Al-Buruj (The constellations)
85. ಅಲ್ ಬುರೂಜ್(ತಾರಾಮಂಡಲಗಳು)
﷽
ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
85:1
وَالسَّمَاءِ ذَاتِ الْبُرُوجِ
۞
ತಾರಾಮಂಡಲಗಳಿರುವ ಆಕಾಶದಾಣೆ.
85:2
وَالْيَوْمِ الْمَوْعُودِ
۞
ವಾಗ್ದಾನ ಮಾಡಲಾಗಿರುವ ಆ ದಿನದ ಆಣೆ.
85:3
وَشَاهِدٍ وَمَشْهُودٍ
۞
ಹಾಜರಾಗುವವನ ಮತ್ತು ಯಾರ ಮುಂದೆ ಹಾಜರು ಪಡಿಸಲಾಗುವುದೋ ಅವನಾಣೆ.
85:4
قُتِلَ أَصْحَابُ الْأُخْدُودِ
۞
ನಾಶವಾದರು, ಕಂದಕಗಳನ್ನು ಅಗೆದವರು.
85:5
النَّارِ ذَاتِ الْوَقُودِ
۞
ಅವರು ಅದರಲ್ಲಿ ಉರಿಯುವ ಕೆಂಡಗಳನ್ನು ತುಂಬಿದ್ದರು.
85:6
إِذْ هُمْ عَلَيْهَا قُعُودٌ
۞
ಅವರು ಅದರ ಸುತ್ತಲೂ ಕುಳಿತಿದ್ದರು.
85:7
وَهُمْ عَلَىٰ مَا يَفْعَلُونَ بِالْمُؤْمِنِينَ شُهُودٌ
۞
ಮತ್ತು ಅವರು ವಿಶ್ವಾಸಿಗಳಿಗೆ ತಾವು ನೀಡುತ್ತಿದ್ದುದನ್ನು (ಚಿತ್ರ ಹಿಂಸೆಯನ್ನು) ನೋಡುತ್ತಿದ್ದರು.
85:8
وَمَا نَقَمُوا مِنْهُمْ إِلَّا أَنْ يُؤْمِنُوا بِاللَّهِ الْعَزِيزِ الْحَمِيدِ
۞
ಅವರು ಆ ವಿಶ್ವಾಸಿಗಳ ವಿರುದ್ಧ ಪ್ರತೀಕಾರವೆಸಗಲು ಇಳಿದುದಕ್ಕೆ, ಅವರು (ಆ ವಿಶ್ವಾಸಿಗಳು) ಪ್ರಬಲನೂ ಪ್ರಶಂಸಾರ್ಹನೂ ಆದ ಅಲ್ಲಾಹನಲ್ಲಿ ನಂಬಿಕೆ ಇಟ್ಟರು ಎಂಬುದಷ್ಟೇ ಕಾರಣವಾಗಿತ್ತು.
85:9
الَّذِي لَهُ مُلْكُ السَّمَاوَاتِ وَالْأَرْضِ ۚ وَاللَّهُ عَلَىٰ كُلِّ شَيْءٍ شَهِيدٌ
۞
ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗೇ (ಅಲ್ಲಾಹನಿಗೆ) ಸೇರಿದೆ. ಮತ್ತು ಅಲ್ಲಾಹನು ಎಲ್ಲದಕ್ಕೂ ನೇರ ಸಾಕ್ಷಿಯಾಗಿದ್ದಾನೆ.
85:10
إِنَّ الَّذِينَ فَتَنُوا الْمُؤْمِنِينَ وَالْمُؤْمِنَاتِ ثُمَّ لَمْ يَتُوبُوا فَلَهُمْ عَذَابُ جَهَنَّمَ وَلَهُمْ عَذَابُ الْحَرِيقِ
۞
ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರನ್ನು ಹಿಂಸಿಸಿದವರು ಹಾಗೂ ಆ ಕುರಿತು ಪಶ್ಚಾತ್ತಾಪ ಪಡದವರು - ಅವರಿಗೆ ನರಕದ ಶಿಕ್ಷೆ ಕಾದಿದೆ ಮತ್ತು ಅವರಿಗೆ ಸುಡುವ ಶಿಕ್ಷೆ ಕಾದಿದೆ.
