Al-Munafiqun (The hypocrites)
63. ಅಲ್ ಮುನಾಫಿಕೂನ್(ಕಪಟಿಗಳು)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
63:1
إِذَا جَاءَكَ الْمُنَافِقُونَ قَالُوا نَشْهَدُ إِنَّكَ لَرَسُولُ اللَّهِ ۗ وَاللَّهُ يَعْلَمُ إِنَّكَ لَرَسُولُهُ وَاللَّهُ يَشْهَدُ إِنَّ الْمُنَافِقِينَ لَكَاذِبُونَ
۞
(ದೂತರೇ,) ಕಪಟಿಗಳು ನಿಮ್ಮ ಬಳಿಗೆ ಬಂದಾಗ, ‘‘ನೀವು ಖಂಡಿತ ಅಲ್ಲಾಹನ ದೂತರೆಂದು ನಾವು ಸಾಕ್ಷಿ ಹೇಳುತ್ತೇವೆ’’ ಎನ್ನುತ್ತಾರೆ. ನೀವು ತನ್ನ ದೂತರೆಂಬುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಮತ್ತು, ಈ ಕಪಟಿಗಳು ಖಂಡಿತ ಸುಳ್ಳುಗಾರರೆಂಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ.
63:2
اتَّخَذُوا أَيْمَانَهُمْ جُنَّةً فَصَدُّوا عَنْ سَبِيلِ اللَّهِ ۚ إِنَّهُمْ سَاءَ مَا كَانُوا يَعْمَلُونَ
۞
ಅವರು ತಮ್ಮ ಪ್ರತಿಜ್ಞೆಗಳನ್ನು ಗುರಾಣಿಗಳಾಗಿ ಬಳಸಿ ಕೊಳ್ಳುತ್ತಾರೆ. ಮತ್ತು ಅವರು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಅವರು ಮಾಡುತ್ತಿರುವ ಕೃತ್ಯಗಳು ತೀರಾ ಕೆಟ್ಟವು.
63:3
ذَٰلِكَ بِأَنَّهُمْ آمَنُوا ثُمَّ كَفَرُوا فَطُبِعَ عَلَىٰ قُلُوبِهِمْ فَهُمْ لَا يَفْقَهُونَ
۞
ಇದೇಕೆಂದರೆ ಅವರು ವಿಶ್ವಾಸಿಗಳಾದ ಬಳಿಕ ಮತ್ತೆ ಧಿಕ್ಕಾರಿಗಳಾದರು. ಆದ್ದರಿಂದ ಅವರ ಮನಸ್ಸುಗಳಿಗೆ ಮುದ್ರೆ ಜಡಿಯಲಾಯಿತು. ಈಗ ಅವರಿಗೆ ಏನೂ ಅರ್ಥವಾಗುವುದಿಲ್ಲ.
63:4
۞ وَإِذَا رَأَيْتَهُمْ تُعْجِبُكَ أَجْسَامُهُمْ ۖ وَإِنْ يَقُولُوا تَسْمَعْ لِقَوْلِهِمْ ۖ كَأَنَّهُمْ خُشُبٌ مُسَنَّدَةٌ ۖ يَحْسَبُونَ كُلَّ صَيْحَةٍ عَلَيْهِمْ ۚ هُمُ الْعَدُوُّ فَاحْذَرْهُمْ ۚ قَاتَلَهُمُ اللَّهُ ۖ أَنَّىٰ يُؤْفَكُونَ
۞
ನೀವು ಅವರನ್ನು ಕಂಡಾಗ ಅವರ ಶರೀರಗಳು ನಿಮಗೆ ಚಂದಗಾಣುತ್ತವೆ. ಅವರು ಮಾತನಾಡಿದರೆಂದರೆ ನೀವು ಅವರ ಮಾತನ್ನು ಕೇಳುತ್ತಲೇ ಇರುತ್ತೀರಿ. ಆದರೆ ಅವರ ಸ್ಥಿತಿಯು ಗೋಡೆಗೆ ಒರಗಿಸಿದ ಹಲಗೆಯಂತೆ, ತೀರಾ ಬರಡಾಗಿದೆ. ಯಾವುದಾದರೂ ದೊಡ್ಡ ಶಬ್ದವು ಕೇಳಿಸಿದೊಡನೆ, ಅವರು ಅದನ್ನು, ತಮ್ಮ ವಿರುದ್ಧ (ಏನೋ ಆಪತ್ತು ಎರಗಲಿದೆ) ಎಂದು ಭಾವಿಸುತ್ತಾರೆ. ಅವರು ಶತ್ರುಗಳು. ಅವರ ಕುರಿತು ಎಚ್ಚರವಾಗಿರಿ. ಅಲ್ಲಾಹನು ಅವರನ್ನು ನಾಶ ಮಾಡಲಿ. ಅವರು ಅದೆಲ್ಲಿ ಅಲೆಯುತ್ತಿದ್ದಾರೆ?
