Ar-Rum (The romans)
30. ಅರ್ರೂಮ್(ರೋಮನರು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
30:1
الم ۞
ಅಲಿಫ್ ಲಾಮ್ ಮ್ಮೀಮ್.
30:2
غُلِبَتِ الرُّومُ ۞
ರೋಮನರು ಸೋತರು.
30:3
فِي أَدْنَى الْأَرْضِ وَهُمْ مِنْ بَعْدِ غَلَبِهِمْ سَيَغْلِبُونَ ۞
ಪಕ್ಕದ ನಾಡಿನಲ್ಲಿ (ಇದು ಸಂಭವಿಸಿದೆ). ಮತ್ತು ಅವರು ತಮ್ಮ ಈ ಸೋಲಿನ ಬಳಿಕ ಮತ್ತೆ ವಿಜಯಿಗಳಾಗುವರು.
30:4
فِي بِضْعِ سِنِينَ ۗ لِلَّهِ الْأَمْرُ مِنْ قَبْلُ وَمِنْ بَعْدُ ۚ وَيَوْمَئِذٍ يَفْرَحُ الْمُؤْمِنُونَ ۞
ಕೆಲವು ವರ್ಷಗಳಲ್ಲಿ (ಇದು ಸಂಭವಿಸಲಿದೆ). ನೈಜ ಅಧಿಕಾರವು ಅದಕ್ಕಿಂತ ಹಿಂದೆಯೂ, ಅನಂತರವೂ ಅಲ್ಲಾಹನಿಗೇ ಸೇರಿರುತ್ತದೆ. ಆ ದಿನ ವಿಶ್ವಾಸಿಗಳು ಸಂಭ್ರಮಿಸುವರು.
30:5
بِنَصْرِ اللَّهِ ۚ يَنْصُرُ مَنْ يَشَاءُ ۖ وَهُوَ الْعَزِيزُ الرَّحِيمُ ۞
ಅಲ್ಲಾಹನ ನೆರವಿನಿಂದ (ಆ ದಿನ ಬರಲಿದೆ). ಅವನು ತಾನಿಚ್ಛಿಸಿದವರಿಗೆ ನೆರವಾಗುತ್ತಾನೆ. ಅವನು ಪ್ರಚಂಡನೂ ಕರುಣಾಳುವೂ ಆಗಿರುತ್ತಾನೆ.
30:6
وَعْدَ اللَّهِ ۖ لَا يُخْلِفُ اللَّهُ وَعْدَهُ وَلَٰكِنَّ أَكْثَرَ النَّاسِ لَا يَعْلَمُونَ ۞
ಇದು ಅಲ್ಲಾಹನ ವಾಗ್ದಾನ. ಅಲ್ಲಾಹನು ತಾನು ನೀಡಿದ ವಾಗ್ದಾನವನ್ನು ಎಂದೂ ಉಲ್ಲಂಘಿಸುವುದಿಲ್ಲ. ಆದರೆ ಹೆಚ್ಚಿನ ಜನರು ತಿಳಿದಿಲ್ಲ.
30:7
يَعْلَمُونَ ظَاهِرًا مِنَ الْحَيَاةِ الدُّنْيَا وَهُمْ عَنِ الْآخِرَةِ هُمْ غَافِلُونَ ۞
ಅವರು ತಿಳಿದಿರುವುದು, ಈ ಲೋಕದ ಬದುಕಿನ ಬಾಹ್ಯ ಭಾಗವನ್ನು ಮಾತ್ರ. ಪರಲೋಕದ ಕುರಿತು ಅವರಿಗೆ ಅರಿವಿಲ್ಲ.
30:8
أَوَلَمْ يَتَفَكَّرُوا فِي أَنْفُسِهِمْ ۗ مَا خَلَقَ اللَّهُ السَّمَاوَاتِ وَالْأَرْضَ وَمَا بَيْنَهُمَا إِلَّا بِالْحَقِّ وَأَجَلٍ مُسَمًّى ۗ وَإِنَّ كَثِيرًا مِنَ النَّاسِ بِلِقَاءِ رَبِّهِمْ لَكَافِرُونَ ۞
ಅವರೇನು ಸ್ವತಃ ತಮ್ಮ ಕುರಿತು ಚಿಂತನೆ ನಡೆಸುವುದಿಲ್ಲವೇ? ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನ್ಯಾಯೋಚಿತವಾಗಿ ಹಾಗೂ ಒಂದು ನಿರ್ದಿಷ್ಟ ಅವಧಿಗಾಗಿ ಸೃಷ್ಟಿಸಿರುವನು. ಆದರೆ ಜನರಲ್ಲಿ ಹೆಚ್ಚಿನವರು ತಮ್ಮ ಒಡೆಯನನ್ನು ಭೇಟಿಯಾಗಲಿಕ್ಕಿರುವುದನ್ನು ಧಿಕ್ಕರಿಸುತ್ತಾರೆ.
30:9
أَوَلَمْ يَسِيرُوا فِي الْأَرْضِ فَيَنْظُرُوا كَيْفَ كَانَ عَاقِبَةُ الَّذِينَ مِنْ قَبْلِهِمْ ۚ كَانُوا أَشَدَّ مِنْهُمْ قُوَّةً وَأَثَارُوا الْأَرْضَ وَعَمَرُوهَا أَكْثَرَ مِمَّا عَمَرُوهَا وَجَاءَتْهُمْ رُسُلُهُمْ بِالْبَيِّنَاتِ ۖ فَمَا كَانَ اللَّهُ لِيَظْلِمَهُمْ وَلَٰكِنْ كَانُوا أَنْفُسَهُمْ يَظْلِمُونَ ۞
ಅವರೇನು ಭೂಮಿಯಲ್ಲಿ ತಿರುಗಾಡಿ, ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ಕಾಣುವುದಿಲ್ಲವೇ? ಅವರು (ಹಿಂದಿನವರು) ಇವರಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದರು, ಭೂಮಿಯಲ್ಲಿ ಉಳುಮೆ ನಡೆಸಿದ್ದರು ಮತ್ತು ಅದನ್ನು (ಭೂಮಿಯನ್ನು) ಇವರಿಗಿಂತ ಹೆಚ್ಚು ಸಂಪನ್ನಗೊಳಿಸಿದ್ದರು. ಅವರ ಬಳಿಗೂ ಅವರ ದೂತರು ಸ್ಪಷ್ಟವಾದ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರ ಮೇಲೆ ಅಕ್ರಮವೆಸಗುವವನಾಗಿರಲಿಲ್ಲ. ಸ್ವತಃ ಅವರೇ ತಮ್ಮ ಮೇಲೆ ಅಕ್ರಮವೆಸಗಿಕೊಂಡಿದ್ದರು.
