Al-Mu'minun (The believers)
23. ಅಲ್ ಮುಅ್ಮಿನೂನ್(ವಿಶ್ವಾಸಿಗಳು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
23:1
قَدْ أَفْلَحَ الْمُؤْمِنُونَ ۞
ವಿಶ್ವಾಸಿಗಳು ಖಂಡಿತ ವಿಜಯಿಗಳಾದರು.
23:2
الَّذِينَ هُمْ فِي صَلَاتِهِمْ خَاشِعُونَ ۞
ಅವರು ತಮ್ಮ ನಮಾಝ್‌ಗಳಲ್ಲಿ ಭಯಭಕ್ತಿ ಉಳ್ಳವರಾಗಿರುತ್ತಾರೆ.
23:3
وَالَّذِينَ هُمْ عَنِ اللَّغْوِ مُعْرِضُونَ ۞
ಅನಗತ್ಯ ಕಾರ್ಯಗಳಿಂದ ದೂರ ಉಳಿದಿರುತ್ತಾರೆ.
23:4
وَالَّذِينَ هُمْ لِلزَّكَاةِ فَاعِلُونَ ۞
ಶುಚಿತ್ವವನ್ನು ಪಾಲಿಸುತ್ತಾರೆ.
23:5
وَالَّذِينَ هُمْ لِفُرُوجِهِمْ حَافِظُونَ ۞
ತಮ್ಮ ಮಾನವನ್ನು ಕಾಪಾಡಿಕೊಂಡಿರುತ್ತಾರೆ.
23:6
إِلَّا عَلَىٰ أَزْوَاجِهِمْ أَوْ مَا مَلَكَتْ أَيْمَانُهُمْ فَإِنَّهُمْ غَيْرُ مَلُومِينَ ۞
ತಮ್ಮ ಪತ್ನಿಯರು ಮತ್ತು ದಾಸಿಯರ ವಿಷಯದಲ್ಲಿ ಮಾತ್ರ ಅವರು ನಿಂದನೀಯರಲ್ಲ.
23:7
فَمَنِ ابْتَغَىٰ وَرَاءَ ذَٰلِكَ فَأُولَٰئِكَ هُمُ الْعَادُونَ ۞
ಅದರಾಚೆಗೆ ಏನನ್ನಾದರೂ ಅಪೇಕ್ಷಿಸುವವರೇ ಅತಿಕ್ರಮಿಗಳು.
23:8
وَالَّذِينَ هُمْ لِأَمَانَاتِهِمْ وَعَهْدِهِمْ رَاعُونَ ۞
ಅವರು (ವಿಜಯಿ ವಿಶ್ವಾಸಿಗಳು) ತಮ್ಮ ಮೇಲಿಡಲಾದ ನಂಬಿಕೆಯನ್ನು ಉಳಿಸಿಕೊಳ್ಳುವವರು ಹಾಗೂ ತಾವು ಮಾಡಿದ ಒಪ್ಪಂದವನ್ನು ಪಾಲಿಸುವವರಾಗಿರುತ್ತಾರೆ.
23:9
وَالَّذِينَ هُمْ عَلَىٰ صَلَوَاتِهِمْ يُحَافِظُونَ ۞
ಅವರು ತಮ್ಮ ನಮಾಝ್‌ಗಳನ್ನು ಕಾಪಾಡುತ್ತಾರೆ.
23:10
أُولَٰئِكَ هُمُ الْوَارِثُونَ ۞
ಅವರೇ ಉತ್ತರಾಧಿಕಾರಿಗಳು.
23:11
الَّذِينَ يَرِثُونَ الْفِرْدَوْسَ هُمْ فِيهَا خَالِدُونَ ۞
ಅವರು ಫಿರ್‌ದೌಸ್‌ನ (ಸ್ವರ್ಗದ) ಉತ್ತರಾಧಿಕಾರಿಗಳಾಗುವರು ಮತ್ತು ಅದರಲ್ಲಿ ಸದಾಕಾಲ ಇರುವರು.
23:12
وَلَقَدْ خَلَقْنَا الْإِنْسَانَ مِنْ سُلَالَةٍ مِنْ طِينٍ ۞
ನಾವು ಮನುಷ್ಯನನ್ನು ಮಣ್ಣಿನ ಸತ್ವದಿಂದ ಸೃಷ್ಟಿಸಿದೆವು.
23:13
ثُمَّ جَعَلْنَاهُ نُطْفَةً فِي قَرَارٍ مَكِينٍ ۞
ಆ ಬಳಿಕ ನಾವು ಅವನನ್ನು ವೀರ್ಯದ ರೂಪದಲ್ಲಿ ಒಂದು ಸ್ಥಿರವಾದ ಸ್ಥಾನದಲ್ಲಿ ನೆಲೆಸಿದೆವು.
23:14
ثُمَّ خَلَقْنَا النُّطْفَةَ عَلَقَةً فَخَلَقْنَا الْعَلَقَةَ مُضْغَةً فَخَلَقْنَا الْمُضْغَةَ عِظَامًا فَكَسَوْنَا الْعِظَامَ لَحْمًا ثُمَّ أَنْشَأْنَاهُ خَلْقًا آخَرَ ۚ فَتَبَارَكَ اللَّهُ أَحْسَنُ الْخَالِقِينَ ۞
ತರುವಾಯ ನಾವು ವೀರ್ಯವನ್ನು ರಕ್ತದ ಪಿಂಡವಾಗಿಸಿದೆವು ಮತ್ತು ಆ ರಕ್ತದ ಪಿಂಡವನ್ನು ಮಾಂಸಪಿಂಡವಾಗಿಸಿದೆವು ಮತ್ತು ಆ ಮಾಂಸಪಿಂಡದಿಂದ ಎಲುಬುಗಳನ್ನು ಸೃಷ್ಟಿಸಿದೆವು ಮತ್ತು ಎಲುಬುಗಳಿಗೆ ಮಾಂಸದ ಉಡುಗೆಯನ್ನು ತೊಡಿಸಿದೆವು. ಅನಂತರ ನಾವು ಆತನನ್ನು ಒಂದು ಹೊಸ ರೂಪದಲ್ಲಿ ಹುಟ್ಟಿಸಿದೆವು. ಅಲ್ಲಾಹನು ಸಮೃದ್ಧನು ಮತ್ತು ಅವನು ಅತ್ಯುತ್ತಮ ಸೃಷ್ಟಿಕರ್ತನು.
23:15
ثُمَّ إِنَّكُمْ بَعْدَ ذَٰلِكَ لَمَيِّتُونَ ۞
ಇದಾದ ಬಳಿಕ ನೀವು ಖಂಡಿತ ಸಾಯುವಿರಿ.
23:16
ثُمَّ إِنَّكُمْ يَوْمَ الْقِيَامَةِ تُبْعَثُونَ ۞
ಮತ್ತೆ ಪುನರುತ್ಥಾನ ದಿನ ನಿಮ್ಮನ್ನು ಖಂಡಿತ ಜೀವಂತಗೊಳಿಸಿ ಎಬ್ಬಿಸಲಾಗುವುದು.
23:17
وَلَقَدْ خَلَقْنَا فَوْقَكُمْ سَبْعَ طَرَائِقَ وَمَا كُنَّا عَنِ الْخَلْقِ غَافِلِينَ ۞
ನಿಮ್ಮ ಮೇಲೆ ನಾವು ಏಳು ದಾರಿಗಳನ್ನು ನಿರ್ಮಿಸಿರುವೆವು. ಸೃಷ್ಟಿಗಳ ಕುರಿತು ನಾವೆಂದೂ ಅಜಾಗೃತರಾಗಿರಲಿಲ್ಲ.
23:18
وَأَنْزَلْنَا مِنَ السَّمَاءِ مَاءً بِقَدَرٍ فَأَسْكَنَّاهُ فِي الْأَرْضِ ۖ وَإِنَّا عَلَىٰ ذَهَابٍ بِهِ لَقَادِرُونَ ۞
ಮತ್ತು ನಾವು ಆಕಾಶದಿಂದ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಇಳಿಸುವೆವು ಹಾಗೂ ಅದನ್ನು ಭೂಮಿಯಲ್ಲಿ ಉಳಿಸುವೆವು. ಅದನ್ನು ತೊಲಗಿಸುವುದಕ್ಕೂ ನಾವು ಶಕ್ತರಾಗಿದ್ದೇವೆ.
23:19
فَأَنْشَأْنَا لَكُمْ بِهِ جَنَّاتٍ مِنْ نَخِيلٍ وَأَعْنَابٍ لَكُمْ فِيهَا فَوَاكِهُ كَثِيرَةٌ وَمِنْهَا تَأْكُلُونَ ۞
ಅದರ (ನೀರಿನ) ಮೂಲಕ ನಾವು ನಿಮಗಾಗಿ ಖರ್ಜೂರ ಹಾಗೂ ದ್ರಾಕ್ಷಿಯ ತೋಟಗಳನ್ನು ಬೆಳೆಸುತ್ತೇವೆ. ಅದರಿಂದ ಇನ್ನೂ ಅನೇಕ ಫಲಗಳು ಬೆಳೆಯುತ್ತವೆ ಮತ್ತು ನೀವು ಅವುಗಳನ್ನು ತಿನ್ನುತ್ತೀರಿ.
