Al-Ghashiya (The overwhelming)
88. ಅಲ್ಗಾಶಿಯಃ(ಆವರಿಸುವ ವಸ್ತು)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
88:1
هَلْ أَتَاكَ حَدِيثُ الْغَاشِيَةِ
۞
ಎಲ್ಲವನ್ನೂ ಆವರಿಸುವ (ಲೋಕಾಂತ್ಯ) ದಿನದ ವಾರ್ತೆಯು ನಿಮಗೆ ತಲುಪಿದೆಯೇ?
88:2
وُجُوهٌ يَوْمَئِذٍ خَاشِعَةٌ
۞
ಅಂದು ಕೆಲವು ಮುಖಗಳು ಭೀತವಾಗಿರುವವು.
88:3
عَامِلَةٌ نَاصِبَةٌ
۞
ತೀವ್ರವಾಗಿ ದಣಿದು ಸೋತಿರುವವು.
88:4
تَصْلَىٰ نَارًا حَامِيَةً
۞
ಅವರು ಉರಿಯುವ ಬೆಂಕಿಯನ್ನು ಸೇರುವರು.
88:5
تُسْقَىٰ مِنْ عَيْنٍ آنِيَةٍ
۞
ಕುದಿಯುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು.
88:6
لَيْسَ لَهُمْ طَعَامٌ إِلَّا مِنْ ضَرِيعٍ
۞
ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ ಸಿಗದು.
88:7
لَا يُسْمِنُ وَلَا يُغْنِي مِنْ جُوعٍ
۞
ಅದರಿಂದ ಅವರಿಗೆ ಪುಷ್ಟತೆಯೂ ಸಿಗದು ಮತ್ತು ಅವರ ಹಸಿವೂ ನೀಗದು.
88:8
وُجُوهٌ يَوْمَئِذٍ نَاعِمَةٌ
۞
ಕೆಲವು ಮುಖಗಳು ಅಂದು ಸಂಭ್ರಮಿಸುತ್ತಿರುವವು.
88:9
لِسَعْيِهَا رَاضِيَةٌ
۞
ತಮ್ಮ ಗಳಿಕೆಯಿಂದ ಅವರು ಸಂತೃಪ್ತರಾಗಿರುವರು.
88:10
فِي جَنَّةٍ عَالِيَةٍ
۞
ಅವರು ಉನ್ನತವಾದ ತೋಟದಲ್ಲಿರುವರು.
88:11
لَا تَسْمَعُ فِيهَا لَاغِيَةً
۞
ವ್ಯರ್ಥವಾದ ಯಾವುದನ್ನೂ ಅವರು ಅಲ್ಲಿ ಕೇಳಲಾರರು.
88:12
فِيهَا عَيْنٌ جَارِيَةٌ
۞
ಅಲ್ಲಿ ಚಿಲುಮೆಗಳು ಹರಿಯುತ್ತಿರುವವು.
88:13
فِيهَا سُرُرٌ مَرْفُوعَةٌ
۞
ಅಲ್ಲಿ ಎತ್ತರದಲ್ಲಿ ಹಾಸಿರುವ ಪೀಠಗಳಿರುವವು.
88:14
وَأَكْوَابٌ مَوْضُوعَةٌ
۞
ಸಜ್ಜಾಗಿಟ್ಟ ಪಾನ ಪಾತ್ರೆಗಳಿರುವವು.
88:15
وَنَمَارِقُ مَصْفُوفَةٌ
۞
ಸಾಲುಸಾಲಾಗಿ ದಿಂಬುಗಳಿರುವವು.
88:16
وَزَرَابِيُّ مَبْثُوثَةٌ
۞
ಮತ್ತು ನುಣುಪಾದ ಹಾಸುಗಳು ಇರುವವು.
88:17
أَفَلَا يَنْظُرُونَ إِلَى الْإِبِلِ كَيْفَ خُلِقَتْ
۞
ಅವರು ಒಂಟೆಗಳತ್ತ ನೋಡುವುದಿಲ್ಲವೇ - ಅವುಗಳನ್ನು ಯಾವ ರೀತಿ ಸೃಷ್ಟಿಸಲಾಗಿದೆ ಎಂದು?
88:18
وَإِلَى السَّمَاءِ كَيْفَ رُفِعَتْ
۞
ಮತ್ತು ಆಕಾಶದೆಡೆಗೆ (ನೋಡುವುದಿಲ್ಲವೇ) -ಅದನ್ನು ಯಾವ ರೀತಿ ಎತ್ತರಿಸಲಾಗಿದೆ ಎಂದು?
88:19
وَإِلَى الْجِبَالِ كَيْفَ نُصِبَتْ
۞
ಮತ್ತು ಪರ್ವತಗಳೆಡೆಗೆ, (ನೋಡುವುದಿಲ್ಲವೇ) ಅವುಗಳನ್ನು ಯಾವ ರೀತಿ ನೆಡಲಾಗಿದೆ ಎಂದು?
88:20
وَإِلَى الْأَرْضِ كَيْفَ سُطِحَتْ
۞
ಮತ್ತು ಭೂಮಿಯೆಡೆಗೆ, (ನೋಡುವುದಿಲ್ಲವೇ) ಅದನ್ನು ಯಾವ ರೀತಿ ಹಾಸಲಾಗಿದೆ ಎಂದು?
88:21
فَذَكِّرْ إِنَّمَا أَنْتَ مُذَكِّرٌ
۞
(ದೂತರೇ,) ನೀವು ಬೋಧಿಸಿರಿ, ಏಕೆಂದರೆ ನೀವು ಬೋಧಕರೇ ಆಗಿದ್ದೀರಿ.
88:22
لَسْتَ عَلَيْهِمْ بِمُصَيْطِرٍ
۞
ನೀವು ಅವರ ಕಾವಲುಗಾರರೇನಲ್ಲ.
88:23
إِلَّا مَنْ تَوَلَّىٰ وَكَفَرَ
۞
ಇನ್ನು ಕಡೆಗಣಿಸಿದವನ ಮತ್ತು ಧಿಕ್ಕರಿಸಿದವನ ವಿಚಾರ -
88:24
فَيُعَذِّبُهُ اللَّهُ الْعَذَابَ الْأَكْبَرَ
۞
ಅಲ್ಲಾಹನು ಅವನನ್ನು ದೊಡ್ಡ ಶಿಕ್ಷೆಗೆ ಗುರಿಪಡಿಸುವನು.
88:25
إِنَّ إِلَيْنَا إِيَابَهُمْ
۞
ಅವರು ಖಂಡಿತ ನಮ್ಮೆಡೆಗೇ ಮರಳಿ ಬರಬೇಕಾಗಿದೆ.
88:26
ثُمَّ إِنَّ عَلَيْنَا حِسَابَهُمْ
۞
ಮತ್ತು ಅವರ ವಿಚಾರಣೆಯ ಹೊಣೆಯು ನಮ್ಮ ಮೇಲಿದೆ.