Ad-Dukhan (The smoke)
44. ಅದ್ದುಖಾನ್(ಹೊಗೆ)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
إِنَّا أَنْزَلْنَاهُ فِي لَيْلَةٍ مُبَارَكَةٍ ۚ إِنَّا كُنَّا مُنْذِرِينَ
۞
ನಾವಿದನ್ನು ಒಂದು ಸಮೃದ್ಧ ರಾತ್ರಿಯಲ್ಲಿ ಇಳಿಸಿ ಕೊಟ್ಟಿರುವೆವು. ಖಂಡಿತ ನಾವು ಎಚ್ಚರಿಸುವವರಾಗಿದ್ದೇವೆ.
فِيهَا يُفْرَقُ كُلُّ أَمْرٍ حَكِيمٍ
۞
ಇದರಲ್ಲಿ, ಎಲ್ಲ ವಿಷಯಗಳನ್ನು ಯುಕ್ತಿ ಪೂರ್ಣವಾಗಿ ಸ್ಪಷ್ಟಪಡಿಸಲಾಗಿದೆ.
أَمْرًا مِنْ عِنْدِنَا ۚ إِنَّا كُنَّا مُرْسِلِينَ
۞
ಇದು ನಮ್ಮ ಕಡೆಯಿಂದ ಬಂದಿರುವ ಆದೇಶ. ಖಂಡಿತ, ನಾವೇ ಇದನ್ನು ಕಳಿಸುವವರು.
رَحْمَةً مِنْ رَبِّكَ ۚ إِنَّهُ هُوَ السَّمِيعُ الْعَلِيمُ
۞
ಇದು ನಿಮ್ಮ ಒಡೆಯನ ಅನುಗ್ರಹ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ ಬಲ್ಲವನಾಗಿದ್ದಾನೆ.
رَبِّ السَّمَاوَاتِ وَالْأَرْضِ وَمَا بَيْنَهُمَا ۖ إِنْ كُنْتُمْ مُوقِنِينَ
۞
ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನಾಗಿದ್ದಾನೆ - ನೀವು ಅಚಲ ನಂಬಿಕೆ ಉಳ್ಳವರಾಗಿದ್ದರೆ (ಇದು ನಿಮಗೆ ಮನವರಿಕೆಯಾಗಿರುತ್ತದೆ).
لَا إِلَٰهَ إِلَّا هُوَ يُحْيِي وَيُمِيتُ ۖ رَبُّكُمْ وَرَبُّ آبَائِكُمُ الْأَوَّلِينَ
۞
ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ಅವನೇ ನಿಮ್ಮೊಡೆಯನು ಮತ್ತು ನಿಮ್ಮ ಹಿಂದಿನ ಪೂರ್ವಜರ ಒಡೆಯನು.
بَلْ هُمْ فِي شَكٍّ يَلْعَبُونَ
۞
ಇಷ್ಟಾಗಿಯೂ ಅವರು ಸಂಶಯಗ್ರಸ್ತರಾಗಿ, (ಸತ್ಯದೊಂದಿಗೆ) ಆಟವಾಡುತ್ತಿದ್ದಾರೆ.
فَارْتَقِبْ يَوْمَ تَأْتِي السَّمَاءُ بِدُخَانٍ مُبِينٍ
۞
ನೀವಿನ್ನು, ಆಕಾಶವು ಒಂದು ಪ್ರತ್ಯಕ್ಷ ಹೊಗೆಯನ್ನು ಹೊರ ತರುವ ದಿನಕ್ಕಾಗಿ ಕಾಯಿರಿ.
يَغْشَى النَّاسَ ۖ هَٰذَا عَذَابٌ أَلِيمٌ
۞
ಅದು ಮಾನವರನ್ನು ಆವರಿಸುವುದು. ಅದು ಕಠಿಣ ಶಿಕ್ಷೆಯಾಗಿರುವುದು.
رَبَّنَا اكْشِفْ عَنَّا الْعَذَابَ إِنَّا مُؤْمِنُونَ
۞
ನಮ್ಮೊಡೆಯಾ, ನಮ್ಮಿಂದ ಶಿಕ್ಷೆಯನ್ನು ನಿವಾರಿಸು. ನಾವು ವಿಶ್ವಾಸಿಗಳಾಗಿರುವೆವು’’ (ಎಂದು ಅವರು ಮೊರೆ ಇಡುವರು).
