Al-A`raf (The heights)
7. ಅಲ್ ಅಅ್ರಾಫ್(ಔನ್ನತ್ಯಗಳು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
7:1
المص ۞
ಅಲಿಫ್ ಲಾಮ್ ಮ್ಮೀಮ್ ಸ್ವಾದ್.
7:2
كِتَابٌ أُنْزِلَ إِلَيْكَ فَلَا يَكُنْ فِي صَدْرِكَ حَرَجٌ مِنْهُ لِتُنْذِرَ بِهِ وَذِكْرَىٰ لِلْمُؤْمِنِينَ ۞
(ದೂತರೇ,) ಈ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಡಲಾಗಿದೆ. ಈ ಕುರಿತು ನಿಮ್ಮ ಮನದಲ್ಲಿ ಯಾವುದೇ ಹಿಂಜರಿಕೆ ಇರಬಾರದು. ಏಕೆಂದರೆ ಈ ಮೂಲಕ ನೀವು (ಮಾನವ ಕುಲವನ್ನು) ಎಚ್ಚರಿಸಬೇಕಾಗಿದೆ ಮತ್ತು ಇದು ವಿಶ್ವಾಸಿಗಳ ಪಾಲಿಗೆ ಉಪದೇಶವಾಗಿದೆ.
7:3
اتَّبِعُوا مَا أُنْزِلَ إِلَيْكُمْ مِنْ رَبِّكُمْ وَلَا تَتَّبِعُوا مِنْ دُونِهِ أَوْلِيَاءَ ۗ قَلِيلًا مَا تَذَكَّرُونَ ۞
(ಜನರೇ,) ನಿಮ್ಮ ಒಡೆಯನ ಕಡೆಯಿಂದ ನಿಮ್ಮೆಡೆಗೆ ಇಳಿಸಿಕೊಡಲಾಗಿರುವುದನ್ನು (ಕುರ್‌ಆನ್‌ಅನ್ನು) ಅನುಸರಿಸಿರಿ ಮತ್ತು ಅವನನ್ನು ಬಿಟ್ಟು ಇತರ ಪೋಷಕರನ್ನು ಅನುಸರಿಸಬೇಡಿ. ನೀವು ಉಪದೇಶ ಸ್ವೀಕರಿಸುವುದು ತೀರಾ ಕಡಿಮೆ.
7:4
وَكَمْ مِنْ قَرْيَةٍ أَهْلَكْنَاهَا فَجَاءَهَا بَأْسُنَا بَيَاتًا أَوْ هُمْ قَائِلُونَ ۞
ನಾವು ಅದೆಷ್ಟೋ ನಾಡುಗಳನ್ನು ನಾಶಗೊಳಿಸಿರುವೆವು - ರಾತ್ರಿಯ ವೇಳೆ ಅಥವಾ ಹಗಲಲ್ಲಿ ಜನರು ವಿಶ್ರಾಂತಿ ಪಡೆಯುತ್ತಿದ್ದಾಗ ಹಠಾತ್ತನೆ ನಮ್ಮ ಶಿಕ್ಷೆಯು ಅವರ ಬಳಿಗೆ ಬಂದೆರಗಿತ್ತು.
7:5
فَمَا كَانَ دَعْوَاهُمْ إِذْ جَاءَهُمْ بَأْسُنَا إِلَّا أَنْ قَالُوا إِنَّا كُنَّا ظَالِمِينَ ۞
ನಮ್ಮ ಶಿಕ್ಷೆಯು ಅವರನ್ನು ತಲುಪಿದಾಗ ‘‘ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’’ ಎನ್ನುವುದನ್ನು ಬಿಟ್ಟರೆ ಬೇರೆ ಯಾವ ವಾದವೂ ಅವರ ಬಳಿ ಉಳಿದಿರಲಿಲ್ಲ.
7:6
فَلَنَسْأَلَنَّ الَّذِينَ أُرْسِلَ إِلَيْهِمْ وَلَنَسْأَلَنَّ الْمُرْسَلِينَ ۞
ಯಾರೆಡೆಗೆ ದೂತರನ್ನು ಕಳಿಸಲಾಗಿತ್ತೋ ಅವರನ್ನು ನಾವು ಖಂಡಿತ ಪ್ರಶ್ನಿಸುವೆವು ಮತ್ತು ನಾವು ದೂತರನ್ನೂ ಖಂಡಿತ ಪ್ರಶ್ನಿಸುವೆವು.
7:7
فَلَنَقُصَّنَّ عَلَيْهِمْ بِعِلْمٍ ۖ وَمَا كُنَّا غَائِبِينَ ۞
ಖಂಡಿತವಾಗಿಯೂ ಜ್ಞಾನದ ಆಧಾರದಲ್ಲಿ ನಾವು, ನಡೆದುದೆಲ್ಲವನ್ನೂ ಅವರಿಗೆ ತಿಳಿಸುವೆವು - ನಾವು ಎಂದೂ ಅನುಪಸ್ಥಿತರಾಗಿರಲಿಲ್ಲ.
7:8
وَالْوَزْنُ يَوْمَئِذٍ الْحَقُّ ۚ فَمَنْ ثَقُلَتْ مَوَازِينُهُ فَأُولَٰئِكَ هُمُ الْمُفْلِحُونَ ۞
ಅಂದು (ಅಂತಿಮ ವಿಚಾರಣೆಯ ದಿನ) ಕರ್ಮಗಳ ತೂಕ ನಡೆಯುವುದು ಖಚಿತ ಸತ್ಯವಾಗಿದೆ. ಅಂದು ಯಾರ (ಸತ್ಕರ್ಮಗಳ) ಭಾರವು ಅಧಿಕವಾಗಿರುವುದೋ ಅವರೇ ವಿಜಯಿಗಳಾಗುವರು.
7:9
وَمَنْ خَفَّتْ مَوَازِينُهُ فَأُولَٰئِكَ الَّذِينَ خَسِرُوا أَنْفُسَهُمْ بِمَا كَانُوا بِآيَاتِنَا يَظْلِمُونَ ۞
ಮತ್ತು ಯಾರ (ಸತ್ಕರ್ಮಗಳ) ಭಾರವು ಕಡಿಮೆಯಾಗಿರುವುದೋ ಅವರೇ, ನಮ್ಮ ವಚನಗಳ ವಿಷಯದಲ್ಲಿ ಅಕ್ರಮವೆಸಗುವ ಮೂಲಕ ತಮಗೆ ತಾವೇ ನಷ್ಟವನ್ನುಂಟುಮಾಡಿಕೊಂಡವರು.
7:10
وَلَقَدْ مَكَّنَّاكُمْ فِي الْأَرْضِ وَجَعَلْنَا لَكُمْ فِيهَا مَعَايِشَ ۗ قَلِيلًا مَا تَشْكُرُونَ ۞
ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಸಿದೆವು ಮತ್ತು ಅದರಲ್ಲಿ ನಿಮಗೆ ವಿವಿಧ ಸಾಧನಗಳನ್ನು ಒದಗಿಸಿಕೊಟ್ಟೆವು. ಆದರೂ ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ.
7:11
وَلَقَدْ خَلَقْنَاكُمْ ثُمَّ صَوَّرْنَاكُمْ ثُمَّ قُلْنَا لِلْمَلَائِكَةِ اسْجُدُوا لِآدَمَ فَسَجَدُوا إِلَّا إِبْلِيسَ لَمْ يَكُنْ مِنَ السَّاجِدِينَ ۞
ನಾವು ನಿಮ್ಮನ್ನು ಸೃಷ್ಟಿಸಿದೆವು, ಆ ಬಳಿಕ ನಿಮಗೆ ನಾವು ರೂಪವನ್ನು ಕೊಟ್ಟೆವು, ಆ ಬಳಿಕ ಮಲಕ್‌ಗಳೊಡನೆ, ಆದಮರ ಮುಂದೆ ಸಾಷ್ಟಾಂಗವೆರಗಿರಿ ಎಂದು ಹೇಳಿದೆವು. ಅವರೆಲ್ಲಾ ಸಾಷ್ಟಾಂಗವೆರಗಿದರು - ಆದರೆ ಇಬ್ಲೀಸನ (ಶೈತಾನನ) ಹೊರತು. ಅವನು ಮಾತ್ರ ಸಾಷ್ಟಾಂಗವೆರಗಿದವರ ಸಾಲಿಗೆ ಸೇರಲಿಲ್ಲ.
7:12
قَالَ مَا مَنَعَكَ أَلَّا تَسْجُدَ إِذْ أَمَرْتُكَ ۖ قَالَ أَنَا خَيْرٌ مِنْهُ خَلَقْتَنِي مِنْ نَارٍ وَخَلَقْتَهُ مِنْ طِينٍ ۞
ನಾನು ನಿನಗೆ ಆದೇಶಿಸಿದಾಗ, ಸಾಷ್ಟಾಂಗವೆರಗದಂತೆ ನಿನ್ನನ್ನು ತಡೆದುದು ಯಾವುದು? ಎಂದು ಅವನು (ಅಲ್ಲಾಹನು) ಕೇಳಿದಾಗ ಅವನು (ಶೈತಾನನು) ಹೇಳಿದನು; ನಾನು ಅವನಿಗಿಂತ ಶ್ರೇಷ್ಠನು. ನನ್ನನ್ನು ನೀನು ಬೆಂಕಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ಮಣ್ಣಿನಿಂದ ಸೃಷ್ಟಿಸಿರುವೆ.
7:13
قَالَ فَاهْبِطْ مِنْهَا فَمَا يَكُونُ لَكَ أَنْ تَتَكَبَّرَ فِيهَا فَاخْرُجْ إِنَّكَ مِنَ الصَّاغِرِينَ ۞
ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ಇಳಿದು ಬಿಡು . ಇಲ್ಲಿ ದೊಡ್ಡಸ್ತಿಕೆ ಮೆರೆಯುವ ಯಾವ ಹಕ್ಕೂ ನಿನಗಿಲ್ಲ - ಹೊರಟು ಹೋಗು. ನೀನು ತೀರಾ ನೀಚನಾಗಿರುವೆ.
7:14
قَالَ أَنْظِرْنِي إِلَىٰ يَوْمِ يُبْعَثُونَ ۞
ಅವನು (ಶೈತಾನನು) ಹೇಳಿದನು; ಪುನರುತ್ಥಾನ ದಿನದ ತನಕ ನನಗೆ ಕಾಲಾವಕಾಶ ನೀಡು.
7:15
قَالَ إِنَّكَ مِنَ الْمُنْظَرِينَ ۞
ಅವನು (ಅಲ್ಲಾಹನು) ಹೇಳಿದನು; ಖಂಡಿತವಾಗಿಯೂ ನಿನಗೆ ಕಾಲಾವಕಾಶ ನೀಡಲಾಯಿತು.
7:16
قَالَ فَبِمَا أَغْوَيْتَنِي لَأَقْعُدَنَّ لَهُمْ صِرَاطَكَ الْمُسْتَقِيمَ ۞
ಅವನು(ಶೈತಾನನು) ಹೇಳಿದನು; ‘‘ನೀನೀಗ ನನ್ನನ್ನು ದಾರಿ ತಪ್ಪಿದವನೆಂದು ತೀರ್ಮಾನಿಸಿರುವುದರಿಂದ ನಾನು ಅವರಿಗಾಗಿ (ಸರಿದಾರಿಯಲ್ಲಿ ಇರುವವರಿಗಾಗಿ) ನಿನ್ನ ನೇರ ಮಾರ್ಗದಲ್ಲಿ ಹೊಂಚು ಹಾಕುತ್ತಿರುತ್ತೇನೆ.’’
7:17
ثُمَّ لَآتِيَنَّهُمْ مِنْ بَيْنِ أَيْدِيهِمْ وَمِنْ خَلْفِهِمْ وَعَنْ أَيْمَانِهِمْ وَعَنْ شَمَائِلِهِمْ ۖ وَلَا تَجِدُ أَكْثَرَهُمْ شَاكِرِينَ ۞
‘‘ಮಾತ್ರವಲ್ಲ, ಅವರ ಮುಂಭಾಗದಿಂದಲೂ, ಅವರ ಹಿಂಭಾಗದಿಂದಲೂ, ಅವರ ಬಲ ಭಾಗದಿಂದಲೂ, ಅವರ ಎಡ ಭಾಗದಿಂದಲೂ ನಾನು ಖಂಡಿತ ಅವರನ್ನು ತಲುಪುತ್ತೇನೆ. ಅವರಲ್ಲಿ ಹೆಚ್ಚಿನವರನ್ನು ನೀನು ಕೃತಜ್ಞರಾಗಿ ಕಾಣಲಾರೆ.’’
7:18
قَالَ اخْرُجْ مِنْهَا مَذْءُومًا مَدْحُورًا ۖ لَمَنْ تَبِعَكَ مِنْهُمْ لَأَمْلَأَنَّ جَهَنَّمَ مِنْكُمْ أَجْمَعِينَ ۞
ಅವನು (ಅಲ್ಲಾಹನು) ಹೇಳಿದನು; ‘‘ನೀನು ನಿಂದಿತನಾಗಿಯೂ ಶಪಿತನಾಗಿಯೂ ಇಲ್ಲಿಂದ ಹೊರಟು ಹೋಗು. ಅವರ ಪೈಕಿ ನಿನ್ನನ್ನು ಅನುಸರಿಸುವವರಿಂದ ಮತ್ತು ನಿಮ್ಮೆಲ್ಲರಿಂದ ನಾನು ನರಕವನ್ನು ತುಂಬಲಿದ್ದೇನೆ.’’
7:19
وَيَا آدَمُ اسْكُنْ أَنْتَ وَزَوْجُكَ الْجَنَّةَ فَكُلَا مِنْ حَيْثُ شِئْتُمَا وَلَا تَقْرَبَا هَٰذِهِ الشَّجَرَةَ فَتَكُونَا مِنَ الظَّالِمِينَ ۞
‘‘ಇನ್ನು, ಓ ಆದಮ್, ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ನೆಲೆಸಿರಿ ಮತ್ತು ನೀವಿಬ್ಬರೂ (ಇಲ್ಲಿ) ನಿಮಗೆ ಇಷ್ಟವಾದುದನ್ನೆಲ್ಲಾ ತಿನ್ನಿರಿ. ಆದರೆ, ಆ ಮರದ ಹತ್ತಿರ ಹೋಗದಿರಿ - (ಹೋದರೆ) ನೀವಿಬ್ಬರೂ ಅಕ್ರಮಿಗಳಾಗುವಿರಿ.’’
7:20
فَوَسْوَسَ لَهُمَا الشَّيْطَانُ لِيُبْدِيَ لَهُمَا مَا وُورِيَ عَنْهُمَا مِنْ سَوْآتِهِمَا وَقَالَ مَا نَهَاكُمَا رَبُّكُمَا عَنْ هَٰذِهِ الشَّجَرَةِ إِلَّا أَنْ تَكُونَا مَلَكَيْنِ أَوْ تَكُونَا مِنَ الْخَالِدِينَ ۞
ಕೊನೆಗೆ ಅವರ ಪಾಲಿಗೆ ಗುಪ್ತವಾಗಿದ್ದ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಲೆಂದು ಶೈತಾನನು ಅವರಿಬ್ಬರ ಮನದಲ್ಲಿ ಸಂಶಯವನ್ನು ಬಿತ್ತಿದನು. ‘‘ನಿಮ್ಮ ಒಡೆಯನು ಆ ಮರದಿಂದ ನಿಮ್ಮಿಬ್ಬರನ್ನು ತಡೆದಿರುವುದು ನೀವಿಬ್ಬರೂ ಮಲಕ್‌ಗಳಾಗಬಾರದು ಅಥವಾ ಚಿರಂಜೀವಿಗಳಾಗಿ ಬಿಡಬಾರದು ಎಂಬ ಕಾರಣಕ್ಕಾಗಿ ಮಾತ್ರ’’ ಎಂದು ಅವನು (ಅವರೊಡನೆ) ಹೇಳಿದನು.
7:21
وَقَاسَمَهُمَا إِنِّي لَكُمَا لَمِنَ النَّاصِحِينَ ۞
ಹಾಗೆಯೇ ಅವನು, ‘‘ಖಂಡಿತವಾಗಿಯೂ ನಾನು ನಿಮ್ಮ ಹಿತೈಷಿ’’ ಎಂದು ಅವರ ಮುಂದೆ ಆಣೆ ಹಾಕಿದನು.
7:22
فَدَلَّاهُمَا بِغُرُورٍ ۚ فَلَمَّا ذَاقَا الشَّجَرَةَ بَدَتْ لَهُمَا سَوْآتُهُمَا وَطَفِقَا يَخْصِفَانِ عَلَيْهِمَا مِنْ وَرَقِ الْجَنَّةِ ۖ وَنَادَاهُمَا رَبُّهُمَا أَلَمْ أَنْهَكُمَا عَنْ تِلْكُمَا الشَّجَرَةِ وَأَقُلْ لَكُمَا إِنَّ الشَّيْطَانَ لَكُمَا عَدُوٌّ مُبِينٌ ۞
ಕೊನೆಗೆ ಅವನು ಮೋಸದಿಂದ ಅವರನ್ನು ಒಲಿಸಿಕೊಂಡನು ಮತ್ತು ಅವರಿಬ್ಬರೂ ಆ ಮರದ ಫಲವನ್ನು ಸವಿದಾಗ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಿ ಬಿಟ್ಟವು ಮತ್ತು ಅವರಿಬ್ಬರೂ ಸ್ವರ್ಗದ ಎಲೆಗಳಿಂದ ತಮ್ಮನ್ನು ಮುಚ್ಚಿಕೊಳ್ಳ ತೊಡಗಿದರು. (ಆಗ) ಅವರ ಒಡೆಯನು ಅವರನ್ನು ಕರೆದು ಹೇಳಿದನು; ನಾನು ನಿಮ್ಮನ್ನು ಆ ಮರದಿಂದ ತಡೆದಿರಲಿಲ್ಲವೇ? ಅಥವಾ ಶೈತಾನನು ನಿಮ್ಮಿಬ್ಬರ ಪಾಲಿಗೂ ಸ್ಪಷ್ಟ ಶತ್ರುವಾಗಿದ್ದಾನೆಂದು ನಾನು ನಿಮಗೆ ಹೇಳಿರಲಿಲ್ಲವೇ?
7:23
قَالَا رَبَّنَا ظَلَمْنَا أَنْفُسَنَا وَإِنْ لَمْ تَغْفِرْ لَنَا وَتَرْحَمْنَا لَنَكُونَنَّ مِنَ الْخَاسِرِينَ ۞
ಅವರಿಬ್ಬರೂ ಹೇಳಿದರು; ನಮ್ಮೊಡೆಯಾ! ನಾವು ನಮ್ಮ ಮೇಲೆಯೇ ಅಕ್ರಮವೆಸಗಿದೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮ್ಮ ಮೇಲೆ ಕರುಣೆ ತೋರದಿದ್ದರೆ ನಾವು ಖಂಡಿತ ನಷ್ಟಕ್ಕೊಳಗಾದವರ ಸಾಲಿಗೆ ಸೇರುವೆವು.
7:24
قَالَ اهْبِطُوا بَعْضُكُمْ لِبَعْضٍ عَدُوٌّ ۖ وَلَكُمْ فِي الْأَرْضِ مُسْتَقَرٌّ وَمَتَاعٌ إِلَىٰ حِينٍ ۞
ಅವನು (ಅಲ್ಲಾಹನು) ಹೇಳಿದನು; ಇಳಿದು ಹೋಗಿರಿ. ನೀವು ಪರಸ್ಪರರ ಪಾಲಿಗೆ ಶತ್ರುಗಳು. ಒಂದು ನಿರ್ದಿಷ್ಟ ಕಾಲದ ತನಕ ನಿಮಗೆ ಭೂಮಿಯಲ್ಲಿ ನೆಲೆ ಇದೆ ಮತ್ತು ಸಾಧನಗಳಿವೆ.
7:25
قَالَ فِيهَا تَحْيَوْنَ وَفِيهَا تَمُوتُونَ وَمِنْهَا تُخْرَجُونَ ۞
ಅದರಲ್ಲೇ ನೀವು ಬದುಕುವಿರಿ, ಅದರಲ್ಲೇ ನೀವು ಸಾಯುವಿರಿ ಮತ್ತು ಅದರೊಳಗಿಂದಲೇ ನಿಮ್ಮನ್ನು ಹೊರತೆಗೆಯಲಾಗುವುದು.
7:26
يَا بَنِي آدَمَ قَدْ أَنْزَلْنَا عَلَيْكُمْ لِبَاسًا يُوَارِي سَوْآتِكُمْ وَرِيشًا ۖ وَلِبَاسُ التَّقْوَىٰ ذَٰلِكَ خَيْرٌ ۚ ذَٰلِكَ مِنْ آيَاتِ اللَّهِ لَعَلَّهُمْ يَذَّكَّرُونَ ۞
ಆದಮ್‌ರ ಸಂತತಿಗಳೇ, ನಿಮಗೆ ನಾವು, ನಿಮ್ಮ ಮಾನದ ಭಾಗಗಳನ್ನು ಮುಚ್ಚುವ ಮತ್ತು ಅಲಂಕಾರವಾಗುವ ಉಡುಗೆಯನ್ನು ಇಳಿಸಿಕೊಟ್ಟಿರುವೆವು. ನಿಜವಾಗಿ ಧರ್ಮ ನಿಷ್ಠೆಯ ಉಡುಪೇ ಅತ್ಯುತ್ತಮ. ಇದು ಅವರು ಸ್ಮರಿಸುತ್ತಿರಲಿಕ್ಕಾಗಿ ಅಲ್ಲಾಹನು ಒದಗಿಸಿರುವ ಒಂದು ನಿದರ್ಶನ.
7:27
يَا بَنِي آدَمَ لَا يَفْتِنَنَّكُمُ الشَّيْطَانُ كَمَا أَخْرَجَ أَبَوَيْكُمْ مِنَ الْجَنَّةِ يَنْزِعُ عَنْهُمَا لِبَاسَهُمَا لِيُرِيَهُمَا سَوْآتِهِمَا ۗ إِنَّهُ يَرَاكُمْ هُوَ وَقَبِيلُهُ مِنْ حَيْثُ لَا تَرَوْنَهُمْ ۗ إِنَّا جَعَلْنَا الشَّيَاطِينَ أَوْلِيَاءَ لِلَّذِينَ لَا يُؤْمِنُونَ ۞
ಆದಮ್‌ರ ಸಂತತಿಗಳೇ, ಶೈತಾನನು ನಿಮ್ಮ ತಂದೆ ತಾಯಿಯನ್ನು ಸ್ವರ್ಗದಿಂದ ಹೊರ ಹಾಕಿಸಿದಂತೆ (ಹಾಗೂ) ಅವರ ಮೇಲಿಂದ ಅವರ ಉಡುಗೆಗಳನ್ನು ಕಳಚಿಸಿ ಅವರ ಮಾನದ ಭಾಗಗಳನ್ನು ಅವರ ಮುಂದೆ ಪ್ರಕಟಪಡಿಸಿದಂತೆ ಅವನು ನಿಮ್ಮನ್ನು ದಾರಿಗೆಡಿಸದಿರಲಿ. ಖಂಡಿತವಾಗಿಯೂ, ಅವನು ಮತ್ತು ಅವನ ಪಂಗಡದವರು, ನಿಮಗೆ ಅವರನ್ನು ನೋಡಲಾಗದ ಕಡೆಯಿಂದ, ನಿಮ್ಮನ್ನು ನೋಡುತ್ತಿರುತ್ತಾರೆ. ನಾವಂತು ಶೈತಾನರನ್ನು, ವಿಶ್ವಾಸಿಗಳಲ್ಲದವರ ಪೋಷಕರಾಗಿಸಿದ್ದೇವೆ.
7:28
وَإِذَا فَعَلُوا فَاحِشَةً قَالُوا وَجَدْنَا عَلَيْهَا آبَاءَنَا وَاللَّهُ أَمَرَنَا بِهَا ۗ قُلْ إِنَّ اللَّهَ لَا يَأْمُرُ بِالْفَحْشَاءِ ۖ أَتَقُولُونَ عَلَى اللَّهِ مَا لَا تَعْلَمُونَ ۞
ಅವರು ಯಾವುದಾದರೂ ಅಶ್ಲೀಲ ಕೆಲಸ ಮಾಡಿದಾಗ, ‘‘ನಮ್ಮ ಪೂರ್ವಜರನ್ನು ನಾವು ಇದೇ ದಾರಿಯಲ್ಲಿ ಕಂಡಿದ್ದೇವೆ ಮತ್ತು ಅಲ್ಲಾಹನು ಇದನ್ನು ನಮಗೆ ಆದೇಶಿಸಿದ್ದಾನೆ’’ ಎನ್ನುತ್ತಾರೆ. ಹೇಳಿರಿ; ಖಂಡಿತವಾಗಿಯೂ ಅಲ್ಲಾಹನು ಅಶ್ಲೀಲತೆಯನ್ನು ಆದೇಶಿಸುವುದಿಲ್ಲ. ನೀವೇನು, ನಿಮಗೆ ತಿಳಿದಿಲ್ಲದ್ದನ್ನು ಅಲ್ಲಾಹನ ಮೇಲೆ ಆರೋಪಿಸುತ್ತೀರಾ?
7:29
قُلْ أَمَرَ رَبِّي بِالْقِسْطِ ۖ وَأَقِيمُوا وُجُوهَكُمْ عِنْدَ كُلِّ مَسْجِدٍ وَادْعُوهُ مُخْلِصِينَ لَهُ الدِّينَ ۚ كَمَا بَدَأَكُمْ تَعُودُونَ ۞
ಹೇಳಿರಿ; ನನ್ನ ಒಡೆಯನು ನ್ಯಾಯವನ್ನೇ ಆದೇಶಿಸಿದ್ದಾನೆ. ನೀವಿನ್ನು ಪ್ರತಿಬಾರಿಯೂ ಸಾಷ್ಟಾಂಗವೆರಗುವಾಗ ನಿಮ್ಮ ಮುಖಗಳನ್ನು ಸರಿಯಾದ ದಿಕ್ಕಿನಲ್ಲಿಡಿರಿ ಮತ್ತು ಧರ್ಮವನ್ನು ಅವನಿಗೇ ಮೀಸಲಾಗಿಟ್ಟು (ಕೇವಲ ಅವನಿಗೆ ನಿಷ್ಠರಾಗಿ) ಅವನನ್ನು ಕೂಗಿರಿ. ಅವನು ಮೊದಲ ಬಾರಿಗೆ ನಿಮ್ಮನ್ನು ಸೃಷ್ಟಿಸಿದಂತೆಯೇ ನೀವು ಮತ್ತೆ ಸೃಷ್ಟಿಸಲ್ಪಡುವಿರಿ.
7:30
فَرِيقًا هَدَىٰ وَفَرِيقًا حَقَّ عَلَيْهِمُ الضَّلَالَةُ ۗ إِنَّهُمُ اتَّخَذُوا الشَّيَاطِينَ أَوْلِيَاءَ مِنْ دُونِ اللَّهِ وَيَحْسَبُونَ أَنَّهُمْ مُهْتَدُونَ ۞
ಅವನು ಒಂದು ಪಂಗಡಕ್ಕೆ ಮಾರ್ಗದರ್ಶನ ಮಾಡಿರುವನು ಮತ್ತು ಇನ್ನೊಂದು ಪಂಗಡವು ದಾರಿಗೆಟ್ಟಿರುವುದಕ್ಕೆ ಅರ್ಹವೆಂಬುದು ಸಾಬೀತಾಗಿದೆ. ಖಂಡಿತವಾಗಿಯೂ ಅವರು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ತಮ್ಮ ಆಪ್ತ ಮಿತ್ರನಾಗಿಸಿಕೊಂಡಿರುವರು ಮತ್ತು ತಾವು ಸನ್ಮಾರ್ಗದಲ್ಲೇ ಇದ್ದೇವೆ ಎಂದುಕೊಂಡಿರುವರು.
