Al-Waqi`ah (The inevitable)
56. ಅಲ್ ವಾಕಿಅಃ(ಸಂಭವ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
56:1
إِذَا وَقَعَتِ الْوَاقِعَةُ ۞
ಸಂಭವಿಸಬೇಕಾದುದು ಸಂಭವಿಸಿ ಬಿಟ್ಟಾಗ.
56:2
لَيْسَ لِوَقْعَتِهَا كَاذِبَةٌ ۞
ಅದರ ಸಂಭವ ಸುಳ್ಳಾಗಿರದು.
56:3
خَافِضَةٌ رَافِعَةٌ ۞
ಅದು (ಕೆಲವರನ್ನು) ಕೀಳಾಗಿಸುವುದು ಮತ್ತು (ಕೆಲವರನ್ನು) ಮೇಲಾಗಿಸುವುದು.
56:4
إِذَا رُجَّتِ الْأَرْضُ رَجًّا ۞
ಭೂಮಿಯು ತೀವ್ರ ಕಂಪನದಿಂದ ತತ್ತರಿಸಿ ಬಿಡುವುದು.
56:5
وَبُسَّتِ الْجِبَالُ بَسًّا ۞
ಮತ್ತು ಪರ್ವತಗಳು ನುಚ್ಚು ನೂರಾಗಿ ಬಿಡುವವು.
56:6
فَكَانَتْ هَبَاءً مُنْبَثًّا ۞
ಮತ್ತು ಅವು ಧೂಳಾಗಿ ಹಾರಾಡ ತೊಡಗುವವು.
56:7
وَكُنْتُمْ أَزْوَاجًا ثَلَاثَةً ۞
ಮತ್ತು ನೀವು ಮೂರು ವರ್ಗಗಳಾಗುವಿರಿ.
56:8
فَأَصْحَابُ الْمَيْمَنَةِ مَا أَصْحَابُ الْمَيْمَنَةِ ۞
ಬಲ ಭಾಗದವರು. ಎಂತಹ (ಭಾಗ್ಯವಂತರು) ಆ ಬಲಭಾಗದವರು!
56:9
وَأَصْحَابُ الْمَشْأَمَةِ مَا أَصْحَابُ الْمَشْأَمَةِ ۞
ಮತ್ತು ಎಡ ಭಾಗದವರು. ಎಂತಹ (ಭಾಗ್ಯಹೀನರು) ಆ ಎಡ ಭಾಗದವರು!
56:10
وَالسَّابِقُونَ السَّابِقُونَ ۞
ಮತ್ತು ಮುಂದೆ ಹೋದವರು ಮುಂದೆಯೇ ಇರುವರು.
56:11
أُولَٰئِكَ الْمُقَرَّبُونَ ۞
ಅವರು (ಅಲ್ಲಾಹನ) ಸಮೀಪ ವರ್ತಿಗಳಾಗಿರುವರು.
56:12
فِي جَنَّاتِ النَّعِيمِ ۞
(ಅವರು) ಅನುಗ್ರಹಗಳು ತುಂಬಿದ ಉದ್ಯಾನಗಳಲ್ಲಿರುವರು.
56:13
ثُلَّةٌ مِنَ الْأَوَّلِينَ ۞
(ಅವರಲ್ಲಿ) ಹೆಚ್ಚಿನವರು ಹಿಂದಿನ ಕಾಲದವರಾಗಿರುವರು.
56:14
وَقَلِيلٌ مِنَ الْآخِرِينَ ۞
ಮತ್ತು ಕಡಿಮೆ ಮಂದಿ ಅನಂತರದವರಾಗಿರುವರು.
56:15
عَلَىٰ سُرُرٍ مَوْضُونَةٍ ۞
ಅವರು ಸ್ವರ್ಣಾಲಂಕೃತ ಪೀಠಗಳಲ್ಲಿರುವರು.
56:16
مُتَّكِئِينَ عَلَيْهَا مُتَقَابِلِينَ ۞
ಅವುಗಳಲ್ಲಿ ದಿಂಬುಗಳಿಗೊರಗಿ ಎದುರು ಬದುರಾಗಿರುವರು.