أَنَّىٰ لَهُمُ الذِّكْرَىٰ وَقَدْ جَاءَهُمْ رَسُولٌ مُبِينٌ
۞
ಅವರಿಗೆ ಇನ್ನೆಲ್ಲಿಯ ಉಪದೇಶ? ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸುವ ದೂತರು ಈಗಾಗಲೇ ಅವರ ಬಳಿಗೆ ಬಂದಿದ್ದಾರೆ.
ثُمَّ تَوَلَّوْا عَنْهُ وَقَالُوا مُعَلَّمٌ مَجْنُونٌ
۞
ಆದರೆ ಅವರು, ಅವರನ್ನು ಕಡೆಗಣಿಸಿದರು ಹಾಗೂ ಅವರನ್ನು, ಯಾರಿಂದಲೋ ಕಲಿತು ಬರುವ ಹುಚ್ಚನೆಂದು ಕರೆದರು.
إِنَّا كَاشِفُو الْعَذَابِ قَلِيلًا ۚ إِنَّكُمْ عَائِدُونَ
۞
ನಾವು ಸ್ವಲ್ಪ ಮಟ್ಟಿಗೆ ಶಿಕ್ಷೆಯನ್ನು ತೊಲಗಿಸುವೆವು. ಆದರೆ ನೀವು ಖಂಡಿತ (ಹಳೆಯ ಚಾಳಿಗೆ) ಮರಳುವಿರಿ.
يَوْمَ نَبْطِشُ الْبَطْشَةَ الْكُبْرَىٰ إِنَّا مُنْتَقِمُونَ
۞
ನಾವು ನಿಮ್ಮನ್ನು ಕಠೋರವಾಗಿ ಹಿಡಿಯುವ ದಿನ, ನಾವು ಖಂಡಿತ ಪ್ರತೀಕಾರ ತೀರಿಸುವೆವು.
۞ وَلَقَدْ فَتَنَّا قَبْلَهُمْ قَوْمَ فِرْعَوْنَ وَجَاءَهُمْ رَسُولٌ كَرِيمٌ
۞
ಅವರಿಗಿಂತ ಹಿಂದೆ ನಾವು ಫಿರ್‌ಔನ್‌ನ ಜನಾಂಗವನ್ನು ಪರೀಕ್ಷಿಸಿರುವೆವು. ಅವರ ಬಳಿಗೆ ಗೌರವಾನ್ವಿತ ದೂತರು ಬಂದಿದ್ದರು.
أَنْ أَدُّوا إِلَيَّ عِبَادَ اللَّهِ ۖ إِنِّي لَكُمْ رَسُولٌ أَمِينٌ
۞
(ಅವರು ಹೇಳಿದ್ದರು;) ಅಲ್ಲಾಹನ ದಾಸರನ್ನು ನನ್ನ ವಶಕ್ಕೆ ಒಪ್ಪಿಸಿರಿ. ನಿಸ್ಸಂದೇಹವಾಗಿಯೂ ನಾನು ವಿಶ್ವಾಸಾರ್ಹ ದೂತನಾಗಿದ್ದೇನೆ.
وَأَنْ لَا تَعْلُوا عَلَى اللَّهِ ۖ إِنِّي آتِيكُمْ بِسُلْطَانٍ مُبِينٍ
۞
ಅಲ್ಲಾಹನೆದುರು ವಿದ್ರೋಹ ತೋರಬೇಡಿ. ನಾನು ಸ್ಪಷ್ಟ ಪ್ರಮಾಣದೊಂದಿಗೆ ನಿಮ್ಮ ಬಳಿಗೆ ಬಂದಿರುವೆನು.
وَإِنِّي عُذْتُ بِرَبِّي وَرَبِّكُمْ أَنْ تَرْجُمُونِ
۞
ಮತ್ತು ನೀವು ನನ್ನನ್ನು ಕಲ್ಲೆಸೆದು ಕೊಲ್ಲುವ ವಿರುದ್ಧ ನಾನು ನನ್ನೊಡೆಯನೂ ನಿಮ್ಮೊಡೆಯನೂ ಆಗಿರುವಾತನ ರಕ್ಷಣೆಯನ್ನು ಕೋರುತ್ತೇನೆ.