7:31
۞ يَا بَنِي آدَمَ خُذُوا زِينَتَكُمْ عِنْدَ كُلِّ مَسْجِدٍ وَكُلُوا وَاشْرَبُوا وَلَا تُسْرِفُوا ۚ إِنَّهُ لَا يُحِبُّ الْمُسْرِفِينَ ۞
ಆದಮ್‌ರ ಸಂತತಿಗಳೇ, ನೀವು ನಿಮ್ಮ ಎಲ್ಲ ಆರಾಧನಾ ಸ್ಥಳಗಳಲ್ಲಿ ನಿಮ್ಮ ಅಲಂಕಾರಗಳನ್ನು ಧರಿಸಿರಿ. ತಿನ್ನಿರಿ ಮತ್ತು ಕುಡಿಯಿರಿ. ಆದರೆ ದುಂದುವೆಚ್ಚ ಮಾಡಬೇಡಿರಿ. ಖಂಡಿತವಾಗಿಯೂ ಅವನು ದುಂದುವೆಚ್ಚ ಮಾಡುವವರನ್ನು ಮೆಚ್ಚುವುದಿಲ್ಲ.
7:32
قُلْ مَنْ حَرَّمَ زِينَةَ اللَّهِ الَّتِي أَخْرَجَ لِعِبَادِهِ وَالطَّيِّبَاتِ مِنَ الرِّزْقِ ۚ قُلْ هِيَ لِلَّذِينَ آمَنُوا فِي الْحَيَاةِ الدُّنْيَا خَالِصَةً يَوْمَ الْقِيَامَةِ ۗ كَذَٰلِكَ نُفَصِّلُ الْآيَاتِ لِقَوْمٍ يَعْلَمُونَ ۞
ಹೇಳಿರಿ; ಅಲ್ಲಾಹನು ತನ್ನ ದಾಸರಿಗಾಗಿ ಉತ್ಪಾದಿಸಿರುವ ಅಲಂಕಾರ ಸಾಮಗ್ರಿಗಳನ್ನು ಮತ್ತು ಶುದ್ಧ ಆಹಾರ ವಸ್ತುಗಳನ್ನು ನಿಷೇಧಿಸಿರುವವರು ಯಾರು? ಹೇಳಿರಿ; ಇಹಲೋಕದಲ್ಲಿ ಇವು ವಿಶ್ವಾಸಿಗಳಿಗೆ ಸಮ್ಮತವಾಗಿವೆ - ಪರಲೋಕದಲ್ಲಂತೂ ಇವು ಅವರಿಗೆಂದೇ ಮೀಸಲಾಗಿರುತ್ತವೆ. ಈ ರೀತಿ ನಾವು ಅರಿವು ಉಳ್ಳವರಿಗಾಗಿ ನಮ್ಮ ವಚನಗಳನ್ನು ವಿವರಿಸುತ್ತೇವೆ.
7:33
قُلْ إِنَّمَا حَرَّمَ رَبِّيَ الْفَوَاحِشَ مَا ظَهَرَ مِنْهَا وَمَا بَطَنَ وَالْإِثْمَ وَالْبَغْيَ بِغَيْرِ الْحَقِّ وَأَنْ تُشْرِكُوا بِاللَّهِ مَا لَمْ يُنَزِّلْ بِهِ سُلْطَانًا وَأَنْ تَقُولُوا عَلَى اللَّهِ مَا لَا تَعْلَمُونَ ۞
ಹೇಳಿರಿ; ವ್ಯಕ್ತ ಹಾಗೂ ಗುಪ್ತವಾದ ಎಲ್ಲ ಅಶ್ಲೀಲ ಕೃತ್ಯಗಳನ್ನು, ಪಾಪ ಕೃತ್ಯಗಳನ್ನು, ಅಕ್ರಮ ಬಲಪ್ರಯೋಗವನ್ನು, ಯಾವುದರ ಪರವಾಗಿ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲವೋ ಅದನ್ನು, ಅಲ್ಲಾಹನ ಜೊತೆ ಪಾಲುಗೊಳಿಸುವುದನ್ನು ಮತ್ತು ಅಲ್ಲಾಹನ ಕುರಿತು ನಿಮಗೆ ತಿಳಿದಿಲ್ಲದ್ದನ್ನು ಹೇಳುವುದನ್ನು - ನನ್ನೊಡೆಯನು ನಿಷೇಧಿಸಿರುವನು.
7:34
وَلِكُلِّ أُمَّةٍ أَجَلٌ ۖ فَإِذَا جَاءَ أَجَلُهُمْ لَا يَسْتَأْخِرُونَ سَاعَةً ۖ وَلَا يَسْتَقْدِمُونَ ۞
ಪ್ರತಿಯೊಂದು ಸಮುದಾಯಕ್ಕೂ ಒಂದು ಕಾಲಾವಧಿ ನಿಗದಿತವಾಗಿದೆ. ತಮ್ಮ ಅವಧಿ ಸಮೀಪಿಸಿದಾಗ ಅದನ್ನು ಕ್ಷಣಮಾತ್ರಕ್ಕಾದರೂ ಮುಂದೂಡಲು ಅಥವಾ ಹಿಂದೂಡಲು ಅವರಿಗೆ ಸಾಧ್ಯವಾಗದು.
7:35
يَا بَنِي آدَمَ إِمَّا يَأْتِيَنَّكُمْ رُسُلٌ مِنْكُمْ يَقُصُّونَ عَلَيْكُمْ آيَاتِي ۙ فَمَنِ اتَّقَىٰ وَأَصْلَحَ فَلَا خَوْفٌ عَلَيْهِمْ وَلَا هُمْ يَحْزَنُونَ ۞
ಆದಮ್‌ರ ಸಂತತಿಗಳೇ, ನಿಮ್ಮ ಬಳಿಗೆ, ನಿಮ್ಮೊಳಗಿಂದಲೇ, ನಿಮಗೆ ನನ್ನ ವಚನಗಳನ್ನು ಕೇಳಿಸುವ ದೂತರು ಬಂದಾಗ, ಧರ್ಮನಿಷ್ಠನಾಗಿ ತನ್ನ ಸುಧಾರಣೆ ಮಾಡಿಕೊಂಡವನು - ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು.
7:36
وَالَّذِينَ كَذَّبُوا بِآيَاتِنَا وَاسْتَكْبَرُوا عَنْهَا أُولَٰئِكَ أَصْحَابُ النَّارِ ۖ هُمْ فِيهَا خَالِدُونَ ۞
ನಮ್ಮ ವಚನಗಳನ್ನು ಸುಳ್ಳೆಂದವರು ಮತ್ತು ಅದಕ್ಕೆದುರಾಗಿ ಅಹಂಕಾರ ತೋರಿದವರು - ಅವರೇ ನರಕವಾಸಿಗಳು. ಅವರು ಸದಾ ಕಾಲ ಅದರಲ್ಲೇ ಇರುವರು.
7:37
فَمَنْ أَظْلَمُ مِمَّنِ افْتَرَىٰ عَلَى اللَّهِ كَذِبًا أَوْ كَذَّبَ بِآيَاتِهِ ۚ أُولَٰئِكَ يَنَالُهُمْ نَصِيبُهُمْ مِنَ الْكِتَابِ ۖ حَتَّىٰ إِذَا جَاءَتْهُمْ رُسُلُنَا يَتَوَفَّوْنَهُمْ قَالُوا أَيْنَ مَا كُنْتُمْ تَدْعُونَ مِنْ دُونِ اللَّهِ ۖ قَالُوا ضَلُّوا عَنَّا وَشَهِدُوا عَلَىٰ أَنْفُسِهِمْ أَنَّهُمْ كَانُوا كَافِرِينَ ۞
ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಅಥವಾ ಅವನ ವಚನಗಳನ್ನು ಸುಳ್ಳೆಂದವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? - ನಮ್ಮ (ಮರಣ) ದೂತರು ಅವರ ಬಳಿಗೆ ಬಂದು ಅವರನ್ನು ಸಾಯಿಸುವ ತನಕ, ವಿಧಿ ಗ್ರಂಥದಲ್ಲಿರುವ ಅವರ ಪಾಲು ಅವರಿಗೆ ಸಿಗುತ್ತಲೇ ಇರುವುದು. ಅವರು (ಮರಣ ದೂತರು) ‘‘ಅಲ್ಲಾಹನ ಹೊರತು ನೀವು ಪ್ರಾರ್ಥಿಸುತ್ತಿದ್ದವರೆಲ್ಲಾ ಎಲ್ಲಿದ್ದಾರೆ?’’ ಎಂದು ಕೇಳುವರು. ಅವರು ‘‘ಅವರು ನಮ್ಮಿಂದ ಕಳೆದು ಹೋಗಿರುವರು’’ ಎನ್ನುವರು ಮತ್ತು ತಾವು ಧಿಕ್ಕಾರಿಗಳಾಗಿದ್ದೆವೆಂದು ಅವರೇ ತಮ್ಮ ವಿರುದ್ಧ ಸಾಕ್ಷಿ ಹೇಳುವರು.
7:38
قَالَ ادْخُلُوا فِي أُمَمٍ قَدْ خَلَتْ مِنْ قَبْلِكُمْ مِنَ الْجِنِّ وَالْإِنْسِ فِي النَّارِ ۖ كُلَّمَا دَخَلَتْ أُمَّةٌ لَعَنَتْ أُخْتَهَا ۖ حَتَّىٰ إِذَا ادَّارَكُوا فِيهَا جَمِيعًا قَالَتْ أُخْرَاهُمْ لِأُولَاهُمْ رَبَّنَا هَٰؤُلَاءِ أَضَلُّونَا فَآتِهِمْ عَذَابًا ضِعْفًا مِنَ النَّارِ ۖ قَالَ لِكُلٍّ ضِعْفٌ وَلَٰكِنْ لَا تَعْلَمُونَ ۞
ಅವನು (ಅಲ್ಲಾಹನು) ಹೇಳಿದನು; ನೀವು, ಜಿನ್ನ್ ಮತ್ತು ಮಾನವರ ಪೈಕಿ ನಿಮಗಿಂತ ಹಿಂದೆ ಗತಿಸಿದ ಸಮುದಾಯಗಳ ಜೊತೆ ನರಕಾಗ್ನಿಯನ್ನು ಪ್ರವೇಶಿಸಿರಿ. (ಅಲ್ಲಿಗೆ) ಪ್ರವೇಶಿಸುವ ಪ್ರತಿಯೊಂದು ಸಮುದಾಯವೂ ತನ್ನ ಸಂಗಾತಿ (ಪೂರ್ವ) ಸಮುದಾಯವನ್ನು ಶಪಿಸುವುದು. ಕೊನೆಗೆ ಅವರೆಲ್ಲರೂ ಅದರೊಳಗೆ ಸೇರುವರು. (ಅಲ್ಲಿ) ಮುಂದಿನವರು ಹಿಂದಿನವರ ಕುರಿತು - ‘‘ನಮ್ಮೊಡೆಯಾ! ಇವರೇ ನಮ್ಮನ್ನು ದಾರಿಗೆಡಿಸಿದವರು. ಇವರಿಗೆ ನರಕಾಗ್ನಿಯ ಇಮ್ಮಡಿ ಶಿಕ್ಷೆ ನೀಡು’’ ಎನ್ನುವರು. ಅವನು (ಅಲ್ಲಾಹನು) ಹೇಳುವನು; ಇಮ್ಮಡಿ ಶಿಕ್ಷೆ ಎಲ್ಲರಿಗೂ ಇದೆ. ಆದರೆ ನಿಮಗೆ ತಿಳಿದಿಲ್ಲ.’’
7:39
وَقَالَتْ أُولَاهُمْ لِأُخْرَاهُمْ فَمَا كَانَ لَكُمْ عَلَيْنَا مِنْ فَضْلٍ فَذُوقُوا الْعَذَابَ بِمَا كُنْتُمْ تَكْسِبُونَ ۞
ಅದರಲ್ಲಿನ ಹಿಂದಿನವರು, ಮುಂದಿನವರೊಡನೆ ‘‘ನಮ್ಮೆದುರು ನಿಮಗೆ ಯಾವ ಮೇಲ್ಮೆಯೂ ಇಲ್ಲ. ಈಗ, ನಿಮ್ಮ ಗಳಿಕೆಯ ಫಲವಾಗಿ ಯಾತನೆಯನ್ನು ಸವಿಯಿರಿ’’ ಎನ್ನುವರು.
7:40
إِنَّ الَّذِينَ كَذَّبُوا بِآيَاتِنَا وَاسْتَكْبَرُوا عَنْهَا لَا تُفَتَّحُ لَهُمْ أَبْوَابُ السَّمَاءِ وَلَا يَدْخُلُونَ الْجَنَّةَ حَتَّىٰ يَلِجَ الْجَمَلُ فِي سَمِّ الْخِيَاطِ ۚ وَكَذَٰلِكَ نَجْزِي الْمُجْرِمِينَ ۞
ಖಂಡಿತವಾಗಿಯೂ, ನಮ್ಮ ವಚನಗಳನ್ನು ಸುಳ್ಳೆಂದವರ ಮತ್ತು ಆ ಕುರಿತು ಅಹಂಕಾರ ತೋರಿದವರ ಪಾಲಿಗೆ ಆಕಾಶದ ಬಾಗಿಲುಗಳನ್ನು ತೆರೆಯಲಾಗದು ಮತ್ತು ಸೂಜಿಯ ರಂಧ್ರದೊಳಗೆ ಒಂಟೆಯು ಪ್ರವೇಶಿಸುವ ತನಕ ಅವರು ಸ್ವರ್ಗವನ್ನು ಪ್ರವೇಶಿಸಲಾರರು. ನಾವು ಇದೇ ರೀತಿ ಅಪರಾಧಿಗಳಿಗೆ ಪ್ರತಿಫಲವನ್ನು ನೀಡುತ್ತೇವೆ.
7:41
لَهُمْ مِنْ جَهَنَّمَ مِهَادٌ وَمِنْ فَوْقِهِمْ غَوَاشٍ ۚ وَكَذَٰلِكَ نَجْزِي الظَّالِمِينَ ۞
ಅವರ ಪಾಲಿಗೆ ನರಕದ ಭಾಗವೇ ಹಾಸಿಗೆ ಮತ್ತು ನರಕದ ಭಾಗವೇ ಹೊದಿಕೆಯಾಗಿರುವುದು. ನಾವು ಇದೇ ರೀತಿ ಅಕ್ರಮಿಗಳಿಗೆ ಪ್ರತಿಫಲವನ್ನು ನೀಡುತ್ತೇವೆ.
7:42
وَالَّذِينَ آمَنُوا وَعَمِلُوا الصَّالِحَاتِ لَا نُكَلِّفُ نَفْسًا إِلَّا وُسْعَهَا أُولَٰئِكَ أَصْحَابُ الْجَنَّةِ ۖ هُمْ فِيهَا خَالِدُونَ ۞
ವಿಶ್ವಾಸಿಗಳು ಮತ್ತು ಸತ್ಕರ್ಮ ಮಾಡಿದವರು (ತಿಳಿದಿರಲಿ) ನಾವು ಯಾರ ಮೇಲೂ ಅವರ ಸಾಮರ್ಥ್ಯವನ್ನು ಮೀರಿದ ಹೊರೆಯನ್ನು ಹೊರಿಸುವುದಿಲ್ಲ - ಅವರೇ ಸ್ವರ್ಗದವರು. ಅವರು ಸದಾ ಕಾಲ ಅದರಲ್ಲಿರುವರು.
7:43
وَنَزَعْنَا مَا فِي صُدُورِهِمْ مِنْ غِلٍّ تَجْرِي مِنْ تَحْتِهِمُ الْأَنْهَارُ ۖ وَقَالُوا الْحَمْدُ لِلَّهِ الَّذِي هَدَانَا لِهَٰذَا وَمَا كُنَّا لِنَهْتَدِيَ لَوْلَا أَنْ هَدَانَا اللَّهُ ۖ لَقَدْ جَاءَتْ رُسُلُ رَبِّنَا بِالْحَقِّ ۖ وَنُودُوا أَنْ تِلْكُمُ الْجَنَّةُ أُورِثْتُمُوهَا بِمَا كُنْتُمْ تَعْمَلُونَ ۞
ಅವರ ಮನದೊಳಗಿನ ವೈಷಮ್ಯಗಳನ್ನೆಲ್ಲಾ ನಾವು ತೊಲಗಿಸಿ ಬಿಡುವೆವು. ಅವರ ತಳದಲ್ಲಿ ನದಿಗಳು ಹರಿಯುತ್ತಿರುವವು. ಅವರು ‘‘ಎಲ್ಲ ಪ್ರಶಂಸೆಗಳು, ನಮಗೆ ಇದರತ್ತ ಮಾರ್ಗದರ್ಶನ ಮಾಡಿದ ಅಲ್ಲಾಹನಿಗೆ ಮೀಸಲು. ಅಲ್ಲಾಹನು ಮಾರ್ಗದರ್ಶನ ಮಾಡಿರದಿದ್ದರೆ ನಾವು ಸನ್ಮಾರ್ಗವನ್ನು ಪಡೆಯುತ್ತಿರಲಿಲ್ಲ. ನಮ್ಮ ಒಡೆಯನ ದೂತರು ಸತ್ಯದೊಂದಿಗೆ ನಮ್ಮ ಬಳಿಗೆ ಬಂದಿದ್ದರು’’ ಎನ್ನುವರು. ಇದಕ್ಕುತ್ತರವಾಗಿ, ‘‘ನಿಮ್ಮ ಕರ್ಮಗಳ ಫಲವಾಗಿ, ನೀವು ಸ್ವರ್ಗದ ವಾರಸುದಾರರಾಗುವಿರಿ.’’ ಎಂದು ಅವರನ್ನು ಕರೆದು ಹೇಳಲಾಗುವುದು.
7:44
وَنَادَىٰ أَصْحَابُ الْجَنَّةِ أَصْحَابَ النَّارِ أَنْ قَدْ وَجَدْنَا مَا وَعَدَنَا رَبُّنَا حَقًّا فَهَلْ وَجَدْتُمْ مَا وَعَدَ رَبُّكُمْ حَقًّا ۖ قَالُوا نَعَمْ ۚ فَأَذَّنَ مُؤَذِّنٌ بَيْنَهُمْ أَنْ لَعْنَةُ اللَّهِ عَلَى الظَّالِمِينَ ۞
ಸ್ವರ್ಗದವರು, ನರಕದವರನ್ನು ಕರೆದು ‘‘ನಮ್ಮ ಒಡೆಯನು ನಮಗೆ ನೀಡಿದ ವಾಗ್ದಾನಗಳೆಲ್ಲ ಸತ್ಯವಾಗಿರುವುದನ್ನು ನಾವು ಕಂಡುಕೊಂಡೆವು. ನಿಮ್ಮ ಒಡೆಯನ ವಾಗ್ದಾನಗಳೆಲ್ಲ ಸತ್ಯವಾಗಿರುವುದನ್ನು ನೀವು ಕಂಡಿರಾ? ಎಂದು ಕೇಳುವರು. ಅವರು ‘‘ಹೌದು’’ ಎನ್ನುವರು. ಆಗ ಅವರ ನಡುವೆ ಕೂಗುವವನೊಬ್ಬನು ಕೂಗಿ ಹೇಳುವನು; ‘‘ಅಲ್ಲಾಹನ ಶಾಪವಿದೆ ಅಕ್ರಮಿಗಳ ಮೇಲೆ.’’
7:45
الَّذِينَ يَصُدُّونَ عَنْ سَبِيلِ اللَّهِ وَيَبْغُونَهَا عِوَجًا وَهُمْ بِالْآخِرَةِ كَافِرُونَ ۞
‘‘ಅವರು (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದರು, ಅದರಲ್ಲಿ ವಕ್ರತೆಯನ್ನು ಹುಡುಕುತ್ತಿದ್ದರು ಮತ್ತು ಅವರು ಪರಲೋಕವನ್ನು ಧಿಕ್ಕರಿಸುವವರಾಗಿದ್ದರು.’’
7:46
وَبَيْنَهُمَا حِجَابٌ ۚ وَعَلَى الْأَعْرَافِ رِجَالٌ يَعْرِفُونَ كُلًّا بِسِيمَاهُمْ ۚ وَنَادَوْا أَصْحَابَ الْجَنَّةِ أَنْ سَلَامٌ عَلَيْكُمْ ۚ لَمْ يَدْخُلُوهَا وَهُمْ يَطْمَعُونَ ۞
ಆ ಎರಡು ವರ್ಗಗಳ ನಡುವೆ ಒಂದು ತೆರೆ ಇರುವುದು ಮತ್ತು ‘ಅಅ್'ರಾಫ್’ನಲ್ಲಿ (ತೆರೆಯ ಮೇಲು ತುದಿಯಲ್ಲಿ) ಕೆಲವರು ಇರುವರು. ಅವರು ಪ್ರತಿಯೊಬ್ಬರನ್ನೂ ಅವರ ಮುಖದಿಂದಲೇ ಗುರುತಿಸುವರು. ಅವರು ಸ್ವರ್ಗದವರನ್ನು ಕರೆದು ‘‘ನಿಮಗೆ ಶಾಂತಿ ಸಿಗಲಿ’’ ಎನ್ನುವರು. ಅವರು ಆವರೆಗೂ ಅದನ್ನು (ಸ್ವರ್ಗವನ್ನು) ಪ್ರವೇಶಿಸಿರಲಾರರು, ಆದರೆ ಅದನ್ನು ನಿರೀಕ್ಷಿಸುತ್ತಿರುವರು.
7:47
۞ وَإِذَا صُرِفَتْ أَبْصَارُهُمْ تِلْقَاءَ أَصْحَابِ النَّارِ قَالُوا رَبَّنَا لَا تَجْعَلْنَا مَعَ الْقَوْمِ الظَّالِمِينَ ۞
ಇನ್ನು ಅವರ ದೃಷ್ಟಿಗಳು ನರಕದವರ ಕಡೆಗೆ ತಿರುಗಿದಾಗ ಅವರು ‘‘ನಮ್ಮೊಡೆಯಾ, ನಮ್ಮನ್ನು ಅಕ್ರಮಿಗಳ ಜೊತೆ ಸೇರಿಸಬೇಡ’’ ಎನ್ನುವರು.
7:48
وَنَادَىٰ أَصْحَابُ الْأَعْرَافِ رِجَالًا يَعْرِفُونَهُمْ بِسِيمَاهُمْ قَالُوا مَا أَغْنَىٰ عَنْكُمْ جَمْعُكُمْ وَمَا كُنْتُمْ تَسْتَكْبِرُونَ ۞
ಮತ್ತು ‘ಅಅ್'ರಾಫ್’ನವರು, ತಾವು ಮುಖದಿಂದಲೇ ಗುರುತಿಸಿದ ಕೆಲವರನ್ನು ಕರೆದು ಹೇಳುವರು; ನಿಮ್ಮ ಸಂಖ್ಯಾಬಲದಿಂದಾಗಲಿ, ನೀವು ಅಹಂಕಾರ ಪಡುತ್ತಿದ್ದ ವಸ್ತುಗಳಿಂದಾಗಲಿ ನಿಮಗೆ ಯಾವ ಲಾಭವೂ ಆಗಲಿಲ್ಲ.
7:49
أَهَٰؤُلَاءِ الَّذِينَ أَقْسَمْتُمْ لَا يَنَالُهُمُ اللَّهُ بِرَحْمَةٍ ۚ ادْخُلُوا الْجَنَّةَ لَا خَوْفٌ عَلَيْكُمْ وَلَا أَنْتُمْ تَحْزَنُونَ ۞
ಇವರಿಗೆ ಅಲ್ಲಾಹನು ತನ್ನ ಯಾವ ಅನುಗ್ರಹವನ್ನೂ ತಲುಪಿಸಲಾರನೆಂದು ನೀವು ಆಣೆ ಹಾಕಿ ಹೇಳುತ್ತಿದ್ದುದು ಇವರ (ಈ ಸ್ವರ್ಗವಾಸಿಗಳ) ಕುರಿತೇ ಅಲ್ಲವೇ? (ಇಂದು ಅವರೊಡನೆ) ‘‘ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮಗೆ ಯಾವ ಭಯವೂ ಇಲ್ಲ ಮತ್ತು ನೀವು ದುಃಖಿಸಲಾರಿರಿ’’ (ಎಂದು ಹೇಳಲಾಗಿದೆ).
7:50
وَنَادَىٰ أَصْحَابُ النَّارِ أَصْحَابَ الْجَنَّةِ أَنْ أَفِيضُوا عَلَيْنَا مِنَ الْمَاءِ أَوْ مِمَّا رَزَقَكُمُ اللَّهُ ۚ قَالُوا إِنَّ اللَّهَ حَرَّمَهُمَا عَلَى الْكَافِرِينَ ۞
ಅತ್ತ ನರಕದವರು ಸ್ವರ್ಗದವರನ್ನು ಕೂಗಿ ‘‘ನಮ್ಮ ಕಡೆಗೆ ಒಂದಿಷ್ಟು ನೀರನ್ನು ಹರಿಸಿ ಬಿಡಿರಿ ಅಥವಾ ಅಲ್ಲಾಹನು ನಿಮಗೇನನ್ನು ನೀಡಿರುವನೋ ಅದರಿಂದ (ಒಂದಿಷ್ಟನ್ನು ನಮಗೆ ನೀಡಿರಿ)’’ ಎನ್ನುವರು. ಅವರು ಹೇಳುವರು; ‘‘ಖಂಡಿತವಾಗಿಯೂ ಅಲ್ಲಾಹನು ಅವುಗಳನ್ನು ಧಿಕ್ಕಾರಿಗಳ ಪಾಲಿಗೆ ನಿಷೇಧಿಸಿರುವನು.’’
7:51
الَّذِينَ اتَّخَذُوا دِينَهُمْ لَهْوًا وَلَعِبًا وَغَرَّتْهُمُ الْحَيَاةُ الدُّنْيَا ۚ فَالْيَوْمَ نَنْسَاهُمْ كَمَا نَسُوا لِقَاءَ يَوْمِهِمْ هَٰذَا وَمَا كَانُوا بِآيَاتِنَا يَجْحَدُونَ ۞
‘‘ಅವರು (ಧಿಕ್ಕಾರಿಗಳು) ತಮ್ಮ ಧರ್ಮವನ್ನು ಕೇವಲ ಆಟ ಹಾಗೂ ಮೋಜಿನ ವಿಷಯವಾಗಿ ಪರಿಗಣಿಸಿದ್ದರು ಮತ್ತು ಲೌಕಿಕ ಜೀವನವು ಅವರನ್ನು ವಂಚನೆಗೆ ಒಳಪಡಿಸಿತ್ತು. ಅವರು ಈ ದಿನದ ಭೇಟಿಯನ್ನು ಮರೆತಂತೆ ಇಂದು ನಾವು ಅವರನ್ನು ಮರೆತಿರುವೆವು. ಅವರು ನಮ್ಮ ವಚನಗಳನ್ನು ಧಿಕ್ಕರಿಸುತ್ತಿದ್ದರು.’’
7:52
وَلَقَدْ جِئْنَاهُمْ بِكِتَابٍ فَصَّلْنَاهُ عَلَىٰ عِلْمٍ هُدًى وَرَحْمَةً لِقَوْمٍ يُؤْمِنُونَ ۞
ನಾವು ಅವರ ಬಳಿಗೆ ಒಂದು ಗ್ರಂಥವನ್ನು ತಲುಪಿಸಿರುವೆವು. ಅದನ್ನು ನಾವು ಜ್ಞಾನದ ಆಧಾರದಲ್ಲಿ ಸಾಕಷ್ಟು ವಿಶಾಲಗೊಳಿಸಿರುವೆವು. ನಂಬುವವರ ಪಾಲಿಗೆ ಅದು ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ.