23:20
وَشَجَرَةً تَخْرُجُ مِنْ طُورِ سَيْنَاءَ تَنْبُتُ بِالدُّهْنِ وَصِبْغٍ لِلْآكِلِينَ ۞
ಇನ್ನು, ಸಿನಾಯ್ ಪರ್ವತದಲ್ಲಿ ಹುಟ್ಟುವ (ಝೈತೂನ್) ಮರವು, ತೈಲದೊಂದಿಗೆ ಹಾಗೂ ತಿನ್ನುವವರಿಗಾಗಿ, ಸ್ವಾದಿಷ್ಟ ಖಾದ್ಯಗಳೊಂದಿಗೆ ಬೆಳೆಯುತ್ತದೆ.
23:21
وَإِنَّ لَكُمْ فِي الْأَنْعَامِ لَعِبْرَةً ۖ نُسْقِيكُمْ مِمَّا فِي بُطُونِهَا وَلَكُمْ فِيهَا مَنَافِعُ كَثِيرَةٌ وَمِنْهَا تَأْكُلُونَ ۞
ಜಾನುವಾರುಗಳಲ್ಲೂ ನಿಮಗೆ ಖಂಡಿತ ಪಾಠವಿದೆ. ಅವುಗಳ ಹೊಟ್ಟೆಯಲ್ಲಿರುವುದನ್ನು (ಹಾಲನ್ನು) ನಾವು ನಿಮಗೆ ಕುಡಿಸುತ್ತೇವೆ. ಅವುಗಳಲ್ಲಿ ನಿಮಗೆ (ಇತರ) ಹಲವಾರು ಪ್ರಯೋಜನಗಳಿವೆ ಮತ್ತು ಅವುಗಳಲ್ಲಿ (ಕೆಲವನ್ನು) ನೀವು ತಿನ್ನುತ್ತೀರಿ.
23:22
وَعَلَيْهَا وَعَلَى الْفُلْكِ تُحْمَلُونَ ۞
ಅವುಗಳ ಮೇಲೂ ಹಡಗುಗಳಲ್ಲೂ ನೀವು ಪ್ರಯಾಣಿಸುತ್ತೀರಿ.
23:23
وَلَقَدْ أَرْسَلْنَا نُوحًا إِلَىٰ قَوْمِهِ فَقَالَ يَا قَوْمِ اعْبُدُوا اللَّهَ مَا لَكُمْ مِنْ إِلَٰهٍ غَيْرُهُ ۖ أَفَلَا تَتَّقُونَ ۞
ಈ ಹಿಂದೆ ನಾವು ನೂಹ್‌ರನ್ನು ಅವರ ಜನಾಂಗದವರೆಡೆಗೆ ರವಾನಿಸಿದ್ದೆವು. ‘‘ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನೀವೇನು ಅಂಜುವುದಿಲ್ಲವೇ?’’ ಎಂದು ಅವರು ಉಪದೇಶಿಸಿದರು.
23:24
فَقَالَ الْمَلَأُ الَّذِينَ كَفَرُوا مِنْ قَوْمِهِ مَا هَٰذَا إِلَّا بَشَرٌ مِثْلُكُمْ يُرِيدُ أَنْ يَتَفَضَّلَ عَلَيْكُمْ وَلَوْ شَاءَ اللَّهُ لَأَنْزَلَ مَلَائِكَةً مَا سَمِعْنَا بِهَٰذَا فِي آبَائِنَا الْأَوَّلِينَ ۞
ಅವರ ಜನಾಂಗದಲ್ಲಿದ್ದ ಕೆಲವು ಧಿಕ್ಕಾರಿ ನಾಯಕರು ಹೇಳಿದರು; ಅವನು ಕೇವಲ ಒಬ್ಬ ಮನುಷ್ಯ. ಅವನು ನಿಮಗಿಂತ ಹಿರಿಮೆ ಉಳ್ಳವನಾಗಬಯಸುತ್ತಾನೆ. ಅಲ್ಲಾಹನು ಬಯಸಿದ್ದರೆ (ದೂತರಾಗಿ) ಮಲಕ್‌ಗಳನ್ನು ಕಳುಹಿಸುತ್ತಿದ್ದನು. ನಾವು ನಮ್ಮ ಪೂರ್ವಜರಿಂದ ಇಂತಹದೇನನ್ನೂ ಕೇಳಿಲ್ಲ.
23:25
إِنْ هُوَ إِلَّا رَجُلٌ بِهِ جِنَّةٌ فَتَرَبَّصُوا بِهِ حَتَّىٰ حِينٍ ۞
ಅವನು ಖಂಡಿತ ಹುಚ್ಚು ಹಿಡಿದ ವ್ಯಕ್ತಿ. ನೀವು ಸ್ವಲ್ಪಕಾಲ ಕಾದು ನೋಡಿರಿ.
23:26
قَالَ رَبِّ انْصُرْنِي بِمَا كَذَّبُونِ ۞
ಅವರು (ನೂಹ್) ಹೇಳಿದರು; ನನ್ನೊಡೆಯಾ, ಅವರು ನನ್ನನ್ನು ತಿರಸ್ಕರಿಸಿದ್ದಾರೆ. ಈಗ ನೀನೇ ನನಗೆ ನೆರವಾಗು.
23:27
فَأَوْحَيْنَا إِلَيْهِ أَنِ اصْنَعِ الْفُلْكَ بِأَعْيُنِنَا وَوَحْيِنَا فَإِذَا جَاءَ أَمْرُنَا وَفَارَ التَّنُّورُ ۙ فَاسْلُكْ فِيهَا مِنْ كُلٍّ زَوْجَيْنِ اثْنَيْنِ وَأَهْلَكَ إِلَّا مَنْ سَبَقَ عَلَيْهِ الْقَوْلُ مِنْهُمْ ۖ وَلَا تُخَاطِبْنِي فِي الَّذِينَ ظَلَمُوا ۖ إِنَّهُمْ مُغْرَقُونَ ۞
ಆಗ ನಾವು ಅವರೆಡೆಗೆ (ಹೀಗೆಂದು) ದಿವ್ಯವಾಣಿಯನ್ನು ಕಳಿಸಿದೆವು; ನೀವು ನಮ್ಮ ಮೇಲ್ವಿಚಾರಣೆಯಲ್ಲಿ ಹಾಗೂ ನಮ್ಮ ದಿವ್ಯವಾಣಿಯನುಸಾರ ಒಂದು ಹಡಗನ್ನು ನಿರ್ಮಿಸಿರಿ. ತರುವಾಯ, ನಮ್ಮ ಆದೇಶ ಬಂದಾಗ ಹಾಗೂ ಚಿಲುಮೆಯು ಉಕ್ಕಿ ಹರಿದಾಗ, ಎಲ್ಲ ಜಾತಿಯ ಜೋಡಿ (ಗಂಡು ಹೆಣ್ಣು) ಗಳನ್ನು ಮತ್ತು ನಿಮ್ಮ ಮನೆಯವರ ಪೈಕಿ, ಈಗಾಗಲೇ ತೀರ್ಮಾನವಾಗಿರುವವರ ಹೊರತು, ಇತರರನ್ನು ಅದರಲ್ಲಿ ಕೂರಿಸಿರಿ. ಮತ್ತು ನೀವು ಅಕ್ರಮಿಗಳ ಕುರಿತು ನನ್ನೊಡನೆ ಮಾತನಾಡಬೇಡಿ. ಅವರನ್ನು ಖಂಡಿತ ಮುಳುಗಿಸಲಾಗುವುದು.
23:28
فَإِذَا اسْتَوَيْتَ أَنْتَ وَمَنْ مَعَكَ عَلَى الْفُلْكِ فَقُلِ الْحَمْدُ لِلَّهِ الَّذِي نَجَّانَا مِنَ الْقَوْمِ الظَّالِمِينَ ۞
ಹೀಗೆ ನೀವು ಮತ್ತು ನಿಮ್ಮ ಜೊತೆಗಿರುವವರು, ಹಡಗನ್ನೇರಿದ ಬಳಿಕ, ‘‘ಹೊಗಳಿಕೆಗಳೆಲ್ಲವೂ ನಮ್ಮನ್ನು ಅಕ್ರಮಿಗಳಿಂದ ರಕ್ಷಿಸಿದ ಅಲ್ಲಾಹನಿಗೆ ಸಲ್ಲಲಿ’’ ಎಂದು ಹೇಳಿರಿ.
23:29
وَقُلْ رَبِّ أَنْزِلْنِي مُنْزَلًا مُبَارَكًا وَأَنْتَ خَيْرُ الْمُنْزِلِينَ ۞
ಮತ್ತು ಹೇಳಿರಿ; ‘‘ನನ್ನೊಡೆಯಾ, ನನ್ನನ್ನು ಒಂದು ಸಮೃದ್ಧ ನೆಲೆಗೆ ತಲುಪಿಸು. ನೀನೇ ಅತ್ಯುತ್ತಮ ನೆಲೆಯನ್ನು ಒದಗಿಸುವವನು.’’
