Al-Mursalat (The emissaries)
77. ಅಲ್ ಮುರ್ಸಲಾತ್(ಕಳಿಸಲಾದವುಗಳು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
77:1
وَالْمُرْسَلَاتِ عُرْفًا ۞
ಮೃದುವಾಗಿ ಚಲಿಸುವ ವಸ್ತುವಿನ (ವಾಯುವಿನ) ಆಣೆ.
77:2
فَالْعَاصِفَاتِ عَصْفًا ۞
ಕ್ರಮೇಣ ಅದು ಬಿರುಸಾಗಿ ಬಿಡುತ್ತದೆ.
77:3
وَالنَّاشِرَاتِ نَشْرًا ۞
(ಮೋಡಗಳನ್ನು) ವಿವಿಧೆಡೆಗಳಿಗೆ ತಲುಪಿಸುತ್ತದೆ.
77:4
فَالْفَارِقَاتِ فَرْقًا ۞
ಕೊನೆಗೆ ಅವುಗಳನ್ನು ಚದುರಿಸಿ ಬಿಡುತ್ತದೆ.
77:5
فَالْمُلْقِيَاتِ ذِكْرًا ۞
ದಿವ್ಯ ಉಪದೇಶವನ್ನು ತಲುಪಿಸುವವರ (ಮಲಕ್‌ಗಳ) ಆಣೆ.
77:6
عُذْرًا أَوْ نُذْرًا ۞
ಪುರಾವೆಯ ರೂಪದಲ್ಲಾಗಲೀ ಎಚ್ಚರಿಕೆಯ ರೂಪದಲ್ಲಾಗಲೀ.
77:7
إِنَّمَا تُوعَدُونَ لَوَاقِعٌ ۞
ನಿಮಗೇನನ್ನು ವಾಗ್ದಾನ ಮಾಡಲಾಗಿದೆಯೋ ಅದು ಖಂಡಿತ ಸಂಭವಿಸಲಿದೆ.
77:8
فَإِذَا النُّجُومُ طُمِسَتْ ۞
ನಕ್ಷತ್ರಗಳು ನಿಸ್ತೇಜವಾದಾಗ,
77:9
وَإِذَا السَّمَاءُ فُرِجَتْ ۞
ಆಕಾಶವು ಬಿರಿದು ಬಿಟ್ಟಾಗ,
77:10
وَإِذَا الْجِبَالُ نُسِفَتْ ۞
ಪರ್ವತಗಳು (ಚೂರು ಚೂರಾಗಿ) ಹಾರಾಡುತ್ತಿರುವಾಗ.
77:11
وَإِذَا الرُّسُلُ أُقِّتَتْ ۞
ದೇವ ದೂತರುಗಳನ್ನು ಒಟ್ಟು ಸೇರಿಸಲಾದಾಗ.
77:12
لِأَيِّ يَوْمٍ أُجِّلَتْ ۞
(ಅವರ ವಿಚಾರಣೆಯನ್ನು) ಯಾವ ದಿನಕ್ಕಾಗಿ ಮುಂದೂಡಲಾಗಿದೆ?
77:13
لِيَوْمِ الْفَصْلِ ۞
(ಅಂತಿಮ) ತೀರ್ಪಿನ ದಿನಕ್ಕಾಗಿ.
77:14
وَمَا أَدْرَاكَ مَا يَوْمُ الْفَصْلِ ۞
ಆ ತೀರ್ಪಿನ ದಿನ ಏನೆಂಬುದು ನಿಮಗೇನು ಗೊತ್ತು?
77:15
وَيْلٌ يَوْمَئِذٍ لِلْمُكَذِّبِينَ ۞
ಅಂದು ಧಿಕ್ಕಾರಿಗಳಿಗೆ ವಿನಾಶವಿದೆ.
77:16
أَلَمْ نُهْلِكِ الْأَوَّلِينَ ۞
ನಾವೇನು ಹಿಂದಿನವರನ್ನು ನಾಶ ಮಾಡಿಲ್ಲವೇ?
77:17
ثُمَّ نُتْبِعُهُمُ الْآخِرِينَ ۞
ಆ ಬಳಿಕ ನಾವು ಮುಂದಿನವರನ್ನು ಅವರ ಹಿಂದೆ ನಡೆಸಿದೆವು.
77:18
كَذَٰلِكَ نَفْعَلُ بِالْمُجْرِمِينَ ۞
ನಾವು ಅಪರಾಧಿಗಳಿಗೆ ಹೀಗೆಯೇ ಮಾಡುತ್ತೇವೆ.
