Al-Qamar (The moon)
54. ಅಲ್ ಕಮರ್(ಚಂದ್ರ)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
اقْتَرَبَتِ السَّاعَةُ وَانْشَقَّ الْقَمَرُ
۞
(ಲೋಕಾಂತ್ಯದ) ಆ ಕ್ಷಣವು ಸಮೀಪಿಸಿತು ಮತ್ತು ಚಂದ್ರವು ಸೀಳಿಹೋಯಿತು.
وَإِنْ يَرَوْا آيَةً يُعْرِضُوا وَيَقُولُوا سِحْرٌ مُسْتَمِرٌّ
۞
ಅವರು ಯಾವುದಾದರೂ ಪುರಾವೆಯನ್ನು ಕಂಡಾಗ ಮುಖ ತಿರುಗಿಸಿಕೊಳ್ಳುತ್ತಾರೆ ಮತ್ತು ಇದು ತೀರಾ ತಾತ್ಕಾಲಿಕ ಜಾದೂಗಾರಿಕೆ ಎನ್ನುತ್ತಾರೆ.
وَكَذَّبُوا وَاتَّبَعُوا أَهْوَاءَهُمْ ۚ وَكُلُّ أَمْرٍ مُسْتَقِرٌّ
۞
ಅವರು (ಸತ್ಯವನ್ನು) ತಿರಸ್ಕರಿಸಿದರು ಮತ್ತು ಸ್ವೇಚ್ಛೆಯನ್ನು ಅನುಸರಿಸಿದರು. ನಿಜವಾಗಿ, ಎಲ್ಲ ವಿಷಯಗಳಿಗೂ ಒಂದು ಕಾಲ ನಿಶ್ಚಿತವಾಗಿರುತ್ತದೆ.
وَلَقَدْ جَاءَهُمْ مِنَ الْأَنْبَاءِ مَا فِيهِ مُزْدَجَرٌ
۞
ಖಂಡಿತ, ಪಾಠದಾಯಕ ಮಾಹಿತಿಗಳು ಅವರ ಬಳಿಗೆ ಬಂದಿವೆ.
حِكْمَةٌ بَالِغَةٌ ۖ فَمَا تُغْنِ النُّذُرُ
۞
ಪರಿಪೂರ್ಣ ಜಾಣ್ಮೆಯ (ಉಪದೇಶವು ತಲುಪಿದೆ). ಆದರೆ ಎಚ್ಚರಿಸುವವರಿಂದ ಅವರಿಗೇನೂ ಲಾಭವಾಗಿಲ್ಲ.
فَتَوَلَّ عَنْهُمْ ۘ يَوْمَ يَدْعُ الدَّاعِ إِلَىٰ شَيْءٍ نُكُرٍ
۞
(ದೂತರೇ,) ನೀವು ಅವರನ್ನು ಕಡೆಗಣಿಸಿಬಿಡಿರಿ. (ಶೀಘ್ರದಲ್ಲೇ) ಕರೆಯುವವನೊಬ್ಬನು ತೀರಾ ಅಪ್ರಿಯವಾದುದರ ಕಡೆಗೆ (ಅವರನ್ನು) ಕರೆಯುವನು.
خُشَّعًا أَبْصَارُهُمْ يَخْرُجُونَ مِنَ الْأَجْدَاثِ كَأَنَّهُمْ جَرَادٌ مُنْتَشِرٌ
۞
ಆಗ ಅವರ ದೃಷ್ಟಿಗಳು ತಗ್ಗಿರುವವು. ಅವರು ಚದುರಿದ ಮಿಡತೆಗಳೋ ಎಂಬಂತೆ ಗೋರಿಗಳಿಂದ ಎದ್ದು ಬರುವರು.
مُهْطِعِينَ إِلَى الدَّاعِ ۖ يَقُولُ الْكَافِرُونَ هَٰذَا يَوْمٌ عَسِرٌ
۞
ಕೂಗುವಾತನೆಡೆಗೆ ಅವರು ಧಾವಿಸುತ್ತಿರುವರು. ಅಂದು ಧಿಕ್ಕಾರಿಯು ಹೇಳುವನು; ಇದು ತುಂಬಾ ಕಠಿಣ ದಿನ.
