At-Tariq (The morning star)
86. ಅತ್ವಾರಿಕ್(ಪ್ರಭಾತ ತಾರೆ)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
86:1
وَالسَّمَاءِ وَالطَّارِقِ
۞
ಆಕಾಶದಾಣೆ ಮತ್ತು ‘ತ್ವಾರಿಕ್’ ನಾಣೆ.
86:2
وَمَا أَدْرَاكَ مَا الطَّارِقُ
۞
‘ತ್ವಾರಿಕ್’ ಏನೆಂದು ನಿಮಗೇನು ಗೊತ್ತು?
86:3
النَّجْمُ الثَّاقِبُ
۞
ಅದು ಪ್ರಭಾತ ತಾರೆ.
86:4
إِنْ كُلُّ نَفْسٍ لَمَّا عَلَيْهَا حَافِظٌ
۞
ಪ್ರತಿಯೊಂದು ಜೀವದ ಮೇಲೂ ಒಬ್ಬ ಮೇಲ್ವಿಚಾರಕನಿರುತ್ತಾನೆ.
86:5
فَلْيَنْظُرِ الْإِنْسَانُ مِمَّ خُلِقَ
۞
ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನೊಮ್ಮೆ ನೋಡಲಿ.
86:6
خُلِقَ مِنْ مَاءٍ دَافِقٍ
۞
ಅವರನ್ನು ಜಿಗಿಯುವ ನೀರಿನಿಂದ ಸೃಷ್ಟಿಸಲಾಗಿದೆ.
86:7
يَخْرُجُ مِنْ بَيْنِ الصُّلْبِ وَالتَّرَائِبِ
۞
ಅದು ಬೆನ್ನು ಹಾಗೂ ಪಕ್ಕೆಲುಬುಗಳ ಮಧ್ಯದಿಂದ ಹೊರಡುತ್ತದೆ.
86:8
إِنَّهُ عَلَىٰ رَجْعِهِ لَقَادِرٌ
۞
ಅವನು ಅವನನ್ನು (ಮನುಷ್ಯನನ್ನು) ಮತ್ತೊಮ್ಮೆ ಸೃಷ್ಟಿಸಲು ಖಂಡಿತ ಸಮರ್ಥನಾಗಿದ್ದಾನೆ.
86:9
يَوْمَ تُبْلَى السَّرَائِرُ
۞
ಮನದೊಳಗಿನ ರಹಸ್ಯಗಳ ಪರಿಶೀಲನೆ (ಅಂತಿಮ ವಿಚಾರಣೆ) ನಡೆಯುವ ದಿನ.
86:10
فَمَا لَهُ مِنْ قُوَّةٍ وَلَا نَاصِرٍ
۞
ಅಂದು ಅವನ (ಮಾನವನ) ಬಳಿ ಯಾವ ಶಕ್ತಿಯೂ ಇರದು. ಯಾವ ಸಹಾಯಕನೂ ಇರಲಾರನು.
86:11
وَالسَّمَاءِ ذَاتِ الرَّجْعِ
۞
ಮಳೆ ಸುರಿಸುವ ಆಕಾಶದಾಣೆ.
86:12
وَالْأَرْضِ ذَاتِ الصَّدْعِ
۞
ಬಿರಿಯುವ ಭೂಮಿಯಾಣೆ.
86:13
إِنَّهُ لَقَوْلٌ فَصْلٌ
۞
ಇದು ನಿರ್ಣಾಯಕ ಸಂದೇಶ.
86:14
وَمَا هُوَ بِالْهَزْلِ
۞
ಇದು ತಮಾಷೆಯಲ್ಲ.
86:15
إِنَّهُمْ يَكِيدُونَ كَيْدًا
۞
ಅವರು ಸಂಚುಗಳನ್ನು ಹೂಡುತ್ತಿದ್ದಾರೆ.
86:16
وَأَكِيدُ كَيْدًا
۞
ಮತ್ತು ನಾನೊಂದು ಸಂಚು ಹೂಡುತ್ತಿದ್ದೇನೆ.
86:17
فَمَهِّلِ الْكَافِرِينَ أَمْهِلْهُمْ رُوَيْدًا
۞
ನೀವೀಗ ಧಿಕ್ಕಾರಿಗಳಿಗೆ ಕಾಲಾವಕಾಶವನ್ನು ನೀಡಿರಿ. ಕೇವಲ ಸ್ವಲ್ಪ ಕಾಲಾವಕಾಶ.