85:11
إِنَّ الَّذِينَ آمَنُوا وَعَمِلُوا الصَّالِحَاتِ لَهُمْ جَنَّاتٌ تَجْرِي مِنْ تَحْتِهَا الْأَنْهَارُ ۚ ذَٰلِكَ الْفَوْزُ الْكَبِيرُ
۞
ವಿಶ್ವಾಸಿಗಳಿಗೆ ಹಾಗೂ ಸತ್ಕರ್ಮಗಳನ್ನು ಮಾಡಿದವರಿಗೆ ತಳದಲ್ಲಿ ನದಿಗಳು ಹರಿಯುವ ಸ್ವರ್ಗ ತೋಟಗಳು ಸಿಗುವವು. ಇದು ನಿಜಕ್ಕೂ ದೊಡ್ಡ ಸೌಭಾಗ್ಯವಾಗಿದೆ.
85:12
إِنَّ بَطْشَ رَبِّكَ لَشَدِيدٌ
۞
ನಿನ್ನ ಒಡೆಯನ ಹಿಡಿತವು ಬಹಳ ಕಠಿಣವಾಗಿರುತ್ತದೆ.
85:13
إِنَّهُ هُوَ يُبْدِئُ وَيُعِيدُ
۞
ಖಂಡಿತವಾಗಿಯೂ ಅವನೇ ಸೃಷ್ಟಿ ಕಾರ್ಯವನ್ನು ಆರಂಭಿಸಿದವನು ಮತ್ತು ಅವನೇ ಅದನ್ನು ಪುನರಾವರ್ತಿಸುವನು (ಪುನಃ ಸೃಷ್ಟಿಸುವನು).
85:14
وَهُوَ الْغَفُورُ الْوَدُودُ
۞
ಅವನು ಕ್ಷಮಿಸುವವನೂ ಪ್ರೀತಿಸುವವನೂ ಆಗಿದ್ದಾನೆ.
85:15
ذُو الْعَرْشِ الْمَجِيدُ
۞
ಅವನು ಗೌರವಾನ್ವಿತ ವಿಶ್ವ ಪೀಠದ ಒಡೆಯನು.
85:16
فَعَّالٌ لِمَا يُرِيدُ
۞
ಅವನು ತಾನಿಚ್ಛಿಸಿದ್ದನ್ನು ಮಾಡಿಯೇ ತೀರುತ್ತಾನೆ.
85:17
هَلْ أَتَاكَ حَدِيثُ الْجُنُودِ
۞
ಪಡೆಗಳ ಸಮಾಚಾರವು ನಿಮಗೆ ತಲುಪಿದೆಯೇ?
85:18
فِرْعَوْنَ وَثَمُودَ
۞
ಅಂದರೆ ಫಿರ್‌ಔನ್ ಮತ್ತು ಸಮೂದರ ಪಡೆಗಳು.
85:19
بَلِ الَّذِينَ كَفَرُوا فِي تَكْذِيبٍ
۞
ನಿಜವಾಗಿ ಧಿಕ್ಕಾರಿಗಳು (ಸತ್ಯವನ್ನು) ಅಲ್ಲಗಳೆಯುತ್ತಿದ್ದಾರೆ.
85:20
وَاللَّهُ مِنْ وَرَائِهِمْ مُحِيطٌ
۞
ಅಲ್ಲಾಹನು ಅವರನ್ನು ಎಲ್ಲ ಕಡೆಯಿಂದಲೂ ಸುತ್ತುವರಿದಿದ್ದಾನೆ.
85:21
بَلْ هُوَ قُرْآنٌ مَجِيدٌ
۞
ನಿಜವಾಗಿ ಇದು ಗೌರವಾನ್ವಿತ ಕುರ್‌ಆನ್ ಆಗಿದೆ.
85:22
فِي لَوْحٍ مَحْفُوظٍ
۞
ಇದು ಸುರಕ್ಷಿತ ಫಲಕದಲ್ಲಿದೆ.