۞ كَذَّبَتْ قَبْلَهُمْ قَوْمُ نُوحٍ فَكَذَّبُوا عَبْدَنَا وَقَالُوا مَجْنُونٌ وَازْدُجِرَ
۞
ಅವರಿಗಿಂತ ಹಿಂದೆ ನೂಹ್‌ರ ಜನಾಂಗವು (ಸತ್ಯವನ್ನು) ತಿರಸ್ಕರಿಸಿತ್ತು. ಅವರು, ನಮ್ಮ ದಾಸರನ್ನು ತಿರಸ್ಕರಿಸಿದ್ದರು ಮತ್ತು ಅವರನ್ನು ಹುಚ್ಚನೆಂದು ಕರೆದರು ಹಾಗೂ ಅವರಿಗೆ ಬೆದರಿಕೆ ಒಡ್ಡಿದರು.
فَدَعَا رَبَّهُ أَنِّي مَغْلُوبٌ فَانْتَصِرْ
۞
ಕೊನೆಗೆ ಅವರು (ನೂಹರು), ನಾನಿದೋ ಸೋತು ಹೋಗಿದ್ದೇನೆ. ಇದೀಗ ನೀನೇ ಪ್ರತೀಕಾರ ತೀರಿಸು ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟರು.
فَفَتَحْنَا أَبْوَابَ السَّمَاءِ بِمَاءٍ مُنْهَمِرٍ
۞
ನಾವು, ಧಾರಾಳವಾಗಿ ಸುರಿಯುವ ಮಳೆಯ ಮೂಲಕ ಆಕಾಶದ ಬಾಗಿಲುಗಳನ್ನು ತೆರೆದುಬಿಟ್ಟೆವು.
وَفَجَّرْنَا الْأَرْضَ عُيُونًا فَالْتَقَى الْمَاءُ عَلَىٰ أَمْرٍ قَدْ قُدِرَ
۞
ಮತ್ತು ನಾವು ಭೂಮಿಯಿಂದ ಚಿಲುಮೆಗಳನ್ನು ಹರಿಸಿಬಿಟ್ಟೆವು. ಕೊನೆಗೆ, ಮೊದಲೇ ನಿರ್ಧಾರವಾಗಿದ್ದ ಒಂದು ಕಾರ್ಯಕ್ಕಾಗಿ ನೀರು ಸಂಗ್ರಹವಾಯಿತು.
وَحَمَلْنَاهُ عَلَىٰ ذَاتِ أَلْوَاحٍ وَدُسُرٍ
۞
ಮತ್ತು ನಾವು ಅವರನ್ನು (ನೂಹರನ್ನು), ಹಲಗೆಗಳು ಹಾಗೂ ಮೊಳೆಗಳಿದ್ದ ವಸ್ತುವಿಗೆ (ಹಡಗಿಗೆ) ಹತ್ತಿಸಿದೆವು.
تَجْرِي بِأَعْيُنِنَا جَزَاءً لِمَنْ كَانَ كُفِرَ
۞
ಅದು ನಮ್ಮ ಕಣ್ಣ ಮುಂದೆಯೇ (ನಮ್ಮ ಕಾವಲಿನಲ್ಲಿ) ಚಲಿಸುತ್ತಿತ್ತು. (ಹೀಗಿತ್ತು) ಧಿಕ್ಕರಿಸಲ್ಪಟ್ಟವನ ಪರವಾಗಿ ತೀರಿಸಲಾದ ಪ್ರತೀಕಾರ.
وَلَقَدْ تَرَكْنَاهَا آيَةً فَهَلْ مِنْ مُدَّكِرٍ
۞
ಮತ್ತು ನಾವು ಅದನ್ನು ಒಂದು ಪುರಾವೆಯಾಗಿ ಉಳಿಸಿದೆವು. ಪಾಠ ಕಲಿಯುವವರು ಯಾರಾದರೂ ಇದ್ದಾರೆಯೇ?
وَلَقَدْ يَسَّرْنَا الْقُرْآنَ لِلذِّكْرِ فَهَلْ مِنْ مُدَّكِرٍ
۞
ನಾವು ಉಪದೇಶಕ್ಕಾಗಿ ಕುರ್‌ಆನನ್ನು ಸರಳಗೊಳಿಸಿರುವೆವು. ಯಾರಾದರೂ ಇದ್ದಾರೆಯೇ, ಉಪದೇಶ ಸ್ವೀಕರಿಸುವವರು?
