Al-Hijr (The rock)
15. ಅಲ್ ಹಿಜ್ರ್(ಹಿಜ್ರ್‌ನವರು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
15:1
الر ۚ تِلْكَ آيَاتُ الْكِتَابِ وَقُرْآنٍ مُبِينٍ ۞
ಅಲಿಫ್ ಲಾಮ್ ರಾ - ಇವು ಗ್ರಂಥದ ಹಾಗೂ ಬಹಳ ಸ್ಪಷ್ಟವಾಗಿರುವ ಕುರ್‌ಆನ್‌ನ ವಚನಗಳು.
15:2
رُبَمَا يَوَدُّ الَّذِينَ كَفَرُوا لَوْ كَانُوا مُسْلِمِينَ ۞
ತಾವು ಮುಸ್ಲಿಮರಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಧಿಕ್ಕಾರಿಗಳು ಅಪಾರ ಆಶೆ ಪಡುವರು.
15:3
ذَرْهُمْ يَأْكُلُوا وَيَتَمَتَّعُوا وَيُلْهِهِمُ الْأَمَلُ ۖ فَسَوْفَ يَعْلَمُونَ ۞
ಸದ್ಯ ಅವರನ್ನು ಬಿಟ್ಟು ಬಿಡಿರಿ. ಅವರು ತಿನ್ನುತ್ತಲೂ, ಸುಖ ಭೋಗಗಳಲ್ಲೂ ತಲ್ಲೀನರಾಗಿರಲಿ. ಅವರ ಹುಸಿ ನಿರೀಕ್ಷೆಯು ಅವರನ್ನು ಭ್ರಮೆಯಲ್ಲಿರಿಸಲಿ. (ವಾಸ್ತವವನ್ನು) ಅವರು ಬಹುಬೇಗನೇ ಅರಿಯುವರು.
15:4
وَمَا أَهْلَكْنَا مِنْ قَرْيَةٍ إِلَّا وَلَهَا كِتَابٌ مَعْلُومٌ ۞
ಒಂದು ಲಿಖಿತ ಕಾಲವನ್ನು ನಿಗದಿಪಡಿಸದೆ ನಾವು ಯಾವ ಜನಾಂಗವನ್ನೂ ನಾಶ ಮಾಡಿದ್ದಿಲ್ಲ.
15:5
مَا تَسْبِقُ مِنْ أُمَّةٍ أَجَلَهَا وَمَا يَسْتَأْخِرُونَ ۞
ತನ್ನ ನಿಗದಿತ ಅವಧಿಯನ್ನು ಮೀರಿ ಮುನ್ನಡೆಯಲು ಅಥವಾ ಅದರಿಂದ ಹಿಂದೆ ಉಳಿಯಲು ಯಾವ ಸಮುದಾಯಕ್ಕೂ ಸಾಧ್ಯವಾಗದು.
15:6
وَقَالُوا يَا أَيُّهَا الَّذِي نُزِّلَ عَلَيْهِ الذِّكْرُ إِنَّكَ لَمَجْنُونٌ ۞
ಅವರು (ಧಿಕ್ಕಾರಿಗಳು) ಹೇಳಿದರು; ‘‘ದಿವ್ಯ ಉಪದೇಶ ಇಳಿಸಿ ಕೊಡಲಾಗಿರುವವನೇ, ನೀನೊಬ್ಬ ಹುಚ್ಚನೇ ಸರಿ.
15:7
لَوْ مَا تَأْتِينَا بِالْمَلَائِكَةِ إِنْ كُنْتَ مِنَ الصَّادِقِينَ ۞
ನೀನು ಸತ್ಯವಂತನಾಗಿದ್ದರೆ, ನೀನೇಕೆ ನಮ್ಮ ಬಳಿಗೆ ಮಲಕ್‌ಗಳನ್ನು ಕರೆತರುವುದಿಲ್ಲ?’’
15:8
مَا نُنَزِّلُ الْمَلَائِكَةَ إِلَّا بِالْحَقِّ وَمَا كَانُوا إِذًا مُنْظَرِينَ ۞
ನಿಜವಾಗಿ ನಾವು ಮಲಕ್‌ಗಳನ್ನು ಸತ್ಯದೊಂದಿಗೆ ಮಾತ್ರ ಕಳುಹಿಸುತ್ತೇವೆ. ಆದರೆ ಆಗ ಅವರಿಗೆ (ಧಿಕ್ಕಾರಿಗಳಿಗೆ) ಹೆಚ್ಚಿನ ಕಾಲಾವಧಿ ನೀಡಲಾಗುವುದಿಲ್ಲ.
15:9
إِنَّا نَحْنُ نَزَّلْنَا الذِّكْرَ وَإِنَّا لَهُ لَحَافِظُونَ ۞
ಖಂಡಿತವಾಗಿಯೂ ನಾವೇ ಈ ದಿವ್ಯ ಬೋಧನೆಯನ್ನು ಇಳಿಸಿ ಕೊಟ್ಟವರು ಮತ್ತು ಖಂಡಿತವಾಗಿಯೂ ನಾವೇ ಇದರ ಸಂರಕ್ಷಕರಾಗಿದ್ದೇವೆ.
15:10
وَلَقَدْ أَرْسَلْنَا مِنْ قَبْلِكَ فِي شِيَعِ الْأَوَّلِينَ ۞
ನಿಮಗಿಂತ ಹಿಂದಿನ ಜನವರ್ಗಗಳಲ್ಲೂ ನಾವು (ದೂತರನ್ನು) ರವಾನಿಸಿದ್ದೆವು.
15:11
وَمَا يَأْتِيهِمْ مِنْ رَسُولٍ إِلَّا كَانُوا بِهِ يَسْتَهْزِئُونَ ۞
ಅವರ ಬಳಿಗೆ ಬಂದ ದೂತರಲ್ಲಿ ಯಾರೂ ಅಪಹಾಸ್ಯಕ್ಕೆ ತುತ್ತಾಗದೆ ಇರಲಿಲ್ಲ.
