಿ, ಅಲ್ಲಾಹ್ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರೂ ಇದ್ದಾರೆ. ಅವರು ತಾವು ಮಾಡುವ ಖರ್ಚನ್ನು ಅಲ್ಲಾಹನ ಸಾಮೀಪ್ಯವನ್ನು ಸಂಪಾದಿಸುವುದಕ್ಕೆ ಹಾಗೂ ದೇವದೂತರ ಪ್ರಾರ್ಥನೆಯನ್ನು ಪಡೆಯುವುದಕ್ಕೆ ಸಾಧನವೆಂದು ಪರಿಗಣಿಸುತ್ತಾರೆ. ತಿಳಿದಿರಲಿ! ಖಂಡಿತವಾಗಿಯೂ ಅದು ಅವರ ಪಾಲಿಗೆ ಸಾಮೀಪ್ಯದ ಸಾಧನವಾಗಿದೆ. ಅಲ್ಲಾಹನು ಅವರನ್ನು ತನ್ನ ಅನುಗ್ರಹದೊಳಗೆ ಸೇರಿಸುವನು. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.
9:100
وَالسَّابِقُونَ الْأَوَّلُونَ مِنَ الْمُهَاجِرِينَ وَالْأَنْصَارِ وَالَّذِينَ اتَّبَعُوهُمْ بِإِحْسَانٍ رَضِيَ اللَّهُ عَنْهُمْ وَرَضُوا عَنْهُ وَأَعَدَّ لَهُمْ جَنَّاتٍ تَجْرِي تَحْتَهَا الْأَنْهَارُ خَالِدِينَ فِيهَا أَبَدًا ۚ ذَٰلِكَ الْفَوْزُ الْعَظِيمُ ۞
ಮುಹಾಜಿರ್ ಮತ್ತು ಅನ್ಸಾರ್‌ಗಳ ಪೈಕಿ (ಸತ್ಯ ಸ್ವೀಕಾರದಲ್ಲಿ) ಇತರೆಲ್ಲರಿಗಿಂತ ಮೊದಲಿಗರಾದವರು ಮತ್ತು ಅತ್ಯುತ್ತಮ ರೀತಿಯಲ್ಲಿ ಅವರನ್ನು ಅನುಸರಿಸಿದವರು - ಅವರಿಂದ ಅಲ್ಲಾಹನು ಸಂತುಷ್ಟನಾದನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾದರು. ಅವನು ಅವರಿಗಾಗಿ, ತಳಭಾಗದಲ್ಲಿ ನದಿಗಳು ಹರಿಯುತ್ತಿರುವಂತಹ ಸ್ವರ್ಗ ತೋಟಗಳನ್ನು ಸಿದ್ಧಗೊಳಿಸಿಟ್ಟಿರುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಇದು ನಿಜಕ್ಕೂ ಮಹಾ ವಿಜಯವಾಗಿದೆ.
9:101
وَمِمَّنْ حَوْلَكُمْ مِنَ الْأَعْرَابِ مُنَافِقُونَ ۖ وَمِنْ أَهْلِ الْمَدِينَةِ ۖ مَرَدُوا عَلَى النِّفَاقِ لَا تَعْلَمُهُمْ ۖ نَحْنُ نَعْلَمُهُمْ ۚ سَنُعَذِّبُهُمْ مَرَّتَيْنِ ثُمَّ يُرَدُّونَ إِلَىٰ عَذَابٍ عَظِيمٍ ۞
ನಿಮ್ಮ ಸುತ್ತ ಮುತ್ತಲಿರುವ ಅಲೆಮಾರಿಗಳ ಪೈಕಿ ಕೆಲವರು ಕಪಟಿಗಳು. ಹಾಗೆಯೇ ಮದೀನಾದವರಲ್ಲೂ ಕೆಲವರು ಕಾಪಟ್ಯಕ್ಕೆ ಅಂಟಿಕೊಂಡಿರುವರು. ನೀವು ಅವರನ್ನು ಬಲ್ಲವರಲ್ಲ. ನಾವು ಅವರನ್ನು ಬಲ್ಲೆವು. ನಾವು ಅವರನ್ನು ಎರಡೆರಡು ಬಾರಿ ಶಿಕ್ಷಿಸುವೆವು ಮತ್ತು ಕೊನೆಗೆ ಅವರನ್ನು ಮಹಾ ಶಿಕ್ಷೆಯೆಡೆಗೆ ಮರಳಿಸಲಾಗುವುದು.
9:102
وَآخَرُونَ اعْتَرَفُوا بِذُنُوبِهِمْ خَلَطُوا عَمَلًا صَالِحًا وَآخَرَ سَيِّئًا عَسَى اللَّهُ أَنْ يَتُوبَ عَلَيْهِمْ ۚ إِنَّ اللَّهَ غَفُورٌ رَحِيمٌ ۞
(ಅವರಲ್ಲಿ) ಮತ್ತೆ ಕೆಲವರಿದ್ದಾರೆ - ತಮ್ಮ ಪಾಪಗಳನ್ನು ಒಪ್ಪಿಕೊಳ್ಳುವವರು. ಅವರು ಸತ್ಕರ್ಮದ ಜೊತೆ ಪಾಪ ಕರ್ಮವನ್ನು ಬೆರೆಸಿಕೊಂಡಿರುವರು. ಅಲ್ಲಾಹನು ಅವರನ್ನು ಕ್ಷಮಿಸುವ ನಿರೀಕ್ಷೆ ಇದೆ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.