7:53
هَلْ يَنْظُرُونَ إِلَّا تَأْوِيلَهُ ۚ يَوْمَ يَأْتِي تَأْوِيلُهُ يَقُولُ الَّذِينَ نَسُوهُ مِنْ قَبْلُ قَدْ جَاءَتْ رُسُلُ رَبِّنَا بِالْحَقِّ فَهَلْ لَنَا مِنْ شُفَعَاءَ فَيَشْفَعُوا لَنَا أَوْ نُرَدُّ فَنَعْمَلَ غَيْرَ الَّذِي كُنَّا نَعْمَلُ ۚ قَدْ خَسِرُوا أَنْفُسَهُمْ وَضَلَّ عَنْهُمْ مَا كَانُوا يَفْتَرُونَ ۞
ಅವರು ಕಾಯುತ್ತಿರುವುದು, ಅದರ (ಲೋಕಾಂತ್ಯದ ಕುರಿತಾದ ಭವಿಷ್ಯ ವಾಣಿಗಳ) ಈಡೇರಿಕೆಯನ್ನಲ್ಲದೆ ಮತ್ತೇನನ್ನು? ನಿಜವಾಗಿ, ಅದರ ಈಡೇರಿಕೆಯ ದಿನ ಬಂದಾಗ, ಹಿಂದೆ ಅದನ್ನು ಮರೆತಿದ್ದವರು, ‘‘ನಮ್ಮ ಒಡೆಯನ ದೂತರು ಖಂಡಿತ ಸತ್ಯದೊಂದಿಗೇ ಬಂದಿದ್ದರು. (ಈಗ) ನಮ್ಮ ಪರವಾಗಿ ಶಿಫಾರಸು ಮಾಡಲು ಶಿಫಾರಸುದಾರರು ಯಾರಾದರೂ ಇದ್ದಾರೆಯೇ? ಅಥವಾ ನಾವು ಹಿಂದೆ ಮಾಡುತ್ತಿದ್ದುದಕ್ಕಿಂತ ಭಿನ್ನವಾದ ಕರ್ಮಗಳನ್ನು ಮಾಡುವಂತಾಗಲು, ನಮ್ಮನ್ನು ಮರಳಿಸಲಾಗುವುದೇ?’’ ಎನ್ನುವರು. ಖಂಡಿತವಾಗಿಯೂ ಅವರು ಸ್ವತಃ ತಮ್ಮನ್ನು ನಷ್ಟಕ್ಕೆ ಒಳಪಡಿಸಿಕೊಂಡರು ಮತ್ತು ಅವರು ಕಟ್ಟಿಕೊಂಡಿದ್ದ ಸುಳ್ಳುಗಳೆಲ್ಲಾ ಅವರಿಂದ ಕಳೆದು ಹೋದವು.
7:54
إِنَّ رَبَّكُمُ اللَّهُ الَّذِي خَلَقَ السَّمَاوَاتِ وَالْأَرْضَ فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ يُغْشِي اللَّيْلَ النَّهَارَ يَطْلُبُهُ حَثِيثًا وَالشَّمْسَ وَالْقَمَرَ وَالنُّجُومَ مُسَخَّرَاتٍ بِأَمْرِهِ ۗ أَلَا لَهُ الْخَلْقُ وَالْأَمْرُ ۗ تَبَارَكَ اللَّهُ رَبُّ الْعَالَمِينَ ۞
ನಿಮ್ಮ ಒಡೆಯನಾದ ಅಲ್ಲಾಹನೇ ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು. ತರುವಾಯ ಅವನು ವಿಶ್ವ ಸಿಂಹಾಸನದಲ್ಲಿ ಆಸೀನನಾದನು. ಅವನು ರಾತ್ರಿಯನ್ನು ಹಗಲಿನ ಮೇಲೆ ಆವರಿಸುತ್ತಾನೆ - ಅದು (ಹಗಲು) ಅದರ (ರಾತ್ರಿಯ) ಬೆನ್ನಿಗೇ ಧಾವಿಸಿ ಬರುತ್ತದೆ. ಇನ್ನು, ಸೂರ್ಯ ಮತ್ತು ಚಂದ್ರ ಹಾಗೂ ನಕ್ಷತ್ರಗಳು ಅವನ ಆದೇಶದಂತೆ ನಿಯಂತ್ರಿತವಾಗಿವೆ. ತಿಳಿದಿರಲಿ; ಸೃಷ್ಟಿಯೆಲ್ಲವೂ ಅವನಿಗೇ ಸೇರಿದೆ ಮತ್ತು ಅಧಿಕಾರವೂ ಅವನದೇ. ಸರ್ವಲೋಕಗಳ ಒಡೆಯನಾದ ಅಲ್ಲಾಹನು ತುಂಬಾ ಸಮೃದ್ಧನು.
7:55
ادْعُوا رَبَّكُمْ تَضَرُّعًا وَخُفْيَةً ۚ إِنَّهُ لَا يُحِبُّ الْمُعْتَدِينَ ۞
ಭಯ ಮತ್ತು ವಿನಯದೊಂದಿಗೆ ನಿಮ್ಮ ಒಡೆಯನನ್ನು ಕರೆದು ಪ್ರಾರ್ಥಿಸಿರಿ. ಖಂಡಿತವಾಗಿಯೂ ಅವನು ಮಿತಿಮೀರುವವರನ್ನು ಮೆಚ್ಚುವುದಿಲ್ಲ.
7:56
وَلَا تُفْسِدُوا فِي الْأَرْضِ بَعْدَ إِصْلَاحِهَا وَادْعُوهُ خَوْفًا وَطَمَعًا ۚ إِنَّ رَحْمَتَ اللَّهِ قَرِيبٌ مِنَ الْمُحْسِنِينَ ۞
ಭೂಮಿಯಲ್ಲಿ ಸುಧಾರಣೆ ಆದ ಬಳಿಕ, ಅಶಾಂತಿಯನ್ನು ಹರಡಬೇಡಿ. ಭಯ ಮತ್ತು ನಿರೀಕ್ಷೆಯೊಂದಿಗೆ ಅವನನ್ನು (ಅಲ್ಲಾಹನನ್ನು) ಕೂಗಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ಅಲ್ಲಾಹನ ಅನುಗ್ರಹವು ಸತ್ಕರ್ಮಿಗಳಿಗೆ ನಿಕಟವಾಗಿರುತ್ತದೆ.
7:57
وَهُوَ الَّذِي يُرْسِلُ الرِّيَاحَ بُشْرًا بَيْنَ يَدَيْ رَحْمَتِهِ ۖ حَتَّىٰ إِذَا أَقَلَّتْ سَحَابًا ثِقَالًا سُقْنَاهُ لِبَلَدٍ مَيِّتٍ فَأَنْزَلْنَا بِهِ الْمَاءَ فَأَخْرَجْنَا بِهِ مِنْ كُلِّ الثَّمَرَاتِ ۚ كَذَٰلِكَ نُخْرِجُ الْمَوْتَىٰ لَعَلَّكُمْ تَذَكَّرُونَ ۞
ಅವನೇ (ಅಲ್ಲಾಹನೇ) ತನ್ನ ಅನುಗ್ರಹಕ್ಕೆ (ಮಳೆಗೆ) ಮುನ್ನ, ಶುಭವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು. ಕೊನೆಗೆ ಅವು (ನೀರಿಂದ) ಭಾರವಾದ ಮೋಡಗಳನ್ನು ಹೊತ್ತು ತಂದಾಗ ನಾವು ಅವುಗಳನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಮತ್ತು ಅವುಗಳಿಂದ ನೀರನ್ನು ಸುರಿಸುತ್ತೇವೆ ಹಾಗೂ ಅದರ ಮೂಲಕ ನಾವು ಎಲ್ಲ ಬಗೆಯ ಫಲಗಳನ್ನು ಹೊರತರುತ್ತೇವೆ - ಇದೇ ರೀತಿ ನಾವು ಮೃತರನ್ನು (ಜೀವಂತ) ಹೊರ ತರಲಿದ್ದೇವೆ - ನೀವು ಪಾಠ ಕಲಿಯಬೇಕೆಂದು (ಇದನ್ನು ಹೇಳಲಾಗುತ್ತಿದೆ).
7:58
وَالْبَلَدُ الطَّيِّبُ يَخْرُجُ نَبَاتُهُ بِإِذْنِ رَبِّهِ ۖ وَالَّذِي خَبُثَ لَا يَخْرُجُ إِلَّا نَكِدًا ۚ كَذَٰلِكَ نُصَرِّفُ الْآيَاتِ لِقَوْمٍ يَشْكُرُونَ ۞
ಶುದ್ಧ ನೆಲದಿಂದ, ಅದರ ಒಡೆಯನ ಆದೇಶದಂತೆ, ಉಪಯುಕ್ತ ಬೆಳೆಯು ಉತ್ಪನ್ನವಾಗುತ್ತದೆ. ಆದರೆ ಅಶುದ್ಧ ನೆಲವು ಕೇವಲ ಕಸಕಡ್ಡಿಗಳನ್ನು ಉತ್ಪಾದಿಸುತ್ತದೆ. ಈ ರೀತಿ ನಾವು ಕೃತಜ್ಞ ಜನರಿಗಾಗಿ ನಮ್ಮ ವಚನಗಳನ್ನು ವಿವಿಧ ರೂಪಗಳಲ್ಲಿ ವಿವರಿಸುತ್ತೇವೆ.
7:59
لَقَدْ أَرْسَلْنَا نُوحًا إِلَىٰ قَوْمِهِ فَقَالَ يَا قَوْمِ اعْبُدُوا اللَّهَ مَا لَكُمْ مِنْ إِلَٰهٍ غَيْرُهُ إِنِّي أَخَافُ عَلَيْكُمْ عَذَابَ يَوْمٍ عَظِيمٍ ۞
ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದ್ದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಬೇರಾವ ದೇವರೂ ಇಲ್ಲ. ನೀವು ಒಂದು ಮಹಾ ದಿನದ ಶಿಕ್ಷೆಗೆ ತುತ್ತಾಗುವ ಭಯ ನನಗಿದೆ.
7:60
قَالَ الْمَلَأُ مِنْ قَوْمِهِ إِنَّا لَنَرَاكَ فِي ضَلَالٍ مُبِينٍ ۞
ಅವರ ಜನಾಂಗದ ಕೆಲವು ನಾಯಕರು ‘‘ನಾವು ನಿಮ್ಮನ್ನು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿ ಕಾಣುತ್ತಿದ್ದೇವೆ.’’ ಎಂದರು.
7:61
قَالَ يَا قَوْمِ لَيْسَ بِي ضَلَالَةٌ وَلَٰكِنِّي رَسُولٌ مِنْ رَبِّ الْعَالَمِينَ ۞
ಅವರು (ನೂಹರು) ಹೇಳಿದರು; ನನ್ನ ಜನಾಂಗದವರೇ, ನಾನೇನೂ ದಾರಿಗೆಟ್ಟಿಲ್ಲ. ನಿಜವಾಗಿ ನಾನು ಸರ್ವಲೋಕಗಳ ಒಡೆಯನ ದೂತನಾಗಿದ್ದೇನೆ.
7:62
أُبَلِّغُكُمْ رِسَالَاتِ رَبِّي وَأَنْصَحُ لَكُمْ وَأَعْلَمُ مِنَ اللَّهِ مَا لَا تَعْلَمُونَ ۞
ನಾನು ನನ್ನ ಒಡೆಯನ ಸಂದೇಶಗಳನ್ನು ನಿಮಗೆ ತಲುಪಿಸುತ್ತಿದ್ದೇನೆ. ನಾನು ನಿಮ್ಮ ಹಿತೈಷಿಯಾಗಿದ್ದೇನೆ ಮತ್ತು ಅಲ್ಲಾಹನ ಕಡೆಯಿಂದ, ನಿಮಗೆ ತಿಳಿದಿಲ್ಲದ ವಿಷಯಗಳು ನನಗೆ ತಿಳಿದಿವೆ.
7:63
أَوَعَجِبْتُمْ أَنْ جَاءَكُمْ ذِكْرٌ مِنْ رَبِّكُمْ عَلَىٰ رَجُلٍ مِنْكُمْ لِيُنْذِرَكُمْ وَلِتَتَّقُوا وَلَعَلَّكُمْ تُرْحَمُونَ ۞
ನಿಮ್ಮನ್ನು ಎಚ್ಚರಿಸಲಿಕ್ಕಾಗಿ, ನಿಮ್ಮನ್ನು ಧರ್ಮನಿಷ್ಠರಾಗಿಸಲಿಕ್ಕಾಗಿ ಮತ್ತು ನೀವು ಕರುಣೆಗೆ ಪಾತ್ರರಾಗುವುದಕ್ಕಾಗಿ, ನಿಮ್ಮ ಒಡೆಯನ ಉಪದೇಶವು ನಿಮ್ಮೊಳಗಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಕುರಿತು ನೀವೇನು ಅಚ್ಚರಿ ಪಡುತ್ತೀರಾ?
7:64
فَكَذَّبُوهُ فَأَنْجَيْنَاهُ وَالَّذِينَ مَعَهُ فِي الْفُلْكِ وَأَغْرَقْنَا الَّذِينَ كَذَّبُوا بِآيَاتِنَا ۚ إِنَّهُمْ كَانُوا قَوْمًا عَمِينَ ۞
ಅವರು (ನೂಹರ ಜನಾಂಗದವರು) ಅವರನ್ನು ಸುಳ್ಳುಗಾರನೆಂದು ತಿರಸ್ಕರಿಸಿದರು ಮತ್ತು ನಾವು ಅವರನ್ನು ಹಾಗೂ ಹಡಗಿನಲ್ಲಿ ಅವರ ಜೊತೆಗಿದ್ದವರನ್ನು ರಕ್ಷಿಸಿದೆವು. ಇನ್ನು, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರನ್ನು ನಾವು ಮುಳುಗಿಸಿಬಿಟ್ಟೆವು. ಖಂಡಿತವಾಗಿಯೂ ಅವರು (ಸತ್ಯದ ಪಾಲಿಗೆ) ಒಂದು ಕುರುಡ ಜನಾಂಗವಾಗಿದ್ದರು.
7:65
۞ وَإِلَىٰ عَادٍ أَخَاهُمْ هُودًا ۗ قَالَ يَا قَوْمِ اعْبُدُوا اللَّهَ مَا لَكُمْ مِنْ إِلَٰهٍ غَيْرُهُ ۚ أَفَلَا تَتَّقُونَ ۞
ಅತ್ತ, ಆದ್ ಜನಾಂಗದೆಡೆಗೆ ನಾವು ಅವರ ಸಹೋದರ ಹೂದ್‌ರನ್ನು ಕಳಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನೇ ಆರಾಧಿಸಿರಿ. ಅವನ ಹೊರತು ನಿಮಗೆ ಬೇರಾವ ದೇವರೂ ಇಲ್ಲ. ನೀವೇನು ಅಂಜುವುದಿಲ್ಲವೇ?
7:66
قَالَ الْمَلَأُ الَّذِينَ كَفَرُوا مِنْ قَوْمِهِ إِنَّا لَنَرَاكَ فِي سَفَاهَةٍ وَإِنَّا لَنَظُنُّكَ مِنَ الْكَاذِبِينَ ۞
ಅವರ ಜನಾಂಗದಲ್ಲಿನ ಕೆಲವು ಧಿಕ್ಕಾರಿ ನಾಯಕರು ಹೇಳಿದರು; ಖಂಡಿತವಾಗಿಯೂ ನಾವು ನಿಮ್ಮನ್ನು ಮೂರ್ಖತನದಲ್ಲಿ ಕಾಣುತ್ತಿದ್ದೇವೆ ಮತ್ತು ಖಂಡಿತವಾಗಿಯೂ ನಾವು ನಿಮ್ಮನ್ನು ಸುಳ್ಳುಗಾರರೆಂದು ಭಾವಿಸುತ್ತೇವೆ.
7:67
قَالَ يَا قَوْمِ لَيْسَ بِي سَفَاهَةٌ وَلَٰكِنِّي رَسُولٌ مِنْ رَبِّ الْعَالَمِينَ ۞
ಅವರು (ಹೂದ್) ಹೇಳಿದರು; ನನ್ನಲ್ಲಿ ಯಾವುದೇ ಮೂರ್ಖತನವಿಲ್ಲ. ನಿಜವಾಗಿ ನಾನು ಸರ್ವ ಲೋಕಗಳ ಒಡೆಯನ ದೂತನಾಗಿದ್ದೇನೆ.
7:68
أُبَلِّغُكُمْ رِسَالَاتِ رَبِّي وَأَنَا لَكُمْ نَاصِحٌ أَمِينٌ ۞
ನಾನು ನಿಮಗೆ ನನ್ನ ಒಡೆಯನ ಸಂದೇಶಗಳನ್ನು ತಲುಪಿಸುತ್ತಿದ್ದೇನೆ ಮತ್ತು ನಿಮ್ಮ ಪಾಲಿಗೆ ನಾನು ಒಬ್ಬ ನಂಬಲರ್ಹ ಹಿತೈಷಿಯಾಗಿದ್ದೇನೆ.
7:69
أَوَعَجِبْتُمْ أَنْ جَاءَكُمْ ذِكْرٌ مِنْ رَبِّكُمْ عَلَىٰ رَجُلٍ مِنْكُمْ لِيُنْذِرَكُمْ ۚ وَاذْكُرُوا إِذْ جَعَلَكُمْ خُلَفَاءَ مِنْ بَعْدِ قَوْمِ نُوحٍ وَزَادَكُمْ فِي الْخَلْقِ بَسْطَةً ۖ فَاذْكُرُوا آلَاءَ اللَّهِ لَعَلَّكُمْ تُفْلِحُونَ ۞
ನೀವೇನು, ನಿಮ್ಮನ್ನು ಎಚ್ಚರಿಸಲು, ನಿಮ್ಮ ಒಡೆಯನ ಉಪದೇಶವು ನಿಮ್ಮೊಳಗಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಕುರಿತು ಅಚ್ಚರಿಪಡುತ್ತೀರಾ? ಸ್ಮರಿಸಿರಿ; ನೂಹರ ಜನಾಂಗದ ಬಳಿಕ, ಅವನು (ಅಲ್ಲಾಹನು) ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡಿದನು ಮತ್ತು ರಚನೆಯಲ್ಲಿ ನಿಮಗೆ ಶ್ರೇಷ್ಠತೆಯನ್ನು ನೀಡಿದನು. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ - ನೀವು ವಿಜಯಿಗಳಾಗಬಹುದು.
7:70
قَالُوا أَجِئْتَنَا لِنَعْبُدَ اللَّهَ وَحْدَهُ وَنَذَرَ مَا كَانَ يَعْبُدُ آبَاؤُنَا ۖ فَأْتِنَا بِمَا تَعِدُنَا إِنْ كُنْتَ مِنَ الصَّادِقِينَ ۞
ಅವರು ಹೇಳಿದರು; ನೀವೇನು, ಅಲ್ಲಾಹನೊಬ್ಬನನ್ನು ಮಾತ್ರ ನಾವು ಪೂಜಿಸಬೇಕು ಮತ್ತು ನಮ್ಮ ಪೂರ್ವಜರು ಪೂಜಿಸುತ್ತಿದ್ದವುಗಳನ್ನೆಲ್ಲಾ ಬಿಟ್ಟು ಬಿಡಬೇಕೆಂದು ಹೇಳಲು ನಮ್ಮ ಬಳಿಗೆ ಬಂದಿರುವಿರಾ ? ನೀವು ಸತ್ಯವಂತರಾಗಿದ್ದರೆ, ಯಾವುದು ಬರಲಿದೆ ಎಂದು ನಮ್ಮೊಡನೆ ನೀವು ಹೇಳುತ್ತಿರುವಿರೋ ಅದನ್ನು ತಂದು ಬಿಡಿ.
7:71
قَالَ قَدْ وَقَعَ عَلَيْكُمْ مِنْ رَبِّكُمْ رِجْسٌ وَغَضَبٌ ۖ أَتُجَادِلُونَنِي فِي أَسْمَاءٍ سَمَّيْتُمُوهَا أَنْتُمْ وَآبَاؤُكُمْ مَا نَزَّلَ اللَّهُ بِهَا مِنْ سُلْطَانٍ ۚ فَانْتَظِرُوا إِنِّي مَعَكُمْ مِنَ الْمُنْتَظِرِينَ ۞
ಅವರು (ಹೂದ್) ಹೇಳಿದರು; ಇದೋ, ನಿಮ್ಮ ಮೇಲೆ ಬಂದೆರಗಿತು ನಿಮ್ಮ ಒಡೆಯನ ಶಿಕ್ಷೆ ಮತ್ತು ಅವನ ಆಕ್ರೋಶ. ನೀವೇನು, ನೀವು ಮತ್ತು ನಿಮ್ಮ ಪೂರ್ವಜರು ಇಟ್ಟುಕೊಂಡಿರುವ ಕೇವಲ ಕೆಲವು ಹೆಸರುಗಳ ಕುರಿತು ನನ್ನೊಡನೆ ಜಗಳಾಡುತ್ತಿರುವಿರಾ? ನಿಜವಾಗಿ ಅವುಗಳ ಪರವಾಗಿ ಅಲ್ಲಾಹನು ಯಾವ ಪುರಾವೆಯನ್ನೂ ಇಳಿಸಿಲ್ಲ. ಇದೀಗ ಕಾಯಿರಿ, ನಿಮ್ಮ ಜೊತೆ ನಾನೂ ಕಾಯುತ್ತೇನೆ.
7:72
فَأَنْجَيْنَاهُ وَالَّذِينَ مَعَهُ بِرَحْمَةٍ مِنَّا وَقَطَعْنَا دَابِرَ الَّذِينَ كَذَّبُوا بِآيَاتِنَا ۖ وَمَا كَانُوا مُؤْمِنِينَ ۞
ಕೊನೆಗೆ ನಾವು ನಮ್ಮ ಅನುಗ್ರಹದಿಂದ, ಅವರನ್ನು (ಹೂದ್‌ರನ್ನು) ಮತ್ತು ಅವರ ಜೊತೆಗೆ ಇದ್ದವರನ್ನು ರಕ್ಷಿಸಿದೆವು ಮತ್ತು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರ ಮೂಲವನ್ನೇ ಕಡಿದು ಹಾಕಿದೆವು. ಅವರು ನಂಬುವವರಂತು ಆಗಿರಲಿಲ್ಲ.
7:73
وَإِلَىٰ ثَمُودَ أَخَاهُمْ صَالِحًا ۗ قَالَ يَا قَوْمِ اعْبُدُوا اللَّهَ مَا لَكُمْ مِنْ إِلَٰهٍ غَيْرُهُ ۖ قَدْ جَاءَتْكُمْ بَيِّنَةٌ مِنْ رَبِّكُمْ ۖ هَٰذِهِ نَاقَةُ اللَّهِ لَكُمْ آيَةً ۖ فَذَرُوهَا تَأْكُلْ فِي أَرْضِ اللَّهِ ۖ وَلَا تَمَسُّوهَا بِسُوءٍ فَيَأْخُذَكُمْ عَذَابٌ أَلِيمٌ ۞
ಹಾಗೆಯೇ, ಸಮೂದ್ ಜನಾಂಗದೆಡೆಗೆ ನಾವು ಅವರ ಸಹೋದರ ಸ್ವಾಲಿಹ್‌ರನ್ನು ಕಳುಹಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಪೂಜಿಸಿರಿ ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಇದೀಗ ನಿಮ್ಮೊಡೆಯನ ಕಡೆಯಿಂದ ನಿಮ್ಮ ಬಳಿಗೆ ಒಂದು ಸ್ಪಷ್ಟ ಪುರಾವೆಯು ಬಂದಿದೆ. ಇದು ಅಲ್ಲಾಹನ ಹೆಣ್ಣೊಂಟೆ. ಇದು ನಿಮ್ಮ ಪಾಲಿಗೊಂದು ಸೂಚನೆಯಾಗಿದೆ. ಇದನ್ನು ಇದರ ಪಾಡಿಗೆ ಬಿಟ್ಟು ಬಿಡಿರಿ - ಇದು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲಿ. ಕೆಟ್ಟ ಸಂಕಲ್ಪದಿಂದ ಇದನ್ನು ಮುಟ್ಟಬೇಡಿ (ಮುಟ್ಟಿದರೆ) ಭಾರೀ ಕಠಿಣ ಶಿಕ್ಷೆಯು ನಿಮ್ಮನ್ನು ಆವರಿಸಲಿದೆ.
7:74
وَاذْكُرُوا إِذْ جَعَلَكُمْ خُلَفَاءَ مِنْ بَعْدِ عَادٍ وَبَوَّأَكُمْ فِي الْأَرْضِ تَتَّخِذُونَ مِنْ سُهُولِهَا قُصُورًا وَتَنْحِتُونَ الْجِبَالَ بُيُوتًا ۖ فَاذْكُرُوا آلَاءَ اللَّهِ وَلَا تَعْثَوْا فِي الْأَرْضِ مُفْسِدِينَ ۞
ನೆನಪಿಸಿಕೊಳ್ಳಿರಿ; ಅವನು (ಅಲ್ಲಾಹನು) ಆದ್ ಜನಾಂಗದ ಬಳಿಕ ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡಿದನು ಹಾಗೂ ಅವನು ನಿಮಗೆ ಭೂಮಿಯಲ್ಲಿ ನೆಲೆಯನ್ನು ಒದಗಿಸಿದನು. ನೀವೀಗ ಅದರ ಬಯಲು ಪ್ರದೇಶಗಳಲ್ಲಿ ಅರಮನೆಗಳನ್ನು ನಿರ್ಮಿಸುತ್ತೀರಿ ಮತ್ತು ಬೆಟ್ಟಗಳನ್ನು ಕೊರೆದು ನಿವಾಸಗಳನ್ನು ರಚಿಸುತ್ತೀರಿ. ಅಲ್ಲಾಹನ ಕೊಡುಗೆ ಗಳನ್ನು ಸ್ಮರಿಸಿರಿ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುವವರಾಗಿ ಅಲೆಯಬೇಡಿ.
7:75
قَالَ الْمَلَأُ الَّذِينَ اسْتَكْبَرُوا مِنْ قَوْمِهِ لِلَّذِينَ اسْتُضْعِفُوا لِمَنْ آمَنَ مِنْهُمْ أَتَعْلَمُونَ أَنَّ صَالِحًا مُرْسَلٌ مِنْ رَبِّهِ ۚ قَالُوا إِنَّا بِمَا أُرْسِلَ بِهِ مُؤْمِنُونَ ۞
ಅವರ ಜನಾಂಗದ ಅಹಂಕಾರಿ ನಾಯಕರು, ಸತ್ಯವನ್ನು ನಂಬಿದ್ದ ತಮ್ಮ ಜನಾಂಗದ ಮರ್ದಿತರೊಡನೆ, ‘‘ಸಾಲಿಹ್, ತನ್ನ ಒಡೆಯನ ಕಡೆಯಿಂದ ಕಳುಹಿಸಲ್ಪಟ್ಟವನೆಂದು ನಿಮಗೆ ಗೊತ್ತೇ?’’ ಎಂದು ಕೇಳಿದರು. ಅವರು; ‘‘ಖಂಡಿತವಾಗಿಯೂ, ಅವರನ್ನು ಯಾವುದರ ಜೊತೆ ಕಳುಹಿಸಲಾಗಿದೆಯೋ ಅದನ್ನು ನಾವು ನಂಬಿರುವೆವು.’’ ಎಂದು ಉತ್ತರಿಸಿದರು.
7:76
قَالَ الَّذِينَ اسْتَكْبَرُوا إِنَّا بِالَّذِي آمَنْتُمْ بِهِ كَافِرُونَ ۞
ಅಹಂಕಾರಿಗಳು; ‘‘ನೀವು ನಂಬಿರುವುದನ್ನು ನಾವು ಧಿಕ್ಕರಿಸುತ್ತೇವೆ.’’ ಎಂದರು.
7:77
فَعَقَرُوا النَّاقَةَ وَعَتَوْا عَنْ أَمْرِ رَبِّهِمْ وَقَالُوا يَا صَالِحُ ائْتِنَا بِمَا تَعِدُنَا إِنْ كُنْتَ مِنَ الْمُرْسَلِينَ ۞
ಮುಂದೆ, ಅವರು ಆ ಹೆಣ್ಣೊಂಟೆಯನ್ನು ಕೊಂದು ಬಿಟ್ಟರು ಹಾಗೂ ತಮ್ಮ ಒಡೆಯನ ಆದೇಶವನ್ನು ಮೀರಿ ನಡೆದರು ಮತ್ತು ಹೇಳಿದರು; ‘‘ಓ ಸ್ವಾಲಿಹ್, ನಿಜಕ್ಕೂ ನೀನೊಬ್ಬ ದೇವದೂತನಾಗಿದ್ದರೆ, ನೀನು ನಮಗೆ ವಾಗ್ದಾನ ಮಾಡುತ್ತಿದ್ದುದನ್ನು ನಮ್ಮ ಬಳಿಗೆ ತಂದುಬಿಡು.’’