15:12
كَذَٰلِكَ نَسْلُكُهُ فِي قُلُوبِ الْمُجْرِمِينَ ۞
ಈ ರೀತಿ ನಾವು ಅದನ್ನು (ಅಪಹಾಸ್ಯವನ್ನು) ಅಪರಾಧಿಗಳ ಮನಸ್ಸುಗಳೊಳಗೆ ಬಿತ್ತಿರುತ್ತೇವೆ.
15:13
لَا يُؤْمِنُونَ بِهِ ۖ وَقَدْ خَلَتْ سُنَّةُ الْأَوَّلِينَ ۞
ಅವರು ಇದನ್ನು (ಈ ಉಪದೇಶವನ್ನು) ನಂಬಲಾರರು. ಅದುವೇ, ಹಿಂದಿನವರ ಸಂಪ್ರದಾಯವಾಗಿದೆ.
15:14
وَلَوْ فَتَحْنَا عَلَيْهِمْ بَابًا مِنَ السَّمَاءِ فَظَلُّوا فِيهِ يَعْرُجُونَ ۞
ಒಂದು ವೇಳೆ ನಾವು ಅವರ ಪಾಲಿಗೆ ಆಕಾಶದ ಒಂದು ಬಾಗಿಲನ್ನು ತೆರೆದಿದ್ದರೆ ಮತ್ತು ಅವರು ಆ ಮೂಲಕ ಮೇಲೇರುತ್ತಲೇ ಇದ್ದಿದ್ದರೆ -
15:15
لَقَالُوا إِنَّمَا سُكِّرَتْ أَبْصَارُنَا بَلْ نَحْنُ قَوْمٌ مَسْحُورُونَ ۞
ಆಗಲೂ ಅವರು, ‘‘ನಮ್ಮ ದೃಷ್ಟಿಗಳನ್ನು ವಂಚಿಸಲಾಗಿದೆ, ನಿಜವಾಗಿ ನಮ್ಮನ್ನು ಮಂತ್ರ ಮುಗ್ಧಗೊಳಿಸಲಾಗಿದೆ’’ ಎಂದೇ ಹೇಳುತ್ತಿದ್ದರು.
15:16
وَلَقَدْ جَعَلْنَا فِي السَّمَاءِ بُرُوجًا وَزَيَّنَّاهَا لِلنَّاظِرِينَ ۞
ಖಂಡಿತವಾಗಿಯೂ ನಾವು ಆಕಾಶದಲ್ಲಿ ತಾರಾ ಮಂಡಲಗಳನ್ನು ನಿರ್ಮಿಸಿದೆವು ಮತ್ತು ನಾವು ಅವುಗಳನ್ನು ನೋಡುವವರ ಪಾಲಿಗೆ ಅಲಂಕಾರವಾಗಿಸಿದೆವು.
15:17
وَحَفِظْنَاهَا مِنْ كُلِّ شَيْطَانٍ رَجِيمٍ ۞
ಮತ್ತು ನಾವು ಅವುಗಳನ್ನು ಎಲ್ಲ ಶಪಿತ ಶೈತಾನರಿಂದ ಸುರಕ್ಷಿತವಾಗಿಟ್ಟೆವು.
15:18
إِلَّا مَنِ اسْتَرَقَ السَّمْعَ فَأَتْبَعَهُ شِهَابٌ مُبِينٌ ۞
ಕದ್ದು ಆಲಿಸಲು ಪ್ರಯತ್ನಿಸುವಾತನನ್ನು ಒಂದು ಉಜ್ವಲ ಬೆಂಕಿಯು ಹಿಂಬಾಲಿಸುತ್ತದೆ.
15:19
وَالْأَرْضَ مَدَدْنَاهَا وَأَلْقَيْنَا فِيهَا رَوَاسِيَ وَأَنْبَتْنَا فِيهَا مِنْ كُلِّ شَيْءٍ مَوْزُونٍ ۞
ಹಾಗೆಯೇ ನಾವು ಭೂಮಿಯನ್ನು ಹರಡಿದೆವು ಮತ್ತು ಅದರಲ್ಲಿ ಬೆಟ್ಟಗಳನ್ನು ನೆಟ್ಟೆವು ಹಾಗೂ ಅದರಲ್ಲಿ ಎಲ್ಲವನ್ನೂ ಸಮರ್ಪಕ ಪ್ರಮಾಣದಲ್ಲಿ ಬೆಳೆಸಿದೆವು.
15:20
وَجَعَلْنَا لَكُمْ فِيهَا مَعَايِشَ وَمَنْ لَسْتُمْ لَهُ بِرَازِقِينَ ۞
ಅದರಲ್ಲಿ ನಾವು ನಿಮಗೂ ನೀವು ಯಾರ ಅನ್ನದಾತರಲ್ಲವೋ ಅವರಿಗೂ ಜೀವನೋಪಾಯಗಳನ್ನು ಒದಗಿಸಿದೆವು.
15:21
وَإِنْ مِنْ شَيْءٍ إِلَّا عِنْدَنَا خَزَائِنُهُ وَمَا نُنَزِّلُهُ إِلَّا بِقَدَرٍ مَعْلُومٍ ۞
ನಮ್ಮ ಬಳಿ ಪ್ರತಿಯೊಂದು ವಸ್ತುವಿನ ಭಂಡಾರಗಳೇ ಇವೆ. (ಆದರೆ) ನಾವು ಅವುಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಇಳಿಸಿಕೊಡುತ್ತೇವೆ.
15:22
وَأَرْسَلْنَا الرِّيَاحَ لَوَاقِحَ فَأَنْزَلْنَا مِنَ السَّمَاءِ مَاءً فَأَسْقَيْنَاكُمُوهُ وَمَا أَنْتُمْ لَهُ بِخَازِنِينَ ۞
ನಾವು ನೀರು ತುಂಬಿದ ಗಾಳಿಯನ್ನು ರವಾನಿಸಿದೆವು ಮತ್ತು ನಾವು ಆಕಾಶದಿಂದ ನೀರನ್ನು ಇಳಿಸಿ ಅದನ್ನು ನಿಮಗೆ ಕುಡಿಸಿದೆವು. ಅದೇನೂ ನಿಮ್ಮ ಸಂಗ್ರಹದಲ್ಲಿರಲಿಲ್ಲ.