9:103
خُذْ مِنْ أَمْوَالِهِمْ صَدَقَةً تُطَهِّرُهُمْ وَتُزَكِّيهِمْ بِهَا وَصَلِّ عَلَيْهِمْ ۖ إِنَّ صَلَاتَكَ سَكَنٌ لَهُمْ ۗ وَاللَّهُ سَمِيعٌ عَلِيمٌ ۞
(ದೂತರೇ,) ನೀವು ಅವರ ಸಂಪತ್ತುಗಳಿಂದ (ಕಡ್ಡಾಯ) ದಾನವನ್ನು ಸಂಗ್ರಹಿಸಿರಿ ಮತ್ತು ಆ ಮೂಲಕ ಅವರನ್ನು ನಿರ್ಮಲಗೊಳಿಸಿರಿ ಹಾಗೂ ಶುದ್ಧೀಕರಿಸಿರಿ ಮತ್ತು ಅವರ ಪರವಾಗಿ ಪ್ರಾರ್ಥಿಸಿರಿ. ನಿಮ್ಮ ಪ್ರಾರ್ಥನೆಯು ಅವರ ಪಾಲಿಗೆ ಶಾಂತಿದಾಯಕ ವಾಗಿರುತ್ತದೆ. ಅಲ್ಲಾಹನಂತು ಎಲ್ಲವನ್ನೂ ಕೇಳುವವನು ಹಾಗೂ ಬಲ್ಲವನಾಗಿದ್ದಾನೆ.
9:104
أَلَمْ يَعْلَمُوا أَنَّ اللَّهَ هُوَ يَقْبَلُ التَّوْبَةَ عَنْ عِبَادِهِ وَيَأْخُذُ الصَّدَقَاتِ وَأَنَّ اللَّهَ هُوَ التَّوَّابُ الرَّحِيمُ ۞
ಅವರಿಗೆ ತಿಳಿದಿಲ್ಲವೇ, ಅಲ್ಲಾಹನೇ ತನ್ನ ದಾಸರಿಂದ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಅವರ ದಾನಗಳಿಗೆ ಮನ್ನಣೆ ನೀಡುವವನೆಂದು? ನಿಜಕ್ಕೂ ಅಲ್ಲಾಹನೇ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ.
9:105
وَقُلِ اعْمَلُوا فَسَيَرَى اللَّهُ عَمَلَكُمْ وَرَسُولُهُ وَالْمُؤْمِنُونَ ۖ وَسَتُرَدُّونَ إِلَىٰ عَالِمِ الْغَيْبِ وَالشَّهَادَةِ فَيُنَبِّئُكُمْ بِمَا كُنْتُمْ تَعْمَلُونَ ۞
ಹೇಳಿರಿ; ನೀವು ಕರ್ಮ ಮಾಡಿರಿ. ಅಲ್ಲಾಹ್, ಅವನ ದೂತರು ಮತ್ತು ವಿಶ್ವಾಸಿಗಳು ನಿಮ್ಮ ಕರ್ಮವನ್ನು ನೋಡುವರು. ಕೊನೆಗೆ ನಿಮ್ಮನ್ನು, ಗುಪ್ತವಾಗಿರುವ ಹಾಗೂ ಬಹಿರಂಗವಾಗಿರುವ ಎಲ್ಲವನ್ನೂ ಬಲ್ಲವನ ಬಳಿಗೆ ಮರಳಿಸಲಾಗುವುದು. ಆಗ ನೀವು ಏನೆಲ್ಲಾ ಮಾಡುತ್ತಿದ್ದಿರಿ ಎಂಬುದನ್ನು ಅವನು ನಿಮಗೆ ತಿಳಿಸುವನು.
9:106
وَآخَرُونَ مُرْجَوْنَ لِأَمْرِ اللَّهِ إِمَّا يُعَذِّبُهُمْ وَإِمَّا يَتُوبُ عَلَيْهِمْ ۗ وَاللَّهُ عَلِيمٌ حَكِيمٌ ۞
ಮತ್ತೆ ಕೆಲವರಿದ್ದಾರೆ. ಅವರು, ಅಲ್ಲಾಹನು ತಮ್ಮನ್ನು ಶಿಕ್ಷಿಸುವನೋ ಅಥವಾ ತಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸುವನೋ ಎಂದು ಅವನ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಅಲ್ಲಾಹನೇ ಬಲ್ಲವನು ಮತ್ತು ಯುಕ್ತಿವಂತನು.
