An-Naba' (The announcement)
78. ಅನ್ನಬಅ್(ವಾರ್ತೆ)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
78:1
عَمَّ يَتَسَاءَلُونَ
۞
ಅವರು ಯಾವುದರ ಕುರಿತು ವಿಚಾರಿಸುತ್ತಿದ್ದಾರೆ?
78:2
عَنِ النَّبَإِ الْعَظِيمِ
۞
ಆ ಮಹಾ ವಾರ್ತೆಯ ಕುರಿತೇ?
78:3
الَّذِي هُمْ فِيهِ مُخْتَلِفُونَ
۞
ಆ ವಿಷಯದಲ್ಲಿ ಅವರ ನಿಲುವುಗಳು ತೀರಾ ಭಿನ್ನವಾಗಿವೆ.
78:4
كَلَّا سَيَعْلَمُونَ
۞
ಹಾಗಲ್ಲ, ಅವರಿಗೆ ಬೇಗನೆ ತಿಳಿಯಲಿದೆ.
78:5
ثُمَّ كَلَّا سَيَعْلَمُونَ
۞
ಮತ್ತೆ, ಹಾಗಲ್ಲ, ಅವರಿಗೆ ಬೇಗನೆ ತಿಳಿಯಲಿದೆ.
78:6
أَلَمْ نَجْعَلِ الْأَرْضَ مِهَادًا
۞
ಭೂಮಿಯನ್ನು ನಾವು ಹಾಸಿಗೆಯಾಗಿಸಿಲ್ಲವೇ?
78:7
وَالْجِبَالَ أَوْتَادًا
۞
ಮತ್ತು ಪರ್ವತಗಳನ್ನು ಮೊಳೆಗಳಾಗಿಸಿಲ್ಲವೇ?
78:8
وَخَلَقْنَاكُمْ أَزْوَاجًا
۞
ಮತ್ತು ನಾವು ನಿಮ್ಮನ್ನು ಜೋಡಿಗಳಾಗಿ ಸೃಷ್ಟಿಸಿರುವೆವು.
78:9
وَجَعَلْنَا نَوْمَكُمْ سُبَاتًا
۞
ಮತ್ತು ನಾವು ನಿಮ್ಮ ನಿದ್ರೆಯನ್ನು (ನಿಮ್ಮ ಪಾಲಿಗೆ) ವಿಶ್ರಾಂತಿಯಾಗಿಸಿರುವೆವು
78:10
وَجَعَلْنَا اللَّيْلَ لِبَاسًا
۞
ಮತ್ತು ನಾವು ರಾತ್ರಿಯನ್ನು ಮರೆಯಾಗಿಸಿರುವೆವು.
78:11
وَجَعَلْنَا النَّهَارَ مَعَاشًا
۞
ಮತ್ತು ನಾವು ಹಗಲನ್ನು ಸಂಪಾದನೆಯ ಸಮಯವಾಗಿಸಿರುವೆವು.
78:12
وَبَنَيْنَا فَوْقَكُمْ سَبْعًا شِدَادًا
۞
ಮತ್ತು ನಿಮ್ಮ ಮೇಲೆ ಬಲಿಷ್ಠವಾದ ಏಳು ವಸ್ತು (ಆಕಾಶ)ಗಳನ್ನು ನಿರ್ಮಿಸಿರುವೆವು.
78:13
وَجَعَلْنَا سِرَاجًا وَهَّاجًا
۞
ಮತ್ತು ನಾವು ಸೂರ್ಯನನ್ನು ಒಂದು ಉಜ್ವಲ ಜ್ಯೋತಿಯಾಗಿಸಿರುವೆವು.
78:14
وَأَنْزَلْنَا مِنَ الْمُعْصِرَاتِ مَاءً ثَجَّاجًا
۞
ಮತ್ತು ನಾವು ಮೋಡಗಳಿಂದ ಧಾರಾಕಾರ ನೀರನ್ನು ಸುರಿಸಿರುವೆವು.
78:15
لِنُخْرِجَ بِهِ حَبًّا وَنَبَاتًا
۞
ಆ ಮೂಲಕ ವಿವಿಧ ಬೆಳೆ ಹಾಗೂ ತರಕಾರಿಗಳನ್ನು ಬೆಳೆಸಲಿಕ್ಕಾಗಿ.
78:16
وَجَنَّاتٍ أَلْفَافًا
۞
ಮತ್ತು ದಟ್ಟವಾದ ತೋಟಗಳನ್ನು ಬೆಳೆಸಲಿಕ್ಕಾಗಿ.
