Al-Ma'idah (The table)
5. ಅಲ್ ಮಾಇದಃ(ಮೇಜು)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
5:1
يَا أَيُّهَا الَّذِينَ آمَنُوا أَوْفُوا بِالْعُقُودِ ۚ أُحِلَّتْ لَكُمْ بَهِيمَةُ الْأَنْعَامِ إِلَّا مَا يُتْلَىٰ عَلَيْكُمْ غَيْرَ مُحِلِّي الصَّيْدِ وَأَنْتُمْ حُرُمٌ ۗ إِنَّ اللَّهَ يَحْكُمُ مَا يُرِيدُ
۞
ವಿಶ್ವಾಸಿಗಳೇ, ಪ್ರತಿಜ್ಞೆಗಳನ್ನು ಪಾಲಿಸಿರಿ. ನಾಲ್ಕು ಕಾಲಿನ ಜಾನುವಾರುಗಳನ್ನು ನಿಮ್ಮ ಪಾಲಿಗೆ ಸಮ್ಮತಗೊಳಿಸಲಾಗಿದೆ - (ಪ್ರತ್ಯೇಕವಾಗಿ) ನಿಮಗೆ ತಿಳಿಸಲಾಗುವವುಗಳ ಹೊರತು. ಹಾಗೆಯೇ ನೀವು ‘ಇಹ್ರಾಮ್’ನಲ್ಲಿ (ಹಜ್ಜ್ ಅಥವಾ ಉಮ್ರಃದ ಸಂದರ್ಭದ ವಿಶೇಷ ಉಡುಗೆಯಲ್ಲಿ) ಇರುವಾಗ, ಬೇಟೆಯಾಡಬಾರದು. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸುವುದನ್ನೇ ಆದೇಶಿಸುತ್ತಾನೆ.
5:2
يَا أَيُّهَا الَّذِينَ آمَنُوا لَا تُحِلُّوا شَعَائِرَ اللَّهِ وَلَا الشَّهْرَ الْحَرَامَ وَلَا الْهَدْيَ وَلَا الْقَلَائِدَ وَلَا آمِّينَ الْبَيْتَ الْحَرَامَ يَبْتَغُونَ فَضْلًا مِنْ رَبِّهِمْ وَرِضْوَانًا ۚ وَإِذَا حَلَلْتُمْ فَاصْطَادُوا ۚ وَلَا يَجْرِمَنَّكُمْ شَنَآنُ قَوْمٍ أَنْ صَدُّوكُمْ عَنِ الْمَسْجِدِ الْحَرَامِ أَنْ تَعْتَدُوا ۘ وَتَعَاوَنُوا عَلَى الْبِرِّ وَالتَّقْوَىٰ ۖ وَلَا تَعَاوَنُوا عَلَى الْإِثْمِ وَالْعُدْوَانِ ۚ وَاتَّقُوا اللَّهَ ۖ إِنَّ اللَّهَ شَدِيدُ الْعِقَابِ
۞
ವಿಶ್ವಾಸಿಗಳೇ, ಅಲ್ಲಾಹನ ಕುರುಹುಗಳಿಗೆ, (ನಾಲ್ಕು) ಪಾವನ ತಿಂಗಳುಗಳಿಗೆ, ಹರಕೆಗಳಿಗೆ (ಕಅ್'ಬಃ ಭವನಕ್ಕೆಂದು ಹರಕೆಗೆ ಬಿಡಲಾದ ಜಾನುವಾರುಗಳಿಗೆ), ಕೊರಳಲ್ಲಿ (ಹರಕೆಯ) ಪಟ್ಟಿ ಇರುವವುಗಳಿಗೆ ಮತ್ತು ತಮ್ಮೊಡೆಯನ ಅನುಗ್ರಹ ಹಾಗೂ ಮೆಚ್ಚುಗೆಯನ್ನು ಹುಡುಕುತ್ತಾ ಪವಿತ್ರ ಭವನ (ಕಅ್'ಬಃ)ದೆಡೆಗೆ ಹೊರಟವರಿಗೆ ಯಾವುದೇ ಅಪಚಾರ ಎಸಗಬೇಡಿ. ‘ಇಹ್ರಾಮ್’ನಿಂದ ಮುಕ್ತರಾದ ಬಳಿಕ ನೀವು ಬೇಟೆಯಾಡಬಹುದು. ಒಂದು ಜನಾಂಗವು ಪವಿತ್ರ ಭವನ (ಕಅ್'ಬಃ)ದಿಂದ ನಿಮ್ಮನ್ನು ತಡೆದ ಕಾರಣ ಅವರ ಮೇಲೆ ನಿಮಗಿರುವ ದ್ವೇಷವು, ಯಾವುದೇ ಅನ್ಯಾಯ ನಡೆಸುವುದಕ್ಕೆ ನಿಮ್ಮನ್ನು ಪ್ರಚೋದಿಸಬಾರದು. ಸತ್ಕರ್ಮ ಹಾಗೂ ಧರ್ಮ ನಿಷ್ಠೆಯ ಕೆಲಸಗಳಲ್ಲಿ (ಎಲ್ಲರ ಜೊತೆ) ಸಹಕರಿಸಿರಿ ಮತ್ತು ಪಾಪದ ಹಾಗೂ ಅತಿಕ್ರಮದ ಕೆಲಸಗಳಲ್ಲಿ (ಯಾರ ಜೊತೆಗೂ) ಸಹಕರಿಸಬೇಡಿ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ಖಂಡಿತ ಬಹಳ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ.
5:3
حُرِّمَتْ عَلَيْكُمُ الْمَيْتَةُ وَالدَّمُ وَلَحْمُ الْخِنْزِيرِ وَمَا أُهِلَّ لِغَيْرِ اللَّهِ بِهِ وَالْمُنْخَنِقَةُ وَالْمَوْقُوذَةُ وَالْمُتَرَدِّيَةُ وَالنَّطِيحَةُ وَمَا أَكَلَ السَّبُعُ إِلَّا مَا ذَكَّيْتُمْ وَمَا ذُبِحَ عَلَى النُّصُبِ وَأَنْ تَسْتَقْسِمُوا بِالْأَزْلَامِ ۚ ذَٰلِكُمْ فِسْقٌ ۗ الْيَوْمَ يَئِسَ الَّذِينَ كَفَرُوا مِنْ دِينِكُمْ فَلَا تَخْشَوْهُمْ وَاخْشَوْنِ ۚ الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا ۚ فَمَنِ اضْطُرَّ فِي مَخْمَصَةٍ غَيْرَ مُتَجَانِفٍ لِإِثْمٍ ۙ فَإِنَّ اللَّهَ غَفُورٌ رَحِيمٌ
۞
ಶವವನ್ನು, ರಕ್ತವನ್ನು, ಹಂದಿಯ ಮಾಂಸವನ್ನು, ಅಲ್ಲಾಹನ ಹೊರತು ಇತರರ ಹೆಸರಲ್ಲಿ ಬಲಿ ನೀಡಲಾಗಿರುವ ಪ್ರಾಣಿಯನ್ನು, ಕೊರಳು ಹಿಸುಕಿ ಕೊಂದಿರುವುದನ್ನು, ಪೆಟ್ಟು ತಿಂದು ಸತ್ತಿರುವುದನ್ನು, ಎತ್ತರದಿಂದ ಬಿದ್ದು ಸತ್ತಿರುವುದನ್ನು, (ಕ್ರೂರ ಪ್ರಾಣಿಯು) ಕೊಂಬಿನಿಂದ ಸೀಳಿ ಕೊಂದಿರುವುದನ್ನು ನಿಮ್ಮ ಪಾಲಿಗೆ ನಿಷಿದ್ಧ ಗೊಳಿಸಲಾಗಿದೆ. ಹಾಗೆಯೇ, ಕ್ರೂರ ಪ್ರಾಣಿಯು ತಿಂದು ಬಿಟ್ಟಿರುವುದು (ನಿಮಗೆ ನಿಷಿದ್ಧವಾಗಿದೆ) - ನೀವು ಜೀವಂತ ಪಡೆದು ದಿಬ್ಹ್ ಮಾಡಿದ್ದರ ಹೊರತು. (ಮಿಥ್ಯ ದೇವರ) ಗುಡಿಗಳಲ್ಲಿ ಬಲಿ ನೀಡಲಾದ ಪ್ರಾಣಿಗಳನ್ನು ಮತ್ತು ಬಾಣಗಳ ಮೂಲಕ ಅದೃಷ್ಟ ನಿರ್ಧರಿಸುವುದನ್ನು ನಿಮ್ಮ ಪಾಲಿಗೆ ನಿಷಿದ್ಧಗೊಳಿಸಲಾಗಿದೆ. ಇವೆಲ್ಲಾ ಪಾಪ ಕೃತ್ಯಗಳಾಗಿವೆ. ಧಿಕ್ಕಾರಿಗಳು ಇಂದು ನಿಮ್ಮ ಧರ್ಮದ ಕುರಿತಂತೆ ನಿರಾಶರಾಗಿದ್ದಾರೆ. ನೀವಿನ್ನು ಅವರಿಗೆ ಅಂಜಬೇಡಿ. ನನಗೆ ಮಾತ್ರ ಅಂಜಿರಿ. ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪೂರ್ಣಗೊಳಿಸಿದ್ದೇನೆ ಮತ್ತು ನಿಮ್ಮ ಪಾಲಿಗೆ ನನ್ನ ಕೊಡುಗೆಯನ್ನು ಪೂರ್ತಿಗೊಳಿಸಿದ್ದೇನೆ. ಹಾಗೆಯೇ ನಿಮಗಾಗಿ ನಾನು, ಇಸ್ಲಾಮ್ ಧರ್ಮವನ್ನು ಮೆಚ್ಚಿದ್ದೇನೆ. ಯಾರಾದರೂ ಹಸಿವಿನಿಂದ ನರಳುತ್ತಿದ್ದು, ಪಾಪ ಕೃತ್ಯವೆಸಗುವ ಇರಾದೆ ಇಲ್ಲದವನಾಗಿದ್ದರೆ, (ಅಂಥವನಿಂದ ನಿಯಮದ ಉಲ್ಲಂಘನೆ ನಡೆದರೂ) ಅಲ್ಲಾಹನು ಖಂಡಿತ ಕ್ಷಮಾಶೀಲನೂ, ಕರುಣಾಮಯಿಯೂ ಆಗಿದ್ದಾನೆ.
5:4
يَسْأَلُونَكَ مَاذَا أُحِلَّ لَهُمْ ۖ قُلْ أُحِلَّ لَكُمُ الطَّيِّبَاتُ ۙ وَمَا عَلَّمْتُمْ مِنَ الْجَوَارِحِ مُكَلِّبِينَ تُعَلِّمُونَهُنَّ مِمَّا عَلَّمَكُمُ اللَّهُ ۖ فَكُلُوا مِمَّا أَمْسَكْنَ عَلَيْكُمْ وَاذْكُرُوا اسْمَ اللَّهِ عَلَيْهِ ۖ وَاتَّقُوا اللَّهَ ۚ إِنَّ اللَّهَ سَرِيعُ الْحِسَابِ
۞
(ದೂತರೇ,) ಅವರು ನಿಮ್ಮೊಡನೆ, ತಮ್ಮ ಪಾಲಿಗೆ ಯಾವುದನ್ನು ಸಮ್ಮತಗೊಳಿಸಲಾಗಿದೆ ಎಂದು ಪ್ರಶ್ನಿಸುತ್ತಾರೆ. ಹೇಳಿರಿ; ಶುದ್ಧ ವಸ್ತುಗಳನ್ನೆಲ್ಲಾ ನಿಮ್ಮ ಪಾಲಿಗೆ ಸಮ್ಮತಗೊಳಿಸಲಾಗಿದೆ. ಅಲ್ಲಾಹನು ನಿಮಗೆ ನೀಡಿದ ಜ್ಞಾನದ ಪ್ರಕಾರ, ನೀವು ಬೇಟೆಯಾಡುವುದಕ್ಕೆಂದು ಪಳಗಿಸಿದ ಪ್ರಾಣಿಗಳು, ನಿಮಗಾಗಿ ಹಿಡಿದಿಟ್ಟ ಪ್ರಾಣಿಗಳನ್ನು ಅಲ್ಲಾಹನ ಹೆಸರನ್ನುಚ್ಚರಿಸಿ (ದಿಬ್ಹ್ ಮಾಡಿ) ತಿನ್ನಿರಿ. ಸದಾ ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಿಪ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.
5:5
الْيَوْمَ أُحِلَّ لَكُمُ الطَّيِّبَاتُ ۖ وَطَعَامُ الَّذِينَ أُوتُوا الْكِتَابَ حِلٌّ لَكُمْ وَطَعَامُكُمْ حِلٌّ لَهُمْ ۖ وَالْمُحْصَنَاتُ مِنَ الْمُؤْمِنَاتِ وَالْمُحْصَنَاتُ مِنَ الَّذِينَ أُوتُوا الْكِتَابَ مِنْ قَبْلِكُمْ إِذَا آتَيْتُمُوهُنَّ أُجُورَهُنَّ مُحْصِنِينَ غَيْرَ مُسَافِحِينَ وَلَا مُتَّخِذِي أَخْدَانٍ ۗ وَمَنْ يَكْفُرْ بِالْإِيمَانِ فَقَدْ حَبِطَ عَمَلُهُ وَهُوَ فِي الْآخِرَةِ مِنَ الْخَاسِرِينَ
۞
ಇಂದು ನಿಮ್ಮ ಪಾಲಿಗೆ ಎಲ್ಲ ಶುದ್ಧ ವಸ್ತುಗಳನ್ನು ಸಮ್ಮತಗೊಳಿಸಲಾಗಿದೆ. ಇನ್ನು, ಗ್ರಂಥದವರ ಆಹಾರವು ನಿಮ್ಮ ಪಾಲಿಗೆ ಸಮ್ಮತವಾಗಿದೆ ಮತ್ತು ನಿಮ್ಮ ಆಹಾರವು ಅವರ ಪಾಲಿಗೆ ಸಮ್ಮತವಾಗಿದೆ. ಹಾಗೆಯೇ, ವಿಶ್ವಾಸಿಗಳಲ್ಲಿನ ಸುಶೀಲ ಸ್ತ್ರೀಯರು ಮತ್ತು ನಿಮಗಿಂತ ಮುಂಚೆ ಧರ್ಮಗ್ರಂಥ ನೀಡಲಾಗಿದ್ದವರಲ್ಲಿನ ಸುಶೀಲ ಸ್ತ್ರೀಯರು ನಿಮ್ಮ ಪಾಲಿಗೆ ಸಮ್ಮತರಾಗಿದ್ದಾರೆ - ನೀವು ಅವರಿಗೆ ಅವರ ಶುಲ್ಕ (ವಿವಾಹಧನ)ವನ್ನು ಪಾವತಿಸಿದ ಬಳಿಕ. ನೀವು (ಅವರ ಜೊತೆ, ವಿವಾಹದ) ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವವರಾಗಿರಬೇಕು, ಅನೈತಿಕ ವ್ಯವಹಾರಗಳಲ್ಲಿ ತೊಡಗಿರಬಾರದು ಮತ್ತು ನೀವು ಗುಪ್ತ ನಂಟುಗಳನ್ನು ಪೋಷಿಸಬಾರದು. ವಿಶ್ವಾಸವನ್ನು ಧಿಕ್ಕರಿಸಿದವನ ಕರ್ಮಗಳೆಲ್ಲಾ ವ್ಯರ್ಥವಾದವು. ಪರಲೋಕದಲ್ಲಿ ಅವನು, ಎಲ್ಲವನ್ನೂ ಕಳೆದುಕೊಂಡವರ ಸಾಲಲ್ಲಿರುವನು.
5:6
يَا أَيُّهَا الَّذِينَ آمَنُوا إِذَا قُمْتُمْ إِلَى الصَّلَاةِ فَاغْسِلُوا وُجُوهَكُمْ وَأَيْدِيَكُمْ إِلَى الْمَرَافِقِ وَامْسَحُوا بِرُءُوسِكُمْ وَأَرْجُلَكُمْ إِلَى الْكَعْبَيْنِ ۚ وَإِنْ كُنْتُمْ جُنُبًا فَاطَّهَّرُوا ۚ وَإِنْ كُنْتُمْ مَرْضَىٰ أَوْ عَلَىٰ سَفَرٍ أَوْ جَاءَ أَحَدٌ مِنْكُمْ مِنَ الْغَائِطِ أَوْ لَامَسْتُمُ النِّسَاءَ فَلَمْ تَجِدُوا مَاءً فَتَيَمَّمُوا صَعِيدًا طَيِّبًا فَامْسَحُوا بِوُجُوهِكُمْ وَأَيْدِيكُمْ مِنْهُ ۚ مَا يُرِيدُ اللَّهُ لِيَجْعَلَ عَلَيْكُمْ مِنْ حَرَجٍ وَلَٰكِنْ يُرِيدُ لِيُطَهِّرَكُمْ وَلِيُتِمَّ نِعْمَتَهُ عَلَيْكُمْ لَعَلَّكُمْ تَشْكُرُونَ
۞
ವಿಶ್ವಾಸಿಗಳೇ, ನೀವು ನಮಾಝ್ಗಾಗಿ ಹೊರಟಾಗ ನಿಮ್ಮ ಮುಖಗಳನ್ನು ಮತ್ತು ಮೊಣಗಂಟುಗಳ ತನಕ ನಿಮ್ಮ ಕೈಗಳನ್ನು ತೊಳೆದುಕೊಳ್ಳಿರಿ. ನಿಮ್ಮ ತಲೆಗಳನ್ನು ಸವರಿಕೊಳ್ಳಿರಿ ಮತ್ತು ನಿಮ್ಮ ಕಾಲುಗಳನ್ನು ಕೆಳಗಂಟುಗಳ ತನಕ ತೊಳೆದುಕೊಳ್ಳಿರಿ. ಇನ್ನು ನೀವು ‘ಜನಾಬತ್’ (ಸ್ನಾನ ಕಡ್ಡಾಯವಿರುವ) ಸ್ಥಿತಿಯಲ್ಲಿದ್ದರೆ, ಚೆನ್ನಾಗಿ ಶುದ್ಧೀಕರಿಸಿಕೊಳ್ಳಿರಿ. ಇನ್ನು ನೀವು ಅನಾರೋಗ್ಯ ಪೀಡಿತರಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲೊಬ್ಬರು ಶೌಚಾಲಯದಿಂದ ಬಂದಿದ್ದರೆ ಅಥವಾ ಸ್ತ್ರೀ ಸಂಗ ಮಾಡಿದ್ದರೆ ಮತ್ತು ಆ ವೇಳೆ ನಿಮಗೆ ನೀರು ಸಿಗದಿದ್ದರೆ, ಶುದ್ಧ ಮಣ್ಣಿನಿಂದ ‘ತಯಮ್ಮಮ್’ ಮಾಡಿರಿ (ಅಂದರೆ ಮಣ್ಣನ್ನು ಮುಟ್ಟಿ) ನಿಮ್ಮ ಮುಖಗಳನ್ನು ಮತ್ತು ಕೈಗಳನ್ನು ಸವರಿಕೊಳ್ಳಿರಿ. ಅಲ್ಲಾಹನು ನಿಮ್ಮನ್ನು ಯಾವುದೇ ಇಕ್ಕಟ್ಟಿಗೆ ಒಳಪಡಿಸಬಯಸುವುದಿಲ್ಲ. ಅವನಂತು, ನಿಮ್ಮನ್ನು ಶುದ್ಧಗೊಳಿಸಬಯಸುತ್ತಾನೆ ಮತ್ತು ನಿಮಗೆ ತನ್ನ ಕೊಡುಗೆಗಳನ್ನು ಪೂರ್ತಿಯಾಗಿ ನೀಡಬಯಸುತ್ತಾನೆ - ನೀವು ಕೃತಜ್ಞರಾಗಬೇಕೆಂದು.
5:7
وَاذْكُرُوا نِعْمَةَ اللَّهِ عَلَيْكُمْ وَمِيثَاقَهُ الَّذِي وَاثَقَكُمْ بِهِ إِذْ قُلْتُمْ سَمِعْنَا وَأَطَعْنَا ۖ وَاتَّقُوا اللَّهَ ۚ إِنَّ اللَّهَ عَلِيمٌ بِذَاتِ الصُّدُورِ
۞
ಅಲ್ಲಾಹನು ನಿಮಗೆ ನೀಡಿರುವ ಕೊಡುಗೆಯನ್ನು ಮತ್ತು ಅವನ ಜೊತೆ ನೀವು ಮಾಡಿರುವ ಕರಾರನ್ನು ನೆನಪಿಸಿಕೊಳ್ಳಿರಿ. ಆಗ ನೀವು, ‘‘ನಾವು ಕೇಳಿದೆವು ಮತ್ತು ಅನುಸರಿಸಿದೆವು’’ ಎಂದು ಹೇಳಿದ್ದಿರಿ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು ಮನಸ್ಸಿನ ವಿಚಾರಗಳನ್ನು ಬಲ್ಲವನಾಗಿದ್ದಾನೆ.
5:8
يَا أَيُّهَا الَّذِينَ آمَنُوا كُونُوا قَوَّامِينَ لِلَّهِ شُهَدَاءَ بِالْقِسْطِ ۖ وَلَا يَجْرِمَنَّكُمْ شَنَآنُ قَوْمٍ عَلَىٰ أَلَّا تَعْدِلُوا ۚ اعْدِلُوا هُوَ أَقْرَبُ لِلتَّقْوَىٰ ۖ وَاتَّقُوا اللَّهَ ۚ إِنَّ اللَّهَ خَبِيرٌ بِمَا تَعْمَلُونَ
۞
ವಿಶ್ವಾಸಿಗಳೇ, ನೀವು ಸದಾ ಅಲ್ಲಾಹನಿಗಾಗಿ ನ್ಯಾಯದ ಪರ ಸಾಕ್ಷಿ ನಿಲ್ಲುವವರಾಗಿರಿ. ಒಂದು ಜನಾಂಗದ ಮೇಲಿನ ಹಗೆತನ ಕೂಡಾ, ನ್ಯಾಯ ಪಾಲಿಸದೆ ಇರಲು ನಿಮ್ಮನ್ನು ಪ್ರಚೋದಿಸಬಾರದು. ನೀವು ಸದಾ ನ್ಯಾಯವನ್ನೇ ಪಾಲಿಸಿರಿ. ಅದುವೇ ಧರ್ಮನಿಷ್ಠೆಗೆ ಹೆಚ್ಚು ನಿಕಟ ಧೋರಣೆಯಾಗಿದೆ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು, ನೀವು ಮಾಡುತ್ತಿರುವ ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾನೆ.
5:9
وَعَدَ اللَّهُ الَّذِينَ آمَنُوا وَعَمِلُوا الصَّالِحَاتِ ۙ لَهُمْ مَغْفِرَةٌ وَأَجْرٌ عَظِيمٌ
۞
ವಿಶ್ವಾಸಿಗಳಾಗಿದ್ದು, ಸತ್ಕರ್ಮಗಳನ್ನು ಮಾಡುತ್ತಿರುವವರಿಗೆ ಕ್ಷಮೆ ಮತ್ತು ಭಾರೀ ಪ್ರತಿಫಲ ಇದೆ ಎಂದು ಅಲ್ಲಾಹನು ವಾಗ್ದಾನ ಮಾಡಿದ್ದಾನೆ.