9:107
وَالَّذِينَ اتَّخَذُوا مَسْجِدًا ضِرَارًا وَكُفْرًا وَتَفْرِيقًا بَيْنَ الْمُؤْمِنِينَ وَإِرْصَادًا لِمَنْ حَارَبَ اللَّهَ وَرَسُولَهُ مِنْ قَبْلُ ۚ وَلَيَحْلِفُنَّ إِنْ أَرَدْنَا إِلَّا الْحُسْنَىٰ ۖ وَاللَّهُ يَشْهَدُ إِنَّهُمْ لَكَاذِبُونَ ۞
ಹಾನಿಮಾಡುವುದಕ್ಕಾಗಿ, ಧಿಕ್ಕಾರಕ್ಕಾಗಿ ಮತ್ತು ವಿಶ್ವಾಸಿಗಳ ನಡುವೆ ಬಿಕ್ಕಟ್ಟು ಬೆಳೆಸಲಿಕ್ಕಾಗಿ ಹಾಗೂ ಈ ಹಿಂದೆ ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದ್ದ ವ್ಯಕ್ತಿಗೆ ಹೊಂಚಿನ ಸ್ಥಳವಾಗಿ ಮಸೀದಿಯನ್ನು ಬಳಸಿಕೊಂಡವರು - ತಾವು ಒಳಿತನ್ನು ಮಾತ್ರ ಬಯಸಿದ್ದೆವೆಂದು ಆಣೆ ಹಾಕಿ ಹೇಳುವರು. ಆದರೆ ಖಂಡಿತವಾಗಿಯೂ ಅವರು ಸುಳ್ಳುಗಾರರೆಂದು ಅಲ್ಲಾಹನು ಸಾಕ್ಷಿ ಹೇಳುತ್ತಾನೆ.
9:108
لَا تَقُمْ فِيهِ أَبَدًا ۚ لَمَسْجِدٌ أُسِّسَ عَلَى التَّقْوَىٰ مِنْ أَوَّلِ يَوْمٍ أَحَقُّ أَنْ تَقُومَ فِيهِ ۚ فِيهِ رِجَالٌ يُحِبُّونَ أَنْ يَتَطَهَّرُوا ۚ وَاللَّهُ يُحِبُّ الْمُطَّهِّرِينَ ۞
ನೀವು ಅದರಲ್ಲಿ (ಆ ಮಸೀದಿಯಲ್ಲಿ) ಖಂಡಿತ ನಿಲ್ಲಬೇಡಿ. ಪ್ರಥಮ ದಿನದಿಂದಲೇ ದೇವಭಯದ ಬುನಾದಿಯಲ್ಲಿ ನಿರ್ಮಿಸಲಾಗಿರುವ ಮಸೀದಿಯು, ನೀವು ನಿಲ್ಲುವುದಕ್ಕೆ ಹೆಚ್ಚು ಅರ್ಹವಾಗಿದೆ. ಅದರಲ್ಲಿರುವವರು, ತಾವು ಸದಾ ನಿರ್ಮಲರಾಗಿರಬೇಕೆಂದು ಅಪೇಕ್ಷಿಸುತ್ತಾರೆ ಮತ್ತು ಅಲ್ಲಾಹನು ನಿರ್ಮಲರಾಗಿ ಇರುವವರನ್ನು ಪ್ರೀತಿಸುತ್ತಾನೆ.
9:109
أَفَمَنْ أَسَّسَ بُنْيَانَهُ عَلَىٰ تَقْوَىٰ مِنَ اللَّهِ وَرِضْوَانٍ خَيْرٌ أَمْ مَنْ أَسَّسَ بُنْيَانَهُ عَلَىٰ شَفَا جُرُفٍ هَارٍ فَانْهَارَ بِهِ فِي نَارِ جَهَنَّمَ ۗ وَاللَّهُ لَا يَهْدِي الْقَوْمَ الظَّالِمِينَ ۞
ತನ್ನ ಕಟ್ಟಡವನ್ನು ಅಲ್ಲಾಹನ ಭಯ ಹಾಗೂ ಅವನ ಮೆಚ್ಚುಗೆಯ ಬುನಾದಿಯ ಮೇಲೆ ಕಟ್ಟಿದವನು ಶ್ರೇಷ್ಠನೋ, ಅಥವಾ ಅವನನ್ನೂ ಹೊತ್ತು ನರಕಕ್ಕೆ ಕುಸಿದು ಬೀಳಲಿರುವ, ಭಾರೀ ಹೊಂಡವೊಂದರ ಅಸ್ಥಿರ ಅಂಚಿನಲ್ಲಿರುವ ಬುನಾದಿಯ ಮೇಲೆ ತನ್ನ ಕಟ್ಟಡವನ್ನು ಕಟ್ಟಿದವನು ಶ್ರೇಷ್ಠನೋ ? ಅಕ್ರಮಿಗಳ ಪಂಗಡಕ್ಕೆ ಅಲ್ಲಾಹನು ಸರಿದಾರಿ ತೋರಿಸುವುದಿಲ್ಲ.