7:78
فَأَخَذَتْهُمُ الرَّجْفَةُ فَأَصْبَحُوا فِي دَارِهِمْ جَاثِمِينَ ۞
ಕೊನೆಗೆ, ಭೀಕರ ಭೂಕಂಪವೊಂದು ಅವರನ್ನು ಆವರಿಸಿಕೊಂಡಿತು ಮತ್ತು ಅವರು ತಮ್ಮ ನಿವಾಸಗಳಲ್ಲೇ ನಿಶ್ಚಲ ಶವಗಳಾಗಿ ಬಿದ್ದುಕೊಂಡಿದ್ದರು.
7:79
فَتَوَلَّىٰ عَنْهُمْ وَقَالَ يَا قَوْمِ لَقَدْ أَبْلَغْتُكُمْ رِسَالَةَ رَبِّي وَنَصَحْتُ لَكُمْ وَلَٰكِنْ لَا تُحِبُّونَ النَّاصِحِينَ ۞
ಸ್ವಾಲಿಹ್‌ರು ಅವರನ್ನು ಕಡೆಗಣಿಸಿದರು ಮತ್ತು ‘‘ನನ್ನ ಜನಾಂಗದವರೇ, ನಾನು ನನ್ನ ಒಡೆಯನ ಸಂದೇಶವನ್ನು ನಿಮಗೆ ತಲುಪಿಸಿದೆನು ಮತ್ತು ನಾನು ನಿಮ್ಮ ಹಿತೈಷಿಯಾಗಿದ್ದೆನು. ಆದರೆ ನೀವು ಹಿತೈಷಿಗಳನ್ನು ಪ್ರೀತಿಸುವುದಿಲ್ಲ.’’ ಎಂದರು.
7:80
وَلُوطًا إِذْ قَالَ لِقَوْمِهِ أَتَأْتُونَ الْفَاحِشَةَ مَا سَبَقَكُمْ بِهَا مِنْ أَحَدٍ مِنَ الْعَالَمِينَ ۞
ಇನ್ನು ಲೂತ್, ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವೇನು ಸರ್ವಲೋಕದಲ್ಲಿ ನಿಮಗಿಂತ ಮೊದಲು ಯಾರೂ ಮಾಡಿಲ್ಲದ ಅಶ್ಲೀಲ ಕೃತ್ಯವನ್ನು ಎಸಗುತ್ತೀರಾ?’’
7:81
إِنَّكُمْ لَتَأْتُونَ الرِّجَالَ شَهْوَةً مِنْ دُونِ النِّسَاءِ ۚ بَلْ أَنْتُمْ قَوْمٌ مُسْرِفُونَ ۞
‘‘ನೀವಂತು, ಕಾಮಾಪೇಕ್ಷೆಯೊಂದಿಗೆ, ಸ್ತ್ರೀಯರ ಬದಲು ಪುರುಷರ ಬಳಿಗೆ ಹೋಗುತ್ತೀರಿ. ಖಂಡಿತವಾಗಿಯೂ ನೀವು ಅತಿರೇಕವೆಸಗುವವರಾಗಿದ್ದೀರಿ.’’
7:82
وَمَا كَانَ جَوَابَ قَوْمِهِ إِلَّا أَنْ قَالُوا أَخْرِجُوهُمْ مِنْ قَرْيَتِكُمْ ۖ إِنَّهُمْ أُنَاسٌ يَتَطَهَّرُونَ ۞
ಇದಕ್ಕೆ ಅವರ ಜನಾಂಗದ ಉತ್ತರ ‘‘ಇವರನ್ನು ನಿಮ್ಮ ನಾಡಿನಿಂದ ಹೊರಕ್ಕೆ ಅಟ್ಟಿ ಬಿಡಿರಿ. ಇವರು ಭಾರೀ ಪಾವಿತ್ರ್ಯ ಬಯಸುವ ಜನರಾಗಿದ್ದಾರೆ’’ ಎನ್ನುವುದಷ್ಟೇ ಆಗಿತ್ತು.
7:83
فَأَنْجَيْنَاهُ وَأَهْلَهُ إِلَّا امْرَأَتَهُ كَانَتْ مِنَ الْغَابِرِينَ ۞
ಕೊನೆಗೆ ನಾವು ಅವರನ್ನು (ಲೂತ್‌ರನ್ನು) ಮತ್ತು ಅವರ ಮನೆಯವರನ್ನು ರಕ್ಷಿಸಿದೆವು - ಅವರ ಪತ್ನಿಯ ಹೊರತು. ಏಕೆಂದರೆ ಆಕೆ ಹಿಂದೆ ಉಳಿಯುವವರ ಸಾಲಿಗೆ ಸೇರಿದ್ದಳು.
7:84
وَأَمْطَرْنَا عَلَيْهِمْ مَطَرًا ۖ فَانْظُرْ كَيْفَ كَانَ عَاقِبَةُ الْمُجْرِمِينَ ۞
ಅವರ (ಲೂತ್‌ರ ಜನಾಂಗದ) ಮೇಲೆ ನಾವು ಒಂದು ಮಳೆಯನ್ನು ಸುರಿಸಿ ಬಿಟ್ಟೆವು. ನೋಡಿರಿ, ಅಪರಾಧಿಗಳ ಗತಿ ಏನಾಯಿತೆಂದು!
7:85
وَإِلَىٰ مَدْيَنَ أَخَاهُمْ شُعَيْبًا ۗ قَالَ يَا قَوْمِ اعْبُدُوا اللَّهَ مَا لَكُمْ مِنْ إِلَٰهٍ غَيْرُهُ ۖ قَدْ جَاءَتْكُمْ بَيِّنَةٌ مِنْ رَبِّكُمْ ۖ فَأَوْفُوا الْكَيْلَ وَالْمِيزَانَ وَلَا تَبْخَسُوا النَّاسَ أَشْيَاءَهُمْ وَلَا تُفْسِدُوا فِي الْأَرْضِ بَعْدَ إِصْلَاحِهَا ۚ ذَٰلِكُمْ خَيْرٌ لَكُمْ إِنْ كُنْتُمْ مُؤْمِنِينَ ۞
ಹಾಗೆಯೇ ನಾವು ಮದ್‌ಯನ್ ಜನಾಂಗದವರೆಡೆಗೆ ಅವರ ಸಹೋದರ ಶುಐಬ್‌ರನ್ನು ಕಳುಹಿಸಿದೆವು. ಅವರು ಹೇಳಿದರು; ‘‘ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಪೂಜಿಸಿರಿ, ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಇದೀಗ ನಿಮ್ಮ ಬಳಿಗೆ ನಿಮ್ಮ ಒಡೆಯನ ಕಡೆಯಿಂದ ಸ್ಪಷ್ಟ ಪುರಾವೆಯು ಬಂದಿದೆ. ನೀವಿನ್ನು, ಪರಿಪೂರ್ಣವಾಗಿ ಅಳೆಯಿರಿ ಮತ್ತು ತೂಗಿರಿ. ಜನರಿಗೆ ಅವರ ಸರಕುಗಳನ್ನು ಕಡಿತಗೊಳಿಸಿ ಕೊಡಬೇಡಿ. ಹಾಗೆಯೇ, ಭೂಮಿಯಲ್ಲಿ ಸುಧಾರಣೆಯಾದ ಬಳಿಕ ನೀವು ಅದರಲ್ಲಿ ಅಶಾಂತಿಯನ್ನು ಹಬ್ಬಬೇಡಿ. ನೀವು ನಂಬುವವರಾಗಿದ್ದರೆ, ಈ ಧೋರಣೆಯೇ ನಿಮ್ಮ ಪಾಲಿಗೆ ಉತ್ತಮ.’’
7:86
وَلَا تَقْعُدُوا بِكُلِّ صِرَاطٍ تُوعِدُونَ وَتَصُدُّونَ عَنْ سَبِيلِ اللَّهِ مَنْ آمَنَ بِهِ وَتَبْغُونَهَا عِوَجًا ۚ وَاذْكُرُوا إِذْ كُنْتُمْ قَلِيلًا فَكَثَّرَكُمْ ۖ وَانْظُرُوا كَيْفَ كَانَ عَاقِبَةُ الْمُفْسِدِينَ ۞
‘‘ನೀವು ಎಲ್ಲ ದಾರಿಗಳಲ್ಲಿ ಕುಳಿತು, ಜನರನ್ನು ಬೆದರಿಸುವವರೂ ಅಲ್ಲಾಹನಲ್ಲಿ ನಂಬಿಕೆ ಇಟ್ಟವರನ್ನು ಅವನ ದಾರಿಯಿಂದ ತಡೆಯುವವರೂ ಆಗಬೇಡಿ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕಬೇಡಿ. ನೆನಪಿಸಿಕೊಳ್ಳಿರಿ; ನೀವು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾಗ ಅವನು ನಿಮ್ಮ ಸಂಖ್ಯೆಯನ್ನು ಹೆಚ್ಚಿಸಿದನು. ಹಾಗೆಯೇ, ಅಶಾಂತಿ ಹಬ್ಬುವವರ ಗತಿ ಏನಾಯಿತೆಂಬುದನ್ನು ನೋಡಿರಿ.’’
7:87
وَإِنْ كَانَ طَائِفَةٌ مِنْكُمْ آمَنُوا بِالَّذِي أُرْسِلْتُ بِهِ وَطَائِفَةٌ لَمْ يُؤْمِنُوا فَاصْبِرُوا حَتَّىٰ يَحْكُمَ اللَّهُ بَيْنَنَا ۚ وَهُوَ خَيْرُ الْحَاكِمِينَ ۞
ಇದೀಗ ನಿಮ್ಮಲ್ಲಿನ ಒಂದು ಗುಂಪು, ನನ್ನನ್ನು ಯಾವುದರ ಜೊತೆಗೆ ಕಳಿಸಲಾಗಿದೆಯೋ ಅದನ್ನು ನಂಬುವವರಾಗಿದ್ದಾರೆ, ಹಾಗೂ ಇನ್ನೊಂದು ಗುಂಪು ಅದನ್ನು ನಂಬುತ್ತಿಲ್ಲ - ಅಲ್ಲಾಹನು ನಮ್ಮ ನಡುವೆ ತೀರ್ಪು ನೀಡುವ ತನಕ ಸಹನೆ ವಹಿಸಿರಿ - ಅವನು ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ.
7:88
۞ قَالَ الْمَلَأُ الَّذِينَ اسْتَكْبَرُوا مِنْ قَوْمِهِ لَنُخْرِجَنَّكَ يَا شُعَيْبُ وَالَّذِينَ آمَنُوا مَعَكَ مِنْ قَرْيَتِنَا أَوْ لَتَعُودُنَّ فِي مِلَّتِنَا ۚ قَالَ أَوَلَوْ كُنَّا كَارِهِينَ ۞
ಅವರ ಜನಾಂಗದ ಅಹಂಕಾರಿ ನಾಯಕರು ಹೇಳಿದರು; ಶುಐಬರೇ, ನಿಮ್ಮನ್ನು ಹಾಗೂ ನಿಮ್ಮ ಜೊತೆ (ಸತ್ಯಧರ್ಮದಲ್ಲಿ) ನಂಬಿಕೆ ಇಟ್ಟವರನ್ನು ನಾವು ನಮ್ಮ ನಾಡಿನಿಂದ ಹೊರಕ್ಕೆ ಅಟ್ಟಿ ಬಿಡುವೆವು. ಅಥವಾ (ಅದು ಬೇಡವಾದರೆ) ನೀವು ನಮ್ಮ ಪಂಥಕ್ಕೆ ಮರಳಿಬರಬೇಕು. ಅವರು (ಶುಐಬರು) ಕೇಳಿದರು; ನಮಗೆ ಇಷ್ಟವಿಲ್ಲದಿದ್ದರೂ (ಮರಳಬೇಕೇ)?
7:89
قَدِ افْتَرَيْنَا عَلَى اللَّهِ كَذِبًا إِنْ عُدْنَا فِي مِلَّتِكُمْ بَعْدَ إِذْ نَجَّانَا اللَّهُ مِنْهَا ۚ وَمَا يَكُونُ لَنَا أَنْ نَعُودَ فِيهَا إِلَّا أَنْ يَشَاءَ اللَّهُ رَبُّنَا ۚ وَسِعَ رَبُّنَا كُلَّ شَيْءٍ عِلْمًا ۚ عَلَى اللَّهِ تَوَكَّلْنَا ۚ رَبَّنَا افْتَحْ بَيْنَنَا وَبَيْنَ قَوْمِنَا بِالْحَقِّ وَأَنْتَ خَيْرُ الْفَاتِحِينَ ۞
ಅಲ್ಲಾಹನು ನಿಮ್ಮ ಪಂಥದಿಂದ ನಮ್ಮನ್ನು ರಕ್ಷಿಸಿದ ಬಳಿಕ ನಾವು ಮತ್ತೆ ಅದರೆಡೆಗೆ ಮರಳಿದರೆ ನಾವು ಅಲ್ಲಾಹನ ಮೇಲೆ ಒಂದು ಭಾರೀ ಸುಳ್ಳಾರೋಪವನ್ನು ಹೊರಿಸಿದಂತಾದೀತು. ಹೀಗಿರುತ್ತಾ ನಮ್ಮೊಡೆಯನಾದ ಅಲ್ಲಾಹನೇ ಇಚ್ಛಿಸುವ ತನಕ, ಅದರೆಡೆಗೆ ಮರಳಲು ನಮಗೆ ಸಾಧ್ಯವಿಲ್ಲ. ನಮ್ಮೊಡನೆಯನ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ನಾವು ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಟ್ಟಿರುವೆವು. ನಮ್ಮೊಡೆಯಾ, ನೀನೀಗ ನಮ್ಮ ಹಾಗೂ ನಮ್ಮ ಜನಾಂಗದ ನಡುವೆ ಸತ್ಯದೊಂದಿಗೆ ತೀರ್ಮಾನ ಮಾಡಿಬಿಡು. ನೀನು ಅತ್ಯುತ್ತಮ ತೀರ್ಮಾನ ಮಾಡುವವನಾಗಿರುವೆ.
7:90
وَقَالَ الْمَلَأُ الَّذِينَ كَفَرُوا مِنْ قَوْمِهِ لَئِنِ اتَّبَعْتُمْ شُعَيْبًا إِنَّكُمْ إِذًا لَخَاسِرُونَ ۞
ಅವರ ಜನಾಂಗದ ಧಿಕ್ಕಾರಿ ನಾಯಕರು (ಜನರೊಡನೆ) ಹೇಳಿದರು; ನೀವು ಶುಐಬರನ್ನು ಅನುಸರಿಸಿದರೆ, ಖಂಡಿತವಾಗಿಯೂ ನೀವು ನಷ್ಟಕ್ಕೊಳಗಾದವರ ಸಾಲಿಗೆ ಸೇರುವಿರಿ.
7:91
فَأَخَذَتْهُمُ الرَّجْفَةُ فَأَصْبَحُوا فِي دَارِهِمْ جَاثِمِينَ ۞
ಕೊನೆಗೆ ಒಂದು ಭಾರೀ ಭೂಕಂಪವು ಅವರನ್ನು ಆವರಿಸಿಕೊಂಡಿತು ಮತ್ತು ಅವರು ತಮ್ಮ ನಿವಾಸಗಳಲ್ಲೇ ನಿಶ್ಚಲ ಶವಗಳಾಗಿ ಬಿದ್ದುಕೊಂಡಿದ್ದರು.
7:92
الَّذِينَ كَذَّبُوا شُعَيْبًا كَأَنْ لَمْ يَغْنَوْا فِيهَا ۚ الَّذِينَ كَذَّبُوا شُعَيْبًا كَانُوا هُمُ الْخَاسِرِينَ ۞
ಶುಐಬರನ್ನು ಧಿಕ್ಕರಿಸಿದವರು, ಹಿಂದೆಂದೂ ಬದುಕಿಯೇ ಇರಲಿಲ್ಲವೋ ಎಂಬಂತೆ ಅಳಿದು ಹೋದರು. ಹೀಗೆ, ಶುಐಬರನ್ನು ಧಿಕ್ಕರಿಸಿದವರೇ ನಷ್ಟ ಅನುಭವಿಸಿದವರಾದರು.
7:93
فَتَوَلَّىٰ عَنْهُمْ وَقَالَ يَا قَوْمِ لَقَدْ أَبْلَغْتُكُمْ رِسَالَاتِ رَبِّي وَنَصَحْتُ لَكُمْ ۖ فَكَيْفَ آسَىٰ عَلَىٰ قَوْمٍ كَافِرِينَ ۞
ಅವರು (ಶುಐಬರು) ಆ ಜನರಿಂದ ಮುಖ ತಿರುಗಿಸಿಕೊಂಡು ಹೇಳಿದರು; ನನ್ನ ಜನಾಂಗದವರೇ, ನನ್ನ ಒಡೆಯನ ಸಂದೇಶವನ್ನು ನಾನು ನಿಮಗೆ ತಲುಪಿಸಿದೆ ಮತ್ತು ನಾನು ನಿಮ್ಮ ಹಿತೈಷಿಯಾಗಿದ್ದೆ. ಇದೀಗ ಒಂದು ಧಿಕ್ಕಾರಿ ಜನಾಂಗದ ಕುರಿತು ನಾನು ಹೇಗೆ ತಾನೇ ದುಃಖಿಸಲಿ?
7:94
وَمَا أَرْسَلْنَا فِي قَرْيَةٍ مِنْ نَبِيٍّ إِلَّا أَخَذْنَا أَهْلَهَا بِالْبَأْسَاءِ وَالضَّرَّاءِ لَعَلَّهُمْ يَضَّرَّعُونَ ۞
ನಾವು ಯಾವೆಲ್ಲ ನಾಡುಗಳಿಗೆ ನಮ್ಮ ದೂತರನ್ನು ಕಳುಹಿಸಿರುವೆವೋ ಆ ಎಲ್ಲ ನಾಡುಗಳ ಜನರು ವಿನಯಶೀಲರಾಗಿರಬೇಕೆಂದು ನಾವು ಅವರನ್ನು ಸಂಕಷ್ಟ ಹಾಗೂ ಕಾಠಿಣ್ಯಕ್ಕೆ ಒಳಪಡಿಸಿರುವೆವು.
7:95
ثُمَّ بَدَّلْنَا مَكَانَ السَّيِّئَةِ الْحَسَنَةَ حَتَّىٰ عَفَوْا وَقَالُوا قَدْ مَسَّ آبَاءَنَا الضَّرَّاءُ وَالسَّرَّاءُ فَأَخَذْنَاهُمْ بَغْتَةً وَهُمْ لَا يَشْعُرُونَ ۞
ಆ ಬಳಿಕ ನಾವು (ಅವರ) ದುಸ್ಥಿತಿಯನ್ನು ಸುಸ್ಥಿತಿಯಾಗಿ ಪರಿವರ್ತಿಸಿದೆವು. ಎಷ್ಟೆಂದರೆ, ಅವರು ಸಮೃದ್ಧರಾಗಿ, ಸಂಕಷ್ಟ ಹಾಗೂ ಸಂತೋಷದ ಪರಿಸ್ಥಿತಿಗಳು ನಮ್ಮ ಪೂರ್ವಜರಿಗೆ ಎದುರಾಗುತ್ತಿದ್ದವು ಎನ್ನತೊಡಗಿದರು. ಕೊನೆಗೆ ನಾವು ಹಠಾತ್ತನೆ ಅವರನ್ನು ಹಿಡಿದುಬಿಟ್ಟೆವು - ಅವರಿಗೆ ಅದರ ಅರಿವೇ ಇರಲಿಲ್ಲ.
7:96
وَلَوْ أَنَّ أَهْلَ الْقُرَىٰ آمَنُوا وَاتَّقَوْا لَفَتَحْنَا عَلَيْهِمْ بَرَكَاتٍ مِنَ السَّمَاءِ وَالْأَرْضِ وَلَٰكِنْ كَذَّبُوا فَأَخَذْنَاهُمْ بِمَا كَانُوا يَكْسِبُونَ ۞
ಒಂದು ವೇಳೆ ನಾಡುಗಳ ಜನರು (ಸತ್ಯದಲ್ಲಿ) ನಂಬಿಕೆ ಇಟ್ಟು, ಸತ್ಯ ನಿಷ್ಠರಾಗಿದ್ದರೆ ನಾವು ಅವರ ಪಾಲಿಗೆ ಆಕಾಶದಿಂದಲೂ ಭೂಮಿಯಿಂದಲೂ ಸಮೃದ್ಧಿಯ ಬಾಗಿಲುಗಳನ್ನು ತೆರೆದುಬಿಡುತ್ತಿದ್ದೆವು. ಆದರೆ ಅವರು (ಸತ್ಯವನ್ನು) ಸುಳ್ಳೆಂದರು. ಕೊನೆಗೆ ನಾವು ಅವರ ಕೃತ್ಯಗಳ ಕಾರಣ ಅವರನ್ನು ಹಿಡಿದುಕೊಂಡೆವು.
7:97
أَفَأَمِنَ أَهْلُ الْقُرَىٰ أَنْ يَأْتِيَهُمْ بَأْسُنَا بَيَاتًا وَهُمْ نَائِمُونَ ۞
ನಾಡುಗಳ ಜನರೇನು, ಇರುಳಲ್ಲಿ ಅವರು ಮಲಗಿರುವಾಗ ನಮ್ಮ ಶಿಕ್ಷೆಯು ಹಠಾತ್ತನೆ ಅವರ ಮೇಲೆ ಬಂದು ಎರಗಲಾರದೆಂದು ನೆಮ್ಮದಿಯಿಂದಿರುವರೇ?
7:98
أَوَأَمِنَ أَهْلُ الْقُرَىٰ أَنْ يَأْتِيَهُمْ بَأْسُنَا ضُحًى وَهُمْ يَلْعَبُونَ ۞
ಅಥವಾ ನಾಡುಗಳ ಜನರೇನು, ಹಗಲಲ್ಲಿ ಅವರು ಆಟೋಟಗಳಲ್ಲಿ ನಿರತರಾಗಿರುವಾಗ ನಮ್ಮ ಶಿಕ್ಷೆಯು ಅವರ ಮೇಲೆ ಬಂದೆರಗಲಾರದೆಂದು ನೆಮ್ಮದಿಯಿಂದಿರುವರೇ?
7:99
أَفَأَمِنُوا مَكْرَ اللَّهِ ۚ فَلَا يَأْمَنُ مَكْرَ اللَّهِ إِلَّا الْقَوْمُ الْخَاسِرُونَ ۞
ಅವರೇನು, ಅಲ್ಲಾಹನ ಯೋಜನೆಯ ಕುರಿತು ನಿಶ್ಚಿಂತರೇ? ನಿಜವಾಗಿ, ನಷ್ಟಕ್ಕೊಳಗಾಗುವವರ ಹೊರತು ಬೇರಾರೂ ಅಲ್ಲಾಹನ ಯೋಜನೆಗಳ ಕುರಿತು ನಿಶ್ಚಿಂತರಾಗಿರುವುದಿಲ್ಲ.
7:100
أَوَلَمْ يَهْدِ لِلَّذِينَ يَرِثُونَ الْأَرْضَ مِنْ بَعْدِ أَهْلِهَا أَنْ لَوْ نَشَاءُ أَصَبْنَاهُمْ بِذُنُوبِهِمْ ۚ وَنَطْبَعُ عَلَىٰ قُلُوبِهِمْ فَهُمْ لَا يَسْمَعُونَ ۞
(ತಮಗಿಂತ ಹಿಂದಿನ) ಭೂವಾಸಿಗಳ ಬಳಿಕ ಭೂಮಿಯ ಉತ್ತರಾಧಿಕಾರಿ ಗಳಾದವರಿಗೆ ಸೂಚನೆ ಸಿಗಲಿಲ್ಲವೇ, ನಾವು ಬಯಸಿದರೆ ಅವರ ಪಾಪಗಳ ಕಾರಣ ಅವರನ್ನು ಸಂಕಷ್ಟಕ್ಕೆ ಗುರಿಪಡಿಸಬಲ್ಲೆವೆಂದು? ನಿಜವಾಗಿ ನಾವು ಅವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುವೆವು. ಅವರು ಏನನ್ನೂ ಕೇಳುತ್ತಿಲ್ಲ.
7:101
تِلْكَ الْقُرَىٰ نَقُصُّ عَلَيْكَ مِنْ أَنْبَائِهَا ۚ وَلَقَدْ جَاءَتْهُمْ رُسُلُهُمْ بِالْبَيِّنَاتِ فَمَا كَانُوا لِيُؤْمِنُوا بِمَا كَذَّبُوا مِنْ قَبْلُ ۚ كَذَٰلِكَ يَطْبَعُ اللَّهُ عَلَىٰ قُلُوبِ الْكَافِرِينَ ۞
ಇವು ಆ ನಾಡುಗಳು - ನಾವು ಅವುಗಳ ವೃತ್ತಾಂತವನ್ನು ನಿಮಗೆ ವಿವರಿಸುತ್ತಿದ್ದೇವೆ. ಅವರ ಬಳಿಗೆ ಅವರ ದೇವದೂತರುಗಳು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಇಷ್ಟಾಗಿಯೂ, ಯಾವುದನ್ನು ಅವರು ಈ ಹಿಂದೆಯೂ ಧಿಕ್ಕರಿಸಿದ್ದರೋ ಅದನ್ನು ಅವರು ನಂಬಲಿಲ್ಲ. ಈ ರೀತಿ ಅಲ್ಲಾಹನು ಧಿಕ್ಕಾರಿಗಳ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುತ್ತಾನೆ.
7:102
وَمَا وَجَدْنَا لِأَكْثَرِهِمْ مِنْ عَهْدٍ ۖ وَإِنْ وَجَدْنَا أَكْثَرَهُمْ لَفَاسِقِينَ ۞
ಅವರ ಪೈಕಿ ಹೆಚ್ಚಿನವರಲ್ಲಿ ನಾವು ವಚನ ಪಾಲನೆಯನ್ನು ಕಾಣಲಿಲ್ಲ. ನಿಜವಾಗಿ ಅವರಲ್ಲಿ ಹೆಚ್ಚಿನವರು ಅವಿಧೇಯರಾಗಿರುವುದನ್ನು ನಾವು ಕಂಡೆವು.
7:103
ثُمَّ بَعَثْنَا مِنْ بَعْدِهِمْ مُوسَىٰ بِآيَاتِنَا إِلَىٰ فِرْعَوْنَ وَمَلَئِهِ فَظَلَمُوا بِهَا ۖ فَانْظُرْ كَيْفَ كَانَ عَاقِبَةُ الْمُفْسِدِينَ ۞
ಅವರ ಬಳಿಕ ಮೂಸಾರನ್ನು ನಾವು ನಮ್ಮ ದೃಷ್ಟಾಂತಗಳೊಂದಿಗೆ ಫಿರ್‌ಔನ್ ಮತ್ತು ಆತನ (ಜನಾಂಗದ) ನಾಯಕರ ಬಳಿಗೆ ಕಳಿಸಿದೆವು. ಅವರೂ ಅವುಗಳ ವಿಷಯದಲ್ಲಿ ಅಕ್ರಮ ಧೋರಣೆಯನ್ನು ತೋರಿದರು. ನೋಡಿರಿ, ಅಶಾಂತಿ ಹರಡುವವರ ಗತಿ ಏನಾಯಿತೆಂದು !
7:104
وَقَالَ مُوسَىٰ يَا فِرْعَوْنُ إِنِّي رَسُولٌ مِنْ رَبِّ الْعَالَمِينَ ۞
ಮೂಸಾ ಹೇಳಿದರು; ಓ ಫಿರ್‌ಔನ್, ನಾನು ಖಚಿತವಾಗಿಯೂ ಸರ್ವಲೋಕಗಳ ಒಡೆಯನ ದೂತನು.
