`Abasa (He frowned)
80. ಅಬಸ(ಅವರು ಅತೃಪ್ತರಾದರು)
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
80:1
عَبَسَ وَتَوَلَّىٰ ۞
ಅವರು (ದೂತರು) ಅತೃಪ್ತರಾದರು ಮತ್ತು ಮುಖ ತಿರುಗಿಸಿಕೊಂಡರು -
80:2
أَنْ جَاءَهُ الْأَعْمَىٰ ۞
- ತಮ್ಮ ಬಳಿಗೆ ಕುರುಡನೊಬ್ಬನು ಬಂದನೆಂದು.
80:3
وَمَا يُدْرِيكَ لَعَلَّهُ يَزَّكَّىٰ ۞
(ದೂತರೇ,) ನಿಮಗೇನು ಗೊತ್ತು - ಅವನು ಸಂಸ್ಕಾರವಂತನಾಗಲೂಬಹುದು.
80:4
أَوْ يَذَّكَّرُ فَتَنْفَعَهُ الذِّكْرَىٰ ۞
ಅಥವಾ ಅವನು ಉಪದೇಶ ಸ್ವೀಕರಿಸಲೂಬಹುದು ಮತ್ತು ಅವನಿಗೆ ಉಪದೇಶದಿಂದ ಲಾಭವಾಗಲೂಬಹುದು.
80:5
أَمَّا مَنِ اسْتَغْنَىٰ ۞
(ನಿಮ್ಮನ್ನು) ಕಡೆಗಣಿಸುವವನು -
80:6
فَأَنْتَ لَهُ تَصَدَّىٰ ۞
ಅವನೆಡೆಗೆ ನೀವು ಗಮನ ಹರಿಸುತ್ತೀರಿ.
80:7
وَمَا عَلَيْكَ أَلَّا يَزَّكَّىٰ ۞
ಅವನು ಸುಧಾರಿಸದಿದ್ದರೆ ನಿಮ್ಮ ಮೇಲೆ ದೋಷವೇನಿಲ್ಲ.
80:8
وَأَمَّا مَنْ جَاءَكَ يَسْعَىٰ ۞
ಆದರೆ ನಿಮ್ಮೆಡೆಗೆ ಧಾವಿಸಿ ಬಂದ ವ್ಯಕ್ತಿ-
80:9
وَهُوَ يَخْشَىٰ ۞
ಅವನು ಭಯಭಕ್ತಿ ಉಳ್ಳವನು.
80:10
فَأَنْتَ عَنْهُ تَلَهَّىٰ ۞
ನೀವು ಅವನನ್ನು ನಿರ್ಲಕ್ಷಿಸುತ್ತೀರಿ.
80:11
كَلَّا إِنَّهَا تَذْكِرَةٌ ۞
ಹಾಗಲ್ಲ, ಇದು (ಕುರ್‌ಆನ್) ಒಂದು ಉಪದೇಶವಾಗಿದೆ.*
80:12
فَمَنْ شَاءَ ذَكَرَهُ ۞
ಇಷ್ಟ ಉಳ್ಳವನು ಇದರಿಂದ ಉಪದೇಶ ಪಡೆಯಲಿ.
80:13
فِي صُحُفٍ مُكَرَّمَةٍ ۞
ಇದು ಗೌರವಾರ್ಹ ಹೊತ್ತಗೆ(ಗ್ರಂಥ)ಗಳಲ್ಲಿ ಲಿಖಿತವಾಗಿದೆ.
80:14
مَرْفُوعَةٍ مُطَهَّرَةٍ ۞
ಉನ್ನತ ಸ್ಥಾನದಲ್ಲಿದ್ದು, ಪಾವನವಾಗಿದೆ.
80:15
بِأَيْدِي سَفَرَةٍ ۞
ಅದು ಬರೆಯುವವರ ಕೈಯಲ್ಲಿದೆ.
80:16
كِرَامٍ بَرَرَةٍ ۞
ಅವರು ಗೌರವಾನ್ವಿತರು ಮತ್ತು ಶ್ರೇಷ್ಠರು.
80:17
قُتِلَ الْإِنْسَانُ مَا أَكْفَرَهُ ۞
ಮಾನವನಿಗೆ ಛೀಮಾರಿ. ಅವನು ಅದೆಷ್ಟು ಕೃತಘ್ನನು!
80:18
مِنْ أَيِّ شَيْءٍ خَلَقَهُ ۞
ಅವನನ್ನು ಸೃಷ್ಟಿಸಲಾಗಿರುವುದು ಯಾವುದರಿಂದ?
80:19
مِنْ نُطْفَةٍ خَلَقَهُ فَقَدَّرَهُ ۞
ವೀರ್ಯದಿಂದ. ಅವನು (ಅಲ್ಲಾಹನು) ಆತನನ್ನು ಸೃಷ್ಟಿಸಿದನು ಹಾಗೂ ಆತನ ವಿಧಿಯನ್ನು ನಿಶ್ಚಯಿಸಿದನು.
80:20
ثُمَّ السَّبِيلَ يَسَّرَهُ ۞
ಆ ಬಳಿಕ ಅವನಿಗೆ ಬದುಕಿನ ದಾರಿಯನ್ನು ಸುಗಮಗೊಳಿಸಿದನು.