30:10
ثُمَّ كَانَ عَاقِبَةَ الَّذِينَ أَسَاءُوا السُّوأَىٰ أَنْ كَذَّبُوا بِآيَاتِ اللَّهِ وَكَانُوا بِهَا يَسْتَهْزِئُونَ ۞
ಕೊನೆಗೆ, ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದವರ ಗತಿಯೂ ಕೆಟ್ಟದಾಗಿ ಬಿಟ್ಟಿತು . ಏಕೆಂದರೆ ಅವರು ಅಲ್ಲಾಹನ ವಚನಗಳನ್ನು ತಿರಸ್ಕರಿಸಿದ್ದರು ಮತ್ತು ಅವುಗಳನ್ನು ಗೇಲಿಮಾಡುತ್ತಿದ್ದರು.
30:11
اللَّهُ يَبْدَأُ الْخَلْقَ ثُمَّ يُعِيدُهُ ثُمَّ إِلَيْهِ تُرْجَعُونَ ۞
ಅಲ್ಲಾಹನೇ ಸೃಷ್ಟಿಕಾರ್ಯವನ್ನು ಆರಂಭಿಸುತ್ತಾನೆ. ಆ ಬಳಿಕ ಅವನೇ ಅದನ್ನು ಪುನರಾವರ್ತಿಸುವನು. ಕೆೊನೆಗೆ ನಿಮ್ಮೆಲ್ಲರನ್ನೂ ಅವನೆಡೆಗೇ ಮರಳಿಸಲಾಗುವುದು.
30:12
وَيَوْمَ تَقُومُ السَّاعَةُ يُبْلِسُ الْمُجْرِمُونَ ۞
ಆ ಅಂತಿಮ ಕ್ಷಣವು ಬಂದು ಬಿಟ್ಟಾಗ ಅಪರಾಧಿಗಳು ಸಂಪೂರ್ಣ ನಿರಾಶರಾಗಿ ಬಿಡುವರು.
30:13
وَلَمْ يَكُنْ لَهُمْ مِنْ شُرَكَائِهِمْ شُفَعَاءُ وَكَانُوا بِشُرَكَائِهِمْ كَافِرِينَ ۞
ಅವರ ಪಾಲುದಾರ ದೇವರುಗಳ ಪೈಕಿ ಯಾರೂ ಅವರ ಪರ ಶಿಫಾರಸುದಾರರಾಗಲಾರರು. ಆಗ ಅವರು ಆ ತಮ್ಮ ಪಾಲುದಾರರನ್ನೆಲ್ಲಾ ಧಿಕ್ಕರಿಸಿ ಬಿಡುವರು.
30:14
وَيَوْمَ تَقُومُ السَّاعَةُ يَوْمَئِذٍ يَتَفَرَّقُونَ ۞
ಆ ಅಂತಿಮ ಕ್ಷಣವು ಬರುವ ದಿನ ಅವರೆಲ್ಲರೂ ವಿಚ್ಛಿದ್ರರಾಗಿ ಬಿಡುವರು.
30:15
فَأَمَّا الَّذِينَ آمَنُوا وَعَمِلُوا الصَّالِحَاتِ فَهُمْ فِي رَوْضَةٍ يُحْبَرُونَ ۞
ಸತ್ಯವನ್ನು ನಂಬಿದ್ದ ಹಾಗೂ ಸತ್ಕಾರ್ಯಗಳನ್ನು ಮಾಡಿದ್ದ ಜನರು (ಅಂದು) ಒಂದು ಭವ್ಯ ತೋಟದಲ್ಲಿ ಸಂಭ್ರಮಿಸುತ್ತಿರುವರು.
30:16
وَأَمَّا الَّذِينَ كَفَرُوا وَكَذَّبُوا بِآيَاتِنَا وَلِقَاءِ الْآخِرَةِ فَأُولَٰئِكَ فِي الْعَذَابِ مُحْضَرُونَ ۞
ಅತ್ತ, ಸತ್ಯವನ್ನು ಧಿಕ್ಕರಿಸಿದ್ದ ಮತ್ತು ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ಸುಳ್ಳೆಂದು ತಿರಸ್ಕರಿಸಿದ್ದ ಜನರನ್ನು ಶಿಕ್ಷೆಗಾಗಿ ಹಾಜರುಪಡಿಸಲಾಗುವುದು.
30:17
فَسُبْحَانَ اللَّهِ حِينَ تُمْسُونَ وَحِينَ تُصْبِحُونَ ۞
ಸಂಜೆಯ ವೇಳೆ ಹಾಗೂ ಮುಂಜಾವಿನ ವೇಳೆ ನೀವು ಅಲ್ಲಾಹನ ಪಾವಿತ್ರ್ಯವನ್ನು ಜಪಿಸಿರಿ .
30:18
وَلَهُ الْحَمْدُ فِي السَّمَاوَاتِ وَالْأَرْضِ وَعَشِيًّا وَحِينَ تُظْهِرُونَ ۞
ಆಕಾಶಗಳಲ್ಲೂ ಭೂಮಿಯಲ್ಲೂ ಹೊಗಳಿಕೆಗಳೆಲ್ಲವೂ ಅವನಿಗೇ ಮೀಸಲು. ಇರುಳಲ್ಲೂ ಮಧ್ಯಾಹ್ನದ ವೇಳೆಯೂ (ನೀವು ಅಲ್ಲಾಹನ ಪಾವಿತ್ರ್ಯವನ್ನು ಜಪಿಸಿರಿ.)
30:19
يُخْرِجُ الْحَيَّ مِنَ الْمَيِّتِ وَيُخْرِجُ الْمَيِّتَ مِنَ الْحَيِّ وَيُحْيِي الْأَرْضَ بَعْدَ مَوْتِهَا ۚ وَكَذَٰلِكَ تُخْرَجُونَ ۞
ಅವನು ನಿರ್ಜೀವದಿಂದ ಜೀವಿಯನ್ನು ಹೊರ ತೆಗೆಯುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರ ತೆಗೆಯುತ್ತಾನೆ ಮತ್ತು ಭೂಮಿಯು ಸತ್ತ ಬಳಿಕ ಅದನ್ನು ಮತ್ತೆ ಜೀವಂತಗೊಳಿಸುತ್ತಾನೆ. ಇದೇ ರೀತಿ ನಿಮ್ಮನ್ನು (ಮರಣಾನಂತರ, ಜೀವಂತಗೊಳಿಸಿ) ಹೊರ ತೆಗೆಯಲಾಗುವುದು.