وَإِنْ لَمْ تُؤْمِنُوا لِي فَاعْتَزِلُونِ
۞
ನೀವು ನನ್ನನ್ನು ನಂಬುವುದಿಲ್ಲವೆಂದಾದರೆ ನನ್ನಿಂದ ದೂರ ಉಳಿಯಿರಿ.
فَدَعَا رَبَّهُ أَنَّ هَٰؤُلَاءِ قَوْمٌ مُجْرِمُونَ
۞
ಕೊನೆಗೆ ಅವರು (ದೂತರು) ‘‘ಇವರೊಂದು ಅಪರಾಧಿ ಜನಾಂಗವಾಗಿದ್ದಾರೆ’’ ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟರು.
فَأَسْرِ بِعِبَادِي لَيْلًا إِنَّكُمْ مُتَّبَعُونَ
۞
(ಅಲ್ಲಾಹನು ಆದೇಶಿಸಿದನು;) ರಾತ್ರಿಯ ವೇಳೆ ನೀವು ನಮ್ಮ ದಾಸರನ್ನು ಕರೆದುಕೊಂಡು ಹೋಗಿರಿ. ನಿಮ್ಮನ್ನು ಖಂಡಿತ ಹಿಂಬಾಲಿಸಲಾಗುವುದು.
وَاتْرُكِ الْبَحْرَ رَهْوًا ۖ إِنَّهُمْ جُنْدٌ مُغْرَقُونَ
۞
ಸಮುದ್ರವು ಪ್ರಶಾಂತವಾಗಿರುವ ಸ್ಥಿತಿಯಲ್ಲೇ ನೀವು ಅದನ್ನು ದಾಟಿ ಹೋಗಿರಿ. ಅವರು (ಶತ್ರುಗಳು) ಖಂಡಿತ ಮುಳುಗಿ ಹೋಗುವರು.
كَمْ تَرَكُوا مِنْ جَنَّاتٍ وَعُيُونٍ
۞
ಕೊನೆಗೆ ಅವರು (ಶತ್ರುಗಳು) ಬಿಟ್ಟು ಹೋದರು; ಅದೆಷ್ಟು ತೋಟಗಳನ್ನು ಹಾಗೂ ಚಿಲುಮೆಗಳನ್ನು!
كَذَٰلِكَ ۖ وَأَوْرَثْنَاهَا قَوْمًا آخَرِينَ
۞
ಹೀಗೆ, ನಾವು ಬೇರೊಂದು ಜನಾಂಗದವರನ್ನು ಅವರ ಉತ್ತರಾಧಿಕಾರಿಗಳಾಗಿಸಿದೆವು.
فَمَا بَكَتْ عَلَيْهِمُ السَّمَاءُ وَالْأَرْضُ وَمَا كَانُوا مُنْظَرِينَ
۞
ಅವರಿಗಾಗಿ ಆಕಾಶವಾಗಲಿ ಭೂಮಿಯಾಗಲಿ ರೋದಿಸಲಿಲ್ಲ. ಅವರಿಗೆ ಹೆಚ್ಚಿನ ಕಾಲಾವಕಾಶವೂ ಸಿಗಲಿಲ್ಲ.
وَلَقَدْ نَجَّيْنَا بَنِي إِسْرَائِيلَ مِنَ الْعَذَابِ الْمُهِينِ
۞
ನಾವು ಇಸ್ರಾಈಲರ ಸಂತತಿಯನ್ನು ಅಪಮಾನಕಾರಿ ಯಾತನೆಯಿಂದ ವಿಮೋಚಿಸಿದೆವು.
مِنْ فِرْعَوْنَ ۚ إِنَّهُ كَانَ عَالِيًا مِنَ الْمُسْرِفِينَ
۞
ಫಿರ್‌ಔನನಿಂದ (ಅವರನ್ನು ರಕ್ಷಿಸಿದೆವು). ಅವನು ಅತಿರೇಕವೆಸಗಿದ ವಿದ್ರೋಹಿಯಾಗಿದ್ದನು.
وَلَقَدِ اخْتَرْنَاهُمْ عَلَىٰ عِلْمٍ عَلَى الْعَالَمِينَ
۞
ನಾವು ಜ್ಞಾನದ ಆಧಾರದಲ್ಲಿ, ಎಲ್ಲ ಲೋಕಗಳವರ ಪೈಕಿ ಅವರನ್ನು ಆರಿಸಿಕೊಂಡಿದ್ದೆವು.
