Ash-Sharh (The consolation)
94. ಅಲ್ ಇನ್ಶಿರಾಹ್(ವಿಸ್ತರಣೆ)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
94:1
أَلَمْ نَشْرَحْ لَكَ صَدْرَكَ ۞
(ದೂತರೇ,) ನಿಮಗಾಗಿ ನಾವು ನಿಮ್ಮ ಮನಸ್ಸನ್ನು ವಿಸ್ತರಿಸಿಲ್ಲವೇ?
94:2
وَوَضَعْنَا عَنْكَ وِزْرَكَ ۞
ಮತ್ತು ನಾವು ನಿಮ್ಮ ಮೇಲಿಂದ ನಿಮ್ಮ ಭಾರವನ್ನು ಇಳಿಸಿಲ್ಲವೇ?
94:3
الَّذِي أَنْقَضَ ظَهْرَكَ ۞
ಅದು ನಿಮ್ಮ ಬೆನ್ನು ಮುರಿಯುವಂತಹ ಭಾರವಾಗಿತ್ತು.
94:4
وَرَفَعْنَا لَكَ ذِكْرَكَ ۞
ನಾವು ನಿಮ್ಮ ಪ್ರಸಿದ್ಧಿಯನ್ನು ಉನ್ನತಿಗೇರಿಸಲಿಲ್ಲವೇ?
94:5
فَإِنَّ مَعَ الْعُسْرِ يُسْرًا ۞
ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ.
94:6
إِنَّ مَعَ الْعُسْرِ يُسْرًا ۞
ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ.
94:7
فَإِذَا فَرَغْتَ فَانْصَبْ ۞
ನೀವಿನ್ನು ನಿಮಗೆ ಬಿಡುವು ಸಿಕ್ಕಾಗ (ಅಲ್ಲಾಹನನ್ನು ಮೆಚ್ಚಿಸುವ) ಶ್ರಮದಲ್ಲಿ ತೊಡಗಿರಿ.
94:8
وَإِلَىٰ رَبِّكَ فَارْغَبْ ۞
ಮತ್ತು ನಿಮ್ಮ ಒಡೆಯನತ್ತ ಗಮನ ಹರಿಸಿರಿ.