7:105
حَقِيقٌ عَلَىٰ أَنْ لَا أَقُولَ عَلَى اللَّهِ إِلَّا الْحَقَّ ۚ قَدْ جِئْتُكُمْ بِبَيِّنَةٍ مِنْ رَبِّكُمْ فَأَرْسِلْ مَعِيَ بَنِي إِسْرَائِيلَ ۞
ಅಲ್ಲಾಹನ ಹೆಸರಲ್ಲಿ, ಸತ್ಯದ ಹೊರತು ಬೇರೇನನ್ನೂ ಹೇಳಬಾರದೆಂಬುದೇ ನನ್ನ ಕರ್ತವ್ಯವಾಗಿದೆ. ನಾನು ನಿಮ್ಮೊಡನೆಯನ ಕಡೆಯಿಂದ ನಿಮ್ಮ ಬಳಿಗೆ ಸ್ಪಷ್ಟ ಪುರಾವೆಗಳನ್ನು ತಂದಿದ್ದೇನೆ. ಇಸ್ರಾಈಲರ ಸಂತತಿಯನ್ನು ನನ್ನ ಜೊತೆ ಕಳಿಸಿಬಿಡು.
7:106
قَالَ إِنْ كُنْتَ جِئْتَ بِآيَةٍ فَأْتِ بِهَا إِنْ كُنْتَ مِنَ الصَّادِقِينَ ۞
ಅವನು (ಫಿರ್‌ಔನ್) ಹೇಳಿದನು; ನೀನು ದೃಷ್ಟಾಂತದೊಂದಿಗೆ ಬಂದಿದ್ದರೆ (ಹಾಗೂ) ನೀನು ಸತ್ಯವಂತನಾಗಿದ್ದರೆ ಅದನ್ನು ಮುಂದಿಡು.
7:107
فَأَلْقَىٰ عَصَاهُ فَإِذَا هِيَ ثُعْبَانٌ مُبِينٌ ۞
ಅವರು (ಮೂಸಾ) ತಮ್ಮ ಊರುಗೋಲನ್ನು ಎಸೆದರು ಮತ್ತು ಹಠಾತ್ತನೆ ಅದು ಸ್ಪಷ್ಟವಾಗಿ ಒಂದು ಹೆಬ್ಬಾವಾಗಿ ಬಿಟ್ಟಿತು.
7:108
وَنَزَعَ يَدَهُ فَإِذَا هِيَ بَيْضَاءُ لِلنَّاظِرِينَ ۞
ತರುವಾಯ ಅವರು ತಮ್ಮ ಕೈಯನ್ನು ಹೊರತೆಗೆದರು. ಹಠಾತ್ತನೆ ಅದು ನೋಡುವವರಿಗೆ ತುಂಬಾ ಉಜ್ವಲವಾಗಿ ಕಂಡಿತು.
7:109
قَالَ الْمَلَأُ مِنْ قَوْمِ فِرْعَوْنَ إِنَّ هَٰذَا لَسَاحِرٌ عَلِيمٌ ۞
ಫಿರ್‌ಔನನ ಜನಾಂಗದ ಸರದಾರರು ಹೇಳಿದರು; ಇವನು ಖಂಡಿತ ಒಬ್ಬ ತಜ್ಞ ಜಾದೂಗಾರನಾಗಿದ್ದಾನೆ.
7:110
يُرِيدُ أَنْ يُخْرِجَكُمْ مِنْ أَرْضِكُمْ ۖ فَمَاذَا تَأْمُرُونَ ۞
ಇವನು ನಿಮ್ಮನ್ನು ನಿಮ್ಮ ನಾಡಿನಿಂದ ಹೊರದಬ್ಬ ಬಯಸುತ್ತಾನೆ. ಈಗ ನೀವೇನು ಆದೇಶಿಸುತ್ತೀರಿ?
7:111
قَالُوا أَرْجِهْ وَأَخَاهُ وَأَرْسِلْ فِي الْمَدَائِنِ حَاشِرِينَ ۞
ಅವರು (ಫಿರ್‌ಔನನೊಡನೆ) ಹೇಳಿದರು; ಇವನನ್ನು ಹಾಗೂ ಇವನ ಸಹೋದರನನ್ನು ತಡೆದಿಟ್ಟುಕೊ ಮತ್ತು ವಿವಿಧ ನಗರಗಳಿಗೆ ದೂತರನ್ನು ಕಳುಹಿಸು.
7:112
يَأْتُوكَ بِكُلِّ سَاحِرٍ عَلِيمٍ ۞
ಅವರು ಎಲ್ಲ ತಜ್ಞ ಜಾದೂಗಾರರನ್ನು ನಿನ್ನ ಬಳಿಗೆ ತರಲಿ.
7:113
وَجَاءَ السَّحَرَةُ فِرْعَوْنَ قَالُوا إِنَّ لَنَا لَأَجْرًا إِنْ كُنَّا نَحْنُ الْغَالِبِينَ ۞
ಹೀಗೆ, ಜಾದೂಗಾರರು ಫಿರ್‌ಔನನ ಬಳಿಗೆ ಬಂದರು. ನಾವು ವಿಜಯಿಗಳಾದರೆ ಖಂಡಿತವಾಗಿಯೂ ನಮಗೆ ಪ್ರತಿಫಲ ಸಿಗಲಿದೆ ಎಂದರು.
7:114
قَالَ نَعَمْ وَإِنَّكُمْ لَمِنَ الْمُقَرَّبِينَ ۞
ಅವನು (ಫಿರ್‌ಔನ್) ಹೇಳಿದನು; ಹೌದು, ಜೊತೆಗೆ ನೀವು ನನ್ನ ಆಪ್ತರ ಸಾಲಿಗೆ ಸೇರುವಿರಿ.
7:115
قَالُوا يَا مُوسَىٰ إِمَّا أَنْ تُلْقِيَ وَإِمَّا أَنْ نَكُونَ نَحْنُ الْمُلْقِينَ ۞
ಅವರು (ಜಾದೂಗಾರರು), ಓ ಮೂಸಾ, ನೀನು ಎಸೆಯುವೆಯಾ ಅಥವಾ ನಾವು ಎಸೆಯಬೇಕೇ?ಎಂದು ಕೇಳಿದರು.
7:116
قَالَ أَلْقُوا ۖ فَلَمَّا أَلْقَوْا سَحَرُوا أَعْيُنَ النَّاسِ وَاسْتَرْهَبُوهُمْ وَجَاءُوا بِسِحْرٍ عَظِيمٍ ۞
ಅವರು (ಮೂಸಾ), ನೀವೇ ಎಸೆಯಿರಿ ಎಂದರು. ಹೀಗೆ ಅವರು (ಜಾದೂಗಾರರು ದಾಳಗಳನ್ನು) ಎಸೆದರು, ಜನರ ಕಣ್ಣುಗಳನ್ನು ಮಂಕುಗೊಳಿಸಿದರು ಹಾಗೂ ಅವರನ್ನು ಹೆದರಿಸಿಬಿಟ್ಟರು ಮತ್ತು ಭಾರೀ ಭವ್ಯ ಜಾದುವನ್ನು ಮುಂದಿಟ್ಟರು.
7:117
۞ وَأَوْحَيْنَا إِلَىٰ مُوسَىٰ أَنْ أَلْقِ عَصَاكَ ۖ فَإِذَا هِيَ تَلْقَفُ مَا يَأْفِكُونَ ۞
ಆಗ ನಾವು ಮೂಸಾರ ಕಡೆಗೆ ದಿವ್ಯವಾಣಿಯನ್ನು ಕಳಿಸಿದೆವು ; ಎಸೆಯಿರಿ ನಿಮ್ಮ ಊರುಗೋಲನ್ನು, ಅವರ ಎಲ್ಲ ಕೃತಕ ರಚನೆಗಳನ್ನು ಅದು ನುಂಗಿಬಿಡುವುದು - ಎಂದು.
7:118
فَوَقَعَ الْحَقُّ وَبَطَلَ مَا كَانُوا يَعْمَلُونَ ۞
ಕೊನೆಗೆ, ಸತ್ಯವು ಸಾಬೀತಾಗಿ ಬಿಟ್ಟಿತು ಮತ್ತು ಅವರು (ಜಾದೂಗಾರರು) ಮಾಡಿದ್ದೆಲ್ಲವೂ ಮಿಥ್ಯವಾಯಿತು.
7:119
فَغُلِبُوا هُنَالِكَ وَانْقَلَبُوا صَاغِرِينَ ۞
ಹೀಗೆ, ಅವರು (ಫಿರ್‌ಔನನ ಕಡೆಯವರು) ಅಲ್ಲೇ ಸೋತು ಹೋದರು ಮತ್ತು ಅಪಮಾನಿತರಾಗಿ ಮರಳಿದರು.
7:120
وَأُلْقِيَ السَّحَرَةُ سَاجِدِينَ ۞
ಅತ್ತ , ಜಾದೂಗಾರರು ಸಾಷ್ಟಾಂಗವೆರಗಿದರು.
7:121
قَالُوا آمَنَّا بِرَبِّ الْعَالَمِينَ ۞
ಅವರು ಹೇಳಿದರು; ನಾವು ಸರ್ವಲೋಕಗಳ ಒಡೆಯನನ್ನು ನಂಬಿದೆವು.
7:122
رَبِّ مُوسَىٰ وَهَارُونَ ۞
ಮೂಸಾ ಮತ್ತು ಹಾರೂನರ ಒಡೆಯನನ್ನು.
7:123
قَالَ فِرْعَوْنُ آمَنْتُمْ بِهِ قَبْلَ أَنْ آذَنَ لَكُمْ ۖ إِنَّ هَٰذَا لَمَكْرٌ مَكَرْتُمُوهُ فِي الْمَدِينَةِ لِتُخْرِجُوا مِنْهَا أَهْلَهَا ۖ فَسَوْفَ تَعْلَمُونَ ۞
ಫಿರ್‌ಔನ್ ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ನಂಬಿ ಬಿಟ್ಟಿರಿ. ಖಂಡಿತವಾಗಿಯೂ ಇದು, ಈ ನಗರದಲ್ಲಿ, ಇಲ್ಲಿಯವರನ್ನು ಇಲ್ಲಿಂದ ಹೊರದಬ್ಬಲು ನೀವು ನಡೆಸಿರುವ ಒಂದು ಸಂಚಾಗಿದೆ. (ಇದರ ಪರಿಣಾಮವನ್ನು) ಬೇಗನೇ ನೀವು ಅರಿಯುವಿರಿ.
7:124
لَأُقَطِّعَنَّ أَيْدِيَكُمْ وَأَرْجُلَكُمْ مِنْ خِلَافٍ ثُمَّ لَأُصَلِّبَنَّكُمْ أَجْمَعِينَ ۞
ಖಂಡಿತವಾಗಿಯೂ ನಾನು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ಭಾಗಗಳಲ್ಲಿ ಕಡಿದು ಬಿಡುವೆನು ಆ ಬಳಿಕ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.
7:125
قَالُوا إِنَّا إِلَىٰ رَبِّنَا مُنْقَلِبُونَ ۞
ಅವರು (ಜಾದೂಗಾರರು) ಹೇಳಿದರು; ನಾವಂತು ನಮ್ಮ ಒಡೆಯನ ಕಡೆಗೆ ಮರಳುವೆವು.
7:126
وَمَا تَنْقِمُ مِنَّا إِلَّا أَنْ آمَنَّا بِآيَاتِ رَبِّنَا لَمَّا جَاءَتْنَا ۚ رَبَّنَا أَفْرِغْ عَلَيْنَا صَبْرًا وَتَوَفَّنَا مُسْلِمِينَ ۞
ನಮ್ಮ ಒಡೆಯನ ದೃಷ್ಟಾಂತಗಳು ನಮ್ಮ ಮುಂದೆ ಬಂದಾಗ ಅವುಗಳನ್ನು ನಾವು ನಂಬಿದೆವು ಎಂಬುದಷ್ಟೇ ನಿನಗೆ ನಮ್ಮ ಮೇಲಿರುವ ಕೋಪಕ್ಕೆ ಕಾರಣ. (ಮತ್ತು ಅವರು ಹೀಗೆ ಪ್ರಾರ್ಥಿಸಿದರು) ನಮ್ಮೊಡೆಯಾ, ನಮಗೆ ಸ್ಥಿರತೆಯನ್ನು ದಯಪಾಲಿಸು ಮತ್ತು ನಾವು ಮುಸ್ಲಿಮರಾಗಿರುವ ಸ್ಥಿತಿಯಲ್ಲಿ ನಮಗೆ ಮರಣವನ್ನು ನೀಡು.
7:127
وَقَالَ الْمَلَأُ مِنْ قَوْمِ فِرْعَوْنَ أَتَذَرُ مُوسَىٰ وَقَوْمَهُ لِيُفْسِدُوا فِي الْأَرْضِ وَيَذَرَكَ وَآلِهَتَكَ ۚ قَالَ سَنُقَتِّلُ أَبْنَاءَهُمْ وَنَسْتَحْيِي نِسَاءَهُمْ وَإِنَّا فَوْقَهُمْ قَاهِرُونَ ۞
ಫಿರ್‌ಔನನ ಜನಾಂಗದ ನಾಯಕರು ಹೇಳಿದರು; ನೀನೇನು, ಭೂಮಿಯಲ್ಲಿ ಗೊಂದಲ ಹರಡುತ್ತಿರಲಿಕ್ಕಾಗಿ ಹಾಗೂ ನಿನ್ನನ್ನು ಮತ್ತು ನಿನ್ನ ದೇವರುಗಳನ್ನು ತೊರೆದಿರಲಿಕ್ಕಾಗಿ ಮೂಸಾ ಮತ್ತು ಆತನ ಜನಾಂಗವನ್ನು ಹಾಗೆಯೇ ಬಿಟ್ಟು ಬಿಡುವೆಯಾ? ಅವನು ಹೇಳಿದನು; ನಾನು ಅವರ ಪುತ್ರರನ್ನು ಕೊಂದುಬಿಡುವೆನು ಮತ್ತು ಅವರ ಪುತ್ರಿಯರನ್ನು ಜೀವಂತವಿಡುವೆನು. ಈ ರೀತಿ ನಾವು ಅವರ ಮೇಲೆ ನಿಯಂತ್ರಣ ಸಾಧಿಸುವೆವು.
7:128
قَالَ مُوسَىٰ لِقَوْمِهِ اسْتَعِينُوا بِاللَّهِ وَاصْبِرُوا ۖ إِنَّ الْأَرْضَ لِلَّهِ يُورِثُهَا مَنْ يَشَاءُ مِنْ عِبَادِهِ ۖ وَالْعَاقِبَةُ لِلْمُتَّقِينَ ۞
ಮೂಸಾ, ತಮ್ಮ ಜನಾಂಗದವರೊಡನೆ ಹೇಳಿದರು; ನೀವು ಅಲ್ಲಾಹನ ನೆರವನ್ನು ಬೇಡಿರಿ ಮತ್ತು ಸಹನಶೀಲರಾಗಿರಿ. ಭೂಮಿಯು ಅಲ್ಲಾಹನಿಗೇ ಸೇರಿದೆ. ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರನ್ನು ಅದರ ಉತ್ತರಾಧಿಕಾರಿಗಳಾಗಿ ಮಾಡುತ್ತಾನೆ. ಅಂತಿಮ ವಿಜಯವು ಸತ್ಯನಿಷ್ಠರಿಗೇ ಸೇರಿದೆ.
7:129
قَالُوا أُوذِينَا مِنْ قَبْلِ أَنْ تَأْتِيَنَا وَمِنْ بَعْدِ مَا جِئْتَنَا ۚ قَالَ عَسَىٰ رَبُّكُمْ أَنْ يُهْلِكَ عَدُوَّكُمْ وَيَسْتَخْلِفَكُمْ فِي الْأَرْضِ فَيَنْظُرَ كَيْفَ تَعْمَلُونَ ۞
ಅವರು (ಮೂಸಾರ ಜನಾಂಗದವರು) ಹೇಳಿದರು; ನೀವು ನಮ್ಮ ಬಳಿಗೆ ಬರುವ ಮುನ್ನವೂ ನೀವು ನಮ್ಮ ಬಳಿಗೆ ಬಂದ ಬಳಿಕವೂ ನಮ್ಮನ್ನು ಸತಾಯಿಸಲಾಯಿತು. ಅವರು (ಮೂಸಾ) ಹೇಳಿದರು; ಬಹುಬೇಗನೇ, ನಿಮ್ಮೊಡೆಯನು ನಿಮ್ಮ ಶತ್ರುವನ್ನು ನಾಶಪಡಿಸಿ ಭೂಮಿಯಲ್ಲಿ ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡುವನು ಮತ್ತು ನೀವು ಏನೆಲ್ಲ ಮಾಡುವಿರಿ ಎಂಬುದನ್ನು ನೋಡುವನು.
7:130
وَلَقَدْ أَخَذْنَا آلَ فِرْعَوْنَ بِالسِّنِينَ وَنَقْصٍ مِنَ الثَّمَرَاتِ لَعَلَّهُمْ يَذَّكَّرُونَ ۞
ನಾವು ಫಿರ್‌ಔನನ ಜನಾಂಗವನ್ನು ಸತತ ಬರಗಾಲ ಹಾಗೂ ಬೆಳೆಗಳ ನಷ್ಟದಲ್ಲಿ ಸಿಲುಕಿಸಿದೆವು - ಅವರು ಪಾಠಕಲಿಯಬೇಕೆಂದು.
7:131
فَإِذَا جَاءَتْهُمُ الْحَسَنَةُ قَالُوا لَنَا هَٰذِهِ ۖ وَإِنْ تُصِبْهُمْ سَيِّئَةٌ يَطَّيَّرُوا بِمُوسَىٰ وَمَنْ مَعَهُ ۗ أَلَا إِنَّمَا طَائِرُهُمْ عِنْدَ اللَّهِ وَلَٰكِنَّ أَكْثَرَهُمْ لَا يَعْلَمُونَ ۞
ಅವರ ಬಳಿಗೆ ಒಳಿತೇನಾದರೂ ಬಂದಾಗ ಅವರು, ನಾವು ಇದಕ್ಕೇ ಅರ್ಹರು, ಎನ್ನುತ್ತಿದ್ದರು. ಇನ್ನು ಅವರಿಗೆ ಅಹಿತವೇನಾದರೂ ಸಂಭವಿಸಿದಾಗ, ಅದಕ್ಕಾಗಿ ಅವರು ಮೂಸಾ ಮತ್ತು ಅವರ ಜೊತೆಗಾರರ ಭಾಗ್ಯವನ್ನು ಮೂದಲಿಸುತ್ತಿದ್ದರು. ತಿಳಿದಿರಲಿ! ಖಂಡಿತವಾಗಿಯೂ ಅವರ ಭಾಗ್ಯವೆಲ್ಲವೂ ಅಲ್ಲಾಹನ ಬಳಿಯಲ್ಲೇ ಇದೆ. ಆದರೆ ಹೆಚ್ಚಿನವರು ಅರಿತಿರುವುದಿಲ್ಲ.
7:132
وَقَالُوا مَهْمَا تَأْتِنَا بِهِ مِنْ آيَةٍ لِتَسْحَرَنَا بِهَا فَمَا نَحْنُ لَكَ بِمُؤْمِنِينَ ۞
ಅವರು ಹೇಳುತ್ತಿದ್ದರು; ನೀನು ನಮ್ಮನ್ನು ಮಾಟಕ್ಕೆ ಒಳಪಡಿಸಲು ಅದೆಂತಹ ದೃಷ್ಟಾಂತವನ್ನು ತಂದರೂ ನಾವಂತು ನಿನ್ನನ್ನು ನಂಬುವವರಲ್ಲ.
7:133
فَأَرْسَلْنَا عَلَيْهِمُ الطُّوفَانَ وَالْجَرَادَ وَالْقُمَّلَ وَالضَّفَادِعَ وَالدَّمَ آيَاتٍ مُفَصَّلَاتٍ فَاسْتَكْبَرُوا وَكَانُوا قَوْمًا مُجْرِمِينَ ۞
ಕೊನೆಗೆ ನಾವು ಅವರ ಮೇಲೆ, ಚಂಡಮಾರುತವನ್ನು ಎರಗಿಸಿದೆವು. ಮಿಡಿತೆಗಳನ್ನು, ಕ್ರಿಮಿಕೀಟಗಳನ್ನು, ಕಪ್ಪೆಗಳನ್ನು ಮತ್ತು ರಕ್ತವನ್ನು ಇಳಿಸಿದೆವು. ಇವೆಲ್ಲಾ ಪ್ರತ್ಯ ಪ್ರತ್ಯೇಕ ಸೂಚನೆಗಳಾಗಿದ್ದವು. ಇಷ್ಟಾಗಿಯೂ ಅವರು ಅಹಂಕಾರ ತೋರಿದರು. ಅವರು ನಿಜಕ್ಕೂ ಒಂದು ಅಪರಾಧಿ ಜನಾಂಗವಾಗಿದ್ದರು.
7:134
وَلَمَّا وَقَعَ عَلَيْهِمُ الرِّجْزُ قَالُوا يَا مُوسَى ادْعُ لَنَا رَبَّكَ بِمَا عَهِدَ عِنْدَكَ ۖ لَئِنْ كَشَفْتَ عَنَّا الرِّجْزَ لَنُؤْمِنَنَّ لَكَ وَلَنُرْسِلَنَّ مَعَكَ بَنِي إِسْرَائِيلَ ۞
ಅವರ ಮೇಲೆ ವಿಪತ್ತು ಎರಗಿದಾಗಲೆಲ್ಲಾ ಅವರು, ಓ ಮೂಸಾ, ನಿನ್ನ ಬಳಿ ಇರುವ ಅವನ (ಅಲ್ಲಾಹನ) ವಾಗ್ದಾನದ ಆಧಾರದಲ್ಲಿ ನೀನು ನಮ್ಮ ಪರವಾಗಿ ನಿನ್ನ ಒಡೆಯನನ್ನು ಪ್ರಾರ್ಥಿಸು. ಒಂದು ವೇಳೆ ನೀನು ನಮ್ಮ ಮೇಲಿಂದ ಈ ವಿಪತ್ತನ್ನು ತೊಲಗಿಸಿದರೆ ನಾವು ಖಂಡಿತ ನಿನ್ನನ್ನು ನಂಬುವೆವು ಮತ್ತು ಇಸ್ರಾಈಲರ ಸಂತತಿಯನ್ನು ನಿನ್ನ ಜೊತೆ ಕಳುಹಿಸಿಕೊಡುವೆವು, ಎನ್ನುತ್ತಿದ್ದರು.
7:135
فَلَمَّا كَشَفْنَا عَنْهُمُ الرِّجْزَ إِلَىٰ أَجَلٍ هُمْ بَالِغُوهُ إِذَا هُمْ يَنْكُثُونَ ۞
ಮತ್ತೆ ನಾವು, ಅವರು ಅನುಭವಿಸಬೇಕಾಗಿದ್ದ ಒಂದು ಅವಧಿಯವರೆಗಿನ ವಿಪತ್ತನ್ನು ಅವರಿಂದ ದೂರಗೊಳಿಸಿದಾಗ ಅವರು ತಮ್ಮ ವಚನವನ್ನು ಮುರಿದುಬಿಡುತ್ತಿದ್ದರು.
7:136
فَانْتَقَمْنَا مِنْهُمْ فَأَغْرَقْنَاهُمْ فِي الْيَمِّ بِأَنَّهُمْ كَذَّبُوا بِآيَاتِنَا وَكَانُوا عَنْهَا غَافِلِينَ ۞
ಕೊನೆಗೆ ನಾವು ಅವರ ವಿರುದ್ಧ ಪ್ರತೀಕಾರ ತೀರಿಸಿದೆವು ಮತ್ತು ಅವರನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟೆವು-ಏಕೆಂದರೆ ಅವರು ನಮ್ಮ ವಚನಗಳನ್ನು ಸುಳ್ಳೆಂದು ಧಿಕ್ಕರಿಸಿದ್ದರು ಮತ್ತು ಆ ಕುರಿತು ನಿರ್ಲಕ್ಷ್ಯ ತೋರಿದ್ದರು.
7:137
وَأَوْرَثْنَا الْقَوْمَ الَّذِينَ كَانُوا يُسْتَضْعَفُونَ مَشَارِقَ الْأَرْضِ وَمَغَارِبَهَا الَّتِي بَارَكْنَا فِيهَا ۖ وَتَمَّتْ كَلِمَتُ رَبِّكَ الْحُسْنَىٰ عَلَىٰ بَنِي إِسْرَائِيلَ بِمَا صَبَرُوا ۖ وَدَمَّرْنَا مَا كَانَ يَصْنَعُ فِرْعَوْنُ وَقَوْمُهُ وَمَا كَانُوا يَعْرِشُونَ ۞
ಮತ್ತು ನಾವು ಮರ್ದಿತರಾಗಿದ್ದವರನ್ನು, ನಾವೇ ಸಮೃದ್ಧಗೊಳಿಸಿದ್ದ, ಭೂಮಿಯ ಪೂರ್ವಭಾಗದ ಹಾಗೂ ಪಶ್ಚಿಮ ಭಾಗದ ಉತ್ತರಾಧಿಕಾರಿಗಳಾಗಿ ಮಾಡಿದೆವು. ಹೀಗೆ, ಇಸ್ರಾಈಲರ ಸಂತತಿಗಳು ತೋರಿದ ಸಹನೆಯ ಕಾರಣ, ನಿಮ್ಮ ಒಡೆಯನು ಅವರಿಗೆ ಮಾಡಿದ್ದ ಒಳಿತಿನ ವಾಗ್ದಾನವು ಪೂರ್ತಿಗೊಂಡಿತು ಮತ್ತು ಫಿರ್‌ಔನ್ ಹಾಗೂ ಅವನ ಜನಾಂಗವು ಕಟ್ಟಿದ್ದ ಹಾಗೂ ಎತ್ತರಕ್ಕೆ ಬೆಳೆಸಿದ್ದ ಎಲ್ಲವನ್ನೂ ನಾವು ನೆಲೆಸಮಗೊಳಿಸಿಬಿಟ್ಟೆವು.
7:138
وَجَاوَزْنَا بِبَنِي إِسْرَائِيلَ الْبَحْرَ فَأَتَوْا عَلَىٰ قَوْمٍ يَعْكُفُونَ عَلَىٰ أَصْنَامٍ لَهُمْ ۚ قَالُوا يَا مُوسَى اجْعَلْ لَنَا إِلَٰهًا كَمَا لَهُمْ آلِهَةٌ ۚ قَالَ إِنَّكُمْ قَوْمٌ تَجْهَلُونَ ۞
ಅತ್ತ , ಇಸ್ರಾಈಲರ ಸಂತತಿಗಳನ್ನು ನಾವು ಕಡಲಾಚೆಯ ದಡಕ್ಕೆ ತಲುಪಿಸಿದೆವು. ಮುಂದೆ ಅವರು, ತಮ್ಮಲ್ಲಿನ ವಿಗ್ರಹಗಳ ಆರಾಧನೆಯಲ್ಲಿ ತಲ್ಲೀನರಾಗಿದ್ದ ಒಂದು ಜನಾಂಗವನ್ನು ಎದುರಿಸಿದರು. ಆಗ ಅವರು (ಇಸ್ರಾಈಲರ ಸಂತತಿಗಳು), ಓ ಮೂಸಾ, ಅವರ ಬಳಿ ಇರುವಂತಹದೇ ದೇವರುಗಳನ್ನು ನಮಗೆ ತಯಾರಿಸಿಕೊಡು ಎಂದರು. ಅವರು (ಮೂಸಾ) ಹೇಳಿದರು; ನೀವು ಅಜ್ಞಾನಿಗಳಾಗಿ ವರ್ತಿಸುತ್ತಿರುವಿರಿ.
7:139
إِنَّ هَٰؤُلَاءِ مُتَبَّرٌ مَا هُمْ فِيهِ وَبَاطِلٌ مَا كَانُوا يَعْمَلُونَ ۞
ಅವರು ಯಾವುದರಲ್ಲಿ ನಿರತರಾಗಿರುವರೋ ಅದೆಲ್ಲವೂ ಖಂಡಿತ ನಾಶವಾಗಲಿದೆ ಮತ್ತು ಅವರು ಮಾಡುತ್ತಿರುವುದೆಲ್ಲವೂ ಮಿಥ್ಯವಾಗಿದೆ.