15:23
وَإِنَّا لَنَحْنُ نُحْيِي وَنُمِيتُ وَنَحْنُ الْوَارِثُونَ ۞
ಖಂಡಿತ ನಾವೇ (ಎಲ್ಲರನ್ನೂ) ಜೀವಂತಗೊಳಿಸುವವರು ಹಾಗೂ ಸಾಯಿಸುವವರಾಗಿದ್ದೇವೆ ಮತ್ತು (ಅಂತಿಮವಾಗಿ) ನಾವೇ ಎಲ್ಲರ ಉತ್ತರಾಧಿಕಾರಿಗಳಾಗಿರುತ್ತೇವೆ.
15:24
وَلَقَدْ عَلِمْنَا الْمُسْتَقْدِمِينَ مِنْكُمْ وَلَقَدْ عَلِمْنَا الْمُسْتَأْخِرِينَ ۞
ನಿಮ್ಮಲ್ಲಿ ಮುಂದೆ ದಾಟಿ ಹೋದವರನ್ನೂ ನಾವು ಖಂಡಿತ ಬಲ್ಲೆವು ಮತ್ತು ಹಿಂದೆ ಉಳಿದಿರುವವರನ್ನೂ ನಾವು ಖಂಡಿತ ಬಲ್ಲೆವು.
15:25
وَإِنَّ رَبَّكَ هُوَ يَحْشُرُهُمْ ۚ إِنَّهُ حَكِيمٌ عَلِيمٌ ۞
ಖಂಡಿತ ನಿಮ್ಮ ಒಡೆಯನೇ ಅವರೆಲ್ಲರನ್ನೂ ಒಂದೆಡೆ ಸೇರಿಸುವನು. ಅವನು ಖಂಡಿತ ತುಂಬಾ ಯುಕ್ತಿವಂತನೂ ಅರಿವು ಉಳ್ಳವನೂ ಆಗಿದ್ದಾನೆ.
15:26
وَلَقَدْ خَلَقْنَا الْإِنْسَانَ مِنْ صَلْصَالٍ مِنْ حَمَإٍ مَسْنُونٍ ۞
ಖಂಡಿತವಾಗಿಯೂ ನಾವೇ ಮಾನವನನ್ನು ಕರಿ ಆವೆ ಮಣ್ಣಿನ ಒಣಗಾರೆಯಿಂದ ಸೃಷ್ಟಿಸಿರುವೆವು.
15:27
وَالْجَانَّ خَلَقْنَاهُ مِنْ قَبْلُ مِنْ نَارِ السَّمُومِ ۞
ಅದಕ್ಕಿಂತಲೂ ಮುನ್ನ ನಾವು ತೀಕ್ಷ್ಣವಾದ ಬೆಂಕಿಯಿಂದ ಜಿನ್ನ್‌ಗಳನ್ನು ಸೃಷ್ಟಿಸಿದ್ದೆವು.
15:28
وَإِذْ قَالَ رَبُّكَ لِلْمَلَائِكَةِ إِنِّي خَالِقٌ بَشَرًا مِنْ صَلْصَالٍ مِنْ حَمَإٍ مَسْنُونٍ ۞
ನಿಮ್ಮ ಒಡೆಯನು, ಮಲಕ್‌ಗಳೊಡನೆ ಹೀಗೆಂದಿದ್ದನು; ನಾನು ಕರಿ ಆವೆ ಮಣ್ಣಿನ ಒಣಗಾರೆಯಿಂದ ಒಬ್ಬ ಮಾನವನನ್ನು ಸೃಷ್ಟಿಸಲಿದ್ದೇನೆ-
15:29
فَإِذَا سَوَّيْتُهُ وَنَفَخْتُ فِيهِ مِنْ رُوحِي فَقَعُوا لَهُ سَاجِدِينَ ۞
ನಾನು ಅವನನ್ನು ಸಜ್ಜುಗೊಳಿಸಿ ಅವನಲ್ಲಿ ನನ್ನ ಆತ್ಮವನ್ನು ಊದಿದಾಗ ನೀವು ಅವನಿಗೆ ಸಾಷ್ಟಾಂಗವೆರಗಿರಿ.
15:30
فَسَجَدَ الْمَلَائِكَةُ كُلُّهُمْ أَجْمَعُونَ ۞
ಅದರಂತೆ, ಎಲ್ಲ ಮಲಕ್‌ಗಳೂ ಸಾಷ್ಟಾಂಗವೆರಗಿದರು.
15:31
إِلَّا إِبْلِيسَ أَبَىٰ أَنْ يَكُونَ مَعَ السَّاجِدِينَ ۞
ಆದರೆ ಇಬ್ಲೀಸನ ಹೊರತು. ಅವನು, ಸಾಷ್ಟಾಂಗವೆರಗಿದವರ ಜೊತೆ ಸೇರಲು ನಿರಾಕರಿಸಿದನು.
15:32
قَالَ يَا إِبْلِيسُ مَا لَكَ أَلَّا تَكُونَ مَعَ السَّاجِدِينَ ۞
ಅವನು (ಅಲ್ಲಾಹನು) ಕೇಳಿದನು; ಓ ಇಬ್ಲೀಸ್, ನೀನೇಕೆ ಸಾಷ್ಟಾಂಗವೆರಗಿದವರ ಜೊತೆ ಸೇರಲಿಲ್ಲ?
15:33
قَالَ لَمْ أَكُنْ لِأَسْجُدَ لِبَشَرٍ خَلَقْتَهُ مِنْ صَلْصَالٍ مِنْ حَمَإٍ مَسْنُونٍ ۞
ಅವನು (ಇಬ್ಲೀಸ್) ಹೇಳಿದನು; ನೀನು ಆವೆಮಣ್ಣಿನ ಒಣಗಾರೆಯಿಂದ ಸೃಷ್ಟಿಸಿರುವ ಮಾನವನಿಗೆ ಸಾಷ್ಟಾಂಗವೆರಗುವವನು ನಾನಲ್ಲ.