80:21
ثُمَّ أَمَاتَهُ فَأَقْبَرَهُ ۞
ಆ ಬಳಿಕ ಅವನನ್ನು ಸಾಯಿಸಿ ಅವನನ್ನು ಗೋರಿಗೆ ತಲುಪಿಸಿದನು.
80:22
ثُمَّ إِذَا شَاءَ أَنْشَرَهُ ۞
ಆ ಬಳಿಕ ಅವನು, ತಾನಿಚ್ಛಿಸಿದಾಗ ಅವನನ್ನು ಪುನಃ ಜೀವಂತಗೊಳಿಸುವನು.
80:23
كَلَّا لَمَّا يَقْضِ مَا أَمَرَهُ ۞
ಹಾಗಲ್ಲ, ಅವನು (ಮಾನವನು) ತನಗೆ ನೀಡಲಾದ ಆದೇಶವನ್ನು ಪಾಲಿಸಲಿಲ್ಲ.
80:24
فَلْيَنْظُرِ الْإِنْسَانُ إِلَىٰ طَعَامِهِ ۞
ಮನುಷ್ಯನು ತನ್ನ ಆಹಾರದ ಕಡೆಗೊಮ್ಮೆ ನೋಡಲಿ.
80:25
أَنَّا صَبَبْنَا الْمَاءَ صَبًّا ۞
(ಅದಕ್ಕಾಗಿ) ಧಾರಾಳ ನೀರನ್ನು ಸುರಿಸಿದವರು ನಾವು.
80:26
ثُمَّ شَقَقْنَا الْأَرْضَ شَقًّا ۞
ಭೂಮಿಯನ್ನು ಸೂಕ್ತ ರೀತಿಯಲ್ಲಿ ಬಿರಿದು ತೆರೆದವರು ನಾವು.
80:27
فَأَنْبَتْنَا فِيهَا حَبًّا ۞
ಅದರಲ್ಲಿ ಬೆಳೆಗಳನ್ನು ಬೆಳೆದವರು ನಾವು.
80:28
وَعِنَبًا وَقَضْبًا ۞
ದ್ರಾಕ್ಷಿಗಳು ಹಾಗೂ ತರಕಾರಿಗಳು.
80:29
وَزَيْتُونًا وَنَخْلًا ۞
ಝೈತೂನ್ ಹಾಗೂ ಖರ್ಜೂರಗಳು.
80:30
وَحَدَائِقَ غُلْبًا ۞
ದಟ್ಟವಾದ ತೋಟಗಳು.
80:31
وَفَاكِهَةً وَأَبًّا ۞
ಹಣ್ಣುಗಳು ಹಾಗೂ ಮೇವು.
80:32
مَتَاعًا لَكُمْ وَلِأَنْعَامِكُمْ ۞
ನಿಮ್ಮ ಹಾಗೂ ನಿಮ್ಮ ಜಾನುವಾರುಗಳ ಅನುಕೂಲಕ್ಕಾಗಿ (ಇದನ್ನೆಲ್ಲಾ ಮಾಡಲಾಯಿತು).
80:33
فَإِذَا جَاءَتِ الصَّاخَّةُ ۞
ಕೊನೆಗೆ ಪುನರುತ್ಥಾನದ ಕೋಲಾಹಲವು ಮೊಳಗಿದಾಗ.
80:34
يَوْمَ يَفِرُّ الْمَرْءُ مِنْ أَخِيهِ ۞
ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು.
80:35
وَأُمِّهِ وَأَبِيهِ ۞
ತನ್ನ ತಂದೆಯಿಂದಲೂ ತಾಯಿಯಿಂದಲೂ.
80:36
وَصَاحِبَتِهِ وَبَنِيهِ ۞
ಪತ್ನಿಯಿಂದಲೂ ಪುತ್ರರಿಂದಲೂ (ದೂರ ಓಡುವನು).
80:37
لِكُلِّ امْرِئٍ مِنْهُمْ يَوْمَئِذٍ شَأْنٌ يُغْنِيهِ ۞
ಅಂದು ಪ್ರತಿಯೊಬ್ಬನೂ ತನಗೊದಗಿರುವ ಚಿಂತೆಯಲ್ಲೇ ಮಗ್ನನಾಗಿರುವನು.
80:38
وُجُوهٌ يَوْمَئِذٍ مُسْفِرَةٌ ۞
ಅಂದು ಕೆಲವು ಮುಖಗಳು ಉಜ್ವಲವಾಗಿರುವವು,
80:39
ضَاحِكَةٌ مُسْتَبْشِرَةٌ ۞
ನಗುತ್ತಾ ಸಂಭ್ರಮಿಸುತ್ತಿರುವವು.
80:40
وَوُجُوهٌ يَوْمَئِذٍ عَلَيْهَا غَبَرَةٌ ۞
ಮತ್ತೆ ಕೆಲವು ಮುಖಗಳ ಮೇಲೆ ಅಂದು ಧೂಳು ತುಂಬಿರುವುದು.
80:41
تَرْهَقُهَا قَتَرَةٌ ۞
(ಮತ್ತು ) ಕರಾಳತೆ ಕವಿದಿರುವುದು.
80:42
أُولَٰئِكَ هُمُ الْكَفَرَةُ الْفَجَرَةُ ۞
ಅವರು ಧಿಕ್ಕಾರಿ ದುಷ್ಕರ್ಮಿಗಳಾಗಿರುವರು.