23:30
إِنَّ فِي ذَٰلِكَ لَآيَاتٍ وَإِنْ كُنَّا لَمُبْتَلِينَ ۞
ಇದರಲ್ಲಿ ಖಂಡಿತವಾಗಿಯೂ ಪಾಠಗಳಿವೆ ಮತ್ತು ನಾವು ಪರೀಕ್ಷಿಸುತ್ತಲೇ ಇರುತ್ತೇವೆ.
23:31
ثُمَّ أَنْشَأْنَا مِنْ بَعْدِهِمْ قَرْنًا آخَرِينَ ۞
ಮುಂದೆ ನಾವು ಅವರ ಬಳಿಕ ಬೇರೊಂದು ಪೀಳಿಗೆಯನ್ನು ಸೃಷ್ಟಿಸಿದೆವು.
23:32
فَأَرْسَلْنَا فِيهِمْ رَسُولًا مِنْهُمْ أَنِ اعْبُدُوا اللَّهَ مَا لَكُمْ مِنْ إِلَٰهٍ غَيْرُهُ ۖ أَفَلَا تَتَّقُونَ ۞
ಮತ್ತು ನಾವು ಅವರೆಡೆಗೆ, ಅವರೊಳಗಿಂದಲೇ, ‘‘ಅಲ್ಲಾಹನನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಬೇರೆ ದೇವರಿಲ್ಲ. ನೀವೇನು ಅಂಜುವುದಿಲ್ಲವೇ?’’ (ಎಂದು ಸಾರುವ) ದೂತರನ್ನು ಕಳಿಸಿದೆವು.
23:33
وَقَالَ الْمَلَأُ مِنْ قَوْمِهِ الَّذِينَ كَفَرُوا وَكَذَّبُوا بِلِقَاءِ الْآخِرَةِ وَأَتْرَفْنَاهُمْ فِي الْحَيَاةِ الدُّنْيَا مَا هَٰذَا إِلَّا بَشَرٌ مِثْلُكُمْ يَأْكُلُ مِمَّا تَأْكُلُونَ مِنْهُ وَيَشْرَبُ مِمَّا تَشْرَبُونَ ۞
ಅವರ ಜನಾಂಗದಲ್ಲಿನ, ಧಿಕ್ಕಾರಿಗಳಾಗಿದ್ದ ನಾಯಕರು, ಪರಲೋಕದ ಭೇಟಿಯನ್ನು ಸುಳ್ಳೆಂದು ತಿರಸ್ಕರಿಸಿದ್ದರು. ಮತ್ತು ಇಹ ಜೀವನದಲ್ಲಿ ನಾವು ಅವರಿಗೆ ಭಾರೀ ಸಂಪನ್ನತೆಯನ್ನು ನೀಡಿದ್ದೆವು. (ಅವರು) ಹೇಳಿದರು; ಅವನು ಕೇವಲ ನಿಮ್ಮಂತಹ ಒಬ್ಬ ಮನುಷ್ಯ. ನೀವು ತಿನ್ನುವಂತಹದ್ದನ್ನೇ ಅವನೂ ತಿನ್ನುತ್ತಾನೆ ಮತ್ತು ನೀವು ಕುಡಿಯುವಂತಹದ್ದನ್ನೇ ಅವನೂ ಕುಡಿಯುತ್ತಾನೆ.
23:34
وَلَئِنْ أَطَعْتُمْ بَشَرًا مِثْلَكُمْ إِنَّكُمْ إِذًا لَخَاسِرُونَ ۞
(ಹೀಗಿರುತ್ತಾ) ನೀವು ನಿಮ್ಮಂತಹ ಒಬ್ಬ ಮಾನವನನ್ನು ಅನುಸರಿಸಿದರೆ ಖಂಡಿತ ನಷ್ಟ ಅನುಭವಿಸುವಿರಿ.
23:35
أَيَعِدُكُمْ أَنَّكُمْ إِذَا مِتُّمْ وَكُنْتُمْ تُرَابًا وَعِظَامًا أَنَّكُمْ مُخْرَجُونَ ۞
ಅವನೇನು, ನೀವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಿಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದೆಂದು ಹೇಳುತ್ತಿದ್ದಾನೆಯೇ?
23:36
۞ هَيْهَاتَ هَيْهَاتَ لِمَا تُوعَدُونَ ۞
ನಿಮಗೆ ನೀಡಲಾಗುತ್ತಿರುವ ಈ ಆಶ್ವಾಸನೆ ತೀರಾ ಅಸಂಭವನೀಯ!
23:37
إِنْ هِيَ إِلَّا حَيَاتُنَا الدُّنْيَا نَمُوتُ وَنَحْيَا وَمَا نَحْنُ بِمَبْعُوثِينَ ۞
ನಮ್ಮ ಬದುಕು ಏನಿದ್ದರೂ ಈ ಲೋಕದ್ದು ಮಾತ್ರ. ನಾವು (ಇಲ್ಲೇ) ಸಾಯುತ್ತೇವೆ ಮತ್ತು (ಇಲ್ಲೇ) ಬದುಕುತ್ತೇವೆ. ನಮ್ಮನ್ನು ಮತ್ತೆ ಜೀವಂತಗೊಳಿಸಲಾಗುವುದಿಲ್ಲ.
23:38
إِنْ هُوَ إِلَّا رَجُلٌ افْتَرَىٰ عَلَى اللَّهِ كَذِبًا وَمَا نَحْنُ لَهُ بِمُؤْمِنِينَ ۞
ಈ ವ್ಯಕ್ತಿ ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದಾನೆ. ನಾವಂತು ಅವನನ್ನು ನಂಬುವವರಲ್ಲ.
23:39
قَالَ رَبِّ انْصُرْنِي بِمَا كَذَّبُونِ ۞
ಅವರು (ದೂತರು) ಹೇಳಿದರು; ನನ್ನೊಡೆಯಾ, ನನಗೆ ನೆರವಾಗು. ಅವರು ನನ್ನನ್ನು ತಿರಸ್ಕರಿಸುತ್ತಿದ್ದಾರೆ.
23:40
قَالَ عَمَّا قَلِيلٍ لَيُصْبِحُنَّ نَادِمِينَ ۞
ಅವನು (ಅಲ್ಲಾಹನು) ಹೇಳಿದನು; ಬಹಳ ಅಲ್ಪಾವಧಿಯಲ್ಲೇ ಅವರು ಪರಿತಪಿಸಲಿದ್ದಾರೆ.
23:41
فَأَخَذَتْهُمُ الصَّيْحَةُ بِالْحَقِّ فَجَعَلْنَاهُمْ غُثَاءً ۚ فَبُعْدًا لِلْقَوْمِ الظَّالِمِينَ ۞
ಕೊನೆಗೆ ನ್ಯಾಯ ಪ್ರಕಾರ ಒಂದು ಭಯಾನಕ ಶಬ್ದವು ಅವರನ್ನು ಆವರಿಸಿಕೊಂಡಿತು. ಮತ್ತು ನಾವು ಅವರನ್ನು ಕೇವಲ ಕಸಗಳಾಗಿಸಿಬಿಟ್ಟೆವು. ಅಕ್ರಮಿ ಜನಾಂಗಗಳಿಗೆ ವಿನಾಶ ಕಾದಿದೆ.
23:42
ثُمَّ أَنْشَأْنَا مِنْ بَعْدِهِمْ قُرُونًا آخَرِينَ ۞
ಮುಂದೆ, ಅವರ ಬಳಿಕ ನಾವು ಇತರ ಪೀಳಿಗೆಗಳನ್ನು ಸೃಷ್ಟಿಸಿದೆವು.
23:43
مَا تَسْبِقُ مِنْ أُمَّةٍ أَجَلَهَا وَمَا يَسْتَأْخِرُونَ ۞
ಯಾವುದೇ ಸಮುದಾಯವು ತನ್ನ ನಿರ್ದಿಷ್ಟ ಅವಧಿಗಿಂತ ಮುಂಚೆ ಹೊರಟು ಹೋದದ್ದೂ ಇಲ್ಲ. ಆ ಬಳಿಕ ಉಳಿದದ್ದೂ ಇಲ್ಲ.
23:44
ثُمَّ أَرْسَلْنَا رُسُلَنَا تَتْرَىٰ ۖ كُلَّ مَا جَاءَ أُمَّةً رَسُولُهَا كَذَّبُوهُ ۚ فَأَتْبَعْنَا بَعْضَهُمْ بَعْضًا وَجَعَلْنَاهُمْ أَحَادِيثَ ۚ فَبُعْدًا لِقَوْمٍ لَا يُؤْمِنُونَ ۞
ತರುವಾಯ ನಾವು ಬೆನ್ನು ಬೆನ್ನಿಗೇ ನಮ್ಮ ದೂತರನ್ನು ಕಳಿಸಿದೆವು. ಪ್ರತಿಯೊಂದು ಸಮುದಾಯದವರೂ ತಮ್ಮ ಬಳಿಗೆ ತಮ್ಮ ದೂತನು ಬಂದಾಗ ಆತನನ್ನು ತಿರಸ್ಕರಿಸಿದರು. ನಾವು ಅವರನ್ನು ಒಬ್ಬರ ಹಿಂದೆ ಇನ್ನೊಬ್ಬರಂತೆ ನಿಲ್ಲಿಸಿದೆವು ಮತ್ತು ನಾವು ಅವರೆಲ್ಲರನ್ನೂ ಕೇವಲ ಕತೆಗಳಾಗಿ ಮಾರ್ಪಡಿಸಿ ಬಿಟ್ಟೆವು. (ಸತ್ಯವನ್ನು) ನಂಬದ ಜನಾಂಗಗಳಿಗೆ ವಿನಾಶ ಕಾದಿದೆ.