15:34
قَالَ فَاخْرُجْ مِنْهَا فَإِنَّكَ رَجِيمٌ ۞
ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ತೊಲಗು. ಖಂಡಿತವಾಗಿಯೂ ನೀನು ಶಪಿತನು.
15:35
وَإِنَّ عَلَيْكَ اللَّعْنَةَ إِلَىٰ يَوْمِ الدِّينِ ۞
ಅಂತಿಮ ವಿಚಾರಣೆಯ ದಿನದವರೆಗೂ ನಿನ್ನ ಮೇಲೆ ಶಾಪವಿರುವುದು.
15:36
قَالَ رَبِّ فَأَنْظِرْنِي إِلَىٰ يَوْمِ يُبْعَثُونَ ۞
ಅವನು ಹೇಳಿದನು; ‘‘ನನ್ನೊಡೆಯಾ, (ಎಲ್ಲ ನಿರ್ಜೀವಿಗಳನ್ನು) ಜೀವಂತಗೊಳಿಸಲಾಗುವ ದಿನದ ತನಕ ನನಗೆ ಕಾಲಾವಕಾಶವನ್ನು ನೀಡು.’’
15:37
قَالَ فَإِنَّكَ مِنَ الْمُنْظَرِينَ ۞
ಅವನು (ಅಲ್ಲಾಹನು) ಹೇಳಿದನು; ಇದೋ, ನಿನಗೆ ಕಾಲಾವಕಾಶ ನೀಡಲಾಗಿದೆ-
15:38
إِلَىٰ يَوْمِ الْوَقْتِ الْمَعْلُومِ ۞
- ಒಂದು ನಿರ್ದಿಷ್ಟ ದಿನದ ವರೆಗೆ.
15:39
قَالَ رَبِّ بِمَا أَغْوَيْتَنِي لَأُزَيِّنَنَّ لَهُمْ فِي الْأَرْضِ وَلَأُغْوِيَنَّهُمْ أَجْمَعِينَ ۞
ಅವನು (ಇಬ್ಲೀಸ್) ಹೇಳಿದನು; ನನ್ನೊಡೆಯಾ, ನೀನು ನನ್ನನ್ನು ದಾರಿ ತಪ್ಪಿಸಿರುವುದರಿಂದ ನಾನು (ತಪ್ಪು ದಾರಿಯನ್ನು) ಭೂಮಿಯಲ್ಲಿರುವವರಿಗೆ ಚಂದಗಾಣಿಸುವೆನು ಮತ್ತು ಅವರೆಲ್ಲರನ್ನೂ ದಾರಿತಪ್ಪಿಸಿ ಬಿಡುವೆನು.
15:40
إِلَّا عِبَادَكَ مِنْهُمُ الْمُخْلَصِينَ ۞
ಅವರ ಪೈಕಿ ನಿನ್ನ ಆಯ್ದ ದಾಸರ ಹೊರತು.
15:41
قَالَ هَٰذَا صِرَاطٌ عَلَيَّ مُسْتَقِيمٌ ۞
ಅವನು (ಅಲ್ಲಾಹನು) ಹೇಳಿದನು; ಇದು ನನ್ನ ಕಡೆಗಿರುವ ನೇರ ಮಾರ್ಗ.
15:42
إِنَّ عِبَادِي لَيْسَ لَكَ عَلَيْهِمْ سُلْطَانٌ إِلَّا مَنِ اتَّبَعَكَ مِنَ الْغَاوِينَ ۞
ಖಂಡಿತವಾಗಿಯೂ ಆ ನನ್ನ ದಾಸರ ಮೇಲೆ ನಿನ್ನ ಅಧಿಕಾರವೇನೂ ನಡೆಯದು - ನಿನ್ನನ್ನು ಅನುಸರಿಸಿದ ದಾರಿಗೇಡಿಗಳ ಹೊರತು.
15:43
وَإِنَّ جَهَنَّمَ لَمَوْعِدُهُمْ أَجْمَعِينَ ۞
ಖಂಡಿತವಾಗಿಯೂ, ನರಕವೇ ಅವರೆಲ್ಲರಿಗೆ ವಾಗ್ದಾನ ಮಾಡಲಾದ ನೆಲೆಯಾಗಿದೆ.
15:44
لَهَا سَبْعَةُ أَبْوَابٍ لِكُلِّ بَابٍ مِنْهُمْ جُزْءٌ مَقْسُومٌ ۞
ಅದಕ್ಕೆ ಏಳು ಬಾಗಿಲುಗಳಿರುವವು. ಪ್ರತಿಯೊಂದು ಬಾಗಿಲಿಗೂ ಅವರಲ್ಲಿನ ಒಂದು ಪಾಲು ನಿಗದಿತವಾಗಿದೆ.
15:45
إِنَّ الْمُتَّقِينَ فِي جَنَّاتٍ وَعُيُونٍ ۞
ಧರ್ಮನಿಷ್ಠರು ಖಂಡಿತ ತೋಟಗಳಲ್ಲಿ ಹಾಗೂ ಝರಿಗಳಲ್ಲಿ ಇರುವರು.
15:46
ادْخُلُوهَا بِسَلَامٍ آمِنِينَ ۞
‘‘ಶಾಂತಿಯೊಂದಿಗೆ ಹಾಗೂ ಸುರಕ್ಷಿತರಾಗಿ ಇವುಗಳೊಳಗೆ ಪ್ರವೇಶಿಸಿರಿ’’ (ಎನ್ನುತ್ತಾ ಅವರನ್ನು ಸ್ವಾಗತಿಸಲಾಗುವುದು).
15:47
وَنَزَعْنَا مَا فِي صُدُورِهِمْ مِنْ غِلٍّ إِخْوَانًا عَلَىٰ سُرُرٍ مُتَقَابِلِينَ ۞
ಅವರ ಎದೆಗಳಲ್ಲಿ ಉಳಿದಿದ್ದ ವೈಷಮ್ಯವನ್ನೆಲ್ಲಾ ನಾವು ಕಿತ್ತೆಸೆದೆವು - ಅವರು ಸಹೋದರರಾಗಿ ಆಸನಗಳಲ್ಲಿ ಎದುರು ಬದುರಾಗಿ ಕುಳಿತಿರುವರು.
