Al-Inshiqaq (The splitting open)
84. ಅಲ್ ಇನ್ಶಿಕಾಕ್(ಸ್ಫೋಟ)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
84:1
إِذَا السَّمَاءُ انْشَقَّتْ
۞
ಆಕಾಶವು ಸ್ಫೋಟಿಸುವಾಗ.
84:2
وَأَذِنَتْ لِرَبِّهَا وَحُقَّتْ
۞
ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು.
84:3
وَإِذَا الْأَرْضُ مُدَّتْ
۞
ಭೂಮಿಯನ್ನು ಸಮ ತಟ್ಟಾಗಿಸಲಾಗುವುದು.
84:4
وَأَلْقَتْ مَا فِيهَا وَتَخَلَّتْ
۞
ಅದು ತನ್ನೊಳಗಿರುವ ಎಲ್ಲವನ್ನೂ ಹೊರ ಹಾಕಿ ಖಾಲಿಯಾಗಿ ಬಿಡುವುದು.
84:5
وَأَذِنَتْ لِرَبِّهَا وَحُقَّتْ
۞
ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು.
84:6
يَا أَيُّهَا الْإِنْسَانُ إِنَّكَ كَادِحٌ إِلَىٰ رَبِّكَ كَدْحًا فَمُلَاقِيهِ
۞
ಮಾನವನೇ, ನೀನು ಕ್ರಮೇಣ ನಿನ್ನೊಡೆಯನ ಕಡೆಗೇ ಹೋಗುತ್ತಿರುವೆ, ನೀನು ಖಂಡಿತ ಅವನನ್ನು ಭೇಟಿಯಾಗುವೆ.
84:7
فَأَمَّا مَنْ أُوتِيَ كِتَابَهُ بِيَمِينِهِ
۞
ಯಾರ ಕರ್ಮ ಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಯಿತೋ -
84:8
فَسَوْفَ يُحَاسَبُ حِسَابًا يَسِيرًا
۞
ಅವನ ವಿಚಾರಣೆಯು ಸುಲಭವಾಗಿ ನಡೆಯುವುದು.
84:9
وَيَنْقَلِبُ إِلَىٰ أَهْلِهِ مَسْرُورًا
۞
ಮತ್ತು ಅವನು ಹರ್ಷಿಸುತ್ತಾ ತನ್ನ ಬಂಧುಗಳೆಡೆಗೆ ಮರಳುವನು.
84:10
وَأَمَّا مَنْ أُوتِيَ كِتَابَهُ وَرَاءَ ظَهْرِهِ
۞
ಯಾರಿಗೆ ಅವನ ಗ್ರಂಥವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಯಿತೋ
84:11
فَسَوْفَ يَدْعُو ثُبُورًا
۞
ಅವನು ಮರಣಕ್ಕಾಗಿ ಮೊರೆ ಇಡುವನು.
84:12
وَيَصْلَىٰ سَعِيرًا
۞
ಮತ್ತು ಅವನು ನರಕವನ್ನು ಪ್ರವೇಶಿಸುವನು.
84:13
إِنَّهُ كَانَ فِي أَهْلِهِ مَسْرُورًا
۞
(ಇಹಲೋಕದಲ್ಲಿ) ಅವನು ತನ್ನ ಮನೆಯವರ ಜೊತೆ ಮೈ ಮರೆತಿದ್ದನು.
84:14
إِنَّهُ ظَنَّ أَنْ لَنْ يَحُورَ
۞
ತಾನೆಂದೂ (ತನ್ನ ಒಡೆಯನ ಬಳಿಗೆ) ಹೋಗಲಿಕ್ಕೇ ಇಲ್ಲವೆಂದು ಭಾವಿಸಿದ್ದನು.
84:15
بَلَىٰ إِنَّ رَبَّهُ كَانَ بِهِ بَصِيرًا
۞
ಯಾಕಿಲ್ಲ; ಅವನ ಒಡೆಯನಂತೂ ಅವನನ್ನು ನೋಡುತ್ತಲೇ ಇದ್ದನು.
84:16
فَلَا أُقْسِمُ بِالشَّفَقِ
۞
ಅಲ್ಲ; ನಾನು ಸಂಜೆಯ ಕೆಂಬಣ್ಣದ ಆಣೆ ಹಾಕುತ್ತೇನೆ.
84:17
وَاللَّيْلِ وَمَا وَسَقَ
۞
ಮತ್ತು ಇರುಳಿನ ಹಾಗೂ ಅದು ಏನನ್ನೆಲ್ಲಾ ಆವರಿಸುತ್ತದೋ ಅವುಗಳ ಆಣೆ.
84:18
وَالْقَمَرِ إِذَا اتَّسَقَ
۞
ಮತ್ತು ಚಂದ್ರನ ಹಾಗೂ ಅದು ಪೂರ್ಣವಾಗುವಾಗಿನಾಣೆ.
84:19
لَتَرْكَبُنَّ طَبَقًا عَنْ طَبَقٍ
۞
ನೀವು ಹಂತ ಹಂತವಾಗಿ ಮೇಲೇರುವಿರಿ.
84:20
فَمَا لَهُمْ لَا يُؤْمِنُونَ
۞
ಜನರಿಗೇನಾಗಿದೆ, ಅವರೇಕೆ ನಂಬುವುದಿಲ್ಲ?
84:21
وَإِذَا قُرِئَ عَلَيْهِمُ الْقُرْآنُ لَا يَسْجُدُونَ ۩
۞
ಅವರ ಮುಂದೆ ಕುರ್‌ಆನನ್ನು ಓದಲಾದಾಗ ಅವರೇಕೆ ಸಾಷ್ಟಾಂಗ ವೆರಗುವುದಿಲ್ಲ?
84:22
بَلِ الَّذِينَ كَفَرُوا يُكَذِّبُونَ
۞
ನಿಜವಾಗಿ, ಧಿಕ್ಕಾರಿಗಳು ಇದನ್ನು ಸುಳ್ಳೆನ್ನುತ್ತಾರೆ.
84:23
وَاللَّهُ أَعْلَمُ بِمَا يُوعُونَ
۞
ಅವರು ತಮ್ಮ ಮನಸ್ಸುಗಳಲ್ಲಿ ಅಡಗಿಸಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು.
84:24
فَبَشِّرْهُمْ بِعَذَابٍ أَلِيمٍ
۞
ಅವರಿಗೆ ಒಂದು ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ.
84:25
إِلَّا الَّذِينَ آمَنُوا وَعَمِلُوا الصَّالِحَاتِ لَهُمْ أَجْرٌ غَيْرُ مَمْنُونٍ
۞
ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರ ಹೊರತು - ಅವರಿಗಂತು ಎಂದೂ ಮುಗಿಯದ ಪ್ರತಿಫಲವಿದೆ.