Al-Infitar (The cleaving)
82. ಅಲ್ ಇನ್ಫಿತಾರ್(ಬಿರಿದು ಬೀಳು)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
82:1
إِذَا السَّمَاءُ انْفَطَرَتْ
۞
ಆಕಾಶವು ಬಿರಿದು ಬೀಳುವಾಗ.
82:2
وَإِذَا الْكَوَاكِبُ انْتَثَرَتْ
۞
ಮತ್ತು ನಕ್ಷತ್ರಗಳು ಚದರುವಾಗ.
82:3
وَإِذَا الْبِحَارُ فُجِّرَتْ
۞
ಮತ್ತು ಸಮುದ್ರಗಳು (ವಿಲೀನಗೊಂಡು) ಉಕ್ಕೇರಿದಾಗ.
82:4
وَإِذَا الْقُبُورُ بُعْثِرَتْ
۞
ಮತ್ತು ಗೋರಿಗಳನ್ನು ಬಿಚ್ಚಿ ತೆರೆಯಲಾದಾಗ.
82:5
عَلِمَتْ نَفْسٌ مَا قَدَّمَتْ وَأَخَّرَتْ
۞
ಪ್ರತಿಯೊಬ್ಬನೂ ಅರಿಯುವನು, ತಾನು ಮುಂದೆ ಕಳಿಸಿದ್ದನ್ನು ಮತ್ತು ಹಿಂದೆ ಬಿಟ್ಟು ಬಂದುದನ್ನು.
82:6
يَا أَيُّهَا الْإِنْسَانُ مَا غَرَّكَ بِرَبِّكَ الْكَرِيمِ
۞
ಮಾನವನೇ, ಆ ನಿನ್ನ ಉದಾರಿ ಒಡೆಯನ ವಿಷಯದಲ್ಲಿ ನಿನ್ನನ್ನು ಮೋಸಗೊಳಿಸಿದ ವಸ್ತು ಯಾವುದು?
82:7
الَّذِي خَلَقَكَ فَسَوَّاكَ فَعَدَلَكَ
۞
ಅವನೇ ನಿನ್ನನ್ನು ಸೃಷ್ಟಿಸಿದನು (ನಿನ್ನ ಅಂಗಾಂಗಗಳನ್ನು) ಸರಿಪಡಿಸಿದನು, ಸಂತುಲಿತವಾಗಿ ನಿನ್ನನ್ನು ರಚಿಸಿದನು.
82:8
فِي أَيِّ صُورَةٍ مَا شَاءَ رَكَّبَكَ
۞
ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು.
82:9
كَلَّا بَلْ تُكَذِّبُونَ بِالدِّينِ
۞
ಹಾಗಲ್ಲ - ನಿಜವಾಗಿ, ನೀವು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತೀರಿ.
82:10
وَإِنَّ عَلَيْكُمْ لَحَافِظِينَ
۞
ನಿಮ್ಮ ಮೇಲೆ ಕಾವಲುಗಾರರು ನಿಯುಕ್ತರಾಗಿದ್ದಾರೆ.
82:11
كِرَامًا كَاتِبِينَ
۞
(ನಿಮ್ಮ ಕರ್ಮಗಳನ್ನು) ಬರೆದಿಡುವ ಗೌರವಾನ್ವಿತರು.
82:12
يَعْلَمُونَ مَا تَفْعَلُونَ
۞
ನೀವು ಮಾಡುವುದನ್ನೆಲ್ಲಾ ಅವರು ಬಲ್ಲರು.
82:13
إِنَّ الْأَبْرَارَ لَفِي نَعِيمٍ
۞
ಸಜ್ಜನರು ಸ್ವರ್ಗದಲ್ಲಿ ಖಂಡಿತ ಐಶಾರಾಮದಲ್ಲಿರುವರು.
82:14
وَإِنَّ الْفُجَّارَ لَفِي جَحِيمٍ
۞
ಮತ್ತು ಖಂಡಿತವಾಗಿಯೂ ದುಷ್ಟರು ನರಕಾಗ್ನಿಯಲ್ಲಿರುವರು.
82:15
يَصْلَوْنَهَا يَوْمَ الدِّينِ
۞
ಪ್ರತಿಫಲದ ದಿನ ಅವರು ಅದರೊಳಗೆ ಪ್ರವೇಶಿಸುವರು.
82:16
وَمَا هُمْ عَنْهَا بِغَائِبِينَ
۞
ಅದರಿಂದ ಅವಿತಿರಲು ಅವರಿಗೆ ಸಾಧ್ಯವಾಗದು.
82:17
وَمَا أَدْرَاكَ مَا يَوْمُ الدِّينِ
۞
ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು?
82:18
ثُمَّ مَا أَدْرَاكَ مَا يَوْمُ الدِّينِ
۞
ಹೌದು - ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು?
82:19
يَوْمَ لَا تَمْلِكُ نَفْسٌ لِنَفْسٍ شَيْئًا ۖ وَالْأَمْرُ يَوْمَئِذٍ لِلَّهِ
۞
ಅಂದು ಯಾರಿಂದಲೂ ಯಾರಿಗೂ ಕಿಂಚಿತ್ತೂ ಪ್ರಯೋಜನವಾಗದು. ಅಧಿಕಾರವು ಅಂದು ಸಂಪೂರ್ಣವಾಗಿ ಅಲ್ಲಾಹನದ್ದಾಗಿರುವುದು.