15:48
لَا يَمَسُّهُمْ فِيهَا نَصَبٌ وَمَا هُمْ مِنْهَا بِمُخْرَجِينَ ۞
ಅಲ್ಲಿ ಯಾವ ಸಂಕಟವೂ ಅವರನ್ನು ಬಾಧಿಸದು ಮತ್ತು ಅವರನ್ನೆಂದೂ ಅಲ್ಲಿಂದ ಹೊರ ಹಾಕಲಾಗದು.
15:49
۞ نَبِّئْ عِبَادِي أَنِّي أَنَا الْغَفُورُ الرَّحِيمُ ۞
ನನ್ನ ದಾಸರಿಗೆ ತಿಳಿಸಿ ಬಿಡಿರಿ; ನಾನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ತುಂಬಾ ಕರುಣಾಳುವೆಂದು.
15:50
وَأَنَّ عَذَابِي هُوَ الْعَذَابُ الْأَلِيمُ ۞
ಮತ್ತು ನನ್ನ ಶಿಕ್ಷೆಯೂ ತುಂಬಾ ಕಠೋರ ಶಿಕ್ಷೆಯಾಗಿರುವುದೆಂದು.
15:51
وَنَبِّئْهُمْ عَنْ ضَيْفِ إِبْرَاهِيمَ ۞
ಇಬ್ರಾಹೀಮರ ಅತಿಥಿಗಳ ಕುರಿತು ಅವರಿಗೆ ತಿಳಿಸಿರಿ.
15:52
إِذْ دَخَلُوا عَلَيْهِ فَقَالُوا سَلَامًا قَالَ إِنَّا مِنْكُمْ وَجِلُونَ ۞
ಅವರು, ಅವರ ಬಳಿಗೆ ಬಂದಾಗ ‘ಸಲಾಮ್’ (ಶಾಂತಿ) ಎಂದರು. ಆಗ ಅವರು (ಇಬ್ರಾಹೀಮರು), ನಮಗೆ ನಿಮ್ಮ ಕುರಿತು ಆತಂಕವಿದೆ ಎಂದರು.
15:53
قَالُوا لَا تَوْجَلْ إِنَّا نُبَشِّرُكَ بِغُلَامٍ عَلِيمٍ ۞
ಅವರು ಹೇಳಿದರು; ಆತಂಕ ಪಡಬೇಡಿ. ನಾವು ನಿಮಗೆ ಒಬ್ಬ ಜ್ಞಾನವಂತ ಪುತ್ರನ ಶುಭವಾರ್ತೆ ನೀಡುತ್ತೇವೆ.
15:54
قَالَ أَبَشَّرْتُمُونِي عَلَىٰ أَنْ مَسَّنِيَ الْكِبَرُ فَبِمَ تُبَشِّرُونَ ۞
ಅವರು (ಇಬ್ರಾಹೀಮ್) ಹೇಳಿದರು; ನೀವೇನು ಮುದಿತನ ಆವರಿಸಿರುವ ನನಗೆ ಶುಭವಾರ್ತೆ ನೀಡುತ್ತಿರುವಿರಾ - ಅದೆಂತಹ ಶುಭವಾರ್ತೆ ನೀಡುತ್ತಿರುವಿರಿ ನೀವು?
15:55
قَالُوا بَشَّرْنَاكَ بِالْحَقِّ فَلَا تَكُنْ مِنَ الْقَانِطِينَ ۞
ಅವರು ಹೇಳಿದರು; ನಾವು ನಿಮಗೆ ಸತ್ಯದ ಶುಭವಾರ್ತೆ ನೀಡುತ್ತಿದ್ದೇವೆ. ನೀವು ನಿರಾಶರ ಸಾಲಿಗೆ ಸೇರಬೇಡಿ.
15:56
قَالَ وَمَنْ يَقْنَطُ مِنْ رَحْمَةِ رَبِّهِ إِلَّا الضَّالُّونَ ۞
ಅವರು (ಇಬ್ರಾಹೀಮ್) ಹೇಳಿದರು; ದಾರಿಗೆಟ್ಟವರ ಹೊರತು ಇನ್ನಾರು ತಾನೇ ತನ್ನ ಒಡೆಯನ ಅನುಗ್ರಹದ ಬಗ್ಗೆ ನಿರಾಶನಾಗಬಲ್ಲನು?
15:57
قَالَ فَمَا خَطْبُكُمْ أَيُّهَا الْمُرْسَلُونَ ۞
ಅವರು (ಇಬ್ರಾಹೀಮ್) ಕೇಳಿದರು; ದೂತರುಗಳೇ, ನಿಮ್ಮ ಹೊಣೆಗಾರಿಕೆ ಏನು?
15:58
قَالُوا إِنَّا أُرْسِلْنَا إِلَىٰ قَوْمٍ مُجْرِمِينَ ۞
ಅವರು ಹೇಳಿದರು; ನಮ್ಮನ್ನು ಅಪರಾಧಿ ಜನಾಂಗದೆಡೆಗೆ ಕಳಿಸಲಾಗಿದೆ.
15:59
إِلَّا آلَ لُوطٍ إِنَّا لَمُنَجُّوهُمْ أَجْمَعِينَ ۞
ಲೂತ್‌ರ ಮನೆಯವರ ಹೊರತು - ಅವರನ್ನೆಲ್ಲಾ ನಾವು ರಕ್ಷಿಸುವೆವು -
15:60
إِلَّا امْرَأَتَهُ قَدَّرْنَا ۙ إِنَّهَا لَمِنَ الْغَابِرِينَ ۞
ಆದರೆ, ಅವರ ಪತ್ನಿಯ ಹೊರತು. ಖಂಡಿತವಾಗಿಯೂ ಆಕೆಯು ಹಿಂದುಳಿದವರಲ್ಲಿ ಒಬ್ಬಳಾಗಿರುವಳೆಂದು ನಾವು ತೀರ್ಮಾನಿಸಿರುವೆವು.