وَآتَيْنَاهُمْ مِنَ الْآيَاتِ مَا فِيهِ بَلَاءٌ مُبِينٌ
۞
ಮತ್ತು ನಾವು ಅವರಿಗೆ ಪುರಾವೆಗಳನ್ನು ನೀಡಿದ್ದೆವು. ಅವುಗಳಲ್ಲಿ ಸ್ಪಷ್ಟ ಪರೀಕ್ಷೆ ಇತ್ತು.
إِنْ هِيَ إِلَّا مَوْتَتُنَا الْأُولَىٰ وَمَا نَحْنُ بِمُنْشَرِينَ
۞
‘‘ಈ ನಮ್ಮ ಪ್ರಥಮ ಮರಣವೇ ಅಂತಿಮ. ನಮ್ಮನ್ನು ಮತ್ತೆ ಜೀವಂತ ಗೊಳಿಸಲಾಗುವುದಿಲ್ಲ.’’
فَأْتُوا بِآبَائِنَا إِنْ كُنْتُمْ صَادِقِينَ
۞
‘‘ನೀವು ಸತ್ಯವಂತರಾಗಿದ್ದರೆ, ನಮ್ಮ ಪೂರ್ವಜರನ್ನು (ಜೀವಂತಗೊಳಿಸಿ) ತನ್ನಿರಿ.’’
أَهُمْ خَيْرٌ أَمْ قَوْمُ تُبَّعٍ وَالَّذِينَ مِنْ قَبْلِهِمْ ۚ أَهْلَكْنَاهُمْ ۖ إِنَّهُمْ كَانُوا مُجْرِمِينَ
۞
ಅವರು ಉತ್ತಮರೋ ಅಥವಾ ತುಬ್ಬಅ್ ಜನಾಂಗದವರು ಹಾಗೂ ಅವರಿಗಿಂತ ಹಿಂದೆ ಇದ್ದವರು ಉತ್ತಮರೋ? ನಾವು ಅವರನ್ನು ನಾಶ ಮಾಡಿದೆವು. ಅವರು ಅಪರಾಧಿಗಳಾಗಿದ್ದರು.*
وَمَا خَلَقْنَا السَّمَاوَاتِ وَالْأَرْضَ وَمَا بَيْنَهُمَا لَاعِبِينَ
۞
ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವೇನೂ ಮೋಜಿಗಾಗಿ ಸೃಷ್ಟಿಸಿಲ್ಲ.
مَا خَلَقْنَاهُمَا إِلَّا بِالْحَقِّ وَلَٰكِنَّ أَكْثَرَهُمْ لَا يَعْلَمُونَ
۞
ಅವುಗಳನ್ನು ನಾವು ನ್ಯಾಯೋಚಿತವಾಗಿಯೇ ಸೃಷ್ಟಿಸಿರುವೆವು. ಆದರೆ ಅವರಲ್ಲಿ ಹೆಚ್ಚಿನವರು ತಿಳಿದಿಲ್ಲ.
إِنَّ يَوْمَ الْفَصْلِ مِيقَاتُهُمْ أَجْمَعِينَ
۞
ಖಂಡಿತವಾಗಿಯೂ, ಅಂತಿಮ ತೀರ್ಪಿನ ದಿನವೇ ಅವರೆಲ್ಲರಿಗಿರುವ ನಿಶ್ಚಿತ ಅವಧಿಯಾಗಿದೆ.
يَوْمَ لَا يُغْنِي مَوْلًى عَنْ مَوْلًى شَيْئًا وَلَا هُمْ يُنْصَرُونَ
۞
ಆ ದಿನ ಯಾವ ಮಿತ್ರನೂ ತನ್ನ ಮಿತ್ರನಿಗೆ ಕಿಂಚಿತ್ತೂ ನೆರವಾಗಲಾರನು ಮತ್ತು ಅವರಿಗೆ ಸಹಾಯ ಸಿಗಲಾರದು -
إِلَّا مَنْ رَحِمَ اللَّهُ ۚ إِنَّهُ هُوَ الْعَزِيزُ الرَّحِيمُ
۞
- ಅಲ್ಲಾಹನೇ ಕೃಪೆ ತೋರಿದವರ ಹೊರತು. ಅವನು ಖಂಡಿತ, ಮಹಾ ಪ್ರಬಲನೂ ಕರುಣಾಮಯಿಯೂ ಆಗಿದ್ದಾನೆ.