56:17
يَطُوفُ عَلَيْهِمْ وِلْدَانٌ مُخَلَّدُونَ ۞
ಶಾಶ್ವತ ಬಾಲಕರು ಅವರ ಸುತ್ತ ಚಲಿಸುತ್ತಿರುವರು -
56:18
بِأَكْوَابٍ وَأَبَارِيقَ وَكَأْسٍ مِنْ مَعِينٍ ۞
- ಲೋಟೆ ಹಾಗೂ ಹೂಜಿಗಳಲ್ಲಿ ಶುದ್ಧವಾದ ಪಾನೀಯಗಳನ್ನು ಹೊತ್ತು.
56:19
لَا يُصَدَّعُونَ عَنْهَا وَلَا يُنْزِفُونَ ۞
ಅದರಿಂದ ಅವರಿಗೆ ತಲೆ ನೋವಾಗದು ಮತ್ತು ಬುದ್ಧಿಯೂ ಮಂದವಾಗದು.
56:20
وَفَاكِهَةٍ مِمَّا يَتَخَيَّرُونَ ۞
(ಅಲ್ಲಿ) ಅವರ ಆಯ್ಕೆಯ ಹಣ್ಣು ಹಂಪಲುಗಳಿರುವವು.
56:21
وَلَحْمِ طَيْرٍ مِمَّا يَشْتَهُونَ ۞
ಅವರು ಅಪೇಕ್ಷಿಸುವ ಪಕ್ಷಿಯ ಮಾಂಸವಿರುವುದು.
56:22
وَحُورٌ عِينٌ ۞
ಮತ್ತು ವಿಶಾಲ ಕಣ್ಣಿನ ಸ್ವರ್ಗ ಕನ್ಯೆಯರಿರುವರು.
56:23
كَأَمْثَالِ اللُّؤْلُؤِ الْمَكْنُونِ ۞
ಅವರು ಜೋಪಾನವಾಗಿ ಮುಚ್ಚಿಟ್ಟ ಮುತ್ತಿನಂತಿರುವರು.
56:24
جَزَاءً بِمَا كَانُوا يَعْمَلُونَ ۞
(ಇದು) ಅವರು ಮಾಡಿದ ಕರ್ಮಗಳ ಪ್ರತಿಫಲ.
56:25
لَا يَسْمَعُونَ فِيهَا لَغْوًا وَلَا تَأْثِيمًا ۞
ಅಲ್ಲಿ ಅವರು ಯಾವುದೇ ಅನಗತ್ಯ ಮಾತನ್ನಾಗಲಿ ಕೆಟ್ಟ ಸಂಭಾಷಣೆಯನ್ನಾಗಲಿ ಕೇಳಲಾರರು.
56:26
إِلَّا قِيلًا سَلَامًا سَلَامًا ۞
‘ಸಲಾಮ್, ಸಲಾಮ್’ (ಶಾಂತಿ, ಶಾಂತಿ) ಎಂಬ ಹಾರೈಕೆಯ ಹೊರತು.
56:27
وَأَصْحَابُ الْيَمِينِ مَا أَصْحَابُ الْيَمِينِ ۞
ಮತ್ತು ಬಲ ಭಾಗದವರು, (ಎಂತಹ ಭಾಗ್ಯವಂತರು) ಆ ಬಲ ಭಾಗದವರು!
56:28
فِي سِدْرٍ مَخْضُودٍ ۞
(ಅವರಿರುವಲ್ಲಿ ಲಭ್ಯವಿರುವವು;) ಮುಳ್ಳಿಲ್ಲದ ಬುಗರಿಗಳು,
56:29
وَطَلْحٍ مَنْضُودٍ ۞
ಗೊನೆ ಗೊನೆಯಾಗಿರುವ ಬಾಳೆ ಹಣ್ಣುಗಳು,
56:30
وَظِلٍّ مَمْدُودٍ ۞
ವ್ಯಾಪಕ ನೆರಳು,
56:31
وَمَاءٍ مَسْكُوبٍ ۞
ಹರಿಯುವ ನೀರು,
56:32
وَفَاكِهَةٍ كَثِيرَةٍ ۞
ಮತ್ತು ಧಾರಾಳ ಹಣ್ಣು ಹಂಪಲುಗಳು.