7:140
قَالَ أَغَيْرَ اللَّهِ أَبْغِيكُمْ إِلَٰهًا وَهُوَ فَضَّلَكُمْ عَلَى الْعَالَمِينَ ۞
ಅವರು (ಮೂಸಾ) ಹೇಳಿದರು; ಅವನು (ಅಲ್ಲಾಹನು) ಸರ್ವಲೋಕಗಳ ಮೇಲೆ ನಿಮಗೆ ಶ್ರೇಷ್ಠತೆಯನ್ನು ದಯಪಾಲಿಸಿರುವಾಗ, ನಾನೇನು ನಿಮಗಾಗಿ ಅಲ್ಲಾಹನ ಹೊರತು ಬೇರೊಬ್ಬ ದೇವರನ್ನು ಹುಡುಕಬೇಕೇ?
7:141
وَإِذْ أَنْجَيْنَاكُمْ مِنْ آلِ فِرْعَوْنَ يَسُومُونَكُمْ سُوءَ الْعَذَابِ ۖ يُقَتِّلُونَ أَبْنَاءَكُمْ وَيَسْتَحْيُونَ نِسَاءَكُمْ ۚ وَفِي ذَٰلِكُمْ بَلَاءٌ مِنْ رَبِّكُمْ عَظِيمٌ ۞
ಮತ್ತು (ಸ್ಮರಿಸಿರಿ;) ನಾವು ನಿಮ್ಮನ್ನು ಫಿರ್‌ಔನನ ಜನಾಂಗದವರಿಂದ ರಕ್ಷಿಸಿದ ವೇಳೆ, ಅವರು ನಿಮ್ಮನ್ನು ಭಾರೀ ಕಠಿಣ ಹಿಂಸೆಗೆ ಗುರಿಪಡಿಸಿದ್ದರು. ಅವರು ನಿಮ್ಮ ಪುತ್ರರನ್ನು ಕೊಂದುಬಿಡುತ್ತಿದ್ದರು. ಮತ್ತು ನಿಮ್ಮ ಮಹಿಳೆಯರನ್ನು ಜೀವಂತವಿಡುತ್ತಿದ್ದರು. ಆ ಸ್ಥಿತಿಯಲ್ಲಿ ನಿಮ್ಮ ಪಾಲಿಗೆ ನಿಮ್ಮ ಒಡೆಯನ ಕಡೆಯಿಂದ ಭಾರೀ ದೊಡ್ಡ ಪರೀಕ್ಷೆ ಇತ್ತು.
7:142
۞ وَوَاعَدْنَا مُوسَىٰ ثَلَاثِينَ لَيْلَةً وَأَتْمَمْنَاهَا بِعَشْرٍ فَتَمَّ مِيقَاتُ رَبِّهِ أَرْبَعِينَ لَيْلَةً ۚ وَقَالَ مُوسَىٰ لِأَخِيهِ هَارُونَ اخْلُفْنِي فِي قَوْمِي وَأَصْلِحْ وَلَا تَتَّبِعْ سَبِيلَ الْمُفْسِدِينَ ۞
ಮುಂದೆ, ನಾವು ಮೂಸಾರಿಗೆ ಮೂವತ್ತು ರಾತ್ರಿಗಳ ವಾಗ್ದಾನ ಮಾಡಿದೆವು ಮತ್ತು ಹತ್ತು ರಾತ್ರಿಗಳನ್ನು ಸೇರಿಸಿ ಅದನ್ನು ಪೂರ್ತಿಗೊಳಿಸಿದೆವು. ಹೀಗೆ ಅವರ ಒಡೆಯನು ನಿಶ್ಚಯಿಸಿದ ನಲ್ವತ್ತು ರಾತ್ರಿಗಳ ಅವಧಿಯು ಪೂರ್ಣಗೊಂಡಿತು. (ಈ ಅವಧಿಗಾಗಿ ತೆರಳುವಾಗ) ಮೂಸಾ ತಮ್ಮ ಸಹೋದರ ಹಾರೂನರೊಡನೆ ಹೇಳಿದರು; ನೀನು ನನ್ನ ಜನಾಂಗದಲ್ಲಿ ನನ್ನ ಪ್ರತಿನಿಧಿಯಾಗಿರು ಮತ್ತು ಸುಧಾರಣೆಯನ್ನು ಮಾಡು. ಅಶಾಂತಿ ಹಬ್ಬುವವರ ದಾರಿಯನ್ನು ಅನುಸರಿಸಬೇಡ.
7:143
وَلَمَّا جَاءَ مُوسَىٰ لِمِيقَاتِنَا وَكَلَّمَهُ رَبُّهُ قَالَ رَبِّ أَرِنِي أَنْظُرْ إِلَيْكَ ۚ قَالَ لَنْ تَرَانِي وَلَٰكِنِ انْظُرْ إِلَى الْجَبَلِ فَإِنِ اسْتَقَرَّ مَكَانَهُ فَسَوْفَ تَرَانِي ۚ فَلَمَّا تَجَلَّىٰ رَبُّهُ لِلْجَبَلِ جَعَلَهُ دَكًّا وَخَرَّ مُوسَىٰ صَعِقًا ۚ فَلَمَّا أَفَاقَ قَالَ سُبْحَانَكَ تُبْتُ إِلَيْكَ وَأَنَا أَوَّلُ الْمُؤْمِنِينَ ۞
ಮೂಸಾ, ನಾವು ನಿಗದಿಪಡಿಸಿದ ಅವಧಿಗಾಗಿ ಬಂದಾಗ, ತಮ್ಮ ಒಡೆಯನೊಡನೆ ಮಾತನಾಡಿದರು. ನನ್ನೊಡೆಯಾ, ನಾನು ನಿನ್ನನ್ನು ನೋಡಬಲ್ಲಂತಹ ದೃಷ್ಟಿಯನ್ನು ನೀನು ನನಗೆ ನೀಡು ಎಂದು ಅವರು ಹೇಳಿದರು. ಅವನು (ಅಲ್ಲಾಹನು) ಹೇಳಿದನು; ನನ್ನನ್ನು ನೋಡಲು ನಿನಗೆ ಸಾಧ್ಯವಿಲ್ಲ. ಆದರೆ ನೀನು ಆ ಪರ್ವತದೆಡೆಗೆ ನೋಡು, ಅದು ತನ್ನ ಸ್ಥಾನದಲ್ಲೇ ನಿಂತಿದ್ದರೆ ನೀನು ನನ್ನನ್ನು ನೋಡಬಹುದು. ತರುವಾಯ ಅವರ ಒಡೆಯನು ಪರ್ವತದೆಡೆಗೆ ದಿವ್ಯ ಬೆಳಕನ್ನು ಬೀರಿ ಅದನ್ನು ಚೂರು ಚೂರಾಗಿಸಿ ಬಿಟ್ಟನು ಮತ್ತು ಮೂಸಾ ಪ್ರಜ್ಞೆ ಕಳೆದುಕೊಂಡು ಬಿದ್ದುಬಿಟ್ಟರು. ಆ ಬಳಿಕ ಅವರಿಗೆ ಪ್ರಜ್ಞೆ ಬಂದಾಗ ಅವರು ಹೇಳಿದರು; ನೀನು ಪರಮ ಪಾವನನು, ನಾನು ಪಶ್ಚಾತ್ತಾಪ ಪಟ್ಟು ನಿನ್ನೆಡೆಗೆ ಮರಳುತ್ತೇನೆ ಮತ್ತು ನಂಬುವವರ ಪೈಕಿ ನಾನು ಪ್ರಥಮನಾಗುತ್ತೇನೆ.
7:144
قَالَ يَا مُوسَىٰ إِنِّي اصْطَفَيْتُكَ عَلَى النَّاسِ بِرِسَالَاتِي وَبِكَلَامِي فَخُذْ مَا آتَيْتُكَ وَكُنْ مِنَ الشَّاكِرِينَ ۞
ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನಾನು ನನ್ನ ಸಂದೇಶಗಳಿಗಾಗಿ ಮತ್ತು ನನ್ನ ಸಂಭಾಷಣೆಗಾಗಿ ಎಲ್ಲ ಮಾನವರ ಪೈಕಿ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವೀಗ ನಾನು ನೀಡುವುದನ್ನು ಸ್ವೀಕರಿಸಿರಿ ಮತ್ತು ಕೃತಜ್ಞರಾಗಿರಿ.
7:145
وَكَتَبْنَا لَهُ فِي الْأَلْوَاحِ مِنْ كُلِّ شَيْءٍ مَوْعِظَةً وَتَفْصِيلًا لِكُلِّ شَيْءٍ فَخُذْهَا بِقُوَّةٍ وَأْمُرْ قَوْمَكَ يَأْخُذُوا بِأَحْسَنِهَا ۚ سَأُرِيكُمْ دَارَ الْفَاسِقِينَ ۞
ಆ ಬಳಿಕ ನಾವು ಅವರಿಗಾಗಿ (ಮೂಸಾರಿಗಾಗಿ) ಎಲ್ಲ ವಿಷಯಗಳ ಕುರಿತಾದ ಉಪದೇಶಗಳನ್ನು ಮತ್ತು ಎಲ್ಲ ವಿಷಯಗಳ ಕುರಿತಾದ ಸ್ಪಷ್ಟ ಮಾರ್ಗದರ್ಶನಗಳನ್ನು ಫಲಕಗಳಲ್ಲಿ ಬರೆದೆವು (ಮತ್ತು ಹೇಳಿದೆವು); ನೀವು ಇದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಇದರ ಉತ್ತಮ ಭಾಗವನ್ನು (ಸದ್ ವ್ಯಾಖ್ಯಾನವನ್ನು) ಸ್ವೀಕರಿಸಬೇಕೆಂದು ನಿಮ್ಮ ಜನಾಂಗದವರಿಗೆ ಆದೇಶಿಸಿರಿ. ಅವಿಧೇಯರ ನೆಲೆಯನ್ನು (ಅವರ ಗತಿ ಏನಾಗುತ್ತದೆಂಬುದನ್ನು) ನಾನು ನಿಮಗೆಲ್ಲಾ ತೋರಿಸುವೆನು.
7:146
سَأَصْرِفُ عَنْ آيَاتِيَ الَّذِينَ يَتَكَبَّرُونَ فِي الْأَرْضِ بِغَيْرِ الْحَقِّ وَإِنْ يَرَوْا كُلَّ آيَةٍ لَا يُؤْمِنُوا بِهَا وَإِنْ يَرَوْا سَبِيلَ الرُّشْدِ لَا يَتَّخِذُوهُ سَبِيلًا وَإِنْ يَرَوْا سَبِيلَ الْغَيِّ يَتَّخِذُوهُ سَبِيلًا ۚ ذَٰلِكَ بِأَنَّهُمْ كَذَّبُوا بِآيَاتِنَا وَكَانُوا عَنْهَا غَافِلِينَ ۞
ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಮೆರೆಯುವವರನ್ನು ನಾನು ನನ್ನ ದೃಷ್ಟಾಂತಗಳಿಂದ ದೂರ ಸರಿಸಿ ಬಿಡುವೆನು. ಅವರಂತು, ಎಲ್ಲ ದೃಷ್ಟಾಂತಗಳನ್ನು ಕಂಡರೂ ಅದನ್ನು ನಂಬುವವರಲ್ಲ. ಸತ್ಯದ ಮಾರ್ಗವನ್ನು ಕಣ್ಣಾರೆ ಕಂಡರೂ ಆ ಮಾರ್ಗವನ್ನು ಅವರು ಅನುಸರಿಸುವವರಲ್ಲ. ಅವರು ದುಷ್ಟ ಮಾರ್ಗವನ್ನು ಕಂಡರೆ ಅದನ್ನು ಮಾತ್ರ ಮಾರ್ಗವಾಗಿ ಅನುಸರಿಸುವರು. ಇದೇಕೆಂದರೆ, ಅವರು ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸಿದ್ದಾರೆ ಮತ್ತು ಆ ಕುರಿತು ಅರಿವಿಲ್ಲದವರಾಗಿದ್ದಾರೆ.
7:147
وَالَّذِينَ كَذَّبُوا بِآيَاتِنَا وَلِقَاءِ الْآخِرَةِ حَبِطَتْ أَعْمَالُهُمْ ۚ هَلْ يُجْزَوْنَ إِلَّا مَا كَانُوا يَعْمَلُونَ ۞
ಇನ್ನು, ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ಧಿಕ್ಕರಿಸಿದವರ ಕರ್ಮಗಳೆಲ್ಲಾ ವ್ಯರ್ಥವಾದವು. ಅವರಿಗೆ, ಅವರೇನು ಮಾಡಿದ್ದರೋ ಅದರ ಹೊರತು ಬೇರೆ ಪ್ರತಿಫಲ ಸಿಕ್ಕೀತೇ?
7:148
وَاتَّخَذَ قَوْمُ مُوسَىٰ مِنْ بَعْدِهِ مِنْ حُلِيِّهِمْ عِجْلًا جَسَدًا لَهُ خُوَارٌ ۚ أَلَمْ يَرَوْا أَنَّهُ لَا يُكَلِّمُهُمْ وَلَا يَهْدِيهِمْ سَبِيلًا ۘ اتَّخَذُوهُ وَكَانُوا ظَالِمِينَ ۞
ಮೂಸಾರ ಅನುಪಸ್ಥಿತಿಯಲ್ಲಿ ಅವರ ಜನಾಂಗದವರು ತಮ್ಮ ಆಭರಣಗಳಿಂದ ಒಂದು ಕರುವಿನ ವಿಗ್ರಹವನ್ನು ರಚಿಸಿಕೊಂಡರು. ಅದರಲ್ಲಿ ಗೋವಿನ ಧ್ವನಿ ಇತ್ತು. ಅದು ತಮ್ಮೊಡನೆ ಮಾತನಾಡುವುದೂ ಇಲ್ಲ ಮತ್ತು ತಮಗೆ ದಾರಿ ತೋರುವುದೂ ಇಲ್ಲ ಎಂಬುದನ್ನು ಅವರು ಕಾಣಲಿಲ್ಲವೇ? ಆದರೂ ಅವರು ಅದನ್ನು ನಂಬಿಕೊಂಡರು. ಅವರು ಅಕ್ರಮಿಗಳಾಗಿದ್ದರು.
7:149
وَلَمَّا سُقِطَ فِي أَيْدِيهِمْ وَرَأَوْا أَنَّهُمْ قَدْ ضَلُّوا قَالُوا لَئِنْ لَمْ يَرْحَمْنَا رَبُّنَا وَيَغْفِرْ لَنَا لَنَكُونَنَّ مِنَ الْخَاسِرِينَ ۞
ಮುಂದೆ, ಅವರಿಗೆ ತಮ್ಮ ತಪ್ಪಿನ ಅರಿವಾದಾಗ ಮತ್ತು ತಾವು ದಾರಿ ತಪ್ಪಿರುವುದು ಅವರಿಗೆ ಮನವರಿಕೆಯಾದಾಗ, ಅವರು ಹೇಳಿದರು; ನಮ್ಮ ಒಡೆಯನು ನಮ್ಮ ಮೇಲೆ ಕರುಣೆ ತೋರದಿದ್ದರೆ ಮತ್ತು ಅವನು ನಮ್ಮನ್ನು ಕ್ಷಮಿಸದಿದ್ದರೆ ಖಂಡಿತವಾಗಿಯೂ ನಾವು ನಷ್ಟಕ್ಕೊಳಗಾಗುವೆವು.
7:150
وَلَمَّا رَجَعَ مُوسَىٰ إِلَىٰ قَوْمِهِ غَضْبَانَ أَسِفًا قَالَ بِئْسَمَا خَلَفْتُمُونِي مِنْ بَعْدِي ۖ أَعَجِلْتُمْ أَمْرَ رَبِّكُمْ ۖ وَأَلْقَى الْأَلْوَاحَ وَأَخَذَ بِرَأْسِ أَخِيهِ يَجُرُّهُ إِلَيْهِ ۚ قَالَ ابْنَ أُمَّ إِنَّ الْقَوْمَ اسْتَضْعَفُونِي وَكَادُوا يَقْتُلُونَنِي فَلَا تُشْمِتْ بِيَ الْأَعْدَاءَ وَلَا تَجْعَلْنِي مَعَ الْقَوْمِ الظَّالِمِينَ ۞
ಆ ಬಳಿಕ, ಮೂಸಾ ತಮ್ಮ ಜನಾಂಗದೆಡೆಗೆ ಮರಳಿಬಂದಾಗ ಕೋಪಗೊಂಡರು ಹಾಗೂ ದುಃಖಿತರಾದರು. ಅವರು ಹೇಳಿದರು; ನನ್ನ ಅನುಪಸ್ಥಿತಿಯಲ್ಲಿ ನೀವು ನನ್ನ ಪ್ರಾತಿನಿಧ್ಯದ ಹೊಣೆಯನ್ನು ಬಹಳ ಕೆಟ್ಟದಾಗಿ ನಿರ್ವಹಿಸಿದಿರಿ. ನಿಮ್ಮ ಒಡೆಯನ ಆದೇಶದ ಕುರಿತು ನೀವು ಆತುರ ಪಟ್ಟಿರಾ? - ಮತ್ತು ಮೂಸಾ (ಅಲ್ಲಾಹನು ಕೊಟ್ಟ) ಫಲಕಗಳನ್ನು ಚೆಲ್ಲಿಬಿಟ್ಟರು ಹಾಗೂ ತಮ್ಮ ಸಹೋದರ (ಹಾರೂನ್)ರ ತಲೆಯನ್ನು ಹಿಡಿದು ತಮ್ಮೊಡೆಗೆ ಎಳೆದರು. ಅವರು (ಹಾರೂನ್) ಹೇಳಿದರು; ನನ್ನ ತಾಯಿಯ ಪುತ್ರನೇ ! ಈ ಜನಾಂಗದವರು ನನ್ನನ್ನು ತೀರಾ ದುರ್ಬಲಗೊಳಿಸಿ ಬಿಟ್ಟರು. ಅವರಂತು ನನ್ನನ್ನು ಕೊಲ್ಲುವವರಿದ್ದರು. ನೀನೀಗ ನನ್ನ ಬಗ್ಗೆ ಶತ್ರುಗಳು ನಗುವಂತೆ ಮಾಡಬೇಡ ಮತ್ತು ನನ್ನನ್ನು ಅಕ್ರಮಿಗಳ ಸಾಲಿಗೆ ಸೇರಿಸಬೇಡ.
7:151
قَالَ رَبِّ اغْفِرْ لِي وَلِأَخِي وَأَدْخِلْنَا فِي رَحْمَتِكَ ۖ وَأَنْتَ أَرْحَمُ الرَّاحِمِينَ ۞
ಅವರು (ಮೂಸಾ) ಹೇಳಿದರು; ನನ್ನೊಡೆಯಾ, ನನ್ನನ್ನು ಹಾಗೂ ನನ್ನ ಸಹೋದರನನ್ನು ಕ್ಷಮಿಸಿಬಿಡು ಮತ್ತು ನಮ್ಮನ್ನು ನಿನ್ನ ಅನುಗ್ರಹದಲ್ಲಿ ಸೇರಿಸು. ನೀನಂತು ಎಲ್ಲ ಕರುಣಾಳುಗಳಿಗಿಂತ ಮಹಾಕರುಣಾಳುವಾಗಿರುವೆ.
7:152
إِنَّ الَّذِينَ اتَّخَذُوا الْعِجْلَ سَيَنَالُهُمْ غَضَبٌ مِنْ رَبِّهِمْ وَذِلَّةٌ فِي الْحَيَاةِ الدُّنْيَا ۚ وَكَذَٰلِكَ نَجْزِي الْمُفْتَرِينَ ۞
ಖಂಡಿತವಾಗಿಯೂ, ಕರುವನ್ನು (ದೇವರಾಗಿ) ನೆಚ್ಚಿಕೊಂಡವರಿಗೆ, ಬಹುಬೇಗನೇ ಅವರ ಒಡೆಯನ ಕೋಪವು ತಟ್ಟಲಿದೆ ಮತ್ತು ಇಹಲೋಕದಲ್ಲಿ ಅವರಿಗೆ ಅಪಮಾನವು ಎದುರಾಗಲಿದೆ. ಸುಳ್ಳುಗಳನ್ನು ಸೃಷ್ಟಿಸುವವರಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
7:153
وَالَّذِينَ عَمِلُوا السَّيِّئَاتِ ثُمَّ تَابُوا مِنْ بَعْدِهَا وَآمَنُوا إِنَّ رَبَّكَ مِنْ بَعْدِهَا لَغَفُورٌ رَحِيمٌ ۞
ಪಾಪಕೃತ್ಯಗಳನ್ನು ಮಾಡಿದ ಬಳಿಕ ಪಶ್ಚಾತ್ತಾಪ ಪಟ್ಟವರು ಮತ್ತು ವಿಶ್ವಾಸವಿಟ್ಟವರು - ಖಂಡಿತವಾಗಿಯೂ ಇಷ್ಟಾದ ಬಳಿಕ ನಿಮ್ಮೊಡೆಯನು (ಅವರ ಪಾಲಿಗೆ) ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.
7:154
وَلَمَّا سَكَتَ عَنْ مُوسَى الْغَضَبُ أَخَذَ الْأَلْوَاحَ ۖ وَفِي نُسْخَتِهَا هُدًى وَرَحْمَةٌ لِلَّذِينَ هُمْ لِرَبِّهِمْ يَرْهَبُونَ ۞
ಮೂಸಾರ ಕೋಪ ತಣಿದಾಗ, ಅವರು ಫಲಕಗಳನ್ನು ಎತ್ತಿಕೊಂಡರು. ಅವುಗಳ ಬರಹಗಳಲ್ಲಿ ಮಾರ್ಗದರ್ಶನ ಹಾಗೂ ಅನುಗ್ರಹವಿತ್ತು - ತಮ್ಮ ಒಡೆಯನ ಭಕ್ತಿ ಉಳ್ಳವರಿಗಾಗಿ.
7:155
وَاخْتَارَ مُوسَىٰ قَوْمَهُ سَبْعِينَ رَجُلًا لِمِيقَاتِنَا ۖ فَلَمَّا أَخَذَتْهُمُ الرَّجْفَةُ قَالَ رَبِّ لَوْ شِئْتَ أَهْلَكْتَهُمْ مِنْ قَبْلُ وَإِيَّايَ ۖ أَتُهْلِكُنَا بِمَا فَعَلَ السُّفَهَاءُ مِنَّا ۖ إِنْ هِيَ إِلَّا فِتْنَتُكَ تُضِلُّ بِهَا مَنْ تَشَاءُ وَتَهْدِي مَنْ تَشَاءُ ۖ أَنْتَ وَلِيُّنَا فَاغْفِرْ لَنَا وَارْحَمْنَا ۖ وَأَنْتَ خَيْرُ الْغَافِرِينَ ۞
ಮುಂದೆ ಮೂಸಾ, ನಮ್ಮ ಜೊತೆಗಿನ ಕರಾರಿನ ಅವಧಿಗಾಗಿ ತಮ್ಮ ಜನಾಂಗದ ಎಪ್ಪತ್ತು ಮಂದಿ ಪುರುಷರನ್ನು ಆರಿಸಿಕೊಂಡರು. ತರುವಾಯ ಅವರಿಗೆ ಭೂಕಂಪವು ಎದುರಾದಾಗ, ಅವರು (ಮೂಸಾ) ಹೇಳಿದರು; ‘‘ನನ್ನೊಡೆಯಾ ನೀನಿಚ್ಛಿಸಿದ್ದರೆ, ಇವರನ್ನು ಮತ್ತು ನನ್ನನ್ನು ಈ ಹಿಂದೆಯೇ ನಾಶ ಪಡಿಸುತ್ತಿದ್ದೆ. ಇದೀಗ ನಮ್ಮಲ್ಲಿನ ಮೂರ್ಖರ ಕೃತ್ಯಕ್ಕಾಗಿ ನೀನು ನಮ್ಮನ್ನು ನಾಶ ಪಡಿಸುವೆಯಾ? ಇದು ನಿನ್ನ ಪರೀಕ್ಷೆಯಲ್ಲದೆ ಬೇರೇನಲ್ಲ. ಈ ಮೂಲಕ ನೀನು, ನೀನಿಚ್ಛಿಸಿದವರನ್ನು ದಾರಿಗೆಡಿಸುವೆ ಮತ್ತು ನೀನಿಚ್ಛಿಸಿದವರನ್ನು ಸರಿದಾರಿಗೆ ತರುವೆ. ನಮ್ಮ ಪೋಷಕನು ನೀನೇ. ಆದ್ದರಿಂದ ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆತೋರು. ನೀನು ಅತ್ಯುತ್ತಮ ಕ್ಷಮಾಶೀಲನು.’’
7:156
۞ وَاكْتُبْ لَنَا فِي هَٰذِهِ الدُّنْيَا حَسَنَةً وَفِي الْآخِرَةِ إِنَّا هُدْنَا إِلَيْكَ ۚ قَالَ عَذَابِي أُصِيبُ بِهِ مَنْ أَشَاءُ ۖ وَرَحْمَتِي وَسِعَتْ كُلَّ شَيْءٍ ۚ فَسَأَكْتُبُهَا لِلَّذِينَ يَتَّقُونَ وَيُؤْتُونَ الزَّكَاةَ وَالَّذِينَ هُمْ بِآيَاتِنَا يُؤْمِنُونَ ۞
‘‘ನೀನು ನಮ್ಮ ಪಾಲಿಗೆ ಈ ಲೋಕದಲ್ಲೂ ಪರಲೋಕದಲ್ಲೂ ಒಳಿತನ್ನೇ ವಿಧಿಸು. ನಾವಂತು ನಿನ್ನೆಡೆಗೆ ಮರಳಿರುವೆವು.’’ - ಅವನು (ಅಲ್ಲಾಹನು) ಹೇಳಿದನು; ನಾನು ನನ್ನ ಶಿಕ್ಷೆಯನ್ನು ನಾನಿಚ್ಛಿಸಿದವರಿಗೆ ನೀಡುತ್ತೇನೆ. ಇನ್ನು ನನ್ನ ಅನುಗ್ರಹವು ಎಲ್ಲವನ್ನೂ ಆವರಿಸಿಕೊಂಡಿದೆ. ನಾನು ಅದನ್ನು, ಧರ್ಮನಿಷ್ಠರ, ಝಕಾತ್ ಪಾವತಿಸುವವರ ಮತ್ತು ನಮ್ಮ ವಚನಗಳನ್ನು ನಂಬುವವರ ಪಾಲಿಗೆ ಬರೆದು ಬಿಡುವೆನು.
7:157
الَّذِينَ يَتَّبِعُونَ الرَّسُولَ النَّبِيَّ الْأُمِّيَّ الَّذِي يَجِدُونَهُ مَكْتُوبًا عِنْدَهُمْ فِي التَّوْرَاةِ وَالْإِنْجِيلِ يَأْمُرُهُمْ بِالْمَعْرُوفِ وَيَنْهَاهُمْ عَنِ الْمُنْكَرِ وَيُحِلُّ لَهُمُ الطَّيِّبَاتِ وَيُحَرِّمُ عَلَيْهِمُ الْخَبَائِثَ وَيَضَعُ عَنْهُمْ إِصْرَهُمْ وَالْأَغْلَالَ الَّتِي كَانَتْ عَلَيْهِمْ ۚ فَالَّذِينَ آمَنُوا بِهِ وَعَزَّرُوهُ وَنَصَرُوهُ وَاتَّبَعُوا النُّورَ الَّذِي أُنْزِلَ مَعَهُ ۙ أُولَٰئِكَ هُمُ الْمُفْلِحُونَ ۞
ಅವರು ನಿರಕ್ಷರಿ ಪ್ರವಾದಿಯನ್ನು ಅನುಸರಿಸುತ್ತಾರೆ. ಅವರ (ಆ ಪ್ರವಾದಿಯ) ಕುರಿತು ತಮ್ಮ ಬಳಿ ಇರುವ ತೌರಾತ್ ಮತ್ತು ಇಂಜೀಲ್‌ಗಳಲ್ಲಿ (ಈ ರೀತಿ) ಬರೆದಿರುವುದನ್ನು ಅವರು ಕಾಣುತ್ತಾರೆ; ‘‘ಅವರು (ಆ ಪ್ರವಾದಿ) ಅವರಿಗೆ, ಒಳಿತನ್ನು ಆದೇಶಿಸುವರು, ಅವರನ್ನು ಕೆಡುಕಿನಿಂದ ತಡೆಯುವರು, ನಿರ್ಮಲವಾದವುಗಳನ್ನು ಅವರ ಪಾಲಿಗೆ ಸಮ್ಮತಗೊಳಿಸುವರು, ಮಲಿನ ವಸ್ತುಗಳನ್ನು ಅವರ ಪಾಲಿಗೆ ನಿಷೇಧಿಸುವರು, ಅವರಿಂದ ಅವರ ಭಾರಗಳನ್ನು ಇಳಿಸುವರು ಮತ್ತು ಅವರ ಮೇಲಿದ್ದ ನೊಗಗಳನ್ನು ಕಳಚುವರು - ಅವರಲ್ಲಿ ನಂಬಿಕೆ ಇಟ್ಟು ಅವರನ್ನು ಸಮರ್ಥಿಸುವವರು, ಅವರಿಗೆ ನೆರವಾಗುವವರು ಮತ್ತು ಅವರ ಜೊತೆಗೆ ಇಳಿಸಲಾಗಿರುವ ಪ್ರಕಾಶವನ್ನು ಅನುಸರಿಸುವವರೇ ವಿಜಯಿಗಳು.’’