30:20
وَمِنْ آيَاتِهِ أَنْ خَلَقَكُمْ مِنْ تُرَابٍ ثُمَّ إِذَا أَنْتُمْ بَشَرٌ تَنْتَشِرُونَ ۞
ಅವನು (ಅಲ್ಲಾಹನು) ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿರುವುದು ಮತ್ತು ಅಂತಹ ನೀವು ಇದೀಗ ಮನುಷ್ಯರಾಗಿ (ಎಲ್ಲೆಡೆ) ಹರಡಿಕೊಂಡಿರುವುದು ಅವನ ಸಂಕೇತಗಳ ಸಾಲಿಗೆ ಸೇರಿವೆ.
30:21
وَمِنْ آيَاتِهِ أَنْ خَلَقَ لَكُمْ مِنْ أَنْفُسِكُمْ أَزْوَاجًا لِتَسْكُنُوا إِلَيْهَا وَجَعَلَ بَيْنَكُمْ مَوَدَّةً وَرَحْمَةً ۚ إِنَّ فِي ذَٰلِكَ لَآيَاتٍ لِقَوْمٍ يَتَفَكَّرُونَ ۞
ಹಾಗೆಯೇ ಅವನು ನಿಮಗಾಗಿ ನಿಮ್ಮೊಳಗಿಂದಲೇ, ನೀವು ನೆಮ್ಮದಿ ಪಡೆಯಬಹುದಾದ ಜೋಡಿಗಳನ್ನು ಸೃಷ್ಟಿಸಿರುವುದು ಮತ್ತು ನಿಮ್ಮ ನಡುವೆ ಪ್ರೀತಿ, ವಾತ್ಸಲ್ಯಗಳನ್ನು ಬೆಳೆಸಿರುವುದು - (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಚಿಂತನೆ ನಡೆಸುವವರಿಗೆ ಇದರಲ್ಲಿ ಖಂಡಿತ ಸೂಚನೆಗಳಿವೆ.
30:22
وَمِنْ آيَاتِهِ خَلْقُ السَّمَاوَاتِ وَالْأَرْضِ وَاخْتِلَافُ أَلْسِنَتِكُمْ وَأَلْوَانِكُمْ ۚ إِنَّ فِي ذَٰلِكَ لَآيَاتٍ لِلْعَالِمِينَ ۞
ಆಕಾಶಗಳ ಹಾಗೂ ಭೂಮಿಯ ಸೃಷ್ಟಿ ಮತ್ತು ನಿಮ್ಮ ಭಾಷೆ ಹಾಗೂ ಬಣ್ಣಗಳಲ್ಲಿರುವ ವ್ಯತ್ಯಾಸಗಳು ಅವನ ಸಂಕೇತಗಳ ಸಾಲಿಗೆ ಸೇರಿವೆ. ಜ್ಞಾನ ಉಳ್ಳವರಿಗೆ ಇದರಲ್ಲಿ ಖಂಡಿತ ಸೂಚನೆಗಳಿವೆ.
30:23
وَمِنْ آيَاتِهِ مَنَامُكُمْ بِاللَّيْلِ وَالنَّهَارِ وَابْتِغَاؤُكُمْ مِنْ فَضْلِهِ ۚ إِنَّ فِي ذَٰلِكَ لَآيَاتٍ لِقَوْمٍ يَسْمَعُونَ ۞
ರಾತ್ರಿ ಹಾಗೂ ಹಗಲಲ್ಲಿ ನೀವು ಮಾಡುವ ನಿದ್ದೆ ಮತ್ತು ಅವನ ಅನುಗ್ರಹಕ್ಕಾಗಿ ನೀವು ನಡೆಸುವ ಹುಡುಕಾಟ (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಆಲಿಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ.
30:24
وَمِنْ آيَاتِهِ يُرِيكُمُ الْبَرْقَ خَوْفًا وَطَمَعًا وَيُنَزِّلُ مِنَ السَّمَاءِ مَاءً فَيُحْيِي بِهِ الْأَرْضَ بَعْدَ مَوْتِهَا ۚ إِنَّ فِي ذَٰلِكَ لَآيَاتٍ لِقَوْمٍ يَعْقِلُونَ ۞
ಹಾಗೆಯೇ ಅವನು ನಿಮಗೆ ತೋರಿಸುವ, ಭಯವನ್ನೂ ನಿರೀಕ್ಷೆಯನ್ನೂ ಹುಟ್ಟಿಸುವ ಮಿಂಚು ಮತ್ತು ಅವನು ಆಕಾಶದಿಂದ ಸುರಿಸುವ ನೀರು ಮತ್ತು ಆ ಮೂಲಕ ಅವನು ಭೂಮಿಗೆ ಅದರ ಮರಣಾನಂತರ ನೀಡುವ ಮರು ಜೀವ - (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ. ಆಲೋಚಿಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ.
30:25
وَمِنْ آيَاتِهِ أَنْ تَقُومَ السَّمَاءُ وَالْأَرْضُ بِأَمْرِهِ ۚ ثُمَّ إِذَا دَعَاكُمْ دَعْوَةً مِنَ الْأَرْضِ إِذَا أَنْتُمْ تَخْرُجُونَ ۞
ಆಕಾಶಗಳು ಮತ್ತು ಭೂಮಿಯು ಅವನ ಅಪ್ಪಣೆಯಂತೆ ಸ್ಥಾಪಿತವಾಗಿರುವುದು ಅವನ ಸಂಕೇತಗಳ ಸಾಲಿಗೆ ಸೇರಿದೆ. ಕೊನೆಗೊಮ್ಮೆ ಅವನು ಒಂದು ಕರೆಕೊಟ್ಟು ನಿಮ್ಮನ್ನು ಕರೆದಾಗ ಭೂಮಿಯೊಳಗಿಂದ ನೀವೆಲ್ಲಾ ಹೊರಟು ಬರುವಿರಿ.
30:26
وَلَهُ مَنْ فِي السَّمَاوَاتِ وَالْأَرْضِ ۖ كُلٌّ لَهُ قَانِتُونَ ۞
ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವ ಎಲ್ಲವೂ ಅವನಿಗೇ ಸೇರಿವೆ ಮತ್ತು ಎಲ್ಲವೂ ಅವನಿಗೆ ವಿಧೇಯವಾಗಿವೆ.