56:33
لَا مَقْطُوعَةٍ وَلَا مَمْنُوعَةٍ ۞
ಅವು ಎಂದೂ ಮುಗಿದು ಹೋಗಲಾರವು ಮತ್ತು (ಅವುಗಳ ಬಳಕೆಗೆ) ಯಾವುದೇ ಅಡೆತಡೆಯೂ ಇರಲಾರದು.
56:34
وَفُرُشٍ مَرْفُوعَةٍ ۞
(ಅವರು) ಎತ್ತರದ ಆಸನಗಳಲ್ಲಿರುವರು.
56:35
إِنَّا أَنْشَأْنَاهُنَّ إِنْشَاءً ۞
ನಾವೇ ಅವರನ್ನು (ಸ್ವರ್ಗ ಕನ್ಯೆಯರನ್ನು) ಸೃಷ್ಟಿಸಿರುವೆವು.
56:36
فَجَعَلْنَاهُنَّ أَبْكَارًا ۞
ನಾವು ಅವರನ್ನು ಕನ್ಯೆಯರಾಗಿಸಿರುವೆವು.
56:37
عُرُبًا أَتْرَابًا ۞
ಪ್ರೀತಿಪಾತ್ರರಾಗಿ, ಸಹವಯಸ್ಕರಾಗಿ ಮಾಡಿರುವೆವು -
56:38
لِأَصْحَابِ الْيَمِينِ ۞
- ಬಲಭಾಗದವರಿಗಾಗಿ.
56:39
ثُلَّةٌ مِنَ الْأَوَّلِينَ ۞
(ಅವರಲ್ಲಿ) ಹಿಂದಿನವರೂ ಹೆಚ್ಚಿನ ಸಂಖ್ಯೆಯಲ್ಲಿರುವರು.
56:40
وَثُلَّةٌ مِنَ الْآخِرِينَ ۞
ಮತ್ತು ಮುಂದಿನವರೂ ಹೆಚ್ಚಿನ ಸಂಖ್ಯೆಯಲ್ಲಿರುವರು.
56:41
وَأَصْحَابُ الشِّمَالِ مَا أَصْحَابُ الشِّمَالِ ۞
ಇನ್ನು ಎಡಭಾಗದವರು. (ಎಂತಹ ಭಾಗ್ಯಹೀನರು) ಆ ಎಡಭಾಗದವರು.
56:42
فِي سَمُومٍ وَحَمِيمٍ ۞
ಅವರು ಉರಿಯುವ ಗಾಳಿ ಹಾಗೂ ಕುದಿಯುವ ನೀರಿನಲ್ಲಿರುವರು.
56:43
وَظِلٍّ مِنْ يَحْمُومٍ ۞
ಕರಾಳ ಹೊಗೆಯ ನೆರಳಲ್ಲಿರುವರು.
56:44
لَا بَارِدٍ وَلَا كَرِيمٍ ۞
ಅದರಲ್ಲಿ ತಂಪೂ ಇರದು, ಹಿತವೂ ಇರದು.
56:45
إِنَّهُمْ كَانُوا قَبْلَ ذَٰلِكَ مُتْرَفِينَ ۞
ಈ ಹಿಂದೆ ಅವರು ಭಾರೀ ಸುಖ ಭೋಗದಲ್ಲಿದ್ದರು.
56:46
وَكَانُوا يُصِرُّونَ عَلَى الْحِنْثِ الْعَظِيمِ ۞
ಮಹಾ ಪಾಪ ಕೃತ್ಯಗಳಲ್ಲಿ ತಲ್ಲೀನರಾಗಿ ಉದ್ಧಟರಾಗಿದ್ದರು.
56:47
وَكَانُوا يَقُولُونَ أَئِذَا مِتْنَا وَكُنَّا تُرَابًا وَعِظَامًا أَإِنَّا لَمَبْعُوثُونَ ۞
ಮತ್ತು ಅವರು ಹೇಳುತ್ತಿದ್ದರು; ನಾವು ಸತ್ತು ಮಣ್ಣಾಗಿ ಹಾಗೂ ಎಲುಬುಗಳಾಗಿ ಮಾರ್ಪಟ್ಟ ಬಳಿಕ, ನಮ್ಮನ್ನೇನು ಮತ್ತೆ ಜೀವಂತ ಗೊಳಿಸಲಾಗುವುದೇ?