7:158
قُلْ يَا أَيُّهَا النَّاسُ إِنِّي رَسُولُ اللَّهِ إِلَيْكُمْ جَمِيعًا الَّذِي لَهُ مُلْكُ السَّمَاوَاتِ وَالْأَرْضِ ۖ لَا إِلَٰهَ إِلَّا هُوَ يُحْيِي وَيُمِيتُ ۖ فَآمِنُوا بِاللَّهِ وَرَسُولِهِ النَّبِيِّ الْأُمِّيِّ الَّذِي يُؤْمِنُ بِاللَّهِ وَكَلِمَاتِهِ وَاتَّبِعُوهُ لَعَلَّكُمْ تَهْتَدُونَ ۞
(ದೂತರೇ) ಹೇಳಿರಿ; ಮಾನವರೇ, ನಾನು ನಿಮ್ಮೆಲ್ಲರ ಪಾಲಿಗೆ ಅಲ್ಲಾಹನ ದೂತನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗೆ (ಅಲ್ಲಾಹನಿಗೆ) ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ನೀವೀಗ ಅಲ್ಲಾಹನಲ್ಲೂ ಆತನ ದೂತನಲ್ಲೂ ನಂಬಿಕೆ ಇಡಿರಿ - ಅವರು ನಿರಕ್ಷರಿ ಪ್ರವಾದಿಯಾಗಿದ್ದು, ಅಲ್ಲಾಹನಲ್ಲಿ ಹಾಗೂ ಅವನ ವಚನಗಳಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಮಾರ್ಗದರ್ಶನ ಪಡೆಯಲಿಕ್ಕಾಗಿ ನೀವು ಅವರನ್ನು ಅನುಸರಿಸಿ.
7:159
وَمِنْ قَوْمِ مُوسَىٰ أُمَّةٌ يَهْدُونَ بِالْحَقِّ وَبِهِ يَعْدِلُونَ ۞
ಮೂಸಾರ ಜನಾಂಗದಲ್ಲಿ ಸತ್ಯದೊಂದಿಗೆ ಮಾರ್ಗದರ್ಶನ ಮಾಡುವ ಮತ್ತು ಆ ವಿಷಯದಲ್ಲಿ ನ್ಯಾಯ ಪಾಲಿಸುವ ಒಂದು ಸಮುದಾಯವಿದೆ.
7:160
وَقَطَّعْنَاهُمُ اثْنَتَيْ عَشْرَةَ أَسْبَاطًا أُمَمًا ۚ وَأَوْحَيْنَا إِلَىٰ مُوسَىٰ إِذِ اسْتَسْقَاهُ قَوْمُهُ أَنِ اضْرِبْ بِعَصَاكَ الْحَجَرَ ۖ فَانْبَجَسَتْ مِنْهُ اثْنَتَا عَشْرَةَ عَيْنًا ۖ قَدْ عَلِمَ كُلُّ أُنَاسٍ مَشْرَبَهُمْ ۚ وَظَلَّلْنَا عَلَيْهِمُ الْغَمَامَ وَأَنْزَلْنَا عَلَيْهِمُ الْمَنَّ وَالسَّلْوَىٰ ۖ كُلُوا مِنْ طَيِّبَاتِ مَا رَزَقْنَاكُمْ ۚ وَمَا ظَلَمُونَا وَلَٰكِنْ كَانُوا أَنْفُسَهُمْ يَظْلِمُونَ ۞
ನಾವು ಅವರನ್ನು ಹನ್ನೆರಡು ಕುಲ ಗೋತ್ರಗಳಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನಾಂಗವು ನೀರನ್ನು ಕೇಳಿದಾಗ ‘‘ಆ ಕಲ್ಲಿನ ಮೇಲೆ ನಿಮ್ಮ ಊರುಗೋಲಿನಿಂದ ಹೊಡೆಯಿರಿ’’ ಎಂದು ನಾವು ಅವರೆಡೆಗೆ ದಿವ್ಯವಾಣಿಯನ್ನು ಕಳಿಸಿದೆವು; ಆಗ ಅದರಿಂದ ಹನ್ನೆರಡು ಚಿಲುಮೆಗಳು ಹರಿಯತೊಡಗಿದವು. ಪ್ರತಿಯೊಬ್ಬರೂ ತಮ್ಮ ಜಲಮೂಲವನ್ನು ಗುರುತಿಸಿಕೊಂಡರು. ನಾವು ಅವರ ಮೇಲೆ ಮೋಡದ ನೆರಳನ್ನು ಆವರಿಸಿದೆವು. ಅವರಿಗೆ ಮನ್ನ್ ಮತ್ತು ಸಲ್ವಾ (ಎಂಬ ಆಹಾರ ಸಾಮಗ್ರಿ)ಗಳನ್ನು ಇಳಿಸಿಕೊಟ್ಟೆವು.‘‘ನಿಮಗೆ ಒದಗಿಸಲಾಗಿರುವ ಶುದ್ಧ ವಸ್ತುಗಳಿಂದ ತಿನ್ನಿರಿ’’ (ಎಂದು ಅವರಿಗೆ ಆದೇಶಿಸಲಾಗಿತ್ತು. ಇದನ್ನು ಮೀರುವ ಮೂಲಕ) ಅವರು ನಮ್ಮ ಮೇಲೇನೂ ಅಕ್ರಮ ವೆಸಗಲಿಲ್ಲ. ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡರು.
7:161
وَإِذْ قِيلَ لَهُمُ اسْكُنُوا هَٰذِهِ الْقَرْيَةَ وَكُلُوا مِنْهَا حَيْثُ شِئْتُمْ وَقُولُوا حِطَّةٌ وَادْخُلُوا الْبَابَ سُجَّدًا نَغْفِرْ لَكُمْ خَطِيئَاتِكُمْ ۚ سَنَزِيدُ الْمُحْسِنِينَ ۞
ಅವರೊಡನೆ ಹೀಗೆನ್ನಲಾಗಿತ್ತು; ನೀವು ಈ ಪಟ್ಟಣದಲ್ಲಿ ವಾಸಿಸಿರಿ, ಇಲ್ಲಿರುವುದರಲ್ಲಿ ನೀವಿಚ್ಛಿಸುವಂತೆ ತಿನ್ನಿರಿ, ‘ಹಿತ್ತಃ’ ಎನ್ನುತ್ತಲಿರಿ (ಕ್ಷಮೆಯಾಚಿಸುತ್ತಲಿರಿ) ಮತ್ತು ಸಾಷ್ಟಾಂಗವೆರಗುತ್ತಾ ಪಟ್ಟಣದ ದ್ವಾರವನ್ನು ಪ್ರವೇಶಿಸಿರಿ. ನಾವು ನಿಮ್ಮ ಪ್ರಮಾದಗಳನ್ನು ಕ್ಷಮಿಸಿ ಬಿಡುವೆವು. ಸತ್ಕರ್ಮಿಗಳಿಗೆ ನಾವು ಬಹುಬೇಗನೇ ಇನ್ನಷ್ಟನ್ನು ನೀಡುವೆವು.
7:162
فَبَدَّلَ الَّذِينَ ظَلَمُوا مِنْهُمْ قَوْلًا غَيْرَ الَّذِي قِيلَ لَهُمْ فَأَرْسَلْنَا عَلَيْهِمْ رِجْزًا مِنَ السَّمَاءِ بِمَا كَانُوا يَظْلِمُونَ ۞
ಆದರೆ ಅವರಲ್ಲಿನ ಅಕ್ರಮಿಗಳು ತಮಗೆ ನೀಡಲಾಗಿದ್ದ ಶಬ್ದವನ್ನು ಬೇರೆಯದಾಗಿ ಬದಲಿಸಿ ಬಿಟ್ಟರು. ಕೊನೆಗೆ ಅವರು ಎಸಗುತ್ತಿದ್ದ ಅಕ್ರಮದ ಫಲವಾಗಿ ನಾವು ಅವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಎರಗಿಸಿಬಿಟ್ಟೆವು.
7:163
وَاسْأَلْهُمْ عَنِ الْقَرْيَةِ الَّتِي كَانَتْ حَاضِرَةَ الْبَحْرِ إِذْ يَعْدُونَ فِي السَّبْتِ إِذْ تَأْتِيهِمْ حِيتَانُهُمْ يَوْمَ سَبْتِهِمْ شُرَّعًا وَيَوْمَ لَا يَسْبِتُونَ ۙ لَا تَأْتِيهِمْ ۚ كَذَٰلِكَ نَبْلُوهُمْ بِمَا كَانُوا يَفْسُقُونَ ۞
ನೀವು ಅವರೊಡನೆ, ಕಡಲ ತೀರದಲ್ಲಿದ್ದ ಆ ಪಟ್ಟಣದ ಕುರಿತು ಕೇಳಿರಿ. ಅವರು ಸಬ್ತ್‌ನ (ಶನಿವಾರದ) ನಿಯಮವನ್ನು ಮೀರಿ ಬಿಟ್ಟರು. ಅವರ ಸಬ್ತ್‌ನ ದಿನವೇ ಮೀನುಗಳು ಅವರ ಮುಂದೆ ಬಂದು ಬಿಡುತ್ತಿದ್ದವು ಮತ್ತು ಸಬ್ತ್ ಅಲ್ಲದ ದಿನಗಳಲ್ಲಿ ಅವು ಅವರ ಮುಂದೆ ಬರುತ್ತಿರಲಿಲ್ಲ. ಈ ರೀತಿ ನಾವು ಅವರನ್ನು ಪರೀಕ್ಷಿಸುತ್ತಿದ್ದೆವು. ಏಕೆಂದರೆ ಅವರು ಅವಿಧೇಯರಾಗಿದ್ದರು.
7:164
وَإِذْ قَالَتْ أُمَّةٌ مِنْهُمْ لِمَ تَعِظُونَ قَوْمًا ۙ اللَّهُ مُهْلِكُهُمْ أَوْ مُعَذِّبُهُمْ عَذَابًا شَدِيدًا ۖ قَالُوا مَعْذِرَةً إِلَىٰ رَبِّكُمْ وَلَعَلَّهُمْ يَتَّقُونَ ۞
ಅವರಲ್ಲಿನ ಒಂದು ಗುಂಪು ‘‘ಅಲ್ಲಾಹನು ನಾಶಮಾಡಲಿರುವ ಅಥವಾ ತೀವ್ರ ಯಾತನೆಗೆ ಗುರಿಪಡಿಸಲಿರುವ ಒಂದು ಜನಾಂಗಕ್ಕೆ ನೀವೇಕೆ ಉಪದೇಶ ನೀಡುತ್ತೀರಿ?’’ ಎಂದಿತು. ಅವರು (ಬೋಧಕರು) ಹೇಳಿದರು; ನಿಮ್ಮ ಒಡೆಯನ ಮುಂದೆ ನೆಪವಾಗಲು ಮತ್ತು ಅವರು ದೇವಭಯ ಉಳ್ಳವರಾಗಲೂಬಹುದೆಂದು.
7:165
فَلَمَّا نَسُوا مَا ذُكِّرُوا بِهِ أَنْجَيْنَا الَّذِينَ يَنْهَوْنَ عَنِ السُّوءِ وَأَخَذْنَا الَّذِينَ ظَلَمُوا بِعَذَابٍ بَئِيسٍ بِمَا كَانُوا يَفْسُقُونَ ۞
ಕೊನೆಗೆ ಅವರು, ತಮಗೆ ನೀಡಲಾದ ಉಪದೇಶವನ್ನು ಮರೆತುಬಿಟ್ಟಾಗ, ಅವರನ್ನು ದುಷ್ಟ ಕೆಲಸಗಳಿಂದ ತಡೆಯುತ್ತಿದ್ದವರನ್ನು ನಾವು ರಕ್ಷಿಸಿದೆವು ಮತ್ತು ಅಕ್ರಮಿಗಳನ್ನು ಅವರ ಅವಿಧೇಯತೆಯ ಕಾರಣ ಹಿಡಿದು, ಭಾರೀ ಕೆಟ್ಟ ಶಿಕ್ಷೆಗೆ ಗುರಿಪಡಿಸಿದೆವು.
7:166
فَلَمَّا عَتَوْا عَنْ مَا نُهُوا عَنْهُ قُلْنَا لَهُمْ كُونُوا قِرَدَةً خَاسِئِينَ ۞
ಅವರಿಗೆ ಹೇರಲಾಗಿದ್ದ ನಿರ್ಬಂಧವನ್ನು ಅವರು ಉಲ್ಲಂಘಿಸಿದಾಗ ನಾವು ಅವರಿಗೆ ‘‘ಅಪಮಾನಿತ ಕೋತಿಗಳಾಗಿ ಬಿಡಿರಿ’’ ಎಂದೆವು.
7:167
وَإِذْ تَأَذَّنَ رَبُّكَ لَيَبْعَثَنَّ عَلَيْهِمْ إِلَىٰ يَوْمِ الْقِيَامَةِ مَنْ يَسُومُهُمْ سُوءَ الْعَذَابِ ۗ إِنَّ رَبَّكَ لَسَرِيعُ الْعِقَابِ ۖ وَإِنَّهُ لَغَفُورٌ رَحِيمٌ ۞
ಪುನರುತ್ಥಾನ ದಿನದವರೆಗೂ, ಘೋರ ಹಿಂಸೆಯ ಮೂಲಕ ಅವರನ್ನು ದಂಡಿಸುತ್ತಿರುವವರನ್ನು ಅವರ ಮೇಲೆ ಹೇರುತ್ತಲೇ ಇರುವೆನೆಂದು ನಿಮ್ಮ ಒಡೆಯನು ಘೋಷಿಸಿರುವನು. ನಿಮ್ಮ ಒಡೆಯನು ಕ್ಷಿಪ್ರವಾಗಿ ದಂಡಿಸಬಲ್ಲವನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಅತ್ಯಂತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ.
7:168
وَقَطَّعْنَاهُمْ فِي الْأَرْضِ أُمَمًا ۖ مِنْهُمُ الصَّالِحُونَ وَمِنْهُمْ دُونَ ذَٰلِكَ ۖ وَبَلَوْنَاهُمْ بِالْحَسَنَاتِ وَالسَّيِّئَاتِ لَعَلَّهُمْ يَرْجِعُونَ ۞
ತರುವಾಯ ನಾವು ಅವರನ್ನು ಗುಂಪು ಗುಂಪುಗಳಾಗಿ ಭೂಮಿಯಲ್ಲಿ ಹರಡಿ ಬಿಟ್ಟೆವು. ಅವರಲ್ಲಿ ಸಜ್ಜನರೂ ಇದ್ದಾರೆ ಮತ್ತು ಅವರಲ್ಲಿ ಇತರರೂ ಇದ್ದಾರೆ. ಅವರು (ಸನ್ಮಾರ್ಗದೆಡೆಗೆ) ಮರಳಿ ಬರಲೆಂದು ನಾವು ಅವರನ್ನು ಒಳಿತುಗಳ ಮೂಲಕವೂ ಕೆಡುಕುಗಳ ಮೂಲಕವೂ ಪರೀಕ್ಷೆಗೆ ಒಳಪಡಿಸಿದೆವು.
7:169
فَخَلَفَ مِنْ بَعْدِهِمْ خَلْفٌ وَرِثُوا الْكِتَابَ يَأْخُذُونَ عَرَضَ هَٰذَا الْأَدْنَىٰ وَيَقُولُونَ سَيُغْفَرُ لَنَا وَإِنْ يَأْتِهِمْ عَرَضٌ مِثْلُهُ يَأْخُذُوهُ ۚ أَلَمْ يُؤْخَذْ عَلَيْهِمْ مِيثَاقُ الْكِتَابِ أَنْ لَا يَقُولُوا عَلَى اللَّهِ إِلَّا الْحَقَّ وَدَرَسُوا مَا فِيهِ ۗ وَالدَّارُ الْآخِرَةُ خَيْرٌ لِلَّذِينَ يَتَّقُونَ ۗ أَفَلَا تَعْقِلُونَ ۞
ಅವರ ಬಳಿಕ ಒಂದು ದುಷ್ಟ ಪೀಳಿಗೆಯು ಗ್ರಂಥದ ಉತ್ತರಾಧಿಕಾರಿಯಾಯಿತು. ಅವರು ಈ ಲೋಕದ ಸುಖವನ್ನೇ ಆರಿಸಿಕೊಂಡರು ಮತ್ತು ನಮ್ಮನ್ನು ಕ್ಷಮಿಸಲಾಗುವುದು ಎನ್ನುತ್ತಿದ್ದರು. ನಿಜವಾಗಿ ಅದೇ ಸಂಪತ್ತು ಮತ್ತೆ ಅವರ ಬಳಿಗೆ ಬಂದರೆ ಅವರು ಅದನ್ನೇ ಆರಿಸುವರು. ಅಲ್ಲಾಹನ ಕುರಿತು ಸತ್ಯವಲ್ಲದ್ದನ್ನು ಹೇಳಬಾರದೆಂದು ಮತ್ತು ಅದರಲ್ಲಿ (ಗ್ರಂಥದಲ್ಲಿ) ಇರುವುದನ್ನು ಅಧ್ಯಯನ ಮಾಡಬೇಕೆಂದು ಗ್ರಂಥದ ಆಧಾರದಲ್ಲಿ ಅವರಿಂದ ಕರಾರನ್ನು ಪಡೆಯಲಾಗಿರಲಿಲ್ಲವೇ? ಧರ್ಮನಿಷ್ಠರ ಪಾಲಿಗೆ ಪರಲೋಕದ ನೆಲೆಯೇ ಶ್ರೇಷ್ಠವಾದುದು. ನೀವೇನು, ಅರ್ಥಯಿಸಿಕೊಳ್ಳುವುದಿಲ್ಲವೇ?
7:170
وَالَّذِينَ يُمَسِّكُونَ بِالْكِتَابِ وَأَقَامُوا الصَّلَاةَ إِنَّا لَا نُضِيعُ أَجْرَ الْمُصْلِحِينَ ۞
ಗ್ರಂಥವನ್ನು ಭದ್ರವಾಗಿ ಹಿಡಿದುಕೊಂಡ ಹಾಗೂ ನಮಾಝ್‌ಅನ್ನು ಪಾಲಿಸುವಂತಹ ಸತ್ಕರ್ಮಿಗಳ ಪ್ರತಿಫಲವನ್ನು ನಾವು ಖಂಡಿತ ವ್ಯರ್ಥಗೊಳಿಸುವುದಿಲ್ಲ.
7:171
۞ وَإِذْ نَتَقْنَا الْجَبَلَ فَوْقَهُمْ كَأَنَّهُ ظُلَّةٌ وَظَنُّوا أَنَّهُ وَاقِعٌ بِهِمْ خُذُوا مَا آتَيْنَاكُمْ بِقُوَّةٍ وَاذْكُرُوا مَا فِيهِ لَعَلَّكُمْ تَتَّقُونَ ۞
ನಾವು ಪರ್ವತವನ್ನು, ನೆರಳುಕೊಡುವ ಚಪ್ಪರದಂತೆ ಅವರ ಮೇಲೆ ಎತ್ತಿದಾಗ, ಅದು ತಮ್ಮ ಮೇಲೆ ಬಿದ್ದು ಬಿಡುವುದೆಂದು ಅವರು ಭಾವಿಸಿದರು. ‘‘ನಿಮಗೆ ನಾವು ನೀಡಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲೇನಿದೆಯೋ ಅದನ್ನು ನೆನಪಿಟ್ಟುಕೊಳ್ಳಿರಿ. ನೀವು ಸುರಕ್ಷಿತರಾಗಬಹುದು’’ (ಎಂದು ಅವರಿಗೆ ಆದೇಶಿಸಲಾಗಿತ್ತು.)
7:172
وَإِذْ أَخَذَ رَبُّكَ مِنْ بَنِي آدَمَ مِنْ ظُهُورِهِمْ ذُرِّيَّتَهُمْ وَأَشْهَدَهُمْ عَلَىٰ أَنْفُسِهِمْ أَلَسْتُ بِرَبِّكُمْ ۖ قَالُوا بَلَىٰ ۛ شَهِدْنَا ۛ أَنْ تَقُولُوا يَوْمَ الْقِيَامَةِ إِنَّا كُنَّا عَنْ هَٰذَا غَافِلِينَ ۞
ನಿಮ್ಮೊಡೆಯನು ಆದಮ್‌ರ ಮಕ್ಕಳ ಮೂಲಕ ಜನಿಸಿದ ಅವರ ಸಂತತಿಗಳನ್ನು, ಸ್ವತಃ ತಮ್ಮ ವಿರುದ್ಧವೇ ಸಾಕ್ಷಿಗಳಾಗಿಸಿ ‘‘ನಾನು ನಿಮ್ಮ ಒಡೆಯನಲ್ಲವೇ?’’ ಎಂದು ಕೇಳಿದಾಗ ಅವರು, ‘‘ಯಾಕಲ್ಲ? ಅದಕ್ಕೆ ನಾವೇ ಸಾಕ್ಷಿಗಳು’’ ಎಂದಿದ್ದರು. ನಾಳೆ ಪುನರುತ್ಥಾನ ದಿನ ನೀವು ಈ ಕುರಿತು ನಮಗೇನೂ ತಿಳಿದಿರಲಿಲ್ಲ ಎನ್ನಬಾರದೆಂದು ಹೀಗೆ ಮಾಡಲಾಯಿತು.
7:173
أَوْ تَقُولُوا إِنَّمَا أَشْرَكَ آبَاؤُنَا مِنْ قَبْلُ وَكُنَّا ذُرِّيَّةً مِنْ بَعْدِهِمْ ۖ أَفَتُهْلِكُنَا بِمَا فَعَلَ الْمُبْطِلُونَ ۞
ಅಥವಾ ನೀವು, ‘‘ಬಹುದೇವಾರಾಧನೆ ಮಾಡಿದವರು ಗತಕಾಲದ ನಮ್ಮ ಪೂರ್ವಜರು. ನಾವು ಅವರ ಸಂತತಿಗಳು ಮಾತ್ರ. ಆ ದಾರಿಗೆಟ್ಟವರ ಕೃತ್ಯಕ್ಕಾಗಿ ನೀನೇನು ನಮ್ಮನ್ನು ನಾಶಪಡಿಸುವೆಯಾ?’’ ಎನ್ನಬಾರದೆಂದು (ಹೀಗೆ ಮಾಡಲಾಯಿತು).
7:174
وَكَذَٰلِكَ نُفَصِّلُ الْآيَاتِ وَلَعَلَّهُمْ يَرْجِعُونَ ۞
ಈ ರೀತಿ, ಅವರು (ಸತ್ಯದೆಡೆಗೆ) ಮರಳಬೇಕೆಂದು ನಾವು ನಮ್ಮ ವಚನಗಳನ್ನು ವಿವರಿಸುತ್ತೇವೆ.
7:175
وَاتْلُ عَلَيْهِمْ نَبَأَ الَّذِي آتَيْنَاهُ آيَاتِنَا فَانْسَلَخَ مِنْهَا فَأَتْبَعَهُ الشَّيْطَانُ فَكَانَ مِنَ الْغَاوِينَ ۞
ಆ ವ್ಯಕ್ತಿಯ ವಿಷಯವನ್ನು ನೀವು ಅವರಿಗೆ ಓದಿ ಹೇಳಿರಿ; ನಾವು ಆತನಿಗೆ ನಮ್ಮ ಪುರಾವೆಗಳನ್ನು ನೀಡಿದ್ದೆವು. ಅವನು ಅವುಗಳಿಂದ ಜಾರಿಕೊಂಡನು. ಶೈತಾನನು ಅವನ ಬೆನ್ನು ಹತ್ತಿದನು. ಕೊನೆಗೆ ಅವನು ಸಂಪೂರ್ಣ ದಾರಿಗೆಟ್ಟವನಾದನು.
7:176
وَلَوْ شِئْنَا لَرَفَعْنَاهُ بِهَا وَلَٰكِنَّهُ أَخْلَدَ إِلَى الْأَرْضِ وَاتَّبَعَ هَوَاهُ ۚ فَمَثَلُهُ كَمَثَلِ الْكَلْبِ إِنْ تَحْمِلْ عَلَيْهِ يَلْهَثْ أَوْ تَتْرُكْهُ يَلْهَثْ ۚ ذَٰلِكَ مَثَلُ الْقَوْمِ الَّذِينَ كَذَّبُوا بِآيَاتِنَا ۚ فَاقْصُصِ الْقَصَصَ لَعَلَّهُمْ يَتَفَكَّرُونَ ۞
ನಾವು ಬಯಸಿದ್ದರೆ ಅವುಗಳ (ಪುರಾವೆ) ಮೂಲಕ ಆತನನ್ನು ಉನ್ನತಿಗೇರಿಸಬಹುದಿತ್ತು. ಆದರೆ ಅವನು ಮಾತ್ರ ನೆಲದೆಡೆಗೇ ಬಾಗಿದ್ದನು ಮತ್ತು ತನ್ನ ಸ್ವೇಚ್ಛೆಯನ್ನೇ ಅನುಸರಿಸಿದನು. ಅವನ ಉದಾಹರಣೆ ನಾಯಿಯಂತಿದೆ. ನೀವು ಅದನ್ನು ಥಳಿಸಿದರೂ ಅದು ನಾಲಗೆಯನ್ನು ಹೊರಚಾಚಿ ಕಂಪಿಸುತ್ತಿರುತ್ತದೆ. ನೀವು ಅದನ್ನು ಹಾಗೆಯೇ ಬಿಟ್ಟರೂ ಅದು ನಾಲಗೆ ಹೊರಚಾಚಿ ಕಂಪಿಸುತ್ತಿರುತ್ತದೆ. ನಮ್ಮ ವಚನಗಳನ್ನು ಧಿಕ್ಕರಿಸುವವರ ಉದಾಹರಣೆಯೂ ಹೀಗೆಯೇ ಇದೆ. ನೀವು ಅವರಿಗೆ (ಇಂತಹ) ವೃತ್ತಾಂತಗಳನ್ನು ವಿವರಿಸಿರಿ. ಅವರು ಚಿಂತನೆ ನಡೆಸಲಿ.
7:177
سَاءَ مَثَلًا الْقَوْمُ الَّذِينَ كَذَّبُوا بِآيَاتِنَا وَأَنْفُسَهُمْ كَانُوا يَظْلِمُونَ ۞
ನಮ್ಮ ವಚನಗಳನ್ನು ತಿರಸ್ಕರಿಸಿದ ಹಾಗೂ ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡ ಜನರ ಅವಸ್ಥೆ ತುಂಬಾ ಕೆಟ್ಟದಾಗಿದೆ.
7:178
مَنْ يَهْدِ اللَّهُ فَهُوَ الْمُهْتَدِي ۖ وَمَنْ يُضْلِلْ فَأُولَٰئِكَ هُمُ الْخَاسِرُونَ ۞
ಅಲ್ಲಾಹನು ಯಾರಿಗೆ ದಾರಿ ತೋರಿದನೋ ಅವನೇ ಸರಿದಾರಿಯಲ್ಲಿರುತ್ತಾನೆ. ಅವನು ಯಾರನ್ನು ದಾರಿಗೆಡಿಸಿದನೋ ಅವರೇ ನಷ್ಟ ಅನುಭವಿಸುವವರಾಗಿದ್ದಾರೆ.