15:61
فَلَمَّا جَاءَ آلَ لُوطٍ الْمُرْسَلُونَ ۞
ಕೊನೆಗೆ ಆ ದೂತರು ಲೂತ್‌ರ ಮನೆಯವರ ಬಳಿಗೆ ಬಂದರು.
15:62
قَالَ إِنَّكُمْ قَوْمٌ مُنْكَرُونَ ۞
ಅವರು (ಲೂತ್); ನೀವು ತೀರಾ ಅಪರಿಚಿತರು! ಎಂದರು.
15:63
قَالُوا بَلْ جِئْنَاكَ بِمَا كَانُوا فِيهِ يَمْتَرُونَ ۞
ಅವರು ಹೇಳಿದರು; ನಿಜವಾಗಿ, ಅವರು (ಲೂತ್‌ರ ನಾಡಿನವರು) ಯಾವುದರ ಕುರಿತು ಸಂಶಯದಲ್ಲಿದ್ದರೋ ಅದನ್ನೇ (ದೇವರ ಶಿಕ್ಷೆಯನ್ನೇ) ನಾವು ತಂದಿರುವೆವು.
15:64
وَأَتَيْنَاكَ بِالْحَقِّ وَإِنَّا لَصَادِقُونَ ۞
ಮತ್ತು ನಾವು ಸತ್ಯದೊಂದಿಗೆ ನಿಮ್ಮ ಬಳಿಗೆ ಬಂದಿರುವೆವು - ನಾವು ಖಂಡಿತ ಸತ್ಯವಂತರು.
15:65
فَأَسْرِ بِأَهْلِكَ بِقِطْعٍ مِنَ اللَّيْلِ وَاتَّبِعْ أَدْبَارَهُمْ وَلَا يَلْتَفِتْ مِنْكُمْ أَحَدٌ وَامْضُوا حَيْثُ تُؤْمَرُونَ ۞
ನೀವು ರಾತ್ರಿಯ ಒಂದು ಹಂತದಲ್ಲಿ ನಿಮ್ಮ ಮನೆಯವರ ಜೊತೆ ಹೊರಟು ಹೋಗಿರಿ ಮತ್ತು ನೀವು ಸ್ವತಃ ಅವರನ್ನು ಹಿಂಬಾಲಿಸುತ್ತಾ ಅವರ ಬೆನ್ನು ಬೆನ್ನಿಗೇ ನಡೆಯಿರಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡಬಾರದು ಮತ್ತು ನೀವು ನಿಮಗೆ ಆದೇಶಿಸಲಾಗಿರುವ ಕಡೆಗೇ ಹೋಗಿರಿ.
15:66
وَقَضَيْنَا إِلَيْهِ ذَٰلِكَ الْأَمْرَ أَنَّ دَابِرَ هَٰؤُلَاءِ مَقْطُوعٌ مُصْبِحِينَ ۞
ಬೆಳಗಾಗುವ ಹೊತ್ತಿಗೆ ಆ ಜನರ ಮೂಲವನ್ನೇ ಕಡಿದು ಬಿಡಲಾಗಿರುವುದು ಎಂಬ ಆ ವಿಷಯವನ್ನು ನಾವು ಅವರಿಗೆ (ಲೂತ್‌ರಿಗೆ) ಖಚಿತವಾಗಿ ತಿಳಿಸಿದೆವು.
15:67
وَجَاءَ أَهْلُ الْمَدِينَةِ يَسْتَبْشِرُونَ ۞
ನಗರದವರು ಸಂಭ್ರಮಿಸುತ್ತಾ ಬಂದರು.
15:68
قَالَ إِنَّ هَٰؤُلَاءِ ضَيْفِي فَلَا تَفْضَحُونِ ۞
ಅವರು (ಲೂತ್) ಹೇಳಿದರು; ಇವರು ನನ್ನ ಅತಿಥಿಗಳು. ನೀವು ನನ್ನನ್ನು ನಗೆಪಾಟಲಿಗೆ ಗುರಿಮಾಡಬೇಡಿ.
15:69
وَاتَّقُوا اللَّهَ وَلَا تُخْزُونِ ۞
ಮತ್ತು ನೀವು ಅಲ್ಲಾಹನಿಗೆ ಅಂಜಿರಿ ಹಾಗೂ ನನ್ನನ್ನು ಅಪಮಾನಿಸಬೇಡಿ.
15:70
قَالُوا أَوَلَمْ نَنْهَكَ عَنِ الْعَالَمِينَ ۞
ಅವರು (ನಾಡಿನವರು) ಹೇಳಿದರು; ನೀವು ಸರ್ವ ಜಗತ್ತಿನವರ ಬೆಂಬಲಕ್ಕೆ ನಿಲ್ಲಬಾರದೆಂದು ನಾವು ನಿಮ್ಮನ್ನು ತಡೆದಿರಲಿಲ್ಲವೇ?
15:71
قَالَ هَٰؤُلَاءِ بَنَاتِي إِنْ كُنْتُمْ فَاعِلِينَ ۞
ಅವರು (ಲೂತ್) ಹೇಳಿದರು; ನೀವೇನಾದರೂ (ವಿವಾಹ) ಮಾಡಿ ಕೊಳ್ಳುವುದಿದ್ದರೆ, ಇದೋ ನನ್ನ ಪುತ್ರಿಯರು ಇಲ್ಲಿದ್ದಾರೆ.
15:72
لَعَمْرُكَ إِنَّهُمْ لَفِي سَكْرَتِهِمْ يَعْمَهُونَ ۞
(ದೂತರೇ,) ನಿಮ್ಮ ವಯಸ್ಸಿನಾಣೆ, ಆ ಜನರು ತಮ್ಮ ಮದದಲ್ಲಿ ಖಂಡಿತ ಕುರುಡಾಗಿದ್ದರು.