56:48
أَوَآبَاؤُنَا الْأَوَّلُونَ ۞
ನಮ್ಮ ತಾತ ಮುತ್ತಾತಂದಿರನ್ನೂ (ಜೀವಂತಗೊಳಿಸಲಾಗುವುದೇ)?
56:49
قُلْ إِنَّ الْأَوَّلِينَ وَالْآخِرِينَ ۞
ಹೇಳಿರಿ; ಖಂಡಿತವಾಗಿಯೂ ಹಿಂದಿನವರನ್ನೂ ಮುಂದಿನವರನ್ನೂ,
56:50
لَمَجْمُوعُونَ إِلَىٰ مِيقَاتِ يَوْمٍ مَعْلُومٍ ۞
ಒಂದು ನಿರ್ದಿಷ್ಟ ದಿನದ ವೇಳೆ ಒಟ್ಟು ಸೇರಿಸಲಾಗುವುದು.
56:51
ثُمَّ إِنَّكُمْ أَيُّهَا الضَّالُّونَ الْمُكَذِّبُونَ ۞
ಆ ಬಳಿಕ ಓ ದಾರಿಗೆಟ್ಟ ಧಿಕ್ಕಾರಿಗಳೇ, ನೀವು,
56:52
لَآكِلُونَ مِنْ شَجَرٍ مِنْ زَقُّومٍ ۞
‘ಝಕ್ಕೂಮ್’ ಮರದ ಭಾಗವನ್ನು ತಿನ್ನಬೇಕಾಗುವುದು.
56:53
فَمَالِئُونَ مِنْهَا الْبُطُونَ ۞
ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾಗುವುದು.
56:54
فَشَارِبُونَ عَلَيْهِ مِنَ الْحَمِيمِ ۞
ಅದರ ಜೊತೆಗೆ ಕುದಿಯುವ ನೀರನ್ನೂ ಕುಡಿಯಬೇಕಾಗುವುದು.
56:55
فَشَارِبُونَ شُرْبَ الْهِيمِ ۞
ಬಾಯಾರಿದ ಒಂಟೆಯಂತೆ ಅದನ್ನು ನೀವು ಕುಡಿಯುವಿರಿ.
56:56
هَٰذَا نُزُلُهُمْ يَوْمَ الدِّينِ ۞
ಇದುವೇ, ಪ್ರತಿಫಲದ ದಿನ ಅವರಿಗೆ ಸಿಗಲಿರುವ ಆತಿಥ್ಯ.
56:57
نَحْنُ خَلَقْنَاكُمْ فَلَوْلَا تُصَدِّقُونَ ۞
ನಾವು ನಿಮ್ಮನ್ನು ಸೃಷ್ಟಿಸಿರುವೆವು. ಇಷ್ಟಾಗಿಯೂ ನೀವೇಕೆ (ಅದನ್ನು) ಅಂಗೀಕರಿಸುವುದಿಲ್ಲ?
56:58
أَفَرَأَيْتُمْ مَا تُمْنُونَ ۞
ನೀವು (ಗರ್ಭದೊಳಕ್ಕೆ) ಹರಿಸಿ ಬಿಡುವ ವಸ್ತುವನ್ನು (ವೀರ್ಯವನ್ನು) ನೀವು ನೋಡಿದಿರಾ?
56:59
أَأَنْتُمْ تَخْلُقُونَهُ أَمْ نَحْنُ الْخَالِقُونَ ۞
ಅದನ್ನು (ಶಿಶುವಾಗಿ) ಸೃಷ್ಟಿಸುವವರು ನೀವೋ, ಅಥವಾ ನಾವು ಅದರ ಸೃಷ್ಟಿಕರ್ತರೋ?
