An-Nazi`at (Those who drag forth)
79. ಅನ್ನಾಝಿಆತ್(ಕೀಳುವವರು)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
79:1
وَالنَّازِعَاتِ غَرْقًا
۞
ಮುಳುಗಿ, (ಕಠೋರವಾಗಿ) ಕೀಳುವವರ ಆಣೆ.
79:2
وَالنَّاشِطَاتِ نَشْطًا
۞
ಮೃದುವಾಗಿ ಬಿಡಿಸುವವರ ಆಣೆ.
79:3
وَالسَّابِحَاتِ سَبْحًا
۞
ತೇಲುತ್ತಾ ಚಲಿಸುವವರ ಆಣೆ.
79:4
فَالسَّابِقَاتِ سَبْقًا
۞
ಹುರುಪಿನಿಂದ ಮುನ್ನುಗ್ಗುವವರಾಣೆ.
79:5
فَالْمُدَبِّرَاتِ أَمْرًا
۞
(ಜಗತ್ತಿನ)ವ್ಯವಹಾರಗಳನ್ನು ನೋಡಿ ಕೊಳ್ಳುವವರಾಣೆ.
79:6
يَوْمَ تَرْجُفُ الرَّاجِفَةُ
۞
ಭೂಮಿಯು ಅಲ್ಲೋಲ ಕಲ್ಲೋಲವಾಗುವ ದಿನ.
79:7
تَتْبَعُهَا الرَّادِفَةُ
۞
ಅದರ ಬೆನ್ನಿಗೇ ಮತ್ತೆ ಅಲ್ಲೋಲ ಕಲ್ಲೋಲವಾಗುವುದು.
79:8
قُلُوبٌ يَوْمَئِذٍ وَاجِفَةٌ
۞
ಅಂದು ಮನಸ್ಸುಗಳು ಭಯ ಭೀತವಾಗಿರುವವು.
79:9
أَبْصَارُهَا خَاشِعَةٌ
۞
ದೃಷ್ಟಿಗಳು ಭಯದಿಂದ ತಗ್ಗಿರುವವು.
79:10
يَقُولُونَ أَإِنَّا لَمَرْدُودُونَ فِي الْحَافِرَةِ
۞
(ಧಿಕ್ಕಾರಿಗಳು) ಕೇಳುತ್ತಾರೆ ನಾವು ಮರಳಿ ಮತ್ತೆ ಬರಲಿಕ್ಕುಂಟೇ?
79:11
أَإِذَا كُنَّا عِظَامًا نَخِرَةً
۞
ನಾವು ಟೊಳ್ಳು ಮೂಳೆಗಳಾದ ಬಳಿಕ (ಮರಳಿ ಬರುವುದೇ?)
79:12
قَالُوا تِلْكَ إِذًا كَرَّةٌ خَاسِرَةٌ
۞
ಆ ಮರಳಿಕೆಯು ತೀರಾ ನಷ್ಟದ ವ್ಯವಹಾರವಾಗಿದೆ ಎಂದು ಅವರು ಹೇಳುತ್ತಾರೆ.
79:13
فَإِنَّمَا هِيَ زَجْرَةٌ وَاحِدَةٌ
۞
ಅದೊಂದು ಭೀಕರ ಶಬ್ದವಾಗಿರುವುದು.
79:14
فَإِذَا هُمْ بِالسَّاهِرَةِ
۞
ಅದರ ಬೆನ್ನಿಗೇ ಅವರೆಲ್ಲಾ ಒಂದು ಬಯಲಲ್ಲಿ ಸೇರುವರು.
79:15
هَلْ أَتَاكَ حَدِيثُ مُوسَىٰ
۞
ನಿಮಗೆ ಮೂಸಾರ ವೃತ್ತಾಂತವು ತಲುಪಿದೆಯೇ?
79:16
إِذْ نَادَاهُ رَبُّهُ بِالْوَادِ الْمُقَدَّسِ طُوًى
۞
ಅವರ ಒಡೆಯನು ಅವರನ್ನು ಪವಿತ್ರ ‘‘ತುವಾ’’ ಬೆಟ್ಟದಿಂದ ಕರೆದು (ಹೇಳಿದನು);
79:17
اذْهَبْ إِلَىٰ فِرْعَوْنَ إِنَّهُ طَغَىٰ
۞
ಹೋಗಿರಿ ಫಿರ್‌ಔನ್‌ನೆಡೆಗೆ, ಅವನು ವಿದ್ರೋಹಿಯಾಗಿದ್ದಾನೆ.