30:27
وَهُوَ الَّذِي يَبْدَأُ الْخَلْقَ ثُمَّ يُعِيدُهُ وَهُوَ أَهْوَنُ عَلَيْهِ ۚ وَلَهُ الْمَثَلُ الْأَعْلَىٰ فِي السَّمَاوَاتِ وَالْأَرْضِ ۚ وَهُوَ الْعَزِيزُ الْحَكِيمُ ۞
ಅವನೇ ಸೃಷ್ಟಿಯನ್ನು ಆರಂಭಿಸಿದವನು ಮತ್ತು ಅವನೇ ಅದನ್ನು ಪುನರಾವರ್ತಿಸುವನು. ಅವನ ಪಾಲಿಗೆ ಇದೆಲ್ಲಾ ಸುಲಭದ ಕೆಲಸವಾಗಿದೆ. ಆಕಾಶಗಳಲ್ಲೂ ಭೂಮಿಯಲ್ಲೂ ಅತ್ಯುನ್ನತ ಸ್ಥಾನವು ಅವನಿಗೇ ಸೇರಿದೆ. ಅವನು ಅತ್ಯಂತ ಪ್ರಬಲನು ಹಾಗೂ ಯುಕ್ತಿವಂತನು.
30:28
ضَرَبَ لَكُمْ مَثَلًا مِنْ أَنْفُسِكُمْ ۖ هَلْ لَكُمْ مِنْ مَا مَلَكَتْ أَيْمَانُكُمْ مِنْ شُرَكَاءَ فِي مَا رَزَقْنَاكُمْ فَأَنْتُمْ فِيهِ سَوَاءٌ تَخَافُونَهُمْ كَخِيفَتِكُمْ أَنْفُسَكُمْ ۚ كَذَٰلِكَ نُفَصِّلُ الْآيَاتِ لِقَوْمٍ يَعْقِلُونَ ۞
ಅವನು ನಿಮಗಾಗಿ ನಿಮ್ಮೊಳಗಿಂದಲೇ ಒಂದು ಉದಾಹರಣೆಯನ್ನು ಮುಂದಿಡುತ್ತಾನೆ; ನಿಮ್ಮ ಮಾಲಕತ್ವದಲ್ಲಿರುವ ಗುಲಾಮರ ಪೈಕಿ ಕೆಲವರು, ನಿಮಗೆ ನಾವು ನೀಡಿರುವ ಸಂಪತ್ತಿನಲ್ಲಿ ಪಾಲುದಾರರಾಗಿ, ಅದರಲ್ಲಿ ನೀವು ಅವರಿಗೆ ಸಮಾನರಾಗಿ ಬಿಟ್ಟದ್ದುಂಟೇ? ಮತ್ತು ನೀವು ಪರಸ್ಪರರಿಗೆ ಅಂಜುವಂತೆ ಅವರಿಗೆ ಅಂಜಿದ್ದುಂಟೇ? ಈ ರೀತಿ ನಾವು, ಆಲೋಚಿಸುವವರಿಗಾಗಿ ವಚನಗಳನ್ನು ವಿವರಿಸುತ್ತೇವೆ.
30:29
بَلِ اتَّبَعَ الَّذِينَ ظَلَمُوا أَهْوَاءَهُمْ بِغَيْرِ عِلْمٍ ۖ فَمَنْ يَهْدِي مَنْ أَضَلَّ اللَّهُ ۖ وَمَا لَهُمْ مِنْ نَاصِرِينَ ۞
ಆದರೆ ಅಕ್ರಮಿಗಳು ಜ್ಞಾನವಿಲ್ಲದೆ ತಮ್ಮ ಸ್ವೇಚ್ಛೆಯನ್ನಷ್ಟೇ ಅನುಸರಿಸುತ್ತಾರೆ. ಅಲ್ಲಾಹನೇ ದಾರಿಗೆಡಿಸಿಬಿಟ್ಟಾತನನ್ನು ಮತ್ತೆ ಯಾರು ತಾನೇ ಸರಿದಾರಿಗೆ ತರಬಲ್ಲರು? ಅಂಥವರಿಗೆ ಸಹಾಯಕರು ಯಾರೂ ಇಲ್ಲ.
30:30
فَأَقِمْ وَجْهَكَ لِلدِّينِ حَنِيفًا ۚ فِطْرَتَ اللَّهِ الَّتِي فَطَرَ النَّاسَ عَلَيْهَا ۚ لَا تَبْدِيلَ لِخَلْقِ اللَّهِ ۚ ذَٰلِكَ الدِّينُ الْقَيِّمُ وَلَٰكِنَّ أَكْثَرَ النَّاسِ لَا يَعْلَمُونَ ۞
ನೀವಿನ್ನು ಏಕಾಗ್ರತೆಯೊಂದಿಗೆ ನಿಮ್ಮ ನಿಷ್ಠೆಯನ್ನು ಧರ್ಮದಲ್ಲಿ ಕೇಂದ್ರೀಕರಿಸಿರಿ. ಮಾನವನನ್ನು ಅಲ್ಲಾಹನ ಪ್ರಕೃತಿಗನುಸಾರ ರೂಪಿಸಲಾಗಿದೆ. ಅಲ್ಲಾಹನು ಮಾಡಿದ ರಚನೆಯಲ್ಲಿ ಬದಲಾವಣೆ ಇಲ್ಲ. ಇದುವೇ ಸುಸ್ಥಿರ ಧರ್ಮ. ಆದರೆ ಜನರಲ್ಲಿ ಹೆಚ್ಚಿನವರು ಅರಿತಿಲ್ಲ.
30:31
۞ مُنِيبِينَ إِلَيْهِ وَاتَّقُوهُ وَأَقِيمُوا الصَّلَاةَ وَلَا تَكُونُوا مِنَ الْمُشْرِكِينَ ۞
(ನೀವು) ಅವನತ್ತ ಒಲವು ಉಳ್ಳವರಾಗಿರಿ, ಅವನಿಗೆ ಅಂಜಿರಿ, ನಮಾಝ್ ಅನ್ನು ಪಾಲಿಸಿರಿ ಮತ್ತು ಬಹುದೇವಾರಾಧಕರಾಗಬೇಡಿರಿ.
30:32
مِنَ الَّذِينَ فَرَّقُوا دِينَهُمْ وَكَانُوا شِيَعًا ۖ كُلُّ حِزْبٍ بِمَا لَدَيْهِمْ فَرِحُونَ ۞
ತಮ್ಮ ಧರ್ಮವನ್ನು ಛಿದ್ರಗೊಳಿಸಿ ವಿವಿಧ ಪಂಗಡಗಳಾಗಿ ಬಿಟ್ಟವರು (ನೀವಾಗಬೇಡಿ). ಪ್ರತಿಯೊಂದು ಗುಂಪೂ ತನ್ನ ಬಳಿ ಏನಿದೆಯೋ ಅದರಲ್ಲೇ ಸಂತುಷ್ಟವಾಗಿದೆ.
