Al-Jumu`ah (Friday)
62. ಅಲ್ ಜುಮುಅಃ(ಶುಕ್ರವಾರ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
62:1
يُسَبِّحُ لِلَّهِ مَا فِي السَّمَاوَاتِ وَمَا فِي الْأَرْضِ الْمَلِكِ الْقُدُّوسِ الْعَزِيزِ الْحَكِيمِ ۞
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರ್ಯವನ್ನು ಜಪಿಸುತ್ತಿವೆ. ಅವನು ನೈಜ ಅಧಿಪತಿಯೂ ಪರಮ ಪಾವನನೂ ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.
62:2
هُوَ الَّذِي بَعَثَ فِي الْأُمِّيِّينَ رَسُولًا مِنْهُمْ يَتْلُو عَلَيْهِمْ آيَاتِهِ وَيُزَكِّيهِمْ وَيُعَلِّمُهُمُ الْكِتَابَ وَالْحِكْمَةَ وَإِنْ كَانُوا مِنْ قَبْلُ لَفِي ضَلَالٍ مُبِينٍ ۞
ಅವನೇ ನಿರಕ್ಷರಿಗಳ ಮಧ್ಯೆ, ಅವರಲ್ಲೊಬ್ಬನನ್ನು ದೂತನಾಗಿ ಕಳುಹಿಸಿದನು. ಅವರು (ಆ ದೂತರು) ಅವರಿಗೆ ಆತನ ವಚನಗಳನ್ನು ಓದಿ ಕೇಳಿಸುತ್ತಾರೆ. ಹಾಗೂ ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥವನ್ನೂ ಯುಕ್ತಿಯನ್ನೂ ಕಲಿಸಿಕೊಡುತ್ತಾರೆ. ಈ ಹಿಂದೆ ಆ ಜನರು ಸ್ಪಷ್ಟವಾಗಿ ದಾರಿಗೆಟ್ಟಿದ್ದರು.
62:3
وَآخَرِينَ مِنْهُمْ لَمَّا يَلْحَقُوا بِهِمْ ۚ وَهُوَ الْعَزِيزُ الْحَكِيمُ ۞
ಇದಲ್ಲದೆ, ಅವರ ಪೈಕಿ, ಅವರಿನ್ನೂ ಭೇಟಿಯಾಗಿಲ್ಲದವರ ಕಡೆಗೂ ಅವರನ್ನು (ದೂತರಾಗಿ) ಕಳುಹಿಸಲಾಗಿದೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.
62:4
ذَٰلِكَ فَضْلُ اللَّهِ يُؤْتِيهِ مَنْ يَشَاءُ ۚ وَاللَّهُ ذُو الْفَضْلِ الْعَظِيمِ ۞
ಇದು ಅಲ್ಲಾಹನ ಅನುಗ್ರಹ. ಅವನು ತಾನಿಚ್ಛಿಸಿದವರಿಗೆ ಇದನ್ನು ದಯಪಾಲಿಸುತ್ತಾನೆ ಮತ್ತು ಅಲ್ಲಾಹನು ಮಹಾ ಅನುಗ್ರಹಶಾಲಿಯಾಗಿದ್ದಾನೆ.
62:5
مَثَلُ الَّذِينَ حُمِّلُوا التَّوْرَاةَ ثُمَّ لَمْ يَحْمِلُوهَا كَمَثَلِ الْحِمَارِ يَحْمِلُ أَسْفَارًا ۚ بِئْسَ مَثَلُ الْقَوْمِ الَّذِينَ كَذَّبُوا بِآيَاتِ اللَّهِ ۚ وَاللَّهُ لَا يَهْدِي الْقَوْمَ الظَّالِمِينَ ۞
ತೌರಾತಿನ ಹೊಣೆ ವಹಿಸಿ ಕೊಡಲಾದವರು ಮತ್ತು ಆ ಹೊಣೆಯನ್ನು ನಿರ್ವಹಿಸದೆ ಇದ್ದವರ ಉದಾಹರಣೆಯು ಗ್ರಂಥಗಳ ಹೊರೆ ಹೊತ್ತ ಕತ್ತೆಯಂತಿದೆ. ಅಲ್ಲಾಹನ ವಚನಗಳನ್ನು ತಿರಸ್ಕರಿಸಿದವರ ಸ್ಥಿತಿಯು ನಿಜಕ್ಕೂ ಕೆಟ್ಟದಾಗಿದೆ. ಅಲ್ಲಾಹನು ಅಕ್ರಮಿಗಳಿಗೆ ಸರಿದಾರಿಯನ್ನು ತೋರುವುದಿಲ್ಲ.
62:6
قُلْ يَا أَيُّهَا الَّذِينَ هَادُوا إِنْ زَعَمْتُمْ أَنَّكُمْ أَوْلِيَاءُ لِلَّهِ مِنْ دُونِ النَّاسِ فَتَمَنَّوُا الْمَوْتَ إِنْ كُنْتُمْ صَادِقِينَ ۞
ಹೇಳಿರಿ; ‘‘ಯಹೂದಿಗಳೇ, ಇತರೆಲ್ಲ ಮಾನವರನ್ನು ಬಿಟ್ಟು, ನೀವು ಮಾತ್ರ ಅಲ್ಲಾಹನಿಗೆ ಪರಮ ಆಪ್ತರು ಎಂಬ ದೊಡ್ಡಸ್ತಿಕೆ ನಿಮಗಿದ್ದರೆ ಮತ್ತು ನೀವು ಸತ್ಯವಂತರಾಗಿದ್ದರೆ, ನೀವು ಮರಣವನ್ನು ಅಪೇಕ್ಷಿಸಿರಿ.’’