56:60
نَحْنُ قَدَّرْنَا بَيْنَكُمُ الْمَوْتَ وَمَا نَحْنُ بِمَسْبُوقِينَ ۞
ನಾವು ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿ ಬಿಟ್ಟಿರುವೆವು. ಮತ್ತು ನಾವು ಖಂಡಿತ ಅಶಕ್ತರಲ್ಲ,
56:61
عَلَىٰ أَنْ نُبَدِّلَ أَمْثَالَكُمْ وَنُنْشِئَكُمْ فِي مَا لَا تَعْلَمُونَ ۞
- ನಿಮ್ಮ ಬದಲಿಗೆ ನಿಮ್ಮಂತಹ ಇತರರನ್ನು ತರುವುದಕ್ಕೆ ಮತ್ತು ನಿಮಗೆ ಅರಿವೇ ಇಲ್ಲದ ಸ್ಥಳದಲ್ಲಿ ನಿಮ್ಮನ್ನು ಜೀವಂತಗೊಳಿಸುವುದಕ್ಕೆ.
56:62
وَلَقَدْ عَلِمْتُمُ النَّشْأَةَ الْأُولَىٰ فَلَوْلَا تَذَكَّرُونَ ۞
(ನಿಮ್ಮ) ಪ್ರಥಮ ಜನನದ ಕುರಿತು ನಿಮಗೆ ಖಂಡಿತ ತಿಳಿದಿದೆ. ಹೀಗಿರುತ್ತಾ ನೀವೇಕೆ ಚಿಂತನೆ ನಡೆಸುವುದಿಲ್ಲ?
56:63
أَفَرَأَيْتُمْ مَا تَحْرُثُونَ ۞
ನೀವು ಬಿತ್ತುವ ವಸ್ತುವನ್ನು ನೀವು ನೋಡಿದಿರಾ?
56:64
أَأَنْتُمْ تَزْرَعُونَهُ أَمْ نَحْنُ الزَّارِعُونَ ۞
ಅದನ್ನು (ಆ ಬೀಜವನ್ನು, ಬೆಳೆಯಾಗಿ) ಬೆಳೆಸುವವರು ನೀವೋ ಅಥವಾ ನಾವು ಅದರ ಬೆಳೆಗಾರರೋ?
56:65
لَوْ نَشَاءُ لَجَعَلْنَاهُ حُطَامًا فَظَلْتُمْ تَفَكَّهُونَ ۞
ನಾವು ಬಯಸಿದರೆ ಅದನ್ನು ಕೇವಲ ಹೊಟ್ಟಾಗಿಸಿ ಬಿಡಬಲ್ಲೆವು ಮತ್ತು ನೀವು ಏನೇನೋ ಹತಾಶ ಮಾತುಗಳನ್ನಾಡುತ್ತಾ ಉಳಿಯ ಬೇಕಾಗುವುದು -
56:66
إِنَّا لَمُغْرَمُونَ ۞
- ನಾವು ಸಂಪೂರ್ಣವಾಗಿ ದಂಡನೆಗೆ ತುತ್ತಾದೆವೆಂದು,
56:67
بَلْ نَحْنُ مَحْرُومُونَ ۞
ಮತ್ತು ನಾವು ಸಂಪೂರ್ಣ ವಂಚಿತರಾಗಿ ಬಿಟ್ಟೆವೆಂದು.
56:68
أَفَرَأَيْتُمُ الْمَاءَ الَّذِي تَشْرَبُونَ ۞
ನೀವು ಕುಡಿಯುವ ನೀರನ್ನು ನೀವು ನೋಡಿದಿರಾ?
56:69
أَأَنْتُمْ أَنْزَلْتُمُوهُ مِنَ الْمُزْنِ أَمْ نَحْنُ الْمُنْزِلُونَ ۞
ಅದನ್ನು ಮೋಡಗಳ ಮೂಲಕ ಸುರಿಸುವವರು ನೀವೋ ಅಥವಾ ಸುರಿಸುವವರು ನಾವೋ?
56:70
لَوْ نَشَاءُ جَعَلْنَاهُ أُجَاجًا فَلَوْلَا تَشْكُرُونَ ۞
ನಾವು ಬಯಸಿದರೆ ಅದನ್ನು ಉಪ್ಪು ನೀರಾಗಿಸ ಬಲ್ಲೆವು. ಇಷ್ಟಾಗಿಯೂ ನೀವೇಕೆ ಕೃತಜ್ಞರಾಗುವುದಿಲ್ಲ?