كَذَّبَتْ عَادٌ فَكَيْفَ كَانَ عَذَابِي وَنُذُرِ
۞
ಆದ್ ಜನಾಂಗದವರೂ (ಸತ್ಯವನ್ನು) ತಿರಸ್ಕರಿಸಿದ್ದರು. (ಅವರ ವಿಷಯದಲ್ಲೂ) ಹೇಗಿತ್ತು ನನ್ನ ಶಿಕ್ಷೆ ಹಾಗೂ ಎಚ್ಚರಿಕೆ?
إِنَّا أَرْسَلْنَا عَلَيْهِمْ رِيحًا صَرْصَرًا فِي يَوْمِ نَحْسٍ مُسْتَمِرٍّ
۞
ಒಂದು ಅಶುಭ ದಿನದಂದು, ನಾವು ಅವರ ವಿರುದ್ಧ ಪ್ರಚಂಡ ಬಿರುಗಾಳಿಯನ್ನು ಕಳಿಸಿದೆವು. ಅದು ಬೀಸುತ್ತಲೇ ಇತ್ತು.
تَنْزِعُ النَّاسَ كَأَنَّهُمْ أَعْجَازُ نَخْلٍ مُنْقَعِرٍ
۞
ಅದು ಜನರನ್ನು, ಉರುಳಿ ಬಿದ್ದ ಖರ್ಜೂರ ಗಿಡದ ಬುಡಗಳೆಂಬಂತೆ ಕಿತ್ತೆಸೆಯುತ್ತಿತ್ತು.
وَلَقَدْ يَسَّرْنَا الْقُرْآنَ لِلذِّكْرِ فَهَلْ مِنْ مُدَّكِرٍ
۞
ಉಪದೇಶಕ್ಕಾಗಿ, ನಾವು ಕುರ್‌ಆನನ್ನು ಸರಳಗೊಳಿಸಿರುವೆವು. ಯಾರಾದರೂ ಇದ್ದಾರೆಯೇ, ಉಪದೇಶ ಸ್ವೀಕರಿಸುವವರು?
فَقَالُوا أَبَشَرًا مِنَّا وَاحِدًا نَتَّبِعُهُ إِنَّا إِذًا لَفِي ضَلَالٍ وَسُعُرٍ
۞
ಅವರು ಹೇಳಿದರು; ನಾವೇನು, ನಮ್ಮೊಳಗಿನ ಒಬ್ಬ ಮಾನವನನ್ನು ಹಿಂಬಾಲಿಸಬೇಕೇ? ಹಾಗೆ ಮಾಡಿದರೆ ನಾವು ದಾರಿಗೆಟ್ಟವರು ಹಾಗೂ ಹುಚ್ಚರಾಗಿ ಬಿಡುವೆವು.
أَأُلْقِيَ الذِّكْرُ عَلَيْهِ مِنْ بَيْنِنَا بَلْ هُوَ كَذَّابٌ أَشِرٌ
۞
ನಮ್ಮ ಪೈಕಿ ಅವನಿಗೆ ದಿವ್ಯ ಬೋಧನೆಯನ್ನು ಇಳಿಸಿಕೊಡಲಾಗಿದೆಯೇ? ಅವನಂತು ಸುಳ್ಳುಗಾರ ಹಾಗೂ ತನ್ನನ್ನೇ ಹೊಗಳುವವನಾಗಿದ್ದಾನೆ.
سَيَعْلَمُونَ غَدًا مَنِ الْكَذَّابُ الْأَشِرُ
۞
ಸುಳ್ಳುಗಾರ ಮತ್ತು ತನ್ನನ್ನೇ ಹೊಗಳುವವನು ಯಾರೆಂಬುದು ಅವರಿಗೆ ನಾಳೆ ತಿಳಿಯಲಿದೆ.
إِنَّا مُرْسِلُو النَّاقَةِ فِتْنَةً لَهُمْ فَارْتَقِبْهُمْ وَاصْطَبِرْ
۞
ನಾವು ಅವರ ಪಾಲಿಗೆ ಪರೀಕ್ಷೆಯಾಗಿ ಒಂದು ಹೆಣ್ಣೊಂಟೆಯನ್ನು ಕಳಿಸುವೆವು (ಸಾಲಿಹರೇ,) ನೀವು ಅವರನ್ನು ನೋಡುತ್ತಲಿರಿ ಹಾಗೂ ಸಹನಶೀಲರಾಗಿರಿ.
وَنَبِّئْهُمْ أَنَّ الْمَاءَ قِسْمَةٌ بَيْنَهُمْ ۖ كُلُّ شِرْبٍ مُحْتَضَرٌ
۞
ಮತ್ತು ನೀರನ್ನು ಅವರ ನಡುವೆ ಹಂಚಲಾಗಿದೆ. ಪ್ರತಿಯೊಬ್ಬರೂ ನೀರು ಕುಡಿಯುವ ತಮ್ಮ ಸರದಿಯ ವೇಳೆ ಹಾಜರಿರಬೇಕು ಎಂದು ಅವರಿಗೆ ತಿಳಿಸಿರಿ (ಎನ್ನಲಾಯಿತು).
فَنَادَوْا صَاحِبَهُمْ فَتَعَاطَىٰ فَعَقَرَ
۞
ಅವರು (ಊರವರು) ತಮ್ಮ ಸಂಗಾತಿಯನ್ನು ಕರೆದರು. ಅವನು ಅತಿಕ್ರಮಕ್ಕಿಳಿದನು ಹಾಗೂ ಅವನು (ಒಂಟೆಯನ್ನು) ಕಡಿದು ಬಿಟ್ಟನು.
فَكَيْفَ كَانَ عَذَابِي وَنُذُرِ
۞
ಕೊನೆಗೆ, ಹೇಗಿತ್ತು ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆ (ಎಂಬುದನ್ನು ನೋಡಿರಿ;)
إِنَّا أَرْسَلْنَا عَلَيْهِمْ صَيْحَةً وَاحِدَةً فَكَانُوا كَهَشِيمِ الْمُحْتَظِرِ
۞
ನಾವು ಅವರ ಮೇಲೆ ಕೇವಲ ಒಂದು ಭಯಾನಕ ಶಬ್ದವನ್ನು ಎರಗಿಸಿಬಿಟ್ಟೆವು. ಅಷ್ಟಕ್ಕೇ ಅವರು ಒಣ ಹುಲ್ಲಿನಂತಾಗಿ ಬಿಟ್ಟರು.
وَلَقَدْ يَسَّرْنَا الْقُرْآنَ لِلذِّكْرِ فَهَلْ مِنْ مُدَّكِرٍ
۞
ನಾವು ಉಪದೇಶಕ್ಕಾಗಿ ಕುರ್‌ಆನನ್ನು ಸರಳಗೊಳಿಸಿರುವೆವು. ಉಪದೇಶ ಸ್ವೀಕರಿಸುವವನು ಯಾರಾದರೂ ಇದ್ದಾನೆಯೇ?
كَذَّبَتْ قَوْمُ لُوطٍ بِالنُّذُرِ
۞
ಲೂತ್‌ರ ಜನಾಂಗದವರು, ಎಚ್ಚರಿಸುವವರನ್ನು ತಿರಸ್ಕರಿಸಿದರು.
إِنَّا أَرْسَلْنَا عَلَيْهِمْ حَاصِبًا إِلَّا آلَ لُوطٍ ۖ نَجَّيْنَاهُمْ بِسَحَرٍ
۞
ನಾವು ಅವರ ಮೇಲೆ ಕಲ್ಲುಗಳನ್ನು ಸುರಿಸುವ ಬಿರುಗಾಳಿಯನ್ನು ಎರಗಿಸಿದೆವು - ಲೂತ್‌ರ ಮನೆಯವರ ಹೊರತು. ಅವರನ್ನು ನಾವು ಮುಂಜಾವಿನ ಸಮಯದಲ್ಲೇ ರಕ್ಷಿಸಿದೆವು.
نِعْمَةً مِنْ عِنْدِنَا ۚ كَذَٰلِكَ نَجْزِي مَنْ شَكَرَ
۞
ಅದು ನಮ್ಮ ವತಿಯಿಂದ (ನೀಡಲಾದ) ಕೊಡುಗೆಯಾಗಿತ್ತು. ಕೃತಜ್ಞನಾದವನನ್ನು ನಾವು ಇದೇ ರೀತಿ ಪುರಸ್ಕರಿಸುತ್ತೇವೆ.
وَلَقَدْ أَنْذَرَهُمْ بَطْشَتَنَا فَتَمَارَوْا بِالنُّذُرِ
۞
ಅವರು (ಲೂತರು) ನಮ್ಮ ಶಿಕ್ಷೆಯ ಕುರಿತು ಅವರನ್ನು (ತಮ್ಮ ಜನಾಂಗದವರನ್ನು) ಎಚ್ಚರಿಸಿದ್ದರು. ಆದರೆ ಅವರು ಆ ಎಚ್ಚರಿಕೆಯ ಕುರಿತು ಜಗಳಾಡ ತೊಡಗಿದರು.
وَلَقَدْ رَاوَدُوهُ عَنْ ضَيْفِهِ فَطَمَسْنَا أَعْيُنَهُمْ فَذُوقُوا عَذَابِي وَنُذُرِ
۞
ಮತ್ತು ಅವರು, ಅವರ (ಲೂತರ) ಅತಿಥಿಗಳನ್ನು ಅವರಿಂದ ಕಸಿದುಕೊಳ್ಳ ಬಯಸಿದರು. ಆಗ ನಾವು ಅವರ ಕಣ್ಣುಗಳನ್ನು ಅಳಿಸಿಬಿಟ್ಟೆವು - ಸವಿಯಿರಿ ನನ್ನ ಶಿಕ್ಷೆಯನ್ನು ಹಾಗೂ ಎಚ್ಚರಿಕೆಯನ್ನು.
وَلَقَدْ صَبَّحَهُمْ بُكْرَةً عَذَابٌ مُسْتَقِرٌّ
۞
ಮುಂಜಾನೆಯೇ ಅವರ ಮೇಲೆ ಶಾಶ್ವತ ಶಿಕ್ಷೆಯೊಂದು ಎರಗಿಬಿಟ್ಟಿತು.
وَلَقَدْ يَسَّرْنَا الْقُرْآنَ لِلذِّكْرِ فَهَلْ مِنْ مُدَّكِرٍ
۞
ನಾವು ಕುರ್‌ಆನನ್ನು ಉಪದೇಶಕ್ಕಾಗಿ ಸರಳಗೊಳಿಸಿರುವೆವು. ಯಾರಾದರೂ ಇದ್ದಾನೆಯೇ, ಉಪದೇಶ ಸ್ವೀಕರಿಸುವವನು?
وَلَقَدْ جَاءَ آلَ فِرْعَوْنَ النُّذُرُ
۞
ಮತ್ತು ಫಿರ್‌ಔನನ ಜನಾಂಗದವರ ಬಳಿಗೂ ಎಚ್ಚರಿಸುವವರು ಬಂದಿದ್ದರು.
كَذَّبُوا بِآيَاتِنَا كُلِّهَا فَأَخَذْنَاهُمْ أَخْذَ عَزِيزٍ مُقْتَدِرٍ
۞
ಅವರು ನಮ್ಮ ಎಲ್ಲ ಪುರಾವೆಗಳನ್ನೂ ತಿರಸ್ಕರಿಸಿದರು. ಕೊನೆಗೆ ನಾವು ಅವರನ್ನು ಹಿಡಿದೆವು. ಅದು ಭಾರೀ ಪ್ರಬಲನೂ ಬಲಿಷ್ಠನೂ ಆಗಿರುವವನ ಹಿಡಿತವಾಗಿತ್ತು.
أَكُفَّارُكُمْ خَيْرٌ مِنْ أُولَٰئِكُمْ أَمْ لَكُمْ بَرَاءَةٌ فِي الزُّبُرِ
۞
ನಿಮ್ಮಲ್ಲಿನ ಧಿಕ್ಕಾರಿಗಳೇನು ಅವರಿಗಿಂತ ಉತ್ತಮರೇ? ಅಥವಾ (ಗತಕಾಲದ) ದಿವ್ಯ ಗ್ರಂಥಗಳಲ್ಲಿ ನಿಮಗೇನಾದರೂ ಕ್ಷಮಾ ಪತ್ರ ನೀಡಲಾಗಿದೆಯೇ?