9:110
لَا يَزَالُ بُنْيَانُهُمُ الَّذِي بَنَوْا رِيبَةً فِي قُلُوبِهِمْ إِلَّا أَنْ تَقَطَّعَ قُلُوبُهُمْ ۗ وَاللَّهُ عَلِيمٌ حَكِيمٌ ۞
ಅವರು ಕಟ್ಟಿರುವ ಕಟ್ಟಡವು, ಅವರ ಮನಸ್ಸುಗಳು ಛಿದ್ರವಾಗಿ ಬಿಡುವ ತನಕವೂ ಅವರ ಮನಸ್ಸುಗಳಲ್ಲಿ ಸಂಶಯವನ್ನು ಬಿತ್ತುತ್ತಲೇ ಇರುವುದು - ಅಲ್ಲಾಹನು ಎಲ್ಲವನ್ನೂ ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.*
9:111
۞ إِنَّ اللَّهَ اشْتَرَىٰ مِنَ الْمُؤْمِنِينَ أَنْفُسَهُمْ وَأَمْوَالَهُمْ بِأَنَّ لَهُمُ الْجَنَّةَ ۚ يُقَاتِلُونَ فِي سَبِيلِ اللَّهِ فَيَقْتُلُونَ وَيُقْتَلُونَ ۖ وَعْدًا عَلَيْهِ حَقًّا فِي التَّوْرَاةِ وَالْإِنْجِيلِ وَالْقُرْآنِ ۚ وَمَنْ أَوْفَىٰ بِعَهْدِهِ مِنَ اللَّهِ ۚ فَاسْتَبْشِرُوا بِبَيْعِكُمُ الَّذِي بَايَعْتُمْ بِهِ ۚ وَذَٰلِكَ هُوَ الْفَوْزُ الْعَظِيمُ ۞
ಖಂಡಿತವಾಗಿಯೂ ಅಲ್ಲಾಹನು ವಿಶ್ವಾಸಿಗಳಿಂದ ಅವರ ಜೀವಗಳನ್ನು ಮತ್ತು ಅವರ ಸೊತ್ತುಗಳನ್ನು ಖರೀದಿಸಿರುವನು - ಅವರಿಗೆ ಸ್ವರ್ಗವನ್ನು ನೀಡಲಿಕ್ಕಾಗಿ. ಅವರು ಅಲ್ಲಾಹನ ಮಾರ್ಗದಲ್ಲೇ ಹೋರಾಡುತ್ತಾರೆ, ವಧಿಸುತ್ತಾರೆ ಮತ್ತು ವಧಿಸಲ್ಪಡುತ್ತಾರೆ. ತೌರಾತ್, ಇಂಜೀಲ್ ಮತ್ತು ಕುರ್‌ಆನ್‌ನಲ್ಲಿ ಅವರಿಗೆ ನೀಡಲಾಗಿರುವ ವಾಗ್ದಾನವು ಸತ್ಯವಾಗಿದೆ. ಅಲ್ಲಾಹನಿಗಿಂತ ಉತ್ತಮವಾಗಿ ತನ್ನ ಕರಾರನ್ನು ಪಾಲಿಸುವವನು ಯಾರಿದ್ದಾನೆ? ಆದ್ದರಿಂದ ಅವನ ಜೊತೆ ನೀವು ಮಾಡಿಕೊಂಡಿರುವ ವ್ಯವಹಾರಕ್ಕಾಗಿ ಸಂಭ್ರಮಿಸಿರಿ. ಇದು ನಿಜಕ್ಕೂ ಮಹಾ ವಿಜಯವಾಗಿದೆ.
9:112
التَّائِبُونَ الْعَابِدُونَ الْحَامِدُونَ السَّائِحُونَ الرَّاكِعُونَ السَّاجِدُونَ الْآمِرُونَ بِالْمَعْرُوفِ وَالنَّاهُونَ عَنِ الْمُنْكَرِ وَالْحَافِظُونَ لِحُدُودِ اللَّهِ ۗ وَبَشِّرِ الْمُؤْمِنِينَ ۞
ಪದೇ ಪದೇ ಪಶ್ಚಾತ್ತಾಪ ಪಡುವವರು, ಆರಾಧಿಸುತ್ತಿರುವವರು, (ಅಲ್ಲಾಹನ) ಗುಣಗಾನ ಮಾಡುತ್ತಿರುವವರು, (ಅಲ್ಲಾಹನ ಮಾರ್ಗದಲ್ಲಿ) ಉಪವಾಸ ಆಚರಿಸುತ್ತಿರುವವರು, (ಅಲ್ಲಾಹನಿಗೆ) ಬಾಗುತ್ತಿರುವವರು, ಸಾಷ್ಟಾಂಗ ವಂದಿಸುತ್ತಿರುವವರು, ಸತ್ಕಾರ್ಯವನ್ನು ಆದೇಶಿಸುತ್ತಿರುವವರು, ಕೆಡುಕಿನಿಂದ ತಡೆಯುತ್ತಿರುವವರು ಮತ್ತು ಅಲ್ಲಾಹನು ವಿಧಿಸಿರುವ ಮಿತಿ ಮೇರೆಗಳನ್ನು ಪಾಲಿಸುತ್ತಿರುವವರು - ಇಂತಹ ವಿಶ್ವಾಸಿಗಳಿಗೆ ಶುಭವಾರ್ತೆ ನೀಡಿರಿ.
9:113
مَا كَانَ لِلنَّبِيِّ وَالَّذِينَ آمَنُوا أَنْ يَسْتَغْفِرُوا لِلْمُشْرِكِينَ وَلَوْ كَانُوا أُولِي قُرْبَىٰ مِنْ بَعْدِ مَا تَبَيَّنَ لَهُمْ أَنَّهُمْ أَصْحَابُ الْجَحِيمِ ۞
ಬಹುದೇವಾರಾಧಕರು ತಮ್ಮ ಆಪ್ತ ಬಂಧುಗಳೇ ಆಗಿದ್ದರೂ, ಅವರು ನರಕದವರೆಂಬುದು ತಮಗೆ ಸ್ಪಷ್ಟವಾದ ಬಳಿಕ ಅವರ ಪರವಾಗಿ ಕ್ಷಮೆಯಾಚಿಸುವುದು ದೇವದೂತರಿಗಾಗಲಿ ವಿಶ್ವಾಸಿಗಳಿಗಾಗಲಿ ಭೂಷಣವಲ್ಲ.