63:5
وَإِذَا قِيلَ لَهُمْ تَعَالَوْا يَسْتَغْفِرْ لَكُمْ رَسُولُ اللَّهِ لَوَّوْا رُءُوسَهُمْ وَرَأَيْتَهُمْ يَصُدُّونَ وَهُمْ مُسْتَكْبِرُونَ
۞
(ದೂತರೇ,) ‘‘ಬನ್ನಿ, ಅಲ್ಲಾಹನ ದೂತರು ನಿಮಗಾಗಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಲಿ’’ ಎಂದು ಹೇಳಿದಾಗ ಅವರು ಮುಖ ತಿರುಗಿಸಿ ಕೊಳ್ಳುತ್ತಾರೆ ಮತ್ತು ಅವರು ಅಹಂಕಾರ ಮೆರೆಯುತ್ತಾ, ತಪ್ಪಿಸಿ ಕೊಳ್ಳುವುದನ್ನು ನೀವು ಕಾಣುತ್ತೀರಿ.
63:6
سَوَاءٌ عَلَيْهِمْ أَسْتَغْفَرْتَ لَهُمْ أَمْ لَمْ تَسْتَغْفِرْ لَهُمْ لَنْ يَغْفِرَ اللَّهُ لَهُمْ ۚ إِنَّ اللَّهَ لَا يَهْدِي الْقَوْمَ الْفَاسِقِينَ
۞
ನೀವು ಅವರ ಕ್ಷಮೆಗಾಗಿ ಪ್ರಾರ್ಥಿಸಿದರೂ ಒಂದೇ ಪ್ರಾರ್ಥಿಸದಿದ್ದರೂ ಒಂದೇ. ಅಲ್ಲಾಹನಂತು ಅವರನ್ನು ಕ್ಷಮಿಸಲಾರನು. ಖಂಡಿತವಾಗಿಯೂ ಅಲ್ಲಾಹನು ಅವಿಧೇಯರಿಗೆ ಸನ್ಮಾರ್ಗವನ್ನು ತೋರುವುದಿಲ್ಲ.
63:7
هُمُ الَّذِينَ يَقُولُونَ لَا تُنْفِقُوا عَلَىٰ مَنْ عِنْدَ رَسُولِ اللَّهِ حَتَّىٰ يَنْفَضُّوا ۗ وَلِلَّهِ خَزَائِنُ السَّمَاوَاتِ وَالْأَرْضِ وَلَٰكِنَّ الْمُنَافِقِينَ لَا يَفْقَهُونَ
۞
‘‘ದೇವ ದೂತರ ಜೊತೆ ಇರುವವರಿಗಾಗಿ ಏನನ್ನೂ ಖರ್ಚು ಮಾಡಬೇಡಿ. ಅವರು (ತಾವಾಗಿಯೇ) ಹೊರಟು ಹೋಗುವರು’’ ಎಂದವರು ಅವರೇ. ಆಕಾಶಗಳ ಮತ್ತು ಭೂಮಿಯ ಭಂಡಾರಗಳೆಲ್ಲವೂ ಅಲ್ಲಾಹನಿಗೇ ಸೇರಿವೆ. ಆದರೆ ಕಪಟಿಗಳಿಗೆ ಇದು ಅರ್ಥವಾಗುವುದಿಲ್ಲ.