23:45
ثُمَّ أَرْسَلْنَا مُوسَىٰ وَأَخَاهُ هَارُونَ بِآيَاتِنَا وَسُلْطَانٍ مُبِينٍ ۞
ಮುಂದೆ ನಾವು ಮೂಸಾ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ವಚನಗಳೊಂದಿಗೆ ಹಾಗೂ ಸ್ಪಷ್ಟ ಪುರಾವೆಗಳೊಂದಿಗೆ ಕಳಿಸಿದೆವು -
23:46
إِلَىٰ فِرْعَوْنَ وَمَلَئِهِ فَاسْتَكْبَرُوا وَكَانُوا قَوْمًا عَالِينَ ۞
- ಫಿರ್‌ಔನ್ ಮತ್ತು ಅವನ ಅಧಿಕಾರಿಗಳ ಕಡೆಗೆ. ಆದರೆ ಅವರು ದೊಡ್ಡಸ್ತಿಕೆ ತೋರಿದರು. ಅವರು ಮಹಾ ಅಹಂಕಾರಿಗಳಾಗಿದ್ದರು.
23:47
فَقَالُوا أَنُؤْمِنُ لِبَشَرَيْنِ مِثْلِنَا وَقَوْمُهُمَا لَنَا عَابِدُونَ ۞
ಅವರು ಹೇಳಿದರು; ನಾವೇನು, ನಮ್ಮಂತಹ ಇಬ್ಬರು ವ್ಯಕ್ತಿಗಳನ್ನು ನಂಬಬೇಕೇ? ಅವರ ಜನಾಂಗದವರಂತು ನಮ್ಮ ದಾಸರಾಗಿದ್ದಾರೆ.
23:48
فَكَذَّبُوهُمَا فَكَانُوا مِنَ الْمُهْلَكِينَ ۞
ಅವರು ಅವರಿಬ್ಬರನ್ನೂ ತಿರಸ್ಕರಿಸಿದರು. ಕೊನೆಗೆ ಅವರನ್ನು ನಾಶ ಮಾಡಲಾಯಿತು.
23:49
وَلَقَدْ آتَيْنَا مُوسَى الْكِتَابَ لَعَلَّهُمْ يَهْتَدُونَ ۞
ನಿಜವಾಗಿ, ಆ ಜನರು ಸರಿದಾರಿಯನ್ನು ಕಾಣಲೆಂದು ನಾವು, ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು.
23:50
وَجَعَلْنَا ابْنَ مَرْيَمَ وَأُمَّهُ آيَةً وَآوَيْنَاهُمَا إِلَىٰ رَبْوَةٍ ذَاتِ قَرَارٍ وَمَعِينٍ ۞
ಮುಂದೆ, ನಾವು ಮರ್ಯಮರ ಪುತ್ರ (ಈಸಾ)ರನ್ನು ಹಾಗೂ ಅವರ (ಈಸಾರ) ಮಾತೆಯನ್ನು (ಮರ್ಯಮರನ್ನು) ಪುರಾವೆಯಾಗಿಸಿದೆವು ಮತ್ತು ನಾವು ಚಿಲುಮೆಗಳಿದ್ದ ಎತ್ತರದ ನೆಲೆಯೊಂದರಲ್ಲಿ ಅವರಿಗೆ ಆಶ್ರಯ ನೀಡಿದೆವು.
23:51
يَا أَيُّهَا الرُّسُلُ كُلُوا مِنَ الطَّيِّبَاتِ وَاعْمَلُوا صَالِحًا ۖ إِنِّي بِمَا تَعْمَلُونَ عَلِيمٌ ۞
ದೂತರೇ, ಶುದ್ಧವಾದುದನ್ನೇ ತಿನ್ನಿರಿ ಮತ್ತು ಸತ್ಕರ್ಮಗಳನ್ನು ಮಾಡಿರಿ. ನೀವು ಮಾಡುತ್ತಿರುವ ಎಲ್ಲವನ್ನೂ ನಾನು ಖಂಡಿತ ಬಲ್ಲೆನು.
23:52
وَإِنَّ هَٰذِهِ أُمَّتُكُمْ أُمَّةً وَاحِدَةً وَأَنَا رَبُّكُمْ فَاتَّقُونِ ۞
ಖಂಡಿವಾಗಿಯೂ ಈ ನಿಮ್ಮ (ಮಾನವ) ಸಮುದಾಯವು ಒಂದೇ ಸಮುದಾಯವಾಗಿದೆ ಮತ್ತು ನಾನೇ ನಿಮ್ಮ ಒಡೆಯನು. ನೀವು ನನಗೇ ಅಂಜಿರಿ.
23:53
فَتَقَطَّعُوا أَمْرَهُمْ بَيْنَهُمْ زُبُرًا ۖ كُلُّ حِزْبٍ بِمَا لَدَيْهِمْ فَرِحُونَ ۞
ತರುವಾಯ ಅವರು ತಮ್ಮ ನಡುವೆ ತಮ್ಮ ಧರ್ಮವನ್ನು ಛಿದ್ರಗೊಳಿಸಿ ಬಿಟ್ಟರು. ಪ್ರತಿಯೊಂದು ಗುಂಪಿನವರೂ ತಮ್ಮ ಬಳಿ ಏನಿದೆಯೋ ಅದರಲ್ಲೇ ಸಂತುಷ್ಟರಾಗಿದ್ದಾರೆ.
23:54
فَذَرْهُمْ فِي غَمْرَتِهِمْ حَتَّىٰ حِينٍ ۞
ಒಂದು ನಿರ್ದಿಷ್ಟ ಸಮಯದ ತನಕ ನೀವು ಅವರನ್ನು ಅವರದೇ ಭ್ರಮೆಯಲ್ಲಿರಲು ಬಿಟ್ಟು ಬಿಡಿರಿ.
23:55
أَيَحْسَبُونَ أَنَّمَا نُمِدُّهُمْ بِهِ مِنْ مَالٍ وَبَنِينَ ۞
ಸಂಪತ್ತು ಮತ್ತು ಸಂತಾನಗಳ ಮೂಲಕ ನಾವು ಅವರಿಗೆ ನೀಡುತ್ತಿರುವ ನೆರವಿನ ಕುರಿತು ಅವರು ಏನೆಂದು ಭಾವಿಸಿದ್ದಾರೆ?
23:56
نُسَارِعُ لَهُمْ فِي الْخَيْرَاتِ ۚ بَلْ لَا يَشْعُرُونَ ۞
ಅವರಿಗೆ ಹಿತವನ್ನು ಮಾಡಲು ನಾವು ಆತುರಪಡುತ್ತಿದ್ದೇವೆಂದೇ? ನಿಜವಾಗಿ ಅವರಿಗೆ ಅರಿವಿಲ್ಲ.
23:57
إِنَّ الَّذِينَ هُمْ مِنْ خَشْيَةِ رَبِّهِمْ مُشْفِقُونَ ۞
ಅವರು (ಹಿತಕ್ಕೆ ಅರ್ಹರಾದವರು) ತಮ್ಮ ಒಡೆಯನ ಭಯದಿಂದ ಸದಾ ವಿನಮ್ರರಾಗಿರುತ್ತಾರೆ.
23:58
وَالَّذِينَ هُمْ بِآيَاتِ رَبِّهِمْ يُؤْمِنُونَ ۞
ಮತ್ತು ಅವರು ತಮ್ಮ ಒಡೆಯನ ವಚನಗಳನ್ನು ನಂಬುತ್ತಾರೆ.
23:59
وَالَّذِينَ هُمْ بِرَبِّهِمْ لَا يُشْرِكُونَ ۞
ಅವರು ತಮ್ಮ ಒಡೆಯನ ಜೊತೆ ಯಾರನ್ನೂ ಪಾಲುಗೊಳಿಸುವುದಿಲ್ಲ.
23:60
وَالَّذِينَ يُؤْتُونَ مَا آتَوْا وَقُلُوبُهُمْ وَجِلَةٌ أَنَّهُمْ إِلَىٰ رَبِّهِمْ رَاجِعُونَ ۞
ಅವರು (ದಾನವಾಗಿ) ತಾವು ಕೊಡುವುದನ್ನು ಕೊಡುತ್ತಲೇ ಇರುತ್ತಾರೆ ಮತ್ತು ಇಷ್ಟಾಗಿಯೂ ತಾವು ತಮ್ಮ ಒಡೆಯನ ಕಡೆಗೆ ಮರಳಲಿಕ್ಕಿದೆ ಎಂದು ಅವರ ಮನಸ್ಸುಗಳು ಅಂಜುತ್ತಿರುತ್ತವೆ.