9:114
وَمَا كَانَ اسْتِغْفَارُ إِبْرَاهِيمَ لِأَبِيهِ إِلَّا عَنْ مَوْعِدَةٍ وَعَدَهَا إِيَّاهُ فَلَمَّا تَبَيَّنَ لَهُ أَنَّهُ عَدُوٌّ لِلَّهِ تَبَرَّأَ مِنْهُ ۚ إِنَّ إِبْرَاهِيمَ لَأَوَّاهٌ حَلِيمٌ ۞
ಇಬ್ರಾಹೀಮರು ತಮ್ಮ ತಂದೆಯ ಪರವಾಗಿ ನಡೆಸಿದ ಕ್ಷಮಾಯಾಚನೆಯು, ಅವರು ಆತನಿಗೆ ನೀಡಿದ್ದ ಒಂದು ವಾಗ್ದಾನದ ಪಾಲನೆ ಮಾತ್ರವಾಗಿತ್ತು. ಕೊನೆಗೆ, ಆತನು ಅಲ್ಲಾಹನ ಶತ್ರುವೆಂಬುದು ಅವರಿಗೆ ಸ್ಪಷ್ಟವಾದಾಗ ಅವರು ಆತನಿಂದ ದೂರ ಉಳಿದರು. ಖಂಡಿತವಾಗಿಯೂ ಇಬ್ರಾಹೀಮರು ತುಂಬಾ ಮೃದು ಸ್ವಭಾವದವರು ಹಾಗೂ ಸಂಯಮಿಯಾಗಿದ್ದರು.*
9:115
وَمَا كَانَ اللَّهُ لِيُضِلَّ قَوْمًا بَعْدَ إِذْ هَدَاهُمْ حَتَّىٰ يُبَيِّنَ لَهُمْ مَا يَتَّقُونَ ۚ إِنَّ اللَّهَ بِكُلِّ شَيْءٍ عَلِيمٌ ۞
ಅಲ್ಲಾಹನು ಯಾವುದೇ ಜನಾಂಗಕ್ಕೆ ಸರಿದಾರಿ ತೋರಿದ ಬಳಿಕ, ಅವರು ಯಾವುದರಿಂದ ದೂರವಿರಬೇಕು ಎಂಬುದನ್ನು ಅವರಿಗೆ ಸ್ಪಷ್ಟ ಪಡಿಸುವ ತನಕ ಅವರನ್ನು ದಾರಿಗೆಡಿಸುವುದಿಲ್ಲ. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನಾಗಿದ್ದಾನೆ.
9:116
إِنَّ اللَّهَ لَهُ مُلْكُ السَّمَاوَاتِ وَالْأَرْضِ ۖ يُحْيِي وَيُمِيتُ ۚ وَمَا لَكُمْ مِنْ دُونِ اللَّهِ مِنْ وَلِيٍّ وَلَا نَصِيرٍ ۞
ಖಂಡಿತವಾಗಿಯೂ ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಅವನೇ ಜೀವನ ನೀಡುವವನು ಮತ್ತು ಅವನೇ ಮರಣ ನೀಡುವವನು. ನಿಮಗೆ ಅಲ್ಲಾಹನ ಹೊರತು ಬೇರೆ ಯಾರೂ ಪೋಷಕರಾಗಲಿ, ಸಹಾಯಕರಾಗಲಿ ಇಲ್ಲ.
9:117
لَقَدْ تَابَ اللَّهُ عَلَى النَّبِيِّ وَالْمُهَاجِرِينَ وَالْأَنْصَارِ الَّذِينَ اتَّبَعُوهُ فِي سَاعَةِ الْعُسْرَةِ مِنْ بَعْدِ مَا كَادَ يَزِيغُ قُلُوبُ فَرِيقٍ مِنْهُمْ ثُمَّ تَابَ عَلَيْهِمْ ۚ إِنَّهُ بِهِمْ رَءُوفٌ رَحِيمٌ ۞
ಅಲ್ಲಾಹನು, ದೇವದೂತರೆಡೆಗೆ ಹಾಗೂ ತುಂಬಾ ಕಠಿಣ ಕಾಲದಲ್ಲಿ ಅವರನ್ನು ಅನುಸರಿಸಿದ ‘ಮುಹಾಜಿರ್’ ಮತ್ತು ‘ಅನ್ಸಾರ್’ ಗಳೆಡೆಗೆ ಒಲವು ತೋರಿದನು. ಅವರಲ್ಲಿನ ಒಂದು ಗುಂಪಿನ ಮನಸ್ಸುಗಳು ದಾರಿಗೆಡುವುದರಲ್ಲಿದ್ದುವು. ಆ ಬಳಿಕ ಅವನು ಅವರೆಡೆಗೆ ಒಲವು ತೋರಿದನು.ಅವನು ಅವರ ಪಾಲಿಗೆ ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿರುವನು.