79:18
فَقُلْ هَلْ لَكَ إِلَىٰ أَنْ تَزَكَّىٰ
۞
ಮತ್ತು ಅವನೊಡನೆ ಹೇಳಿರಿ - ನೀನು ನಿರ್ಮಲನಾಗ ಬಯಸುವೆಯಾ?
79:19
وَأَهْدِيَكَ إِلَىٰ رَبِّكَ فَتَخْشَىٰ
۞
ನಾನು ನಿನಗೆ ನಿನ್ನೊಡೆಯನ ಕಡೆಗಿರುವ ದಾರಿಯನ್ನು ತೋರಬಲ್ಲೆನು - ನೀನು ಭಯಭಕ್ತಿ ಉಳ್ಳವನಾಗಬೇಕೆಂದು.
79:20
فَأَرَاهُ الْآيَةَ الْكُبْرَىٰ
۞
ಅವರು ಅವನಿಗೆ ದೊಡ್ಡ ಪುರಾವೆಯನ್ನು ತೋರಿಸಿದರು.
79:21
فَكَذَّبَ وَعَصَىٰ
۞
ಆದರೆ ಅವನು ತಿರಸ್ಕರಿಸಿದನು ಮತ್ತು ಅವರ ಆದೇಶವನ್ನು ಮೀರಿದನು.
79:22
ثُمَّ أَدْبَرَ يَسْعَىٰ
۞
ಆ ಬಳಿಕ ಅವನು ಮರಳಿ ಸಂಚು ಹೂಡ ತೊಡಗಿದನು.
79:23
فَحَشَرَ فَنَادَىٰ
۞
ಮತ್ತು ಜನರನ್ನು ಸೇರಿಸಿ ಕರೆ ಕೊಟ್ಟನು.
79:24
فَقَالَ أَنَا رَبُّكُمُ الْأَعْلَىٰ
۞
ಮತ್ತು ನಾನೇ ನಿಮ್ಮ ಅತಿ ದೊಡ್ಡ ಒಡೆಯನು ಎಂದು ಘೋಷಿಸಿದನು.
79:25
فَأَخَذَهُ اللَّهُ نَكَالَ الْآخِرَةِ وَالْأُولَىٰ
۞
ಕೊನೆಗೆ ಅಲ್ಲಾಹನು ಅವನನ್ನು ಹಿಡಿದು ಪರಲೋಕದ ಮತ್ತು ಇಹಲೋಕದ ಶಿಕ್ಷೆಗೆ ಗುರಿಪಡಿಸಿದನು.
79:26
إِنَّ فِي ذَٰلِكَ لَعِبْرَةً لِمَنْ يَخْشَىٰ
۞
ಭಯಭಕ್ತಿ ಉಳ್ಳವನಿಗೆ ಇದರಲ್ಲಿ ಖಂಡಿತ ಪಾಠವಿದೆ.
79:27
أَأَنْتُمْ أَشَدُّ خَلْقًا أَمِ السَّمَاءُ ۚ بَنَاهَا
۞
ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಆಕಾಶವನ್ನೋ? ಅವನು ಅದನ್ನು ರಚಿಸಿರುವನು.
79:28
رَفَعَ سَمْكَهَا فَسَوَّاهَا
۞
ಅವನು ಅವುಗಳನ್ನು ಎತ್ತರಕ್ಕೇರಿಸಿರುವನು ಹಾಗೂ ಅವುಗಳಿಗೆ ಸೂಕ್ತ ರೂಪ ನೀಡಿರುವನು.
79:29
وَأَغْطَشَ لَيْلَهَا وَأَخْرَجَ ضُحَاهَا
۞
ಅವನು ಇರುಳನ್ನು ಕತ್ತಲಾಗಿಸಿರುವನು ಮತ್ತು ಬಿಸಿಲನ್ನು ಹೊರಡಿಸಿರುವನು.
79:30
وَالْأَرْضَ بَعْدَ ذَٰلِكَ دَحَاهَا
۞
ತರುವಾಯ ಭೂಮಿಯನ್ನು ಹಾಸಿರುವನು.
79:31
أَخْرَجَ مِنْهَا مَاءَهَا وَمَرْعَاهَا
۞
ಅವನು ಅದರಿಂದ ನೀರನ್ನು ಹೊರಡಿಸಿ ಮೇವನ್ನು ಬೆಳೆಸಿರುವನು.
79:32
وَالْجِبَالَ أَرْسَاهَا
۞
ಮತ್ತು ಅದರ ಮೇಲೆ ಪರ್ವತಗಳನ್ನು ಹೊರಿಸಿರುವನು.