56:71
أَفَرَأَيْتُمُ النَّارَ الَّتِي تُورُونَ ۞
ನೀವು ಉರಿಸುವ ಬೆಂಕಿಯನ್ನು ನೀವು ನೋಡಿದಿರಾ?
56:72
أَأَنْتُمْ أَنْشَأْتُمْ شَجَرَتَهَا أَمْ نَحْنُ الْمُنْشِئُونَ ۞
ಅದರ ಮರವನ್ನು ಹುಟ್ಟಿಸುವವರು ನೀವೋ ಅಥವಾ ಹುಟ್ಟಿಸುವವರು ನಾವೋ?
56:73
نَحْنُ جَعَلْنَاهَا تَذْكِرَةً وَمَتَاعًا لِلْمُقْوِينَ ۞
ಅದನ್ನು ನಾವು, (ನರಕವನ್ನು) ನೆನಪಿಸುವ ಸಾಧನವಾಗಿಸಿರುವೆವು ಮತ್ತು ಪ್ರಯಾಣಿಕರ ಪಾಲಿಗೆ ಲಾಭದಾಯಕವಾಗಿಸಿರುವೆವು.
56:74
فَسَبِّحْ بِاسْمِ رَبِّكَ الْعَظِيمِ ۞
ನೀವೀಗ ನಿಮ್ಮ ಮಹಾನ್ ಒಡೆಯನ ಹೆಸರಿನ ಪಾವಿತ್ರ್ಯವನ್ನು ಜಪಿಸಿರಿ.
56:75
۞ فَلَا أُقْسِمُ بِمَوَاقِعِ النُّجُومِ ۞
ನಾನಿದೋ, ನಕ್ಷತ್ರಗಳು ಪತನವಾಗುವ ನೆಲೆಯ ಆಣೆ ಹಾಕುತ್ತೇನೆ.
56:76
وَإِنَّهُ لَقَسَمٌ لَوْ تَعْلَمُونَ عَظِيمٌ ۞
ನೀವು ಅರ್ಥ ಮಾಡಿಕೊಳ್ಳುವುದಾದರೆ ಇದು ನಿಜಕ್ಕೂ ಒಂದು ಮಹಾನ್ ಪ್ರಮಾಣವಾಗಿದೆ.
56:77
إِنَّهُ لَقُرْآنٌ كَرِيمٌ ۞
ಈ ಕುರ್‌ಆನ್, ಖಂಡಿತ ಗೌರವಾನ್ವಿತವಾಗಿದೆ.
56:78
فِي كِتَابٍ مَكْنُونٍ ۞
ಇದೊಂದು ಸುರಕ್ಷಿತ ಗ್ರಂಥದಲ್ಲಿದೆ.
56:79
لَا يَمَسُّهُ إِلَّا الْمُطَهَّرُونَ ۞
ಪಾವನರಲ್ಲದವರು ಅದನ್ನು ಮುಟ್ಟುವುದಿಲ್ಲ.
56:80
تَنْزِيلٌ مِنْ رَبِّ الْعَالَمِينَ ۞
ಸಕಲ ಲೋಕಗಳ ಒಡೆಯನು ಇದನ್ನು ಇಳಿಸಿ ಕೊಟ್ಟಿರುವನು.
56:81
أَفَبِهَٰذَا الْحَدِيثِ أَنْتُمْ مُدْهِنُونَ ۞
ನೀವೇನು ಈ ಸಂದೇಶವನ್ನು ಕಡೆಗಣಿಸುತ್ತಿರುವಿರಾ?
56:82
وَتَجْعَلُونَ رِزْقَكُمْ أَنَّكُمْ تُكَذِّبُونَ ۞
ಮತ್ತು ನಿಮಗೆ ನೀಡಲಾಗಿರುವ ಕೊಡುಗೆಯನ್ನು ಅಲ್ಲಗಳೆಯುತ್ತಿರುವಿರಾ?