30:33
وَإِذَا مَسَّ النَّاسَ ضُرٌّ دَعَوْا رَبَّهُمْ مُنِيبِينَ إِلَيْهِ ثُمَّ إِذَا أَذَاقَهُمْ مِنْهُ رَحْمَةً إِذَا فَرِيقٌ مِنْهُمْ بِرَبِّهِمْ يُشْرِكُونَ ۞
ಜನರಿಗೆ ಏನಾದರೂ ತೊಂದರೆಯಾದಾಗ ಅವರು ತಮ್ಮ ಒಡೆಯನೆಡೆಗೆ ಒಲಿದು ಅವನಿಗೆ ಮೊರೆ ಇಡುತ್ತಾರೆ. ಮುಂದೆ ಅವನು ಅವರಿಗೆ ತನ್ನ ಅನುಗ್ರಹದ ರುಚಿ ಉಣಿಸಿದಾಗ ಅವರಲ್ಲಿನ ಒಂದು ಗುಂಪು ತಮ್ಮ ಒಡೆಯನ ಜೊತೆ ಇತರರನ್ನು ಪಾಲುಗೊಳಿಸುತ್ತದೆ.
30:34
لِيَكْفُرُوا بِمَا آتَيْنَاهُمْ ۚ فَتَمَتَّعُوا فَسَوْفَ تَعْلَمُونَ ۞
ನಮ್ಮ ಕೊಡುಗೆಗಳಿಗೆ ಕೃತಘ್ನತೆ ತೋರುವುದಕ್ಕಾಗಿ (ಅವರು ಹೀಗೆ ಮಾಡುತ್ತಾರೆ)! ಸದ್ಯ ಮೋಜುಮಾಡಿರಿ. (ಇದರ ಪರಿಣಾಮವು) ಬೇಗನೇ ನಿಮಗೆ ತಿಳಿಯಲಿದೆ.
30:35
أَمْ أَنْزَلْنَا عَلَيْهِمْ سُلْطَانًا فَهُوَ يَتَكَلَّمُ بِمَا كَانُوا بِهِ يُشْرِكُونَ ۞
ಅವರು (ದೇವತ್ವದಲ್ಲಿ) ಪಾಲುಗೊಳಿಸುವವುಗಳ ಪರವಾಗಿ ಮಾತನಾಡುವ ಪುರಾವೆಯನ್ನೇನಾದರೂ ನಾವು ಅವರಿಗೆ ಇಳಿಸಿಕೊಟ್ಟಿದ್ದೇವೆಯೇ?
30:36
وَإِذَا أَذَقْنَا النَّاسَ رَحْمَةً فَرِحُوا بِهَا ۖ وَإِنْ تُصِبْهُمْ سَيِّئَةٌ بِمَا قَدَّمَتْ أَيْدِيهِمْ إِذَا هُمْ يَقْنَطُونَ ۞
ನಾವು ಜನರಿಗೆ ನಮ್ಮ ಅನುಗ್ರಹದ ರುಚಿ ಉಣಿಸಿದಾಗ ಅವರು ಸಂಭ್ರಮಿಸುತ್ತಾರೆ ಮತ್ತು ಅವರೇ ಸಂಪಾದಿಸಿ ಕಳಿಸಿದ ಕರ್ಮಗಳ ಕಾರಣ ಅವರಿಗೇನಾದರೂ ಕೇಡನ್ನು ಮಾಡಿದರೆ, ಅವರು ಸಂಪೂರ್ಣ ನಿರಾಶರಾಗಿ ಬಿಡುತ್ತಾರೆ.
30:37
أَوَلَمْ يَرَوْا أَنَّ اللَّهَ يَبْسُطُ الرِّزْقَ لِمَنْ يَشَاءُ وَيَقْدِرُ ۚ إِنَّ فِي ذَٰلِكَ لَآيَاتٍ لِقَوْمٍ يُؤْمِنُونَ ۞
ಅವರು ನೋಡುವುದಿಲ್ಲವೇ, ಅಲ್ಲಾಹನು ತಾನಿಚ್ಛಿಸಿದವರಿಗೆ ಸಂಪನ್ನತೆಯನ್ನು ಹೆಚ್ಚಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಅದನ್ನು ಸೀಮಿತಗೊಳಿಸುತ್ತಾನೆ. ನಂಬುವವರಿಗೆ ಖಂಡಿತವಾಗಿಯೂ ಇದರಲ್ಲಿ ಪಾಠಗಳಿವೆ.
30:38
فَآتِ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ ۚ ذَٰلِكَ خَيْرٌ لِلَّذِينَ يُرِيدُونَ وَجْهَ اللَّهِ ۖ وَأُولَٰئِكَ هُمُ الْمُفْلِحُونَ ۞
ನೀವು ಬಂಧುವಿಗೆ, ಬಡವನಿಗೆ ಮತ್ತು ಪ್ರಯಾಣಿಕನಿಗೆ ಅವರ ಹಕ್ಕನ್ನು ಕೊಟ್ಟು ಬಿಡಿರಿ. ಅಲ್ಲಾಹನ ಮೆಚ್ಚುಗೆಯನ್ನು ಬಯಸುವವರಿಗೆ ಇದುವೇ ಉತ್ತಮವಾಗಿದೆ ಮತ್ತು ಅವರೇ ವಿಜಯಿಗಳಾಗುವರು.
30:39
وَمَا آتَيْتُمْ مِنْ رِبًا لِيَرْبُوَ فِي أَمْوَالِ النَّاسِ فَلَا يَرْبُو عِنْدَ اللَّهِ ۖ وَمَا آتَيْتُمْ مِنْ زَكَاةٍ تُرِيدُونَ وَجْهَ اللَّهِ فَأُولَٰئِكَ هُمُ الْمُضْعِفُونَ ۞
ಜನರ ಸಂಪತ್ತನ್ನು ಹೆಚ್ಚಿಸಲೆಂದು ನೀವು ನೀಡುವ ಬಡ್ಡಿಯು ಅಲ್ಲಾಹನ ಬಳಿ ಅದನ್ನು ಹೆಚ್ಚಿಸುವುದಿಲ್ಲ. ಆದರೆ ಅಲ್ಲಾಹನ ಮೆಚ್ಚುಗೆಯನ್ನು ಬಯಸಿ ನೀವು ನೀಡುವ ದಾನ (ಅದು ನಿಮ್ಮ ಪ್ರತಿಫಲವನ್ನು ಹೆಚ್ಚಿಸುತ್ತದೆ). ಅವರೇ (ದಾನಶೀಲರೇ) ಹಲವು ಪಟ್ಟು ಅಧಿಕ ಪ್ರತಿಫಲ ಪಡೆಯುವವರು.