15:73
فَأَخَذَتْهُمُ الصَّيْحَةُ مُشْرِقِينَ ۞
ಕೊನೆಗೆ, ಸೂರ್ಯೋದಯದ ವೇಳೆಗೆ ಒಂದು ಭಯಾನಕ ಶಬ್ದವು ಅವರನ್ನು ಆವರಿಸಿಕೊಂಡಿತು.
15:74
فَجَعَلْنَا عَالِيَهَا سَافِلَهَا وَأَمْطَرْنَا عَلَيْهِمْ حِجَارَةً مِنْ سِجِّيلٍ ۞
ನಾವು ಆ ನಾಡನ್ನು ಬುಡಮೇಲು ಗೊಳಿಸಿಬಿಟ್ಟೆವು ಮತ್ತು ನಾವು ಅವರ ಮೇಲೆ ಬೆಂದ ಕಣಗಳ ಮಳೆ ಸುರಿಸಿದೆವು.
15:75
إِنَّ فِي ذَٰلِكَ لَآيَاتٍ لِلْمُتَوَسِّمِينَ ۞
ಚಿಂತನೆ ನಡೆಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ.
15:76
وَإِنَّهَا لَبِسَبِيلٍ مُقِيمٍ ۞
ಅದು (ಆ ನಾಡು) ಒಂದು ಪರಿಚಿತ ದಾರಿಯಲ್ಲೇ ಇದೆ.
15:77
إِنَّ فِي ذَٰلِكَ لَآيَةً لِلْمُؤْمِنِينَ ۞
ವಿಶ್ವಾಸಿಗಳಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆ ಇದೆ.
15:78
وَإِنْ كَانَ أَصْحَابُ الْأَيْكَةِ لَظَالِمِينَ ۞
ಇನ್ನು, ‘ಐಕಃ’ದವರು ಖಂಡಿತ ಅಕ್ರಮಿಗಳಾಗಿದ್ದರು.
15:79
فَانْتَقَمْنَا مِنْهُمْ وَإِنَّهُمَا لَبِإِمَامٍ مُبِينٍ ۞
ನಾವು ಅವರ ವಿರುದ್ಧವೂ ಪ್ರತೀಕಾರ ತೀರಿಸಿದೆವು - ಆ ಎರಡೂ ನಾಡುಗಳು ಹೆದ್ದಾರಿಯಲ್ಲೇ ಇವೆ.
15:80
وَلَقَدْ كَذَّبَ أَصْحَابُ الْحِجْرِ الْمُرْسَلِينَ ۞
‘ಹಿಜ್ರ್’ ಎಂಬಲ್ಲಿನವರು ದೂತರನ್ನು ಧಿಕ್ಕರಿಸಿದ್ದರು.
15:81
وَآتَيْنَاهُمْ آيَاتِنَا فَكَانُوا عَنْهَا مُعْرِضِينَ ۞
ನಾವು ಅವರಿಗೆ ನಮ್ಮ ಅನೇಕ ಸೂಚನೆಗಳನ್ನು ನೀಡಿದೆವು. ಆದರೆ ಅವರು ಅವುಗಳನ್ನು ಕಡೆಗಣಿಸಿ ಬಿಟ್ಟರು.
15:82
وَكَانُوا يَنْحِتُونَ مِنَ الْجِبَالِ بُيُوتًا آمِنِينَ ۞
ಅವರು ನಿರ್ಭೀತರಾಗಿ ಪರ್ವತಗಳಲ್ಲಿ ನಿವಾಸಗಳನ್ನು ಕೊರೆಯುತ್ತಿದ್ದರು.
15:83
فَأَخَذَتْهُمُ الصَّيْحَةُ مُصْبِحِينَ ۞
(ಒಂದು ದಿನ) ಸೂರ್ಯೋದಯದ ವೇಳೆಗೆ, ಒಂದು ಭಯಾನಕ ಶಬ್ದವು ಅವರನ್ನು ಆವರಿಸಿತು.
15:84
فَمَا أَغْنَىٰ عَنْهُمْ مَا كَانُوا يَكْسِبُونَ ۞
ಅವರ ಯಾವ ಸಂಪಾದನೆಯೂ ಅವರ ಯಾವ ಕೆಲಸಕ್ಕೂ ಬರಲಿಲ್ಲ.
15:85
وَمَا خَلَقْنَا السَّمَاوَاتِ وَالْأَرْضَ وَمَا بَيْنَهُمَا إِلَّا بِالْحَقِّ ۗ وَإِنَّ السَّاعَةَ لَآتِيَةٌ ۖ فَاصْفَحِ الصَّفْحَ الْجَمِيلَ ۞
ಆಕಾಶಗಳನ್ನು ಹಾಗೂ ಭೂಮಿಯನ್ನು ಹಾಗೂ ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಸತ್ಯದೊಂದಿಗೇ ಸೃಷ್ಟಿಸಿದ್ದೇವೆ. ಅಂತಿಮ ಘಳಿಗೆಯು ಖಂಡಿತ ಬರಲಿದೆ. ನೀವು (ಜನರನ್ನು) ಕ್ಷಮಿಸಿರಿ - ಅದು ಅತ್ಯಂತ ಸುಂದರ ಕ್ಷಮೆಯಾಗಿರಲಿ.
15:86
إِنَّ رَبَّكَ هُوَ الْخَلَّاقُ الْعَلِيمُ ۞
(ದೂತರೇ,) ಖಂಡಿತವಾಗಿಯೂ ನಿಮ್ಮ ಒಡೆಯನೇ ಮಹಾನ್ ಸೃಷ್ಟಿಕರ್ತನೂ ಎಲ್ಲವನ್ನೂ ಬಲ್ಲವನೂ ಆಗಿದ್ದಾನೆ.
15:87
وَلَقَدْ آتَيْنَاكَ سَبْعًا مِنَ الْمَثَانِي وَالْقُرْآنَ الْعَظِيمَ ۞
ಖಂಡಿತವಾಗಿಯೂ ನಾವು ನಿಮಗೆ ಮತ್ತೆ ಮತ್ತೆ ಓದಲಾಗುವ ಏಳು ವಾಕ್ಯಗಳನ್ನು (ಪ್ರಥಮ ಅಧ್ಯಾಯವನ್ನು) ಮತ್ತು ಭವ್ಯವಾದ ಕುರ್‌ಆನನ್ನು ನೀಡಿರುವೆವು.