23:61
أُولَٰئِكَ يُسَارِعُونَ فِي الْخَيْرَاتِ وَهُمْ لَهَا سَابِقُونَ ۞
ಅವರೇ, ಸತ್ಕಾರ್ಯಗಳನ್ನು ಮಾಡಲು ಆತುರ ಪಡುವವರು ಮತ್ತು ಅವುಗಳೆಡೆಗೆ ಸ್ಪರ್ಧಾತ್ಮಕವಾಗಿ ಧಾವಿಸಿ ಹೋಗುವವರು.
23:62
وَلَا نُكَلِّفُ نَفْسًا إِلَّا وُسْعَهَا ۖ وَلَدَيْنَا كِتَابٌ يَنْطِقُ بِالْحَقِّ ۚ وَهُمْ لَا يُظْلَمُونَ ۞
ನಾವಂತು ಯಾವ ಜೀವದ ಮೇಲೂ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸುವುದಿಲ್ಲ ಮತ್ತು ಸತ್ಯವನ್ನು ಮಾತ್ರ ಹೇಳುವ ಒಂದು ಗ್ರಂಥವು ನಮ್ಮ ಬಳಿ ಇದೆ. (ಆದ್ದರಿಂದ) ಅವರ ಮೇಲೆ ಸ್ವಲ್ಪವೂ ಅನ್ಯಾಯವಾಗದು.
23:63
بَلْ قُلُوبُهُمْ فِي غَمْرَةٍ مِنْ هَٰذَا وَلَهُمْ أَعْمَالٌ مِنْ دُونِ ذَٰلِكَ هُمْ لَهَا عَامِلُونَ ۞
ನಿಜವಾಗಿ, ಅವರ (ಧಿಕ್ಕಾರಿಗಳ) ಮನಸ್ಸುಗಳು ಈ (ಸತ್ಯದ) ಕುರಿತು ನಿರಾಸಕ್ತವಾಗಿವೆ. ಇದಲ್ಲದೆ ಅವರು ಇನ್ನೂ ಹಲವು (ದುಷ್ಟ) ಕೃತ್ಯಗಳನ್ನು ಮಾಡುತ್ತಿದ್ದಾರೆ.
23:64
حَتَّىٰ إِذَا أَخَذْنَا مُتْرَفِيهِمْ بِالْعَذَابِ إِذَا هُمْ يَجْأَرُونَ ۞
ಕೊನೆಗೆ, ನಾವು ಅವರಲ್ಲಿನ ಸಂಪನ್ನ ಜನರನ್ನು ಹಿಡಿದು ಶಿಕ್ಷಿಸಿದಾಗ ಅವರು ಮೊರೆ ಇಡಲಾರಂಭಿಸುವರು.
23:65
لَا تَجْأَرُوا الْيَوْمَ ۖ إِنَّكُمْ مِنَّا لَا تُنْصَرُونَ ۞
(ಆಗ ಅವರೊಡನೆ ಹೇಳಲಾಗುವುದು;) ಇಂದು ನೀವು ಮೊರೆ ಇಡಬೇಡಿ. ನಮ್ಮ ಕಡೆಯಿಂದ ನಿಮಗೆ ಖಂಡಿತ ಯಾವ ನೆರವೂ ಸಿಗದು.
23:66
قَدْ كَانَتْ آيَاتِي تُتْلَىٰ عَلَيْكُمْ فَكُنْتُمْ عَلَىٰ أَعْقَابِكُمْ تَنْكِصُونَ ۞
ನಮ್ಮ ವಚನಗಳನ್ನು ನಿಮಗೆ ಓದಿ ಕೇಳಿಸಲಾಗುತ್ತಿತ್ತು. ಆಗ ನೀವು ಬೆನ್ನು ತಿರುಗಿಸಿ ಹೊರಟು ಬಿಡುತ್ತಿದ್ದಿರಿ.
23:67
مُسْتَكْبِرِينَ بِهِ سَامِرًا تَهْجُرُونَ ۞
ಆ ಕುರಿತು ನೀವು ಅಹಂಕಾರ ತೋರುತ್ತಿದ್ದಿರಿ ಮತ್ತು (ಸುಳ್ಳು) ಕತೆಗಳನ್ನು ಕಟ್ಟಿ ತೀರಾ ಕೆಟ್ಟ ಮಾತುಗಳನ್ನು ಆಡುತ್ತಿದ್ದಿರಿ.
23:68
أَفَلَمْ يَدَّبَّرُوا الْقَوْلَ أَمْ جَاءَهُمْ مَا لَمْ يَأْتِ آبَاءَهُمُ الْأَوَّلِينَ ۞
ಅವರೇನು ಈ ಸಂದೇಶದ ಕುರಿತು ಚಿಂತನೆ ನಡೆಸುವುದಿಲ್ಲವೇ? ಅಥವಾ ಅವರ ಪೂರ್ವಜರ ಬಳಿಗೆ ಬಂದಿರದಿದ್ದ ಏನಾದರೂ ಅವರ ಬಳಿಗೆ ಬಂದಿದೆಯೇ?
23:69
أَمْ لَمْ يَعْرِفُوا رَسُولَهُمْ فَهُمْ لَهُ مُنْكِرُونَ ۞
ಅಥವಾ ಅವರೇನು ತಮ್ಮ ದೇವದೂತನನ್ನು ಗುರುತಿಸದ ಕಾರಣ ಆತನನ್ನು ತಿರಸ್ಕರಿಸುತ್ತಿರುವರೇ?
23:70
أَمْ يَقُولُونَ بِهِ جِنَّةٌ ۚ بَلْ جَاءَهُمْ بِالْحَقِّ وَأَكْثَرُهُمْ لِلْحَقِّ كَارِهُونَ ۞
ಅಥವಾ, ಆತನಿಗೆ ಹುಚ್ಚು ಹಿಡಿದಿದೆ ಎಂದು ಅವರು ಹೇಳುತ್ತಿದ್ದಾರೆಯೇ? ನಿಜವಾಗಿ ಅವರು (ದೂತರು) ಸತ್ಯದೊಂದಿಗೆ ಅವರ ಬಳಿಗೆ ಬಂದಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಾರೆ.
23:71
وَلَوِ اتَّبَعَ الْحَقُّ أَهْوَاءَهُمْ لَفَسَدَتِ السَّمَاوَاتُ وَالْأَرْضُ وَمَنْ فِيهِنَّ ۚ بَلْ أَتَيْنَاهُمْ بِذِكْرِهِمْ فَهُمْ عَنْ ذِكْرِهِمْ مُعْرِضُونَ ۞
ಒಂದು ವೇಳೆ ಸತ್ಯವು ಅವರ ಅಪೇಕ್ಷೆಗಳಿಗೆ ವಿಧೇಯವಾಗಿದ್ದರೆ, ಆಕಾಶಗಳೂ ಭೂಮಿಯೂ, ಅವುಗಳಲ್ಲಿ ಇರುವ ಎಲ್ಲರೂ ವಿನಾಶಕ್ಕೆ ತುತ್ತಾಗಿ ಬಿಡುತ್ತಿದ್ದರು. ನಿಜವಾಗಿ, ನಾವು ಅವರ ಬಳಿಗೆ ಅವರಿಗಾಗಿಯೇ ಇರುವ ಉಪದೇಶವನ್ನು ತಂದಿರುವೆವು. ಆದರೆ ಅವರು ತಮಗಾಗಿಯೇ ಇರುವ ಉಪದೇಶವನ್ನು ಕಡೆಗಣಿಸುತ್ತಿದ್ದಾರೆ.
23:72
أَمْ تَسْأَلُهُمْ خَرْجًا فَخَرَاجُ رَبِّكَ خَيْرٌ ۖ وَهُوَ خَيْرُ الرَّازِقِينَ ۞
(ದೂತರೇ,) ನೀವೇನು ಅವರೊಡನೆ ಏನಾದರೂ ಪಾವತಿಯನ್ನು ಕೇಳುತ್ತೀರಾ? ನಿಮ್ಮ ಒಡೆಯನ ವೇತನವೇ ನಿಮ್ಮ ಪಾಲಿಗೆ ಉತ್ತಮವಾಗಿದೆ ಮತ್ತು ಅವನು ಅತ್ಯುತ್ತಮ ಅನ್ನದಾತನಾಗಿದ್ದಾನೆ.
23:73
وَإِنَّكَ لَتَدْعُوهُمْ إِلَىٰ صِرَاطٍ مُسْتَقِيمٍ ۞
ನೀವು ಅವರನ್ನು ಸರಿಯಾದ ದಾರಿಯ ಕಡೆಗೆ ಕರೆಯುತ್ತಿರುವಿರಿ.
23:74
وَإِنَّ الَّذِينَ لَا يُؤْمِنُونَ بِالْآخِرَةِ عَنِ الصِّرَاطِ لَنَاكِبُونَ ۞
ಪರಲೋಕದಲ್ಲಿ ನಂಬಿಕೆ ಇಲ್ಲದವರು ಖಂಡಿತವಾಗಿಯೂ ನೇರ ಮಾರ್ಗದಿಂದ ದೂರವಿದ್ದಾರೆ.