5:10
وَالَّذِينَ كَفَرُوا وَكَذَّبُوا بِآيَاتِنَا أُولَٰئِكَ أَصْحَابُ الْجَحِيمِ
۞
ಇನ್ನು ಧಿಕ್ಕಾರಿಗಳು ಮತ್ತು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರು - ಅವರೇ ನರಕದವರಾಗಿದ್ದಾರೆ.
5:11
يَا أَيُّهَا الَّذِينَ آمَنُوا اذْكُرُوا نِعْمَتَ اللَّهِ عَلَيْكُمْ إِذْ هَمَّ قَوْمٌ أَنْ يَبْسُطُوا إِلَيْكُمْ أَيْدِيَهُمْ فَكَفَّ أَيْدِيَهُمْ عَنْكُمْ ۖ وَاتَّقُوا اللَّهَ ۚ وَعَلَى اللَّهِ فَلْيَتَوَكَّلِ الْمُؤْمِنُونَ
۞
ವಿಶ್ವಾಸಿಗಳೇ, ಅಲ್ಲಾಹನು ನಿಮಗೆ ದಯಪಾಲಿಸಿರುವ ಅನುಗ್ರಹಗಳನ್ನು ನೆನಪಿಸಿ ಕೊಳ್ಳಿರಿ - ಒಂದು ಜನಾಂಗವು ನಿಮ್ಮ ಮೇಲೆ ಆಕ್ರಮಣ ಮಾಡಲಿದ್ದಾಗ ಅವನು ಅವರ ಕೈಗಳನ್ನು ನಿಮ್ಮಿಂದ ತಡೆದಿಟ್ಟನು. ಸದಾ ಅಲ್ಲಾಹನಿಗೆ ಅಂಜಿರಿ. ವಿಶ್ವಾಸಿಗಳಂತು ಅಲ್ಲಾಹನಲ್ಲೇ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ.
5:12
۞ وَلَقَدْ أَخَذَ اللَّهُ مِيثَاقَ بَنِي إِسْرَائِيلَ وَبَعَثْنَا مِنْهُمُ اثْنَيْ عَشَرَ نَقِيبًا ۖ وَقَالَ اللَّهُ إِنِّي مَعَكُمْ ۖ لَئِنْ أَقَمْتُمُ الصَّلَاةَ وَآتَيْتُمُ الزَّكَاةَ وَآمَنْتُمْ بِرُسُلِي وَعَزَّرْتُمُوهُمْ وَأَقْرَضْتُمُ اللَّهَ قَرْضًا حَسَنًا لَأُكَفِّرَنَّ عَنْكُمْ سَيِّئَاتِكُمْ وَلَأُدْخِلَنَّكُمْ جَنَّاتٍ تَجْرِي مِنْ تَحْتِهَا الْأَنْهَارُ ۚ فَمَنْ كَفَرَ بَعْدَ ذَٰلِكَ مِنْكُمْ فَقَدْ ضَلَّ سَوَاءَ السَّبِيلِ
۞
ಅಲ್ಲಾಹನು ಇಸ್ರಾಈಲರ ಸಂತತಿಗಳಿಂದ ಕರಾರನ್ನು ಪಡೆದಿದ್ದನು. ನಾವು (ಅಲ್ಲಾಹ್) ಅವರ ಪೈಕಿ ಮಂದಿಯನ್ನು ನೇತಾರರಾಗಿ ನೇಮಿಸಿದ್ದೆವು. ಅವರೊಡನೆ ಅಲ್ಲಾಹನು ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ. ನೀವು ನಮಾಝ್ನ ಪಾಲನೆ ಮಾಡುತ್ತಲಿದ್ದರೆ, ಝಕಾತ್ ಅನ್ನು ಪಾವತಿಸುತ್ತಲಿದ್ದರೆ, ನನ್ನ ದೂತರಲ್ಲಿ ನಂಬಿಕೆ ಇರಿಸಿ, ಅವರಿಗೆ ನೆರವಾಗುತ್ತಲಿದ್ದರೆ ಮತ್ತು ನೀವು ಅಲ್ಲಾಹನಿಗೆ ಒಳಿತಿನ ಸಾಲವನ್ನು ನೀಡುತ್ತಲಿದ್ದರೆ ನಾನು ಖಂಡಿತ ನಿಮ್ಮಿಂದ ನಿಮ್ಮ ಪಾಪಗಳನ್ನು ನಿವಾರಿಸುವೆನು ಮತ್ತು ನಿಮ್ಮನ್ನು, ತಳದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಸೇರಿಸುವೆನು. ಇನ್ನು ಇದಾದ ಬಳಿಕ ನಿಮ್ಮ ಪೈಕಿ ಧಿಕ್ಕಾರಿಯಾದವನು ಖಂಡಿತವಾಗಿಯೂ ಸನ್ಮಾರ್ಗವನ್ನು ಕಳೆದುಕೊಂಡನು - (ಎಂದು ಅವರಿಗೆ ತಿಳಿಸಲಾಗಿತ್ತು.)
5:13
فَبِمَا نَقْضِهِمْ مِيثَاقَهُمْ لَعَنَّاهُمْ وَجَعَلْنَا قُلُوبَهُمْ قَاسِيَةً ۖ يُحَرِّفُونَ الْكَلِمَ عَنْ مَوَاضِعِهِ ۙ وَنَسُوا حَظًّا مِمَّا ذُكِّرُوا بِهِ ۚ وَلَا تَزَالُ تَطَّلِعُ عَلَىٰ خَائِنَةٍ مِنْهُمْ إِلَّا قَلِيلًا مِنْهُمْ ۖ فَاعْفُ عَنْهُمْ وَاصْفَحْ ۚ إِنَّ اللَّهَ يُحِبُّ الْمُحْسِنِينَ
۞
ಕೊನೆಗೆ, ಅವರು ತಮ್ಮ ಕರಾರನ್ನು ಮುರಿದುದರಿಂದ ನಾವು ಅವರನ್ನು ಶಪಿಸಿದೆವು ಮತ್ತು ಅವರ ಮನಸ್ಸುಗಳನ್ನು ಕಠೋರಗೊಳಿಸಿದೆವು. ಅವರೀಗ ಮಾತನ್ನು ಅದರ ಹಿನ್ನೆಲೆಯಿಂದ ಸರಿಸಿ ತಿರುಚಿ ಬಿಡುತ್ತಿದ್ದಾರೆ ಮತ್ತು ಅವರಿಗೆ ನೀಡಲಾಗಿದ್ದ ಬೋಧನೆಗಳ ದೊಡ್ಡ ಭಾಗವನ್ನು ಅವರು ಮರೆತು ಬಿಟ್ಟಿದ್ದಾರೆ. ಅವರಲ್ಲಿನ ಕೆಲವರ ಹೊರತು ಉಳಿದವರ ವಂಚನೆಯ ಸುದ್ದಿಗಳು ನಿಮಗೆ ಸದಾ ತಲುಪುತ್ತಲೇ ಇರುತ್ತವೆ. ಏನಿದ್ದರೂ ನೀವು ಅವರನ್ನು ಕ್ಷಮಿಸಿರಿ ಮತ್ತು (ಅವರ ತಪ್ಪುಗಳನ್ನು) ಕಡೆಗಣಿಸಿರಿ. ಖಂಡಿತವಾಗಿಯೂ ಅಲ್ಲಾಹನು ಉದಾರಿಗಳನ್ನು ಪ್ರೀತಿಸುತ್ತಾನೆ.
5:14
وَمِنَ الَّذِينَ قَالُوا إِنَّا نَصَارَىٰ أَخَذْنَا مِيثَاقَهُمْ فَنَسُوا حَظًّا مِمَّا ذُكِّرُوا بِهِ فَأَغْرَيْنَا بَيْنَهُمُ الْعَدَاوَةَ وَالْبَغْضَاءَ إِلَىٰ يَوْمِ الْقِيَامَةِ ۚ وَسَوْفَ يُنَبِّئُهُمُ اللَّهُ بِمَا كَانُوا يَصْنَعُونَ
۞
‘ನಾವು ನಸಾರಾಗಳು’ (ಕ್ರೈಸ್ತರು) ಎಂದು ಹೇಳಿಕೊಳ್ಳುವವರಲ್ಲಿ ಹಲವರಿದ್ದಾರೆ - ನಾವು ಅವರಿಂದ ಕರಾರನ್ನು ಪಡೆದುಕೊಂಡೆವು. ಆದರೆ ಅವರು ತಮಗೆ ನೀಡಲಾದ ಉಪದೇಶದ ಹೆಚ್ಚಿನ ಭಾಗವನ್ನು ಮರೆತು ಬಿಟ್ಟರು. ಕೊನೆಗೆ ನಾವು ಪುನರುತ್ಥಾನ ದಿನದ ತನಕ ಅವರ ನಡುವೆ ದ್ವೇಷ ಮತ್ತು ಹಗೆತನವನ್ನು ಬೆಳೆಸಿ ಬಿಟ್ಟೆವು. ಅವರು ರಚಿಸುತ್ತಿದ್ದುದು ಏನನ್ನು ಎಂಬುದನ್ನು ಅಲ್ಲಾಹನು ಶೀಘ್ರವೇ ಅವರಿಗೆ ತಿಳಿಸಲಿದ್ದಾನೆ.
5:15
يَا أَهْلَ الْكِتَابِ قَدْ جَاءَكُمْ رَسُولُنَا يُبَيِّنُ لَكُمْ كَثِيرًا مِمَّا كُنْتُمْ تُخْفُونَ مِنَ الْكِتَابِ وَيَعْفُو عَنْ كَثِيرٍ ۚ قَدْ جَاءَكُمْ مِنَ اللَّهِ نُورٌ وَكِتَابٌ مُبِينٌ
۞
ಗ್ರಂಥದವರೇ, (ಇದೀಗ) ನಿಮ್ಮ ಬಳಿಗೆ ನಮ್ಮ ದೂತರು ಬಂದಿದ್ದಾರೆ. ಗ್ರಂಥದಲ್ಲಿನ, ನೀವು ಅಡಗಿಸಿಟ್ಟಿದ್ದ ಹಲವು ವಿಷಯಗಳನ್ನು ಅವರು ನಿಮಗೆ ಸ್ಪಷ್ಟ ಪಡಿಸುತ್ತಿದ್ದಾರೆ ಮತ್ತು (ನಿಮ್ಮ ತಪ್ಪುಗಳಲ್ಲಿ) ಹೆಚ್ಚಿನವುಗಳನ್ನು ಅವರು ಕ್ಷಮಿಸುತ್ತಿದ್ದಾರೆ. ನಿಜಕ್ಕೂ ನಿಮ್ಮ ಬಳಿಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶ ಮತ್ತು ಬಹಳ ಸ್ಪಷ್ಟವಾದ ಒಂದು ಗ್ರಂಥವು ಬಂದಿದೆ.
5:16
يَهْدِي بِهِ اللَّهُ مَنِ اتَّبَعَ رِضْوَانَهُ سُبُلَ السَّلَامِ وَيُخْرِجُهُمْ مِنَ الظُّلُمَاتِ إِلَى النُّورِ بِإِذْنِهِ وَيَهْدِيهِمْ إِلَىٰ صِرَاطٍ مُسْتَقِيمٍ
۞
ಈ ಮೂಲಕ ಅಲ್ಲಾಹನು, ಅವನ ಮೆಚ್ಚುಗೆಯನ್ನು ಬಯಸುವವರಿಗೆ ಶಾಂತಿಯ ಮಾರ್ಗಗಳನ್ನು ತೋರಿಸುತ್ತಾನೆ ಮತ್ತು ತನ್ನ ಆದೇಶದ ಮೂಲಕ ಅವರನ್ನು ಕತ್ತಲಿಂದ ಹೊರತೆಗೆದು ಬೆಳಕಿನೆಡೆಗೆ ನಡೆಸುತ್ತಾನೆ ಮತ್ತು ಅವರಿಗೆ ನೇರ ಮಾರ್ಗವನ್ನು ತೋರಿಸಿಕೊಡುತ್ತಾನೆ.
5:17
لَقَدْ كَفَرَ الَّذِينَ قَالُوا إِنَّ اللَّهَ هُوَ الْمَسِيحُ ابْنُ مَرْيَمَ ۚ قُلْ فَمَنْ يَمْلِكُ مِنَ اللَّهِ شَيْئًا إِنْ أَرَادَ أَنْ يُهْلِكَ الْمَسِيحَ ابْنَ مَرْيَمَ وَأُمَّهُ وَمَنْ فِي الْأَرْضِ جَمِيعًا ۗ وَلِلَّهِ مُلْكُ السَّمَاوَاتِ وَالْأَرْضِ وَمَا بَيْنَهُمَا ۚ يَخْلُقُ مَا يَشَاءُ ۚ وَاللَّهُ عَلَىٰ كُلِّ شَيْءٍ قَدِيرٌ
۞
ಖಂಡಿತವಾಗಿಯೂ ಮರ್ಯಮರ ಪುತ್ರ ಮಸೀಹರೇ ಅಲ್ಲಾಹನೆಂದು ವಾದಿಸಿದವರು ಧಿಕ್ಕಾರಿಗಳಾಗಿ ಬಿಟ್ಟರು. ಹೇಳಿರಿ; ಒಂದು ವೇಳೆ ಅಲ್ಲಾಹನು ಮರ್ಯಮರ ಪುತ್ರ ಈಸಾರನ್ನೂ, ಅವರ ತಾಯಿಯನ್ನೂ, ಭೂಮಿಯಲ್ಲಿರುವ ಎಲ್ಲರನ್ನೂ ನಾಶ ಮಾಡ ಬಯಸಿದರೆ, ಅವನನ್ನು ಯಾರು ತಾನೇ ತಡೆಯಬಲ್ಲರು? ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಅಧಿಕಾರವು ಅಲ್ಲಾಹನಿಗೇ ಸೇರಿದೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
5:18
وَقَالَتِ الْيَهُودُ وَالنَّصَارَىٰ نَحْنُ أَبْنَاءُ اللَّهِ وَأَحِبَّاؤُهُ ۚ قُلْ فَلِمَ يُعَذِّبُكُمْ بِذُنُوبِكُمْ ۖ بَلْ أَنْتُمْ بَشَرٌ مِمَّنْ خَلَقَ ۚ يَغْفِرُ لِمَنْ يَشَاءُ وَيُعَذِّبُ مَنْ يَشَاءُ ۚ وَلِلَّهِ مُلْكُ السَّمَاوَاتِ وَالْأَرْضِ وَمَا بَيْنَهُمَا ۖ وَإِلَيْهِ الْمَصِيرُ
۞
ಯಹೂದಿಗಳು ಮತ್ತು ಕ್ರೈಸ್ತರು - ನಾವು ಅಲ್ಲಾಹನ ಪುತ್ರರು ಮತ್ತು ಅವನ ಪ್ರೀತಿ ಪಾತ್ರರು - ಎನ್ನುತ್ತಾರೆ. ಹೇಳಿರಿ; ಹಾಗಾದರೆ ನಿಮ್ಮ ಪಾಪಗಳಿಗಾಗಿ ಅವನು ನಿಮ್ಮನ್ನು ಶಿಕ್ಷಿಸುವುದೇಕೆ? ನಿಜವಾಗಿ ನೀವು, ಅವನು (ಅಲ್ಲಾಹನು) ಸೃಷ್ಟಿಸಿರುವ ಮಾನವರಾಗಿರುವಿರಿ. ಅವನಂತು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವಿನ ಎಲ್ಲವುಗಳ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಅಂತಿಮ ಮರಳಿಕೆ ಕೂಡಾ ಅವನ ಕಡೆಗೇ ಆಗಿರುತ್ತದೆ.
5:19
يَا أَهْلَ الْكِتَابِ قَدْ جَاءَكُمْ رَسُولُنَا يُبَيِّنُ لَكُمْ عَلَىٰ فَتْرَةٍ مِنَ الرُّسُلِ أَنْ تَقُولُوا مَا جَاءَنَا مِنْ بَشِيرٍ وَلَا نَذِيرٍ ۖ فَقَدْ جَاءَكُمْ بَشِيرٌ وَنَذِيرٌ ۗ وَاللَّهُ عَلَىٰ كُلِّ شَيْءٍ قَدِيرٌ
۞
ಗ್ರಂಥದವರೇ, ಇದೋ ನಿಮ್ಮ ಬಳಿಗೆ ನಮ್ಮ ದೂತರು ಬಂದು ಬಿಟ್ಟಿದ್ದಾರೆ ಮತ್ತು ನಿಮಗೆ ಸ್ಪಷ್ಟ ಬೋಧನೆ ನೀಡುತ್ತಿದ್ದಾರೆ. ದೇವದೂತರ ಆಗಮನ ಸರಣಿಯು (ಬಹುಕಾಲ) ಸ್ಥಗಿತಗೊಂಡ ಕಾರಣ ನೀವು, ಸುವಾರ್ತೆ ನೀಡುವ ಅಥವಾ ಎಚ್ಚರಿಕೆ ನೀಡುವ ಯಾರೂ ನಮ್ಮ ಬಳಿಗೆ ಬರಲಿಲ್ಲವೆಂದು ಹೇಳಬಾರದೆಂದು, ಇದೋ ನಿಮ್ಮ ಬಳಿಗೆ ಬಂದು ಬಿಟ್ಟಿದ್ದಾರೆ - ಸುವಾರ್ತೆ ನೀಡುವವರು ಮತ್ತು ಎಚ್ಚರಿಕೆ ನೀಡುವವರು. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
5:20
وَإِذْ قَالَ مُوسَىٰ لِقَوْمِهِ يَا قَوْمِ اذْكُرُوا نِعْمَةَ اللَّهِ عَلَيْكُمْ إِذْ جَعَلَ فِيكُمْ أَنْبِيَاءَ وَجَعَلَكُمْ مُلُوكًا وَآتَاكُمْ مَا لَمْ يُؤْتِ أَحَدًا مِنَ الْعَالَمِينَ
۞
(ನೆನಪಿಸಿಕೊಳ್ಳಿರಿ) ಮೂಸಾ, ತಮ್ಮ ಜನಾಂಗದವರಿಗೆ ಹೇಳಿದ್ದರು; ನನ್ನ ಜನಾಂಗದವರೇ, ನಿಮ್ಮ ಮೇಲಿರುವ ಅಲ್ಲಾಹನ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ. ಅವನು ನಿಮ್ಮ ನಡುವೆ ದೂತರುಗಳನ್ನು ನೇಮಿಸಿದನು, ನಿಮ್ಮನ್ನು ಅವನು ದೊರೆಗಳಾಗಿ ಮಾಡಿದನು ಮತ್ತು ಸರ್ವ ಲೋಕಗಳಲ್ಲಿ ಬೇರೆ ಯಾರಿಗೂ ನೀಡಿಲ್ಲದ್ದನ್ನು ನಿಮಗೆ ನೀಡಿದನು.
5:21
يَا قَوْمِ ادْخُلُوا الْأَرْضَ الْمُقَدَّسَةَ الَّتِي كَتَبَ اللَّهُ لَكُمْ وَلَا تَرْتَدُّوا عَلَىٰ أَدْبَارِكُمْ فَتَنْقَلِبُوا خَاسِرِينَ
۞
ನನ್ನ ಜನಾಂಗದವರೇ, ಅಲ್ಲಾಹನು ನಿಮಗೆಂದೇ ಬರೆದಿಟ್ಟಿರುವ ಪಾವನ ನೆಲವನ್ನು ಪ್ರವೇಶಿಸಿರಿ, ಬೆನ್ನು ತಿರುಗಿಸಿ ಹಿಂದಿರುಗಬೇಡಿ - ಅನ್ಯಥಾ ನೀವು ಸೋತವರಾಗಿ ಮರಳುವಿರಿ.
5:22
قَالُوا يَا مُوسَىٰ إِنَّ فِيهَا قَوْمًا جَبَّارِينَ وَإِنَّا لَنْ نَدْخُلَهَا حَتَّىٰ يَخْرُجُوا مِنْهَا فَإِنْ يَخْرُجُوا مِنْهَا فَإِنَّا دَاخِلُونَ
۞
ಅವರು ಹೇಳಿದರು; ಓ ಮೂಸಾ, ಅಲ್ಲಿ ತುಂಬಾ ಬಲಿಷ್ಠರ ಒಂದು ಜನಾಂಗವಿದೆ. ಅವರು ಅಲ್ಲಿಂದ ಹೊರಟು ಹೋಗುವ ತನಕ ನಾವು ಆ ನಾಡನ್ನು ಪ್ರವೇಶಿಸಲಾರೆವು. ಅವರು ಅಲ್ಲಿಂದ ಹೊರಟು ಹೋದರೆ ಮಾತ್ರ, ನಾವು ಖಂಡಿತ ಅಲ್ಲಿಗೆ ಪ್ರವೇಶಿಸುವೆವು.
5:23
قَالَ رَجُلَانِ مِنَ الَّذِينَ يَخَافُونَ أَنْعَمَ اللَّهُ عَلَيْهِمَا ادْخُلُوا عَلَيْهِمُ الْبَابَ فَإِذَا دَخَلْتُمُوهُ فَإِنَّكُمْ غَالِبُونَ ۚ وَعَلَى اللَّهِ فَتَوَكَّلُوا إِنْ كُنْتُمْ مُؤْمِنِينَ
۞
ಹೀಗೆ ಭೀತರಾಗಿದ್ದ ಆ ಜನರ ನಡುವೆ, ಅಲ್ಲಾಹನ ಅನುಗ್ರಹಗಳಿಗೆ ಪಾತ್ರರಾಗಿದ್ದ ಇಬ್ಬರು ಹೇಳಿದರು; ನೀವು ಅವರ ಮೇಲೆ, ಬಾಗಿಲಿಂದಲೇ ದಾಳಿ ಮಾಡಿರಿ. ನೀವು ಅದರೊಳಗೆ ಹೊಕ್ಕಾಗ ವಿಜಯಿಗಳಾಗುವಿರಿ. ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಡಿರಿ.
5:24
قَالُوا يَا مُوسَىٰ إِنَّا لَنْ نَدْخُلَهَا أَبَدًا مَا دَامُوا فِيهَا ۖ فَاذْهَبْ أَنْتَ وَرَبُّكَ فَقَاتِلَا إِنَّا هَاهُنَا قَاعِدُونَ
۞
ಅವರು ಹೇಳಿದರು; ಓ ಮೂಸಾ, ಅವರು (ಶತ್ರುಗಳು) ಅಲ್ಲಿರುವ ತನಕ ನಾವಂತೂ ಆ ಸ್ಥಳವನ್ನು ಪ್ರವೇಶಿಸಲಾರೆವು. ನೀವು ಮತ್ತು ನಿಮ್ಮ ದೇವರು ಹೋಗಿರಿ ಮತ್ತು ನೀವಿಬ್ಬರು ಹೋರಾಡಿರಿ. ನಾವು ಇಲ್ಲೇ ಕುಳಿತಿರುತ್ತೇವೆ.
5:25
قَالَ رَبِّ إِنِّي لَا أَمْلِكُ إِلَّا نَفْسِي وَأَخِي ۖ فَافْرُقْ بَيْنَنَا وَبَيْنَ الْقَوْمِ الْفَاسِقِينَ
۞
ಅವರು (ಮೂಸಾ) ಹೇಳಿದರು ; ನನ್ನೊಡೆಯಾ, ನನಗಂತೂ ನನ್ನ ಹಾಗೂ ನನ್ನ ಸಹೋದರನ ಹೊರತು ಬೇರೆ ಯಾರ ಮೇಲೂ ನಿಯಂತ್ರಣವಿಲ್ಲ. ನೀನು ನಮ್ಮನ್ನು ಹಾಗೂ ಈ ಅವಿಧೇಯ ಜನಾಂಗವನ್ನು ಪ್ರತ್ಯೇಕಿಸಿಬಿಡು.
5:26
قَالَ فَإِنَّهَا مُحَرَّمَةٌ عَلَيْهِمْ ۛ أَرْبَعِينَ سَنَةً ۛ يَتِيهُونَ فِي الْأَرْضِ ۚ فَلَا تَأْسَ عَلَى الْقَوْمِ الْفَاسِقِينَ
۞
ಅವನು (ಅಲ್ಲಾಹನು) ಹೇಳಿದನು; ಈ ಭೂಭಾಗವು ನಲ್ವತ್ತು ವರ್ಷಗಳ ತನಕ ಇವರ ಪಾಲಿಗೆ ನಿಷಿದ್ಧವಾಗಿದೆ. ಆ ತನಕ ಅವರು ಭೂಮಿಯಲ್ಲಿ ಅಲೆಯುತ್ತಲೇ ಇರುವರು. ಅವಿಧೇಯ ಜನಾಂಗದ ಕುರಿತು ನೀವು ವಿಷಾದಿಸಬೇಡಿ.
5:27
۞ وَاتْلُ عَلَيْهِمْ نَبَأَ ابْنَيْ آدَمَ بِالْحَقِّ إِذْ قَرَّبَا قُرْبَانًا فَتُقُبِّلَ مِنْ أَحَدِهِمَا وَلَمْ يُتَقَبَّلْ مِنَ الْآخَرِ قَالَ لَأَقْتُلَنَّكَ ۖ قَالَ إِنَّمَا يَتَقَبَّلُ اللَّهُ مِنَ الْمُتَّقِينَ
۞
ನೀವು ಅವರಿಗೆ ಆದಮರ ಇಬ್ಬರು ಪುತ್ರರ ನೈಜ ಘಟನೆಯನ್ನು ತಿಳಿಸಿರಿ. ಅವರಿಬ್ಬರೂ ಬಲಿದಾನ ನೀಡಿದಾಗ, ಅವರ ಪೈಕಿ ಒಬ್ಬನ ಬಲಿದಾನವು ಸ್ವೀಕೃತವಾಯಿತು ಮತ್ತು ಇನ್ನೊಬ್ಬನದು ಸ್ವೀಕೃತವಾಗಲಿಲ್ಲ. ಅವನು - ‘‘ನಾನು ಖಂಡಿತ ನಿನ್ನನ್ನು ವಧಿಸುತ್ತೇನೆ’’ ಎಂದನು. ಅವನು (ಮೊದಲನೆಯವನು) ಉತ್ತರಿಸಿದನು; ‘‘ಅಲ್ಲಾಹನಂತು, (ಯಾವುದನ್ನೂ) ಧರ್ಮನಿಷ್ಠರಿಂದ ಮಾತ್ರ ಸ್ವೀಕರಿಸುತ್ತಾನೆ.’’
5:28
لَئِنْ بَسَطْتَ إِلَيَّ يَدَكَ لِتَقْتُلَنِي مَا أَنَا بِبَاسِطٍ يَدِيَ إِلَيْكَ لِأَقْتُلَكَ ۖ إِنِّي أَخَافُ اللَّهَ رَبَّ الْعَالَمِينَ
۞
‘‘ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ’’
5:29
إِنِّي أُرِيدُ أَنْ تَبُوءَ بِإِثْمِي وَإِثْمِكَ فَتَكُونَ مِنْ أَصْحَابِ النَّارِ ۚ وَذَٰلِكَ جَزَاءُ الظَّالِمِينَ
۞
‘‘ಖಂಡಿತವಾಗಿಯೂ ನೀನೀಗ ನನ್ನ ಪಾಪಗಳನ್ನೂ ನಿನ್ನ ಪಾಪಗಳನ್ನೂ ಹೊತ್ತು ನರಕವಾಸಿಗಳ ಸಾಲಿಗೆ ಸೇರಬೇಕೆಂದು ನಾನು ಬಯಸುತ್ತೇನೆ. ಅಕ್ರಮಿಗಳಿಗೆ ಇರುವುದು ಅದೇ ಪ್ರತಿಫಲ.’’
5:30
فَطَوَّعَتْ لَهُ نَفْسُهُ قَتْلَ أَخِيهِ فَقَتَلَهُ فَأَصْبَحَ مِنَ الْخَاسِرِينَ
۞
ಕೊನೆಗೆ ಅವನ ಚಿತ್ತವು ತನ್ನ ಸಹೋದರನ ಹತ್ಯೆಗೆ ಅವನನ್ನು ಸಿದ್ಧಗೊಳಿಸಿತು. ಅವನು ತನ್ನ ಸಹೋದರನನ್ನು ಕೊಂದು ಬಿಟ್ಟನು ಮತ್ತು ಎಲ್ಲವನ್ನೂ ಕಳೆದುಕೊಂಡವರ ಸಾಲಿಗೆ ಸೇರಿದನು.
5:31
فَبَعَثَ اللَّهُ غُرَابًا يَبْحَثُ فِي الْأَرْضِ لِيُرِيَهُ كَيْفَ يُوَارِي سَوْءَةَ أَخِيهِ ۚ قَالَ يَا وَيْلَتَا أَعَجَزْتُ أَنْ أَكُونَ مِثْلَ هَٰذَا الْغُرَابِ فَأُوَارِيَ سَوْءَةَ أَخِي ۖ فَأَصْبَحَ مِنَ النَّادِمِينَ
۞
ಆ ಬಳಿಕ ಅಲ್ಲಾಹನು (ಅವನೆಡೆಗೆ) ಒಂದು ಕಾಗೆಯನ್ನು ಕಳುಹಿಸಿದನು. ತನ್ನ ಸಹೋದರನ ಶವವನ್ನು ಹೇಗೆ ಅಡಗಿಸಬೇಕೆಂದು ಆತನಿಗೆ ತೋರಿಸಲು ಅದು ನೆಲವನ್ನು ಕೊರೆಯುತ್ತಿತ್ತು . ಆಗ ಅವನು ಹೇಳಿದನು; ‘‘ಅಯ್ಯೋ ನನ್ನ ಅವಸ್ಥೆ! ನನ್ನ ಸಹೋದರನ ಶವವನ್ನು ಅಡಗಿಸುವ ವಿಷಯದಲ್ಲಿ ಈ ಕಾಗೆಯಂತಾಗಲಿಕ್ಕೂ ನನ್ನಿಂದಾಗಲಿಲ್ಲ.’’ ಹೀಗೆ ಅವನು, ಪಶ್ಚಾತ್ತಾಪ ಪಡುವವರ ಸಾಲಿಗೆ ಸೇರಿದನು.
5:32
مِنْ أَجْلِ ذَٰلِكَ كَتَبْنَا عَلَىٰ بَنِي إِسْرَائِيلَ أَنَّهُ مَنْ قَتَلَ نَفْسًا بِغَيْرِ نَفْسٍ أَوْ فَسَادٍ فِي الْأَرْضِ فَكَأَنَّمَا قَتَلَ النَّاسَ جَمِيعًا وَمَنْ أَحْيَاهَا فَكَأَنَّمَا أَحْيَا النَّاسَ جَمِيعًا ۚ وَلَقَدْ جَاءَتْهُمْ رُسُلُنَا بِالْبَيِّنَاتِ ثُمَّ إِنَّ كَثِيرًا مِنْهُمْ بَعْدَ ذَٰلِكَ فِي الْأَرْضِ لَمُسْرِفُونَ
۞
ಇದೇ ಕಾರಣದಿಂದ ನಾವು ಇಸ್ರಾಈಲ್ ಸಂತತಿಗಳಿಗೆ ಈ ರೀತಿ ವಿಧಿಸಿದೆವು; ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು - ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ. ಮುಂದೆ ಅವರ ಬಳಿಗೆ ಸ್ಪಷ್ಟ ಪುರಾವೆಗಳೊಂದಿಗೆ ನಮ್ಮ ಅನೇಕ ದೂತರು ಬಂದರು. ಇಷ್ಟಾಗಿಯೂ ಅವರಲ್ಲಿ ಹೆಚ್ಚಿನವರು ಭೂಮಿಯಲ್ಲಿ ಅತಿರೇಕ ಎಸಗುವವರಾಗಿದ್ದಾರೆ.
5:33
إِنَّمَا جَزَاءُ الَّذِينَ يُحَارِبُونَ اللَّهَ وَرَسُولَهُ وَيَسْعَوْنَ فِي الْأَرْضِ فَسَادًا أَنْ يُقَتَّلُوا أَوْ يُصَلَّبُوا أَوْ تُقَطَّعَ أَيْدِيهِمْ وَأَرْجُلُهُمْ مِنْ خِلَافٍ أَوْ يُنْفَوْا مِنَ الْأَرْضِ ۚ ذَٰلِكَ لَهُمْ خِزْيٌ فِي الدُّنْيَا ۖ وَلَهُمْ فِي الْآخِرَةِ عَذَابٌ عَظِيمٌ
۞
ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬಲು ಹೆಣಗಾಡುವವರಿಗೆ ಇರುವ ಪ್ರತಿಫಲವೇನೆಂದರೆ, ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೇರಿಸಬೇಕು ಅಥವಾ ಅವರ ಕೈಗಳನ್ನು ಹಾಗೂ ಕಾಲುಗಳನ್ನು ವಿರುದ್ಧ ಕಡೆಗಳಲ್ಲಿ (ಉದಾ: ಬಲಗೈ ಮತ್ತು ಎಡಕಾಲು) ಕತ್ತರಿಸಬೇಕು ಅಥವಾ ಅವರನ್ನು ನಾಡಿನಿಂದ ಹೊರಗಟ್ಟಬೇಕು.* ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಇನ್ನು ಪರಲೋಕದಲ್ಲಂತೂ ಅವರಿಗಾಗಿ ಭಾರೀ ಹಿಂಸೆ ಕಾದಿದೆ.
5:34
إِلَّا الَّذِينَ تَابُوا مِنْ قَبْلِ أَنْ تَقْدِرُوا عَلَيْهِمْ ۖ فَاعْلَمُوا أَنَّ اللَّهَ غَفُورٌ رَحِيمٌ
۞
ನಿಮ್ಮ ನಿಯಂತ್ರಣಕ್ಕೆ ಬರುವ ಮುನ್ನವೇ ಪಶ್ಚಾತ್ತಾಪ ಪಟ್ಟವರು ಇದಕ್ಕೆ ಹೊರತಾಗಿದ್ದಾರೆ. ನಿಮಗೆ ತಿಳಿದಿರಲಿ! ಅಲ್ಲಾಹನು ತುಂಬಾ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
5:35
يَا أَيُّهَا الَّذِينَ آمَنُوا اتَّقُوا اللَّهَ وَابْتَغُوا إِلَيْهِ الْوَسِيلَةَ وَجَاهِدُوا فِي سَبِيلِهِ لَعَلَّكُمْ تُفْلِحُونَ
۞
ವಿಶ್ವಾಸಿಗಳೇ, ಸದಾ ಅಲ್ಲಾಹನ ಭಯ ಉಳ್ಳವರಾಗಿರಿ ಹಾಗೂ ಅವನಿಗೆ ಹತ್ತಿರವಾಗುವ ದಾರಿಯನ್ನು ಹುಡುಕುತ್ತಲಿರಿ ಮತ್ತು ಅವನ ಮಾರ್ಗದಲ್ಲಿ ಹೋರಾಡಿರಿ - ನೀವು ವಿಜಯಿಗಳಾಗಲು.
5:36
إِنَّ الَّذِينَ كَفَرُوا لَوْ أَنَّ لَهُمْ مَا فِي الْأَرْضِ جَمِيعًا وَمِثْلَهُ مَعَهُ لِيَفْتَدُوا بِهِ مِنْ عَذَابِ يَوْمِ الْقِيَامَةِ مَا تُقُبِّلَ مِنْهُمْ ۖ وَلَهُمْ عَذَابٌ أَلِيمٌ
۞
ಖಂಡಿತವಾಗಿಯೂ ಭೂಮಿಯಲ್ಲಿರುವ ಎಲ್ಲವೂ ಧಿಕ್ಕಾರಿಗಳ ಬಳಿ ಇದ್ದರೆ ಮಾತ್ರವಲ್ಲ, ಹೆಚ್ಚುವರಿಯಾಗಿ ಮತ್ತೆ ಅಷ್ಟೇ ಅವರ ಬಳಿ ಇದ್ದರೆ ಮತ್ತು ಅವರು ಅದೆಲ್ಲವನ್ನೂ ಪರಿಹಾರವಾಗಿ ಕೊಟ್ಟು ಪುನರುತ್ಥಾನ ದಿನದ ಶಿಕ್ಷೆಯಿಂದ ಪಾರಾಗಲು ಬಯಸಿದರೆ, ಅವರಿಂದ ಅದನ್ನು ಸ್ವೀಕರಿಸಲಾಗದು. ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.
5:37
يُرِيدُونَ أَنْ يَخْرُجُوا مِنَ النَّارِ وَمَا هُمْ بِخَارِجِينَ مِنْهَا ۖ وَلَهُمْ عَذَابٌ مُقِيمٌ
۞
ಅವರು ನರಕಾಗ್ನಿಯಿಂದ ಹೊರ ಹೋಗಲು ಹಂಬಲಿಸುವರು. ಆದರೆ ಅದರಿಂದ ಹೊರ ಹೋಗಲು ಅವರಿಗೆಂದೂ ಸಾಧ್ಯವಾಗದು. ಅವರಿಗಿರುವುದು - ಶಾಶ್ವತವಾದ ಯಾತನೆ.
5:38
وَالسَّارِقُ وَالسَّارِقَةُ فَاقْطَعُوا أَيْدِيَهُمَا جَزَاءً بِمَا كَسَبَا نَكَالًا مِنَ اللَّهِ ۗ وَاللَّهُ عَزِيزٌ حَكِيمٌ
۞
ಕಳವು ಮಾಡಿದ ಪುರುಷ ಮತ್ತು ಕಳವು ಮಾಡಿದ ಸ್ತ್ರೀ - ಅವರ ಕೈ ಕತ್ತರಿಸಿರಿ. ಇದು ಅವರದೇ ಗಳಿಕೆಯ ಪ್ರತಿಫಲ (ಮತ್ತು) ಅಲ್ಲಾಹನ ಕಡೆಯಿಂದ ಒಂದು ಪಾಠವಾಗಿದೆ. ಅಲ್ಲಾಹನಂತು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.
5:39
فَمَنْ تَابَ مِنْ بَعْدِ ظُلْمِهِ وَأَصْلَحَ فَإِنَّ اللَّهَ يَتُوبُ عَلَيْهِ ۗ إِنَّ اللَّهَ غَفُورٌ رَحِيمٌ
۞
ಯಾರು, ತಾನು ಅಕ್ರಮವೆಸಗಿದ ಬಳಿಕ ಪಶ್ಚಾತ್ತಾಪ ಪಟ್ಟು (ತನ್ನನ್ನು) ತಿದ್ದಿಕೊಳ್ಳುವನೋ ಅವನ ಪಶ್ಚಾತ್ತಾಪವನ್ನು ಖಂಡಿತವಾಗಿಯೂ ಅಲ್ಲಾಹನು ಸ್ವೀಕರಿಸುವನು. ನಿಸ್ಸಂದೇಹವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.
5:40
أَلَمْ تَعْلَمْ أَنَّ اللَّهَ لَهُ مُلْكُ السَّمَاوَاتِ وَالْأَرْضِ يُعَذِّبُ مَنْ يَشَاءُ وَيَغْفِرُ لِمَنْ يَشَاءُ ۗ وَاللَّهُ عَلَىٰ كُلِّ شَيْءٍ قَدِيرٌ
۞
ನಿಮಗೆ ತಿಳಿದಿಲ್ಲವೇ, ಆಕಾಶಗಳ ಮತ್ತು ಭೂಮಿಯ ಅಧಿಕಾರವೆಲ್ಲವೂ ಅಲ್ಲಾಹನಿಗೆ ಸೇರಿದೆ ಎಂದು? ಅವನು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ. ಅಲ್ಲಾಹನಂತು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.
5:41
۞ يَا أَيُّهَا الرَّسُولُ لَا يَحْزُنْكَ الَّذِينَ يُسَارِعُونَ فِي الْكُفْرِ مِنَ الَّذِينَ قَالُوا آمَنَّا بِأَفْوَاهِهِمْ وَلَمْ تُؤْمِنْ قُلُوبُهُمْ ۛ وَمِنَ الَّذِينَ هَادُوا ۛ سَمَّاعُونَ لِلْكَذِبِ سَمَّاعُونَ لِقَوْمٍ آخَرِينَ لَمْ يَأْتُوكَ ۖ يُحَرِّفُونَ الْكَلِمَ مِنْ بَعْدِ مَوَاضِعِهِ ۖ يَقُولُونَ إِنْ أُوتِيتُمْ هَٰذَا فَخُذُوهُ وَإِنْ لَمْ تُؤْتَوْهُ فَاحْذَرُوا ۚ وَمَنْ يُرِدِ اللَّهُ فِتْنَتَهُ فَلَنْ تَمْلِكَ لَهُ مِنَ اللَّهِ شَيْئًا ۚ أُولَٰئِكَ الَّذِينَ لَمْ يُرِدِ اللَّهُ أَنْ يُطَهِّرَ قُلُوبَهُمْ ۚ لَهُمْ فِي الدُّنْيَا خِزْيٌ ۖ وَلَهُمْ فِي الْآخِرَةِ عَذَابٌ عَظِيمٌ
۞
ದೂತರೇ, ನಿಮ್ಮನ್ನು ದುಃಖಕ್ಕೀಡು ಮಾಡಬಾರದು - ‘ನಾವು ನಂಬಿದೆವು’ ಎಂದು ತಮ್ಮ ಬಾಯಿಯಿಂದ ಹೇಳುತ್ತಾ ತಮ್ಮ ಮನಸ್ಸಿನಿಂದ ನಂಬಿಕೆ ಇಟ್ಟಿಲ್ಲದ ಜನರ ಪೈಕಿ, ಧಿಕ್ಕಾರದಲ್ಲಿ ಹುರುಪು ತೋರುವವರು ಮತ್ತು ಯಹೂದಿಗಳ ಪೈಕಿ ಮಿಥ್ಯದ ಪರವಾಗಿ (ಗುಟ್ಟನ್ನು) ಆಲಿಸುವವರು - ಅವರು ನಿಮ್ಮ ಬಳಿಗೆ ಬಂದಿಲ್ಲದ ಇನ್ನೊಂದು ಪಂಗಡದ ಪರವಾಗಿ (ಗುಟ್ಟನ್ನು) ಆಲಿಸುತ್ತಿದ್ದಾರೆ (ಬೇಹುಗಾರಿಕೆ ನಡೆಸುತ್ತಿದ್ದಾರೆ). ಅವರು ಮಾತನ್ನು ಅದರ ಹಿನ್ನೆಲೆಯಿಂದ ಸರಿಸಿ ವಿಕೃತಗೊಳಿಸುತ್ತಾರೆ. ಅವರು (ಜನರೊಡನೆ) ನಿಮಗೆ ಇಂತಹದನ್ನು ನೀಡಲಾದರೆ ಸ್ವೀಕರಿಸಿರಿ ಮತ್ತು ಅದನ್ನು ನಿಮಗೆ ನೀಡದಿದ್ದರೆ ನೀವು ದೂರವಿರಿ ಎಂದು ಹೇಳುತ್ತಾರೆ. ನಿಜವಾಗಿ ಅಲ್ಲಾಹನು ಯಾರನ್ನು ಪರೀಕ್ಷಿಸಬಯಸುತ್ತಾನೋ ಅವರ ವಿಷಯದಲ್ಲಿ ಅಲ್ಲಾಹನಿಗೆದುರಾಗಿ ನಿಮಗೆ ಯಾವ ಅಧಿಕಾರವೂ ಇರುವುದಿಲ್ಲ. ಅವರು ಎಂಥವರೆಂದರೆ, ಅಲ್ಲಾಹನು ಅವರ ಮನಸ್ಸುಗಳನ್ನು ನಿರ್ಮಲ ಗೊಳಿಸಬಯಸುವುದಿಲ್ಲ. ಅವರಿಗೆ ಈ ಲೋಕದಲ್ಲೇ ಅಪಮಾನ ಕಾದಿದೆ ಮತ್ತು ಪರಲೋಕದಲ್ಲಂತೂ ಅವರಿಗೆ ಘೋರ ಯಾತನೆ ಇದೆ.
5:42
سَمَّاعُونَ لِلْكَذِبِ أَكَّالُونَ لِلسُّحْتِ ۚ فَإِنْ جَاءُوكَ فَاحْكُمْ بَيْنَهُمْ أَوْ أَعْرِضْ عَنْهُمْ ۖ وَإِنْ تُعْرِضْ عَنْهُمْ فَلَنْ يَضُرُّوكَ شَيْئًا ۖ وَإِنْ حَكَمْتَ فَاحْكُمْ بَيْنَهُمْ بِالْقِسْطِ ۚ إِنَّ اللَّهَ يُحِبُّ الْمُقْسِطِينَ
۞
ಅವರು ಮಿಥ್ಯದ ಪರವಾಗಿ ಬೇಹುಗಾರಿಕೆ ನಡೆಸುವವರು ಮತ್ತು ಅಕ್ರಮ ಸಂಪಾದನೆಯನ್ನೇ ತಿನ್ನುವವರಾಗಿದ್ದಾರೆ. ಅವರು ನಿಮ್ಮ ಬಳಿಗೆ ಬಂದರೆ ನೀವು ಅವರ ನಡುವೆ ತೀರ್ಮಾನ ಮಾಡಿರಿ ಅಥವಾ ಅವರನ್ನು ಕಡೆಗಣಿಸಿ ಬಿಡಿರಿ. ನೀವು ಅವರನ್ನು ಕಡೆಗಣಿಸಿ ಬಿಟ್ಟರೂ ಅವರು ನಿಮಗೆ ಯಾವ ಹಾನಿಯನ್ನೂ ಮಾಡಲಾರರು. ಇನ್ನು ನೀವು ತೀರ್ಮಾನ ಮಾಡುವುದಾದಲ್ಲಿ ಅವರ ನಡುವೆ ನ್ಯಾಯೋಚಿತ ತೀರ್ಮಾನವನ್ನೇ ಮಾಡಿರಿ. ಖಂಡಿತವಾಗಿಯೂ ಅಲ್ಲಾಹನು ನ್ಯಾಯ ಪಾಲಿಸುವವರನ್ನು ಪ್ರೀತಿಸುತ್ತಾನೆ.
5:43
وَكَيْفَ يُحَكِّمُونَكَ وَعِنْدَهُمُ التَّوْرَاةُ فِيهَا حُكْمُ اللَّهِ ثُمَّ يَتَوَلَّوْنَ مِنْ بَعْدِ ذَٰلِكَ ۚ وَمَا أُولَٰئِكَ بِالْمُؤْمِنِينَ
۞
ಅವರ ಬಳಿ, ಅಲ್ಲಾಹನ ಆದೇಶವಿರುವ ತೌರಾತ್ ಗ್ರಂಥವಿರುವಾಗ ಅವರು ನಿಮ್ಮನ್ನು ತೀರ್ಪುಗಾರರಾಗಿ ಮಾಡುವುದಾದರೂ ಹೇಗೆ? ಆದರೆ ಆ ಬಳಿಕ ಅವರು ತಿರುಗಿ ನಿಲ್ಲುತ್ತಾರೆ - ಇನ್ನು ಅವರು ನಂಬುವವರಂತೂ ಅಲ್ಲ.
5:44
إِنَّا أَنْزَلْنَا التَّوْرَاةَ فِيهَا هُدًى وَنُورٌ ۚ يَحْكُمُ بِهَا النَّبِيُّونَ الَّذِينَ أَسْلَمُوا لِلَّذِينَ هَادُوا وَالرَّبَّانِيُّونَ وَالْأَحْبَارُ بِمَا اسْتُحْفِظُوا مِنْ كِتَابِ اللَّهِ وَكَانُوا عَلَيْهِ شُهَدَاءَ ۚ فَلَا تَخْشَوُا النَّاسَ وَاخْشَوْنِ وَلَا تَشْتَرُوا بِآيَاتِي ثَمَنًا قَلِيلًا ۚ وَمَنْ لَمْ يَحْكُمْ بِمَا أَنْزَلَ اللَّهُ فَأُولَٰئِكَ هُمُ الْكَافِرُونَ
۞
ಖಂಡಿತವಾಗಿಯೂ ತೌರಾತ್ಅನ್ನು ನಾವೇ ಇಳಿಸಿದೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ನಮ್ಮ ಆಜ್ಞಾಪಾಲಕರಾಗಿದ್ದ ದೇವದೂತರುಗಳು ಅದರ (ತೌರಾತ್ನ) ಮೂಲಕವೇ ಯಹೂದಿಗಳಿಗೆ ಆದೇಶಗಳನ್ನು ನೀಡುತ್ತಿದ್ದರು. (ಅವರಲ್ಲಿನ) ದೇವಭಕ್ತರು ಮತ್ತು ವಿದ್ವಾಂಸರು ಕೂಡ ಹಾಗೆಯೇ ಮಾಡುತ್ತಿದ್ದರು. ಏಕೆಂದರೆ ಅವರನ್ನು ಅಲ್ಲಾಹನ ಗ್ರಂಥದ ರಕ್ಷಕರಾಗಿ ಮಾಡಲಾಗಿತ್ತು ಮತ್ತು ಅವರು ಅದರ ಪರ ಸಾಕ್ಷಿಗಳಾಗಿದ್ದರು. ನೀವು ಜನರಿಗೆ ಅಂಜಬೇಡಿ. ನನಗೆ ಮಾತ್ರ ಅಂಜಿರಿ. ಹಾಗೆಯೇ ನೀವು ನನ್ನ ವಚನಗಳನ್ನು ಸಣ್ಣ ಬೆಲೆಗೆ ಮಾರಬೇಡಿ. ಅಲ್ಲಾಹನು ಇಳಿಸಿ ಕೊಟ್ಟಿರುವುದರ (ಅವನ ನಿಯಮದ) ಪ್ರಕಾರ ತೀರ್ಪು ನೀಡದವರು ಧಿಕ್ಕಾರಿಗಳಾಗಿರುತ್ತಾರೆ.
5:45
وَكَتَبْنَا عَلَيْهِمْ فِيهَا أَنَّ النَّفْسَ بِالنَّفْسِ وَالْعَيْنَ بِالْعَيْنِ وَالْأَنْفَ بِالْأَنْفِ وَالْأُذُنَ بِالْأُذُنِ وَالسِّنَّ بِالسِّنِّ وَالْجُرُوحَ قِصَاصٌ ۚ فَمَنْ تَصَدَّقَ بِهِ فَهُوَ كَفَّارَةٌ لَهُ ۚ وَمَنْ لَمْ يَحْكُمْ بِمَا أَنْزَلَ اللَّهُ فَأُولَٰئِكَ هُمُ الظَّالِمُونَ
۞
ಅದರಲ್ಲಿ (ತೌರಾತ್ನಲ್ಲಿ) ನಾವು ಅವರಿಗೆ - ಜೀವಕ್ಕೆ ಜೀವ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ ಮತ್ತು ಹಲ್ಲಿಗೆ ಹಲ್ಲು ಪರಿಹಾರವೆಂದು ಮತ್ತು ಗಾಯಗಳಿಗೂ ಪರಿಹಾರವಿದೆ ಎಂದು, ಹಾಗೆಯೇ ಪ್ರತಿಕ್ರಮದ ಹಕ್ಕನ್ನು ಕ್ಷಮಿಸಿ ಬಿಟ್ಟವನಿಗೆ ಅದಕ್ಕಾಗಿ ಪರಿಹಾರ ಧನ ಉಂಟೆಂದು ವಿಧಿಸಿದ್ದೆವು. ಇನ್ನು ಅಲ್ಲಾಹನು ಇಳಿಸಿ ಕೊಟ್ಟಿರುವುದರ (ಅವನ ನಿಯಮದ) ಪ್ರಕಾರ ತೀರ್ಪು ನೀಡದವರು ಅಕ್ರಮಿಗಳಾಗಿರುತ್ತಾರೆ.
5:46
وَقَفَّيْنَا عَلَىٰ آثَارِهِمْ بِعِيسَى ابْنِ مَرْيَمَ مُصَدِّقًا لِمَا بَيْنَ يَدَيْهِ مِنَ التَّوْرَاةِ ۖ وَآتَيْنَاهُ الْإِنْجِيلَ فِيهِ هُدًى وَنُورٌ وَمُصَدِّقًا لِمَا بَيْنَ يَدَيْهِ مِنَ التَّوْرَاةِ وَهُدًى وَمَوْعِظَةً لِلْمُتَّقِينَ
۞
ಅವರ (ಗತಕಾಲದ ದೂತರುಗಳ) ಹೆಜ್ಜೆ ಗುರುತುಗಳ ಮೇಲೆ ನಾವು ಮರ್ಯಮರ ಪುತ್ರ ಈಸಾರನ್ನು ಕಳಿಸಿದೆವು - ತೌರಾತ್ನ ಪೈಕಿ ಅವರ (ಯಹೂದಿಗಳ) ಬಳಿ ಉಳಿದಿದ್ದ ಭಾಗವನ್ನು ದೃಢೀಕರಿಸುವವರಾಗಿ. ಹಾಗೆಯೇ ನಾವು ಅವರಿಗೆ (ಈಸಾರಿಗೆ) ಇಂಜೀಲ್ ಅನ್ನು ನೀಡಿದೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. ಅದು ತೌರಾತ್ನ ಪೈಕಿ ಅವರ ಬಳಿ ಉಳಿದಿರುವ ಭಾಗವನ್ನು ಸಮರ್ಥಿಸುತ್ತದೆ ಮತ್ತು ಅದು ದೇವಭಕ್ತರ ಪಾಲಿಗೆ ಮಾರ್ಗದರ್ಶಿ ಹಾಗೂ ಉಪದೇಶವಾಗಿದೆ.
5:47
وَلْيَحْكُمْ أَهْلُ الْإِنْجِيلِ بِمَا أَنْزَلَ اللَّهُ فِيهِ ۚ وَمَنْ لَمْ يَحْكُمْ بِمَا أَنْزَلَ اللَّهُ فَأُولَٰئِكَ هُمُ الْفَاسِقُونَ
۞
ಇಂಜೀಲ್ ಗ್ರಂಥದವರು, ಅಲ್ಲಾಹನು ಅದರಲ್ಲಿ ಇಳಿಸಿಕೊಟ್ಟಿರುವ (ನಿಯಮ) ಪ್ರಕಾರ ತೀರ್ಪು ನೀಡಲಿ. ಅಲ್ಲಾಹನು ಇಳಿಸಿಕೊಟ್ಟಿರುವ ನಿಯಮದಂತೆ ತೀರ್ಪು ನೀಡದವರು ಅವಿಧೇಯರಾಗಿದ್ದಾರೆ.
5:48
وَأَنْزَلْنَا إِلَيْكَ الْكِتَابَ بِالْحَقِّ مُصَدِّقًا لِمَا بَيْنَ يَدَيْهِ مِنَ الْكِتَابِ وَمُهَيْمِنًا عَلَيْهِ ۖ فَاحْكُمْ بَيْنَهُمْ بِمَا أَنْزَلَ اللَّهُ ۖ وَلَا تَتَّبِعْ أَهْوَاءَهُمْ عَمَّا جَاءَكَ مِنَ الْحَقِّ ۚ لِكُلٍّ جَعَلْنَا مِنْكُمْ شِرْعَةً وَمِنْهَاجًا ۚ وَلَوْ شَاءَ اللَّهُ لَجَعَلَكُمْ أُمَّةً وَاحِدَةً وَلَٰكِنْ لِيَبْلُوَكُمْ فِي مَا آتَاكُمْ ۖ فَاسْتَبِقُوا الْخَيْرَاتِ ۚ إِلَى اللَّهِ مَرْجِعُكُمْ جَمِيعًا فَيُنَبِّئُكُمْ بِمَا كُنْتُمْ فِيهِ تَخْتَلِفُونَ
۞
(ದೂತರೇ,) ನಾವೀಗ ನಿಮಗೆ ಸತ್ಯವಿರುವ ಗ್ರಂಥವನ್ನು ಇಳಿಸಿ ಕೊಟ್ಟಿರುವೆವು. ಇದು (ಗತಕಾಲದ) ಗ್ರಂಥದ ಪೈಕಿ ಜನರ ಬಳಿ ಉಳಿದಿರುವುದನ್ನು ಸಮರ್ಥಿಸುವ ಮತ್ತು ಅದನ್ನು ಕಾಪಾಡುವ ಗ್ರಂಥವಾಗಿದೆ. ನೀವಿನ್ನು ಅಲ್ಲಾಹನು ಇಳಿಸಿರುವ ನಿಯಮ ಪ್ರಕಾರವೇ ಅವರ ನಡುವೆ ತೀರ್ಪು ನೀಡಿರಿ. ನಿಮ್ಮ ಬಳಿಗೆ ಸತ್ಯವು ಬಂದಿರುವಾಗ, ನೀವು ಅವರ ಅಪೇಕ್ಷೆಗಳನ್ನು ಅನುಸರಿಸಬೇಡಿ. ನಾವು ನಿಮ್ಮ ಪೈಕಿ ಪ್ರತಿಯೊಬ್ಬರಿಗೂ (ಪ್ರತಿಯೊಂದು ಸಮುದಾಯಕ್ಕೂ) ನಿರ್ದಿಷ್ಟ ನಿಯಮ ಹಾಗೂ ದಾರಿಯೊಂದನ್ನು ನಿಗದಿ ಪಡಿಸಿದ್ದೇವೆ. ಅಲ್ಲಾಹನು ಬಯಸಿದ್ದರೆ ನಿಮ್ಮೆಲ್ಲರನ್ನು ಒಂದೇ ಸಮುದಾಯವಾಗಿಸುತ್ತಿದ್ದನು. ಆದರೆ ಅವನು, ನಿಮಗೆ ಏನನ್ನು ನೀಡಿರುವನೋ ಅದರ ಮೂಲಕವೇ ನಿಮ್ಮನ್ನು ಪರೀಕ್ಷಿಸಬಯಸುತ್ತಾನೆ. ನೀವೀಗ ಒಳಿತಿನಲ್ಲಿ ಪರಸ್ಪರ ಸ್ಪರ್ಧಿಸಿರಿ. ಕೊನೆಗೆ ನೀವೆಲ್ಲರೂ ಅಲ್ಲಾಹನೆಡೆಗೇ ಮರಳಲಿಕ್ಕಿದೆ - ಆಗ ಅವನು, ನೀವು ಭಿನ್ನತೆ ತಾಳಿದ್ದ ವಿಷಯಗಳ ಕುರಿತು ನಿಮಗೆ ತಿಳಿಸುವನು.
5:49
وَأَنِ احْكُمْ بَيْنَهُمْ بِمَا أَنْزَلَ اللَّهُ وَلَا تَتَّبِعْ أَهْوَاءَهُمْ وَاحْذَرْهُمْ أَنْ يَفْتِنُوكَ عَنْ بَعْضِ مَا أَنْزَلَ اللَّهُ إِلَيْكَ ۖ فَإِنْ تَوَلَّوْا فَاعْلَمْ أَنَّمَا يُرِيدُ اللَّهُ أَنْ يُصِيبَهُمْ بِبَعْضِ ذُنُوبِهِمْ ۗ وَإِنَّ كَثِيرًا مِنَ النَّاسِ لَفَاسِقُونَ
۞
ನೀವಿನ್ನು ಅಲ್ಲಾಹನು ಇಳಿಸಿಕೊಟ್ಟಿರುವ ನಿಯಮಕ್ಕನುಸಾರವಾಗಿಯೇ ಅವರ ನಡುವೆ ತೀರ್ಪು ನೀಡಿರಿ ಮತ್ತು ಅವರ ಅಪೇಕ್ಷೆಗಳನ್ನು ಅನುಸರಿಸಬೇಡಿ. ಅಲ್ಲಾಹನು ನಿಮಗೆ ಇಳಿಸಿಕೊಟ್ಟಿರುವ ನಿಯಮದ ಯಾವುದೇ ಭಾಗದ ವಿಷಯದಲ್ಲಿ ಅವರು ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರ ವಹಿಸಿರಿ. ನಿಮಗೆ ತಿಳಿದಿರಲಿ; ಅಲ್ಲಾಹನು ಅವರ ಕೆಲವು ಪಾಪಗಳ ಕಾರಣ ಅವರನ್ನು ದಂಡಿಸ ಬಯಸುತ್ತಾನೆ. ನಿಜಕ್ಕೂ ಜನರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದಾರೆ.
5:50
أَفَحُكْمَ الْجَاهِلِيَّةِ يَبْغُونَ ۚ وَمَنْ أَحْسَنُ مِنَ اللَّهِ حُكْمًا لِقَوْمٍ يُوقِنُونَ
۞
ಅವರೇನು, ಅಜ್ಞಾನ ಕಾಲದ ನಿಯಮವನ್ನು ಅಪೇಕ್ಷಿಸುತ್ತಿದ್ದಾರೆಯೇ? ದೃಢ ವಿಶ್ವಾಸ ಉಳ್ಳವರ ಪಾಲಿಗೆ ಅಲ್ಲಾಹನ ನಿಯಮಕ್ಕಿಂತ ಉತ್ತಮ ನಿಯಮ ಬೇರಾವುದಿದೆ?
5:51
۞ يَا أَيُّهَا الَّذِينَ آمَنُوا لَا تَتَّخِذُوا الْيَهُودَ وَالنَّصَارَىٰ أَوْلِيَاءَ ۘ بَعْضُهُمْ أَوْلِيَاءُ بَعْضٍ ۚ وَمَنْ يَتَوَلَّهُمْ مِنْكُمْ فَإِنَّهُ مِنْهُمْ ۗ إِنَّ اللَّهَ لَا يَهْدِي الْقَوْمَ الظَّالِمِينَ
۞
ವಿಶ್ವಾಸಿಗಳೇ, ಯಹೂದಿಗಳು ಮತ್ತು ಕ್ರೈಸ್ತರನ್ನು ನೀವು ನಿಮ್ಮ ಪೋಷಕರಾಗಿ ನೆಚ್ಚಿಕೊಳ್ಳಬೇಡಿ. ಅವರು ಪರಸ್ಪರರ ಪಾಲಿಗೆ ಮಾತ್ರ ಪೋಷಕರಾಗಿರುತ್ತಾರೆ. ನಿಮ್ಮ ಪೈಕಿ, ಅವರನ್ನು ತಮ್ಮ ಪೋಷಕರಾಗಿ ನೆಚ್ಚಿಕೊಂಡವನು ಖಂಡಿತ ಅವರಲ್ಲೊಬ್ಬನಾಗಿ ಬಿಡುವನು. ಅಕ್ರಮಿಗಳಿಗಂತೂ ಅಲ್ಲಾಹನು ಖಂಡಿತ ಸರಿ ದಾರಿ ತೋರಿಸುವುದಿಲ್ಲ.
5:52
فَتَرَى الَّذِينَ فِي قُلُوبِهِمْ مَرَضٌ يُسَارِعُونَ فِيهِمْ يَقُولُونَ نَخْشَىٰ أَنْ تُصِيبَنَا دَائِرَةٌ ۚ فَعَسَى اللَّهُ أَنْ يَأْتِيَ بِالْفَتْحِ أَوْ أَمْرٍ مِنْ عِنْدِهِ فَيُصْبِحُوا عَلَىٰ مَا أَسَرُّوا فِي أَنْفُسِهِمْ نَادِمِينَ
۞
ತಮ್ಮ ಮನಸ್ಸುಗಳಲ್ಲಿ ರೋಗವಿರುವವರು ಅವರೆಡೆಗೆ ಧಾವಿಸಿ ಹೋಗುವುದನ್ನು ನೀವು ಕಾಣುವಿರಿ. ‘‘ನಮ್ಮನ್ನು ಕಾಲಚಕ್ರವು ಬಾಧಿಸೀತೆಂಬ (ಆಪತ್ಕಾಲ ಬಂದೀತೆಂಬ) ಭಯ ನಮಗಿದೆ’’ ಎಂದು ಅವರು ಹೇಳುತ್ತಾರೆ. ನಿಜವಾಗಿ, ಅಲ್ಲಾಹನು (ಶೀಘ್ರದಲ್ಲೇ) ವಿಜಯವನ್ನು ತಂದು ಕೊಡುವ ಅಥವಾ ತನ್ನ ಕಡೆಯಿಂದ ಒಂದು ವಿಶೇಷ ಆದೇಶವನ್ನು ಕಳುಹಿಸುವ ಸಾಧ್ಯತೆ ಇದೆ. ಆಗ ಅವರು, ತಮ್ಮ ಮನಸ್ಸುಗಳೊಳಗೆ ಬಚ್ಚಿಟ್ಟಿರುವ ವಿಷಯಗಳ ಕುರಿತು ಪಶ್ಚಾತ್ತಾಪ ಪಡಬಹುದು.
5:53
وَيَقُولُ الَّذِينَ آمَنُوا أَهَٰؤُلَاءِ الَّذِينَ أَقْسَمُوا بِاللَّهِ جَهْدَ أَيْمَانِهِمْ ۙ إِنَّهُمْ لَمَعَكُمْ ۚ حَبِطَتْ أَعْمَالُهُمْ فَأَصْبَحُوا خَاسِرِينَ
۞
(ಅಂಥವರ ಕುರಿತು) ವಿಶ್ವಾಸಿಗಳು ‘‘ನಾವು ನಿಮ್ಮ ಜೊತೆಗಿದ್ದೇವೆಂದು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ಹೇಳುತ್ತಿದ್ದವರು ಇವರೇ?’’ ಎಂದು ಕೇಳುತ್ತಾರೆ. ನಿಜವಾಗಿ ಅವರ ಕರ್ಮಗಳೆಲ್ಲವೂ ವ್ಯರ್ಥವಾದವು ಮತ್ತು ಅವರು ಎಲ್ಲವನ್ನೂ ಕಳೆದು ಕೊಂಡವರಾದರು.
5:54
يَا أَيُّهَا الَّذِينَ آمَنُوا مَنْ يَرْتَدَّ مِنْكُمْ عَنْ دِينِهِ فَسَوْفَ يَأْتِي اللَّهُ بِقَوْمٍ يُحِبُّهُمْ وَيُحِبُّونَهُ أَذِلَّةٍ عَلَى الْمُؤْمِنِينَ أَعِزَّةٍ عَلَى الْكَافِرِينَ يُجَاهِدُونَ فِي سَبِيلِ اللَّهِ وَلَا يَخَافُونَ لَوْمَةَ لَائِمٍ ۚ ذَٰلِكَ فَضْلُ اللَّهِ يُؤْتِيهِ مَنْ يَشَاءُ ۚ وَاللَّهُ وَاسِعٌ عَلِيمٌ
۞
ವಿಶ್ವಾಸಿಗಳೇ, ನಿಮ್ಮಲ್ಲಿ ಯಾರಾದರೂ ತನ್ನ ಧರ್ಮದಿಂದ ವಿಮುಖನಾಗಿದ್ದರೆ (ಅವನಿಗೆ ತಿಳಿದಿರಲಿ;) ಅಲ್ಲಾಹನು ಬಹು ಬೇಗನೇ ಇನ್ನೊಂದು ಜನಾಂಗವನ್ನು ತರುವನು - ಅವನು ಅವರನ್ನು ಪ್ರೀತಿಸುತ್ತಿರುವನು ಮತ್ತು ಅವರು ಅವನನ್ನು ಪ್ರೀತಿಸುತ್ತಿರುವರು. ಅವರು ವಿಶ್ವಾಸಿಗಳ ಪಾಲಿಗೆ ಸೌಮ್ಯರಾಗಿರುವರು ಮತ್ತು ಧಿಕ್ಕಾರಿಗಳ ಪಾಲಿಗೆ ಕಠಿಣರಾಗಿರುವರು. ಅವರು ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಾಗಿರುವರು ಮತ್ತು ಮೂದಲಿಸುವವರ ಮೂದಲಿಕೆಗೆ ಅವರು ಅಂಜಲಾರರು. ಇದೆಲ್ಲಾ ಅಲ್ಲಾಹನ ಅನುಗ್ರಹ. ಅವನು ಇದನ್ನು ತಾನಿಚ್ಛಿಸಿದವರಿಗೆ ದಯಪಾಲಿಸುತ್ತಾನೆ. ಅಲ್ಲಾಹನಂತು ವಿಶಾಲ ಜ್ಞಾನ ಉಳ್ಳವನಾಗಿದ್ದಾನೆ.
5:55
إِنَّمَا وَلِيُّكُمُ اللَّهُ وَرَسُولُهُ وَالَّذِينَ آمَنُوا الَّذِينَ يُقِيمُونَ الصَّلَاةَ وَيُؤْتُونَ الزَّكَاةَ وَهُمْ رَاكِعُونَ
۞
ನಿಜವಾಗಿ ಅಲ್ಲಾಹ್, ಅವನ ದೂತರು ಮತ್ತು ವಿಶ್ವಾಸಿಗಳು ಮಾತ್ರ ನಿಮ್ಮ ಪೋಷಕರಾಗಿದ್ದಾರೆ. ಅವರು (ವಿಶ್ವಾಸಿಗಳು) ನಮಾಝ್ ಅನ್ನು ಸ್ಥಾಪಿಸುವವರು, ಝಕಾತ್ ಪಾವತಿಸುವವರು ಮತ್ತು (ಅಲ್ಲಾಹನೆದುರು) ಬಾಗುವವರಾಗಿರುತ್ತಾರೆ.
5:56
وَمَنْ يَتَوَلَّ اللَّهَ وَرَسُولَهُ وَالَّذِينَ آمَنُوا فَإِنَّ حِزْبَ اللَّهِ هُمُ الْغَالِبُونَ
۞
ಅಲ್ಲಾಹ್ ಮತ್ತು ಅವನ ದೂತರನ್ನು ಹಾಗೂ ವಿಶ್ವಾಸಿಗಳನ್ನು ಪೋಷಕರಾಗಿ ನೆಚ್ಚಿಕೊಂಡವರು (ತಿಳಿದಿರಲಿ;) - ಅಲ್ಲಾಹನ ಪಡೆಯವರೇ ಖಂಡಿತ ವಿಜಯಿಗಳಾಗುವರು.
5:57
يَا أَيُّهَا الَّذِينَ آمَنُوا لَا تَتَّخِذُوا الَّذِينَ اتَّخَذُوا دِينَكُمْ هُزُوًا وَلَعِبًا مِنَ الَّذِينَ أُوتُوا الْكِتَابَ مِنْ قَبْلِكُمْ وَالْكُفَّارَ أَوْلِيَاءَ ۚ وَاتَّقُوا اللَّهَ إِنْ كُنْتُمْ مُؤْمِنِينَ
۞
ವಿಶ್ವಾಸಿಗಳೇ, ನಿಮಗಿಂತ ಮುಂಚೆ ಗ್ರಂಥ ನೀಡಲಾಗಿದ್ದವರ ಪೈಕಿ, ನಿಮ್ಮ ಧರ್ಮವನ್ನು ಕೇವಲ ತಮಾಷೆಯಾಗಿ ಹಾಗೂ ಆಟವಾಗಿ ಕಾಣುವವರನ್ನು ಮತ್ತು ಧಿಕ್ಕಾರಿಗಳನ್ನು ನಿಮ್ಮ ಪೋಷಕರಾಗಿ ನೆಚ್ಚಿಕೊಳ್ಳಬೇಡಿ. ನೀವು ವಿಶ್ವಾಸಿಗಳಾಗಿದ್ದರೆ, ಅಲ್ಲಾಹನ ಭಯ ಉಳ್ಳವರಾಗಿರಿ.
5:58
وَإِذَا نَادَيْتُمْ إِلَى الصَّلَاةِ اتَّخَذُوهَا هُزُوًا وَلَعِبًا ۚ ذَٰلِكَ بِأَنَّهُمْ قَوْمٌ لَا يَعْقِلُونَ
۞
ನೀವು ನಮಾಝಿಗೆ ಕರೆ ನೀಡುವಾಗ ಅವರು ಅದನ್ನು ಒಂದು ತಮಾಷೆ ಹಾಗೂ ಆಟವೆಂಬಂತೆ ಕಾಣುತ್ತಾರೆ - ಏಕೆಂದರೆ ಅವರು ಅರ್ಥ ಮಾಡಿಕೊಳ್ಳುವ ಜನರಲ್ಲ.
5:59
قُلْ يَا أَهْلَ الْكِتَابِ هَلْ تَنْقِمُونَ مِنَّا إِلَّا أَنْ آمَنَّا بِاللَّهِ وَمَا أُنْزِلَ إِلَيْنَا وَمَا أُنْزِلَ مِنْ قَبْلُ وَأَنَّ أَكْثَرَكُمْ فَاسِقُونَ
۞
ನೀವು ಹೇಳಿರಿ: ಗ್ರಂಥದವರೇ, ನಾವು ಅಲ್ಲಾಹನಲ್ಲಿ, ಅವನು ನಮ್ಮೆಡೆಗೆ ಇಳಿಸಿಕೊಟ್ಟಿರುವ ಸಂದೇಶದಲ್ಲಿ ಮತ್ತು ಈ ಹಿಂದೆ ಇಳಿಸಲಾಗಿದ್ದ ಸಂದೇಶದಲ್ಲಿ ನಂಬಿಕೆ ಉಳ್ಳವರು ಎಂಬುದನ್ನು ಬಿಟ್ಟರೆ ನಿಮಗೆ ನಮ್ಮ ವಿರುದ್ಧ ಇರುವ ಹಗೆತನವಾದರೂ ಏನು? ನಿಜವಾಗಿ ಅವರಲ್ಲಿ ಹೆಚ್ಚಿನವರು ಅವಿಧೇಯರು.
5:60
قُلْ هَلْ أُنَبِّئُكُمْ بِشَرٍّ مِنْ ذَٰلِكَ مَثُوبَةً عِنْدَ اللَّهِ ۚ مَنْ لَعَنَهُ اللَّهُ وَغَضِبَ عَلَيْهِ وَجَعَلَ مِنْهُمُ الْقِرَدَةَ وَالْخَنَازِيرَ وَعَبَدَ الطَّاغُوتَ ۚ أُولَٰئِكَ شَرٌّ مَكَانًا وَأَضَلُّ عَنْ سَوَاءِ السَّبِيلِ
۞
ನೀವು ಹೇಳಿರಿ; ಅಲ್ಲಾಹನ ಬಳಿ ಇದಕ್ಕಿಂತಲೂ (ಅವಿಧೇಯರಿಗಿಂತಲೂ) ಕೆಟ್ಟ ನೆಲೆ ಯಾರದೆಂದು ನಾನು ನಿಮಗೆ ತಿಳಿಸಲೇ? ಅಲ್ಲಾಹನಿಂದ ನಿಂದಿತರಾದವರು, ಅವನ ಕೋಪಕ್ಕೆ ಪಾತ್ರರಾದವರು ಹಾಗೂ ಅವರ ಪೈಕಿ ಅವನು ಯಾರನ್ನು ಕೋತಿಗಳಾಗಿಯೂ, ಹಂದಿಗಳಾಗಿಯೂ ಮಾಡಿದನೋ ಅವರು ಮತ್ತು ಶೈತಾನನ ದಾಸರಾದವರು. ಅವರ ನೆಲೆಯೇ ತೀರಾ ನೀಚ ನೆಲೆಯಾಗಿರುವುದು ಮತ್ತು ಅವರೇ ನೇರ ಮಾರ್ಗದಿಂದ ತುಂಬಾ ದೂರ ಹೊರಟು ಹೋದವರಾಗಿದ್ದಾರೆ.
5:61
وَإِذَا جَاءُوكُمْ قَالُوا آمَنَّا وَقَدْ دَخَلُوا بِالْكُفْرِ وَهُمْ قَدْ خَرَجُوا بِهِ ۚ وَاللَّهُ أَعْلَمُ بِمَا كَانُوا يَكْتُمُونَ
۞
ಅವರು ನಿಮ್ಮ ಬಳಿ ಬಂದಾಗ, ನಾವು ನಂಬಿದೆವು ಎನ್ನುತ್ತಾರೆ. ನಿಜವಾಗಿ ಅವರು ಧಿಕ್ಕಾರದೊಂದಿಗೇ ಒಳ ಬಂದಿದ್ದರು ಮತ್ತು ಅದರೊಂದಿಗೇ ಮರಳಿ ಹೋದರು. ಅವರು ಬಚ್ಚಿಟ್ಟಿರುವ ಎಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು.
5:62
وَتَرَىٰ كَثِيرًا مِنْهُمْ يُسَارِعُونَ فِي الْإِثْمِ وَالْعُدْوَانِ وَأَكْلِهِمُ السُّحْتَ ۚ لَبِئْسَ مَا كَانُوا يَعْمَلُونَ
۞
ಅವರಲ್ಲಿ ಹೆಚ್ಚಿನವರು ಪಾಪ ಹಾಗೂ ದ್ರೋಹದ ಕೆಲಸಗಳಲ್ಲಿ ಉತ್ಸಾಹ ತೋರುವುದನ್ನು ಮತ್ತು ನಿಷಿದ್ಧ ವಸ್ತುಗಳನ್ನು ತಿನ್ನುವುದನ್ನು ನೀವು ಕಾಣುವಿರಿ. ಅವರು ಮಾಡುತ್ತಿರುವುದೆಲ್ಲವೂ ತೀರಾ ಕೆಟ್ಟದು.
5:63
لَوْلَا يَنْهَاهُمُ الرَّبَّانِيُّونَ وَالْأَحْبَارُ عَنْ قَوْلِهِمُ الْإِثْمَ وَأَكْلِهِمُ السُّحْتَ ۚ لَبِئْسَ مَا كَانُوا يَصْنَعُونَ
۞
(ಅವರ) ಧಾರ್ಮಿಕ ನೇತಾರರು ಮತ್ತು ವಿದ್ವಾಂಸರು ಅವರು ಪಾಪದ ಮಾತುಗಳನ್ನಾಡದಂತೆ ಮತ್ತು ನಿಷಿದ್ಧವಾಗಿರುವುದನ್ನು ತಿನ್ನದಂತೆ ಅವರನ್ನೇಕೆ ತಡೆಯುವುದಿಲ್ಲ? ಅವರು ರಚಿಸುತ್ತಿರುವುದೆಲ್ಲವೂ ತೀರಾ ಕೆಟ್ಟದು.
5:64
وَقَالَتِ الْيَهُودُ يَدُ اللَّهِ مَغْلُولَةٌ ۚ غُلَّتْ أَيْدِيهِمْ وَلُعِنُوا بِمَا قَالُوا ۘ بَلْ يَدَاهُ مَبْسُوطَتَانِ يُنْفِقُ كَيْفَ يَشَاءُ ۚ وَلَيَزِيدَنَّ كَثِيرًا مِنْهُمْ مَا أُنْزِلَ إِلَيْكَ مِنْ رَبِّكَ طُغْيَانًا وَكُفْرًا ۚ وَأَلْقَيْنَا بَيْنَهُمُ الْعَدَاوَةَ وَالْبَغْضَاءَ إِلَىٰ يَوْمِ الْقِيَامَةِ ۚ كُلَّمَا أَوْقَدُوا نَارًا لِلْحَرْبِ أَطْفَأَهَا اللَّهُ ۚ وَيَسْعَوْنَ فِي الْأَرْضِ فَسَادًا ۚ وَاللَّهُ لَا يُحِبُّ الْمُفْسِدِينَ
۞
ಅಲ್ಲಾಹನ ಕೈಗಳು ಕಟ್ಟಿವೆ ಎಂದು ಯಹೂದಿಗಳು ಹೇಳುತ್ತಾರೆ. ಕಟ್ಟಲ್ಪಡಲಿ ಅವರ ಕೈಗಳು. ಅವರ ಹೇಳಿಕೆಯ ಕಾರಣ ಅವರು ಶಪಿತರಾದರು. ನಿಜವಾಗಿ ಅಲ್ಲಾಹನ ಕೈಗಳು ಧಾರಾಳ ವಿಶಾಲವಾಗಿವೆ. ಅವನು ತಾನಿಚ್ಛಿಸಿದಂತೆ ಖರ್ಚು ಮಾಡುತ್ತಾನೆ. ನಿಮ್ಮ ಒಡೆಯನು ನಿಮಗೇನನ್ನು ಇಳಿಸಿ ಕೊಟ್ಟಿರುವನೋ ಅದರಿಂದಾಗಿ ಅವರಲ್ಲಿ ಹೆಚ್ಚಿನವರ ವಿದ್ರೋಹ ಮತ್ತು ಧಿಕ್ಕಾರವು ಮತ್ತಷ್ಟು ಹೆಚ್ಚಲಿದೆ. ನಾವು ಪುನರುತ್ಥಾನ ದಿನದವರೆಗೂ ಅವರ ನಡುವೆ ವೈರ ಮತ್ತು ವೈಷಮ್ಯವನ್ನು ಬಿತ್ತಿರುವೆವು. ಅವರು ಯುದ್ಧದ ಬೆಂಕಿಯನ್ನು ಭುಗಿಲೆಬ್ಬಿಸಿದಾಗ ಅಲ್ಲಾಹನು ಅದನ್ನು ತಣಿಸಿ ಬಿಡುತ್ತಾನೆ. ಆದರೆ ಅವರು ಭೂಮಿಯಲ್ಲಿ ಅಶಾಂತಿ ಹಬ್ಬಲು ಶ್ರಮಿಸುತ್ತಲೇ ಇರುತ್ತಾರೆ. ಅಲ್ಲಾಹನಂತು, ಅಶಾಂತಿ ಹಬ್ಬುವವರನ್ನು ಖಂಡಿತ ಮೆಚ್ಚುವುದಿಲ್ಲ.
5:65
وَلَوْ أَنَّ أَهْلَ الْكِتَابِ آمَنُوا وَاتَّقَوْا لَكَفَّرْنَا عَنْهُمْ سَيِّئَاتِهِمْ وَلَأَدْخَلْنَاهُمْ جَنَّاتِ النَّعِيمِ
۞
ಗ್ರಂಥದವರು ವಿಶ್ವಾಸಿಗಳಾಗಿ, ಧರ್ಮ ನಿಷ್ಠರಾಗಿ ಬಿಟ್ಟಿದ್ದರೆ ನಾವು ಅವರನ್ನು ಅವರ ಎಲ್ಲ ಪಾಪಗಳಿಂದ ಮುಕ್ತಗೊಳಿಸಿ ಬಿಡುತ್ತಿದ್ದೆವು ಮತ್ತು ಅನುಗ್ರಹಗಳೇ ತುಂಬಿರುವ ಸ್ವರ್ಗ ತೋಟಗಳೊಳಗೆ ಅವರನ್ನು ಸೇರಿಸುತ್ತಿದ್ದೆವು.
5:66
وَلَوْ أَنَّهُمْ أَقَامُوا التَّوْرَاةَ وَالْإِنْجِيلَ وَمَا أُنْزِلَ إِلَيْهِمْ مِنْ رَبِّهِمْ لَأَكَلُوا مِنْ فَوْقِهِمْ وَمِنْ تَحْتِ أَرْجُلِهِمْ ۚ مِنْهُمْ أُمَّةٌ مُقْتَصِدَةٌ ۖ وَكَثِيرٌ مِنْهُمْ سَاءَ مَا يَعْمَلُونَ
۞
ಒಂದು ವೇಳೆ ಅವರು ತೌರಾತ್ ಮತ್ತು ಇಂಜೀಲ್ಗಳನ್ನು ಹಾಗೂ (ಇದೀಗ) ಅವರಿಗೆ ಅವರೊಡೆಯನ ಕಡೆಯಿಂದ ಏನನ್ನು ಇಳಿಸಿಕೊಡಲಾಗಿದೆಯೋ ಅದನ್ನು (ಕುರ್ಆನನ್ನು) ಸ್ಥಾಪಿಸಿರುತ್ತಿದ್ದರೆ ಅವರ ಮೇಲಿಂದಲೂ ಅವರ ಕಾಲಡಿಯಿಂದಲೂ ಅವರಿಗೆ ಆಹಾರವು ಹರಿದು ಬರುತ್ತಿತ್ತು. ಅವರಲ್ಲಿ ಮಧ್ಯಮ ನಿಲುವಿನ ಒಂದು ಪಂಗಡವಿದೆ. ಆದರೆ ಅವರಲ್ಲಿ ಹೆಚ್ಚಿನವರು ಕೆಟ್ಟದ್ದನ್ನೇ ಮಾಡುವವರಾಗಿದ್ದಾರೆ.
5:67
۞ يَا أَيُّهَا الرَّسُولُ بَلِّغْ مَا أُنْزِلَ إِلَيْكَ مِنْ رَبِّكَ ۖ وَإِنْ لَمْ تَفْعَلْ فَمَا بَلَّغْتَ رِسَالَتَهُ ۚ وَاللَّهُ يَعْصِمُكَ مِنَ النَّاسِ ۗ إِنَّ اللَّهَ لَا يَهْدِي الْقَوْمَ الْكَافِرِينَ
۞
ದೂತರೇ, ನಿಮಗೆ ನಿಮ್ಮೊಡೆಯನ ಕಡೆಯಿಂದ ಏನನ್ನು ಇಳಿಸಿಕೊಡಲಾಗಿದೆಯೋ ಅದನ್ನು (ಜನರಿಗೆ) ತಲುಪಿಸಿರಿ. ನೀವು ಹಾಗೆ ಮಾಡದಿದ್ದರೆ, ನೀವು ಅವನ ಪ್ರತಿನಿಧಿತ್ವದ ಹೊಣೆಯನ್ನೇ ಈಡೇರಿಸಲಿಲ್ಲವೆಂದಾಗುವುದು. ಅಲ್ಲಾಹನು ನಿಮ್ಮನ್ನು ಜನರಿಂದ ರಕ್ಷಿಸುವನು. ಅಲ್ಲಾಹನು ಧಿಕ್ಕಾರಿಗಳಿಗೆ ಎಂದೂ ಸರಿದಾರಿಯನ್ನು ತೋರುವುದಿಲ್ಲ.
5:68
قُلْ يَا أَهْلَ الْكِتَابِ لَسْتُمْ عَلَىٰ شَيْءٍ حَتَّىٰ تُقِيمُوا التَّوْرَاةَ وَالْإِنْجِيلَ وَمَا أُنْزِلَ إِلَيْكُمْ مِنْ رَبِّكُمْ ۗ وَلَيَزِيدَنَّ كَثِيرًا مِنْهُمْ مَا أُنْزِلَ إِلَيْكَ مِنْ رَبِّكَ طُغْيَانًا وَكُفْرًا ۖ فَلَا تَأْسَ عَلَى الْقَوْمِ الْكَافِرِينَ
۞
ಹೇಳಿರಿ; ‘‘ಗ್ರಂಥದವರೇ, ನೀವು ತೌರಾತ್ ಅನ್ನು, ಇಂಜೀಲ್ ಅನ್ನು ಮತ್ತು ನಿಮ್ಮ ಒಡೆಯನು ನಿಮ್ಮೆಡೆಗೆ ಇಳಿಸಿಕೊಟ್ಟಿರುವುದನ್ನು ಸಂಸ್ಥಾಪಿಸುವ ತನಕ ನಿಮಗೆ ಯಾವ ನೆಲೆಯೂ ಇಲ್ಲ.’’ ನಿಜವಾಗಿ, ನಿಮ್ಮ ಒಡೆಯನ ಕಡೆಯಿಂದ ನಿಮ್ಮೆಡೆಗೆ ಇಳಿಸಿ ಕೊಡಲಾಗಿರುವ ಸಂದೇಶವು ಅವರಲ್ಲಿ (ಗ್ರಂಥದವರಲ್ಲಿ) ಹೆಚ್ಚಿನವರ ವಿದ್ರೋಹ ಮತ್ತು ಧಿಕ್ಕಾರವನ್ನು ಮತ್ತಷ್ಟು ಹೆಚ್ಚಿಸಿದೆ. ನೀವು ಧಿಕ್ಕಾರಿಗಳ ವಿಷಯದಲ್ಲಿ ಬೇಸರಿಸಬೇಡಿ.
5:69
إِنَّ الَّذِينَ آمَنُوا وَالَّذِينَ هَادُوا وَالصَّابِئُونَ وَالنَّصَارَىٰ مَنْ آمَنَ بِاللَّهِ وَالْيَوْمِ الْآخِرِ وَعَمِلَ صَالِحًا فَلَا خَوْفٌ عَلَيْهِمْ وَلَا هُمْ يَحْزَنُونَ
۞
ಖಂಡಿತವಾಗಿಯೂ ವಿಶ್ವಾಸಿಗಳು, ಯಹೂದಿಗಳು, ಸಬಯನರು ಮತ್ತು ಕ್ರೈಸ್ತರಲ್ಲಿ ಅಲ್ಲಾಹನ ಮೇಲೆ ಹಾಗೂ ಅಂತಿಮ ದಿನದ ಮೇಲೆ ನಂಬಿಕೆ ಉಳ್ಳವರು ಮತ್ತು ಸತ್ಕರ್ಮ ಮಾಡಿದವವರಿಗೆ ಯಾವ ಭಯವೂ ಇಲ್ಲ ಮತ್ತು ಅವರು ದುಃಖಿಸಲಾರರು.
5:70
لَقَدْ أَخَذْنَا مِيثَاقَ بَنِي إِسْرَائِيلَ وَأَرْسَلْنَا إِلَيْهِمْ رُسُلًا ۖ كُلَّمَا جَاءَهُمْ رَسُولٌ بِمَا لَا تَهْوَىٰ أَنْفُسُهُمْ فَرِيقًا كَذَّبُوا وَفَرِيقًا يَقْتُلُونَ
۞
ನಾವು ಇಸ್ರಾಈಲರ ಸಂತತಿಗಳಿಂದ ಸ್ಪಷ್ಟ ಕರಾರನ್ನು ಪಡೆದಿದ್ದೆವು ಮತ್ತು ನಾವು ಅವರೆಡೆಗೆ ದೂತರನ್ನು ಕಳುಹಿಸಿದೆವು. ಅವರ ಸ್ವೇಚ್ಛೆಗೆ ವಿರುದ್ಧವಾದ ಯಾವುದಾದರೂ ಆದೇಶದೊಂದಿಗೆ ದೂತರು ಅವರ ಬಳಿಗೆ ಬಂದಾಗಲೆಲ್ಲಾ ಅವರಲ್ಲಿ ಕೆಲವರು ಅವರನ್ನು (ದೂತರನ್ನು) ತಿರಸ್ಕರಿಸಿದರು ಮತ್ತು ಕೆಲವರು ಅವರನ್ನು ಕೊಂದು ಬಿಟ್ಟರು.
5:71
وَحَسِبُوا أَلَّا تَكُونَ فِتْنَةٌ فَعَمُوا وَصَمُّوا ثُمَّ تَابَ اللَّهُ عَلَيْهِمْ ثُمَّ عَمُوا وَصَمُّوا كَثِيرٌ مِنْهُمْ ۚ وَاللَّهُ بَصِيرٌ بِمَا يَعْمَلُونَ
۞
(ತಮಗೆ) ಯಾವುದೇ ಶಿಕ್ಷೆಯಾಗದೆಂದು ಅವರು ಭಾವಿಸಿದ್ದರು. ಮತ್ತು ಅವರು ಕುರುಡರೂ ಕಿವುಡರೂ ಆಗಿದ್ದರು. ಕೊನೆಗೆ ಅಲ್ಲಾಹನು ಅವರೆಡೆಗೆ ಒಲವು ತೋರಿದನು. ಆದರೂ ಅವರಲ್ಲಿ ಹೆಚ್ಚಿನವರು ಕುರುಡರು ಹಾಗೂ ಕಿವುಡರಾಗಿಯೇ ಇದ್ದರು. ಅಲ್ಲಾಹನಂತೂ ಅವರು ಮಾಡುವುದನ್ನೆಲ್ಲ ನೋಡುತ್ತಿರುವವನೇ ಆಗಿದ್ದಾನೆ.
5:72
لَقَدْ كَفَرَ الَّذِينَ قَالُوا إِنَّ اللَّهَ هُوَ الْمَسِيحُ ابْنُ مَرْيَمَ ۖ وَقَالَ الْمَسِيحُ يَا بَنِي إِسْرَائِيلَ اعْبُدُوا اللَّهَ رَبِّي وَرَبَّكُمْ ۖ إِنَّهُ مَنْ يُشْرِكْ بِاللَّهِ فَقَدْ حَرَّمَ اللَّهُ عَلَيْهِ الْجَنَّةَ وَمَأْوَاهُ النَّارُ ۖ وَمَا لِلظَّالِمِينَ مِنْ أَنْصَارٍ
۞
ಖಂಡಿತವಾಗಿಯೂ, ಅಲ್ಲಾಹನೇ ಮರ್ಯಮರ ಪುತ್ರ ಮಸೀಹನೆಂದು ಹೇಳಿದವರು ಧಿಕ್ಕಾರಿಗಳಾಗಿ ಬಿಟ್ಟರು. ನಿಜವಾಗಿ ಮಸೀಹರು (ಈಸಾ ಅ.) ಹೀಗೆ ಹೇಳಿದ್ದರು; ಇಸ್ರಾಈಲರ ಸಂತತಿಗಳೇ, ನನ್ನ ಒಡೆಯನೂ ನಿಮ್ಮ ಒಡೆಯನೂ ಆಗಿರುವ ಅಲ್ಲಾಹನನ್ನೇ ನೀವು ಆರಾಧಿಸಿರಿ. ಅಲ್ಲಾಹನ ಜೊತೆ ಯಾರನ್ನಾದರೂ ಸೇರಿಸುವವನ ಪಾಲಿಗೆ ಅಲ್ಲಾಹನು ಖಂಡಿತವಾಗಿಯೂ ಸ್ವರ್ಗವನ್ನು ನಿಷಿದ್ಧಗೊಳಿಸಿರುವನು ಮತ್ತು ನರಕವೇ ಅವನ ನೆಲೆಯಾಗಿರುವುದು. ಅಕ್ರಮಿಗಳ ಪಾಲಿಗೆ ಯಾರೂ ಸಹಾಯಕರಿಲ್ಲ.
5:73
لَقَدْ كَفَرَ الَّذِينَ قَالُوا إِنَّ اللَّهَ ثَالِثُ ثَلَاثَةٍ ۘ وَمَا مِنْ إِلَٰهٍ إِلَّا إِلَٰهٌ وَاحِدٌ ۚ وَإِنْ لَمْ يَنْتَهُوا عَمَّا يَقُولُونَ لَيَمَسَّنَّ الَّذِينَ كَفَرُوا مِنْهُمْ عَذَابٌ أَلِيمٌ
۞
ಅಲ್ಲಾಹನು ಮೂವರಲ್ಲಿ ಒಬ್ಬನು ಎಂದು ಹೇಳಿದವರು ಖಂಡಿತ ಧಿಕ್ಕಾರಿಗಳಾದರು. ನಿಜವಾಗಿ ಏಕೈಕ ಪೂಜಾರ್ಹನ ಹೊರತು ಬೇರಾರೂ ಪೂಜಾರ್ಹರಲ್ಲ. ಅವರು ಸದ್ಯ ತಾವು ಏನನ್ನು ಹೇಳುತ್ತಿರುವರೋ ಅದರಿಂದ ದೂರ ಉಳಿಯದಿದ್ದರೆ, ಅವರಲ್ಲಿನ ಧಿಕ್ಕಾರಿಗಳಿಗೆ ತುಂಬಾ ಕಠಿಣ ಶಿಕ್ಷೆ ಸಿಗಲಿದೆ.
5:74
أَفَلَا يَتُوبُونَ إِلَى اللَّهِ وَيَسْتَغْفِرُونَهُ ۚ وَاللَّهُ غَفُورٌ رَحِيمٌ
۞
ಅವರೇನು ಅಲ್ಲಾಹನ ಬಳಿ ಪಶ್ಚಾತ್ತಾಪ ಪಡುವುದಿಲ್ಲವೆ ಮತ್ತು ಅವನಲ್ಲಿ ಕ್ಷಮೆ ಯಾಚಿಸುವುದಿಲ್ಲವೆ? ಅಲ್ಲಾಹನಂತು ತುಂಬಾ ಕ್ಷಮಾಶೀಲ ಮತ್ತು ಕರುಣಾಮಯಿ ಆಗಿದ್ದಾನೆ.
5:75
مَا الْمَسِيحُ ابْنُ مَرْيَمَ إِلَّا رَسُولٌ قَدْ خَلَتْ مِنْ قَبْلِهِ الرُّسُلُ وَأُمُّهُ صِدِّيقَةٌ ۖ كَانَا يَأْكُلَانِ الطَّعَامَ ۗ انْظُرْ كَيْفَ نُبَيِّنُ لَهُمُ الْآيَاتِ ثُمَّ انْظُرْ أَنَّىٰ يُؤْفَكُونَ
۞
ಮರ್ಯಮರ ಪುತ್ರ ಮಸೀಹರು ಅಲ್ಲಾಹನ ದೂತರಲ್ಲದೆ ಬೇರೇನಲ್ಲ. ಅವರಿಗಿಂತ ಹಿಂದೆಯೂ ದೇವದೂತರಿದ್ದರು. ಅವರ ತಾಯಿ (ಮರ್ಯಮ್) ತುಂಬಾ ಸತ್ಯವಂತ ಮಹಿಳೆಯಾಗಿದ್ದರು. ಅವರಿಬ್ಬರೂ ಆಹಾರ ಸೇವಿಸುತ್ತಿದ್ದರು. ನಾವು ಯಾವ ರೀತಿಯಲ್ಲಿ ಅವರಿಗೆ ಪುರಾವೆಗಳನ್ನು ವಿವರಿಸಿಕೊಡುತ್ತಿದ್ದೇವೆಂಬುದನ್ನು ನೋಡಿರಿ ಮತ್ತು (ಇಷ್ಟಾಗಿಯೂ) ಅವರು ಎಲ್ಲೆಲ್ಲೋ ಅಲೆಯುತ್ತಿರುವುದನ್ನು ನೋಡಿರಿ.
5:76
قُلْ أَتَعْبُدُونَ مِنْ دُونِ اللَّهِ مَا لَا يَمْلِكُ لَكُمْ ضَرًّا وَلَا نَفْعًا ۚ وَاللَّهُ هُوَ السَّمِيعُ الْعَلِيمُ
۞
ಹೇಳಿರಿ; ನೀವೇನು ಅಲ್ಲಾಹನನ್ನು ಬಿಟ್ಟು, ನಿಮಗೆ ಯಾವುದೇ ಲಾಭವನ್ನಾಗಲಿ, ನಷ್ಟವನ್ನಾಗಲಿ ಮಾಡಲಾಗದವರನ್ನು ಪೂಜಿಸುವಿರಾ? ಅಲ್ಲಾಹನಂತು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ.
5:77
قُلْ يَا أَهْلَ الْكِتَابِ لَا تَغْلُوا فِي دِينِكُمْ غَيْرَ الْحَقِّ وَلَا تَتَّبِعُوا أَهْوَاءَ قَوْمٍ قَدْ ضَلُّوا مِنْ قَبْلُ وَأَضَلُّوا كَثِيرًا وَضَلُّوا عَنْ سَوَاءِ السَّبِيلِ
۞
ಹೇಳಿರಿ; ಗ್ರಂಥದವರೇ, ನೀವು ಸತ್ಯಕ್ಕೆದುರಾಗಿ ನಿಮ್ಮ ಧರ್ಮದಲ್ಲಿ ಅತಿಶಯವೆಸಗಬೇಡಿ ಮತ್ತು ನೀವು, ಈ ಹಿಂದೆಯೇ ದಾರಿ ತಪ್ಪಿರುವವರ ಅಪೇಕ್ಷೆಗಳನ್ನು ಅನುಸರಿಸಬೇಡಿ. ಅವರು ಅನೇಕರನ್ನು ದಾರಿಗೆಡಿಸಿದ್ದಾರೆ ಮತ್ತು ಸ್ವತಃ ದಾರಿ ತಪ್ಪಿದವರಾಗಿದ್ದಾರೆ.
5:78
لُعِنَ الَّذِينَ كَفَرُوا مِنْ بَنِي إِسْرَائِيلَ عَلَىٰ لِسَانِ دَاوُودَ وَعِيسَى ابْنِ مَرْيَمَ ۚ ذَٰلِكَ بِمَا عَصَوْا وَكَانُوا يَعْتَدُونَ
۞
ಇಸ್ರಾಈಲರ ಸಂತತಿಗಳ ಪೈಕಿ ಧಿಕ್ಕಾರಿಗಳು ದಾವೂದ್ರ ಬಾಯಿಯಿಂದ ಹಾಗೂ ಮರ್ಯಮರ ಪುತ್ರ ಈಸಾರಿಂದ ಶಪಿತರಾದರು. ಅವರು ಅವಿಧೇಯರಾಗಿದ್ದುದು ಮತ್ತು ಅತಿರೇಕವೆಸಗುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು.
5:79
كَانُوا لَا يَتَنَاهَوْنَ عَنْ مُنْكَرٍ فَعَلُوهُ ۚ لَبِئْسَ مَا كَانُوا يَفْعَلُونَ
۞
ಅವರು ದುಷ್ಕೃತ್ಯಗಳನ್ನು ಎಸಗದಂತೆ ಪರಸ್ಪರರನ್ನು ತಡೆಯುತ್ತಿರಲಿಲ್ಲ. ಅವರು ಕೆಟ್ಟದ್ದನ್ನೇ ಮಾಡುತ್ತಿದ್ದರು.
5:80
تَرَىٰ كَثِيرًا مِنْهُمْ يَتَوَلَّوْنَ الَّذِينَ كَفَرُوا ۚ لَبِئْسَ مَا قَدَّمَتْ لَهُمْ أَنْفُسُهُمْ أَنْ سَخِطَ اللَّهُ عَلَيْهِمْ وَفِي الْعَذَابِ هُمْ خَالِدُونَ
۞
ಅವರಲ್ಲಿ ಹೆಚ್ಚಿನವರು ಧಿಕ್ಕಾರಿಗಳನ್ನು ತಮ್ಮ ಪೋಷಕರಾಗಿಸಿಕೊಂಡಿರುವುದನ್ನು ನೀವು ಕಾಣುತ್ತೀರಿ. ಅವರು ತಮಗಾಗಿ ಕೇವಲ ಕೆಡುಕನ್ನು ಮಾತ್ರ ಮುಂದೆ ಕಳುಹಿಸಿದ್ದಾರೆ. ಇದರಿಂದಾಗಿ ಅಲ್ಲಾಹನು ಅವರ ಬಗ್ಗೆ ಕೋಪಗೊಂಡಿರುವನು ಮತ್ತು ಅವರು ಸದಾ ಕಾಲ ಯಾತನೆಯಲ್ಲಿರುವರು.
5:81
وَلَوْ كَانُوا يُؤْمِنُونَ بِاللَّهِ وَالنَّبِيِّ وَمَا أُنْزِلَ إِلَيْهِ مَا اتَّخَذُوهُمْ أَوْلِيَاءَ وَلَٰكِنَّ كَثِيرًا مِنْهُمْ فَاسِقُونَ
۞
ಒಂದು ವೇಳೆ ಅವರು ಅಲ್ಲಾಹನಲ್ಲಿ, ದೂತರಲ್ಲಿ ಮತ್ತು ಅವರೆಡೆಗೆ ಇಳಿಸಿ ಕೊಡಲಾಗಿರುವ ಸಂದೇಶದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಈ ರೀತಿ ಅವರನ್ನು (ಧಿಕ್ಕಾರಿಗಳನ್ನು) ತಮ್ಮ ಪೋಷಕರಾಗಿಸಿಕೊಳ್ಳುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರು ಅವಿಧೇಯರಾಗಿದ್ದಾರೆ.
5:82
۞ لَتَجِدَنَّ أَشَدَّ النَّاسِ عَدَاوَةً لِلَّذِينَ آمَنُوا الْيَهُودَ وَالَّذِينَ أَشْرَكُوا ۖ وَلَتَجِدَنَّ أَقْرَبَهُمْ مَوَدَّةً لِلَّذِينَ آمَنُوا الَّذِينَ قَالُوا إِنَّا نَصَارَىٰ ۚ ذَٰلِكَ بِأَنَّ مِنْهُمْ قِسِّيسِينَ وَرُهْبَانًا وَأَنَّهُمْ لَا يَسْتَكْبِرُونَ
۞
ಜನರ ಪೈಕಿ ಯಹೂದಿಗಳು ಮತ್ತು ಬಹುದೇವಾರಾಧಕರು ವಿಶ್ವಾಸಿಗಳ ವಿರುದ್ಧ ಹೆಚ್ಚು ಶತ್ರುತ್ವ ಉಳ್ಳವರಾಗಿರುವುದನ್ನು ನೀವು ಕಾಣುವಿರಿ. ಹಾಗೆಯೇ ‘‘ನಾವು ಕ್ರೈಸ್ತರು’’ ಎಂದು ಹೇಳುವವರನ್ನು ನೀವು ವಿಶ್ವಾಸಿಗಳ ಜೊತೆ ಹೆಚ್ಚಿನ ಸ್ನೇಹ ಉಳ್ಳವರಾಗಿ ಕಾಣುವಿರಿ. ಇದೇಕೆಂದರೆ ಅವರ ನಡುವೆ ನಿಸ್ವಾರ್ಥ ಧರ್ಮ ಸೇವಕರು ಹಾಗೂ ಸಾಧುಗಳಿದ್ದಾರೆ ಮತ್ತು ಅವರು ಅಹಂಕಾರ ಪಡುವವರಲ್ಲ.
5:83
وَإِذَا سَمِعُوا مَا أُنْزِلَ إِلَى الرَّسُولِ تَرَىٰ أَعْيُنَهُمْ تَفِيضُ مِنَ الدَّمْعِ مِمَّا عَرَفُوا مِنَ الْحَقِّ ۖ يَقُولُونَ رَبَّنَا آمَنَّا فَاكْتُبْنَا مَعَ الشَّاهِدِينَ
۞
ದೂತರೆಡೆಗೆ ಇಳಿಸಿಕೊಡಲಾಗಿರುವ ಸಂದೇಶವನ್ನು ಕೇಳಿದಾಗ, ಅವರು ಸತ್ಯವನ್ನು ಗುರುತಿಸಿದ್ದರಿಂದ ಅವರ ಕಣ್ಣುಗಳಲ್ಲಿ ಕಣ್ಣೀರು ಉಕ್ಕುವುದನ್ನು ನೀವು ಕಾಣುತ್ತೀರಿ. ಅವರು ಹೇಳುತ್ತಾರೆ; ‘‘ನಮ್ಮೊಡೆಯಾ, ನಾವು ನಂಬಿದೆವು. ನಮ್ಮ ಹೆಸರನ್ನು (ಸತ್ಯದ ಪರ) ಸಾಕ್ಷಿಗಳ ಜೊತೆ ಬರೆ.’’
5:84
وَمَا لَنَا لَا نُؤْمِنُ بِاللَّهِ وَمَا جَاءَنَا مِنَ الْحَقِّ وَنَطْمَعُ أَنْ يُدْخِلَنَا رَبُّنَا مَعَ الْقَوْمِ الصَّالِحِينَ
۞
‘‘ಅಲ್ಲಾಹನನ್ನು ಹಾಗೂ ನಮ್ಮ ಬಳಿಗೆ ಬಂದಿರುವ ಸತ್ಯವನ್ನು ನಾವೇಕೆ ನಂಬಬಾರದು? ನಾವಂತು, ನಮ್ಮೊಡೆಯನು ನಮ್ಮನ್ನು ಸಜ್ಜನರ ಸಾಲಿಗೆ ಸೇರಿಸಬೇಕೆಂದು ಹಂಬಲಿಸುತ್ತಿದ್ದೇವೆ’’
5:85
فَأَثَابَهُمُ اللَّهُ بِمَا قَالُوا جَنَّاتٍ تَجْرِي مِنْ تَحْتِهَا الْأَنْهَارُ خَالِدِينَ فِيهَا ۚ وَذَٰلِكَ جَزَاءُ الْمُحْسِنِينَ
۞
ಅವರ ಈ ಹೇಳಿಕೆಯ ಫಲವಾಗಿ ಅಲ್ಲಾಹನು ಅವರಿಗೆ, ತಳದಲ್ಲಿ ನದಿಗಳು ಹರಿಯುತ್ತಿರುವ ತೋಟಗಳನ್ನು ದಯಪಾಲಿಸಿದನು. ಅವರು ಅವುಗಳಲ್ಲಿ ಸದಾ ಕಾಲ ಇರುವರು. ಇದು ಸಜ್ಜನರಿಗಿರುವ ಪ್ರತಿಫಲ.
5:86
وَالَّذِينَ كَفَرُوا وَكَذَّبُوا بِآيَاتِنَا أُولَٰئِكَ أَصْحَابُ الْجَحِيمِ
۞
ಧಿಕ್ಕಾರಿಗಳು ಮತ್ತು ನಮ್ಮ ವಚನಗಳನ್ನು ತಿರಸ್ಕರಿಸಿದವರು - ನರಕದವರಾಗಿದ್ದಾರೆ.
5:87
يَا أَيُّهَا الَّذِينَ آمَنُوا لَا تُحَرِّمُوا طَيِّبَاتِ مَا أَحَلَّ اللَّهُ لَكُمْ وَلَا تَعْتَدُوا ۚ إِنَّ اللَّهَ لَا يُحِبُّ الْمُعْتَدِينَ
۞
ವಿಶ್ವಾಸಿಗಳೇ, ಅಲ್ಲಾಹನು ನಿಮಗೆ ಸಮ್ಮತಗೊಳಿಸಿರುವ ನಿರ್ಮಲ ವಸ್ತುಗಳನ್ನು ನಿಷಿದ್ಧವೆಂದು ಪರಿಗಣಿಸಬೇಡಿ ಮತ್ತು ಮಿತಿ ಮೀರಬೇಡಿ. ಮಿತಿ ಮೀರುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ.
5:88
وَكُلُوا مِمَّا رَزَقَكُمُ اللَّهُ حَلَالًا طَيِّبًا ۚ وَاتَّقُوا اللَّهَ الَّذِي أَنْتُمْ بِهِ مُؤْمِنُونَ
۞
ಅಲ್ಲಾಹನು ನಿಮಗೆ ನೀಡಿರುವ ಸಮ್ಮತ ಹಾಗೂ ಶುದ್ಧ ಆಹಾರವನ್ನು ತಿನ್ನಿರಿ ಮತ್ತು ನೀವು ನಂಬುವ ಆ ಅಲ್ಲಾಹನಿಗೆ ಸದಾ ಅಂಜಿರಿ.
5:89
لَا يُؤَاخِذُكُمُ اللَّهُ بِاللَّغْوِ فِي أَيْمَانِكُمْ وَلَٰكِنْ يُؤَاخِذُكُمْ بِمَا عَقَّدْتُمُ الْأَيْمَانَ ۖ فَكَفَّارَتُهُ إِطْعَامُ عَشَرَةِ مَسَاكِينَ مِنْ أَوْسَطِ مَا تُطْعِمُونَ أَهْلِيكُمْ أَوْ كِسْوَتُهُمْ أَوْ تَحْرِيرُ رَقَبَةٍ ۖ فَمَنْ لَمْ يَجِدْ فَصِيَامُ ثَلَاثَةِ أَيَّامٍ ۚ ذَٰلِكَ كَفَّارَةُ أَيْمَانِكُمْ إِذَا حَلَفْتُمْ ۚ وَاحْفَظُوا أَيْمَانَكُمْ ۚ كَذَٰلِكَ يُبَيِّنُ اللَّهُ لَكُمْ آيَاتِهِ لَعَلَّكُمْ تَشْكُرُونَ
۞
ನೀವು ಕೇವಲ ತಮಾಷೆಯಾಗಿ ಮಾಡಿದ ಪ್ರತಿಜ್ಞೆಗಳಿಗಾಗಿ ಅಲ್ಲಾಹನು ನಿಮ್ಮನ್ನು ವಿಚಾರಿಸಲಾರನು. ಆದರೆ ನೀವು ಮಾಡಿದ ಗಂಭೀರ ಪ್ರತಿಜ್ಞೆಗಳ ಕುರಿತು ಅವನು ಖಂಡಿತ ನಿಮ್ಮನ್ನು ವಿಚಾರಿಸುವನು. (ಅಂತಹ ಪ್ರತಿಜ್ಞೆ ಮುರಿದರೆ) ಅದಕ್ಕೆ ಪರಿಹಾರವಾಗಿ ನೀವು ನಿಮ್ಮ ಮನೆಯವರಿಗೆ ಉಣಿಸುವಂತಹ ಮಧ್ಯಮ ಮಟ್ಟದ ಭೋಜನವನ್ನು ಹತ್ತು ಮಂದಿ ಬಡವರಿಗೆ ಉಣಿಸಬೇಕು ಅಥವಾ ಅವರಿಗೆ (ಅಷ್ಟು ಮಂದಿಗೆ) ಬಟ್ಟೆ ಉಡಿಸಬೇಕು ಅಥವಾ ಒಬ್ಬ ಗುಲಾಮನನ್ನು ದಾಸ್ಯದಿಂದ ಮುಕ್ತಗೊಳಿಸಬೇಕು. ಇದನ್ನು ಮಾಡಲಾಗದವನು ಮೂರು ದಿನ ಉಪವಾಸ ಆಚರಿಸಬೇಕು. ಇದು, ನೀವು ಪ್ರತಿಜ್ಞೆ ಮಾಡಿದ ಬಳಿಕ ಪ್ರತಿಜ್ಞೆಯನ್ನು ಮುರಿದುದಕ್ಕೆ ಪರಿಹಾರವಾಗಿದೆ. ನಿಮ್ಮ ಪ್ರತಿಜ್ಞೆಗಳನ್ನು ಸದಾ ಪಾಲಿಸಿರಿ. ನೀವು ಸದಾ ಕೃತಜ್ಞರಾಗಿರಬೇಕೆಂದು, ಈ ರೀತಿ ಅಲ್ಲಾಹನು ನಿಮಗೆ ತನ್ನ ಆದೇಶಗಳನ್ನು ವಿವರಿಸಿಕೊಡುತ್ತಾನೆ.
5:90
يَا أَيُّهَا الَّذِينَ آمَنُوا إِنَّمَا الْخَمْرُ وَالْمَيْسِرُ وَالْأَنْصَابُ وَالْأَزْلَامُ رِجْسٌ مِنْ عَمَلِ الشَّيْطَانِ فَاجْتَنِبُوهُ لَعَلَّكُمْ تُفْلِحُونَ
۞
ವಿಶ್ವಾಸಿಗಳೇ, ಮದ್ಯ, ಜೂಜಾಟ, ವಿಗ್ರಹಗಳು ಮತ್ತು ದಾಳದಾಟ ಇವೆಲ್ಲಾ ಶೈತಾನನ ಮಲಿನ ಚಟುವಟಿಕೆಗಳಾಗಿವೆ. ನೀವು ವಿಜಯಿಗಳಾಗಲು ಅವೆಲ್ಲವುಗಳಿಂದ ದೂರ ಉಳಿಯಿರಿ.
5:91
إِنَّمَا يُرِيدُ الشَّيْطَانُ أَنْ يُوقِعَ بَيْنَكُمُ الْعَدَاوَةَ وَالْبَغْضَاءَ فِي الْخَمْرِ وَالْمَيْسِرِ وَيَصُدَّكُمْ عَنْ ذِكْرِ اللَّهِ وَعَنِ الصَّلَاةِ ۖ فَهَلْ أَنْتُمْ مُنْتَهُونَ
۞
ಶೈತಾನನಂತು ಮದ್ಯ ಹಾಗೂ ಜೂಜುಗಳ ಮೂಲಕ ನಿಮ್ಮ ನಡುವೆ ದ್ವೇಷ ಹಾಗೂ ಹಗೆತನವನ್ನು ಬೆಳೆಸಬಯಸುತ್ತಾನೆ ಮತ್ತು ನಿಮ್ಮನ್ನು ಅಲ್ಲಾಹನ ನೆನಪಿನಿಂದ ಹಾಗೂ ನಮಾಝ್ನಿಂದ ತಡೆಯಬಯಸುತ್ತಾನೆ. ಆದ್ದರಿಂದ ಇನ್ನಾದರೂ ನೀವು (ಅವುಗಳಿಂದ) ದೂರ ಉಳಿಯುವಿರಾ?
5:92
وَأَطِيعُوا اللَّهَ وَأَطِيعُوا الرَّسُولَ وَاحْذَرُوا ۚ فَإِنْ تَوَلَّيْتُمْ فَاعْلَمُوا أَنَّمَا عَلَىٰ رَسُولِنَا الْبَلَاغُ الْمُبِينُ
۞
ನೀವು ಅಲ್ಲಾಹನ ಆಜ್ಞಾಪಾಲನೆ ಮಾಡಿರಿ ಹಾಗೂ ದೂತರ ಆಜ್ಞಾಪಾಲನೆ ಮಾಡಿರಿ ಮತ್ತು (ಕೆಡುಕುಗಳ ವಿರುದ್ಧ) ಸದಾ ಜಾಗೃತರಾಗಿರಿ. ನೀವಿನ್ನು ತಿರುಗಿ ನಿಂತರೆ, ನಿಮಗೆ ತಿಳಿದಿರಲಿ, ನಮ್ಮ ದೂತರ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸಿ ಬಿಡುವ ಹೊಣೆ ಮಾತ್ರ.
5:93
لَيْسَ عَلَى الَّذِينَ آمَنُوا وَعَمِلُوا الصَّالِحَاتِ جُنَاحٌ فِيمَا طَعِمُوا إِذَا مَا اتَّقَوْا وَآمَنُوا وَعَمِلُوا الصَّالِحَاتِ ثُمَّ اتَّقَوْا وَآمَنُوا ثُمَّ اتَّقَوْا وَأَحْسَنُوا ۗ وَاللَّهُ يُحِبُّ الْمُحْسِنِينَ
۞
ಸತ್ಯವನ್ನು ನಂಬಿ ಸತ್ಕರ್ಮಗಳನ್ನು ಮಾಡುತ್ತಿರುವವರು (ಗತಕಾಲದಲ್ಲಿ) ಏನನ್ನು ತಿಂದಿದ್ದರೂ, ಅವರು ಧರ್ಮನಿಷ್ಠರೂ, ವಿಶ್ವಾಸಿಗಳೂ ಆಗಿದ್ದು ಸತ್ಕರ್ಮಗಳನ್ನು ಮಾಡುತ್ತಿರುವವರಾಗಿದ್ದರೆ ಮತ್ತು ಸದಾ ಧರ್ಮನಿಷ್ಠರೂ, ಸತ್ಯದಲ್ಲಿ ನಂಬಿಕೆ ಉಳ್ಳವರೂ, ಕೆಡುಕುಗಳಿಂದ ದೂರ ಉಳಿಯುವವರೂ, ಸೌಜನ್ಯ ತೋರುವವರೂ ಆಗಿದ್ದರೆ, ಅವರ ಮೇಲೆ ಪಾಪವೇನಿಲ್ಲ. ಅಲ್ಲಾಹನು ಸತ್ಕರ್ಮಿಗಳನ್ನು ಪ್ರೀತಿಸುತ್ತಾನೆ.
5:94
يَا أَيُّهَا الَّذِينَ آمَنُوا لَيَبْلُوَنَّكُمُ اللَّهُ بِشَيْءٍ مِنَ الصَّيْدِ تَنَالُهُ أَيْدِيكُمْ وَرِمَاحُكُمْ لِيَعْلَمَ اللَّهُ مَنْ يَخَافُهُ بِالْغَيْبِ ۚ فَمَنِ اعْتَدَىٰ بَعْدَ ذَٰلِكَ فَلَهُ عَذَابٌ أَلِيمٌ
۞
ವಿಶ್ವಾಸಿಗಳೇ, ಕಣ್ಣಾರೆ ಕಾಣದೆ ತನ್ನನ್ನು ಯಾರು ಅಂಜುತ್ತಾರೆಂಬುದನ್ನು ಅರಿಯಲಿಕ್ಕಾಗಿ ನಿಮ್ಮ ಕೈಗಳ ಹಾಗೂ ನಿಮ್ಮ ಈಟಿಗಳ ವ್ಯಾಪ್ತಿಗೆ ಬಂದಿರುವ ಬೇಟೆಯ ಪ್ರಾಣಿಯ ಮೂಲಕ ಅಲ್ಲಾಹನು ನಿಮ್ಮನ್ನು ಖಂಡಿತ ಪರೀಕ್ಷಿಸುವನು. ಇಷ್ಟಾಗಿಯೂ ಮೇರೆ ಮೀರಿ ಹೋಗುವಾತನಿಗೆ ಕಠಿಣ ಶಿಕ್ಷೆ ಕಾದಿದೆ.
5:95
يَا أَيُّهَا الَّذِينَ آمَنُوا لَا تَقْتُلُوا الصَّيْدَ وَأَنْتُمْ حُرُمٌ ۚ وَمَنْ قَتَلَهُ مِنْكُمْ مُتَعَمِّدًا فَجَزَاءٌ مِثْلُ مَا قَتَلَ مِنَ النَّعَمِ يَحْكُمُ بِهِ ذَوَا عَدْلٍ مِنْكُمْ هَدْيًا بَالِغَ الْكَعْبَةِ أَوْ كَفَّارَةٌ طَعَامُ مَسَاكِينَ أَوْ عَدْلُ ذَٰلِكَ صِيَامًا لِيَذُوقَ وَبَالَ أَمْرِهِ ۗ عَفَا اللَّهُ عَمَّا سَلَفَ ۚ وَمَنْ عَادَ فَيَنْتَقِمُ اللَّهُ مِنْهُ ۗ وَاللَّهُ عَزِيزٌ ذُو انْتِقَامٍ
۞
ವಿಶ್ವಾಸಿಗಳೇ, ನೀವು ‘ಇಹ್ರಾಮ್’ನ ಸ್ಥಿತಿಯಲ್ಲಿರುವಾಗ ಬೇಟೆಯ ಪ್ರಾಣಿಯನ್ನು ಕೊಲ್ಲಬೇಡಿ. ಇನ್ನು ನಿಮ್ಮ ಪೈಕಿ ಯಾರಾದರೂ ಉದ್ದೇಶಪೂರ್ವಕ ಅದನ್ನು ಕೊಂದಿದ್ದರೆ - ಅವನು ಕೊಂದ ಪ್ರಾಣಿಗೆ ಸಮನಾಗಿರುವ ನಾಡಪ್ರಾಣಿಯೇ ಅದಕ್ಕೆ ಪರಿಹಾರವಾಗಿದೆ. ಈ ವಿಷಯದಲ್ಲಿ ನಿಮ್ಮಲ್ಲಿನ ಇಬ್ಬರು ನ್ಯಾಯವಂತರು ತೀರ್ಪು ನೀಡಲಿ. ಈ ಪರಿಹಾರವನ್ನು ಕಾಣಿಕೆಯಾಗಿ ಕಅ್'ಬಃ ಭವನಕ್ಕೆ ತಲುಪಿಸಬೇಕು. ಅಥವಾ (ಪರಿಹಾರವಾಗಿ) ಕೆಲವು ಬಡವರಿಗೆ ಆಹಾರ ಉಣಿಸಬೇಕು. ಅಥವಾ, ಅದಕ್ಕೆ ಸಮನಾಗುವಷ್ಟು ಉಪವಾಸ ಆಚರಿಸಬೇಕು. ಅವನು ತನ್ನ ಕೃತ್ಯದ ಫಲವನ್ನು ಅನುಭವಿಸಲೆಂದು (ಇದನ್ನು ವಿಧಿಸಲಾಗಿದೆ). ಹಿಂದೆ ಗತಿಸಿ ಹೋದುದನ್ನೆಲ್ಲಾ ಅಲ್ಲಾಹನು ಕ್ಷಮಿಸಿರುವನು. ಇದೀಗ ಅದನ್ನೇ ಪುನರಾವರ್ತಿಸುವವರ ವಿರುದ್ಧ ಅಲ್ಲಾಹನು ಪ್ರತೀಕಾರ ತೀರಿಸುವನು. ಅಲ್ಲಾಹನು ಭಾರೀ ಪ್ರಬಲನೂ ಪ್ರತೀಕಾರ ತೀರಿಸಬಲ್ಲವನೂ ಆಗಿದ್ದಾನೆ.
5:96
أُحِلَّ لَكُمْ صَيْدُ الْبَحْرِ وَطَعَامُهُ مَتَاعًا لَكُمْ وَلِلسَّيَّارَةِ ۖ وَحُرِّمَ عَلَيْكُمْ صَيْدُ الْبَرِّ مَا دُمْتُمْ حُرُمًا ۗ وَاتَّقُوا اللَّهَ الَّذِي إِلَيْهِ تُحْشَرُونَ
۞
(ಇಹ್ರಾಮಿನ ಸ್ಥಿತಿಯಲ್ಲಿ) ಕಡಲಿನ ಬೇಟೆಯನ್ನು ನಿಮ್ಮ ಪಾಲಿಗೆ ಸಮ್ಮತಿಸಲಾಗಿದೆ. ಅದರ ಆಹಾರವು ನಿಮಗೆ ಹಾಗೂ ಕಡಲ ಪ್ರಯಾಣಿಕರಿಗೆ ಉಪಯುಕ್ತವಾಗಿದೆ. ನೀವು ‘ಇಹ್ರಾಮ್’ನ ಸ್ಥಿತಿಯಲ್ಲಿರುವಾಗ ಭೂಭಾಗದ ಬೇಟೆಯು ನಿಮ್ಮ ಪಾಲಿಗೆ ನಿಷಿದ್ಧವಾಗಿದೆ. ನೀವು ಅಲ್ಲಾಹನಿಗೆ ಅಂಜಿರಿ. ಕೊನೆಗೆ ಅವನ ಬಳಿಯೇ ನಿಮ್ಮೆಲ್ಲರನ್ನು ಒಟ್ಟು ಸೇರಿಸಲಾಗುವುದು.
5:97
۞ جَعَلَ اللَّهُ الْكَعْبَةَ الْبَيْتَ الْحَرَامَ قِيَامًا لِلنَّاسِ وَالشَّهْرَ الْحَرَامَ وَالْهَدْيَ وَالْقَلَائِدَ ۚ ذَٰلِكَ لِتَعْلَمُوا أَنَّ اللَّهَ يَعْلَمُ مَا فِي السَّمَاوَاتِ وَمَا فِي الْأَرْضِ وَأَنَّ اللَّهَ بِكُلِّ شَيْءٍ عَلِيمٌ
۞
ಅಲ್ಲಾಹನು ಪವಿತ್ರ ಭವನ ಕಅ್'ಬಃವನ್ನು ಮಾನವರ ಆಶ್ರಯ ಧಾಮವಾಗಿಸಿರುವನು. ಹಾಗೆಯೇ, ಪವಿತ್ರ ತಿಂಗಳುಗಳು, ಬಲಿಪ್ರಾಣಿ ಮತ್ತು ಕೊರಳಪಟ್ಟಿಯಿರುವ (ಹರಕೆಯ) ಪ್ರಾಣಿಗಳು (ಅವನ ಸಂಕೇತಗಳಾಗಿವೆ). ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು ಮತ್ತು ಅಲ್ಲಾಹನು ಪ್ರತಿಯೊಂದು ವಿಷಯದ ಜ್ಞಾನ ಉಳ್ಳವನು ಎಂಬುದು ನಿಮಗೆ ತಿಳಿದಿರಬೇಕೆಂದು (ಇದನ್ನೆಲ್ಲಾ ನಿಮಗೆ ವಿವರಿಸಲಾಗುತ್ತಿದೆ).
5:98
اعْلَمُوا أَنَّ اللَّهَ شَدِيدُ الْعِقَابِ وَأَنَّ اللَّهَ غَفُورٌ رَحِيمٌ
۞
ನಿಮಗೆ ತಿಳಿದಿರಲಿ - ಅಲ್ಲಾಹನು ಭಾರೀ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ ಮತ್ತು ಅದೇ ವೇಳೆ ಅಲ್ಲಾಹನು ತುಂಬಾ ಕ್ಷಮಾಶೀಲನೂ, ಕರುಣಾಮಯಿಯೂ ಆಗಿದ್ದಾನೆ.
5:99
مَا عَلَى الرَّسُولِ إِلَّا الْبَلَاغُ ۗ وَاللَّهُ يَعْلَمُ مَا تُبْدُونَ وَمَا تَكْتُمُونَ
۞
ದೂತರ ಮೇಲಿರುವುದು (ಸಂದೇಶವನ್ನು) ತಲುಪಿಸುವ ಹೊಣೆಗಾರಿಕೆ ಮಾತ್ರ. ನೀವು ಪ್ರಕಟಪಡಿಸುತ್ತಿರುವ ಮತ್ತು ನೀವು ಬಚ್ಚಿಡುತ್ತಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು.
5:100
قُلْ لَا يَسْتَوِي الْخَبِيثُ وَالطَّيِّبُ وَلَوْ أَعْجَبَكَ كَثْرَةُ الْخَبِيثِ ۚ فَاتَّقُوا اللَّهَ يَا أُولِي الْأَلْبَابِ لَعَلَّكُمْ تُفْلِحُونَ
۞
ಹೇಳಿರಿ; ಮಲಿನ ಮತ್ತು ನಿರ್ಮಲವು ಸಮಾನವಾಗಲು ಸಾಧ್ಯವಿಲ್ಲ. ಮಾಲಿನ್ಯದ ಬಾಹುಳ್ಯವು ನಿಮಗೆಷ್ಟು ಅದ್ಭುತವೆನಿಸಿದರೂ ಸರಿಯೇ. ಆದ್ದರಿಂದ, ಬುದ್ಧಿವಂತರೇ, ನೀವು ಸದಾ ಅಲ್ಲಾಹನ ಭಯಭಕ್ತಿ ಉಳ್ಳವರಾಗಿರಿ - ನೀವು ವಿಜಯಿಗಳಾಗಬಹುದು.
5:101
يَا أَيُّهَا الَّذِينَ آمَنُوا لَا تَسْأَلُوا عَنْ أَشْيَاءَ إِنْ تُبْدَ لَكُمْ تَسُؤْكُمْ وَإِنْ تَسْأَلُوا عَنْهَا حِينَ يُنَزَّلُ الْقُرْآنُ تُبْدَ لَكُمْ عَفَا اللَّهُ عَنْهَا ۗ وَاللَّهُ غَفُورٌ حَلِيمٌ
۞
ವಿಶ್ವಾಸಿಗಳೇ, ನಿಮಗೆ ತಿಳಿಸಿದರೆ ನಿಮಗೆ ಕೆಟ್ಟದೆನಿಸುವಂತಹ ವಿಷಯಗಳ ಕುರಿತು ಪ್ರಶ್ನಿಸಬೇಡಿ. ಕುರ್ಆನ್ ಇಳಿಯುತ್ತಿರುವ ವೇಳೆ ನೀವು ಅಂತಹ ವಿಷಯಗಳನ್ನು ಕೇಳಿದರೆ ಅವುಗಳನ್ನು ನಿಮಗೆ ತಿಳಿಸಲಾಗುವುದು. ಅಲ್ಲಾಹನು ಅವುಗಳನ್ನು ಕ್ಷಮಿಸಿರುವನು. ಅಲ್ಲಾಹನಂತು ತುಂಬಾ ಕ್ಷಮಾಶೀಲನೂ ಸಂಯಮಿಯೂ ಆಗಿದ್ದಾನೆ.
5:102
قَدْ سَأَلَهَا قَوْمٌ مِنْ قَبْلِكُمْ ثُمَّ أَصْبَحُوا بِهَا كَافِرِينَ
۞
ನಿಮಗಿಂತ ಹಿಂದಿನ ಜನಾಂಗಗಳವರೂ ಅಂತಹ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಆ ಬಳಿಕ ಅವರು ಅದನ್ನು (ಸತ್ಯವನ್ನು) ಧಿಕ್ಕರಿಸುವವರಾದರು.
5:103
مَا جَعَلَ اللَّهُ مِنْ بَحِيرَةٍ وَلَا سَائِبَةٍ وَلَا وَصِيلَةٍ وَلَا حَامٍ ۙ وَلَٰكِنَّ الَّذِينَ كَفَرُوا يَفْتَرُونَ عَلَى اللَّهِ الْكَذِبَ ۖ وَأَكْثَرُهُمْ لَا يَعْقِلُونَ
۞
ಬಹೀರಃ, ಸಾಯಿಬಃ, ವಸೀಲಾ ಮತ್ತು ಹಾಮ್ - ಇವರ ಪೈಕಿ ಯಾರನ್ನೂ ಅಲ್ಲಾಹನು (ಪೂಜ್ಯರಾಗಿ) ನೇಮಿಸಿಲ್ಲ. ನಿಜವಾಗಿ ಧಿಕ್ಕಾರಿಗಳು ಅಲ್ಲಾಹನ ಮೇಲೆ ಆರೋಪಗಳನ್ನು ಹೊರಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಆಲೋಚಿಸುವುದಿಲ್ಲ.*
5:104
وَإِذَا قِيلَ لَهُمْ تَعَالَوْا إِلَىٰ مَا أَنْزَلَ اللَّهُ وَإِلَى الرَّسُولِ قَالُوا حَسْبُنَا مَا وَجَدْنَا عَلَيْهِ آبَاءَنَا ۚ أَوَلَوْ كَانَ آبَاؤُهُمْ لَا يَعْلَمُونَ شَيْئًا وَلَا يَهْتَدُونَ
۞
ಅಲ್ಲಾಹನು ಇಳಿಸಿಕೊಟ್ಟಿರುವ ಸಂದೇಶದೆಡೆಗೆ ಮತ್ತು ದೇವದೂತರೆಡೆಗೆ ಬನ್ನಿರಿ ಎಂದು ಅವರೊಡನೆ ಹೇಳಿದಾಗ ಅವರು, ‘‘ನಾವು ನಮ್ಮ ಪೂರ್ವಜರನ್ನು ಯಾವ ದಾರಿಯಲ್ಲಿ ಕಂಡಿರುವೆವೋ, ಅದುವೇ ನಮಗೆ ಸಾಕು’’ ಎನ್ನುತ್ತಾರೆ. ಅವರ ಪೂರ್ವಜರು ಏನನ್ನೂ ಅರಿಯದವರು ಹಾಗೂ ಸನ್ಮಾರ್ಗ ಪಡೆಯದವರಾಗಿದ್ದರೂ (ಅವರಿಗೆ ಆ ದಾರಿ ಸಾಕೇ?)
5:105
يَا أَيُّهَا الَّذِينَ آمَنُوا عَلَيْكُمْ أَنْفُسَكُمْ ۖ لَا يَضُرُّكُمْ مَنْ ضَلَّ إِذَا اهْتَدَيْتُمْ ۚ إِلَى اللَّهِ مَرْجِعُكُمْ جَمِيعًا فَيُنَبِّئُكُمْ بِمَا كُنْتُمْ تَعْمَلُونَ
۞
ವಿಶ್ವಾಸಿಗಳೇ, ನೀವು ಸ್ವತಃ ನಿಮ್ಮ ಕುರಿತು ಚಿಂತಿಸಿರಿ. ನೀವು ಸನ್ಮಾರ್ಗದಲ್ಲಿದ್ದರೆ, ದಾರಿ ತಪ್ಪಿದವನಿಂದ ನಿಮಗೇನೂ ನಷ್ಟವಾಗದು. ಕೊನೆಗೆ ನೀವೆಲ್ಲರೂ ಅಲ್ಲಾಹನ ಬಳಿಗೇ ಮರಳುವಿರಿ. ನೀವು ಏನೆಲ್ಲ ಮಾಡುತ್ತಿದ್ದಿರೆಂಬುದನ್ನು (ಅಲ್ಲಿ) ಅವನು ನಿಮಗೆ ತಿಳಿಸುವನು.
5:106
يَا أَيُّهَا الَّذِينَ آمَنُوا شَهَادَةُ بَيْنِكُمْ إِذَا حَضَرَ أَحَدَكُمُ الْمَوْتُ حِينَ الْوَصِيَّةِ اثْنَانِ ذَوَا عَدْلٍ مِنْكُمْ أَوْ آخَرَانِ مِنْ غَيْرِكُمْ إِنْ أَنْتُمْ ضَرَبْتُمْ فِي الْأَرْضِ فَأَصَابَتْكُمْ مُصِيبَةُ الْمَوْتِ ۚ تَحْبِسُونَهُمَا مِنْ بَعْدِ الصَّلَاةِ فَيُقْسِمَانِ بِاللَّهِ إِنِ ارْتَبْتُمْ لَا نَشْتَرِي بِهِ ثَمَنًا وَلَوْ كَانَ ذَا قُرْبَىٰ ۙ وَلَا نَكْتُمُ شَهَادَةَ اللَّهِ إِنَّا إِذًا لَمِنَ الْآثِمِينَ
۞
ವಿಶ್ವಾಸಿಗಳೇ, ನಿಮ್ಮಲ್ಲಿ ಯಾರಾದರೊಬ್ಬರ ಮರಣವು ಸಮೀಪಿಸಿದ್ದರೆ, ಅವನು ಉಯಿಲನ್ನು ಬೋಧಿಸುವ ವೇಳೆ ನಿಮ್ಮೊಳಗಿನ ಇಬ್ಬರು ನ್ಯಾಯವಂತರು ಸಾಕ್ಷಿಗಳಾಗಲಿ. ಅಥವಾ, ನೀವು ಭೂಮಿಯಲ್ಲಿ ಪ್ರಯಾಣಿಸುತ್ತಿರುವಾಗ ನಿಮಗೆ ಮರಣದ ಆಪತ್ತು ಎದುರಾದರೆ, ನಿಮ್ಮ ಪಾಳಯದ ಹೊರಗಿನ ಇಬ್ಬರು (ಸಾಕ್ಷಿಗಳಾಗಲಿ). ನಿಮಗೆ ಸಂಶಯವಿದ್ದರೆ, ನೀವು ನಮಾಝ್ನ ಬಳಿಕ ಅವರನ್ನು ತಡೆದು ನಿಲ್ಲಿಸಿರಿ ಮತ್ತು ಅವರಿಬ್ಬರು ಅಲ್ಲಾಹನ ಆಣೆ ಹಾಕಿ ‘‘ನಾವು ಇದನ್ನು (ಸಾಕ್ಷ್ಯವನ್ನು) ಯಾವುದೇ ಬೆಲೆಗೆ ಮಾರಲಾರೆವು - ವಿಷಯವು ಆಪ್ತರಿಗೆ ಸಂಬಂಧಿಸಿದ್ದಾದರೂ ಸರಿಯೇ. ಮತ್ತು ನಾವು ಅಲ್ಲಾಹನ ಸಾಕ್ಷ್ಯವನ್ನು ಮರೆಮಾಚಲಾರೆವು. ಹಾಗೆ ಮಾಡಿದರೆ ನಾವು ಪಾಪಿಗಳಾಗುವೆವು’’ ಎಂದು ಪ್ರಮಾಣ ಮಾಡಲಿ.
5:107
فَإِنْ عُثِرَ عَلَىٰ أَنَّهُمَا اسْتَحَقَّا إِثْمًا فَآخَرَانِ يَقُومَانِ مَقَامَهُمَا مِنَ الَّذِينَ اسْتَحَقَّ عَلَيْهِمُ الْأَوْلَيَانِ فَيُقْسِمَانِ بِاللَّهِ لَشَهَادَتُنَا أَحَقُّ مِنْ شَهَادَتِهِمَا وَمَا اعْتَدَيْنَا إِنَّا إِذًا لَمِنَ الظَّالِمِينَ
۞
ತರುವಾಯ ಅವರಿಬ್ಬರೂ ಸತ್ಯವನ್ನು ಮರೆಮಾಚುವ ಪಾಪ ಕೃತ್ಯವನ್ನು ಎಸಗಿರುವರೆಂದು ತಿಳಿದು ಬಂದರೆ, ಅವರ ಸ್ಥಾನದಲ್ಲಿ, ಹಕ್ಕುವಂಚಿತರ ಪೈಕಿ ಮೃತ ವ್ಯಕ್ತಿಗೆ ಹೆಚ್ಚು ನಿಕಟ ಬಂಧುಗಳಾಗಿರುವ ಇಬ್ಬರು ಸಾಕ್ಷಿಗಳಾಗಿ ನಿಲ್ಲಲಿ. ಅವರಿಬ್ಬರು ಅಲ್ಲಾಹನ ಆಣೆ ಹಾಕಿ, ‘‘ನಮ್ಮ ಸಾಕ್ಷ್ಯವು ಅವರಿಬ್ಬರ ಸಾಕ್ಷ್ಯಕ್ಕಿಂತ ಹೆಚ್ಚು ಪಕ್ವವಾಗಿದೆ. ನಾವು ಯಾವುದೇ ಅತಿರೇಕವನ್ನೆಸಗಿಲ್ಲ. ಒಂದು ವೇಳೆ ನಾವು ಹಾಗೆ ಮಾಡಿದರೆ, ನಾವು ಅಕ್ರಮಿಗಳ ಸಾಲಿಗೆ ಸೇರುವೆವು’’ ಎಂದು ಪ್ರಮಾಣ ಮಾಡಲಿ.
5:108
ذَٰلِكَ أَدْنَىٰ أَنْ يَأْتُوا بِالشَّهَادَةِ عَلَىٰ وَجْهِهَا أَوْ يَخَافُوا أَنْ تُرَدَّ أَيْمَانٌ بَعْدَ أَيْمَانِهِمْ ۗ وَاتَّقُوا اللَّهَ وَاسْمَعُوا ۗ وَاللَّهُ لَا يَهْدِي الْقَوْمَ الْفَاسِقِينَ
۞
ಈ ರೀತಿ ಅವರು ಸರಿಯಾದ ಸಾಕ್ಷ್ಯ ಹೇಳುವ ಅಥವಾ ತಮ್ಮ ಸಾಕ್ಷ್ಯವು (ಇತರರ) ಸಾಕ್ಷ್ಯದ ಮುಂದೆ ತಿರಸ್ಕೃತವಾದೀತೆಂದು ಅಂಜುವ ಸಾಧ್ಯತೆ ಅಧಿಕವಿದೆ. ಅಲ್ಲಾಹನಿಗೆ ಅಂಜಿರಿ ಹಾಗೂ ಆಲಿಸಿರಿ. ಅಲ್ಲಾಹನು ಅವಿಧೇಯರಿಗೆ ಸರಿದಾರಿಯನ್ನು ತೋರಿಸುವುದಿಲ್ಲ.
5:109
۞ يَوْمَ يَجْمَعُ اللَّهُ الرُّسُلَ فَيَقُولُ مَاذَا أُجِبْتُمْ ۖ قَالُوا لَا عِلْمَ لَنَا ۖ إِنَّكَ أَنْتَ عَلَّامُ الْغُيُوبِ
۞
ಅಲ್ಲಾಹನು ಎಲ್ಲ ದೂತರನ್ನು ಒಂದೆಡೆ ಸೇರಿಸುವ ದಿನ, ಅವರೊಡನೆ, ‘‘ನಿಮಗೇನು ಉತ್ತರ ಸಿಕ್ಕಿತು?’’ ಎಂದು ಕೇಳುವನು. ಅವರು ‘‘ನಮಗೆ ತಿಳಿಯದು. ನೀನಂತು ಎಲ್ಲ ಗುಪ್ತ ವಿಚಾರಗಳನ್ನು ಖಚಿತವಾಗಿ ಬಲ್ಲವನಾಗಿರುವೆ’’ ಎನ್ನುವರು.
5:110
إِذْ قَالَ اللَّهُ يَا عِيسَى ابْنَ مَرْيَمَ اذْكُرْ نِعْمَتِي عَلَيْكَ وَعَلَىٰ وَالِدَتِكَ إِذْ أَيَّدْتُكَ بِرُوحِ الْقُدُسِ تُكَلِّمُ النَّاسَ فِي الْمَهْدِ وَكَهْلًا ۖ وَإِذْ عَلَّمْتُكَ الْكِتَابَ وَالْحِكْمَةَ وَالتَّوْرَاةَ وَالْإِنْجِيلَ ۖ وَإِذْ تَخْلُقُ مِنَ الطِّينِ كَهَيْئَةِ الطَّيْرِ بِإِذْنِي فَتَنْفُخُ فِيهَا فَتَكُونُ طَيْرًا بِإِذْنِي ۖ وَتُبْرِئُ الْأَكْمَهَ وَالْأَبْرَصَ بِإِذْنِي ۖ وَإِذْ تُخْرِجُ الْمَوْتَىٰ بِإِذْنِي ۖ وَإِذْ كَفَفْتُ بَنِي إِسْرَائِيلَ عَنْكَ إِذْ جِئْتَهُمْ بِالْبَيِّنَاتِ فَقَالَ الَّذِينَ كَفَرُوا مِنْهُمْ إِنْ هَٰذَا إِلَّا سِحْرٌ مُبِينٌ
۞
ಅಲ್ಲಾಹನು ಹೇಳುವನು; ‘‘ಓ ಮರ್ಯಮರ ಪುತ್ರ ಈಸಾ! ನಿಮ್ಮ ಮೇಲೆ ಹಾಗೂ ನಿಮ್ಮ ತಾಯಿಯ ಮೇಲೆ ನಾನು ತೋರಿದ ಅನುಗ್ರಹವನ್ನು ಸ್ಮರಿಸಿರಿ. ನಾನು ಪವಿತ್ರ ಆತ್ಮ (ಜಿಬ್ರೀಲ್)ನ ಮೂಲಕ ನಿಮಗೆ ನೆರವಾದಾಗ, ನೀವು ತೊಟ್ಟಿಲಿಂದಲೂ, (ಆ ಬಳಿಕ) ಬೆಳೆದ ಬಳಿಕವೂ ಜನರೊಡನೆ ಮಾತನಾಡಿದಿರಿ. ಹಾಗೆಯೇ, ನಾನು ನಿಮಗೆ ಗ್ರಂಥ ಹಾಗೂ ಜಾಣ್ಮೆಯನ್ನು ಮತ್ತು ತೌರಾತ್ ಹಾಗೂ ಇಂಜೀಲ್ಗಳನ್ನು ಕಲಿಸಿಕೊಟ್ಟೆನು ಮತ್ತು ನೀವು ನನ್ನ ಆದೇಶದಂತೆ ಮಣ್ಣಿನಿಂದ ಪಕ್ಷಿಯ ರೂಪವನ್ನು ರಚಿಸಿದಿರಿ ಹಾಗೂ ನೀವು ಅದರೊಳಗೆ ಊದಿದಾಗ ಅದು ನನ್ನ ಆದೇಶದಂತೆ ಹಾರುವ ಪಕ್ಷಿಯಾಗಿ ಬಿಡುತ್ತಿತ್ತು. ಹಾಗೆಯೇ, ಹುಟ್ಟು ಕುರುಡರನ್ನು ಮತ್ತು ಕುಷ್ಠರೋಗಿಗಳನ್ನು ನೀವು ನನ್ನ ಆದೇಶದಂತೆ ಗುಣಪಡಿಸಿ ಬಿಡುತ್ತಿದ್ದಿರಿ. ಮತ್ತು ನನ್ನ ಆದೇಶದಂತೆ ನೀವು ಮೃತರನ್ನು (ಗೋರಿಯಿಂದ) ಜೀವಂತ ಹೊರತೆಗೆಯುತ್ತಿದ್ದಿರಿ. ನೀವು ಸ್ಪಷ್ಟ ಪುರಾವೆಗಳೊಂದಿಗೆ ಇಸ್ರಾಈಲರ ಸಂತತಿಗಳ ಬಳಿಗೆ ಬಂದಿದ್ದಾಗ (ನಿಮ್ಮ ಮೇಲೆ ಕೈ ಎತ್ತದಂತೆ) ಅವರನ್ನು ನಾನು ತಡೆದಿದ್ದೆನು. ಅವರಲ್ಲಿನ ಧಿಕ್ಕಾರಿಗಳು, ‘‘ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಬೇರೇನೂ ಅಲ್ಲ’’ ಎಂದರು.
5:111
وَإِذْ أَوْحَيْتُ إِلَى الْحَوَارِيِّينَ أَنْ آمِنُوا بِي وَبِرَسُولِي قَالُوا آمَنَّا وَاشْهَدْ بِأَنَّنَا مُسْلِمُونَ
۞
ನಾನು ಹವಾರಿಗಳಿಗೆ (ಈಸಾರ ಶಿಷ್ಯರಿಗೆ), ನನ್ನಲ್ಲೂ ನನ್ನ ದೂತರಲ್ಲೂ ನಂಬಿಕೆ ಇಡಿರಿ ಎಂಬ ದಿವ್ಯ ಸಂದೇಶವನ್ನು ಕಳಿಸಿದಾಗ ಅವರು ‘‘ನಾವು ನಂಬಿದೆವು. ನೀನು ಸಾಕ್ಷಿಯಾಗಿರು, ಖಂಡಿತವಾಗಿಯೂ ನಾವು ಮುಸ್ಲಿಮರಾದೆವು’’ ಎಂದಿದ್ದರು.
5:112
إِذْ قَالَ الْحَوَارِيُّونَ يَا عِيسَى ابْنَ مَرْيَمَ هَلْ يَسْتَطِيعُ رَبُّكَ أَنْ يُنَزِّلَ عَلَيْنَا مَائِدَةً مِنَ السَّمَاءِ ۖ قَالَ اتَّقُوا اللَّهَ إِنْ كُنْتُمْ مُؤْمِنِينَ
۞
(ಮುಂದೆ) ಹವಾರಿಗಳು ‘‘ಓ ಮರ್ಯಮರ ಪುತ್ರ ಈಸಾ, ಆಕಾಶದಿಂದ ನಮಗೊಂದು ಭೋಜನ ತುಂಬಿದ ತಟ್ಟೆಯನ್ನು ಇಳಿಸಿಕೊಡಲು ನಿಮ್ಮ ಒಡೆಯನಿಗೆ ಸಾಧ್ಯವೆ?’’ ಎಂದು ಕೇಳಿದಾಗ ಅವರು (ಈಸಾ) ‘‘ನೀವು ಸತ್ಯದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಅಲ್ಲಾಹನಿಗೆ ಅಂಜುತ್ತಲಿರಿ’’ ಎಂದರು.
5:113
قَالُوا نُرِيدُ أَنْ نَأْكُلَ مِنْهَا وَتَطْمَئِنَّ قُلُوبُنَا وَنَعْلَمَ أَنْ قَدْ صَدَقْتَنَا وَنَكُونَ عَلَيْهَا مِنَ الشَّاهِدِينَ
۞
ಅವರು (ಹವಾರಿಗಳು) ಹೇಳಿದರು ; ‘‘ನಾವು ಅದರಿಂದ (ಆ ತಟ್ಟೆಯಿಂದ) ಉಣ್ಣುತ್ತಾ ನಮ್ಮ ಮನಸ್ಸುಗಳನ್ನು ತೃಪ್ತಿಪಡಿಸುತ್ತಿರಬೇಕು ಮತ್ತು ನೀವು ನಮ್ಮ ಮುಂದೆ ಸತ್ಯವನ್ನೇ ಹೇಳಿದ್ದಿರೆಂಬುದು ನಮಗೆ (ಖಚಿತವಾಗಿ) ತಿಳಿದು ನಾವು ಅದಕ್ಕೆ ಸಾಕ್ಷಿಗಳಾಗಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ’’
5:114
قَالَ عِيسَى ابْنُ مَرْيَمَ اللَّهُمَّ رَبَّنَا أَنْزِلْ عَلَيْنَا مَائِدَةً مِنَ السَّمَاءِ تَكُونُ لَنَا عِيدًا لِأَوَّلِنَا وَآخِرِنَا وَآيَةً مِنْكَ ۖ وَارْزُقْنَا وَأَنْتَ خَيْرُ الرَّازِقِينَ
۞
ಮರ್ಯಮರ ಪುತ್ರ ಈಸಾ ಹೇಳಿದರು; ‘‘ಓ ಅಲ್ಲಾಹ್, ನಮ್ಮೊಡೆಯಾ, ನಮಗೆ ಆಕಾಶದಿಂದ ಭೋಜನ ತುಂಬಿದ ಒಂದು ತಟ್ಟೆಯನ್ನು ಇಳಿಸಿಕೊಡು. ಅದು ನಮ್ಮ ಮೊದಲಿಗರಿಗೂ ಕೊನೆಯವರಿಗೂ ಸಂಭ್ರಮವಾಗಲಿ ಮತ್ತು ಅದು ನಿನ್ನ ವತಿಯಿಂದ ಒಂದು ಪುರಾವೆಯಾಗಲಿ. ನಮಗೆ ನೀನು ಆಹಾರವನ್ನು ದಯಪಾಲಿಸು. ನೀನೇ ಅತ್ಯುತ್ತಮ ಆಹಾರ ನೀಡುವವನು.’’
5:115
قَالَ اللَّهُ إِنِّي مُنَزِّلُهَا عَلَيْكُمْ ۖ فَمَنْ يَكْفُرْ بَعْدُ مِنْكُمْ فَإِنِّي أُعَذِّبُهُ عَذَابًا لَا أُعَذِّبُهُ أَحَدًا مِنَ الْعَالَمِينَ
۞
ಅಲ್ಲಾಹನು ಹೇಳಿದನು; ‘‘ನಾನು ಖಂಡಿತ ಅದನ್ನು ನಿಮಗೆ ಇಳಿಸಿಕೊಡುವೆನು. ಆದರೆ ಆ ಬಳಿಕವೂ ನಿಮ್ಮಲ್ಲಿ ಯಾರಾದರೂ ಧಿಕ್ಕಾರಿಯಾದರೆ, ಆತನಿಗೆ ನಾನು ಸರ್ವಜಗತ್ತಿನಲ್ಲಿ ಯಾರಿಗೂ ನೀಡಿಲ್ಲದ ಶಿಕ್ಷೆಯನ್ನು ನೀಡುವೆನು’’
5:116
وَإِذْ قَالَ اللَّهُ يَا عِيسَى ابْنَ مَرْيَمَ أَأَنْتَ قُلْتَ لِلنَّاسِ اتَّخِذُونِي وَأُمِّيَ إِلَٰهَيْنِ مِنْ دُونِ اللَّهِ ۖ قَالَ سُبْحَانَكَ مَا يَكُونُ لِي أَنْ أَقُولَ مَا لَيْسَ لِي بِحَقٍّ ۚ إِنْ كُنْتُ قُلْتُهُ فَقَدْ عَلِمْتَهُ ۚ تَعْلَمُ مَا فِي نَفْسِي وَلَا أَعْلَمُ مَا فِي نَفْسِكَ ۚ إِنَّكَ أَنْتَ عَلَّامُ الْغُيُوبِ
۞
(ಪರಲೋಕದಲ್ಲಿ) ಅಲ್ಲಾಹನು; ‘‘ಮರ್ಯಮರ ಪುತ್ರ ಈಸಾ, ನೀವೇನು ಜನರೊಡನೆ - ಅಲ್ಲಾಹನನ್ನು ಬಿಟ್ಟು ನನ್ನನ್ನು ಮತ್ತು ನನ್ನ ತಾಯಿಯನ್ನು ದೇವರಾಗಿಸಿಕೊಳ್ಳಿರಿ - ಎಂದು ಹೇಳಿದ್ದಿರಾ?’’ ಎಂದು ಕೇಳಿದಾಗ ಅವರು (ಈಸಾ) ಹೇಳುವರು; ‘‘ನೀನು ಪಾವನನು. ನನಗೆ ಹೇಳಲು ಹಕ್ಕೇ ಇಲ್ಲದಂತಹ ಮಾತನ್ನು ಹೇಳಲು ನನ್ನಿಂದ ಸಾಧ್ಯವಿಲ್ಲ. ಒಂದು ವೇಳೆ ನಾನು ಹಾಗೇನಾದರೂ ಹೇಳಿದ್ದರೆ ನಿನಗೆ ಅದರ ಅರಿವಿರುತ್ತಿತ್ತು. ನನ್ನ ಮನದೊಳಗೆ ಇರುವುದೆಲ್ಲವೂ ನಿನಗೆ ತಿಳಿದಿದೆ. ನಿನ್ನ ಮನದೊಳಗಿರುವ ಯಾವುದೂ ನನಗೆ ತಿಳಿಯದು. ನೀನಂತು ಎಲ್ಲ ಗುಪ್ತ ವಿಚಾರಗಳನ್ನೂ ಖಂಡಿತ ಬಲ್ಲವನು.’’
5:117
مَا قُلْتُ لَهُمْ إِلَّا مَا أَمَرْتَنِي بِهِ أَنِ اعْبُدُوا اللَّهَ رَبِّي وَرَبَّكُمْ ۚ وَكُنْتُ عَلَيْهِمْ شَهِيدًا مَا دُمْتُ فِيهِمْ ۖ فَلَمَّا تَوَفَّيْتَنِي كُنْتَ أَنْتَ الرَّقِيبَ عَلَيْهِمْ ۚ وَأَنْتَ عَلَىٰ كُلِّ شَيْءٍ شَهِيدٌ
۞
‘‘ನೀನು ನನಗೆ ಆದೇಶಿಸಿರುವುದರ ಹೊರತು ಬೇರೇನನ್ನೂ ನಾನು ಅವರಿಗೆ ಹೇಳಿಲ್ಲ. - ನನ್ನ ಒಡೆಯನೂ ನಿಮ್ಮ ಒಡೆಯನೂ ಅಗಿರುವ ಅಲ್ಲಾಹನನ್ನೇ ಆರಾಧಿಸಿರಿ (ಎಂದಷ್ಟೇ ನಾನು ಹೇಳಿದ್ದೆ). ನಾನು ಅವರ ನಡುವೆ ಇದ್ದಷ್ಟು ಕಾಲ ಅವರ ವಿಷಯದಲ್ಲಿ ನಾನೇ ಸಾಕ್ಷಿಯಾಗಿದ್ದೆ. ತರುವಾಯ ನೀನು ನನ್ನನ್ನು ಮೇಲೆತ್ತಿಕೊಂಡ ಬಳಿಕ ನೀನೇ ಅವರ ಮೇಲ್ವಿಚಾರಕನಾಗಿದ್ದೆ. ನೀನಂತೂ ಪ್ರತಿಯೊಂದು ವಿಷಯಕ್ಕೂ ಸಾಕ್ಷಿಯಾಗಿರುವೆ.’’
5:118
إِنْ تُعَذِّبْهُمْ فَإِنَّهُمْ عِبَادُكَ ۖ وَإِنْ تَغْفِرْ لَهُمْ فَإِنَّكَ أَنْتَ الْعَزِيزُ الْحَكِيمُ
۞
‘‘ನೀನೀಗ ಅವರನ್ನು ಶಿಕ್ಷಿಸುವುದಾದರೆ, ಅವರು ನಿನ್ನ ದಾಸರು. ಇನ್ನು ನೀನು ಅವರನ್ನು ಕ್ಷಮಿಸುವುದಾದರೆ ನೀನಂತು ಪ್ರಚಂಡನೂ, ಯುಕ್ತಿವಂತನೂ ಆಗಿರುವೆ.’’
5:119
قَالَ اللَّهُ هَٰذَا يَوْمُ يَنْفَعُ الصَّادِقِينَ صِدْقُهُمْ ۚ لَهُمْ جَنَّاتٌ تَجْرِي مِنْ تَحْتِهَا الْأَنْهَارُ خَالِدِينَ فِيهَا أَبَدًا ۚ رَضِيَ اللَّهُ عَنْهُمْ وَرَضُوا عَنْهُ ۚ ذَٰلِكَ الْفَوْزُ الْعَظِيمُ
۞
ಅಲ್ಲಾಹನು ಹೇಳುವನು; ಇಂದಿನ ದಿನವು ಸತ್ಯವಂತರಿಗೆ ಅವರ ಸತ್ಯವು ಲಾಭವೊದಗಿಸುವ ದಿನವಾಗಿದೆ. ಅವರಿಗಾಗಿ, ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವಂತಹ ತೋಟಗಳಿವೆ. ಅವರು ಸದಾಕಾಲ ಅವುಗಳಲ್ಲಿರುವರು. ಅಲ್ಲಾಹನು ಅವರಿಂದ ಸಂತುಷ್ಟನಾದನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾದರು. ಇದುವೇ ಮಹಾ ವಿಜಯ.
5:120
لِلَّهِ مُلْكُ السَّمَاوَاتِ وَالْأَرْضِ وَمَا فِيهِنَّ ۚ وَهُوَ عَلَىٰ كُلِّ شَيْءٍ قَدِيرٌ
۞
ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಮಾಲಕತ್ವವು ಅಲ್ಲಾಹನಿಗೆ ಸೇರಿದೆ. ಅವನಂತು ಎಲ್ಲವನ್ನೂ ಮಾಡಬಲ್ಲನು.