أَمْ يَقُولُونَ نَحْنُ جَمِيعٌ مُنْتَصِرٌ
۞
ನಾವು ಪ್ರತೀಕಾರ ತೀರಿಸಬಲ್ಲ (ಶಕ್ತಿಶಾಲಿ) ಪಡೆಯಾಗಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆಯೇ?
سَيُهْزَمُ الْجَمْعُ وَيُوَلُّونَ الدُّبُرَ
۞
ಬಹು ಬೇಗನೇ ಆ ಪಡೆ ಸೋತು ಹೋಗಲಿದೆ ಮತ್ತು ಅವರು ಬೆನ್ನು ತಿರುಗಿಸಿ ಓಡಲಿದ್ದಾರೆ.
بَلِ السَّاعَةُ مَوْعِدُهُمْ وَالسَّاعَةُ أَدْهَىٰ وَأَمَرُّ
۞
ಅವರಿಗೆ (ಪುನರುತ್ಥಾನದ) ಆ ಕ್ಷಣದ ವಾಗ್ದಾನ ಮಾಡಲಾಗಿದೆ ಮತ್ತು ಆ ಕ್ಷಣವು ತುಂಬಾ ಕಠಿಣ ಹಾಗೂ ಅಸಹನೀಯವಾಗಿರುವುದು.
إِنَّ الْمُجْرِمِينَ فِي ضَلَالٍ وَسُعُرٍ
۞
ಖಂಡಿತವಾಗಿಯೂ ಅಪರಾಧಿಗಳು ದಾರಿಗೆಟ್ಟಿದ್ದಾರೆ ಹಾಗೂ ಸಂಪೂರ್ಣ ಅಜ್ಞಾನದ ಸ್ಥಿತಿಯಲ್ಲಿದ್ದಾರೆ.
يَوْمَ يُسْحَبُونَ فِي النَّارِ عَلَىٰ وُجُوهِهِمْ ذُوقُوا مَسَّ سَقَرَ
۞
ಅವರ ಮುಖಗಳನ್ನು ನೆಲಕ್ಕೆ ಒರಗಿಸಿ ಅವರನ್ನು ಎಳೆಯುತ್ತಾ ನರಕಕ್ಕೆ ಸಾಗಿಸಲಾಗುವ ದಿನ ‘‘ಸವಿಯಿರಿ ಬೆಂಕಿಯ ಉರಿಯನ್ನು’’ (ಎಂದು ಅವರೊಡನೆ ಹೇಳಲಾಗುವುದು).
إِنَّا كُلَّ شَيْءٍ خَلَقْنَاهُ بِقَدَرٍ
۞
ನಾವು ಪ್ರತಿಯೊಂದು ವಸ್ತುವನ್ನೂ ನಿರ್ದಿಷ್ಟ ಪ್ರಮಾಣದಲ್ಲಿ ಸೃಷ್ಟಿಸಿರುವೆವು.
وَمَا أَمْرُنَا إِلَّا وَاحِدَةٌ كَلَمْحٍ بِالْبَصَرِ
۞
ಮತ್ತು ನಮ್ಮ ಆದೇಶವು ಕಣ್ಮುಚ್ಚಿ ತೆರೆಯುವಷ್ಟು ಕ್ಷಿಪ್ರವಾದ ಕೇವಲ ಒಂದು ಸೂಚನೆಯಾಗಿರುತ್ತದೆ.
وَلَقَدْ أَهْلَكْنَا أَشْيَاعَكُمْ فَهَلْ مِنْ مُدَّكِرٍ
۞
ನಾವು ನಿಮ್ಮ ಸಹವರ್ತಿಗಳನ್ನು ನಾಶ ಮಾಡಿರುವೆವು. ಯಾರಾದರೂ ಇದ್ದಾನೆಯೇ, ಉಪದೇಶ ಸ್ವೀಕರಿಸುವವನು?
إِنَّ الْمُتَّقِينَ فِي جَنَّاتٍ وَنَهَرٍ
۞
ಧರ್ಮನಿಷ್ಠರು ಖಂಡಿತ ಭವ್ಯ ತೋಟಗಳಲ್ಲಿ ಹಾಗೂ ನದಿಗಳಲ್ಲಿರುವರು.