9:118
وَعَلَى الثَّلَاثَةِ الَّذِينَ خُلِّفُوا حَتَّىٰ إِذَا ضَاقَتْ عَلَيْهِمُ الْأَرْضُ بِمَا رَحُبَتْ وَضَاقَتْ عَلَيْهِمْ أَنْفُسُهُمْ وَظَنُّوا أَنْ لَا مَلْجَأَ مِنَ اللَّهِ إِلَّا إِلَيْهِ ثُمَّ تَابَ عَلَيْهِمْ لِيَتُوبُوا ۚ إِنَّ اللَّهَ هُوَ التَّوَّابُ الرَّحِيمُ ۞
ಹಾಗೆಯೇ, ಯಾರ ಪ್ರಕರಣವನ್ನು ಮುಂದೂಡಲಾಗಿತ್ತೋ ಆ ಮೂವರು. ಭೂಮಿಯು ತನ್ನೆಲ್ಲಾ ವೈಶಾಲ್ಯದ ಹೊರತಾಗಿಯೂ ಅವರ ಪಾಲಿಗೆ ತೀರಾ ಸಂಕುಚಿತವಾಗಿ ಬಿಟ್ಟಿತ್ತು ಮತ್ತು ಅವರಿಗೆ ಸ್ವತಃ ತಮ್ಮ ಜೀವಗಳ ಕುರಿತು ಜಿಗುಪ್ಸೆ ಉಂಟಾಗಿತ್ತು. ಅಲ್ಲಾಹನೆಡೆಗೆ ಒಲಿಯುವುದನ್ನು ಬಿಟ್ಟರೆ, (ತಮಗೆ) ಅವನ ಕಡೆಯಿಂದ ಬೇರಾವುದೇ ಆಶ್ರಯ ಇಲ್ಲ ಎಂಬುದನ್ನು ಅವರು ಮನಗಂಡಿದ್ದರು. ಕೊನೆಗೆ, ಅವರು ಪಶ್ಚಾತ್ತಾಪ ಪಡಲೆಂದು ಅವನು ಅವರೆಡೆಗೆ ಒಲವು ತೋರಿದನು. ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣಾಳುವಾಗಿದ್ದಾನೆ.
9:119
يَا أَيُّهَا الَّذِينَ آمَنُوا اتَّقُوا اللَّهَ وَكُونُوا مَعَ الصَّادِقِينَ ۞
ವಿಶ್ವಾಸಿಗಳೇ, ಸದಾ ಅಲ್ಲಾಹನಿಗೆ ಅಂಜಿರಿ ಮತ್ತು ನೀವು ಸತ್ಯವಂತರ ಜೊತೆಗಾರರಾಗಿರಿ.
9:120
مَا كَانَ لِأَهْلِ الْمَدِينَةِ وَمَنْ حَوْلَهُمْ مِنَ الْأَعْرَابِ أَنْ يَتَخَلَّفُوا عَنْ رَسُولِ اللَّهِ وَلَا يَرْغَبُوا بِأَنْفُسِهِمْ عَنْ نَفْسِهِ ۚ ذَٰلِكَ بِأَنَّهُمْ لَا يُصِيبُهُمْ ظَمَأٌ وَلَا نَصَبٌ وَلَا مَخْمَصَةٌ فِي سَبِيلِ اللَّهِ وَلَا يَطَئُونَ مَوْطِئًا يَغِيظُ الْكُفَّارَ وَلَا يَنَالُونَ مِنْ عَدُوٍّ نَيْلًا إِلَّا كُتِبَ لَهُمْ بِهِ عَمَلٌ صَالِحٌ ۚ إِنَّ اللَّهَ لَا يُضِيعُ أَجْرَ الْمُحْسِنِينَ ۞
ಮದೀನಾದವರು ಹಾಗೂ ಅವರ ಸುತ್ತ ಮುತ್ತಲಿನ ಗ್ರಾಮೀಣ ಜನರು ಅಲ್ಲಾಹನ ದೂತರನ್ನು ಬಿಟ್ಟು ಹಿಂದುಳಿದುದು ಮತ್ತು ತಮ್ಮ ಜೀವಗಳನ್ನು ಅವರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದು ಸರಿಯಲ್ಲ. ಏಕೆಂದರೆ, ಅಲ್ಲಾಹನ ಮಾರ್ಗದಲ್ಲಿ ಅವರು ಸಹಿಸುವ ಪ್ರತಿಯೊಂದು ದಾಹಕ್ಕೆ, ಪ್ರತಿಯೊಂದು ಸಂಕಷ್ಟಕ್ಕೆ, ಪ್ರತಿಯೊಂದು ಹಸಿವಿಗೆ, ಧಿಕ್ಕಾರಿಗಳ ಕೋಪಕ್ಕೆ ಕಾರಣವಾಗುವ ಅವರ ಪ್ರತಿಯೊಂದು ಹೆಜ್ಜೆಗೆ ಮತ್ತು ಶತ್ರುವಿನಿಂದ ಅವರು ಕಿತ್ತುಕೊಳ್ಳುವ ಪ್ರತಿಯೊಂದು ವಸ್ತುವಿಗೆ ಪ್ರತಿಯಾಗಿ ಅವರ ಪಾಲಿಗೆ ಒಂದು ಸತ್ಕರ್ಮವು ದಾಖಲಾಗದೆ ಇರುವುದಿಲ್ಲ. ಖಂಡಿತವಾಗಿಯೂ ಶ್ರೇಷ್ಠ ಕರ್ಮಗಳನ್ನು ಮಾಡುವವರ ಪ್ರತಿಫಲವನ್ನು ಅಲ್ಲಾಹನು ವ್ಯರ್ಥ ಗೊಳಿಸುವುದಿಲ್ಲ.