63:8
يَقُولُونَ لَئِنْ رَجَعْنَا إِلَى الْمَدِينَةِ لَيُخْرِجَنَّ الْأَعَزُّ مِنْهَا الْأَذَلَّ ۚ وَلِلَّهِ الْعِزَّةُ وَلِرَسُولِهِ وَلِلْمُؤْمِنِينَ وَلَٰكِنَّ الْمُنَافِقِينَ لَا يَعْلَمُونَ
۞
‘‘ನಾವು ಮದೀನಾದೆಡೆಗೆ ಮರಳಿದಾಗ, ನಮ್ಮಲ್ಲಿನ ಗೌರವಾನ್ವಿತರು ಹೀನರನ್ನು ಅಲ್ಲಿಂದ ಹೊರ ಹಾಕುವರು’’ ಎಂದು ಅವರು ಹೇಳುತ್ತಾರೆ. ನಿಜವಾಗಿ ಗೌರವವೆಲ್ಲವೂ ಅಲ್ಲಾಹನಿಗೆ, ಅವನ ದೂತರಿಗೆ ಮತ್ತು ವಿಶ್ವಾಸಿಗಳಿಗೆ ಸೇರಿದೆ. ಆದರೆ ಕಪಟಿಗಳಿಗೆ ಇದು ತಿಳಿದಿಲ್ಲ.
63:9
يَا أَيُّهَا الَّذِينَ آمَنُوا لَا تُلْهِكُمْ أَمْوَالُكُمْ وَلَا أَوْلَادُكُمْ عَنْ ذِكْرِ اللَّهِ ۚ وَمَنْ يَفْعَلْ ذَٰلِكَ فَأُولَٰئِكَ هُمُ الْخَاسِرُونَ
۞
ವಿಶ್ವಾಸಿಗಳೇ, ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತಾನಗಳು ನಿಮ್ಮನ್ನು ಅಲ್ಲಾಹನ ನೆನಪಿನಿಂದ ದೂರಗೊಳಿಸದಿರಲಿ. ಹಾಗೆ ಮಾಡಿದವರೇ ನಿಜವಾಗಿ ನಷ್ಟ ಅನುಭವಿಸುವವರು.
63:10
وَأَنْفِقُوا مِنْ مَا رَزَقْنَاكُمْ مِنْ قَبْلِ أَنْ يَأْتِيَ أَحَدَكُمُ الْمَوْتُ فَيَقُولَ رَبِّ لَوْلَا أَخَّرْتَنِي إِلَىٰ أَجَلٍ قَرِيبٍ فَأَصَّدَّقَ وَأَكُنْ مِنَ الصَّالِحِينَ
۞
ನಿಮ್ಮಲ್ಲಿ ಯಾರಿಗಾದರೂ ಮರಣವು ಬರುವ ಮನ್ನವೇ, ನಾವು ನಿಮಗೇನನ್ನು ನೀಡಿರುವೆವೋ ಅದರಿಂದ ಖರ್ಚು ಮಾಡಿರಿ. (ಮರಣವು ಬಂದು ಬಿಟ್ಟಾಗ) ಅವನು, ‘‘ನನ್ನೊಡೆಯಾ, ನೀನು ನನಗೆ ಒಂದಿಷ್ಟು ಹೆಚ್ಚು ಕಾಲಾವಕಾಶವನ್ನೇಕೆ ಕೊಟ್ಟಿಲ್ಲ? (ಕೊಟ್ಟಿದ್ದರೆ) ನಾನು ದಾನ ಧರ್ಮ ಮಾಡುತ್ತಿದ್ದೆ ಮತ್ತು ಸಜ್ಜನರ ಸಾಲಿಗೆ ಸೇರುತ್ತಿದ್ದೆ’’ ಎನ್ನುವನು.
63:11
وَلَنْ يُؤَخِّرَ اللَّهُ نَفْسًا إِذَا جَاءَ أَجَلُهَا ۚ وَاللَّهُ خَبِيرٌ بِمَا تَعْمَلُونَ
۞
ಒಬ್ಬ ವ್ಯಕ್ತಿಯ ಮರಣದ ಸಮಯವು ಬಂದು ಬಿಟ್ಟರೆ, ಅಲ್ಲಾಹನು ಅದನ್ನು ಕಿಂಚಿತ್ತೂ ಮುಂದೂಡುವುದಿಲ್ಲ. ನೀವು ಮಾಡುವ ಎಲ್ಲ ಕೃತ್ಯಗಳ ಅರಿವು ಅಲ್ಲಾಹನಿಗಿದೆ.