15:88
لَا تَمُدَّنَّ عَيْنَيْكَ إِلَىٰ مَا مَتَّعْنَا بِهِ أَزْوَاجًا مِنْهُمْ وَلَا تَحْزَنْ عَلَيْهِمْ وَاخْفِضْ جَنَاحَكَ لِلْمُؤْمِنِينَ ۞
ಅವರಲ್ಲಿನ ( ಧಿಕ್ಕಾರಿಗಳಲ್ಲಿನ) ವಿವಿಧ ವರ್ಗಗಳಿಗೆ ನಾವು ಏನನ್ನು ನೀಡಿರುವೆವೋ ಅವುಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ ಮತ್ತು ನೀವು ಅವರ ಕುರಿತು ದುಃಖಿಸಬೇಡಿ. ಹಾಗೆಯೇ, ವಿಶ್ವಾಸಿಗಳ ಪಾಲಿಗೆ ನೀವು (ವಿನಯದೆೊಂದಿಗೆ) ನಿಮ್ಮ ಭುಜವನ್ನು ತಗ್ಗಿಸಿಡಿರಿ.
15:89
وَقُلْ إِنِّي أَنَا النَّذِيرُ الْمُبِينُ ۞
ಮತ್ತು ನೀವು ‘‘ಖಂಡಿತವಾಗಿಯೂ ನಾನು, ಸುಸ್ಪಷ್ಟ ಎಚ್ಚರಿಕೆ ನೀಡುವವನಾಗಿದ್ದೇನೆ’’ ಎಂದು ಸಾರಿ ಬಿಡಿರಿ.
15:90
كَمَا أَنْزَلْنَا عَلَى الْمُقْتَسِمِينَ ۞
(ಈ ಹಿಂದೆ) ವಿಭಜನವಾದಿಗಳ ಮೇಲೆ ನಾವು (ಶಿಕ್ಷೆಯನ್ನು) ಎರಗಿಸಿದ್ದೆವು.
15:91
الَّذِينَ جَعَلُوا الْقُرْآنَ عِضِينَ ۞
ಅವರು ಕುರ್‌ಆನನ್ನು ಛಿದ್ರಗೊಳಿಸಿದ್ದರು (ತಾವಿಚ್ಛಿಸಿದ್ದನ್ನು ಪಾಲಿಸಿ, ಉಳಿದುದನ್ನು ತಿರಸ್ಕರಿಸಿದ್ದರು).
15:92
فَوَرَبِّكَ لَنَسْأَلَنَّهُمْ أَجْمَعِينَ ۞
ನಿಮ್ಮೊಡೆಯನಾಣೆ ! ನಾವು ಅವರೆಲ್ಲರನ್ನೂ ಖಂಡಿತ ಪ್ರಶ್ನಿಸುವೆವು -
15:93
عَمَّا كَانُوا يَعْمَلُونَ ۞
- ಅವರು ಮಾಡುತ್ತಿದ್ದ ಕರ್ಮಗಳ ಕುರಿತು.
15:94
فَاصْدَعْ بِمَا تُؤْمَرُ وَأَعْرِضْ عَنِ الْمُشْرِكِينَ ۞
ನಿಮಗೆ ಆದೇಶಿಸಲಾಗಿರುವುದನ್ನು ನೀವು ಸ್ಪಷ್ಟವಾಗಿ ಸಾರಿ ಬಿಡಿರಿ ಮತ್ತು ಬಹುದೇವಾರಾಧಕರನ್ನು ಲೆಕ್ಕಿಸಬೇಡಿ.
15:95
إِنَّا كَفَيْنَاكَ الْمُسْتَهْزِئِينَ ۞
ಗೇಲಿ ಮಾಡುವವರ ವಿಷಯದಲ್ಲಿ ನಿಮಗೆ ನಾವೇ ಸಾಕು.
15:96
الَّذِينَ يَجْعَلُونَ مَعَ اللَّهِ إِلَٰهًا آخَرَ ۚ فَسَوْفَ يَعْلَمُونَ ۞
ಅವರು ಅಲ್ಲಾಹನ ಜೊತೆ ಇತರರನ್ನು ದೇವರಾಗಿಸಿ ಕೊಂಡಿದ್ದಾರೆ. (ಇದರ ಫಲಿತಾಂಶವನ್ನು) ಬಹುಬೇಗನೇ ಅವರು ಅರಿಯುವರು.
15:97
وَلَقَدْ نَعْلَمُ أَنَّكَ يَضِيقُ صَدْرُكَ بِمَا يَقُولُونَ ۞
ನಮಗೆ ತಿಳಿದಿದೆ - ಅವರು ಆಡುವ ಮಾತುಗಳಿಂದ ನಿಮ್ಮ ಮನಸ್ಸಿಗೆ ತುಂಬಾ ಸಂಕಟವಾಗುತ್ತದೆಂದು.
15:98
فَسَبِّحْ بِحَمْدِ رَبِّكَ وَكُنْ مِنَ السَّاجِدِينَ ۞
ನೀವು ನಿಮ್ಮ ಒಡೆಯನನ್ನು ಸ್ತುತಿಸುತ್ತಾ ಅವನ ಪಾವಿತ್ರ್ಯವನ್ನು ಜಪಿಸಿರಿ ಮತ್ತು ಸಾಷ್ಟಾಂಗ ವಂದಿಸುವವರಾಗಿರಿ.
15:99
وَاعْبُدْ رَبَّكَ حَتَّىٰ يَأْتِيَكَ الْيَقِينُ ۞
ಇನ್ನು, ಖಚಿತವಾದ ಆ ಘಳಿಗೆ (ಮರಣ) ಬರುವ ತನಕವೂ ನೀವು ನಿಮ್ಮ ಒಡೆಯನ ಆರಾಧನೆ ನಡೆಸಿರಿ.