9:121
وَلَا يُنْفِقُونَ نَفَقَةً صَغِيرَةً وَلَا كَبِيرَةً وَلَا يَقْطَعُونَ وَادِيًا إِلَّا كُتِبَ لَهُمْ لِيَجْزِيَهُمُ اللَّهُ أَحْسَنَ مَا كَانُوا يَعْمَلُونَ ۞
ಸಣ್ಣದಿರಲಿ, ದೊಡ್ಡದಿರಲಿ ಅವರು ಮಾಡಿದ ಪ್ರತಿಯೊಂದು ಖರ್ಚನ್ನು ಹಾಗೂ ಅವರು ಪ್ರತಿಯೊಂದು ಕಣಿವೆ ದಾಟಿದ್ದನ್ನು ಅವರ ಪರವಾಗಿ ದಾಖಲಿಸಿಡಲಾಗುತ್ತದೆ - ಅಲ್ಲಾಹನು ಅವರಿಗೆ, ಅವರು ಮಾಡಿರುವ ಎಲ್ಲ ಸತ್ಕರ್ಮಗಳ ಪ್ರತಿಫಲ ನೀಡಲಿಕ್ಕಾಗಿ.
9:122
۞ وَمَا كَانَ الْمُؤْمِنُونَ لِيَنْفِرُوا كَافَّةً ۚ فَلَوْلَا نَفَرَ مِنْ كُلِّ فِرْقَةٍ مِنْهُمْ طَائِفَةٌ لِيَتَفَقَّهُوا فِي الدِّينِ وَلِيُنْذِرُوا قَوْمَهُمْ إِذَا رَجَعُوا إِلَيْهِمْ لَعَلَّهُمْ يَحْذَرُونَ ۞
ವಿಶ್ವಾಸಿಗಳೆಲ್ಲರೂ ಒಟ್ಟಾಗಿ ಹೊರಟು ಬಿಡುವುದು ಸರಿಯಲ್ಲ. (ಇದರ ಬದಲು) ಅವರ ಪ್ರತಿಯೊಂದು ವಿಭಾಗದಲ್ಲಿನ ಒಂದು ಪಂಗಡವು, ಧರ್ಮ ಜ್ಞಾನಗಳಿಸಲಿಕ್ಕಾಗಿ ಹೊರಟು, ಮರಳಿ ಬಂದು ತಮ್ಮ ಜನಾಂಗದವರನ್ನು ಎಚ್ಚರಿಸಬಹುದಾಗಿತ್ತು. ಈ ರೀತಿ ಅವರು ಜಾಗೃತರಾಗಬಹುದು.
9:123
يَا أَيُّهَا الَّذِينَ آمَنُوا قَاتِلُوا الَّذِينَ يَلُونَكُمْ مِنَ الْكُفَّارِ وَلْيَجِدُوا فِيكُمْ غِلْظَةً ۚ وَاعْلَمُوا أَنَّ اللَّهَ مَعَ الْمُتَّقِينَ ۞
ವಿಶ್ವಾಸಿಗಳೇ, ಧಿಕ್ಕಾರಿಗಳ ಪೈಕಿ ನಿಮ್ಮ ಪಕ್ಕದಲ್ಲಿರುವವರ ವಿರುದ್ಧ (ಮೊದಲು) ಹೋರಾಡಿರಿ - ಅವರು ನಿಮ್ಮಲ್ಲಿ ಕಾಠಿಣ್ಯವನ್ನು ಕಾಣಲಿ. ನಿಮಗೆ ತಿಳಿದಿರಲಿ, ಖಂಡಿತವಾಗಿಯೂ ಅಲ್ಲಾಹನು ಸತ್ಯನಿಷ್ಠರ ಜೊತೆಗಿದ್ದಾನೆ.
9:124
وَإِذَا مَا أُنْزِلَتْ سُورَةٌ فَمِنْهُمْ مَنْ يَقُولُ أَيُّكُمْ زَادَتْهُ هَٰذِهِ إِيمَانًا ۚ فَأَمَّا الَّذِينَ آمَنُوا فَزَادَتْهُمْ إِيمَانًا وَهُمْ يَسْتَبْشِرُونَ ۞
(ಕುರ್‌ಆನಿನ) ಯಾವುದೇ (ಹೊಸ) ಅಧ್ಯಾಯವನ್ನು ಇಳಿಸಲಾದಾಗ ಅವರಲ್ಲಿನ ಕೆಲವರು, ಇದು ನಿಮ್ಮ ಪೈಕಿ ಯಾರ ವಿಶ್ವಾಸವನ್ನು ಹೆಚ್ಚಿಸಿತು? ಎಂದು ಪ್ರಶ್ನಿಸುತ್ತಾರೆ. ನಿಜವಾಗಿ, ಅದು ವಿಶ್ವಾಸಿಗಳ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಅವರು ಅದರಿಂದ ಸಂತುಷ್ಟರಾಗಿದ್ದಾರೆ.