30:40
اللَّهُ الَّذِي خَلَقَكُمْ ثُمَّ رَزَقَكُمْ ثُمَّ يُمِيتُكُمْ ثُمَّ يُحْيِيكُمْ ۖ هَلْ مِنْ شُرَكَائِكُمْ مَنْ يَفْعَلُ مِنْ ذَٰلِكُمْ مِنْ شَيْءٍ ۚ سُبْحَانَهُ وَتَعَالَىٰ عَمَّا يُشْرِكُونَ ۞
ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿದವನು, ಆ ಬಳಿಕ ನಿಮಗೆ ಆಹಾರ ಒದಗಿಸಿದವನು, ಆ ಬಳಿಕ ನಿಮಗೆ ಮರಣ ನೀಡುವವನು ಮತ್ತು ಆ ಬಳಿಕ ನಿಮ್ಮನ್ನು ಪುನಃ ಜೀವಂತಗೊಳಿಸುವವನಾಗಿದ್ದಾನೆ. ದೇವತ್ವದಲ್ಲಿ ಪಾಲುದಾರರೆಂದು ನೀವು ನಂಬಿರುವ ಯಾರಾದರೂ ಈ ಪೈಕಿ ಯಾವ ಕೆಲಸವನ್ನಾದರೂ ಮಾಡಬಲ್ಲರೇ? ಅವನಂತು (ಅಲ್ಲಾಹನಂತು) ಪಾವನನಾಗಿದ್ದಾನೆ ಮತ್ತು (ಅವನ ಜೊತೆ) ನೀವು ಪಾಲುಗೊಳಿಸುವ ಎಲ್ಲರಿಗಿಂತ ತುಂಬಾ ಉನ್ನತನಾಗಿದ್ದಾನೆ.
30:41
ظَهَرَ الْفَسَادُ فِي الْبَرِّ وَالْبَحْرِ بِمَا كَسَبَتْ أَيْدِي النَّاسِ لِيُذِيقَهُمْ بَعْضَ الَّذِي عَمِلُوا لَعَلَّهُمْ يَرْجِعُونَ ۞
ಮಾನವರ ಕೃತ್ಯಗಳ ಫಲವಾಗಿ, ನೆಲದಲ್ಲೂ ಜಲದಲ್ಲೂ ಅಶಾಂತಿ ಹಬ್ಬಿದೆ. ಅವರು ಸರಿದಾರಿಗೆ ಮರಳಿಬರಬಹುದೆಂದು, ಅವರ ಕೆಲವು ಕೃತ್ಯಗಳ ರುಚಿಯನ್ನು ಅವರಿಗೆ ಉಣಿಸಲಿಕ್ಕಾಗಿ (ಹೀಗಾಗಿದೆ).
30:42
قُلْ سِيرُوا فِي الْأَرْضِ فَانْظُرُوا كَيْفَ كَانَ عَاقِبَةُ الَّذِينَ مِنْ قَبْلُ ۚ كَانَ أَكْثَرُهُمْ مُشْرِكِينَ ۞
ಹೇಳಿರಿ; ನೀವು ಭೂಮಿಯಲ್ಲಿ ತಿರುಗಾಡಿರಿ ಮತ್ತು ನಿಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು.
30:43
فَأَقِمْ وَجْهَكَ لِلدِّينِ الْقَيِّمِ مِنْ قَبْلِ أَنْ يَأْتِيَ يَوْمٌ لَا مَرَدَّ لَهُ مِنَ اللَّهِ ۖ يَوْمَئِذٍ يَصَّدَّعُونَ ۞
ಅಲ್ಲಾಹನ ಕಡೆಯಿಂದ, ರದ್ದುಗೊಳಿಸಲಾಗದ ದಿನವೊಂದು ಬಂದು ಬಿಡುವ ಮುನ್ನ, ನೀವು ನಿಮ್ಮ ನಿಷ್ಠೆಯನ್ನು ಸ್ಥಿರವಾದ ಧರ್ಮದಲ್ಲಿ ಕೇಂದ್ರೀಕರಿಸಿಕೊಳ್ಳಿರಿ. ಅಂದು ಎಲ್ಲರೂ ಪ್ರತ್ಯೇಕವಾಗುವರು.
30:44
مَنْ كَفَرَ فَعَلَيْهِ كُفْرُهُ ۖ وَمَنْ عَمِلَ صَالِحًا فَلِأَنْفُسِهِمْ يَمْهَدُونَ ۞
ಧಿಕ್ಕರಿಸಿದವನ ಧಿಕ್ಕಾರದ ಹೊಣೆಯು ಸ್ವತಃ ಅವನ ಮೇಲೆಯೇ ಇರುವುದು. ಇನ್ನು, ಸತ್ಕರ್ಮ ಮಾಡುತ್ತಿರುವವರು ಸ್ವತಃ ತಮಗಾಗಿ ಪೂರ್ವಸಿದ್ಧತೆ ನಡೆಸುತ್ತಿರುವರು.
30:45
لِيَجْزِيَ الَّذِينَ آمَنُوا وَعَمِلُوا الصَّالِحَاتِ مِنْ فَضْلِهِ ۚ إِنَّهُ لَا يُحِبُّ الْكَافِرِينَ ۞
ಅವನು ತನ್ನ ಅನುಗ್ರಹದಿಂದ ವಿಶ್ವಾಸಿಗಳು ಮತ್ತು ಸತ್ಕರ್ಮಿಗಳಿಗೆ ಸತ್ಫಲವನ್ನು ನೀಡುವನು. ಅಲ್ಲಾಹನು ಕೃತಘ್ನರನ್ನು ಖಂಡಿತ ಮೆಚ್ಚುವುದಿಲ್ಲ.
30:46
وَمِنْ آيَاتِهِ أَنْ يُرْسِلَ الرِّيَاحَ مُبَشِّرَاتٍ وَلِيُذِيقَكُمْ مِنْ رَحْمَتِهِ وَلِتَجْرِيَ الْفُلْكُ بِأَمْرِهِ وَلِتَبْتَغُوا مِنْ فَضْلِهِ وَلَعَلَّكُمْ تَشْكُرُونَ ۞
ಅವನು, ನಿಮಗೆ ತನ್ನ ಅನುಗ್ರಹದ ರುಚಿಯನ್ನು ಉಣಿಸಲಿಕ್ಕಾಗಿ ಹಾಗೂ ಅವನ ಆದೇಶದಂತೆ ಹಡಗುಗಳನ್ನು ಚಲಿಸಲಿಕ್ಕಾಗಿ ಮತ್ತು ನೀವು ಅವನ ಕೊಡುಗೆಯನ್ನು ಹುಡುಕುತ್ತಾ ಕೃತಜ್ಞತೆ ಸಲ್ಲಿಸಲಿಕ್ಕಾಗಿ ಕಳಿಸುವ, ಶುಭವಾರ್ತೆ ನೀಡುವ ಗಾಳಿಯು, ಅವನ ಪುರಾವೆಗಳ ಸಾಲಿಗೆ ಸೇರಿದೆ.