78:17
إِنَّ يَوْمَ الْفَصْلِ كَانَ مِيقَاتًا
۞
ಖಂಡಿತವಾಗಿಯೂ ತೀರ್ಪಿನ ದಿನವು ಈಗಾಗಲೇ ನಿಶ್ಚಿತವಾಗಿದೆ.
78:18
يَوْمَ يُنْفَخُ فِي الصُّورِ فَتَأْتُونَ أَفْوَاجًا
۞
ಕಹಳೆಯನ್ನು ಊದುವ ದಿನ ನೀವು ದಂಡು ದಂಡುಗಳಾಗಿ ಬರುವಿರಿ.
78:19
وَفُتِحَتِ السَّمَاءُ فَكَانَتْ أَبْوَابًا
۞
ಆಕಾಶವನ್ನು ತೆರೆದು ಬಿಡಲಾಗುವುದು ಮತ್ತು ಅದರಲ್ಲಿ (ಎಲ್ಲೆಲ್ಲೂ) ಬಾಗಿಲುಗಳೇ ಇರುವವು.
78:20
وَسُيِّرَتِ الْجِبَالُ فَكَانَتْ سَرَابًا
۞
ಮತ್ತು ಪರ್ವತಗಳನ್ನು ನಡೆಸಲಾಗುವುದು, ಅವು ಮರೀಚಿಕೆಯಂತಾಗಿ ಬಿಡುವವು.
78:21
إِنَّ جَهَنَّمَ كَانَتْ مِرْصَادًا
۞
ಖಂಡಿತವಾಗಿಯೂ ನರಕವು ಹೊಂಚು ಹಾಕುತ್ತಿದೆ.
78:22
لِلطَّاغِينَ مَآبًا
۞
ಅದುವೇ ವಿದ್ರೋಹಿಗಳ ನೆಲೆಯಾಗುವುದು.
78:23
لَابِثِينَ فِيهَا أَحْقَابًا
۞
ಯುಗ ಯುಗಾಂತರ ಕಾಲ ಅವರು ಅದರಲ್ಲಿ ಬಿದ್ದು ಕೊಂಡಿರುವರು.
78:24
لَا يَذُوقُونَ فِيهَا بَرْدًا وَلَا شَرَابًا
۞
ಅಲ್ಲಿ ಅವರು ಯಾವುದೇ ತಂಪು ವಸ್ತುವಿನ ಅಥವಾ ಯಾವುದೇ ಪಾನೀಯದ ರುಚಿ ಕಾಣಲಾರರು.
78:25
إِلَّا حَمِيمًا وَغَسَّاقًا
۞
ಅಲ್ಲಿ ಅವರಿಗೆ ಸಿಗುವುದು, ಕುದಿಯುವ ನೀರು ಮತ್ತು ಹರಿಯುವ ಕೀವು ಮಾತ್ರ.
78:26
جَزَاءً وِفَاقًا
۞
ಇದು ಸೂಕ್ತ ಪ್ರತಿಫಲವಾಗಿದೆ.
78:27
إِنَّهُمْ كَانُوا لَا يَرْجُونَ حِسَابًا
۞
ಅವರು (ಪರಲೋಕದ) ವಿಚಾರಣೆಯನ್ನು ನಿರೀಕ್ಷಿಸಿಯೇ ಇರಲಿಲ್ಲ.
78:28
وَكَذَّبُوا بِآيَاتِنَا كِذَّابًا
۞
ಅವರು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸುತ್ತಿದ್ದರು.
78:29
وَكُلَّ شَيْءٍ أَحْصَيْنَاهُ كِتَابًا
۞
ಮತ್ತು ನಾವು ಎಲ್ಲವನ್ನೂ ಒಂದು ಗ್ರಂಥದಲ್ಲಿ ಸುರಕ್ಷಿತವಾಗಿ ದಾಖಲಿಸಿ ಇಟ್ಟಿರುವೆವು.
78:30
فَذُوقُوا فَلَنْ نَزِيدَكُمْ إِلَّا عَذَابًا
۞
ಇದೀಗ ಸವಿಯಿರಿ. ಇನ್ನು ನಿಮ್ಮ ಪಾಲಿಗೆ ಶಿಕ್ಷೆಯ ಹೊರತು ಬೇರೇನೂ ಹೆಚ್ಚದು.
78:31
إِنَّ لِلْمُتَّقِينَ مَفَازًا
۞
ಧರ್ಮ ನಿಷ್ಠರಿಗೆ ಖಂಡಿತ ವಿಜಯ ಸಿಗಲಿದೆ.