7:179
وَلَقَدْ ذَرَأْنَا لِجَهَنَّمَ كَثِيرًا مِنَ الْجِنِّ وَالْإِنْسِ ۖ لَهُمْ قُلُوبٌ لَا يَفْقَهُونَ بِهَا وَلَهُمْ أَعْيُنٌ لَا يُبْصِرُونَ بِهَا وَلَهُمْ آذَانٌ لَا يَسْمَعُونَ بِهَا ۚ أُولَٰئِكَ كَالْأَنْعَامِ بَلْ هُمْ أَضَلُّ ۚ أُولَٰئِكَ هُمُ الْغَافِلُونَ ۞
ನಾವು ಜಿನ್ನ್ ಮತ್ತು ಮಾನವರ ಪೈಕಿ ಅನೇಕರನ್ನು ನರಕಕ್ಕಾಗಿಯೇ ಸೃಷ್ಟಿಸಿದ್ದೇವೆ. ಅವರಿಗೆ ಮನಸ್ಸುಗಳಿವೆ, ಆದರೆ ಆ ಮೂಲಕ ಅವರು ಚಿಂತನೆ ನಡೆಸುವುದಿಲ್ಲ. ಅವರಿಗೆ ಕಣ್ಣುಗಳಿವೆ, ಆದರೆ ಆ ಮೂಲಕ ಅವರು ನೋಡುವುದಿಲ್ಲ. ಹಾಗೆಯೇ, ಅವರಿಗೆ ಕಿವಿಗಳಿವೆ, ಆದರೆ ಆ ಮೂಲಕ ಅವರು ಕೇಳುವುದಿಲ್ಲ. ಅವರು ಪ್ರಾಣಿಗಳಂತಿದ್ದಾರೆ, ಮಾತ್ರವಲ್ಲ, ಇನ್ನೂ ಹೆಚ್ಚು ದಾರಿಗೆಟ್ಟಿದ್ದಾರೆ. ಅವರಿಗೆ ಅರಿವಿಲ್ಲ.
7:180
وَلِلَّهِ الْأَسْمَاءُ الْحُسْنَىٰ فَادْعُوهُ بِهَا ۖ وَذَرُوا الَّذِينَ يُلْحِدُونَ فِي أَسْمَائِهِ ۚ سَيُجْزَوْنَ مَا كَانُوا يَعْمَلُونَ ۞
ಅತ್ಯುತ್ತಮ ಹೆಸರುಗಳು ಅಲ್ಲಾಹನಿಗೆ ಸೇರಿವೆ. ನೀವು ಅವನನ್ನು ಅವುಗಳಿಂದಲೇ ಕರೆಯಿರಿ. ಅವನ ಹೆಸರುಗಳಿಗೆ ಅಗೌರವ ತೋರುವವರನ್ನು ಬಿಟ್ಟುಬಿಡಿರಿ. ಅವರು ಮಾಡುತ್ತಿದ್ದುದರ ಫಲವನ್ನು ಅವರು ಉಣ್ಣಲಿದ್ದಾರೆ.
7:181
وَمِمَّنْ خَلَقْنَا أُمَّةٌ يَهْدُونَ بِالْحَقِّ وَبِهِ يَعْدِلُونَ ۞
ನಾವು ಸೃಷ್ಟಿಸಿರುವ ಒಂದು ಸಮುದಾಯವಿದೆ. ಅವರು (ಜನರಿಗೆ) ಸತ್ಯದೊಂದಿಗೆ ಮಾರ್ಗದರ್ಶನ ಮಾಡುತ್ತಾರೆ ಮತ್ತು ಅದರ ಆಧಾರದಲ್ಲೇ ನ್ಯಾಯಪಾಲನೆ ಮಾಡುತ್ತಾರೆ.
7:182
وَالَّذِينَ كَذَّبُوا بِآيَاتِنَا سَنَسْتَدْرِجُهُمْ مِنْ حَيْثُ لَا يَعْلَمُونَ ۞
ಇನ್ನು, ನಮ್ಮ ವಚನಗಳನ್ನು ಸುಳ್ಳೆಂದವರನ್ನು (ಶಿಕ್ಷಿಸಲು) ನಾವು , ಅವರಿಗೆ ಅರಿವೇ ಆಗದಂತೆ ಹಂತಹಂತವಾಗಿ ಅವರನ್ನು ಹಿಡಿದುಕೊಳ್ಳುತ್ತೇವೆ.
7:183
وَأُمْلِي لَهُمْ ۚ إِنَّ كَيْدِي مَتِينٌ ۞
ನಾನು ಅವರಿಗೆ ಧಾರಾಳ ಕಾಲಾವಕಾಶ ನೀಡುತ್ತೇನೆ. ನನ್ನ ಯೋಜನೆ ಖಂಡಿತ ಬಹಳ ಬಲಿಷ್ಠವಾಗಿರುತ್ತದೆ.
7:184
أَوَلَمْ يَتَفَكَّرُوا ۗ مَا بِصَاحِبِهِمْ مِنْ جِنَّةٍ ۚ إِنْ هُوَ إِلَّا نَذِيرٌ مُبِينٌ ۞
ಅವರೇನು ಆಲೋಚಿಸುವುದಿಲ್ಲವೇ? ಅವರ ಜೊತೆಗಾರನಿಗೆ (ದೂತರಿಗೆ) ಹುಚ್ಚೇನೂ ಇಲ್ಲ. ಅವರು ಸ್ಪಷ್ಟವಾಗಿ ಎಚ್ಚರಿಸುವವರು ಮಾತ್ರ.
7:185
أَوَلَمْ يَنْظُرُوا فِي مَلَكُوتِ السَّمَاوَاتِ وَالْأَرْضِ وَمَا خَلَقَ اللَّهُ مِنْ شَيْءٍ وَأَنْ عَسَىٰ أَنْ يَكُونَ قَدِ اقْتَرَبَ أَجَلُهُمْ ۖ فَبِأَيِّ حَدِيثٍ بَعْدَهُ يُؤْمِنُونَ ۞
ಅವರೇನು, ಆಕಾಶಗಳ ಹಾಗೂ ಭೂಮಿಯ ಸಾಮ್ರಾಜ್ಯವನ್ನು ಮತ್ತು ಅಲ್ಲಾಹನು ಸೃಷ್ಟಿಸಿರುವ ಯಾವ ವಸ್ತುವನ್ನೂ ನೋಡುವುದಿಲ್ಲವೇ? ಅವರ ಅಂತ್ಯ (ಮರಣವು) ಸಮೀಪಿಸಿರಬಹುದು. ಆ ಬಳಿಕ ಅವರು ಏನನ್ನು ತಾನೇ ನಂಬುವರು?
7:186
مَنْ يُضْلِلِ اللَّهُ فَلَا هَادِيَ لَهُ ۚ وَيَذَرُهُمْ فِي طُغْيَانِهِمْ يَعْمَهُونَ ۞
ಯಾರನ್ನು ಅಲ್ಲಾಹನು ದಾರಿಗೆಡಿಸಿದನೋ ಅವನಿಗೆ ಸರಿದಾರಿ ತೋರಬಲ್ಲವರು ಯಾರೂ ಇಲ್ಲ. ಅವನಂತು ಅವರನ್ನು ತಮ್ಮ ವಿದ್ರೋಹದ ಮರುಳಲ್ಲೇ ಅಲೆಯುತ್ತಿರಲು ಬಿಟ್ಟುಬಿಡುತ್ತಾನೆ.
7:187
يَسْأَلُونَكَ عَنِ السَّاعَةِ أَيَّانَ مُرْسَاهَا ۖ قُلْ إِنَّمَا عِلْمُهَا عِنْدَ رَبِّي ۖ لَا يُجَلِّيهَا لِوَقْتِهَا إِلَّا هُوَ ۚ ثَقُلَتْ فِي السَّمَاوَاتِ وَالْأَرْضِ ۚ لَا تَأْتِيكُمْ إِلَّا بَغْتَةً ۗ يَسْأَلُونَكَ كَأَنَّكَ حَفِيٌّ عَنْهَا ۖ قُلْ إِنَّمَا عِلْمُهَا عِنْدَ اللَّهِ وَلَٰكِنَّ أَكْثَرَ النَّاسِ لَا يَعْلَمُونَ ۞
(ದೂತರೇ,) ಅವರು ನಿಮ್ಮೊಡನೆ, ಪುನರುತ್ಥಾನದ ಘಳಿಗೆಯ ಕುರಿತು, ಅದು ಯಾವಾಗ ಬರಲಿದೆ ಎಂದು ಪ್ರಶ್ನಿಸುತ್ತಾರೆ. ಹೇಳಿರಿ; ಅದರ ಜ್ಞಾನವು ನನ್ನ ಒಡೆಯನ ಬಳಿ ಇದೆ, ಅದನ್ನು (ಪುನರುತ್ಥಾನವನ್ನು) ಅದರ ಸಮಯದಲ್ಲಿ ಪ್ರಕಟಪಡಿಸುವವನು ಅವನ ಹೊರತು ಬೇರಾರೂ ಅಲ್ಲ. ಅದು ಆಕಾಶಗಳ ಹಾಗೂ ಭೂಮಿಯ ಪಾಲಿಗೆ ತುಂಬಾ ಕಠಿಣವಾಗಿರುವುದು. ನಿಮ್ಮ ಬಳಿಗೆ ಅದು ತೀರಾ ಹಠಾತ್ತನೆ ಬಂದು ಬಿಡುವುದು. ನೀವು ಅದನ್ನೇ ಕಾಯುತ್ತಿರುವಿರೋ ಎಂಬಂತೆ ಅವರು ನಿಮ್ಮೊಡನೆ (ಆ ಕುರಿತು) ಕೇಳುತ್ತಾರೆ. ಹೇಳಿರಿ; ಅದರ ಜ್ಞಾನವು ಅಲ್ಲಾಹನ ಬಳಿ ಮಾತ್ರ ಇದೆ. ಆದರೆ ಹೆಚ್ಚಿನ ಜನರು ಅರಿತಿಲ್ಲ.
7:188
قُلْ لَا أَمْلِكُ لِنَفْسِي نَفْعًا وَلَا ضَرًّا إِلَّا مَا شَاءَ اللَّهُ ۚ وَلَوْ كُنْتُ أَعْلَمُ الْغَيْبَ لَاسْتَكْثَرْتُ مِنَ الْخَيْرِ وَمَا مَسَّنِيَ السُّوءُ ۚ إِنْ أَنَا إِلَّا نَذِيرٌ وَبَشِيرٌ لِقَوْمٍ يُؤْمِنُونَ ۞
ಹೇಳಿರಿ; ನಾನಂತು, ಅಲ್ಲಾಹನು ಇಚ್ಛಿಸದೆ, ಸ್ವತಃ ನನಗೆ ಯಾವುದೇ ಲಾಭ ಅಥವಾ ನಷ್ಟವನ್ನುಂಟುಮಾಡುವ ಅಧಿಕಾರ ಉಳ್ಳವನಲ್ಲ. ಒಂದು ವೇಳೆ ನನಗೆ ಗುಪ್ತ ವಿಷಯಗಳ ಜ್ಞಾನ ಇದ್ದಿದ್ದರೆ ನಾನು ಭಾರೀ ಪ್ರಮಾಣದಲ್ಲಿ ಒಳಿತನ್ನು (ಸಂಪತ್ತನ್ನು) ಸಂಗ್ರಹಿಸುತ್ತಿದ್ದೆ ಮತ್ತು ಯಾವ ಹಾನಿಯೂ ನನಗೆ ಸಂಭವಿಸುತ್ತಿರಲಿಲ್ಲ. ನಾನು, ಎಚ್ಚರಿಕೆ ನೀಡುವ ಮತ್ತು ನಂಬುವವರಿಗೆ ಶುಭವಾರ್ತೆ ನೀಡುವ ಕೇವಲ ಒಬ್ಬ ಮನುಷ್ಯನಲ್ಲದೆ ಬೇರೇನಾದರೂ ಆಗಿರುವೆನೇ?
7:189
۞ هُوَ الَّذِي خَلَقَكُمْ مِنْ نَفْسٍ وَاحِدَةٍ وَجَعَلَ مِنْهَا زَوْجَهَا لِيَسْكُنَ إِلَيْهَا ۖ فَلَمَّا تَغَشَّاهَا حَمَلَتْ حَمْلًا خَفِيفًا فَمَرَّتْ بِهِ ۖ فَلَمَّا أَثْقَلَتْ دَعَوَا اللَّهَ رَبَّهُمَا لَئِنْ آتَيْتَنَا صَالِحًا لَنَكُونَنَّ مِنَ الشَّاكِرِينَ ۞
ಅವನೇ, ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದವನು ಮತ್ತು ಅದು ಸುಖ ಪಡೆಯಲೆಂದು ಅದರಿಂದಲೇ ಅದರ ಜೊತೆಯನ್ನು ನಿರ್ಮಿಸಿದವನು. ಮುಂದೆ ಅವನು (ಪುರುಷನು) ಅವಳನ್ನು ಆವರಿಸಿದಾಗ, ಅವಳು ಲಘುವಾದ ಗರ್ಭವನ್ನು ಧರಿಸಿದಳು ಮತ್ತು ಅದರ ಜೊತೆ ನಡೆದಾಡಿದಳು. ತರುವಾಯ ಅದು ಭಾರವಾದಾಗ ಅವರಿಬ್ಬರೂ, ‘‘ನೀನು ನಮಗೆ ಸಜ್ಜನ ಸಂತತಿಯನ್ನು ದಯಪಾಲಿಸಿದರೆ ನಾವು ಖಂಡಿತ ನಿನಗೆ ಕೃತಜ್ಞರಾಗಿರುವೆವು’’ ಎಂದು ತಮ್ಮ ಒಡೆಯನಾದ ಅಲ್ಲಾಹನೊಡನೆ ಪ್ರಾರ್ಥಿಸುತ್ತಾರೆ.
7:190
فَلَمَّا آتَاهُمَا صَالِحًا جَعَلَا لَهُ شُرَكَاءَ فِيمَا آتَاهُمَا ۚ فَتَعَالَى اللَّهُ عَمَّا يُشْرِكُونَ ۞
ಮುಂದೆ ಅವನು (ಅಲ್ಲಾಹನು) ಅವರಿಗೆ ಸಜ್ಜನ ಮಗುವನ್ನು ನೀಡಿದಾಗ, ಅವರು ತಮಗೆ ಅವನು ನೀಡಿದ್ದರಲ್ಲಿ ಇತರರನ್ನು ಪಾಲುದಾರರಾಗಿಸುತ್ತಾರೆ. ನಿಜವಾಗಿ ಅವರು ಪಾಲುದಾರರಾಗಿ ಮಾಡಿದ ಎಲ್ಲರಿಗಿಂತಲೂ ಅಲ್ಲಾಹನು ಉನ್ನತನಾಗಿದ್ದಾನೆ.
7:191
أَيُشْرِكُونَ مَا لَا يَخْلُقُ شَيْئًا وَهُمْ يُخْلَقُونَ ۞
ಅವರೇನು, ಏನನ್ನೂ ಸೃಷ್ಟಿಸಿಲ್ಲದವರನ್ನು ಮತ್ತು ಸೃಷ್ಟಿಸಲ್ಪಟ್ಟವರನ್ನು (ದೇವರ) ಪಾಲುದಾರರಾಗಿಸುತ್ತಾರೆಯೇ?
7:192
وَلَا يَسْتَطِيعُونَ لَهُمْ نَصْرًا وَلَا أَنْفُسَهُمْ يَنْصُرُونَ ۞
ನಿಜವಾಗಿ ಅವರು (ಆ ಪಾಲುದಾರರು) ಅವರಿಗೆ ಯಾವುದೇ ಸಹಾಯಮಾಡಲು ಶಕ್ತರಲ್ಲ. ಮಾತ್ರವಲ್ಲ, ಅವರಂತು ಸ್ವತಃ ತಮಗೂ ಯಾವುದೇ ಸಹಾಯ ಮಾಡಲಾರರು.
7:193
وَإِنْ تَدْعُوهُمْ إِلَى الْهُدَىٰ لَا يَتَّبِعُوكُمْ ۚ سَوَاءٌ عَلَيْكُمْ أَدَعَوْتُمُوهُمْ أَمْ أَنْتُمْ صَامِتُونَ ۞
ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೆ, ಅವರು ನಿಮ್ಮನ್ನು ಅನುಸರಿಸಲಾರರು. ನೀವು ಅವರನ್ನು ಕರೆದರೂ ಒಂದೇ ಅಥವಾ ಮೌನವಾಗಿದ್ದರೂ ಒಂದೇ.
7:194
إِنَّ الَّذِينَ تَدْعُونَ مِنْ دُونِ اللَّهِ عِبَادٌ أَمْثَالُكُمْ ۖ فَادْعُوهُمْ فَلْيَسْتَجِيبُوا لَكُمْ إِنْ كُنْتُمْ صَادِقِينَ ۞
ಅಲ್ಲಾಹನ ಹೊರತಾಗಿ ನೀವು ಯಾರನ್ನು ಕರೆದು ಪ್ರಾರ್ಥಿಸುವಿರೋ ಅವರು ನಿಮ್ಮಂತಹ ದಾಸರು ಮಾತ್ರ. ನೀವು ಸತ್ಯವಂತರಾಗಿದ್ದರೆ, ಅವರನ್ನು ಕರೆದು ನೋಡಿರಿ, ಅವರು ನಿಮಗೆ ಉತ್ತರಿಸಲಿ.
7:195
أَلَهُمْ أَرْجُلٌ يَمْشُونَ بِهَا ۖ أَمْ لَهُمْ أَيْدٍ يَبْطِشُونَ بِهَا ۖ أَمْ لَهُمْ أَعْيُنٌ يُبْصِرُونَ بِهَا ۖ أَمْ لَهُمْ آذَانٌ يَسْمَعُونَ بِهَا ۗ قُلِ ادْعُوا شُرَكَاءَكُمْ ثُمَّ كِيدُونِ فَلَا تُنْظِرُونِ ۞
ಅವರ ಬಳಿ, ನಡೆದಾಡುವುದಕ್ಕೇನು ಕಾಲುಗಳಿವೆಯೇ? ಹಿಡಿಯುವುದಕ್ಕೇನು ಅವರ ಬಳಿ ಕೈಗಳಿವೆಯೇ? ನೋಡುವುದಕ್ಕೇನು ಅವರ ಬಳಿ ಕಣ್ಣುಗಳಿವೆಯೇ? ಅಥವಾ ಕೇಳುವುದಕ್ಕೇನು ಅವರ ಬಳಿ ಕಿವಿಗಳಿವೆಯೇ? ಹೇಳಿರಿ; ನೀವು ಆ ನಿಮ್ಮ ಪಾಲುದಾರರನ್ನು ಕರೆದು ನೋಡಿರಿ. ಆ ಬಳಿಕ ನನ್ನ ವಿರುದ್ಧ ಸಂಚು ಹೂಡಿರಿ ಮತ್ತು (ನನಗೆ) ಕಾಲಾವಕಾಶವನ್ನೇ ಕೊಡಬೇಡಿರಿ.
7:196
إِنَّ وَلِيِّيَ اللَّهُ الَّذِي نَزَّلَ الْكِتَابَ ۖ وَهُوَ يَتَوَلَّى الصَّالِحِينَ ۞
ಖಂಡಿತವಾಗಿ ದಿವ್ಯಗ್ರಂಥವನ್ನು ಇಳಿಸಿದ ಅಲ್ಲಾಹನೇ ನನ್ನ ಪರಮ ಪೋಷಕನಾಗಿದ್ದಾನೆ ಮತ್ತು ಅವನೇ ಎಲ್ಲ ಸಜ್ಜನರ ಪರಮ ಪೋಷಕನಾಗಿದ್ದಾನೆ.
7:197
وَالَّذِينَ تَدْعُونَ مِنْ دُونِهِ لَا يَسْتَطِيعُونَ نَصْرَكُمْ وَلَا أَنْفُسَهُمْ يَنْصُرُونَ ۞
ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುವಿರೋ ಅವರು ನಿಮಗೆ ನೆರವಾಗಲು ಶಕ್ತರಲ್ಲ. ಮಾತ್ರವಲ್ಲ, ಅವರಂತು ಸ್ವತಃ ತಮಗೇ ನೆರವಾಗಲು ಅಶಕ್ತರಾಗಿರುವರು.
7:198
وَإِنْ تَدْعُوهُمْ إِلَى الْهُدَىٰ لَا يَسْمَعُوا ۖ وَتَرَاهُمْ يَنْظُرُونَ إِلَيْكَ وَهُمْ لَا يُبْصِرُونَ ۞
ನೀವು ಮಾರ್ಗದರ್ಶನಕ್ಕಾಗಿ ಅವರನ್ನು ಕರೆದರೆ ಅವರು ಅದನ್ನು ಕೇಳುವುದಿಲ್ಲ. ಅವರು ನಿಮ್ಮನ್ನು ನೋಡುತ್ತಿರುವಂತೆ ನೀವು ಕಾಣುತ್ತೀರಿ. ಆದರೆ ನಿಜವಾಗಿ ಅವರು ಏನನ್ನೂ ನೋಡುವುದಿಲ್ಲ.
7:199
خُذِ الْعَفْوَ وَأْمُرْ بِالْعُرْفِ وَأَعْرِضْ عَنِ الْجَاهِلِينَ ۞
ನೀವು (ಜನರನ್ನು) ಕ್ಷಮಿಸಿರಿ, ಒಳಿತನ್ನು ಆದೇಶಿಸಿರಿ ಮತ್ತು ಅಜ್ಞಾನಿಗಳನ್ನು ನಿರ್ಲಕ್ಷಿಸಿರಿ.
7:200
وَإِمَّا يَنْزَغَنَّكَ مِنَ الشَّيْطَانِ نَزْغٌ فَاسْتَعِذْ بِاللَّهِ ۚ إِنَّهُ سَمِيعٌ عَلِيمٌ ۞
(ದೂತರೇ,) ಶೈತಾನನ ಕಡೆಯಿಂದ ನಿಮಗೆ ಯಾವುದೇ ತರದ ಪ್ರಚೋದನೆಯುಂಟಾದರೆ, ಅಲ್ಲಾಹನ ರಕ್ಷಣೆ ಬಯಸಿರಿ. ಖಂಡಿತವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.
7:201
إِنَّ الَّذِينَ اتَّقَوْا إِذَا مَسَّهُمْ طَائِفٌ مِنَ الشَّيْطَانِ تَذَكَّرُوا فَإِذَا هُمْ مُبْصِرُونَ ۞
ಖಂಡಿತವಾಗಿಯೂ, ಧರ್ಮನಿಷ್ಠರಿಗೆ ಶೈತಾನನ ಕಡೆಯಿಂದ ಯಾವುದೇ ದುಷ್ಟ ಪ್ರೇರಣೆ ಉಂಟಾದಾಗ, ಅವರು (ಅಲ್ಲಾಹನನ್ನು) ಸ್ಮರಿಸುತ್ತಾರೆ ಮತ್ತು ಆಗಲೇ ಅವರು (ಸರಿದಾರಿಯನ್ನು) ಕಂಡುಕೊಳ್ಳುತ್ತಾರೆ.
7:202
وَإِخْوَانُهُمْ يَمُدُّونَهُمْ فِي الْغَيِّ ثُمَّ لَا يُقْصِرُونَ ۞
ಇನ್ನು ಅವರ (ಶೈತಾನರ) ಸಹೋದರರು ಅವರನ್ನು ತಪ್ಪುದಾರಿಗೆ ಎಳೆಯುತ್ತಲೇ ಇರುತ್ತಾರೆ ಮತ್ತು (ಆ ವಿಷಯದಲ್ಲಿ) ಅವರು ಹಿಂಜರಿಯುವುದಿಲ್ಲ.
7:203
وَإِذَا لَمْ تَأْتِهِمْ بِآيَةٍ قَالُوا لَوْلَا اجْتَبَيْتَهَا ۚ قُلْ إِنَّمَا أَتَّبِعُ مَا يُوحَىٰ إِلَيَّ مِنْ رَبِّي ۚ هَٰذَا بَصَائِرُ مِنْ رَبِّكُمْ وَهُدًى وَرَحْمَةٌ لِقَوْمٍ يُؤْمِنُونَ ۞
(ದೂತರೇ,) ನೀವು ಅವರ ಬಳಿಗೆ ಯಾವುದೇ ದಿವ್ಯ ವಚನವನ್ನು ತರದೆ ಇದ್ದಾಗ ಅವರು, ‘‘ಸ್ವತಃ ನೀವೇ ಅದನ್ನೇಕೆ ರಚಿಸಿಕೊಳ್ಳುವುದಿಲ್ಲ?’’ ಎಂದು ಕೇಳುತ್ತಾರೆ. ಹೇಳಿರಿ; ‘‘ನಾನಂತು, ನನ್ನ ಒಡೆಯನ ಕಡೆಯಿಂದ ನನಗೆ ನೀಡಲಾಗುವ ದಿವ್ಯವಾಣಿಯನ್ನಷ್ಟೇ ಅನುಸರಿಸುತ್ತೇನೆ. ಇದು (ಕುರ್‌ಆನ್) ನಿಮ್ಮ ಒಡೆಯನ ಕಡೆಯಿಂದ ಬಂದಿರುವ, ಕಣ್ಣು ತೆರೆಸುವ ಉಪದೇಶವಾಗಿದೆ ಮತ್ತು ಇದು ನಂಬುವವರ ಪಾಲಿಗೆ ಮಾರ್ಗದರ್ಶನ ಹಾಗೂ ಅನುಗ್ರಹವಾಗಿದೆ.
7:204
وَإِذَا قُرِئَ الْقُرْآنُ فَاسْتَمِعُوا لَهُ وَأَنْصِتُوا لَعَلَّكُمْ تُرْحَمُونَ ۞
ಕುರ್‌ಆನ್ ಅನ್ನು ಓದಲಾದಾಗ ಅದನ್ನು ಕೇಳಿರಿ ಮತ್ತು ಮೌನವಾಗಿರಿ - ನೀವು ಕರುಣೆಗೆ ಪಾತ್ರರಾಗಬಹುದು.
7:205
وَاذْكُرْ رَبَّكَ فِي نَفْسِكَ تَضَرُّعًا وَخِيفَةً وَدُونَ الْجَهْرِ مِنَ الْقَوْلِ بِالْغُدُوِّ وَالْآصَالِ وَلَا تَكُنْ مِنَ الْغَافِلِينَ ۞
(ದೂತರೇ,) ನೀವು ನಿಮ್ಮ ಮನದೊಳಗೇ ನಿಮ್ಮೊಡೆಯನನ್ನು ಸ್ಮರಿಸುತ್ತಲಿರಿ - ವಿನಯದೊಂದಿಗೆ ಹಾಗೂ ಭಯ ಭಕ್ತಿಯೊಂದಿಗೆ, ಧ್ವನಿಯನ್ನು ಎತ್ತರಿಸದೆ, ಮುಂಜಾನೆ ಹಾಗೂ ಸಂಜೆ, ಮತ್ತು ನೀವೆಂದೂ (ಅವನನ್ನು) ನಿರ್ಲಕ್ಷಿಸಿದವರಾಗಿರಬೇಡಿ.
7:206
إِنَّ الَّذِينَ عِنْدَ رَبِّكَ لَا يَسْتَكْبِرُونَ عَنْ عِبَادَتِهِ وَيُسَبِّحُونَهُ وَلَهُ يَسْجُدُونَ ۩ ۞
ಖಂಡಿತವಾಗಿಯೂ, ನಿಮ್ಮ ಒಡೆಯನ ಬಳಿ ಇರುವವರು ಅವನನ್ನು ಆರಾಧಿಸುವ ವಿಷಯದಲ್ಲಿ ಎಂದೂ ಅಹಂಕಾರ ತೋರುವುದಿಲ್ಲ ಮತ್ತು ಅವರು ಅವನ ಪಾವಿತ್ರ್ಯವನ್ನು ಜಪಿಸುತ್ತಿರುತ್ತಾರೆ ಹಾಗೂ ಅವನಿಗೇ ಸಾಷ್ಟಾಂಗ ವಂದಿಸುತ್ತಿರುತ್ತಾರೆ.