30:47
وَلَقَدْ أَرْسَلْنَا مِنْ قَبْلِكَ رُسُلًا إِلَىٰ قَوْمِهِمْ فَجَاءُوهُمْ بِالْبَيِّنَاتِ فَانْتَقَمْنَا مِنَ الَّذِينَ أَجْرَمُوا ۖ وَكَانَ حَقًّا عَلَيْنَا نَصْرُ الْمُؤْمِنِينَ ۞
(ದೂತರೇ,) ನಾವು ನಿಮಗಿಂತ ಮುಂಚೆ ಅವರ ಜನಾಂಗದೆಡೆಗೆ ದೂತರನ್ನು ಕಳಿಸಿದ್ದೆವು. ಅವರು ಸ್ಪಷ್ಟವಾದ ಉಪದೇಶಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಕೊನೆಗೆ ನಾವು ಅಪರಾಧಿಗಳ ವಿರುದ್ಧ ಸೇಡು ತೀರಿಸಿದೆವು. ನಂಬಿದವರಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿತ್ತು.
30:48
اللَّهُ الَّذِي يُرْسِلُ الرِّيَاحَ فَتُثِيرُ سَحَابًا فَيَبْسُطُهُ فِي السَّمَاءِ كَيْفَ يَشَاءُ وَيَجْعَلُهُ كِسَفًا فَتَرَى الْوَدْقَ يَخْرُجُ مِنْ خِلَالِهِ ۖ فَإِذَا أَصَابَ بِهِ مَنْ يَشَاءُ مِنْ عِبَادِهِ إِذَا هُمْ يَسْتَبْشِرُونَ ۞
ಅಲ್ಲಾಹನೇ ಗಾಳಿಯನ್ನು ಕಳುಹಿಸುತ್ತಾನೆ, ಅವು ಮೋಡಗಳನ್ನು ಹೊತ್ತು ಚಲಿಸುತ್ತವೆ ಮತ್ತು ಅವನು ಅದನ್ನು (ಮೋಡವನ್ನು) ತಾನಿಚ್ಛಿಸಿದಂತೆ ಆಕಾಶದಲ್ಲಿ ಹರಡಿಬಿಡುತ್ತಾನೆ ಹಾಗೂ ಅದನ್ನು ಛಿದ್ರಗೊಳಿಸುತ್ತಾನೆ ಮತ್ತು ಅದರ ಮಧ್ಯದಿಂದಲೇ ಮಳೆ ಸುರಿಯುವುದನ್ನು ನೀವು ಕಾಣುತ್ತೀರಿ. ಆ ಬಳಿಕ ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಅದನ್ನು ತಲುಪಿಸುತ್ತಾನೆ ಮತ್ತು ಅವರು ಸಂಭ್ರಮಿಸುತ್ತಾರೆ.
30:49
وَإِنْ كَانُوا مِنْ قَبْلِ أَنْ يُنَزَّلَ عَلَيْهِمْ مِنْ قَبْلِهِ لَمُبْلِسِينَ ۞
ನಿಜವಾಗಿ, ಅವರ ಮೇಲೆ ಮಳೆ ಸುರಿಯುವ ಮುನ್ನ ಅವರು ನಿರಾಶರಾಗಿ ಬಿಟ್ಟಿದ್ದರು.
30:50
فَانْظُرْ إِلَىٰ آثَارِ رَحْمَتِ اللَّهِ كَيْفَ يُحْيِي الْأَرْضَ بَعْدَ مَوْتِهَا ۚ إِنَّ ذَٰلِكَ لَمُحْيِي الْمَوْتَىٰ ۖ وَهُوَ عَلَىٰ كُلِّ شَيْءٍ قَدِيرٌ ۞
ಅಲ್ಲಾಹನ ಕಾರುಣ್ಯದ ಕುರುಹುಗಳನ್ನು (ಮತ್ತು) ಅವನು ಯಾವ ರೀತಿ ಭೂಮಿಯು ಸತ್ತ ಬಳಿಕ ಅದನ್ನು ಜೀವಂತಗೊಳಿಸುತ್ತಾನೆಂಬುದನ್ನು ನೋಡಿರಿ. ಅವನೇ ಸತ್ತವರನ್ನು ಜೀವಂತಗೊಳಿಸುವವನು. ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
30:51
وَلَئِنْ أَرْسَلْنَا رِيحًا فَرَأَوْهُ مُصْفَرًّا لَظَلُّوا مِنْ بَعْدِهِ يَكْفُرُونَ ۞
ಇನ್ನು ನಾವು (ಪ್ರತಿಕೂಲ) ಗಾಳಿಯನ್ನು ಕಳಿಸಿ, (ಅದರಿಂದಾಗಿ ಹೊಲಗಳು) ಹಳದಿಯಾಗಿರುವುದನ್ನು ಅವರು ಕಂಡಾಗ ಅವರು ಮತ್ತೆ ದಾರಿಗೆಟ್ಟು ಕೃತಘ್ನರಾಗಿ ಬಿಡುತ್ತಾರೆ.
30:52
فَإِنَّكَ لَا تُسْمِعُ الْمَوْتَىٰ وَلَا تُسْمِعُ الصُّمَّ الدُّعَاءَ إِذَا وَلَّوْا مُدْبِرِينَ ۞
ಮೃತರಿಗೆ ಕೇಳಿಸಲು ನಿಮಗೆ ಖಂಡಿತ ಸಾಧ್ಯವಾಗದು ಮತ್ತು ಕಿವುಡರು ಬೆನ್ನು ತಿರುಗಿಸಿ ಓಡುತ್ತಿರುವಾಗ ಅವರಿಗೆ (ನಿಮ್ಮ) ಕರೆಯನ್ನು ಕೇಳಿಸಲಿಕ್ಕೂ ನಿಮಗೆ ಸಾಧ್ಯವಾಗದು.
30:53
وَمَا أَنْتَ بِهَادِ الْعُمْيِ عَنْ ضَلَالَتِهِمْ ۖ إِنْ تُسْمِعُ إِلَّا مَنْ يُؤْمِنُ بِآيَاتِنَا فَهُمْ مُسْلِمُونَ ۞
ಕುರುಡರನ್ನು ಅವರ ದಾರಿಗೇಡಿತನದಿಂದ ರಕ್ಷಿಸಿ ಸರಿದಾರಿಗೆ ತರಲು ನಿಮಗೆ ಸಾಧ್ಯವಾಗದು. ನೀವು, ನಮ್ಮ ವಚನಗಳನ್ನು ನಂಬುವವರಿಗೆ ಮತ್ತು ಶರಣಾದವರಿಗೆ ಮಾತ್ರ ಕೇಳಿಸಬಲ್ಲಿರಿ.
