Al-Fatihah (The opening)
1. ಅಲ್ ಫಾತಿಹಃ (ಆರಂಭ)
1:1
بِسْمِ اللَّهِ الرَّحْمَٰنِ الرَّحِيمِ ۞
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
1:2
الْحَمْدُ لِلَّهِ رَبِّ الْعَالَمِينَ ۞
ಪ್ರಶಂಸೆಗಳೆಲ್ಲಾ ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ.
1:3
الرَّحْمَٰنِ الرَّحِيمِ ۞
ಅವನು ಅಪಾರ ದಯಾಳು, ಕರುಣಾಮಯಿ.
1:4
مَالِكِ يَوْمِ الدِّينِ ۞
ಪ್ರತಿಫಲದ ದಿನದ ಮಾಲಕ.
1:5
إِيَّاكَ نَعْبُدُ وَإِيَّاكَ نَسْتَعِينُ ۞
(ಓ ಅಲ್ಲಾಹ್) ನಾವು ನಿನ್ನನ್ನು ಮಾತ್ರ ಪೂಜಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ನೆರವನ್ನು ಬೇಡುತ್ತೇವೆ.
1:6
اهْدِنَا الصِّرَاطَ الْمُسْتَقِيمَ ۞
ನಮ್ಮನ್ನು ನೇರ ಮಾರ್ಗದಲ್ಲಿ ನಡೆಸು.
1:7
صِرَاطَ الَّذِينَ أَنْعَمْتَ عَلَيْهِمْ غَيْرِ الْمَغْضُوبِ عَلَيْهِمْ وَلَا الضَّالِّينَ ۞
ನೀನು ಬಹುಮಾನಿಸಿದವರ ಮಾರ್ಗದಲ್ಲಿ (ನಡೆಸು); ನಿನ್ನ ಕೋಪಕ್ಕೆ ತುತ್ತಾದವರ ಮತ್ತು ದಾರಿ ತಪ್ಪಿದವರ ಮಾರ್ಗದಲ್ಲಿ ಅಲ್ಲ.