23:75
۞ وَلَوْ رَحِمْنَاهُمْ وَكَشَفْنَا مَا بِهِمْ مِنْ ضُرٍّ لَلَجُّوا فِي طُغْيَانِهِمْ يَعْمَهُونَ ۞
ನಾವು ಅವರ ಮೇಲೆ ಕರುಣೆ ತೋರಿದರೆ ಮತ್ತು ಅವರ ಸಂಕಟವನ್ನು ನಿವಾರಿಸಿದರೆ ಅವರು ತಮ್ಮ ವಿದ್ರೋಹ ಧೋರಣೆಯಲ್ಲಿ ಮತ್ತಷ್ಟು ಸ್ಥಿರಗೊಳ್ಳುವರು ಮತ್ತು (ಸತ್ಯದಿಂದ, ಇನ್ನಷ್ಟು ದೂರ) ಅಲೆದಾಡುವರು.
23:76
وَلَقَدْ أَخَذْنَاهُمْ بِالْعَذَابِ فَمَا اسْتَكَانُوا لِرَبِّهِمْ وَمَا يَتَضَرَّعُونَ ۞
ನಾವು ಶಿಕ್ಷಿಸುವುದಕ್ಕಾಗಿ ಅವರನ್ನು ಹಿಡಿಯುವವರೆಗೂ ಅವರು ವಿನಯ ತೋರಲಿಲ್ಲ ಮತ್ತು ತಮ್ಮ ಒಡೆಯನೆದುರು ಭಕ್ತಿ ಭಾವವನ್ನು ಪ್ರಕಟಿಸಲಿಲ್ಲ.
23:77
حَتَّىٰ إِذَا فَتَحْنَا عَلَيْهِمْ بَابًا ذَا عَذَابٍ شَدِيدٍ إِذَا هُمْ فِيهِ مُبْلِسُونَ ۞
ಕೊನೆಗೆ ನಾವು ಅವರ ಪಾಲಿಗೆ ನಮ್ಮ ಕಠಿಣಶಿಕ್ಷೆಯ ಬಾಗಿಲನ್ನು ತೆರೆದು ಬಿಟ್ಟಾಗ ಅವರು ನಿರಾಶರಾಗಿ ಬಿಡುವರು.
23:78
وَهُوَ الَّذِي أَنْشَأَ لَكُمُ السَّمْعَ وَالْأَبْصَارَ وَالْأَفْئِدَةَ ۚ قَلِيلًا مَا تَشْكُرُونَ ۞
ಅವನೇ, ನಿಮಗಾಗಿ ಕಿವಿಗಳನ್ನೂ ಕಣ್ಣುಗಳನ್ನೂ ಮನಸ್ಸುಗಳನ್ನೂ ನಿರ್ಮಿಸಿದವನು. ಆದರೆ ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ.
23:79
وَهُوَ الَّذِي ذَرَأَكُمْ فِي الْأَرْضِ وَإِلَيْهِ تُحْشَرُونَ ۞
ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿ ಬಿಟ್ಟವನು ಮತ್ತು ಅವನ ಬಳಿಯೇ ನಿಮ್ಮನ್ನು ಒಟ್ಟು ಸೇರಿಸಲಾಗುವುದು.
23:80
وَهُوَ الَّذِي يُحْيِي وَيُمِيتُ وَلَهُ اخْتِلَافُ اللَّيْلِ وَالنَّهَارِ ۚ أَفَلَا تَعْقِلُونَ ۞
ಅವನೇ ಬದುಕಿಸುವವನು ಮತ್ತು ಸಾಯಿಸುವವನು. ಅವನ ಆದೇಶಾನುಸಾರವೇ ಇರುಳು ಹಗಲುಗಳು ಬದಲಾಗುತ್ತಿರುತ್ತವೆ. ನೀವೇನು ಆಲೋಚಿಸುವುದಿಲ್ಲವೇ?
23:81
بَلْ قَالُوا مِثْلَ مَا قَالَ الْأَوَّلُونَ ۞
ನಿಜವಾಗಿ ಹಿಂದಿನವರು ಹೇಳಿದ್ದನ್ನೇ ಅವರೂ ಹೇಳುತ್ತಿದ್ದಾರೆ.
23:82
قَالُوا أَإِذَا مِتْنَا وَكُنَّا تُرَابًا وَعِظَامًا أَإِنَّا لَمَبْعُوثُونَ ۞
ಅವರು ಹೇಳುತ್ತಾರೆ; ನಾವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಮತ್ತೆ ಜೀವಂತಗೊಳಿಸಲಾಗುವುದೇ?
23:83
لَقَدْ وُعِدْنَا نَحْنُ وَآبَاؤُنَا هَٰذَا مِنْ قَبْلُ إِنْ هَٰذَا إِلَّا أَسَاطِيرُ الْأَوَّلِينَ ۞
ನಮಗೆ ನೀಡಲಾಗುತ್ತಿರುವ ಇದೇ ವಾಗ್ದಾನವನ್ನು ಈ ಹಿಂದೆ ನಮ್ಮ ಪೂರ್ವಜರಿಗೂ ನೀಡಲಾಗಿತ್ತು. ಇದೆಲ್ಲಾ ಕೇವಲ ಗತಕಾಲದ ಕಟ್ಟು ಕತೆಗಳು.
23:84
قُلْ لِمَنِ الْأَرْضُ وَمَنْ فِيهَا إِنْ كُنْتُمْ تَعْلَمُونَ ۞
‘‘ನೀವು ಬಲ್ಲವರಾಗಿದ್ದರೆ ತಿಳಿಸಿರಿ, ಈ ಭೂಮಿ ಮತ್ತು ಇದರಲ್ಲಿರುವ ಎಲ್ಲರೂ ಯಾರಿಗೆ ಸೇರಿದವರು?’’ ಎಂದು ಅವರೊಡನೆ ಕೇಳಿರಿ.
23:85
سَيَقُولُونَ لِلَّهِ ۚ قُلْ أَفَلَا تَذَكَّرُونَ ۞
‘‘ಅಲ್ಲಾಹನಿಗೆ’’ ಎಂದು ಅವರು ಉತ್ತರಿಸುವರು. ಹೇಳಿರಿ; ನೀವೇನು ಚಿಂತಿಸುವುದಿಲ್ಲವೇ?
23:86
قُلْ مَنْ رَبُّ السَّمَاوَاتِ السَّبْعِ وَرَبُّ الْعَرْشِ الْعَظِيمِ ۞
ಹೇಳಿರಿ; ‘‘ಏಳು ಆಕಾಶಗಳ ಒಡೆಯನು ಯಾರು? ಮತ್ತು ಮಹಾನ್ ವಿಶ್ವಸಿಂಹಾಸನದ ಒಡೆಯನು ಯಾರು?’’
23:87
سَيَقُولُونَ لِلَّهِ ۚ قُلْ أَفَلَا تَتَّقُونَ ۞
‘‘ಅವೆಲ್ಲಾ ಅಲ್ಲಾಹನಿಗೇ ಸೇರಿವೆ’’ ಎಂದು ಅವರು ಹೇಳುವರು. ಹೇಳಿರಿ; ಹಾಗಾದರೆ ನೀವು ಅಂಜುವುದಿಲ್ಲವೇ?
23:88
قُلْ مَنْ بِيَدِهِ مَلَكُوتُ كُلِّ شَيْءٍ وَهُوَ يُجِيرُ وَلَا يُجَارُ عَلَيْهِ إِنْ كُنْتُمْ تَعْلَمُونَ ۞
ಹೇಳಿರಿ; ಎಲ್ಲ ವಸ್ತುಗಳ ಮಾಲಕತ್ವವು ಯಾರ ಕೈಯಲ್ಲಿದೆ? ಆಶ್ರಯ ನೀಡುವವನು ಯಾರು? ಮತ್ತು ಯಾರ ವಿರುದ್ಧ ಆಶ್ರಯ ನೀಡಬಲ್ಲವರು ಯಾರೂ ಇಲ್ಲ? ನೀವು ಬಲ್ಲವರಾಗಿದ್ದರೆ ತಿಳಿಸಿರಿ.
23:89
سَيَقُولُونَ لِلَّهِ ۚ قُلْ فَأَنَّىٰ تُسْحَرُونَ ۞
‘‘ಅಲ್ಲಾಹನು’’ ಎಂದು ಅವರು ಹೇಳುವರು. ನೀವು ಹೇಳಿರಿ; ಹಾಗಾದರೆ ನೀವು ಅದೆಂತಹ ಭ್ರಮೆಗೆ ತುತ್ತಾಗಿರುವಿರಿ?
23:90
بَلْ أَتَيْنَاهُمْ بِالْحَقِّ وَإِنَّهُمْ لَكَاذِبُونَ ۞
ನಾವು ಸತ್ಯವನ್ನು ಅವರ ಬಳಿಗೆ ತಂದಿರುವೆವು. ಆದರೆ ಅವರು ಸುಳ್ಳು ಹೇಳುವವರಾಗಿದ್ದಾರೆ.