9:125
وَأَمَّا الَّذِينَ فِي قُلُوبِهِمْ مَرَضٌ فَزَادَتْهُمْ رِجْسًا إِلَىٰ رِجْسِهِمْ وَمَاتُوا وَهُمْ كَافِرُونَ ۞
ಇನ್ನು, ಮನಸ್ಸುಗಳಲ್ಲಿ ರೋಗವಿರುವವರ ಮಾಲಿನ್ಯಕ್ಕೆ ಅದು ಮತ್ತಷ್ಟು ಮಾಲಿನ್ಯವನ್ನು ಸೇರಿಸಿದೆ ಮತ್ತು ಅವರು ಧಿಕ್ಕಾರಿಗಳಾಗಿರುವ ಸ್ಥಿತಿಯಲ್ಲೇ ಮೃತರಾಗಿದ್ದಾರೆ.
9:126
أَوَلَا يَرَوْنَ أَنَّهُمْ يُفْتَنُونَ فِي كُلِّ عَامٍ مَرَّةً أَوْ مَرَّتَيْنِ ثُمَّ لَا يَتُوبُونَ وَلَا هُمْ يَذَّكَّرُونَ ۞
ಪ್ರತಿ ವರ್ಷವೂ ಒಂದು ಅಥವಾ ಎರಡು ಬಾರಿ ಅವರನ್ನು ಪರೀಕ್ಷೆಗೆ ಗುರಿಪಡಿಸಲಾಗುತ್ತಿರುವುದನ್ನು ಅವರು ಕಾಣಲಿಲ್ಲವೇ? ಇಷ್ಟಾಗಿಯೂ ಅವರು ಪಶ್ಚಾತ್ತಾಪ ಪಡುವುದಿಲ್ಲ ಮತ್ತು ಪಾಠ ಕಲಿಯುವುದಿಲ್ಲ.
9:127
وَإِذَا مَا أُنْزِلَتْ سُورَةٌ نَظَرَ بَعْضُهُمْ إِلَىٰ بَعْضٍ هَلْ يَرَاكُمْ مِنْ أَحَدٍ ثُمَّ انْصَرَفُوا ۚ صَرَفَ اللَّهُ قُلُوبَهُمْ بِأَنَّهُمْ قَوْمٌ لَا يَفْقَهُونَ ۞
ಯಾವುದೇ (ಹೊಸ) ಅಧ್ಯಾಯವನ್ನು ಇಳಿಸಲಾದಾಗ ಅವರು (ಕಪಟಿಗಳು) ಪರಸ್ಪರರೆಡೆಗೆ ನೋಡುತ್ತಾರೆ ಹಾಗೂ ‘‘ಯಾರಾದರೂ ನಿಮ್ಮನ್ನು ನೋಡುತ್ತಿದ್ದಾರೆಯೇ?’’ ಎನ್ನುತ್ತಾ ಹೊರಟು ಹೋಗುತ್ತಾರೆ. ನಿಜವಾಗಿ ಅಲ್ಲಾಹನು ಅವರ ಮನಸ್ಸುಗಳನ್ನು ತಿರುಚಿ ಬಿಟ್ಟಿದ್ದಾನೆ. ಏಕೆಂದರೆ ಅವರು ವಿವೇಕವಿಲ್ಲದವರು.
9:128
لَقَدْ جَاءَكُمْ رَسُولٌ مِنْ أَنْفُسِكُمْ عَزِيزٌ عَلَيْهِ مَا عَنِتُّمْ حَرِيصٌ عَلَيْكُمْ بِالْمُؤْمِنِينَ رَءُوفٌ رَحِيمٌ ۞
ನಿಮ್ಮ ಬಳಿಗೆ ನಿಮ್ಮೊಳಗಿಂದಲೇ ಒಬ್ಬ ದೇವದೂತರು ಬಂದಿದ್ದಾರೆ. ನಿಮಗೆ ಎದುರಾಗುವ ಪ್ರತಿಯೊಂದು ತೊಂದರೆಯು ಅವರ ಪಾಲಿಗೆ ಕಠಿಣವಾಗಿರುತ್ತದೆ. ಅವರು ನಿಮ್ಮ ಹಿತಕ್ಕಾಗಿ ಹಂಬಲಿಸುವವರಾಗಿದ್ದಾರೆ ಮತ್ತು ವಿಶ್ವಾಸಿಗಳ ಪಾಲಿಗೆ ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಮಯಿಯಾಗಿದ್ದಾರೆ.
9:129
فَإِنْ تَوَلَّوْا فَقُلْ حَسْبِيَ اللَّهُ لَا إِلَٰهَ إِلَّا هُوَ ۖ عَلَيْهِ تَوَكَّلْتُ ۖ وَهُوَ رَبُّ الْعَرْشِ الْعَظِيمِ ۞
(ದೂತರೇ,) ಅವರು ಕಡೆಗಣಿಸಿದರೆ ನೀವು ಹೇಳಿರಿ; ‘‘ನನಗೆ ಅಲ್ಲಾಹನೇ ಸಾಕು. ಅವನ ಹೊರತು ಬೇರೆ ದೇವರಿಲ್ಲ. ನಾನು ಅವನ ಮೇಲೆಯೇ ಸಂಪೂರ್ಣ ಭರವಸೆ ಇಟ್ಟಿದ್ದೇನೆ. ಅವನು ಮಹಾ ವಿಶ್ವ ಸಿಂಹಾಸನದ ಒಡೆಯ.