77:19
وَيْلٌ يَوْمَئِذٍ لِلْمُكَذِّبِينَ ۞
ಅಂದು ಧಿಕ್ಕಾರಿಗಳಿಗೆ ವಿನಾಶವಿದೆ.
77:20
أَلَمْ نَخْلُقْكُمْ مِنْ مَاءٍ مَهِينٍ ۞
ನಾವೇನು ನಿಮ್ಮನ್ನು ತುಚ್ಛವಾದ ನೀರಿನಿಂದ ಸೃಷ್ಟಿಸಿಲ್ಲವೇ?
77:21
فَجَعَلْنَاهُ فِي قَرَارٍ مَكِينٍ ۞
ತರುವಾಯ ನಾವು ಅದನ್ನು ಒಂದು ಸುರಕ್ಷಿತ ಸ್ಥಳದಲ್ಲಿಟ್ಟೆವು.
77:22
إِلَىٰ قَدَرٍ مَعْلُومٍ ۞
ಒಂದು ನಿರ್ದಿಷ್ಟ ಕಾಲದವರೆಗೆ.
77:23
فَقَدَرْنَا فَنِعْمَ الْقَادِرُونَ ۞
ತರುವಾಯ ನಾವು (ಅದರ) ಪ್ರಮಾಣವನ್ನು ನಿಶ್ಚಯಿಸಿದೆವು. ನಾವು ಅತ್ಯುತ್ತಮವಾಗಿ ಪ್ರಮಾಣವನ್ನು ನಿಶ್ಚಯಿಸುತ್ತೇವೆ.
77:24
وَيْلٌ يَوْمَئِذٍ لِلْمُكَذِّبِينَ ۞
ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
77:25
أَلَمْ نَجْعَلِ الْأَرْضَ كِفَاتًا ۞
ನಾವು ಭೂಮಿಯನ್ನು ಬಾಚುವ ವಸ್ತುವಾಗಿಸಿಲ್ಲವೇ -
77:26
أَحْيَاءً وَأَمْوَاتًا ۞
- ಜೀವಿಸಿರುವವರನ್ನೂ ಸತ್ತವರನ್ನೂ?
77:27
وَجَعَلْنَا فِيهَا رَوَاسِيَ شَامِخَاتٍ وَأَسْقَيْنَاكُمْ مَاءً فُرَاتًا ۞
ನಾವು ಅದರೊಳಗೆ ಎತ್ತರದ ಪರ್ವತಗಳನ್ನಿಟ್ಟಿರುವೆವು ಮತ್ತು ನಿಮಗೆ ಸಿಹಿ ನೀರನ್ನು ಕುಡಿಸಿರುವೆವು.
77:28
وَيْلٌ يَوْمَئِذٍ لِلْمُكَذِّبِينَ ۞
ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
77:29
انْطَلِقُوا إِلَىٰ مَا كُنْتُمْ بِهِ تُكَذِّبُونَ ۞
ಇದೀಗ, ನೀವು ಯಾವುದನ್ನು ತಿರಸ್ಕರಿಸುತ್ತಲಿದ್ದಿರೋ ಅದರೆಡೆಗೆ ನಡೆಯಿರಿ.
77:30
انْطَلِقُوا إِلَىٰ ظِلٍّ ذِي ثَلَاثِ شُعَبٍ ۞
ನಡೆಯಿರಿ, ಮೂರು ಮಜಲುಗಳಿರುವ ಕತ್ತಲೆಯೆಡೆಗೆ.
77:31
لَا ظَلِيلٍ وَلَا يُغْنِي مِنَ اللَّهَبِ ۞
ಅಲ್ಲಿ ನೆರಳು ಇರದು ಮತ್ತು ಅಗ್ನಿಯ ಆಲಿಂಗನದಿಂದ ರಕ್ಷೆಯೂ ಇರದು.
77:32
إِنَّهَا تَرْمِي بِشَرَرٍ كَالْقَصْرِ ۞
ಅದು ಕೋಟೆಗಳ ಗಾತ್ರದ ಬೆಂಕಿಯ ಕಿಡಿಗಳನ್ನು ಸುರಿಸುತ್ತಿರುವುದು.
77:33
كَأَنَّهُ جِمَالَتٌ صُفْرٌ ۞
ಅವು ಹಳದಿ ಒಂಟೆಗಳಂತಿರುವವು.
77:34
وَيْلٌ يَوْمَئِذٍ لِلْمُكَذِّبِينَ ۞
ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
77:35
هَٰذَا يَوْمُ لَا يَنْطِقُونَ ۞
ಅದು ಅವರಿಗೆ ಮಾತನಾಡಲಾಗದ ದಿನವಾಗಿರುವುದು.