كَالْمُهْلِ يَغْلِي فِي الْبُطُونِ
۞
ಅದು ಹೊಟ್ಟೆಗಳೊಳಗೆ, ಕರಗಿದ ತಾಮ್ರದಂತೆ ಕುದಿಯುತ್ತಿರುವುದು.
خُذُوهُ فَاعْتِلُوهُ إِلَىٰ سَوَاءِ الْجَحِيمِ
۞
ಹಿಡಿಯಿರಿ ಅವನನ್ನು ಮತ್ತು ನರಕದ ಮಧ್ಯಭಾಗದವರೆಗೂ ಎಳೆದುಕೊಂಡು ಹೋಗಿರಿ.
ثُمَّ صُبُّوا فَوْقَ رَأْسِهِ مِنْ عَذَابِ الْحَمِيمِ
۞
ಮತ್ತು ಕುದಿಯುವ ನರಕದ ಭಾಗವನ್ನು ಅವನ ತಲೆಗೆ ಹಾಕಿರಿ.
ذُقْ إِنَّكَ أَنْتَ الْعَزِيزُ الْكَرِيمُ
۞
ಸವಿ! ನೀನು ಭಾರೀ ಪ್ರಬಲ ಹಾಗೂ ಗೌರವಾನ್ವಿತನಾಗಿ ಮೆರೆಯುತ್ತಿದ್ದೆ.
إِنَّ الْمُتَّقِينَ فِي مَقَامٍ أَمِينٍ
۞
ಧರ್ಮ ನಿಷ್ಠರು ಅಂದು ಪ್ರಶಾಂತ ನೆಲೆಯಲ್ಲಿರುವರು.
يَلْبَسُونَ مِنْ سُنْدُسٍ وَإِسْتَبْرَقٍ مُتَقَابِلِينَ
۞
ಅವರು ಶುಭ್ರ ರೇಶ್ಮೆ ಹಾಗೂ ಅಲಂಕೃತ ರೇಶ್ಮೆಯ ಉಡುಗೆಗಳನ್ನು ಧರಿಸಿ ಪರಸ್ಪರರ ಮುಂದಿರುವರು.
كَذَٰلِكَ وَزَوَّجْنَاهُمْ بِحُورٍ عِينٍ
۞
ಹೀಗೆಯೇ ಇರುವುದು. ವಿಶಾಲ ಕಣ್ಣಿನ ಹೂರ್‌ಗಳನ್ನು ನಾವು ಅವರ ಜೊತೆಗಳಾಗಿಸುವೆವು.
يَدْعُونَ فِيهَا بِكُلِّ فَاكِهَةٍ آمِنِينَ
۞
ಅವರು ನೆಮ್ಮದಿಯಿಂದ ಎಲ್ಲ ಬಗೆಯ ಹಣ್ಣುಗಳನ್ನು ತರಿಸುವರು.
لَا يَذُوقُونَ فِيهَا الْمَوْتَ إِلَّا الْمَوْتَةَ الْأُولَىٰ ۖ وَوَقَاهُمْ عَذَابَ الْجَحِيمِ
۞
(ಇಹಲೋಕದ) ಪ್ರಥಮ ಮರಣದ ಹೊರತು, ಅಲ್ಲಿ ಅವರು ಮರಣವನ್ನು ಎದುರಿಸಲಾರರು. ಅವನು ಅವರನ್ನು ನರಕದ ಶಿಕ್ಷೆಯಿಂದ ರಕ್ಷಿಸಿರುವನು.
فَضْلًا مِنْ رَبِّكَ ۚ ذَٰلِكَ هُوَ الْفَوْزُ الْعَظِيمُ
۞
ಇದು ನಿಮ್ಮ ಒಡೆಯನ ಅನುಗ್ರಹ. ಇದು ನಿಜಕ್ಕೂ ಮಹಾ ವಿಜಯವಾಗಿದೆ.
فَإِنَّمَا يَسَّرْنَاهُ بِلِسَانِكَ لَعَلَّهُمْ يَتَذَكَّرُونَ
۞
ನಾವಿದನ್ನು ನಿಮ್ಮ ಭಾಷೆಯಲ್ಲಿ ಸುಲಭಗೊಳಿಸಿರುವೆವು. ಅವರು ಉಪದೇಶ ಸ್ವೀಕರಿಸಲೆಂದು.