23:91
مَا اتَّخَذَ اللَّهُ مِنْ وَلَدٍ وَمَا كَانَ مَعَهُ مِنْ إِلَٰهٍ ۚ إِذًا لَذَهَبَ كُلُّ إِلَٰهٍ بِمَا خَلَقَ وَلَعَلَا بَعْضُهُمْ عَلَىٰ بَعْضٍ ۚ سُبْحَانَ اللَّهِ عَمَّا يَصِفُونَ ۞
ಅಲ್ಲಾಹನು ಯಾರನ್ನೂ ತನ್ನ ಪುತ್ರನಾಗಿ ಆರಿಸಿಕೊಂಡಿಲ್ಲ ಮತ್ತು ಅವನ ಜೊತೆ ಬೇರಾವ ದೇವರೂ ಇಲ್ಲ. ಹಾಗೆ ಇದ್ದಿದ್ದರೆ ಅವರಲ್ಲಿ ಪ್ರತಿಯೊಬ್ಬರೂ ತಾವು ಸೃಷ್ಟಿಸಿದವುಗಳ ಜೊತೆ ಪ್ರತ್ಯೇಕ ಹೊರಟು ಬಿಡುತ್ತಿದ್ದರು ಮತ್ತು ಅವರೆಲ್ಲಾ ಪರಸ್ಪರರ ಮೇಲೆ ಆಕ್ರಮಣ ನಡೆಸುತ್ತಿದ್ದರು. ಅಲ್ಲಾಹನು ಪಾವನನು ಮತ್ತು ಅವರು ಹೊರಿಸುವ ಎಲ್ಲ ಆರೋಪಗಳಿಂದ ಮುಕ್ತನು.
23:92
عَالِمِ الْغَيْبِ وَالشَّهَادَةِ فَتَعَالَىٰ عَمَّا يُشْرِكُونَ ۞
ಅವನು ಗುಪ್ತವಾಗಿರುವ ಹಾಗೂ ವ್ಯಕ್ತವಾಗಿರುವ ಎಲ್ಲವನ್ನೂ ಬಲ್ಲವನು. ಮತ್ತು ನೀವು (ಅವನ ಜೊತೆ) ಪಾಲುಗೊಳಿಸುವ ಎಲ್ಲವುಗಳಿಗಿಂತ ಅವನು ತುಂಬಾ ಉನ್ನತನು.
23:93
قُلْ رَبِّ إِمَّا تُرِيَنِّي مَا يُوعَدُونَ ۞
(ದೂತರೇ,) ಹೇಳಿರಿ; ನನ್ನೊಡೆಯಾ, ಅವರಿಗೆ ವಾಗ್ದಾನ ಮಾಡಲಾಗಿರುವುದನ್ನು (ಶಿಕ್ಷೆಯನ್ನು) ನೀನು ನನಗೆ ತೋರಿಸಿ ಕೊಟ್ಟರೂ -
23:94
رَبِّ فَلَا تَجْعَلْنِي فِي الْقَوْمِ الظَّالِمِينَ ۞
ನನ್ನೊಡೆಯಾ, ನನ್ನನ್ನು ಮಾತ್ರ (ಶಿಕ್ಷಾರ್ಹ) ಅಕ್ರಮಿಗಳ ಸಾಲಿಗೆ ಸೇರಿಸಬೇಡ.
23:95
وَإِنَّا عَلَىٰ أَنْ نُرِيَكَ مَا نَعِدُهُمْ لَقَادِرُونَ ۞
ನಿಜವಾಗಿ ನಾವು, ಅವರಿಗೆ ವಾಗ್ದಾನ ಮಾಡಿರುವುದನ್ನು ನಿಮಗೆ ತೋರಿಸಿಕೊಡಲು ಖಂಡಿತ ಶಕ್ತರು.
23:96
ادْفَعْ بِالَّتِي هِيَ أَحْسَنُ السَّيِّئَةَ ۚ نَحْنُ أَعْلَمُ بِمَا يَصِفُونَ ۞
(ಆದರೆ ನೀವು) ಕೆಡುಕನ್ನು ಅತ್ಯುತ್ತಮ ಕೃತ್ಯದ ಮೂಲಕವೇ ಎದುರಿಸಿರಿ. ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು.
23:97
وَقُلْ رَبِّ أَعُوذُ بِكَ مِنْ هَمَزَاتِ الشَّيَاطِينِ ۞
ಮತ್ತು ನೀವು ಹೇಳಿರಿ; ನನ್ನೊಡೆಯಾ, ಶೈತಾನರ ಎಲ್ಲ ಪ್ರಚೋದನೆಗಳ ವಿರುದ್ಧ ನಾನು ನಿನ್ನ ರಕ್ಷಣೆಯನ್ನು ಕೋರುತ್ತೇನೆ.
23:98
وَأَعُوذُ بِكَ رَبِّ أَنْ يَحْضُرُونِ ۞
ಮತ್ತು ನನ್ನೊಡೆಯಾ, ಅವರು (ಶೈತಾನರು) ನನ್ನ ಬಳಿಗೆ ಬರುವುದರ ವಿರುದ್ಧ ನಾನು ನಿನ್ನ ರಕ್ಷಣೆಯನ್ನು ಕೋರುತ್ತೇನೆ.
23:99
حَتَّىٰ إِذَا جَاءَ أَحَدَهُمُ الْمَوْتُ قَالَ رَبِّ ارْجِعُونِ ۞
ಅವರ ಪೈಕಿ ಯಾರಾದರೊಬ್ಬರ ಮರಣದ ಸಮಯವು ಬಂದು ಬಿಟ್ಟಾಗ ಅವನು ಹೇಳುತ್ತಾನೆ; ‘‘ನನ್ನೊಡೆಯಾ, ನನ್ನನ್ನು ಮರಳಿ (ಇಹಲೋಕಕ್ಕೆ) ಕಳಿಸು.’’
23:100
لَعَلِّي أَعْمَلُ صَالِحًا فِيمَا تَرَكْتُ ۚ كَلَّا ۚ إِنَّهَا كَلِمَةٌ هُوَ قَائِلُهَا ۖ وَمِنْ وَرَائِهِمْ بَرْزَخٌ إِلَىٰ يَوْمِ يُبْعَثُونَ ۞
‘‘ನಾನು ಬಿಟ್ಟು ಬಂದಿರುವ ಜಗತ್ತಿನಲ್ಲಿ ನಾನು ಏನಾದರೂ ಸತ್ಕರ್ಮಗಳನ್ನು ಮಾಡುತ್ತೇನೆ.’’ ಖಂಡಿತ ಇಲ್ಲ. ಅದೆಲ್ಲಾ ಕೇವಲ ಅವನಾಡುವ ಮಾತು ಮಾತ್ರ. ಪುನಃ ಜೀವಂತಗೊಳಿಸಲಾಗುವ ದಿನದವರೆಗೂ ಅವರ ಮುಂದೆ ಒಂದು ತೆರೆ ಇರುವುದು.
23:101
فَإِذَا نُفِخَ فِي الصُّورِ فَلَا أَنْسَابَ بَيْنَهُمْ يَوْمَئِذٍ وَلَا يَتَسَاءَلُونَ ۞
(ಲೋಕಾಂತ್ಯದ) ಆ ಕಹಳೆಯನ್ನು ಊದಲಾದಾಗ ಅವರ ನಡುವೆ ಯಾವ ಸಂಬಂಧವೂ ಉಳಿದಿರಲಾರದು ಮತ್ತು ಅವರು ಪರಸ್ಪರ ವಿಚಾರಿಸುವ ಗೊಡವೆಗೂ ಹೋಗಲಾರರು.
23:102
فَمَنْ ثَقُلَتْ مَوَازِينُهُ فَأُولَٰئِكَ هُمُ الْمُفْلِحُونَ ۞
ಅಂದು ಯಾರ (ಸತ್ಕರ್ಮಗಳ) ತಟ್ಟೆಗಳು ಭಾರವಾಗಿರುವವೋ ಅವರೇ ವಿಜಯಿಗಳಾಗುವರು.
23:103
وَمَنْ خَفَّتْ مَوَازِينُهُ فَأُولَٰئِكَ الَّذِينَ خَسِرُوا أَنْفُسَهُمْ فِي جَهَنَّمَ خَالِدُونَ ۞
ಇನ್ನು ಯಾರ ತಟ್ಟೆಗಳು ಹಗುರವಾಗಿರುವವೋ ಅವರು ಸ್ವತಃ ತಮ್ಮನ್ನು ನಷ್ಟಕ್ಕೆ ತುತ್ತಾಗಿಸಿಕೊಂಡವರಾಗಿರುವರು. ಅವರು ನರಕದಲ್ಲಿ ಸದಾಕಾಲ ಇರುವರು.
23:104
تَلْفَحُ وُجُوهَهُمُ النَّارُ وَهُمْ فِيهَا كَالِحُونَ ۞
ಬೆಂಕಿಯು ಅವರ ಮುಖಗಳನ್ನು ಸುಟ್ಟು ಬಿಟ್ಟಿರುವುದು ಮತ್ತು ಅವರು ಅದರಲ್ಲಿ ತೀರಾ ವಿಕೃತ ರೂಪಿಗಳಾಗಿ ಬಿಡುವರು.