77:36
وَلَا يُؤْذَنُ لَهُمْ فَيَعْتَذِرُونَ ۞
ನೆಪಗಳನ್ನೊಡ್ಡಲು, ಅಂದು ಅವರಿಗೆ ಅನುಮತಿ ಸಿಗದು.
77:37
وَيْلٌ يَوْمَئِذٍ لِلْمُكَذِّبِينَ ۞
ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
77:38
هَٰذَا يَوْمُ الْفَصْلِ ۖ جَمَعْنَاكُمْ وَالْأَوَّلِينَ ۞
ಇದು ಅಂತಿಮ ತೀರ್ಪಿನ ದಿನ. (ಇಂದು) ನಾವು ನಿಮ್ಮನ್ನೂ ನಿಮ್ಮ ಹಿಂದಿನವರನ್ನೂ ಒಟ್ಟು ಸೇರಿಸಿರುವೆವು.
77:39
فَإِنْ كَانَ لَكُمْ كَيْدٌ فَكِيدُونِ ۞
ನಿಮ್ಮ ಬಳಿ ಏನಾದರೂ ಸಂಚು ಇದ್ದರೆ ಹೂಡಿ ನೋಡಿರಿ.
77:40
وَيْلٌ يَوْمَئِذٍ لِلْمُكَذِّبِينَ ۞
ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
77:41
إِنَّ الْمُتَّقِينَ فِي ظِلَالٍ وَعُيُونٍ ۞
(ಅಂದು) ಧರ್ಮನಿಷ್ಠರು ನೆರಳುಗಳಲ್ಲಿರುವರು ಮತ್ತು (ಅವರ ಬಳಿ) ಚಿಲುಮೆಗಳಿರುವವು.
77:42
وَفَوَاكِهَ مِمَّا يَشْتَهُونَ ۞
ಹಾಗೂ ಅವರು ಮೆಚ್ಚುವ ಹಣ್ಣು ಹಂಪಲುಗಳಿರುವವು.
77:43
كُلُوا وَاشْرَبُوا هَنِيئًا بِمَا كُنْتُمْ تَعْمَلُونَ ۞
‘‘ನೀವು ಮಾಡಿದ್ದ ಕರ್ಮಗಳ ಫಲವಾಗಿ, ಧಾರಾಳವಾಗಿ ತಿನ್ನಿರಿ ಮತ್ತು ಕುಡಿಯಿರಿ’’ (ಎಂದು ಅವರೊಡನೆ ಹೇಳಲಾಗುವುದು).
77:44
إِنَّا كَذَٰلِكَ نَجْزِي الْمُحْسِنِينَ ۞
ಸಜ್ಜನರನ್ನು ನಾವು ಇದೇ ರೀತಿ ಪುರಸ್ಕರಿಸುತ್ತೇವೆ.
77:45
وَيْلٌ يَوْمَئِذٍ لِلْمُكَذِّبِينَ ۞
ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
77:46
كُلُوا وَتَمَتَّعُوا قَلِيلًا إِنَّكُمْ مُجْرِمُونَ ۞
(ಧಿಕ್ಕಾರಿಗಳೇ, ಇಹಲೋಕದಲ್ಲಿ) ಅಲ್ಪಾವಧಿಗಾಗಿ ತಿನ್ನಿರಿ ಮತ್ತು ಕುಡಿಯಿರಿ - ನೀವು ಖಂಡಿತ ಅಪರಾಧಿಗಳಾಗಿರುವಿರಿ.
77:47
وَيْلٌ يَوْمَئِذٍ لِلْمُكَذِّبِينَ ۞
ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
77:48
وَإِذَا قِيلَ لَهُمُ ارْكَعُوا لَا يَرْكَعُونَ ۞
‘‘(ಅಲ್ಲಾಹನ ಮುಂದೆ) ಬಾಗಿರಿ’’ ಎಂದು ಅವರೊಡನೆ ಹೇಳಿದಾಗ ಅವರು ಬಾಗುವುದಿಲ್ಲ.
77:49
وَيْلٌ يَوْمَئِذٍ لِلْمُكَذِّبِينَ ۞
ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ.
77:50
فَبِأَيِّ حَدِيثٍ بَعْدَهُ يُؤْمِنُونَ ۞
ಇದರ (ಕುರ್‌ಆನಿನ) ಬಳಿಕ, ಅವರಿನ್ನು ಯಾವ ಮಾತನ್ನು ತಾನೇ ನಂಬುವರು?