Al-Ma`un (Almsgiving)
107. ಅಲ್ ಮಾಊನ್(ಸಣ್ಣ ನೆರವು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
107:1
أَرَأَيْتَ الَّذِي يُكَذِّبُ بِالدِّينِ ۞
ನೀವು ಕಂಡಿರಾ, ಪ್ರತಿಫಲದ ದಿನವನ್ನು ಸುಳ್ಳೆಂದು ತಿರಸ್ಕರಿಸುವಾತನನ್ನು ?
107:2
فَذَٰلِكَ الَّذِي يَدُعُّ الْيَتِيمَ ۞
ಅವನೇ, ಅನಾಥನನ್ನು ದೂರ ದಬ್ಬುವವನು.
107:3
وَلَا يَحُضُّ عَلَىٰ طَعَامِ الْمِسْكِينِ ۞
ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು.
107:4
فَوَيْلٌ لِلْمُصَلِّينَ ۞
(ಈ ರೀತಿ) ನಮಾಝ್ ಸಲ್ಲಿಸುವವರಿಗೆ ಶಾಪವಿದೆ;
107:5
الَّذِينَ هُمْ عَنْ صَلَاتِهِمْ سَاهُونَ ۞
ಅವರು, ತಮ್ಮ ನಮಾಝ್‌ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ.
107:6
الَّذِينَ هُمْ يُرَاءُونَ ۞
ಅವರು ಡಂಬಾಚಾರ ಮಾಡುತ್ತಾರೆ.
107:7
وَيَمْنَعُونَ الْمَاعُونَ ۞
ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ.