As-Saffat (Those drawn up in ranks)
37. ಅಸ್ಸಾಫ್ಫಾತ್(ಸಾಲುಗಟ್ಟಿರುವವರು)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
37:1
وَالصَّافَّاتِ صَفًّا
۞
ಶಿಸ್ತು ಬದ್ಧವಾಗಿ ಸಾಲುಗಟ್ಟಿರುವವರ (ಮಲಕ್‌ಗಳ) ಆಣೆ.
37:2
فَالزَّاجِرَاتِ زَجْرًا
۞
ಉಗ್ರವಾಗಿ ಗದರಿಸುವವರಾಣೆ.
37:3
فَالتَّالِيَاتِ ذِكْرًا
۞
ಉಪದೇಶವನ್ನು ಓದುವವರಾಣೆ.
37:4
إِنَّ إِلَٰهَكُمْ لَوَاحِدٌ
۞
ನಿಮ್ಮ ಆರಾಧ್ಯನು ಖಂಡಿತ ಒಬ್ಬನೇ.
37:5
رَبُّ السَّمَاوَاتِ وَالْأَرْضِ وَمَا بَيْنَهُمَا وَرَبُّ الْمَشَارِقِ
۞
ಅವನು ಆಕಾಶಗಳ, ಭೂಮಿಯ ಹಾಗೂ ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯ ಮತ್ತು ಪೂರ್ವಗಳ ಒಡೆಯನಾಗಿದ್ದಾನೆ.
37:6
إِنَّا زَيَّنَّا السَّمَاءَ الدُّنْيَا بِزِينَةٍ الْكَوَاكِبِ
۞
ಖಂಡಿತವಾಗಿಯೂ ನಾವು ಭೂಲೋಕದ ಆಕಾಶವನ್ನು ನಕ್ಷತ್ರಗಳ ಸೊಬಗಿನಿಂದ ಅಲಂಕರಿಸಿರುವೆವು.
37:7
وَحِفْظًا مِنْ كُلِّ شَيْطَانٍ مَارِدٍ
۞
ಮತ್ತು ನಾವು ಅದನ್ನು ಪ್ರತಿಯೊಬ್ಬ ವಿದ್ರೋಹಿ ಶೈತಾನನಿಂದ ರಕ್ಷಿಸಿಟ್ಟಿರುವೆವು.
37:8
لَا يَسَّمَّعُونَ إِلَى الْمَلَإِ الْأَعْلَىٰ وَيُقْذَفُونَ مِنْ كُلِّ جَانِبٍ
۞
ಮೇಲಿನ ಲೋಕದ ಏನನ್ನೂ ಕೇಳಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಎಲ್ಲ ಕಡೆಯಿಂದಲೂ ಅವರ ಮೇಲೆ ಪ್ರಹಾರವಾಗುತ್ತದೆ.
37:9
دُحُورًا ۖ وَلَهُمْ عَذَابٌ وَاصِبٌ
۞
ಅವರನ್ನು ಬೆನ್ನಟ್ಟಿ ಹಿಮ್ಮೆಟ್ಟಿಸಲಾಗುತ್ತದೆ. ಅಲ್ಲದೆ ಅವರಿಗೆ ಶಾಶ್ವತ ಶಿಕ್ಷೆ ಇದೆ.
37:10
إِلَّا مَنْ خَطِفَ الْخَطْفَةَ فَأَتْبَعَهُ شِهَابٌ ثَاقِبٌ
۞
ಇಷ್ಟಾಗಿಯೂ ಕಿತ್ತುಕೊಂಡು ಓಡಿದವನು - ಒಂದು ಉರಿಯುವ ಜ್ವಾಲೆಯು ಅವನ ಬೆನ್ನು ಹಿಡಿಯುತ್ತದೆ.
37:11
فَاسْتَفْتِهِمْ أَهُمْ أَشَدُّ خَلْقًا أَمْ مَنْ خَلَقْنَا ۚ إِنَّا خَلَقْنَاهُمْ مِنْ طِينٍ لَازِبٍ
۞
ನೀವು ಅವರೊಡನೆ ಕೇಳಿ ನೋಡಿರಿ; ಅವರನ್ನು ಸೃಷ್ಟಿಸುವುದು ಹೆಚ್ಚು ಕಷ್ಟವೋ ಅಥವಾ ನಮ್ಮ (ಇತರ) ಸೃಷ್ಟಿಗಳನ್ನೋ? ಅವರನ್ನಂತು ನಾವು ಅಂಟುವ ಮಣ್ಣಿನಿಂದ ಸೃಷ್ಟಿಸಿರುವೆವು.
37:12
بَلْ عَجِبْتَ وَيَسْخَرُونَ
۞
(ದೂತರೇ,) ನೀವು (ಅಲ್ಲಾಹನ ಮಹಿಮೆಯ ಕುರಿತು) ಅಚ್ಚರಿ ಪಡುತ್ತೀರಿ ಮತ್ತು ಅವರು ಗೇಲಿ ಮಾಡುತ್ತಾರೆ.
37:13
وَإِذَا ذُكِّرُوا لَا يَذْكُرُونَ
۞
ಅವರಿಗೆ ಉಪದೇಶಿಸಲಾದಾಗ ಅವರು ಉಪದೇಶವನ್ನು ಸ್ವೀಕರಿಸುವುದಿಲ್ಲ.
37:14
وَإِذَا رَأَوْا آيَةً يَسْتَسْخِرُونَ
۞
ಅವರು ಯಾವುದಾದರೂ ಪುರಾವೆಯನ್ನು ಕಂಡಾಗ, ಅದನ್ನು ಗೇಲಿ ಮಾಡುತ್ತಾರೆ.
37:15
وَقَالُوا إِنْ هَٰذَا إِلَّا سِحْرٌ مُبِينٌ
۞
ಮತ್ತು ಅವರು, ಇದು ಸ್ಪಷ್ಟವಾದ ಜಾದೂಗಾರಿಕೆಯೇ ಹೊರತು ಬೇರೇನೂ ಅಲ್ಲ ಎಂದು ಬಿಡುತ್ತಾರೆ.
37:16
أَإِذَا مِتْنَا وَكُنَّا تُرَابًا وَعِظَامًا أَإِنَّا لَمَبْعُوثُونَ
۞
ನಾವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಪುನಃ ಜೀವಂತ ಗೊಳಿಸಲಾಗುವುದೇ?
37:17
أَوَآبَاؤُنَا الْأَوَّلُونَ
۞
ಅಥವಾ, ನಮ್ಮ ತಾತ ಮುತ್ತಾತಂದಿರನ್ನು ಕೂಡಾ (ಜೀವಂತಗೊಳಿಸಲಾಗುವುದೇ? ಎಂದು ಅವರು ಪ್ರಶ್ನಿಸುತ್ತಾರೆ).
37:18
قُلْ نَعَمْ وَأَنْتُمْ دَاخِرُونَ
۞
ಹೇಳಿರಿ, ಹೌದು, ಮತ್ತು ನೀವು ಅಪಮಾನಿತರಾಗುವಿರಿ.
37:19
فَإِنَّمَا هِيَ زَجْرَةٌ وَاحِدَةٌ فَإِذَا هُمْ يَنْظُرُونَ
۞
ಅದು (ಲೋಕಾಂತ್ಯದ ಕಹಳೆ) ಕೇವಲ ಒಂದು ಎಚ್ಚರಿಕೆಯ ಧ್ವನಿಯಾಗಿರುವುದು. ಅಷ್ಟರಲ್ಲೆ ಅವರು ದಂಗಾಗಿ ನೋಡ ತೊಡಗುವರು.
37:20
وَقَالُوا يَا وَيْلَنَا هَٰذَا يَوْمُ الدِّينِ
۞
ಮತ್ತು ಅವರು, ‘‘ಅಯ್ಯೋ ನಮ್ಮ ದುಸ್ಥಿತಿ! ಇದುವೇ ಆ ಪ್ರತಿಫಲದ ದಿನ’’ ಎನ್ನುವರು.
37:21
هَٰذَا يَوْمُ الْفَصْلِ الَّذِي كُنْتُمْ بِهِ تُكَذِّبُونَ
۞
ಇದುವೇ, ನೀವು ನಿರಾಕರಿಸುತ್ತಿದ್ದ ತೀರ್ಮಾನದ ದಿನ.
37:22
۞ احْشُرُوا الَّذِينَ ظَلَمُوا وَأَزْوَاجَهُمْ وَمَا كَانُوا يَعْبُدُونَ
۞
(ಅಂದು ಮಲಕ್‌ಗಳೊಡನೆ ಹೇಳಲಾಗುವುದು;) ‘‘ಅಕ್ರಮಿಗಳನ್ನು, ಅವರ ಜೊತೆಗಾರರನ್ನು ಮತ್ತು ಅವರು (ಅಲ್ಲಾಹನ ಹೊರತು) ಯಾರನ್ನೆಲ್ಲಾ ಆರಾಧಿಸುತ್ತಿದ್ದರೋ ಅವರನ್ನೆಲ್ಲಾ ಒಟ್ಟು ಸೇರಿಸಿರಿ’’ -
37:23
مِنْ دُونِ اللَّهِ فَاهْدُوهُمْ إِلَىٰ صِرَاطِ الْجَحِيمِ
۞
- ಅಲ್ಲಾಹನ ಹೊರತು. ಮತ್ತು ನೀವು ಅವರಿಗೆ ನರಕದ ದಾರಿ ತೋರಿಸಿರಿ.
37:24
وَقِفُوهُمْ ۖ إِنَّهُمْ مَسْئُولُونَ
۞
ಮತ್ತು ಅವರನ್ನು ತಡೆಯಿರಿ. ಖಂಡಿತವಾಗಿಯೂ ಅವರ ವಿಚಾರಣೆ ನಡೆಯಬೇಕಾಗಿದೆ.
37:25
مَا لَكُمْ لَا تَنَاصَرُونَ
۞
ನಿಮಗೇನಾಗಿದೆ? ನೀವೇಕೆ ಪರಸ್ಪರ ನೆರವಾಗುತ್ತಿಲ್ಲ?
37:26
بَلْ هُمُ الْيَوْمَ مُسْتَسْلِمُونَ
۞
ನಿಜವಾಗಿ, ಇಂದು ಅವರು ಸಂಪೂರ್ಣ ಶರಣಾಗಿ ಬಿಟ್ಟಿದ್ದಾರೆ.
37:27
وَأَقْبَلَ بَعْضُهُمْ عَلَىٰ بَعْضٍ يَتَسَاءَلُونَ
۞
(ಅಂದು) ಅವರಲ್ಲಿ ಕೆಲವರು ಮತ್ತೆ ಕೆಲವರೆಡೆಗೆ ತಿರುಗಿ ಪ್ರಶ್ನೆಗಳನ್ನು ಕೇಳುವರು.
37:28
قَالُوا إِنَّكُمْ كُنْتُمْ تَأْتُونَنَا عَنِ الْيَمِينِ
۞
‘‘ನೀವು (ಸತ್ಯದಿಂದ ನಮ್ಮನ್ನು ತಡೆಯಲು) ಬಲ ಭಾಗದಿಂದ ನಮ್ಮ ಬಳಿಗೆ ಬರುತ್ತಿದ್ದಿರಿ’’ ಎನ್ನುವರು.
37:29
قَالُوا بَلْ لَمْ تَكُونُوا مُؤْمِنِينَ
۞
ಅವರು (ಹೀಗೆಂದು) ಉತ್ತರಿಸುವರು; ‘‘ನಿಜವಾಗಿ, ನೀವು ಸತ್ಯವನ್ನು ನಂಬುವವರೇ ಆಗಿರಲಿಲ್ಲ.’’
37:30
وَمَا كَانَ لَنَا عَلَيْكُمْ مِنْ سُلْطَانٍ ۖ بَلْ كُنْتُمْ قَوْمًا طَاغِينَ
۞
‘‘ನಿಮ್ಮ ಮೇಲೆ ನಮಗೆ ಅಧಿಕಾರವೇನೂ ಇರಲಿಲ್ಲ. ನಿಜವಾಗಿ ನೀವೇ ವಿದ್ರೋಹಿ ಪಂಗಡವಾಗಿದ್ದಿರಿ.’’
37:31
فَحَقَّ عَلَيْنَا قَوْلُ رَبِّنَا ۖ إِنَّا لَذَائِقُونَ
۞
‘‘ಇದೀಗ ನಮ್ಮ ಕುರಿತು ನಮ್ಮ ಒಡೆಯನ ಮಾತು ಸತ್ಯವಾಗಿ ಬಿಟ್ಟಿದೆ. ನಾವೀಗ (ಶಿಕ್ಷೆಯನ್ನು) ಖಂಡಿತ ಸವಿಯಲಿದ್ದೇವೆ.’’
37:32
فَأَغْوَيْنَاكُمْ إِنَّا كُنَّا غَاوِينَ
۞
‘‘ನಾವು ನಿಮ್ಮನ್ನು ದಾರಿಗೆಡಿಸಿದ್ದು ಮಾತ್ರವಲ್ಲ, ಸ್ವತಃ ನಾವೇ ದಾರಿಗೆಟ್ಟಿದ್ದೆವು.’’
37:33
فَإِنَّهُمْ يَوْمَئِذٍ فِي الْعَذَابِ مُشْتَرِكُونَ
۞
ಕೊನೆಗೆ, ಅವರೆಲ್ಲರೂ ಜೊತೆಯಾಗಿಯೇ ಶಿಕ್ಷೆ ಅನುಭವಿಸುವರು.
37:34
إِنَّا كَذَٰلِكَ نَفْعَلُ بِالْمُجْرِمِينَ
۞
ನಾವು ಅಪರಾಧಿಗಳಿಗೆ ಹೀಗೆಯೇ ಮಾಡುತ್ತೇವೆ.
37:35
إِنَّهُمْ كَانُوا إِذَا قِيلَ لَهُمْ لَا إِلَٰهَ إِلَّا اللَّهُ يَسْتَكْبِرُونَ
۞
ಅಲ್ಲಾಹನ ಹೊರತು ಬೇರಾರೂ ಪೂಜಾರ್ಹರಲ್ಲ ಎಂದು ಅವರೊಡನೆ ಹೇಳಲಾದಾಗ ಅವರು ಅಹಂಕಾರ ತೋರಿದ್ದರು.
37:36
وَيَقُولُونَ أَئِنَّا لَتَارِكُو آلِهَتِنَا لِشَاعِرٍ مَجْنُونٍ
۞
ಮತ್ತು ‘‘ನಾವೇನು ಒಬ್ಬ ಹುಚ್ಚು ಪೀಡಿತ ಕವಿಗಾಗಿ ನಮ್ಮ ದೇವರುಗಳನ್ನು ಬಿಟ್ಟು ಬಿಡಬೇಕೇ?’’ ಎಂದು ಅವರು ಕೇಳುತ್ತಿದ್ದರು.
37:37
بَلْ جَاءَ بِالْحَقِّ وَصَدَّقَ الْمُرْسَلِينَ
۞
ನಿಜವಾಗಿ ಅವರು (ದೂತರು), ಸತ್ಯದೊಂದಿಗೆ ಬಂದಿರುತ್ತಾರೆ ಮತ್ತು ಅವರು (ಹಿಂದಿನ) ದೂತರನ್ನು ಸಮರ್ಥಿಸುತ್ತಾರೆ.
37:38
إِنَّكُمْ لَذَائِقُو الْعَذَابِ الْأَلِيمِ
۞
ನೀವು ಖಂಡಿತ ಯಾತನಾಮಯ ಶಿಕ್ಷೆಯನ್ನು ಸವಿಯುವಿರಿ.
37:39
وَمَا تُجْزَوْنَ إِلَّا مَا كُنْتُمْ تَعْمَلُونَ
۞
ಮತ್ತು ನಿಮಗೆ ನೀವೆಸಗುತ್ತಿದ್ದ ಕರ್ಮಗಳ ಫಲವಷ್ಟೇ ಸಿಗಲಿದೆ.
37:40
إِلَّا عِبَادَ اللَّهِ الْمُخْلَصِينَ
۞
ಅಲ್ಲಾಹನ ಆಯ್ದ ದಾಸರ ಹೊರತು.
37:41
أُولَٰئِكَ لَهُمْ رِزْقٌ مَعْلُومٌ
۞
ಅವರಿಗಾಗಿ ನಿರ್ದಿಷ್ಟ ಆಹಾರವಿದೆ,
37:42
فَوَاكِهُ ۖ وَهُمْ مُكْرَمُونَ
۞
ಹಣ್ಣುಗಳೂ ಇವೆ ಮತ್ತು ಅವರು ಗೌರವಾನ್ವಿತರಾಗಿರುವರು,
37:43
فِي جَنَّاتِ النَّعِيمِ
۞
ಕೊಡುಗೆಗಳು ತುಂಬಿರುವ ಸ್ವರ್ಗ ತೋಟಗಳಲ್ಲಿ,
37:44
عَلَىٰ سُرُرٍ مُتَقَابِلِينَ
۞
ಎದುರು ಬದುರಾಗಿರುವ ಆಸನಗಳಲ್ಲಿ,
37:45
يُطَافُ عَلَيْهِمْ بِكَأْسٍ مِنْ مَعِينٍ
۞
ಹರಿಯುವ ಚಿಲುಮೆಗಳ ಪಾನೀಯಗಳನ್ನು ಅವರ ಸುತ್ತ ಒಯ್ಯಲಾಗುವುದು.
37:46
بَيْضَاءَ لَذَّةٍ لِلشَّارِبِينَ
۞
ಅವು ಶುಭ್ರವಾಗಿದ್ದು, ಕುಡಿಯುವವರಿಗೆ ರುಚಿಕರವಾಗಿರುವವು.
37:47
لَا فِيهَا غَوْلٌ وَلَا هُمْ عَنْهَا يُنْزَفُونَ
۞
ಅದರಿಂದ, ಯಾವುದೇ ಸಂಕಟವಾಗದು ಮತ್ತು ಅವರು ಮದ ಮತ್ತರಾಗಲಾರರು.
37:48
وَعِنْدَهُمْ قَاصِرَاتُ الطَّرْفِ عِينٌ
۞
ಅವರ ಬಳಿ ದೃಷ್ಟಿ ತಗ್ಗಿಸಿರುವ, ವಿಶಾಲ ಕಣ್ಣಿನವರು (ಸೇವಕಿಯರು) ಇರುವರು.
37:49
كَأَنَّهُنَّ بَيْضٌ مَكْنُونٌ
۞
ಅವರು, ಅಡಗಿಸಿಟ್ಟ ಮೊಟ್ಟೆಗಳಂತೆ (ಶುಭ್ರ ಹಾಗೂ ನಿರ್ಮಲರಾಗಿ) ಇರುವರು.
37:50
فَأَقْبَلَ بَعْضُهُمْ عَلَىٰ بَعْضٍ يَتَسَاءَلُونَ
۞
ಅವರು (ಸ್ವರ್ಗವಾಸಿಗಳು) ಎದುರು ಬದುರಾಗಿ ಪರಸ್ಪರರೊಡನೆ ವಿಚಾರಿಸುವರು.
37:51
قَالَ قَائِلٌ مِنْهُمْ إِنِّي كَانَ لِي قَرِينٌ
۞
ಅವರಲ್ಲೊಬ್ಬನು ಹೇಳುವನು; ನನಗೊಬ್ಬ ಸಂಗಾತಿ ಇದ್ದನು.
37:52
يَقُولُ أَإِنَّكَ لَمِنَ الْمُصَدِّقِينَ
۞
ಅವನು ನನ್ನೊಡನೆ ಹೇಳುತ್ತಿದ್ದನು; ‘‘ನೀನೇನು (ಪರಲೋಕವನ್ನು) ನಂಬುವವನಾಗಿರುವೆಯಾ?’’
37:53
أَإِذَا مِتْنَا وَكُنَّا تُرَابًا وَعِظَامًا أَإِنَّا لَمَدِينُونَ
۞
‘‘ನಾವು ಸತ್ತು ಕೇವಲ ಮಣ್ಣು ಹಾಗೂ ಎಲುಬುಗಳಾಗಿ ಬಿಟ್ಟ ಬಳಿಕ ನಮಗೆ ಪ್ರತಿಫಲ ಸಿಗಲಿಕ್ಕಿದೆಯೇ?’’
37:54
قَالَ هَلْ أَنْتُمْ مُطَّلِعُونَ
۞
ಅವನು (ಮತ್ತೆ) ‘‘ನೀವೀಗ (ಆತ ಎಲ್ಲಿದ್ದಾನೆಂದು) ಇಣುಕಿ ನೋಡಲು ಬಯಸುತ್ತೀರಾ?’’ ಎಂದು ಕೇಳುವನು.
37:55
فَاطَّلَعَ فَرَآهُ فِي سَوَاءِ الْجَحِيمِ
۞
ತರುವಾಯ ಅವನು (ಸ್ವತಃ) ಇಣುಕಿ ನೋಡುವನು ಹಾಗೂ ತನ್ನ ಸಂಗಾತಿಯನ್ನು ನರಕದ ಮಧ್ಯದಲ್ಲಿ ಕಾಣುವನು.
37:56
قَالَ تَاللَّهِ إِنْ كِدْتَ لَتُرْدِينِ
۞
ಮತ್ತು ಅವನು ಹೇಳುವನು; ‘‘ಅಲ್ಲಾಹನಾಣೆ! ನೀನಂತು ನನ್ನನ್ನು ನಾಶ ಮಾಡಿಯೇ ಬಿಡುತ್ತಿದ್ದೆ.’’
37:57
وَلَوْلَا نِعْمَةُ رَبِّي لَكُنْتُ مِنَ الْمُحْضَرِينَ
۞
ನನ್ನ ಒಡೆಯನ ಅನುಗ್ರಹವಿಲ್ಲದೆ ಹೋಗಿದ್ದರೆ, ನಾನೂ (ಬಂಧಿಗಳಾಗಿ) ಹಾಜರುಗೊಳಿಸಲಾದವರ ಸಾಲಿಗೆ ಸೇರಿರುತ್ತಿದ್ದೆ.
37:58
أَفَمَا نَحْنُ بِمَيِّتِينَ
۞
(ಸ್ವರ್ಗವಾಸಿಗಳು ಹೇಳುವರು;) ಇನ್ನು ನಮಗೇನು ಮರಣವಿಲ್ಲವೇ?
37:59
إِلَّا مَوْتَتَنَا الْأُولَىٰ وَمَا نَحْنُ بِمُعَذَّبِينَ
۞
- ನಮ್ಮ ಪ್ರಥಮ ಮರಣದ ಹೊರತು? ಮತ್ತು ನಾವು ಶಿಕ್ಷೆಗೂ ಗುರಿಯಾಗಲಾರೆವು!
37:60
إِنَّ هَٰذَا لَهُوَ الْفَوْزُ الْعَظِيمُ
۞
ಖಂಡಿತವಾಗಿಯೂ ಇದುವೇ ಮಹಾ ಸೌಭಾಗ್ಯವಾಗಿದೆ.
37:61
لِمِثْلِ هَٰذَا فَلْيَعْمَلِ الْعَامِلُونَ
۞
ಶ್ರಮಿಸುವವರೆಲ್ಲಾ ಇದಕ್ಕಾಗಿಯೇ ಶ್ರಮಿಸಬೇಕು.
37:62
أَذَٰلِكَ خَيْرٌ نُزُلًا أَمْ شَجَرَةُ الزَّقُّومِ
۞
ಈ ಆತಿಥ್ಯ ಉತ್ತಮವೋ ಅಥವಾ ‘ಝಕ್ಕೂಮ್’ ಮರವೋ?
37:63
إِنَّا جَعَلْنَاهَا فِتْنَةً لِلظَّالِمِينَ
۞
ಖಂಡಿತವಾಗಿಯೂ ನಾವು ಅದನ್ನು ಅಕ್ರಮಿಗಳ ಪಾಲಿಗೆ ಪರೀಕ್ಷೆಯಾಗಿಸಿರುವೆವು.
37:64
إِنَّهَا شَجَرَةٌ تَخْرُجُ فِي أَصْلِ الْجَحِيمِ
۞
ಅದು ನರಕದ ತಳದಿಂದ ಬೆಳೆಯುವ ಮರ.
37:65
طَلْعُهَا كَأَنَّهُ رُءُوسُ الشَّيَاطِينِ
۞
ಅದರ ಗೆಲ್ಲುಗಳು ಶೈತಾನರ ತಲೆಗಳಂತಿರುವವು.
37:66
فَإِنَّهُمْ لَآكِلُونَ مِنْهَا فَمَالِئُونَ مِنْهَا الْبُطُونَ
۞
ಅವರು (ನರಕವಾಸಿಗಳು) ಖಂಡಿತ ಅದನ್ನೇ ತಿನ್ನುವರು ಮತ್ತು ಅದರಿಂದಲೇ ತಮ್ಮ ಹೊಟ್ಟೆ ತುಂಬುವರು.
37:67
ثُمَّ إِنَّ لَهُمْ عَلَيْهَا لَشَوْبًا مِنْ حَمِيمٍ
۞
ಹಾಗೆಯೇ, ಅಲ್ಲಿ ಅವರಿಗಾಗಿ ಮಾಲಿನ್ಯ ಬೆರೆತ, ಕುದಿಯುತ್ತಿರುವ ಪಾನೀಯವಿರುವುದು.
37:68
ثُمَّ إِنَّ مَرْجِعَهُمْ لَإِلَى الْجَحِيمِ
۞
ಕೊನೆಗೆ, ನರಕವೇ ಅವರು ಮರಳುವ ನೆಲೆಯಾಗಿರುವುದು.
37:69
إِنَّهُمْ أَلْفَوْا آبَاءَهُمْ ضَالِّينَ
۞
ಅವರು, ತಮ್ಮ ಪೂರ್ವಜರು ದಾರಿಗೆಟ್ಟಿದ್ದನ್ನು ಕಂಡಿದ್ದರು.
37:70
فَهُمْ عَلَىٰ آثَارِهِمْ يُهْرَعُونَ
۞
ಆದರೂ, ಅವರು ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸಿದರು.
37:71
وَلَقَدْ ضَلَّ قَبْلَهُمْ أَكْثَرُ الْأَوَّلِينَ
۞
ನಿಜವಾಗಿ, ಅವರಿಗಿಂತ ಹಿಂದಿನ, ಅವರ ಪೂರ್ವಜರಲ್ಲಿ ಹೆಚ್ಚಿನವರು ದಾರಿಗೆಟ್ಟಿದ್ದರು.
37:72
وَلَقَدْ أَرْسَلْنَا فِيهِمْ مُنْذِرِينَ
۞
ನಾವು ಅವರ ನಡುವೆ ಎಚ್ಚರಿಸುವವರನ್ನು ಕಳಿಸಿದ್ದೆವು.
37:73
فَانْظُرْ كَيْفَ كَانَ عَاقِبَةُ الْمُنْذَرِينَ
۞
ಹೀಗೆ ಎಚ್ಚರಿಕೆ ಪಡೆದವರ ಗತಿ ಏನಾಯಿತೆಂಬುದನ್ನು ನೋಡಿರಿ.
37:74
إِلَّا عِبَادَ اللَّهِ الْمُخْلَصِينَ
۞
ಅಲ್ಲಾಹನ ಆಯ್ದ ದಾಸರ ಸ್ಥಿತಿ ಮಾತ್ರ ಭಿನ್ನವಾಗಿದೆ.
37:75
وَلَقَدْ نَادَانَا نُوحٌ فَلَنِعْمَ الْمُجِيبُونَ
۞
ನೂಹರು ನಮಗೆ ಮೊರೆ ಇಟ್ಟರು. ನಾವು (ಮೊರೆಗಳಿಗೆ) ಅತ್ಯುತ್ತಮ ಉತ್ತರ ನೀಡುವವರಾಗಿದ್ದೇವೆ.
37:76
وَنَجَّيْنَاهُ وَأَهْلَهُ مِنَ الْكَرْبِ الْعَظِيمِ
۞
ನಾವು ಅವರನ್ನೂ ಅವರ ಮನೆಯವರನ್ನೂ ಮಹಾ ವಿಪತ್ತಿನಿಂದ ರಕ್ಷಿಸಿದೆವು.
37:77
وَجَعَلْنَا ذُرِّيَّتَهُ هُمُ الْبَاقِينَ
۞
ಮತ್ತು ನಾವು ಅವರ ಸಂತತಿಯನ್ನು ಬಹುಕಾಲ ಉಳಿಸಿದೆವು.
37:78
وَتَرَكْنَا عَلَيْهِ فِي الْآخِرِينَ
۞
ಮತ್ತು ನಾವು ಮುಂದಿನವರಲ್ಲಿ ಅವರ ನೆನಪನ್ನು ಸಂರಕ್ಷಿಸಿದೆವು.
37:79
سَلَامٌ عَلَىٰ نُوحٍ فِي الْعَالَمِينَ
۞
ನೂಹರಿಗೆ ಶಾಂತಿ, ಸರ್ವಲೋಕಗಳಲ್ಲಿ.
37:80
إِنَّا كَذَٰلِكَ نَجْزِي الْمُحْسِنِينَ
۞
ಖಂಡಿತವಾಗಿಯೂ ನಾವು ಇದೇ ರೀತಿ ಸತ್ಕರ್ಮಿಗಳನ್ನು ಪುರಸ್ಕರಿಸುತ್ತೇವೆ.
37:81
إِنَّهُ مِنْ عِبَادِنَا الْمُؤْمِنِينَ
۞
ಅವರು ಖಂಡಿತ ನಮ್ಮ ವಿಶ್ವಾಸಿ ದಾಸರಾಗಿದ್ದರು.
37:82
ثُمَّ أَغْرَقْنَا الْآخَرِينَ
۞
ತರುವಾಯ ನಾವು ಇತರರನ್ನು ಮುಳುಗಿಸಿ ಬಿಟ್ಟೆವು.
37:83
۞ وَإِنَّ مِنْ شِيعَتِهِ لَإِبْرَاهِيمَ
۞
ಇನ್ನು, ಇಬ್ರಾಹೀಮರಂತು ಅವರ (ನೂಹರ) ಹಾದಿಯಲ್ಲೇ ನಡೆಯುವವರಾಗಿದ್ದರು.
37:84
إِذْ جَاءَ رَبَّهُ بِقَلْبٍ سَلِيمٍ
۞
ಅವರು ನಿರ್ಮಲ ಮನಸ್ಸಿನೊಂದಿಗೆ ತಮ್ಮ ಒಡೆಯನ ಸನ್ನಿಧಿಗೆ ಬಂದರು.
37:85
إِذْ قَالَ لِأَبِيهِ وَقَوْمِهِ مَاذَا تَعْبُدُونَ
۞
ಮತ್ತು ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗದವರೊಡನೆ ಕೇಳಿದರು; ‘‘ನೀವು ಅದೇನನ್ನು ಪೂಜಿಸುತ್ತಿರುವಿರಿ?’’
37:86
أَئِفْكًا آلِهَةً دُونَ اللَّهِ تُرِيدُونَ
۞
‘‘ನೀವೇನು, ಅಲ್ಲಾಹನ ಜೊತೆ ಮಿಥ್ಯ ಶಕ್ತಿಗಳನ್ನು ದೇವರಾಗಿಸಲು ಬಯಸುವಿರಾ?’’
37:87
فَمَا ظَنُّكُمْ بِرَبِّ الْعَالَمِينَ
۞
‘‘ಎಲ್ಲ ಲೋಕಗಳ ಒಡೆಯನ ಕುರಿತು ನಿಮ್ಮ ಅಭಿಪ್ರಾಯವೇನು?’’
37:88
فَنَظَرَ نَظْرَةً فِي النُّجُومِ
۞
ಆ ಬಳಿಕ ಅವರು ನಕ್ಷತ್ರಗಳೆಡೆಗೆ ದೃಷ್ಟಿ ಬೀರಿದರು.
37:89
فَقَالَ إِنِّي سَقِيمٌ
۞
ಮತ್ತು ‘‘ನಾನು ಅಸ್ವಸ್ಥನಾಗಿ ಬಿಟ್ಟಿದ್ದೇನೆ’’ ಎಂದರು.
37:90
فَتَوَلَّوْا عَنْهُ مُدْبِرِينَ
۞
ಅವರೆಲ್ಲಾ (ಜನಾಂಗದವರೆಲ್ಲಾ) ಅವರನ್ನು (ಇಬ್ರಾಹೀಮರನ್ನು) ಬಿಟ್ಟು ಹೊರಟು ಹೋದರು.
37:91
فَرَاغَ إِلَىٰ آلِهَتِهِمْ فَقَالَ أَلَا تَأْكُلُونَ
۞
ಅವರು (ಇಬ್ರಾಹೀಮರು) ಅವರ (ತಮ್ಮ ಜನಾಂಗದವರ) ದೇವರುಗಳೆಡೆಗೆ (ವಿಗ್ರಹಗಳೆಡೆಗೆ) ಗಮನ ಹರಿಸಿದರು ಮತ್ತು ಕೇಳಿದರು; ‘‘ನೀವು ಏನನ್ನೂ ತಿನ್ನುವುದಿಲ್ಲವೇ?’’
37:92
مَا لَكُمْ لَا تَنْطِقُونَ
۞
‘‘ನಿಮಗೇನಾಗಿದೆ? ನೀವೇಕೆ ಮಾತನಾಡುತ್ತಿಲ್ಲ?’’
37:93
فَرَاغَ عَلَيْهِمْ ضَرْبًا بِالْيَمِينِ
۞
ಕೊನೆಗೆ ಅವರು ಅವುಗಳ ಮೇಲೆ ಮುಗಿಬಿದ್ದು ಬಲಗೈಯಿಂದ ಹೊಡೆದರು.
37:94
فَأَقْبَلُوا إِلَيْهِ يَزِفُّونَ
۞
ಅವರೆಲ್ಲಾ (ಜನಾಂಗದವರೆಲ್ಲಾ) ಅವರೆಡೆಗೆ ಧಾವಿಸಿ ಬಂದರು.
37:95
قَالَ أَتَعْبُدُونَ مَا تَنْحِتُونَ
۞
ಅವರು (ಇಬ್ರಾಹೀಮರು ಹೇಳಿದರು;) ‘‘ನೀವೇನು, ಸ್ವತಃ ನೀವೇ ಕೆತ್ತಿ ನಿರ್ಮಿಸಿದವುಗಳನ್ನು ಪೂಜಿಸುತ್ತೀರಾ?’’
37:96
وَاللَّهُ خَلَقَكُمْ وَمَا تَعْمَلُونَ
۞
‘‘ನಿಮ್ಮನ್ನು ಮತ್ತು ನೀವು ರಚಿಸುವವುಗಳನ್ನೆಲ್ಲಾ ಅಲ್ಲಾಹನೇ ಸೃಷ್ಟಿಸಿರುವನು.’’
37:97
قَالُوا ابْنُوا لَهُ بُنْيَانًا فَأَلْقُوهُ فِي الْجَحِيمِ
۞
ಅವರು (ಜನಾಂಗದವರು, ಪರಸ್ಪರರೊಡನೆ) ‘‘ಅವನಿಗಾಗಿ ಒಂದು ಅಗ್ನಿ ಕುಂಡವನ್ನು ರಚಿಸಿರಿ ಮತ್ತು ಅವನನ್ನು ಬೆಂಕಿಗೆಸೆದು ಬಿಡಿರಿ’’ ಎಂದರು.
37:98
فَأَرَادُوا بِهِ كَيْدًا فَجَعَلْنَاهُمُ الْأَسْفَلِينَ
۞
ಅವರು (ಜನಾಂಗದವರು), ಅವರ (ಇಬ್ರಾಹೀಮರ) ವಿರುದ್ಧ ಒಂದು ಸಂಚನ್ನು ಹೂಡಬಯಸಿದ್ದರು. ಆದರೆ ನಾವು ಅವರನ್ನು ಕೀಳಾಗಿಸಿಬಿಟ್ಟೆವು.
37:99
وَقَالَ إِنِّي ذَاهِبٌ إِلَىٰ رَبِّي سَيَهْدِينِ
۞
ಅವರು (ಇಬ್ರಾಹೀಮ್) ಹೇಳಿದರು; ನಾನು ನನ್ನ ಒಡೆಯನೆಡೆಗೆ ತೆರಳುತ್ತೇನೆ. ಅವನು ನನಗೆ ಸರಿದಾರಿಯನ್ನು ತೋರಬಹುದು.
37:100
رَبِّ هَبْ لِي مِنَ الصَّالِحِينَ
۞
‘‘ನನ್ನೊಡೆಯಾ, ನನಗೆ ಶ್ರೇಷ್ಠ ಸಂತತಿಗಳನ್ನು ದಯ ಪಾಲಿಸು’’ (ಎಂದು ಅವರು ಪ್ರಾರ್ಥಿಸಿದರು).
37:101
فَبَشَّرْنَاهُ بِغُلَامٍ حَلِيمٍ
۞
ಕೊನೆಗೆ ನಾವು ಅವರಿಗೆ ಒಬ್ಬ ವಿವೇಕವಂತ ಪುತ್ರನ (ಇಸ್ಮಾಈಲರ) ಶುಭವಾರ್ತೆ ನೀಡಿದೆವು.
37:102
فَلَمَّا بَلَغَ مَعَهُ السَّعْيَ قَالَ يَا بُنَيَّ إِنِّي أَرَىٰ فِي الْمَنَامِ أَنِّي أَذْبَحُكَ فَانْظُرْ مَاذَا تَرَىٰ ۚ قَالَ يَا أَبَتِ افْعَلْ مَا تُؤْمَرُ ۖ سَتَجِدُنِي إِنْ شَاءَ اللَّهُ مِنَ الصَّابِرِينَ
۞
ಅವರು (ಇಸ್ಮಾಈಲರು) ಅವರ ಜೊತೆ ಓಡಾಡಬಲ್ಲವರಾದಾಗ ಅವರು ಹೇಳಿದರು ; ‘‘ನಾನು ನಿನ್ನ ಕೊರಳು ಕೊಯ್ಯುತ್ತಿರುವುದಾಗಿ ಸ್ವಪ್ನದಲ್ಲಿ ಕಂಡಿದ್ದೇನೆ. ಈ ಕುರಿತು ನಿನ್ನ ಅನಿಸಿಕೆ ಏನು?’’ ಅವರು (ಇಸ್ಮಾಈಲ್) ಹೇಳಿದರು; ‘‘ಅಪ್ಪಾ, ನಿಮಗೆ ಆದೇಶಿಸಲಾಗಿರುವುದನ್ನು ನೀವು ಮಾಡಿಬಿಡಿ. ಅಲ್ಲಾಹನಿಚ್ಛಿಸಿದರೆ, ನೀವು ನನ್ನನ್ನು ಸಹನಶೀಲನಾಗಿ ಕಾಣುವಿರಿ.’’
37:103
فَلَمَّا أَسْلَمَا وَتَلَّهُ لِلْجَبِينِ
۞
ಹೀಗೆ ಅವರಿಬ್ಬರೂ ವಿಧೇಯತೆ ತೋರಿದರು ಮತ್ತು ಅವರು (ಇಬ್ರಾಹೀಮರು) ಅವರನ್ನು (ಪುತ್ರನನ್ನು), ಮುಖ ಕೆಳಗಾಗಿಸಿ ಮಲಗಿಸಿದರು.
37:104
وَنَادَيْنَاهُ أَنْ يَا إِبْرَاهِيمُ
۞
ಆಗ ನಾವು ಅವರನ್ನು ಕರೆದೆವು; ‘‘ಇಬ್ರಾಹೀಮರೇ,’’
37:105
قَدْ صَدَّقْتَ الرُّؤْيَا ۚ إِنَّا كَذَٰلِكَ نَجْزِي الْمُحْسِنِينَ
۞
‘‘ನೀವು ಸ್ವಪ್ನವನ್ನು ಸಾಕಾರಗೊಳಿಸಿದಿರಿ.’’ ನಾವು ಸಜ್ಜನರನ್ನು ಖಂಡಿತ ಇದೇ ರೀತಿ ಪುರಸ್ಕರಿಸುತ್ತೇವೆ.
37:106
إِنَّ هَٰذَا لَهُوَ الْبَلَاءُ الْمُبِينُ
۞
ಅದು ಖಂಡಿತ ಒಂದು ಸ್ಪಷ್ಟ ಪರೀಕ್ಷೆಯಾಗಿತ್ತು.
37:107
وَفَدَيْنَاهُ بِذِبْحٍ عَظِيمٍ
۞
ಮತ್ತು ನಾವು ಅವರಿಗೆ ಪರಿಹಾರವಾಗಿ ಒಂದು ಶ್ರೇಷ್ಠ ಬಲಿಪಶುವನ್ನು ನೀಡಿದೆವು.
37:108
وَتَرَكْنَا عَلَيْهِ فِي الْآخِرِينَ
۞
ಮತ್ತು ನಾವು ಅದರ (ಆ ಘಟನೆಯ) ನೆನಪನ್ನು ಮುಂದಿನವರಲ್ಲಿ ಉಳಿಸಿದೆವು.
37:109
سَلَامٌ عَلَىٰ إِبْرَاهِيمَ
۞
ಇಬ್ರಾಹೀಮರಿಗೆ ಶಾಂತಿ.
37:110
كَذَٰلِكَ نَجْزِي الْمُحْسِنِينَ
۞
ನಾವು ಸಜ್ಜನರನ್ನು ಇದೇ ರೀತಿ ಪುರಸ್ಕರಿಸುತ್ತೇವೆ.
37:111
إِنَّهُ مِنْ عِبَادِنَا الْمُؤْمِنِينَ
۞
ಅವರು ನಮ್ಮ ವಿಶ್ವಾಸಿ ದಾಸರಲ್ಲೊಬ್ಬರಾಗಿದ್ದರು.
37:112
وَبَشَّرْنَاهُ بِإِسْحَاقَ نَبِيًّا مِنَ الصَّالِحِينَ
۞
ಮುಂದೆ ನಾವು ಅವರಿಗೆ ಇಸ್‌ಹಾಕ್‌ರ ಶುಭ ವಾರ್ತೆಯನ್ನು ನೀಡಿದೆವು. ಅವರೊಬ್ಬ ಸಜ್ಜನ ದೂತರಾಗಿದ್ದರು.
37:113
وَبَارَكْنَا عَلَيْهِ وَعَلَىٰ إِسْحَاقَ ۚ وَمِنْ ذُرِّيَّتِهِمَا مُحْسِنٌ وَظَالِمٌ لِنَفْسِهِ مُبِينٌ
۞
ನಾವು ಅವರಿಗೂ ಇಸ್‌ಹಾಕರಿಗೂ ಸಮೃದ್ಧಿಯನ್ನು ನೀಡಿದೆವು. ಅವರಿಬ್ಬರ ಸಂತತಿಗಳಲ್ಲಿ ಸಜ್ಜನರೂ ಇದ್ದಾರೆ, ಸ್ವತಃ ತಮ್ಮ ಮೇಲೆ ಸ್ಪಷ್ಟ ಅಕ್ರಮವೆಸಗಿದವರೂ ಇದ್ದಾರೆ.
37:114
وَلَقَدْ مَنَنَّا عَلَىٰ مُوسَىٰ وَهَارُونَ
۞
ನಾವು ಮೂಸಾ ಮತ್ತು ಹಾರೂನರ ಮೇಲೆ ಕೃಪೆ ತೋರಿದೆವು.
37:115
وَنَجَّيْنَاهُمَا وَقَوْمَهُمَا مِنَ الْكَرْبِ الْعَظِيمِ
۞
ಮತ್ತು ನಾವು ಅವರಿಬ್ಬರನ್ನೂ ಅವರ ಜನಾಂಗದವರನ್ನೂ ಮಹಾ ಸಂಕಟದಿಂದ ವಿಮೋಚಿಸಿದೆವು.
37:116
وَنَصَرْنَاهُمْ فَكَانُوا هُمُ الْغَالِبِينَ
۞
ನಾವು ಅವರಿಗೆ ನೆರವಾದೆವು. ಆದ್ದರಿಂದ ಅವರು ವಿಜಯಿಗಳಾದರು.
37:117
وَآتَيْنَاهُمَا الْكِتَابَ الْمُسْتَبِينَ
۞
ನಾವು ಅವರಿಬ್ಬರಿಗೂ ಸವಿಸ್ತಾರವಾದ ಗ್ರಂಥವನ್ನು ನೀಡಿದ್ದೆವು.
37:118
وَهَدَيْنَاهُمَا الصِّرَاطَ الْمُسْتَقِيمَ
۞
ಮತ್ತು ನಾವು ಅವರಿಗೆ ನೇರ ಮಾರ್ಗವನ್ನು ತೋರಿಸಿದ್ದೆವು.
37:119
وَتَرَكْنَا عَلَيْهِمَا فِي الْآخِرِينَ
۞
ಮುಂದಿನವರಲ್ಲಿ ನಾವು ಅವರ ನೆನಪನ್ನು ಉಳಿಸಿದೆವು.
37:120
سَلَامٌ عَلَىٰ مُوسَىٰ وَهَارُونَ
۞
ಮೂಸಾ ಮತ್ತು ಹಾರೂನರಿಗೆ ಶಾಂತಿ ಸಿಗಲಿ.
37:121
إِنَّا كَذَٰلِكَ نَجْزِي الْمُحْسِنِينَ
۞
ನಾವು ಸಜ್ಜನರನ್ನು ಖಂಡಿತ ಇದೇ ರೀತಿ ಪುರಸ್ಕರಿಸುತ್ತೇವೆ.
37:122
إِنَّهُمَا مِنْ عِبَادِنَا الْمُؤْمِنِينَ
۞
ಅವರಿಬ್ಬರೂ ನಮ್ಮ ವಿಶ್ವಾಸಿ ದಾಸರಾಗಿದ್ದರು.
37:123
وَإِنَّ إِلْيَاسَ لَمِنَ الْمُرْسَلِينَ
۞
ಮತ್ತು ಇಲ್ಯಾಸ್ ಖಂಡಿತ ದೂತರಲ್ಲೊಬ್ಬರಾಗಿದ್ದರು.
37:124
إِذْ قَالَ لِقَوْمِهِ أَلَا تَتَّقُونَ
۞
ಅವರು ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವೇನು (ಅಲ್ಲಾಹನಿಗೆ) ಅಂಜುವುದಿಲ್ಲವೇ?’’
37:125
أَتَدْعُونَ بَعْلًا وَتَذَرُونَ أَحْسَنَ الْخَالِقِينَ
۞
‘‘ನೀವೇನು ‘ಬಅ್'ಲ್’ ದೇವಿಗೆ ಮೊರೆ ಇಡುತ್ತೀರಾ? ಮತ್ತು ಸರ್ವ ಶ್ರೇಷ್ಠ ಸೃಷ್ಟಿಕರ್ತನನ್ನು ಬಿಟ್ಟು ಬಿಡುತ್ತೀರಾ?’’
37:126
اللَّهَ رَبَّكُمْ وَرَبَّ آبَائِكُمُ الْأَوَّلِينَ
۞
‘‘ಅಲ್ಲಾಹನೇ ನಿಮ್ಮ ಒಡೆಯನೂ ಹೌದು ನಿಮ್ಮ ಪೂರ್ವಜರ ಒಡೆಯನೂ ಹೌದು.’’
37:127
فَكَذَّبُوهُ فَإِنَّهُمْ لَمُحْضَرُونَ
۞
ಅವರು (ಜನಾಂಗದವರು) ಅವರನ್ನು ತಿರಸ್ಕರಿಸಿದರು. ಅವರನ್ನು ಖಂಡಿತ (ಶಿಕ್ಷೆಗಾಗಿ) ಹಾಜರು ಪಡಿಸಲಾಗುವುದು.
37:128
إِلَّا عِبَادَ اللَّهِ الْمُخْلَصِينَ
۞
ಅಲ್ಲಾಹನ ಆಯ್ದ ದಾಸರ ಹೊರತು.
37:129
وَتَرَكْنَا عَلَيْهِ فِي الْآخِرِينَ
۞
ಅವರ (ಇಲ್ಯಾಸರ) ನೆನಪನ್ನು ನಾವು ಮುಂದಿನವರಲ್ಲಿ ಉಳಿಸಿರುವೆವು.
37:130
سَلَامٌ عَلَىٰ إِلْ يَاسِينَ
۞
ಇಲ್ಯಾಸ್‌ರಿಗೆ ಶಾಂತಿ ಸಿಗಲಿ.
37:131
إِنَّا كَذَٰلِكَ نَجْزِي الْمُحْسِنِينَ
۞
ನಾವು ಖಂಡಿತ ಸಜ್ಜನರನ್ನು ಇದೇ ರೀತಿ ಪುರಸ್ಕರಿಸುತ್ತೇವೆ.
37:132
إِنَّهُ مِنْ عِبَادِنَا الْمُؤْمِنِينَ
۞
ಅವರು ಖಂಡಿತ ನಮ್ಮ ವಿಶ್ವಾಸಿ ದಾಸರಲ್ಲೊಬ್ಬರಾಗಿದ್ದರು.
37:133
وَإِنَّ لُوطًا لَمِنَ الْمُرْسَلِينَ
۞
ಇನ್ನು ಲೂತರು ಖಂಡಿತ ನಮ್ಮ ದೂತರಲ್ಲೊಬ್ಬರಾಗಿದ್ದರು.
37:134
إِذْ نَجَّيْنَاهُ وَأَهْلَهُ أَجْمَعِينَ
۞
ನಾವು ಅವರನ್ನು ಹಾಗೂ ಅವರ ಮನೆಯವರನ್ನೆಲ್ಲಾ ರಕ್ಷಿಸಿದೆವು.
37:135
إِلَّا عَجُوزًا فِي الْغَابِرِينَ
۞
ಹಿಂದೆ ಉಳಿದುಕೊಂಡ ಒಬ್ಬ ವೃದ್ಧೆಯ ಹೊರತು.
37:136
ثُمَّ دَمَّرْنَا الْآخَرِينَ
۞
(ಅವರ ಜನಾಂಗದ) ಇತರರನ್ನು ನಾವು ನಾಶ ಮಾಡಿಬಿಟ್ಟೆವು.
37:137
وَإِنَّكُمْ لَتَمُرُّونَ عَلَيْهِمْ مُصْبِحِينَ
۞
ನೀವಂತು ಅವರ (ನಾಡುಗಳ) ಮೇಲಿಂದಲೇ ಹಾದು ಹೋಗುತ್ತೀರಿ - ಹಗಲಲ್ಲಿ -
37:138
وَبِاللَّيْلِ ۗ أَفَلَا تَعْقِلُونَ
۞
- ಮತ್ತು ಇರುಳಲ್ಲಿ. ನೀವೇನು ಆಲೋಚಿಸುವುದಿಲ್ಲವೇ?
37:139
وَإِنَّ يُونُسَ لَمِنَ الْمُرْسَلِينَ
۞
ಯೂನುಸ್ ಖಂಡಿತ ನಮ್ಮ ದೂತರಲ್ಲೊಬ್ಬರಾಗಿದ್ದರು.
37:140
إِذْ أَبَقَ إِلَى الْفُلْكِ الْمَشْحُونِ
۞
ಅವರು ತಮ್ಮ ತುಂಬಿದ ಹಡಗಿನೆಡೆಗೆ ಧಾವಿಸಿದರು.
37:141
فَسَاهَمَ فَكَانَ مِنَ الْمُدْحَضِينَ
۞
(ಹಡಗು ಮುಳುಗುವ ಹಂತದಲ್ಲಿ) ಅವರು (ಅದೃಷ್ಟದ) ಚೀಟಿ ಎತ್ತುವುದಕ್ಕೆ ಒಪ್ಪಿದರು ಮತ್ತು ಸೋತು ಹೋದರು.
37:142
فَالْتَقَمَهُ الْحُوتُ وَهُوَ مُلِيمٌ
۞
ಕೊನೆಗೆ (ಸಮುದ್ರಕ್ಕೆಸೆಯಲಾದ) ಅವರನ್ನು ಮೀನು ನುಂಗಿತು. ಆಗ ಅವರು ತಮ್ಮನ್ನೇ ದೂಷಿಸಿಕೊಂಡರು.
37:143
فَلَوْلَا أَنَّهُ كَانَ مِنَ الْمُسَبِّحِينَ
۞
ಒಂದು ವೇಳೆ ಅವರು ಅಲ್ಲಾಹನ ಪಾವಿತ್ರ್ಯವನ್ನು ಜಪಿಸುತ್ತಿರುವವರಾಗದೆ ಇದ್ದಿದ್ದರೆ,
37:144
لَلَبِثَ فِي بَطْنِهِ إِلَىٰ يَوْمِ يُبْعَثُونَ
۞
ಪುನರುತ್ಥಾನದ ದಿನದವರೆಗೂ ಅವರು ಅದರ (ಮೀನಿನ) ಹೊಟ್ಟೆಯಲ್ಲೇ ಉಳಿಯುತ್ತಿದ್ದರು.
37:145
۞ فَنَبَذْنَاهُ بِالْعَرَاءِ وَهُوَ سَقِيمٌ
۞
ಕೊನೆಗೆ ನಾವು ಅವರನ್ನು ಬಯಲಿಗೆ ಎಸೆದು ಬಿಟ್ಟೆವು. ಆಗ ಅವರು ತುಂಬಾ ಕ್ಷೀಣರಾಗಿದ್ದರು.
37:146
وَأَنْبَتْنَا عَلَيْهِ شَجَرَةً مِنْ يَقْطِينٍ
۞
ನಾವು ಅವರ ಬಳಿ ಬಳ್ಳಿಗಳಿರುವ ಗಿಡವನ್ನು ಬೆಳೆಸಿದೆವು.
37:147
وَأَرْسَلْنَاهُ إِلَىٰ مِائَةِ أَلْفٍ أَوْ يَزِيدُونَ
۞
ಮತ್ತು ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಜನರಿದ್ದಲ್ಲಿಗೆ ಕಳಿಸಿದೆವು.
37:148
فَآمَنُوا فَمَتَّعْنَاهُمْ إِلَىٰ حِينٍ
۞
ಅವರು (ಆ ನಾಡಿನವರು) ನಂಬಿದರು ಮತ್ತು ಒಂದು ನಿರ್ದಿಷ್ಟ ಕಾಲದ ತನಕ ನಾವು ಅವರಿಗೆ ಧಾರಾಳ ಸಂಪನ್ನತೆ ನೀಡಿದೆವು.
37:149
فَاسْتَفْتِهِمْ أَلِرَبِّكَ الْبَنَاتُ وَلَهُمُ الْبَنُونَ
۞
ಇದೀಗ ಅವರೊಡನೆ ಕೇಳಿರಿ. ನಿಮ್ಮ ಒಡೆಯನಿಗೆ ಪುತ್ರಿಯರು ಮತ್ತು ಅವರಿಗೆ ಪುತ್ರರೇ?
37:150
أَمْ خَلَقْنَا الْمَلَائِكَةَ إِنَاثًا وَهُمْ شَاهِدُونَ
۞
ನಾವೇನು ಮಲಕ್‌ಗಳನ್ನು ಸ್ತ್ರೀಯರಾಗಿ ಸೃಷ್ಟಿಸಿರುವೆವೇ? ಅದಕ್ಕೇನು ಅವರು ಸಾಕ್ಷಿಗಳಾಗಿದ್ದರೇ?
37:151
أَلَا إِنَّهُمْ مِنْ إِفْكِهِمْ لَيَقُولُونَ
۞
ನಿಮಗೆ ತಿಳಿದಿರಲಿ. ಅವರು ಖಂಡಿತ ತಾವೇ ರಚಿಸಿಕೊಂಡ ಸುಳ್ಳುಗಳನ್ನು ಹೇಳುತ್ತಿದ್ದಾರೆ.
37:152
وَلَدَ اللَّهُ وَإِنَّهُمْ لَكَاذِبُونَ
۞
ಅಲ್ಲಾಹನಿಗೆ ಸಂತತಿಗಳಿದ್ದಾರೆಂದು (ಅವರು ಹೇಳುತ್ತಾರೆ). ಅವರು ಖಂಡಿತ ಸುಳ್ಳು ಹೇಳುತ್ತಿದ್ದಾರೆ.
37:153
أَصْطَفَى الْبَنَاتِ عَلَى الْبَنِينَ
۞
ಅವನೇನು ಪುತ್ರರಿಗಿಂತ ಪುತ್ರಿಯರಿಗೆ ಪ್ರಾಶಸ್ತ್ಯ ನೀಡಿದನೇ?
37:154
مَا لَكُمْ كَيْفَ تَحْكُمُونَ
۞
ನಿಮಗೇನಾಗಿದೆ? ನೀವು ಅದೆಂತಹ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ?
37:155
أَفَلَا تَذَكَّرُونَ
۞
ನೀವು ಪಾಠ ಕಲಿಯುವುದಿಲ್ಲವೇ?
37:156
أَمْ لَكُمْ سُلْطَانٌ مُبِينٌ
۞
ಅಥವಾ ನಿಮ್ಮ ಬಳಿ ಸ್ಪಷ್ಟ ಪುರಾವೆಯೇನಾದರೂ ಇದೆಯೇ?
37:157
فَأْتُوا بِكِتَابِكُمْ إِنْ كُنْتُمْ صَادِقِينَ
۞
ನೀವು ಸತ್ಯವಂತರಾಗಿದ್ದರೆ ತನ್ನಿರಿ, ನಿಮ್ಮ ಗ್ರಂಥವನ್ನು.
37:158
وَجَعَلُوا بَيْنَهُ وَبَيْنَ الْجِنَّةِ نَسَبًا ۚ وَلَقَدْ عَلِمَتِ الْجِنَّةُ إِنَّهُمْ لَمُحْضَرُونَ
۞
ಅವರು ಅವನ (ಅಲ್ಲಾಹನ) ಹಾಗೂ ಜಿನ್ನ್‌ಗಳ ನಡುವೆ ಸಂಬಂಧ ಕಲ್ಪಿಸುತ್ತಾರೆ. ತಮ್ಮನ್ನು (ನರಕದೆದುರು) ಹಾಜರುಗೊಳಿಸಲಾಗುವುದೆಂದು (ಧಿಕ್ಕಾರಿ) ಜಿನ್ನ್‌ಗಳಿಗೆ ಖಂಡಿತ ತಿಳಿದಿದೆ.
37:159
سُبْحَانَ اللَّهِ عَمَّا يَصِفُونَ
۞
ಅಲ್ಲಾಹನು ಅವರ ಎಲ್ಲ ಆರೋಪಗಳಿಂದ ಮುಕ್ತನಾಗಿದ್ದಾನೆ.
37:160
إِلَّا عِبَادَ اللَّهِ الْمُخْلَصِينَ
۞
ಅಲ್ಲಾಹನು ಆಯ್ದುಕೊಂಡ ದಾಸರು ಮಾತ್ರ ಭಿನ್ನರಾಗಿರುತ್ತಾರೆ.
37:161
فَإِنَّكُمْ وَمَا تَعْبُدُونَ
۞
ಖಂಡಿತವಾಗಿಯೂ ನೀವು ಮತ್ತು ನೀವು ಪೂಜಿಸುವ ವಸ್ತುಗಳು -
37:162
مَا أَنْتُمْ عَلَيْهِ بِفَاتِنِينَ
۞
ಅವನ (ಅಲ್ಲಾಹನ) ವಿಷಯದಲ್ಲಿ ಯಾರನ್ನೂ ಮೋಸಗೊಳಿಸುವಂತಿಲ್ಲ -
37:163
إِلَّا مَنْ هُوَ صَالِ الْجَحِيمِ
۞
ನರಕಕ್ಕೆ ಹೋಗುವವನೆಂದು ವಿಧಿಸಲ್ಪಟ್ಟವನ ಹೊರತು.
37:164
وَمَا مِنَّا إِلَّا لَهُ مَقَامٌ مَعْلُومٌ
۞
(ಮಲಕ್‌ಗಳು ಹೇಳುತ್ತಾರೆ:) ‘‘ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಥಾನವು ನಿಶ್ಚಿತವಾಗಿದೆ.
37:165
وَإِنَّا لَنَحْنُ الصَّافُّونَ
۞
ಮತ್ತು ನಾವು (ಅಲ್ಲಾಹನ ಮಂದೆ) ಸಾಲುಗಟ್ಟಿ ನಿಂತಿರುತ್ತೇವೆ.
37:166
وَإِنَّا لَنَحْنُ الْمُسَبِّحُونَ
۞
ಮತ್ತು ನಾವು ಖಂಡಿತ (ಅಲ್ಲಾಹನ) ಪಾವಿತ್ರ್ಯವನ್ನು ಜಪಿಸುತ್ತಿರುತ್ತೇವೆ.’’
37:167
وَإِنْ كَانُوا لَيَقُولُونَ
۞
ಈ ಹಿಂದೆ ಅವರು (ಧಿಕ್ಕಾರಿಗಳು) ಹೇಳುತ್ತಿದ್ದರು;
37:168
لَوْ أَنَّ عِنْدَنَا ذِكْرًا مِنَ الْأَوَّلِينَ
۞
‘‘ನಮ್ಮ ಬಳಿ ಗತ ಕಾಲದವರ ಬೋಧನೆಗಳು (ದಿವ್ಯ ಗ್ರಂಥ) ಇದ್ದಿದ್ದರೆ,
37:169
لَكُنَّا عِبَادَ اللَّهِ الْمُخْلَصِينَ
۞
ನಾವು ಖಂಡಿತ ಅಲ್ಲಾಹನ ಆಯ್ದ ದಾಸರ ಸಾಲಿಗೆ ಸೇರಿರುತ್ತಿದ್ದೆವು.’’
37:170
فَكَفَرُوا بِهِ ۖ فَسَوْفَ يَعْلَمُونَ
۞
ಆದರೆ (ದಿವ್ಯ ಗ್ರಂಥವು ಬಂದಾಗ) ಅವರು ಅದನ್ನು ಧಿಕ್ಕರಿಸಿದರು. ಇದೀಗ ಅದರ ಪರಿಣಾಮವು ಅವರಿಗೆ ತಿಳಿಯಲಿದೆ.
37:171
وَلَقَدْ سَبَقَتْ كَلِمَتُنَا لِعِبَادِنَا الْمُرْسَلِينَ
۞
ದೂತರಾಗಿರುವ ನಮ್ಮ ದಾಸರ ವಿಷಯದಲ್ಲಿ ನಮ್ಮ ಹೇಳಿಕೆಯು ಈಗಾಗಲೇ ವಿಧಿತವಾಗಿದೆ.
37:172
إِنَّهُمْ لَهُمُ الْمَنْصُورُونَ
۞
(ಅದೇನೆಂದರೆ), ಅವರಿಗೆ ಖಂಡಿತ ಸಹಾಯ ಸಿಗಲಿದೆ.
37:173
وَإِنَّ جُنْدَنَا لَهُمُ الْغَالِبُونَ
۞
ಮತ್ತು ಖಂಡಿತವಾಗಿಯೂ ನಮ್ಮ ಪಡೆಗಳೇ ಗೆಲ್ಲುವವು.
37:174
فَتَوَلَّ عَنْهُمْ حَتَّىٰ حِينٍ
۞
(ದೂತರೇ,) ಸದ್ಯ, ಒಂದು ನಿರ್ದಿಷ್ಟ ಕಾಲದ ತನಕ ನೀವು ಅವರನ್ನು (ಧಿಕ್ಕಾರಿಗಳನ್ನು) ಕಡೆಗಣಿಸಿರಿ.
37:175
وَأَبْصِرْهُمْ فَسَوْفَ يُبْصِرُونَ
۞
ಮತ್ತು ನೀವು ಅವರನ್ನು ನೋಡುತ್ತಲಿರಿ. ಅವರು ಶೀಘ್ರವೇ (ತಮ್ಮ ಗತಿಯನ್ನು) ಕಾಣುವರು.
37:176
أَفَبِعَذَابِنَا يَسْتَعْجِلُونَ
۞
ಅವರೇನು, ನಮ್ಮ ಶಿಕ್ಷೆಗಾಗಿ ಆತುರ ಪಡುತ್ತಿದ್ದಾರೆಯೇ?
37:177
فَإِذَا نَزَلَ بِسَاحَتِهِمْ فَسَاءَ صَبَاحُ الْمُنْذَرِينَ
۞
ಅದು ಅವರ ಅಂಗಳಕ್ಕೆ ಬಂದಿಳಿದಾಗ, ಈಗಾಗಲೆ ಎಚ್ಚರಿಸಲ್ಪಟ್ಟವರ ಪಾಲಿಗೆ ಅದು ಬಹಳ ಕೆಟ್ಟ ಮುಂಜಾನೆಯಾಗಿರುವುದು.
37:178
وَتَوَلَّ عَنْهُمْ حَتَّىٰ حِينٍ
۞
ಸದ್ಯ, ಒಂದು ನಿರ್ದಿಷ್ಟ ಕಾಲದ ತನಕ ನೀವು ಅವರನ್ನು ಕಡೆಗಣಿಸಿರಿ.
37:179
وَأَبْصِرْ فَسَوْفَ يُبْصِرُونَ
۞
ಮತ್ತು ನೀವು ಅವರನ್ನು ನೋಡುತ್ತಲಿರಿ. ಅವರು ಶೀಘ್ರವೇ (ತಮ್ಮ ಗತಿಯನ್ನು) ಕಾಣುವರು.
37:180
سُبْحَانَ رَبِّكَ رَبِّ الْعِزَّةِ عَمَّا يَصِفُونَ
۞
ಗೌರವಾನ್ವಿತನಾದ ನಿಮ್ಮ ಪಾವನ ಒಡೆಯನು, ಅವರು ಹೊರಿಸುವ ಎಲ್ಲ ಆರೋಪಗಳಿಂದ ಸಂಪೂರ್ಣ ಮುಕ್ತನಾಗಿದ್ದಾನೆ.
37:181
وَسَلَامٌ عَلَى الْمُرْسَلِينَ
۞
ದೂತರಿಗೆ ಶಾಂತಿ ಸಿಗಲಿ.
37:182
وَالْحَمْدُ لِلَّهِ رَبِّ الْعَالَمِينَ
۞
ಮತ್ತು ಎಲ್ಲ ಪ್ರಶಂಸೆಗಳು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.