62:7
وَلَا يَتَمَنَّوْنَهُ أَبَدًا بِمَا قَدَّمَتْ أَيْدِيهِمْ ۚ وَاللَّهُ عَلِيمٌ بِالظَّالِمِينَ ۞
ಅವರು ಅದನ್ನೆಂದೂ ಅಪೇಕ್ಷಿಸಲಾರರು. (ಏಕೆಂದರೆ) ಅವರ ಕೈಗಳು ಮುಂದೆ ಕಳಿಸಿರುವ ಕರ್ಮಗಳು ಹಾಗಿವೆ. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.
62:8
قُلْ إِنَّ الْمَوْتَ الَّذِي تَفِرُّونَ مِنْهُ فَإِنَّهُ مُلَاقِيكُمْ ۖ ثُمَّ تُرَدُّونَ إِلَىٰ عَالِمِ الْغَيْبِ وَالشَّهَادَةِ فَيُنَبِّئُكُمْ بِمَا كُنْتُمْ تَعْمَلُونَ ۞
ಹೇಳಿರಿ; ನೀವು ಯಾವ ಮರಣದಿಂದ ದೂರ ಓಡುತ್ತಿರುವಿರೊ ಅದು ಖಂಡಿತ ನಿಮ್ಮ ಮುಂದೆ ಬರಲಿದೆ. ಆ ಬಳಿಕ ನಿಮ್ಮನ್ನು, ಗುಪ್ತ ಹಾಗೂ ಬಹಿರಂಗವಾದ ಎಲ್ಲವನ್ನೂ ಬಲ್ಲವನ ಬಳಿಗೆ ಮರಳಿಸಲಾಗುವುದು. ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ಆಗ ಅವನು ನಿಮಗೆ ತಿಳಿಸುವನು.
62:9
يَا أَيُّهَا الَّذِينَ آمَنُوا إِذَا نُودِيَ لِلصَّلَاةِ مِنْ يَوْمِ الْجُمُعَةِ فَاسْعَوْا إِلَىٰ ذِكْرِ اللَّهِ وَذَرُوا الْبَيْعَ ۚ ذَٰلِكُمْ خَيْرٌ لَكُمْ إِنْ كُنْتُمْ تَعْلَمُونَ ۞
ವಿಶ್ವಾಸಿಗಳೇ, ಶುಕ್ರವಾರದ ದಿನ ನಿಮ್ಮನ್ನು ನಮಾಝ್‌ಗಾಗಿ ಕರೆಯಲಾದಾಗ ಅಲ್ಲಾಹನ ಸ್ಮರಣೆಯೆಡೆಗೆ ಧಾವಿಸಿರಿ ಮತ್ತು ಇತರೆಲ್ಲಾ ವ್ಯವಹಾರಗಳನ್ನು ಬಿಟ್ಟು ಬಿಡಿರಿ. ನೀವು ಅರಿಯುವವರಾಗಿದ್ದರೆ ನಿಮ್ಮ ಪಾಲಿಗೆ ಇದುವೇ ಉತ್ತಮ.
62:10
فَإِذَا قُضِيَتِ الصَّلَاةُ فَانْتَشِرُوا فِي الْأَرْضِ وَابْتَغُوا مِنْ فَضْلِ اللَّهِ وَاذْكُرُوا اللَّهَ كَثِيرًا لَعَلَّكُمْ تُفْلِحُونَ ۞
ನೀವು ನಮಾಝನ್ನು ಮುಗಿಸಿದ ಬಳಿಕ ಭೂಮಿಯಲ್ಲಿ ಚದುರಿರಿ ಹಾಗೂ ಅಲ್ಲಾಹನ ಅನುಗ್ರಹವನ್ನು ಹುಡುಕಿರಿ ಮತ್ತು ಪದೇ ಪದೇ ಅಲ್ಲಾಹನನ್ನು ಸ್ಮರಿಸಿರಿ. ನೀವು ವಿಜಯಿಗಳಾಗಬಹುದು.
62:11
وَإِذَا رَأَوْا تِجَارَةً أَوْ لَهْوًا انْفَضُّوا إِلَيْهَا وَتَرَكُوكَ قَائِمًا ۚ قُلْ مَا عِنْدَ اللَّهِ خَيْرٌ مِنَ اللَّهْوِ وَمِنَ التِّجَارَةِ ۚ وَاللَّهُ خَيْرُ الرَّازِقِينَ ۞
(ದೂತರೇ,) ಅವರು (ಕೆಲವರು) ಯಾವುದಾದರೂ ವ್ಯಾಪಾರ ಅಥವಾ ಮನರಂಜಕ ವಸ್ತುವನ್ನು ಕಂಡಾಗ ನಿಮ್ಮನ್ನು ನಿಂತಲ್ಲೇ ಬಿಟ್ಟು ಅವುಗಳೆಡೆಗೆ ಧಾವಿಸಿ ಬಿಡುತ್ತಾರೆ. ಹೇಳಿರಿ ಅಲ್ಲಾಹನ ಬಳಿ ಏನಿದೆಯೋ ಅದು ಸಕಲ ಮನರಂಜನೆ ಮತ್ತು ಸರ್ವ ವ್ಯಾಪಾರಗಳಿಗಿಂತಲೂ ಉತ್ತಮವಾಗಿದೆ ಮತ್ತು ಅಲ್ಲಾಹನು ಅತ್ಯುತ್ತಮ ಅನ್ನದಾತನಾಗಿದ್ದಾನೆ.