56:83
فَلَوْلَا إِذَا بَلَغَتِ الْحُلْقُومَ ۞
ಹಾಗಾದರೆ, (ನಿಮ್ಮ ಆಪ್ತನ) ಜೀವವು ಕೊರಳಿಗೆ ಮುಟ್ಟಿದಾಗ,
56:84
وَأَنْتُمْ حِينَئِذٍ تَنْظُرُونَ ۞
ಆಗ ನೀವು ಕೇವಲ ನೋಡುತ್ತಿರುತ್ತೀರಿ.
56:85
وَنَحْنُ أَقْرَبُ إِلَيْهِ مِنْكُمْ وَلَٰكِنْ لَا تُبْصِرُونَ ۞
ಮತ್ತು ಆಗ ನಾವು ಆತನಿಗೆ, ನಿಮಗಿಂತ ಸಮೀಪವಿರುತ್ತೇವೆ - ಆದರೆ ನಿಮಗೆ ಕಾಣಿಸುವುದಿಲ್ಲ.
56:86
فَلَوْلَا إِنْ كُنْتُمْ غَيْرَ مَدِينِينَ ۞
ನೀವು ಸ್ವತಂತ್ರರಾಗಿದ್ದರೆ, ಹೀಗೇಕೆ?
56:87
تَرْجِعُونَهَا إِنْ كُنْتُمْ صَادِقِينَ ۞
ನೀವು ಸತ್ಯವಂತರಾಗಿದ್ದರೆ, ಅದನ್ನು (ಆತನ ಆತ್ಮವನ್ನು) ಮರಳಿಸಿರಿ -
56:88
فَأَمَّا إِنْ كَانَ مِنَ الْمُقَرَّبِينَ ۞
ಅವನು (ಅಲ್ಲಾಹನ) ಆಪ್ತನಾಗಿದ್ದರೆ -
56:89
فَرَوْحٌ وَرَيْحَانٌ وَجَنَّتُ نَعِيمٍ ۞
(ಅವನಿಗಾಗಿ) ಕಂಪು ತುಂಬಿದ ಪುಷ್ಪಗಳು ಹಾಗೂ ಅನುಗ್ರಹ ತುಂಬಿದ ಸ್ವರ್ಗೋದ್ಯಾನಗಳಿವೆ.
56:90
وَأَمَّا إِنْ كَانَ مِنْ أَصْحَابِ الْيَمِينِ ۞
ಇನ್ನು ಅವನು, ಬಲಭಾಗದವನಾಗಿದ್ದರೆ, -
56:91
فَسَلَامٌ لَكَ مِنْ أَصْحَابِ الْيَمِينِ ۞
‘‘ಬಲಭಾಗದವರ ಕಡೆಯಿಂದ ನಿನಗೆ ಸಲಾಮ್ (ಶಾಂತಿ)’’ (ಎಂದು ಹಾರೈಸಲಾಗುವುದು).
56:92
وَأَمَّا إِنْ كَانَ مِنَ الْمُكَذِّبِينَ الضَّالِّينَ ۞
ಅವನು ಸತ್ಯವನ್ನು ತಿರಸ್ಕರಿಸಿ, ದಾರಿಗೆಟ್ಟವನಾಗಿದ್ದರೆ -
56:93
فَنُزُلٌ مِنْ حَمِيمٍ ۞
ಅವನ ಆತಿಥ್ಯಕ್ಕೆ ಕುದಿಯುವ ನೀರು ಇರುವುದು.
56:94
وَتَصْلِيَةُ جَحِيمٍ ۞
ಮತ್ತು ಅವನನ್ನು ನರಕಾಗ್ನಿಗೆ ಎಸೆಯಲಾಗುವುದು.
56:95
إِنَّ هَٰذَا لَهُوَ حَقُّ الْيَقِينِ ۞
ಇದು ಖಚಿತ ಸಂಭವವಾಗಿದೆ.
56:96
فَسَبِّحْ بِاسْمِ رَبِّكَ الْعَظِيمِ ۞
(ದೂತರೇ,) ನೀವು ನಿಮ್ಮ ಮಹಾನ್ ಒಡೆಯನ ನಾಮದೊಂದಿಗೆ, ಅವನ ಪಾವಿತ್ರ್ಯವನ್ನು ಜಪಿಸಿರಿ.