78:32
حَدَائِقَ وَأَعْنَابًا
۞
ತೋಟಗಳು ಮತ್ತು ದ್ರಾಕ್ಷಿಗಳು,
78:33
وَكَوَاعِبَ أَتْرَابًا
۞
ಮತ್ತು ಸಹ ವಯಸ್ಕ ಯುವತಿಯರು,
78:34
وَكَأْسًا دِهَاقًا
۞
ತುಂಬಿ ತುಳುಕುವ ಪಾನ ಪಾತ್ರೆಗಳು (ಅವರಿಗಾಗಿ ಕಾದಿವೆ).
78:35
لَا يَسْمَعُونَ فِيهَا لَغْوًا وَلَا كِذَّابًا
۞
ಅಲ್ಲಿ ಅವರು ಯಾವುದೇ ಅಸಭ್ಯ ಮಾತನ್ನಾಗಲೀ ಸುಳ್ಳನ್ನಾಗಲೀ ಕೇಳಲಾರರು.
78:36
جَزَاءً مِنْ رَبِّكَ عَطَاءً حِسَابًا
۞
ಇದು ಸತ್ಫಲವಾಗಿದೆ, ನಿಮ್ಮ ಒಡೆಯನ ಕಡೆಯಿಂದ. (ಅಲ್ಲದೆ ನಿಮಗಾಗಿ) ಧಾರಾಳ ಉಡುಗೊರೆಗಳಿವೆ.
78:37
رَبِّ السَّمَاوَاتِ وَالْأَرْضِ وَمَا بَيْنَهُمَا الرَّحْمَٰنِ ۖ لَا يَمْلِكُونَ مِنْهُ خِطَابًا
۞
ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವೆರಡರ ನಡುವೆ ಇರುವ ಎಲ್ಲವುಗಳ ಒಡೆಯನು, ಅವನು ಪರಮ ದಯಾಮಯನು. ಅವನೊಡನೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ.
78:38
يَوْمَ يَقُومُ الرُّوحُ وَالْمَلَائِكَةُ صَفًّا ۖ لَا يَتَكَلَّمُونَ إِلَّا مَنْ أَذِنَ لَهُ الرَّحْمَٰنُ وَقَالَ صَوَابًا
۞
ರೂಹ್ (ಜಿಬ್‌ರೀಲ್) ಮತ್ತು (ಇತರ) ಮಲಕ್‌ಗಳು ಸಾಲಾಗಿ ನಿಲ್ಲುವ ಆ ದಿನ, ಆ ಪರಮ ದಯಾಮಯನ ಅಪ್ಪಣೆ ಪಡೆದವರು ಹಾಗೂ ಸರಿಯಾದುದನ್ನು ಮಾತ್ರ ಹೇಳುವವರ ಹೊರತು ಇನ್ನಾರೂ ಮಾತನಾಡಲಾರರು.
78:39
ذَٰلِكَ الْيَوْمُ الْحَقُّ ۖ فَمَنْ شَاءَ اتَّخَذَ إِلَىٰ رَبِّهِ مَآبًا
۞
ಆ ದಿನವು ನಿಜಕ್ಕೂ ಬರಲಿದೆ. ಇಷ್ಟ ಉಳ್ಳವನು ತನ್ನ ಒಡೆಯನ ಬಳಿ ಆಶ್ರಯವನ್ನು ಪಡೆದುಕೊಳ್ಳಲಿ.
78:40
إِنَّا أَنْذَرْنَاكُمْ عَذَابًا قَرِيبًا يَوْمَ يَنْظُرُ الْمَرْءُ مَا قَدَّمَتْ يَدَاهُ وَيَقُولُ الْكَافِرُ يَا لَيْتَنِي كُنْتُ تُرَابًا
۞
ನಾವಂತೂ ನಿಮ್ಮನ್ನು, ಶೀಘ್ರವೇ ಬರಲಿರುವ ಶಿಕ್ಷೆಯ ಕುರಿತು ಎಚ್ಚರಿಸಿರುವೆವು. ಅಂದು ಪ್ರತಿಯೊಬ್ಬನೂ ತನ್ನ ಕೈಗಳು ಮುಂದೆ ಕಳಿಸಿರುವುದನ್ನು (ಕರ್ಮವನ್ನು) ಕಾಣುವನು ಮತ್ತು ಧಿಕ್ಕಾರಿಯು, ‘‘ಅಯ್ಯೋ, ನಾನು ಮಣ್ಣಾಗಿದ್ದರೆ ಚೆನ್ನಾಗಿತ್ತು’’ ಎನ್ನುವನು.