30:54
۞ اللَّهُ الَّذِي خَلَقَكُمْ مِنْ ضَعْفٍ ثُمَّ جَعَلَ مِنْ بَعْدِ ضَعْفٍ قُوَّةً ثُمَّ جَعَلَ مِنْ بَعْدِ قُوَّةٍ ضَعْفًا وَشَيْبَةً ۚ يَخْلُقُ مَا يَشَاءُ ۖ وَهُوَ الْعَلِيمُ الْقَدِيرُ ۞
ನಿಮ್ಮನ್ನು ತೀರಾ ದುರ್ಬಲ ಸ್ಥಿತಿಯಲ್ಲಿ ಸೃಷ್ಟಿಸಿದವನು ಮತ್ತು ಆ ಬಳಿಕ ದೌರ್ಬಲ್ಯದ ಸ್ಥಿತಿಯಿಂದ ನಿಮ್ಮನ್ನು ಶಕ್ತಿಶಾಲಿ ಸ್ಥಿತಿಗೆ ಒಯ್ದವನು ಮತ್ತು ಶಕ್ತಿಶಾಲಿ ಸ್ಥಿತಿಯಿಂದ ನಿಮ್ಮನ್ನು ಪುನಃ ದೌರ್ಬಲ್ಯದ ಹಾಗೂ ವೃದ್ಧಾಪ್ಯದ ಸ್ಥಿತಿಗೆ ಒಯ್ಯುವವನು ಅಲ್ಲಾಹನೇ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಎಲ್ಲವನ್ನೂ ಬಲ್ಲವನು ಮತ್ತು ಶಕ್ತನಾಗಿದ್ದಾನೆ.
30:55
وَيَوْمَ تَقُومُ السَّاعَةُ يُقْسِمُ الْمُجْرِمُونَ مَا لَبِثُوا غَيْرَ سَاعَةٍ ۚ كَذَٰلِكَ كَانُوا يُؤْفَكُونَ ۞
(ಅಂತಿಮ ವಿಚಾರಣೆಯ) ಆ ಕ್ಷಣವು ಬಂದು ಬಿಟ್ಟಾಗ, ಅಪರಾಧಿಗಳು, ತಾವು ಬದುಕಿದ್ದುದು ಒಂದು ಕ್ಷಣ ಮಾತ್ರ ಎಂದು ಆಣೆ ಹಾಕಿ ಹೇಳುವರು. ಹೀಗೆಯೇ ಅವರು (ಇಹ ಲೋಕದ ಬದುಕಿನಲ್ಲಿ) ಭ್ರಮೆಗೊಳಗಾಗಿದ್ದರು.
30:56
وَقَالَ الَّذِينَ أُوتُوا الْعِلْمَ وَالْإِيمَانَ لَقَدْ لَبِثْتُمْ فِي كِتَابِ اللَّهِ إِلَىٰ يَوْمِ الْبَعْثِ ۖ فَهَٰذَا يَوْمُ الْبَعْثِ وَلَٰكِنَّكُمْ كُنْتُمْ لَا تَعْلَمُونَ ۞
ಜ್ಞಾನ ಹಾಗೂ ವಿಶ್ವಾಸ ನೀಡಲ್ಪಟ್ಟವರು ಹೇಳುವರು; ಅಲ್ಲಾಹನ ಗ್ರಂಥದಲ್ಲಿ ಬರೆದಿರುವ ಪ್ರಕಾರ, ಮತ್ತೆ ಜೀವಂತಗೊಳ್ಳುವವರೆಗೂ ನೀವು (ಸತ್ತ ಸ್ಥಿತಿಯಲ್ಲಿ) ಇದ್ದಿರಿ - ಇದೋ, ಮತ್ತೆ ಜೀವಂತಗೊಳ್ಳುವ ದಿನ. ಆದರೆ ನಿಮಗೆ ತಿಳಿದಿರಲಿಲ್ಲ.
30:57
فَيَوْمَئِذٍ لَا يَنْفَعُ الَّذِينَ ظَلَمُوا مَعْذِرَتُهُمْ وَلَا هُمْ يُسْتَعْتَبُونَ ۞
ಅಂದು ಅಕ್ರಮಿಗಳಿಗೆ ಅವರ ನೆಪಗಳಿಂದ ಯಾವ ಲಾಭವೂ ಆಗದು ಮತ್ತು ಪಶ್ಚಾತ್ತಾಪ ಪಡುವ ಅವಕಾಶವನ್ನೂ ಅವರಿಗೆ ನೀಡಲಾಗದು.
30:58
وَلَقَدْ ضَرَبْنَا لِلنَّاسِ فِي هَٰذَا الْقُرْآنِ مِنْ كُلِّ مَثَلٍ ۚ وَلَئِنْ جِئْتَهُمْ بِآيَةٍ لَيَقُولَنَّ الَّذِينَ كَفَرُوا إِنْ أَنْتُمْ إِلَّا مُبْطِلُونَ ۞
ನಾವು ಈ ಕುರ್‌ಆನ್‌ನಲ್ಲಿ ಮಾನವರಿಗಾಗಿ ಎಲ್ಲ ಬಗೆಯ ಉದಾಹರಣೆಗಳನ್ನು ಮುಂದಿಟ್ಟಿದ್ದೇವೆ. ಆದರೆ (ದೂತರೇ), ನೀವು ಅವರ ಬಳಿಗೆ ಒಂದು ವಚನವನ್ನು ತಂದಾಗಲೆಲ್ಲಾ ಧಿಕ್ಕಾರಿಗಳು ನೀವು ಸುಳ್ಳನ್ನು ರಚಿಸಿ ತರುವವರು ಎಂದೇ ಹೇಳುತ್ತಾರೆ.
30:59
كَذَٰلِكَ يَطْبَعُ اللَّهُ عَلَىٰ قُلُوبِ الَّذِينَ لَا يَعْلَمُونَ ۞
ಈ ರೀತಿ ಅಲ್ಲಾಹನು ಅರಿವಿಲ್ಲದವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿ ಬಿಡುತ್ತಾನೆ.
30:60
فَاصْبِرْ إِنَّ وَعْدَ اللَّهِ حَقٌّ ۖ وَلَا يَسْتَخِفَّنَّكَ الَّذِينَ لَا يُوقِنُونَ ۞
ನೀವು ಸಹನಶೀಲರಾಗಿರಿ. ಅಲ್ಲಾಹನ ಮಾತು ಖಂಡಿತ ಸತ್ಯ. ಅಚಲ ನಂಬಿಕೆ ಇಲ್ಲದವರು ನಿಮ್ಮನ್ನು ಅಸ್ಥಿರಗೊಳಿಸದಿರಲಿ.