Al-`Alaq (The clot)
96. ಅಲ್ ಅಲಕ್(ರಕ್ತ ಪಿಂಡ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
96:1
اقْرَأْ بِاسْمِ رَبِّكَ الَّذِي خَلَقَ ۞
ಓದಿರಿ, (ವಿಶ್ವವನ್ನು) ಸೃಷ್ಟಿಸಿದ ನಿಮ್ಮೊಡೆಯನ ಹೆಸರಿಂದ.
96:2
خَلَقَ الْإِنْسَانَ مِنْ عَلَقٍ ۞
ಅವನು ಮನುಷ್ಯನನ್ನು ಹೆಪ್ಪು ಗಟ್ಟಿದ ರಕ್ತದಿಂದ ಸೃಷ್ಟಿಸಿರುವನು.
96:3
اقْرَأْ وَرَبُّكَ الْأَكْرَمُ ۞
ಓದಿರಿ. ಮಹಾ ಉದಾರಿಯಾದ ನಿಮ್ಮೊಡೆಯನ ಹೆಸರಿಂದ.
96:4
الَّذِي عَلَّمَ بِالْقَلَمِ ۞
ಅವನು ಲೇಖನಿಯ ಮೂಲಕ ಕಲಿಸಿದನು.
96:5
عَلَّمَ الْإِنْسَانَ مَا لَمْ يَعْلَمْ ۞
ಮತ್ತು ಮಾನವನಿಗೆ ತಿಳಿದಿಲ್ಲದ್ದನ್ನು ಕಲಿಸಿದನು.*
96:6
كَلَّا إِنَّ الْإِنْسَانَ لَيَطْغَىٰ ۞
ಆದರೆ ಮನುಷ್ಯನು ಮಾತ್ರ ವಿದ್ರೋಹವೆಸಗುತ್ತಾನೆ.
96:7
أَنْ رَآهُ اسْتَغْنَىٰ ۞
ಅವನು ತನ್ನನ್ನು ತೀರಾ ಸ್ವತಂತ್ರನಾಗಿ ಕಾಣುತ್ತಾನೆ.
96:8
إِنَّ إِلَىٰ رَبِّكَ الرُّجْعَىٰ ۞
ಖಂಡಿತ (ಎಲ್ಲರೂ) ನಿಮ್ಮ ಒಡೆಯನ ಕಡೆಗೇ ಮರಳ ಬೇಕಾಗಿದೆ.
96:9
أَرَأَيْتَ الَّذِي يَنْهَىٰ ۞
ನೀವು ನೋಡಿದಿರಾ, ತಡೆಯುವವನನ್ನು?
96:10
عَبْدًا إِذَا صَلَّىٰ ۞
(ನಮ್ಮ) ದಾಸನು ನಮಾಝ್ ಸಲ್ಲಿಸುವಾಗ (ತಡೆಯುವವನನ್ನು)?
96:11
أَرَأَيْتَ إِنْ كَانَ عَلَى الْهُدَىٰ ۞
ನೀವು ನೋಡಿದಿರಾ? ಒಂದು ವೇಳೆ ಅವನು ಸರಿದಾರಿಯಲ್ಲಿದ್ದರೆ,
96:12
أَوْ أَمَرَ بِالتَّقْوَىٰ ۞
ಅಥವಾ ಅವನು ಸತ್ಯನಿಷ್ಠೆಯನ್ನು ಬೋಧಿಸಿದ್ದರೆ (ಅವನನ್ನು ತಡೆದವನ ಗತಿ ಏನಾದೀತು?)
96:13
أَرَأَيْتَ إِنْ كَذَّبَ وَتَوَلَّىٰ ۞
ನೀವು ನೋಡಿದಿರಾ? ಅವನು (ತಡೆಯುವವನು, ಸತ್ಯವನ್ನು) ತಿರಸ್ಕರಿಸುವವನು ಹಾಗೂ ಕಡೆಗಣಿಸುವವನಾಗಿದ್ದರೆ (ಅವನ ಗತಿ ಏನಾದೀತು?)
96:14
أَلَمْ يَعْلَمْ بِأَنَّ اللَّهَ يَرَىٰ ۞
ಅಲ್ಲಾಹನು ನೋಡುತ್ತಿರುವನೆಂದು ಅವನಿಗೆ ತಿಳಿಯದೇ?
96:15
كَلَّا لَئِنْ لَمْ يَنْتَهِ لَنَسْفَعًا بِالنَّاصِيَةِ ۞
ಹಾಗಲ್ಲ, ಒಂದು ವೇಳೆ ಅವನು ತನ್ನನ್ನು ತಡೆದುಕೊಳ್ಳದಿದ್ದರೆ, ನಾವು ಅವನ ಮುಂಜುಟ್ಟನ್ನು ಹಿಡಿದು ಎಳೆದೊಯ್ಯುವೆವು.
96:16
نَاصِيَةٍ كَاذِبَةٍ خَاطِئَةٍ ۞
ಅದು ಒಬ್ಬ ಸುಳ್ಳುಗಾರ, ಪಾಪಿಯ ಮುಂಜುಟ್ಟು.
96:17
فَلْيَدْعُ نَادِيَهُ ۞
ಅವನೀಗ ತನ್ನ ಕೂಟವನ್ನು ಕರೆಯಲಿ.
96:18
سَنَدْعُ الزَّبَانِيَةَ ۞
ನಾವು ನಮ್ಮ ಪಡೆಯನ್ನು ಕರೆಯುವೆವು.
96:19
كَلَّا لَا تُطِعْهُ وَاسْجُدْ وَاقْتَرِبْ ۩ ۞
(ದೂತರೇ,) ಬೇಡ. ನೀವು ಅವನ ಆದೇಶವನ್ನು ಪಾಲಿಸಬೇಡಿ. ನೀವು ಸಾಷ್ಟಾಂಗವೆರಗಿರಿ ಮತ್ತು (ನಮಗೆ) ನಿಕಟರಾಗಿರಿ.