23:105
أَلَمْ تَكُنْ آيَاتِي تُتْلَىٰ عَلَيْكُمْ فَكُنْتُمْ بِهَا تُكَذِّبُونَ ۞
(ಅವರೊಡನೆ ಹೇಳಲಾಗುವುದು;) ನಿಮಗೇನು, ನನ್ನ ವಚನಗಳನ್ನು ಓದಿ ಕೇಳಿಸಲಾಗಿರಲಿಲ್ಲವೇ? ನಿಜವಾಗಿ ನೀವು ಅವುಗಳನ್ನು ಸುಳ್ಳೆಂದು ತಿರಸ್ಕರಿಸಿದ್ದಿರಿ.
23:106
قَالُوا رَبَّنَا غَلَبَتْ عَلَيْنَا شِقْوَتُنَا وَكُنَّا قَوْمًا ضَالِّينَ ۞
ಅವರು ಹೇಳುವರು; ನಮ್ಮೊಡೆಯಾ, ನಮ್ಮ ದೌರ್ಭಾಗ್ಯವು ನಮ್ಮನ್ನು ಸೋಲಿಸಿತು. ನಾವು ದಾರಿಗೆಟ್ಟಿದ್ದೆವು.
23:107
رَبَّنَا أَخْرِجْنَا مِنْهَا فَإِنْ عُدْنَا فَإِنَّا ظَالِمُونَ ۞
ನಮ್ಮೊಡೆಯಾ, ನಮ್ಮನ್ನು ಇಲ್ಲಿಂದ ಹೊರತೆಗೆ. ಆ ಬಳಿಕ ನಾವು (ಹಳೆಯ ಚಾಳಿಯನ್ನೇ) ಪುನರಾವರ್ತಿಸಿದರೆ, ಆಗ ಖಂಡಿತ ನಾವು ಅಕ್ರಮಿಗಳಾಗುವೆವು.
23:108
قَالَ اخْسَئُوا فِيهَا وَلَا تُكَلِّمُونِ ۞
ಅವರೊಡನೆ ಹೇಳಲಾಗುವುದು; ನೀವು ಶಾಪ ಪೀಡಿತರಾಗಿ ಅಲ್ಲೇ (ನರಕದಲ್ಲೇ) ಬಿದ್ದು ಕೊಂಡಿರಿ ಮತ್ತು ನನ್ನೊಡನೆ ಮಾತನಾಡಬೇಡಿ.
23:109
إِنَّهُ كَانَ فَرِيقٌ مِنْ عِبَادِي يَقُولُونَ رَبَّنَا آمَنَّا فَاغْفِرْ لَنَا وَارْحَمْنَا وَأَنْتَ خَيْرُ الرَّاحِمِينَ ۞
ಅಲ್ಲಿ (ಇಹಲೋಕದಲ್ಲಿ) ನನ್ನ ದಾಸರ ಒಂದು ಗುಂಪಿತ್ತು. ‘‘ನಮ್ಮೊಡೆಯಾ, ನಾವು ನಂಬಿದೆವು ನಮ್ಮನ್ನು ಕ್ಷಮಿಸಿಬಿಡು ಮತ್ತು ನಮ್ಮ ಮೇಲೆ ಕರುಣೆತೋರು. ನೀನು ಅತ್ಯುತ್ತಮ ಕರುಣಾಳು’’ ಎಂದು ಅವರು ಮೊರೆ ಇಡುತ್ತಿದ್ದರು.
23:110
فَاتَّخَذْتُمُوهُمْ سِخْرِيًّا حَتَّىٰ أَنْسَوْكُمْ ذِكْرِي وَكُنْتُمْ مِنْهُمْ تَضْحَكُونَ ۞
ಆಗ ನೀವು ಅವರನ್ನು ಕೇವಲ ತಮಾಷೆಯ ವಸ್ತುಗಳಾಗಿ ಕಂಡಿರಿ. ಎಷ್ಟೆಂದರೆ, ಅವರು ನಿಮಗೆ ನನ್ನ ನೆನಪನ್ನೇ ಮರೆಸಿ ಬಿಟ್ಟರು ಮತ್ತು ನೀವು ಅವರ ಕುರಿತು ನಗುತ್ತಿದ್ದಿರಿ.
23:111
إِنِّي جَزَيْتُهُمُ الْيَوْمَ بِمَا صَبَرُوا أَنَّهُمْ هُمُ الْفَائِزُونَ ۞
ಇಂದು, ಅವರ ಸಹನೆಯ ಪ್ರತಿಫಲವನ್ನು ನಾನು ಅವರಿಗೆ ನೀಡಿರುವೆನು. ಅವರು ಖಂಡಿತ ವಿಜಯಿಗಳು.
23:112
قَالَ كَمْ لَبِثْتُمْ فِي الْأَرْضِ عَدَدَ سِنِينَ ۞
ವರ್ಷಗಳ ಲೆಕ್ಕ ಪ್ರಕಾರ, ನೀವು ಭೂಮಿಯಲ್ಲಿ ಎಷ್ಟು ಕಾಲ ಇದ್ದಿರಿ? ಎಂದು ಅವನು (ಅಲ್ಲಾಹನು) ಕೇಳುವನು.
23:113
قَالُوا لَبِثْنَا يَوْمًا أَوْ بَعْضَ يَوْمٍ فَاسْأَلِ الْعَادِّينَ ۞
ಅವರು ಹೇಳುವರು; ನಾವು ಒಂದು ದಿನ ಅಥವಾ ದಿನದ ಒಂದು ಭಾಗದಷ್ಟು ಕಾಲ (ಭೂಮಿಯಲ್ಲಿ) ಇದ್ದೆವು. ನೀನು ಲೆಕ್ಕಾಚಾರ ಬಲ್ಲವರೊಡನೆ ಕೇಳಿ ನೋಡು.
23:114
قَالَ إِنْ لَبِثْتُمْ إِلَّا قَلِيلًا ۖ لَوْ أَنَّكُمْ كُنْتُمْ تَعْلَمُونَ ۞
ಅವನು (ಅಲ್ಲಾಹನು) ಹೇಳುವನು; ನೀವು ತೀರಾ ಅಲ್ಪಕಾಲ ಮಾತ್ರ ಇದ್ದಿರಿ. ನೀವು ಇದನ್ನು ಮೊದಲೇ (ಇಹಲೋಕದಲ್ಲೇ) ಅರಿತಿದ್ದರೆಷ್ಟು ಚೆನ್ನಾಗಿತ್ತು.
23:115
أَفَحَسِبْتُمْ أَنَّمَا خَلَقْنَاكُمْ عَبَثًا وَأَنَّكُمْ إِلَيْنَا لَا تُرْجَعُونَ ۞
ನೀವೇನು, ನಾವು ನಿಮ್ಮನ್ನು ವ್ಯರ್ಥವಾಗಿ ಸೃಷ್ಟಿಸಿದ್ದೇವೆಂದೂ, ನಮ್ಮೆಡೆಗೆ ನೀವು ಮರಳಿ ಬರಲಾರಿರೆಂದೂ ಭಾವಿಸಿದ್ದಿರಾ?
23:116
فَتَعَالَى اللَّهُ الْمَلِكُ الْحَقُّ ۖ لَا إِلَٰهَ إِلَّا هُوَ رَبُّ الْعَرْشِ الْكَرِيمِ ۞
ಅಲ್ಲಾಹನು ತುಂಬಾ ಉನ್ನತನು. ಅವನೇ ನೈಜ ದೊರೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ, ಗೌರವಾನ್ವಿತ ವಿಶ್ವ ಸಿಂಹಾಸನದ ನೈಜ ಒಡೆಯನು.
23:117
وَمَنْ يَدْعُ مَعَ اللَّهِ إِلَٰهًا آخَرَ لَا بُرْهَانَ لَهُ بِهِ فَإِنَّمَا حِسَابُهُ عِنْدَ رَبِّهِ ۚ إِنَّهُ لَا يُفْلِحُ الْكَافِرُونَ ۞
ಅಲ್ಲಾಹನ ಜೊತೆ ಇತರರನ್ನು ಸೇರಿಸಿ ದೇವರೆಂದು ಪ್ರಾರ್ಥಿಸುವವನ ಬಳಿ, ಆ ಕುರಿತು ಯಾವ ಪುರಾವೆಯೂ ಇಲ್ಲ. ಅವನ ಕರ್ಮಗಳ ಲೆಕ್ಕವು ಅವನ ಒಡೆಯನ ಬಳಿ ಇದೆ. ಧಿಕ್ಕಾರಿಗಳು ಖಂಡಿತ ವಿಜಯಿಗಳಾಗುವುದಿಲ್ಲ.
23:118
وَقُلْ رَبِّ اغْفِرْ وَارْحَمْ وَأَنْتَ خَيْرُ الرَّاحِمِينَ ۞
ಮತ್ತು ಹೇಳಿರಿ; ನನ್ನೊಡೆಯಾ, ಕ್ಷಮಿಸು ಮತ್ತು ಕರುಣೆ ತೋರು. ನೀನೇ ಅತ್ಯುತ್ತಮ ಕರುಣಾಳು.