79:33
مَتَاعًا لَكُمْ وَلِأَنْعَامِكُمْ
۞
ಇದೆಲ್ಲಾ ನಿಮ್ಮ ಹಾಗೂ ನಿಮ್ಮ ಜಾನುವಾರುಗಳ ಅನುಕೂಲಕ್ಕಾಗಿ.
79:34
فَإِذَا جَاءَتِ الطَّامَّةُ الْكُبْرَىٰ
۞
ಆ ಮಹಾ ವಿಪತ್ತು ಬಂದು ಬಿಟ್ಟಾಗ.
79:35
يَوْمَ يَتَذَكَّرُ الْإِنْسَانُ مَا سَعَىٰ
۞
ಅಂದು ಮನುಷ್ಯನು ತಾನು ಮಾಡಿದ್ದೆಲ್ಲವನ್ನೂ ಸ್ಮರಿಸಿ ಕೊಳ್ಳುವನು.
79:36
وَبُرِّزَتِ الْجَحِيمُ لِمَنْ يَرَىٰ
۞
ಮತ್ತು ನೋಡುವವರ ಮುಂದೆ ನರಕವನ್ನು ತಂದಿಡಲಾಗುವುದು.
79:37
فَأَمَّا مَنْ طَغَىٰ
۞
ವಿದ್ರೋಹ ವೆಸಗಿದವನು -
79:38
وَآثَرَ الْحَيَاةَ الدُّنْيَا
۞
ಮತ್ತು ಇಹಲೋಕ ಬದುಕಿಗೆ ಪ್ರಾಶಸ್ತ್ಯ ಕೊಟ್ಟವನು -
79:39
فَإِنَّ الْجَحِيمَ هِيَ الْمَأْوَىٰ
۞
- ನರಕವೇ ಅವನ ನೆಲೆಯಾಗಿರುವುದು.
79:40
وَأَمَّا مَنْ خَافَ مَقَامَ رَبِّهِ وَنَهَى النَّفْسَ عَنِ الْهَوَىٰ
۞
ಇನ್ನು, ತನ್ನ ಒಡೆಯನ ಮುಂದೆ ನಿಲ್ಲಲಿಕ್ಕಿದೆ ಎಂದು ಅಂಜುತ್ತಿದ್ದವನು ಮತ್ತು ತನ್ನ ಸ್ವೇಚ್ಛೆಯನ್ನು ನಿಯಂತ್ರಿಸುತ್ತಿದ್ದವನು -
79:41
فَإِنَّ الْجَنَّةَ هِيَ الْمَأْوَىٰ
۞
- ಸ್ವರ್ಗವೇ ಅವನ ನೆಲೆಯಾಗಿರುವುದು.
79:42
يَسْأَلُونَكَ عَنِ السَّاعَةِ أَيَّانَ مُرْسَاهَا
۞
(ಪುನರುತ್ಥಾನದ) ಆ ಘಳಿಗೆಯು ಎಂದು ಬರುವುದು? ಎಂದು ಅವರು ಪ್ರಶ್ನಿಸುತ್ತಾರೆ.
79:43
فِيمَ أَنْتَ مِنْ ذِكْرَاهَا
۞
ಅದನ್ನು ಪ್ರಸ್ತಾಪಿಸಿ ನಿಮಗೆ ಏನಾಗಬೇಕಾಗಿದೆ?
79:44
إِلَىٰ رَبِّكَ مُنْتَهَاهَا
۞
ಆ ಕುರಿತು ಅಂತಿಮ ಜ್ಞಾನವು ನಿಮ್ಮೊಡೆಯನ ಬಳಿ ಇದೆ.
79:45
إِنَّمَا أَنْتَ مُنْذِرُ مَنْ يَخْشَاهَا
۞
(ದೂತರೇ,) ನೀವಂತು ಭಯ ಭಕ್ತಿ ಉಳ್ಳವರನ್ನು ಎಚ್ಚರಿಸುವವರು ಮಾತ್ರ.
79:46
كَأَنَّهُمْ يَوْمَ يَرَوْنَهَا لَمْ يَلْبَثُوا إِلَّا عَشِيَّةً أَوْ ضُحَاهَا
۞
ಅವರು ಅದನ್ನು (ಪರಲೋಕವನ್ನು) ಕಣ್ಣಾರೆ ಕಂಡಾಗ, ತಾವು (ಇಹಲೋಕದಲ್ಲಿ) ಕಳೆದುದು ಕೇವಲ ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರ ಎಂದು ಕೊಳ್ಳುವರು.